‘ಗಣರಾಜ್ಯೋತ್ಸವ’ | ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಆಯ್ಕೆ: 27 ಮಂದಿಗೆ ಸೇವಾ ಪದಕ

Photo credit: tribuneindia.com
ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಪ್ರದಾನ ಮಾಡಲಾಗುವ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ರವಿವಾರ ಪ್ರಕಟಿಸಿದೆ.
ಶೌರ್ಯ ಮತ್ತು ಸೇವಾ ಪದಕಗಳಿಗೆ ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ 982 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 125 ಶೌರ್ಯ ಪದಕಗಳು ಸೇರಿವೆ. ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಹಾಗೂ 27 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ರಾಷ್ಟ್ರಪತಿಗಳ ಪದಕ: ಎಡಿಜಿಪಿ(ಮಾನವ ಹಕ್ಕುಗಳು) ದೇವಜ್ಯೋತಿ ರೈ, ಹಲಸೂರು ಉಪವಿಭಾಗದ ಎಸಿಪಿ ರಂಗಪ್ಪ ಟಿ. ಅವರಿಗೆ ರಾಷ್ಟ್ರಪತಿಗಳ ಪದಕ ಘೋಷಿಸಿ ಗೌರವಿಸಲಾಗಿದೆ.
ಶ್ಲಾಘನೀಯ ಸೇವಾ ಪದಕ: ಐಜಿಪಿಗಳಾದ ಅಮಿತ್ ಸಿಂಗ್, ಚೇತನ್ ಸಿಂಗ್ ರಾಥೋರ್, ಡಿಐಜಿ ಸೀಮಾ ಲಾಟ್ಕರ್, ಎಸ್ಪಿ ಸವಿತಾ ಶ್ರೀನಿವಾಸ್, ಎಎಸ್ಪಿ ಪುಟ್ಟಮಾದಯ್ಯ, ಎಎಸ್ಪಿ ನಾಗಪ್ಪ ನವೀನ್ ಕುಮಾರ್, ಡಿಸಿಪಿ ರಾಜಾ ಇಮಾಂ ಖಾಸೀಂ ಪಿಂಜಾರ್, ಡಿಎಸ್ಪಿ ಹನುಮಂತರಾಯ, ಎಸ್ಪಿ ಸಿ.ಎ.ಸೈಮನ್, ಇನ್ಸ್ಪೆಕ್ಟರ್ ಮೊಹಮ್ಮದ್ ಎಂ.ಎ., ಇನ್ಸ್ಪೆಕ್ಟರ್ ಶಿವಸ್ವಾಮಿ ಸಿ.ಬಿ., ಇನ್ಸ್ಪೆಕ್ಟರ್ ಎಂ.ಎಂ.ತಹಶೀಲ್ದಾರ್, ಇನ್ಸ್ಪೆಕ್ಟರ್ ಎಸ್.ಕೆ.ಬ್ಯಾಕೋಡ್, ಪಿಎಸ್ಸೈ ಕಾಶಿನಾಥ್ ಬಿ., ಪಿಎಸ್ಸೈ ವೈಲೆಟ್ ಫೆಮಿನಾ, ಪಿಎಸ್ಸೈ ಶಕುಂತಲಾ ಎಚ್.ಕೆ., ಎಎಸ್ಸೈ ಹರ್ಷ ನಾಗರಾಜ್, ಎಎಸ್ಸೈ ಸಿದ್ಧರಾಜು ಜಿ., ಹೆಡ್ ಕಾನ್ಸ್ಟೇಬಲ್ ಎಚ್.ಡಿ.ಈರಪ್ಪ, ಹೆಡ್ ಕಾನ್ಸ್ಟೇಬಲ್ ಬಸವರಾಜ್ ಎಂ. ಅವರುಗಳು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಅಲ್ಲದೆ, ಅಗ್ನಿಶಾಮಕ ಇಲಾಖೆಯ ಅಸಿಸ್ಟೆಂಟ್ ಫೈರ್ ಸ್ಟೇಷನ್ ಅಧಿಕಾರಿ ಗುರುಸ್ವಾಮಿ, ಲೀಡಿಂಗ್ ಫೈರ್ಮ್ಯಾನ್ ಅರುಣ್ ಸಿ.ನಾಯ್ಕ್, ಗೃಹರಕ್ಷಕದಳ ವಿಭಾಗದ ಕಮಾಂಡಿಂಗ್ ಅಧಿಕಾರಿಗಳಾದ ಸುನಂದ್ ಸಂಪತ್, ಬಾಲಾಜಿ ಶ್ರೀನಿವಾಸನ್, ಪ್ಲಟೂನ್ ಕಮಾಂಡರ್ಗಳಾದ ಮಲಾಲಿ ಗೌಡ, ವಾದಿರಾಜ್ ನಾರಾಯಣ್ ರಾವ್ ದೇಶಪಾಂಡೆ ಹಾಗೂ ತಿದ್ದುಪಡಿ ಸೇವೆ ವಿಭಾಗದ ಸಹಾಯಕ ಅಧೀಕ್ಷಕ ಪರಮೇಶ್ ಎಚ್.ಎ. ಅವರಿಗೂ ಶ್ಲಾಘನೀಯ ಸೇವಾ ಪದಕ ಘೋಷಿಸಿ ಗೌರವಿಸಲಾಗಿದೆ.







