ಕರ್ನಾಟಕ ಹೈಕೋರ್ಟ್ ಹಂಗಾಮಿ ಸಿಜೆಯಾಗಿ ವಿ.ಕಾಮೇಶ್ವರ ರಾವ್ ನೇಮಕ

ವಲ್ಲೂರಿ ಕಾಮೇಶ್ವರ ರಾವ್ (PC : delhihighcourt)
ಬೆಂಗಳೂರು : ಕರ್ನಾಟಕ ಹೈಕೋರ್ಟ್ಗೆ ಹಂಗಾಮಿ ಸಿಜೆಯಾಗಿ ವಲ್ಲೂರಿ ಕಾಮೇಶ್ವರ ರಾವ್ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರದ ಕಾನೂನು ಇಲಾಖೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಎನ್.ವಿ.ಅಂಜಾರಿಯಾ ನೇಮಕ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಹಂಗಾಮಿ ಸಿಜೆಯಾಗಿ ವಲ್ಲೂರಿ ಕಾಮೇಶ್ವರ ರಾವ್ ನೇಮಿಸಲಾಗಿದೆ. ಕರ್ನಾಟಕ ಹೈಕೋರ್ಟ್ಗೆ ಸಿಜೆಯಾಗಿ ನ್ಯಾ.ವಿಭು ಬಖ್ರು ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದು ರಾಷ್ಟ್ರಪತಿಗಳ ಒಪ್ಪಿಗೆ ಬಾಕಿಯಿದೆ. ಅಲ್ಲಿಯವರೆಗೆ ಹಂಗಾಮಿ ಸಿಜೆಯಾಗಿ ನ್ಯಾ.ವಿ.ಕಾಮೇಶ್ವರ ರಾವ್ ನೇಮಿಸಲಾಗಿದ್ದು, ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
Next Story





