Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. 29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮಿಟ್’...

29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮಿಟ್’ ನಾಳೆಯಿಂದ ಆರಂಭ : ಸಚಿವ ಪ್ರಿಯಾಂಕ್ ಖರ್ಗೆ

ಸಮೀರ್ ದಳಸನೂರು\ವಾರ್ತಾಭಾರತಿಸಮೀರ್ ದಳಸನೂರು\ವಾರ್ತಾಭಾರತಿ16 Nov 2026 5:10 PM IST
share
29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮಿಟ್’ ನಾಳೆಯಿಂದ ಆರಂಭ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗಕ್ಕೆ ವೇದಿಕೆಯಾಗಲಿರುವ ಏಷ್ಯಾದ ಅತಿದೊಡ್ಡ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಟೆಕ್ ಸಮಿಟ್-ಬಿಟಿಎಸ್) 29ನೆ ಆವೃತ್ತಿ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರದಿಂದ(ನ.17) ಆರಂಭಗೊಳ್ಳುತ್ತಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಫ್ರಾನ್ಸ್‌ ನ ಇಲ್-ದೆ-ಫ್ರಾನ್ಸ್ ಪ್ರಾದೇಶಿಕ ಮಂಡಳಿಯ ಅಧ್ಯಕ್ಷೆ ವ್ಯಾಲೆರಿ ಪೆಕ್ರೆಸ್ ಚಾಲನೆ ನೀಡಲಿದ್ದಾರೆ.

ಈ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಆಶಯದ ಈ ಮೂರು ದಿನಗಳ ಸಮಾವೇಶವು ನವೆಂಬರ್ 17ರಿಂದ 19ರವರೆಗೆ ನಡೆಯಲಿದ್ದು, ಮೈಕ್ರೊಸಾಫ್ಟ್ ಇಂಡಿಯಾ ಅಧ್ಯಕ್ಷ ಪುನೀತ್ ಚಂಡೋಕ್, ಮೈಕ್ರಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ್ ರಾಮಮೂರ್ತಿ, ಕರ್ನಾಟಕದ ವಿಷನ್ ಗ್ರೂಪ್ ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ (ಕ್ರಿಸ್), ಡಾ.ಕಿರಣ್ ಮಜುಂದಾರ್ ಶಾ, ಪ್ರಶಾಂತ್ ಪ್ರಕಾಶ್ ಮತ್ತು ಡಾ.ಎ.ಎಸ್.ಕಿರಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

‘ಬೆಂಗಳೂರು ಟೆಕ್ ಸಮಿಟ್-2026 ಜಾಗತಿಕ ತಂತ್ರಜ್ಞಾನ ವ್ಯವಸ್ಥೆ ಸಂಗಮಗೊಳ್ಳುವ ಪ್ರಮುಖ ವೇದಿಕೆಯಾಗಲಿದೆ. ವಿಶ್ವದಾದ್ಯಂತ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು ಮತ್ತು 1,500ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಒಟ್ಟು 50,000ಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. 16 ವಿಷಯಾಧಾರಿತ ವಿಭಾಗಗಳು ಮತ್ತು 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ಜ್ಞಾನಾಧಾರಿತ ಅಧಿವೇಶನಗಳು ನಡೆಯಲಿವೆ. ಸ್ವೀಡನ್-ಈ ಸಮಾವೇಶದ ಪಾಲುದಾರ ರಾಷ್ಟ್ರವಾಗಿದ್ದು, ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲ ನೀಡುವ ದೇಶಗಳಾಗಿವೆ. ದೇಶದ 100 ನಗರಗಳಿಂದ 30ಕ್ಕೂ ಹೆಚ್ಚು ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರಗಳನ್ನು ಪ್ರತಿನಿಧಿಸುವ 1,000ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು.

