15 ಸಾವಿರದ ಗಡಿ ದಾಟಿದ ಚಿನ್ನ; ಒಂದೇ ದಿನದಲ್ಲಿ 5,020 ಏರಿಕೆ!

ಸಾಂದರ್ಭಿಕ ಚಿತ್ರ (AI)
ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಚಿನ್ನದ ಜೊತೆಗೆ ಬೆಳ್ಳಿ, ಪ್ಲಾಟಿನಂ, ಕರೆನ್ಸಿ ಚಲನೆಗಳು ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತಿವೆ. ಫೆಡರಲ್ ರಿಸರ್ವ್ ನಿರ್ಧಾರಗಳ ಕುರಿತ ಊಹಾಪೋಹಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿವೆ.
ಚಿನ್ನದ ಬೆಲೆ ಔನ್ಸ್ಗೆ 4800 ಡಾಲರ್ ಮೀರಿ ಬೆಳೆಯುತ್ತಿದೆ. ಇಂದು ಜನವರಿ 21ರಂದು ಬುಧವಾರ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ಗೆ 4,821.26 ಡಾಲರ್ಗೆ ಏರಿದೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮತ್ತು ದುರ್ಬಲ ಅಮೆರಿಕನ್ ಡಾಲರ್ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗೆ ದಾರಿ ಹುಡುಕುತ್ತಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.
ಗ್ರೀನ್ ಲ್ಯಾಂಡ್ ವಶಪಡಿಸಿಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಹೇಳಿಕೆ ನೀಡಿರುವುದು ಮತ್ತು ಯುರೋಪ್ ಅದನ್ನು ವಿರೋಧಿಸಿರುವುದರಿಂದ ಚಿನ್ನದ ದರದ ಮೇಲೆ ಹೆಚ್ಚು ಭಾರ ಬಿದ್ದಿದೆ. ಈ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಚಿನ್ನದ ಜೊತೆಗೆ ಬೆಳ್ಳಿ, ಪ್ಲಾಟಿನಂ, ಕರೆನ್ಸಿ ಚಲನೆಗಳು ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತಿವೆ. ಮಾತ್ರವಲ್ಲದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ರಿಸರ್ವ್ ನಿರ್ಧಾರಗಳ ಕುರಿತ ಊಹಾಪೋಹಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿವೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಬುಧವಾರ ಜನವರಿ 21ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಮಟ್ಟದ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,480 (+502) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,190 (+460) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,611 (+377) ರೂ. ಬೆಲೆಗೆ ತಲುಪಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ (ಬೆಳಗಿನ 8 ಗಂಟೆ)?
24 ಕ್ಯಾರೆಟ್ನ ಅಪರಂಜಿ ಬಂಗಾರದ ಬಲೆ ರೂ 14,979 ಇದೆ. 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆ ರೂ 13,731 ಮತ್ತು 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ 11,235 ಇದೆ.
ಭಾರತದಲ್ಲಿ ಚಿನ್ನದ ಬೆಲೆ (ಬೆಳಗಿನ 8 ಗಂಟೆ)?
ಭಾರತದಲ್ಲಿ ಇಂದು ಬುಧವಾರ ಮಾರುಕಟ್ಟೆ ತೆರೆದುಕೊಂಡಾಗ 22 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಪ್ರತಿ ಗ್ರಾಂಗೆ 13,550 ರೂ. ಆಗಿದ್ದು, 145 ರೂ.ನಷ್ಟು ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 153 ರೂ. ಏರಿಕೆಯಾಗಿ 14,228 ರೂ.ಗೆ ಏರಿದೆ.







