195 ತಾಲೂಕುಗಳು ಬರ ಪೀಡಿತ: ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆ

ಬೆಂಗಳೂರು, ಸೆ. 14: ನೈಋತ್ಯ ಮುಂಗಾರು ಮಳೆ ವೈಫಲ್ಯದಿಂದಾಗಿ ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಹಾಗೂ 34 ತಾಲೂಕುಗಳಲ್ಲಿ ಸಾಧಾರಣ ಬರಪೀಡಿತ ಪ್ರದೇಶವೆಂದು ಗುರುತಿಸಿ ರಾಜ್ಯ ಸರಕಾರ ಘೋಷಿಸಿ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರದ ಬರ ನಿರ್ವಹಣೆ ಕೈಪಿಡಿ-2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ ವರದಿಯನುಸಾರ ಸರಕಾರ ಈ ತೀರ್ಮಾನ ಕೈಗೊಂಡಿದ್ದು, 2023ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ. ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳು ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ವರೆಗೆ ಘೋಷಿಸಿ ಆದೇಶಿಸಿದೆ.
ಜಿಲ್ಲಾಕಾರಿಗಳು ಬರನಿರ್ವಹಣೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರಕಾರದಿಂದ ಕಾಲಕಾಲಕ್ಕೆ ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ನಿಯಮಗಳನ್ವಯ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ತೀವ್ರ ಬರಪೀಡಿತ 161 ತಾಲೂಕು: ಬೆಂಗಳೂರು ನಗರ ಜಿಲ್ಲೆ-ಬೆಂಗಳೂರು ಪೂರ್ವ, ಬೆಂಗಳೂರು ಗ್ರಾಮಾಂತರ ಜಿಲ್ಲೆ-ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ. ರಾಮನಗರ ಜಿಲ್ಲೆ-ಕನಕಪುರ, ರಾಮನಗರ, ಹಾರೋಹಳ್ಳಿ. ಕೋಲಾರ ಜಿಲ್ಲೆ-ಬಂಗಾರಪೇಟೆ, ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್. ಚಿಕ್ಕಬಳ್ಳಾಪುರ ಜಿಲ್ಲೆ-ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ. ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುರುವೇಕೆರೆ.
ಚಿತ್ರದುರ್ಗ: ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲಕೆರೆ, ಹೊಸದುರ್ಗ, ಮೊಳಕಾಲ್ಮೂರು. ದಾವಣಗೆರೆ: ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು, ನ್ಯಾಮತಿ. ಮೈಸೂರು: ಎಚ್.ಡಿ. ಕೋಟೆ, ಹುಣಸೂರು, ಮೈಸೂರು, ನಂಜನಗೂಡು, ಪಿರಿಯಾ ಪಟ್ಟಣ, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ. ಮಂಡ್ಯ: ಕೆಆರ್ ಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ.
ಬಳ್ಳಾರಿ: ಬಳ್ಳಾರಿ, ಸಂಡೂರು, ಶಿರುಗುಪ್ಪ, ಕುರುಗೋಡು, ಕಂಪ್ಲಿ. ಕೊಪ್ಪಳ: ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕಾರಟಗಿ, ಕುಕನೂರು, ಕನಕಗಿರಿ. ರಾಯಚೂರು: ಲಿಂಗಸುಗೂರು, ಮಾನ್ವಿ ರಾಯಚೂರು, ಶಿರವಾರ. ಕಲಬುರ್ಗಿ: ಅಫ್ಜಲ್‍ಪುರ, ಅಳಂದಾ, ಚಿಂಚೋಳಿ, ಚಿತ್ತಾಪುರ, ಕಲಬುರ್ಗಿ, ಜೇವರ್ಗಿ, ಸೇಡಂ, ಕಳಗಿ, ಕಮಲಪುರ, ಯಡ್ರಾಮಿ, ಶಹಬಾದ್. ಬೀದರ್: ಬಾಲ್ಕಿ, ಬಸವಕಲ್ಯಾಣ, ಹುಲಸೂರು
ಬೆಳಗಾವಿ: ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ ರಾಮದುರ್ಗ, ರಾಯಬಾಗ್, ಸವದತ್ತಿ, ಕಿತ್ತೂರುನಿಪ್ಪಾಣಿ, ಕಾಗವಾಡ, ಮದಲಗಿ, ಯರಗಟ್ಟಿ. ಬಾಗಲಕೋಟೆ: ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುದೋಳ, ಗುಳೇದಗುಡ್ಡ, ಇಳಕಲ್, ರಬಕವಿ ಬನಹಟ್ಟಿ. ವಿಜಯಪುರ: ಬಸವನ ಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೆಬಿಹಾಳ, ಸಿಂದಗಿ, ಬಭ್ಲೇಶ್ವರ, ಚಡಚಣ, ನಿಡಗುಂದಿ, ತಾಳಿಕೋಟೆ, ಕೊಲ್ಹಾರ, ದೇಹರಹಿಪ್ಪರಗಿ, ಆಲಮೇಲ. ಗದಗ: ಗದಗ, ನರಗುಂದ,ರೋಣ, ಶಿರಹಟ್ಟಿ, ಗಜೇಂದ್ರಘಡ, ಲಕ್ಷ್ಮೇಶ್ವರ. ಹಾವೇರಿ: ಹಾವೇರಿ, ಹೀರೆಕೆರೂರ್, ರಾಣೆಬೆನ್ನೂರು, ಸವಣೂರು, ರಟ್ಟಿಹಳ್ಳಿ.
ಧಾರವಾಡ: ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಹುಬ್ಬಳ್ಳಿನಗರ. ಶಿವಮೊಗ್ಗ: ಭದ್ರಾವತಿ, ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ. ಹಾಸನ: ಅರಕಲಗೂಡು, ಚಿಕ್ಕಮಗಳೂರು: ಕಡೂರು, ಅಜ್ಜಂಪುರ. ಕೊಡಗು: ಮಡಿಕೇರಿ, ವಿರಾಜಪೇಟೆ, ಕುಶಾಲನಗರ. ಉಡುಪಿ: ಕಾರ್ಕಳ, ಉತ್ತರ ಕನ್ನಡ: ಹಳಿಯಾಳ, ಮುಂಡಗೋಡ್, ಶಿರಸಿ, ಯಲ್ಲಾಪುರ, ಯಾದಗಿರಿ: ಶಹಾಪುರ, ವಡಗೇರಾ. ವಿಜಯನಗರ: ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪ್ಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ.
ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿ: ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಯಲಹಂಕ, ಮಾಗಡಿ. ಮಾಲೂರು, ತುಮಕೂರು, ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು, ದೇವದುರ್ಗ, ಮಸ್ಕಿ, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಕಳಸ, ಸೋಮವಾರಪೇಟೆ, ಮಂಗಳೂರು, ಮೂಡಬಿದ್ರೆ, ಬ್ರಹ್ಮಾವರ, ಅಂಕೋಲ, ಭಟ್ಕಳ, ಕಾರವಾರ, ಕುಮಟ, ಜೋಯಿಡ (ಸೂಪ), ಶೋರಾಪುರ, ಯಾದಗಿರಿ, ಗುರುಮಿಟ್ಕಲ್, ಹುಣಸಿಗಿ.
ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ: ‘ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಮಾರ್ಗಸೂಚಿಯ ಪ್ರಕಾರ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಈ 195 ತಾಲೂಕುಗಳಿಗೆ ಬರ ಪರಿಹಾರ ಒದಗಿಸಲು ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ







