ವಿದ್ಯಾರ್ಥಿ ಬಸ್ ಪಾಸ್ಗಳ ಶುಲ್ಕ ಮರು ಪಾವತಿಗಾಗಿ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : 2026-27ನೇ ಸಾಲಿನಲ್ಲಿ ಶುಲ್ಕ ಪಾವತಿಸಿ ಬಸ್ ಪಾಸ್ಗಳನ್ನು ಪಡೆದಿರುವ ವಿದ್ಯಾರ್ಥಿಗಳು ಶುಲ್ಕ ಮರು ಪಾವತಿಗಾಗಿ ಸೇವಾಸಿಂಧು ಪೋರ್ಟಲ್ನಲ್ಲಿ https://sevasindhuservices.karnataka.gov.in/buspassservices/ ಲಿಂಕ್ ಮೂಲಕ ಮೊಬೈಲ್ ಸಂಖ್ಯೆ, ಒಟಿಪಿ ನಮೂದಿಸಿ, ಅರ್ಜಿ ಸಲ್ಲಿಸಬೇಕು ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ಬುಧವಾರ ಈ ಕುರಿತು ಪ್ರಕಟನೆ ನೀಡಿರುವ ಕೆಎಸ್ಸಾರ್ಟಿಸಿ, ವಿದ್ಯಾರ್ಥಿಗಳು ಆಧಾರ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬೇಕು. ತಮ್ಮ ಅಥವಾ ತಮ್ಮ ಪೋಷಕರ ಬ್ಯಾಂಕ್ಖಾತೆ ವಿವರಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ನಮೂದಿಸಿ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿಸಿದೆ.
ಅರ್ಜಿ ಸಲ್ಲಿಸಿದ 7ದಿನಗಳ ಒಳಗೆ ವಿದ್ಯಾರ್ಥಿಗಳ ಬ್ಯಾಂಕ್ಖಾತೆಗೆ ನೆಫ್ಟ್ ಅಥವಾ ಆರ್ಟಿಜಿಎಸ್ ಮೂಲಕ ಪಾಸ್ ಮೊತ್ತ ಮರು ಪಾವತಿಯಾಗುತ್ತದೆ. ಹಾಗೂ ಬ್ಯಾಂಕ್ಖಾತೆಗೆ ಮೊತ್ತ ಮರು ಪಾವತಿಯಾಗಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಸಂದೇಶ ರವಾನೆಯಾಗುತ್ತದೆ ಎಂದು ತಿಳಿಸಿದೆ.
ವಿದ್ಯಾಥಿಗಳಿಗೆ ಬಸ್ಪಾಸ್ನ ಮರು-ಪಾವತಿ ಮೊತ್ತ ಬ್ಯಾಂಕ್ಖಾತೆಗೆ ನೇರವಾಗಿ ಆನ್ಲೈನ್ ಮೂಲಕ ಜಮಾ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ಪಾಸ್ನ ಮೊತ್ತವನ್ನು ಮರು-ಪಾವತಿ ಪಡೆಯುವ ಸಂಬಂಧ ಯಾವುದೇ ಕೌಂಟರ್ ಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.






