ನಟ ಕಿಶೋರ್ ಜನ್ಮದಿನದ ಶುಭಾಶಯ ಹೇಳಿದ್ದು ಯಾರಿಗೆ ?
"ಮತಗಳ್ಳ, ಪಕ್ಷ ಕಳ್ಳ ರಾಷ್ಟ್ರ ವಿರೋಧಿ ಸರ್ವಾಧಿಕಾರಿಗೆ" ಹ್ಯಾಪಿ ಬರ್ತ್ ಡೇ ಹೇಳಿದ ಕಿಶೋರ್

ನಟ ಕಿಶೋರ್ ಕುಮಾರ್
ಬೆಂಗಳೂರು: ನಟ ಕಿಶೋರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಜನ್ಮದಿನದ ಪೋಸ್ಟ್ವೊಂದು ಇದೀಗ ಗಮನ ಸೆಳೆದಿದೆ.
ಅವರು ವ್ಯಕ್ತಿಯೊಬ್ಬರಿಗೆ ತೀವ್ರ ವ್ಯಂಗ್ಯ ಹಾಗೂ ಟೀಕಾತ್ಮಕ ಪದಗಳನ್ನು ಬಳಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಕಿಶೋರ್, “ಮತಗಳ ಕಳ್ಳ, ಸೀಟಿನ ಕಳ್ಳ, ಪಕ್ಷದ ಕಳ್ಳ, ಚಂದಾ ಕಳ್ಳ, ಪ್ರಜಾಪ್ರಭುತ್ವದ ಕಳ್ಳ” ಎಂದು ಆರೋಪಾತ್ಮಕ ಪದಗಳನ್ನು ಬಳಸಿದ್ದಾರೆ.
ಮುಂದುವರಿದು, “ಅತ್ಯಂತ ಹೇಡಿ, ಅತ್ಯಂತ ಅಹಂಕಾರಿ, ಅತ್ಯಂತ ಅಗ್ಗದ ವ್ಯಕ್ತಿ, ಅತ್ಯಂತ ಕ್ರೂರ, ಅತ್ಯಂತ ಮೂರ್ಖ, ಅತ್ಯಂತ ಸಂವೇದನಾಶೂನ್ಯ, ಅತ್ಯಂತ ಘನತೆಯಿಲ್ಲದ, ಅತ್ಯಂತ ಸ್ವಯಂಮೋಹಿ, ಅತ್ಯಂತ ಜನವಿರೋಧಿ, ಅತ್ಯಂತ ಅಸಭ್ಯ ಭಾಷೆ ಬಳಸುವ, ಅತ್ಯಂತ ಸಂಕುಚಿತ ದೃಷ್ಟಿಕೋನದ, ಅತ್ಯಂತ ಅಪಾಯಕಾರಿ, ಅತ್ಯಂತ ಭ್ರಷ್ಟ, ಅತ್ಯಂತ ದುಷ್ಟ.” ಸೇರಿದಂತೆ ಹಲವು ಪದಗಳನ್ನು ಉಲ್ಲೇಖಿಸಿದ್ದಾರೆ.
ಕೊನೆಯಲ್ಲಿ “ನಿಜವಾದ ರಾಷ್ಟ್ರವಿರೋಧಿ ಸರ್ವಾಧಿಕಾರಿಗೆ ಜನ್ಮದಿನದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇನ್ಸ್ಟಾಗ್ರಾಂ ಬಳಕೆದಾರರು ನಿಮ್ಮ ಶುಭಾಶಯಗಳು ತಲುಪುತ್ತವೆ ಎಂದು ಭಾವಿಸುತ್ತೇನೆ. “ಅವರಿಗೆ ಸಿಕ್ಕ ಅತ್ಯುತ್ತಮ ಶುಭಾಶಯ ಇದಾಗಿರಬೇಕು”. Mr. nothing happy birthday ಎಂದು ಬರೆದಿದ್ದಾರೆ.