ಈ ವರ್ಷದ ‘ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ’ ಆಶಯವು ತಂತ್ರಜ್ಞಾನ ಉದ್ಯಮ ಪ್ರವೇಶಿಸುತ್ತಿರುವ ಪರಿವರ್ತನೆಯ ಹೊಸ ಹಂತ ಹಾಗೂ ವಿವಿಧ ವಲಯಗಳಲ್ಲಿ ಕೃತಕ ಬುದ್ಧಿಮತ್ತೆಯು ಸೃಷ್ಟಿಸಲಿರುವ ವಿಪುಲ ಅವಕಾಶಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಲಿದೆ.ಜತೆಗೆ, ‘ಕೃತಕ ಬುದ್ಧಿಮತ್ತೆ, ಡೀಪ್‍ಟೆಕ್, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ರೊಬೊಟಿಕ್ಸ್, ಸಾರಿಗೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಮೂರು ದಿನಗಳ ಚರ್ಚೆಗಳು, ಪ್ರದರ್ಶನಗಳು ಮತ್ತು ಸಹಯೋಗಗಳಿಗೆ ದೇಶ-ವಿದೇಶಗಳ ಸಂದರ್ಶಕರು ಸಾಕ್ಷಿಯಾಗಲಿದ್ದಾರೆ. ವಿಶೇಷ ಎಐ ಮತ್ತು ರೊಬೊಟಿಕ್ಸ್ ಪೆವಿಲಿಯನ್, ಭಾರತದ ನವೋದ್ಯಮಗಳ ನಾವೀನ್ಯತೆಗಳನ್ನು ಪರಿಚಯಿಸುವ ಭವಿಷ್ಯ ರೂಪಿಸುವವರ ಸಮಾವೇಶ, ವಿವಿಧ ದೇಶಗಳ ಪೆವಿಲಿಯನ್‍ಗಳು, ಹೂಡಿಕೆದಾರರ ಜೊತೆಗಿನ ಸಂವಾದ, ಉತ್ಪನ್ನಗಳ ಬಿಡುಗಡೆ, ವಿಶೇಷ ತರಬೇತಿ ಗೋಷ್ಠಿಗಳು ಹಾಗೂ ನಿರ್ದಿಷ್ಟ ಉದ್ಯಮ ವಲಯಗಳ ಚರ್ಚೆಗಳು ಸೇರಿದಂತೆ ನಾವೀನ್ಯತೆ ಪರಿಸರ ವ್ಯವಸ್ಥೆಯ ಪ್ರತಿಯೊಂದು ವಿಭಾಗಕ್ಕೂ ಈ ಸಮಾವೇಶದಲ್ಲಿ ಅವಕಾಶಗಳಿವೆ ಎಂದೂ ಸಚಿವರು ಉಲ್ಲೇಖಿಸಿದರು.

ಸುದ್ದಿಗೋಷ್ಠಿಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ವಿದ್ಯುನ್ಮಾನ, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್. ವಿದ್ಯುನ್ಮಾನ, ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕರು ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿತರಿದ್ದರು.

13 ವೇದಿಕೆಗಳಲ್ಲಿ ಕಾರ್ಯಕ್ರಮಗಳು

ಮೂರು ದಿನಗಳವರೆಗಿನ ಕಾರ್ಯಕ್ರಮಗಳು 13 ವೇದಿಕೆಗಳಲ್ಲಿ ನಡೆಯಲಿವೆ. ಬಹುವಿಷಯ ಆಧಾರಿತ ಸಮಾವೇಶ, ಜಾಗತಿಕ ನಾವೀನ್ಯತೆ ಒಕ್ಕೂಟದ ಪಾಲುದಾರರ ಜೊತೆಗಿನ ಅಂತರರಾಷ್ಟ್ರೀಯ ಸಹಭಾಗಿತ್ವ, ತಂತ್ರಜ್ಞಾನ ಬಳಕೆ ಪ್ರದರ್ಶಿಸುವ ಕೈಗಾರಿಕಾ ವಸ್ತುಪ್ರದರ್ಶನ ಹಾಗೂ ನವೋದ್ಯಮಗಳಿಗೆ ಆದ್ಯತೆ ನೀಡುವ ಭವಿಷ್ಯ ರೂಪಿಸುವವರು (ಫ್ಯೂಚರ್ ಮೇಕರ್ಸ್) ಕಾರ್ಯಕ್ರಮಗಳನ್ನು ಒಳಗೊಂಡಿವೆ. ಜತೆಗೆ, ದತ್ತಾಂಶ ಮತ್ತು ಸೈಬರ್ ಸುರಕ್ಷತೆ, ವಿಶೇಷ ನೆರವು ನೀಡುವ ತಂತ್ರಜ್ಞಾನ, ಜಾಗತಿಕ ಸಾಮಥ್ರ್ಯ ಕೇಂದ್ರಗಳು (ಜಿಸಿಸಿ), ಮರುಬಳಕೆ ಆರ್ಥಿಕತೆ, ಸೃಜನಶೀಲ ಆರ್ಥಿಕತೆ. ಹಣಕಾಸು ಜಗತ್ತು, ಕೌಶಲ ಅಭಿವೃದ್ಧಿ ಮತ್ತು ಶಿಕ್ಷಣ ತಂತ್ರಜ್ಞಾನ, ಭಾರತ–ಅಮೆರಿಕ ತಂತ್ರಜ್ಞಾನ ಸಮಾವೇಶ, ಜಾಗತಿಕ ಸಹಯೋಗ ಮತ್ತು ಇಂಡಿಯಾ ಇನ್ನೋವೇಟ್ಸ್ ಸೇರಿದಂತೆ 16 ವಿಷಯಾಧಾರಿತ ವಿಭಾಗಗಳಲ್ಲಿ 120ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ನಡೆಯಲಿವೆ.

