ಲೋಕಸಭೆ ಚುನಾವಣೆವರೆಗೂ ಸರಕಾರ ಜಾತಿಗಣತಿ ನಾಟಕ ಆಡುತ್ತದೆ; ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ಲೋಕಸಭೆ ಚುನಾವಣೆ ವರೆಗೂ ಈ ಸರಕಾರ ಜಾತಿಗಣತಿ ನಾಟಕ ಆಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು,ಜಾತಿ ಗಣತಿ ವರದಿಯನ್ನು ಸರಕಾರ ಇನ್ನೂ ನಾಲ್ಕು ತಿಂಗಳು ಅಧ್ಯಯನ ಮಾಡಲಾಗುವುದು ಎಂದು ಹೇಳುತ್ತಿದೆ. ನನ್ನ ಪ್ರಕಾರ ಲೋಕಸಭೆ ಚುನಾವಣೆ ತನಕ ಇದು ಏನೂ ಆಗಲ್ಲ. ಯಾರೂ ಗಾಬರಿ ಆಗಬೇಕಾದ ಅವಶ್ಯಕತೆ ಇಲ್ಲ. ಈ ಸರಕಾರದ ಕೈಯಲ್ಲಿ ಏನೂ ಆಗಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇದೇ ಸಿದ್ದರಾಮಯ್ಯ ಅವರು 2018ರಲ್ಲಿ ಕಾಂತರಾಜು ವರದಿ ಕೊಡಲು ಬಂದಾಗ ಆ ವರದಿಯನ್ನ ಕುಮಾರಸ್ವಾಮಿ ಸ್ವೀಕರಿಸಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಆಗಲೇ ವರದಿ ಸಿದ್ದವಾಗಿತ್ತಲ್ವಾ? ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ, ಇನ್ನೂ ಯಾಕೆ ವರದಿ ಸ್ವೀಕಾರ ಮಾಡಿಲ್ಲ ಎಂದು ಅವರು ನೇರವಾಗಿ ಸಿದ್ದರಾಮಯ್ಯ ಅರನ್ನು ಪ್ರಶ್ನೆ ಮಾಡಿದರು.
Next Story





