ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ಮುಸ್ಲಿಮರಲ್ಲಿ 93 ಜಾತಿ-ಉಪಜಾತಿ ಇದೆ : ಜಯಪ್ರಕಾಶ್ ಹೆಗ್ಡೆ

ಜಯಪ್ರಕಾಶ್ ಹೆಗ್ಡೆ
ಬೆಂಗಳೂರು : ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದಲ್ಲಿಯೂ 93 ಜಾತಿ ಹಾಗೂ ಉಪಜಾತಿಗಳನ್ನು ಗುರುತಿಸಿ ಪರಿಗಣಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಲ್ಲಿಯೂ ಜಾತಿ, ಉಪ ಜಾತಿಗಳಿವೆ. ಅವರ ಮನವಿಯ ಮೇಲೆ ಅವುಗಳನ್ನೆಲ್ಲ ಪರಿಶೀಲಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ, ಜಾತಿ ಗಣತಿ ವರದಿಯಲ್ಲಿ ಶೇಕಡಾ 50ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದೆ ಎಂದರು.
ಕೇಂದ್ರ ಸರಕಾರ ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ) ಶೇ.10 ರಷ್ಟು ಹೆಚ್ಚಳ ಮಾಡಿ ಆಗಿದೆ. ಅದನ್ನು ಸಾಂವಿಧಾನಿಕ ತಿದ್ದುಪಡಿ ಮಾಡಿ ನ್ಯಾಯಾಲಯ ಸಮ್ಮತಿ ನೀಡಿದೆ. ಹಾಗಾಗಿ ಆ ವಿಚಾರದಲ್ಲಿ ಮುಂದೆ ಏನು ತೀರ್ಮಾನ ಆಗುತ್ತದೆಯೋ ಗೊತ್ತಿಲ್ಲ. ಅದು ನ್ಯಾಯಾಂಗದ ಪರಾಮರ್ಶೆಗೆ ಒಳಪಟ್ಟ ವಿಚಾರ ಎಂದೂ ಅವರು ಉಲ್ಲೇಖಿಸಿದರು.
Next Story





