'ಸಂಚಾರಿ ಸಾಥಿ' ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ಧಾರ ಆತಂಕಕಾರಿ, ಸರ್ವಾಧಿಕಾರಿ ನಡೆ: ದಿನೇಶ್ ಗುಂಡೂರಾವ್

ಬೆಗಳೂರು: ಮೊಬೈಲ್‌ಗಳಲ್ಲಿ 'ಸಂಚಾರಿ ಸಾಥಿ' ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ಧಾರ ಆತಂಕಕಾರಿ ಹಾಗೂ ಸರ್ವಾಧಿಕಾರಿ ನಡೆ. ಇದೊಂದು ಖಂಡಿತವಾಗಿಯೂ ಗೂಢಾಚಾರಿ ಆ್ಯಪ್ ಆಗಿದ್ದು ಈ ಆ್ಯಪ್ ಮೂಲಕ ಸಾರ್ವಜನಿಕರ ಖಾಸಗಿತನದ ಮೇಲೆ ಕಣ್ಗಾವಲು ಇಡಲು ಕೇಂದ್ರ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾನ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಈ ಹಿಂದೆ ಕೇಂದ್ರ ಸರ್ಕಾರ ತನ್ನ ರಾಜಕೀಯ ವಿರೋಧಿಗಳ ಮೇಲೆ ಕಣ್ಗಾವಲು ಇಡಲು ಇಸ್ರೇಲ್‌ನ 'ಪೆಗಾಸಸ್' ಮತ್ತು ಉ.ಕೊರಿಯಾದ 'ರೆಡ್‌ಫ್ಲ್ಯಾಗ್' ಅಪ್ಲಿಕೇಶನ್ ಬಳಸಿ ಕಳ್ಳತನದ ಗೂಢಾಚಾರಿಕೆ ನಡೆಸಿತ್ತು. ಈಗ ಬಹಿರಂಗವಾಗಿಯೇ ಸಂಚಾರ ಸಾಥಿ ಅಪ್ಲಿಕೇಶನ್ ಮೂಲಕ ಸಾರ್ವಜನಿಕರ ಮೇಲೆ ಗೂಢಾಚಾರಿಕೆ ನಡೆಸಲು ಹೊರಟಿದೆ. ಇದು ಜನರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಮೇಲೆ ಕಣ್ಗಾವಲು ಇಡಲು ಕೇಂದ್ರಕ್ಕೆ ಬಂದಿರುವ ರೋಗವಾದರೂ ಏನು.? ತನ್ನದೇ ಜನರ ಮೇಲೆ ಗೂಢಾಚಾರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ.? ಕೇಂದ್ರದ ನಡೆ ಅನೇಕ ಅನುಮಾನ ಮೂಡಿಸುತ್ತಿದೆ. ಯಾವುದೇ ಸರ್ಕಾರ ಜನರ ಖಾಸಗಿತನ ರಕ್ಷಣೆ ಮಾಡಬೇಕು. ಖಾಸಗಿತನ ಜನರಿಗೆ ಸಂವಿಧಾನ ನೀಡಿರುವ ಹಕ್ಕಾಗಿದೆ. ಇದನ್ನು ಉಲ್ಲಂಘಿಸುವುದು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಂತೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮೊಬೈಲ್‌ಗಳಲ್ಲಿ 'ಸಂಚಾರಿ ಸಾಥಿ' ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ಧಾರ ಆತಂಕಕಾರಿ ಹಾಗೂ ಸರ್ವಾಧಿಕಾರಿ ನಡೆ. ಇದೊಂದು ಖಂಡಿತವಾಗಿಯೂ ಗೂಢಾಚಾರಿ ಆ್ಯಪ್ ಆಗಿದ್ದು ಈ ಆ್ಯಪ್ ಮೂಲಕ ಸಾರ್ವಜನಿಕರ ಖಾಸಗಿತನದ ಮೇಲೆ ಕಣ್ಗಾವಲು ಇಡಲು ಕೇಂದ್ರ ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 3, 2025
ಈ ಹಿಂದೆ ಕೇಂದ್ರ ಸರ್ಕಾರ ತನ್ನ ರಾಜಕೀಯ…







