ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಶುದ್ಧ ಸುಳ್ಳು : ಸತೀಶ್ ಜಾರಕಿಹೊಳಿ

ಬೆಂಗಳೂರು : ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಮಾಡಲಾಗಿದೆ ಎನ್ನುವ ವಿಚಾರ ಶುದ್ಧ ಸುಳ್ಳು. ಸಾಮಾಜಿಕ ಜಾಲತಾಣಗಳ ಬರಹಗಳಿಗೆ ಅಷ್ಟೊಂದು ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪ್ಪಂದದ ಪ್ರಕಾರ ಅವರು ಕೆಳಗೆ ಇಳಿದಿದ್ದಾರೆ. ಯಾವಾಗಲಾದರೂ ಕೆಳಗೆ ಇಳಿಯಲೇಬೇಕು. ಎಲ್ಲ ಅವರೇ ನಿರ್ಧಾರ ಮಾಡಿಕೊಂಡ ಪ್ರಕಾರ ಸಿದ್ದರಾಮಯ್ಯ ಕೆಳಗೆ ಇಳಿದಿದ್ದಾರೆ. ಆದರೆ, 37 ಜನರು ಸಿದ್ದರಾಮಯ್ಯ ವಿರುದ್ದ ಸಹಿ ಹಾಕಿದ್ದಾರೆ ಎನ್ನುವುದು ಸುಳ್ಳು. ಹಾಗಾದರೆ ಇದು ನಿಜ ಆದರೆ ಉಳಿದ 100 ಮಂದಿ ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದರು.
ಅಹಿಂದ ಅಂದರೆ ಸುಮಾರು 500 ಜಾತಿಗಳಿವೆ. ನಾನು ಅಹಿಂದ ಧ್ವಜ ಮುಂದುವರೆಸುತ್ತೇನೆ. ಯಾರಾದರೂ ಒಬ್ಬರು ಅಹಿಂದ ಧ್ವಜ ಒಯ್ಯಲೇಬೇಕಲ್ವಾ? ಹೊಸ ಅಹಿಂದ ನಾಯಕ ಉದಯ ಆಗಲೇಬೇಕು. ಆ ವ್ಯವಸ್ಥೆ ರಾಜ್ಯದಲ್ಲಿದೆ ಎಂದೂ ಅವರು ಉಲ್ಲೇಖಿಸಿದರು.
Next Story




