ಉದ್ದೇಶ ಪೂರ್ವಕವಾಗಿ ವಿಡಿಯೋ ಸೃಷ್ಟಿಸಿ ಅಪಪ್ರಚಾರ; ಮಾಜಿ ಸಿಎಂ ಸಿದ್ದರಾಮಯ್ಯ ದೂರು

ಬೆಂಗಳೂರು : ತಮ್ಮ ವಿರುದ್ಧ ಉದ್ದೇಶ ಪೂರ್ವಕವಾಗಿ ವಿಡೀಯೋ ಸೃಷ್ಟಿ ಮಾಡಿ ಅದನ್ನು ಅಪಪ್ರಚಾರ ಮಾಡಲು ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಅಪ್ತರ ಮೂಲಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈಗಾಗಲೇ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಈಗಾಗಲೇ ಯೂಟ್ಯೂಬ್ ಚಾನಲ್ ವೊಂದರಲ್ಲಿ ವಿಡೀಯೋ ಸೃಷ್ಟಿಸಿ ಹರಿಬಿಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಉದ್ದೇಶ ಪೂರಕವಾಗಿ ವಿಡಿಯೋಗಳನ್ನು ಸೃಷ್ಟಿ ಮಾಡಿ ಅದನ್ನು ಪ್ರಸಾರ ಮಾಡಿ ತೇಜೊವಧೆ ಮಾಡುವ ಸಂಚು ನಡೆದಿದೆ ಎಂದಿದ್ದಾರೆ
ಇದೇ ವಿಚಾರಕ್ಕೆ ಸಂಬಂಧಿಸಿ ಸಿಸಿಹೆಚ್ 18 ನೇ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಅಪರೇಶನ್ ಸಂಬಂಧ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದು, ನಾಳೆ ಅದರ ಅದೇಶ ಹೊರಬೀಳಲಿದೆ.
Next Story




