RTI ಅರ್ಜಿದಾರರ ಮಾಹಿತಿ ಕೋರಿದ್ದ ಆದೇಶ ವಾಪಸ್ | ಕಾರ್ಯಕರ್ತರಿಗೆ ಸಂದ ಜಯ ಎಂದ ‘ನೈಜ ಹೋರಾಟಗಾರರ ವೇದಿಕೆ’

ಬೆಂಗಳೂರು, ಅ.6: ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‍ಟಿಐ)ಅರ್ಜಿದಾರರ ಮಾಹಿತಿಯನ್ನು ಕೋರಿದ್ದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಗುರುನಾಥ ಡಾಕಪ್ಪ ಮಾಡಿದ ಆದೇಶವನ್ನು ಹಿಂಪಡೆಯುವಂತೆ ಸರಕಾರ ಪತ್ರ ಬರೆದಿದ್ದು, ಇದು ನೈಜ ಹೋರಾಟಗಾರರ ವೇದಿಕೆಯ ಕಾರ್ಯಕರ್ತರಿಗೆ ಸಿಕ್ಕಿದ ಜಯವಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಗುರುವಾರ ಡಿಪಿಎಆರ್‍ನ ಪ್ರಧಾನ ಕಾರ್ಯದರ್ಶಿ ಮನೀಶ್ ಮೌದ್ಗಿಲ್‍ರನ್ನು ಭೇಟಿಯಾಗಿದ ತಂಡವು, ಮಾಹಿತಿ ಹಕ್ಕು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕಿದರೆ ಅವರ ಪಟ್ಟಿಯನ್ನು ಕೊಡುವಂತೆ ಮಾಡಿದ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ಮನೀಶ್ ಮೌದ್ಗಿಲ್ ತಕ್ಷಣದಿಂದ ಜಾರಿ ಆಗುವಂತೆ ಆದೇಶವನ್ನು ಹಿಂಪಡೆದಿರುತ್ತಾರೆ. ಇದು ನೈಜ್ಯ ಹೋರಾಟಗಾರರಿಗೆ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಹೋರಾಟಕ್ಕೆ ಜಯ ಲಭಿಸಿದೆ ಎಂದು ನೈಜ ಹೋರಾಟಗಾರರ ವೇದಿಕೆಯ ಕಾರ್ಯಕರ್ತರು ತಿಳಿಸಿದ್ದಾರೆ.
Next Story







