ಹಿಂದಿ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನ: ಸಿಎಂ ಸಿದ್ದರಾಮಯ್ಯ

ಮೈಸೂರು: ಹಿಂದಿ ಭಾಷೆ ಪರೀಕ್ಷೆ ಕಡ್ಡಾಯ ಇಬಾರದು ಎಂದು ಅದರ ಅಂಕವನ್ನು ತೆಗೆದು ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆ ಕಡ್ಡಾಯಗೊಳಿಸಬಾರದು ಎಂದು ಹಿಂದಿ ಭಾಷೆ ಅಂಕ ತೆಗೆಯಲಾಗಿದೆ. ಇದನ್ನು ಸ್ವಾಗತ ಮಾಡುವವರು ಇರುತ್ತಾರೆ. ಸ್ವಾಗತ ಮಾಡದೆ ಇರುವವರು ಇರುತ್ತಾರೆ. ಇದು ಸರ್ಕಾರದ ತೀರ್ಮಾನ, ಈ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.
ನಾವು ತೀರ್ಮಾನ ಕೈಗೊಂಡ ಎಲ್ಲವೂ ನೂರರಷ್ಟು ಒಪ್ಪಿಗೆಯಾಗುವುದಿಲ್ಲ, ಹಿಂದಿ ಹೇರಿಕೆ ಎಂದು ಬದಲಾಯಿಸಿಲ್ಲ, ಹಿಂದಿ ಕಲಿಯಬಾರದು ಎಂದು ಈ ತೀರ್ಮಾನ ಕೈಗೊಂಡಿಲ್ಲ, ಆದರೆ ಪರೀಕ್ಷೆ ಕಡ್ಡಾಯ ಇರಬಾರದು ಎಂದು ಈ ಆದೇಶ ಜಾರಿ ಮಾಡಲಾಗಿದೆ ಎಂದರು.
ನಾವು ಓದಬೇಕಾದರೆ ಹಿಂದಿ ಇತ್ತು, ಆದರೆ ಕಡ್ಡಾಯ ಇರಲಿಲ್ಲ. ಹಾಗಾಗಿ ನಾನು ಹಿಂದಿ ಕಲಿಯಲೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.
Next Story




