ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಊಹಾಪೋಹ : ಸಚಿವ ಎಂ.ಬಿ.ಪಾಟೀಲ್

ಎಂ.ಬಿ.ಪಾಟೀಲ್
“ದೆಹಲಿ ಭೇಟಿಯಲ್ಲಿ ರಾಜ್ಯಸಭೆ, ಎಂಎಲ್ಸಿ ಕುರಿತಷ್ಟೇ ಚರ್ಚೆ ನಡೆದಿದೆ”
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾತುಗಳು ಕೇವಲ ಊಹಾಪೋಹ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭೆ ಹಾಗೂ ಎಂಎಲ್ಸಿ ಚುನಾವಣೆ ಕುರಿತಷ್ಟೇ ಚರ್ಚೆ ನಡೆದಿದೆ. ಬೇರೆ ಯಾವುದೇ ವಿಚಾರ ಚರ್ಚೆಯಾಗಿಲ್ಲ ಎಂದು ಹೇಳಿದರು.
ಕೆ. ಸಿ. ವೇಣುಗೋಪಾಲ್, ಸಿಎಂ ಹಾಗೂ ಡಿಸಿಎಂ ಈಗಾಗಲೇ ಸುದ್ದಿಗೋಷ್ಠಿಯಲ್ಲಿ ಇದೇ ವಿಷಯವನ್ನು ಹೇಳಿದ್ದಾರೆ. ಅದೇ ಹೇಳಿಕೆ ಮಾಧ್ಯಮಗಳಲ್ಲೂ ಬಂದಿದೆ. ಉಳಿದ ಎಲ್ಲ ಸುದ್ದಿಗಳು ಊಹಾಪೋಹ ಮಾತ್ರ ಎಂದು ತಿಳಿಸಿದರು.
ನಾವು ಬೆಳಗ್ಗೆ ಹಾಗೂ ರಾತ್ರಿ ಕೆ.ಜೆ.ಜಾರ್ಜ್ ಅವರ ಮನೆಯಲ್ಲಿ ಇದ್ದೆವು. ಎಲ್ಲರೂ ಒಟ್ಟಿಗೇ ಇದ್ದೆವು. ಸಿದ್ದರಾಮಯ್ಯ ಜೊತೆ ದೆಹಲಿಗೆ ಹೋಗಿ ಬಂದಿದ್ದೇವೆ ಎಂದು ಹೇಳಿದರು.
Next Story




