ಹಿಜಾಬ್ ನಿಷೇಧ ವಾಪಸ್ ವಿರೋಧಿಸಿ ಬಿಜೆಪಿ ಹೋರಾಟ ಮಾಡುವ ಅಗತ್ಯವಿಲ್ಲ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಹಿಜಾಬ್ ನಿಷೇಧ ಹಿಂಪಡೆಯವ ಚಿಂತನೆಗೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು," ಇದೊಂದು ಭಂಡ ಸರ್ಕಾರ, ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಆಗದೇ ಇಂತಹ ಕೆಲಸಕ್ಕೆ ಕೈಹಾಕಿ ಜನರ ದಾರಿ ತಪ್ಪಿಸುತ್ತಿದ್ದಾರೆ ಅಷ್ಟೇ. ಇದನ್ನು ಯಾರೂ ಒಪ್ಪುವುದಿಲ್ಲ" ಎಂದರು.
ʼಹಿಜಾಬ್‌ನ ನಿಷೇಧ ರದ್ದು ಮಾಡುವಂತೆ ಯಾವ ಮುಸ್ಲಿಮ್ ನಾಯಕರು ಕೇಳಿದ್ದರು? ಇಂತಹ ಡೊಂಬರಾಟವನ್ನು ಮುಖ್ಯಮಂತ್ರಿಗಳು ಬಿಡಬೇಕು. ಅಲ್ಲದೆ, ಶಾಲಾ, ಕಾಲೇಜು ಮಕ್ಕಳು ಒಂದೇ ಸಮಾನವಾಗಿ ಇರಬೇಕು. ಇದನ್ನು ಧಿಕ್ಕರಿಸಿ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವುದನ್ನು ಕಾಂಗ್ರೆಸ್ ಬಿಡಬೇಕುʼ ಎಂದು ಹೇಳಿದರು.
Next Story





