ವಿಧಾನಸಭೆ ಕಲಾಪವನ್ನು ಸಹಪಾಠಿಗಳ ಜತೆ ವೀಕ್ಷಿಸಿದ ಯು.ಟಿ ಖಾದರ್ ಪುತ್ರಿ ಹವ್ವಾ ನಸೀಮ

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರ ಸುಪುತ್ರಿ ಹವ್ವಾ ನಸೀಮಾ ಅವರು ತಮ್ಮ ಕಾಲೇಜಿನ ಸಹಪಾಠಿಗಳು ಹಾಗೂ ಉಪನ್ಯಾಸಕರ ಜೊತೆ ತಮ್ಮ ತಂದೆಯವರು ನಡೆಸಿಕೊಡುತ್ತಿರುವ ಕಲಾಪವನ್ನು ವಿಧಾನಸೌಧದಲ್ಲಿ ವೀಕ್ಷಿಸಿದರು.
ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹವ್ವಾ ನಸೀಮಾ ಅವರು ಕಲಾಪವನ್ನು ವೀಕ್ಷಿಸುವುದರ ಜೊತೆಗೆ ವಿಧಾನಸೌಧ ಹಾಗೂ ಕಲಾಪಗಳ ಮಹತ್ವದ ಬಗೆಗಿನ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಒಟ್ಟು 38 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ಭಾಗಿಯಾಗಿದ್ದರು.
Next Story





