ಮೌಂಟ್ ಎವರೆಸ್ಟ್ ಶಿಖರ ಏರಿದ ಇಬ್ಬರು ಕನ್ನಡಿಗರು

ಬೆಂಗಳೂರು: ʼದಿ ಕರ್ನಾಟಕ ಮೌಂಟೇನಿಂಗ್ ಅಸೋಷಿಯೇಷನ್ʼನ ಇಬ್ಬರು ಸದಸ್ಯರು ನೇಪಾಳದ ಕಡೆಯಿಂದ ಮೌಂಟ್ ಎವರೆಸ್ಟ್ ಶಿಖರ ಏರಿ ದಾಖಲೆ ಮಾಡಿದ್ದಾರೆ.
ಬೆಂಗಳೂರಿನ ನೇತ್ರ ತಜ್ಞೆ ಡಾ.ಚಿನ್ಮಯಿ ಜೆ. ತ್ರಿಶೂಲಮೂರ್ತಿ ಮತ್ತು ಸಂತೋಷ್ ದೇವರಾಜಪ್ಪ ಅವರು 8,848.86 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ್ದಾರೆ.
ಸಂಸ್ಥೆಯು 60ನೇ ವಾರ್ಷೀಕೋತ್ಸವ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ಇಬ್ಬರು ಸದಸ್ಯರು ಮೌಂಟ್ ಎವರೆಸ್ಟ್ ಆರೋಹಣದ ಸಾಧನೆಗೈದಿದ್ದಾರೆ. ಮಾ.9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಈ ಇಬ್ಬರು ಪರ್ವತಾರೋಹಿಗಳಿಗೆ ಶುಭ ಕೋರಿ ಬೀಳ್ಕೊಟ್ಟಿದ್ದರು.
46 ದಿನಗಳನ್ನು ಕ್ರಮಿಸಿ ಮೌಂಟ್ ಎವರೆಸ್ಟ್ ಶಿಖರ ಏರುವ ಮೂಲಕ ದಾಖಲೆ ಬರೆದಿದ್ದಾರೆ. ಹವಾಮಾನ ವೈಪರೀತ್ಯದ ನಡುವೆಯೂ ಈ ಇಬ್ಬರು ಕನ್ನಡಿಗರು ವಿಶ್ವದ ಅತಿ ಎತ್ತರದ ಶಿಖರವನ್ನು ಏರಿ ದಾಖಲೆ ಮಾಡಿದ್ದಾರೆ.
Next Story