ಪ್ರಮುಖ ಭಾಷಣಕಾರರು

ಪ್ರಮುಖ ಭಾಷಣಕಾರರಲ್ಲಿ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಹಾಗೂ ಗೋಖಲೆ ಇನ್‍ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಆ್ಯಂಡ್ ಎಕನಾಮಿಕ್ಸ್‌ ನ ಕುಲಪತಿ ಸಂಜೀವ್ ಸನ್ಯಾಲ್, ಸವರ್ಂ ಎಐ ಸಹ-ಸಂಸ್ಥಾಪಕ ಡಾ.ವಿವೇಕ್ ರಾಘವನ್, ಕ್ಲಿಯರ್‍ವಾಟರ್ ಅನಾಲಿಟಿಕ್ಸ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಸಹಾಯ್, ಜರ್ಮನಿಯ ಎನ್‍ಎಕ್ಸ್‌ ಪಿ ಸೆಮಿಕಂಡಕ್ಟರ್ಸ್‍ನ ಹಿರಿಯ ಉಪಾಧ್ಯಕ್ಷ ಮೌಲಿನ್ ಪಟೇಲ್, ಭವಿಷ್ಯದ ತಜ್ಞ ಮತ್ತು ಜನಸಂಖ್ಯಾ ತಜ್ಞ ಮಾರ್ಕ್ ಮೆಕ್‍ಕ್ರಿಂಡಲ್, ಐಐಟಿ ಮದ್ರಾಸ್‍ನ ಇನ್‍ಸ್ಟಿಟ್ಯೂಟ್ ಪ್ರೊ ಫೆಸರ್ ಹಾಗೂ ಇಮ್ಮರ್ಸಿವ್ ಟೆಕ್ನಾಲಜಿ ಆ್ಯಂಡ್ ಎಂಟರ್‍ಪ್ರೆನ್ಯೂರ್‌ ಶಿಪ್ ಲ್ಯಾಬ್ಸ್ ಅಧ್ಯಕ್ಷ ಅಶೋಕ್ ಝುಂಜುನ್‍ವಾಲಾ, ಆರಿನ್ ಕ್ಯಾಪಿಟಲ್ ಪಾರ್ಟನರ್ಸ್ ಅಧ್ಯಕ್ಷ ಮೋಹನ್‍ದಾಸ್ ಪೈ, ಏಥರ್ ಎನರ್ಜಿ ಸಹ-ಸಂಸ್ಥಾಪಕ ಸ್ವಪ್ನಿಲ್ ಜೈನ್, ಜರ್ಮನಿಯ ಫ್ರಾನ್‍ಹೋಫರ್ ಇನ್‍ಸ್ಟಿಟ್ಯೂಟ್ ಫಾರ್ ಸಾಫ್ಟ್‌ ವೇರ್ ಆ್ಯಂಡ್ ಸಿಸ್ಟಮ್ಸ್ ಎಂಜಿನಿಯರಿಂಗ್ ನಿರ್ದೇಶಕ ಪ್ರೊ.ಬೋರಿಸ್ ಒಟ್ಟೊ, ಬಾಷ್‌ ಗ್ಲೋಬಲ್ ಸಾಫ್ಟ್‌ ವೇರ್ ಟೆಕ್ನಾಲಜೀಸ್‍ನ ಅಧ್ಯಕ್ಷ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ದತ್ತಾತ್ರಿ ಸಲಗಾಮೆ ಸೇರಿದ್ದಾರೆ.

20ಕ್ಕೂ ಹೆಚ್ಚು ಆಯ್ದ ದುಂಡುಮೇಜಿನ ಸಭೆ

20ಕ್ಕೂ ಹೆಚ್ಚು ಆಯ್ದ ದುಂಡುಮೇಜಿನ ಸಭೆಗಳು ನಡೆಯಲಿವೆ. ಇವುಗಳಲ್ಲಿ ಉದ್ಯಮ ಕ್ಷೇತ್ರದ ನಾಯಕರು, ನೀತಿ ನಿರೂಪಕರು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿ, ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದ ಪ್ರಮುಖ ಆದ್ಯತೆಗಳ ಕುರಿತು ಚರ್ಚಿಸಲಿದ್ದಾರೆ. ಪ್ರವರ್ಧಮಾನಕ್ಕೆ ಬರುತ್ತಿರುವ ಅವಕಾಶಗಳು, ಆಯಾ ವಲಯಗಳ ಸವಾಲುಗಳು ಮತ್ತು ಸಹಕಾರದ ಸಾಧ್ಯತೆಗಳ ಕುರಿತು ವಿಚಾರ ವಿನಿಮಯಕ್ಕೆ ಈ ಸಭೆಗಳು ಅವಕಾಶ ಕಲ್ಪಿಸಲಿವೆ.

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://www.bengalurutechsummit.com ಅನ್ನು ನೋಡಬಹುದು.

Tags

Minister Priyank KhargeBengaluru Tech Summit
share
ಸಮೀರ್ ದಳಸನೂರು\ವಾರ್ತಾಭಾರತಿ
ಸಮೀರ್ ದಳಸನೂರು\ವಾರ್ತಾಭಾರತಿ

ಸಮೀರ್ ದಳಸನೂರು ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿದ್ದು, ದೂರದರ್ಶನದ ಚಂದನ ವಾಹಿನಿಯಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ, ಆಕಾಶವಾಣಿಯಲ್ಲೂ ಅರೆಕಾಲಿಕ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಪ್ರಸ್ತುತ ಹಲವು ವರ್ಷಗಳಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.

Next Story
X