ಸರಕಾರಿ ಅಭಿಯೋಜಕರಾಗಿ ವಕೀಲ ಸೂರ್ಯ ಮುಕುಂದರಾಜ್, ಅನೂಪ್ ಕುಮಾರ್ ನೇಮಕ

ವಕೀಲ ಸೂರ್ಯ ಮುಕುಂದರಾಜ್
ಬೆಂಗಳೂರು: ಕರ್ನಾಟಕ ಸರಕಾರದ ಹೆಚ್ಚುವರಿ ರಾಜ್ಯ ಸರಕಾರಿ ಅಭಿಯೋಜಕರಾಗಿ ವಕೀಲ ಸೂರ್ಯ ಮುಕುಂದರಾಜ್ ಮತ್ತು ಅನೂಪ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರಕಾರಿ ಅಭಿಯೋಜಕರಾಗಿ ನೇಮಕವಾಗಿದ್ದ ಬಿ.ಎನ್.ಜಗದೀಶ್ ಅವರ ಸ್ಥಾನಕ್ಕೆ ಸೂರ್ಯ ಮುಕುಂದರಾಜ್ ಅವರನ್ನು, ಪುಷ್ಪಲತಾ ಅವರ ಸ್ಥಾನಕ್ಕೆ ಅನೂಪ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಹೆಚ್ಚುವರಿ ಸರಕಾರಿ ಅಭಿಯೋಜಕರ ನೇಮಕಾತಿಗಳ ಜೊತೆಗೆ ಸರಕಾರಿ ವಕೀಲರು, ಹೆಚ್ಚುವರಿ ಸರಕಾರಿ ವಕೀಲರು ಮತ್ತು ಏಳು ಹೈಕೋರ್ಟ್ ಪ್ಲೀಡರ್ಗಳನ್ನು ಹೈಕೋರ್ಟ್ನ ಪ್ರಧಾನ ಪೀಠಕ್ಕೆ ನೇಮಕ ಮಾಡಲಾಗಿದೆ. ಅಂತೆಯೇ ತಲಾ ಒಬ್ಬೊಬ್ಬರು ಎಚ್ಸಿಜಿಪಿಯನ್ನು ಧಾರವಾಡ ಮತ್ತು ಕಲಬುರ್ಗಿ ಪೀಠಕ್ಕೆ ನೇಮಕ ಮಾಡಲಾಗಿದೆ.
ಕರ್ನಾಟಕ ಕಾನೂನು ಅಧಿಕಾರಿಗಳು(ನೇಮಕಾತಿ ಮತ್ತು ಸೇವಾ ಷರತ್ತು)ನಿಯಮ 1977ರಡಿ ಮೇಲ್ಕಂಡ ನೇಮಕ ಮಾಡಲಾಗಿದೆ. ಈ ನೇಮಕಾತಿಯು ಒಂದು ವರ್ಷ ಅಥವಾ ಮುಂದಿನ ಆದೇಶದ ವರೆಗೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
Next Story




