ಜೆಡಿಎಸ್ ಬಿಡುವ ಮಾತಿಲ್ಲ, ಊಹಾಪೋಹಗಳಿಗೆ ಕಿವಿ ಕೊಡಬೇಡಿ: ಮಾಜಿ ಶಾಸಕ ಪುಟ್ಟರಾಜು ಸ್ಪಷ್ಟನೆ

ಮಂಡ್ಯ, ಸೆ.2: ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ. ಜೆಡಿಎಸ್‍ನಲ್ಲಿ ಸಕ್ರಿಯವಾಗಿ ಜನವಾಬ್ಧಾರಿ ನಿರ್ವಹಿಸುತ್ತಿದ್ದೇನೆ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ತಮಿಳುನಾಡಿಗೆ ನೀರು ಬಿಡುಗಡೆ ವಿರುದ್ಧ ಹೋರಾಟದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೃಪೇಂದ್ರರೆಡ್ಡಿ ಹಾಗೂ ನಾನು ಕೊಡಗಿನಲ್ಲಿ ಪೂಜೆ ಸಲ್ಲಿಸಲು ಜೊತೆಯಾಗಿ ಹೋಗಿದ್ದೆವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಆರೋಗ್ಯವಾಗಿದ್ದು, ಅವರನ್ನು ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದೇವೆ. ಎಂದು ಅವರು ಹೇಳಿದರು.
Next Story