ಆರು ಡಿವೈಎಸ್ಪಿ, 27 ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳ ವರ್ಗಾವಣೆ

ಬೆಂಗಳೂರು, ಮೇ 6: ಆರು ಜನ ಡಿವೈಎಸ್ಪಿ ಹಾಗೂ 27 ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಡಿವೈಎಸ್ಪಿ (ಸಿವಿಲ್)ಗಳಾದ ಎಂ.ಮಲ್ಲೇಶಯ್ಯ ಅವರನ್ನು ಹೊಸಕೋಟೆ ಉಪವಿಭಾಗಕ್ಕೆ, ಶಂಕರಗೌಡ ಅಣ್ಣಾ ಸಾಹೇಬ್ ಪಾಟೀಲ್ ಅವರನ್ನು ರಾಜ್ಯ ಗುಪ್ತವಾರ್ತೆಗೆ, ನವೀನ್ ಕುಲಕರ್ಣಿ ಅವರನ್ನು ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಗೆ, ಜಿ.ಟಿ.ಸ್ವಾಮಿ ಅವರನ್ನು ಕಲಬುರಗಿಯ ಆಳಂದ ಉಪವಿಭಾಗಕ್ಕೆ, ಬಿ.ಆರ್.ಗೋಪಿ ಅವರನ್ನು ಐಎನ್‍ಡಿ ಹಾಗೂ ರವಿಕುಮಾರ್ ಅವರನ್ನು ಬೆಂಗಳೂರಿನ ಬಿಎಂಆರ್‍ಡಿಎ ಟಾಸ್ಕ್ ಪೋರ್ಸ್‍ಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಅಲ್ಲದೆ, ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳಾದ ಎನ್.ರಘುಪ್ರಸಾದ್, ಯಲಿಗಾರ್ ಪ್ರಮೋದ್ ಚಿದಂಬರ, ಮಹೇಶ್‍ಗೌಡ ಜಿ.ಪಾಟೀಲ್, ರಾಮಪ್ಪ ಬಿ.ಸವಳಗಿ, ಡಿ.ಕೆ.ಸಂತೋಷ್ ಕುಮಾರ್ ಸೇರಿದಂತೆ 27 ಮಂದಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶದಲ್ಲಿ ತಿಳಿಸಲಾಗಿದೆ.
Next Story





