ತರಬೇತಿ ಶಿಬಿರ: 13 ಶಾಸಕರು ಗೈರು

ಬೆಂಗಳೂರು: ರಾಜ್ಯದ 16ನೆ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ 13 ನೂತನ ಶಾಸಕರು ಗೈರು ಕಂಡಿತು.
69 ಶಾಸಕರ ಪೈಕಿ 56 ಶಾಸಕರು ಈ ಶಿಬಿರಕ್ಕೆ ಹಾಜರಾಗಿದ್ದು, 13 ಶಾಸಕರು ಗೈರಾಗಿ, ವಿವಿಧ ವೈಯುಕ್ತಿಕ ಕಾರಣಗಳನ್ನು ನೀಡಿದ್ದಾರೆ ಎಂದು ವೇದಿಕೆಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಪ್ರಸ್ತಾಪ ಮಾಡಿದರು.
ಈಗಿನ ಪರಿಸ್ಥಿತಿಯಲ್ಲಿ ರಾಜಕೀಯ ಅಷ್ಟೊಂದು ಸುಲಭವಲ್ಲ, ತುಂಬಾ ಕಠಿಣವಾಗಿದೆ. ಕೆಲವೊಂದು ವಾತಾವರಣದಿಂದ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಇರಲಿದೆಯೇ ಎನ್ನುವ ಅನುಮಾನವೂ ಕಾಡುತ್ತಿದೆ.ಆದರೂ, ನಾವು ಸಂವಿಧಾನ ಮೌಲ್ಯಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಕರೆ ನೀಡಿದರು.
Next Story