ಬ್ಯಾಂಕ್ಗಳು ವಸೂಲಿ ಮಾಡಿರುವ ಲೆಕ್ಕ ಕೋರಿ ವಿಜಯ್ ಮಲ್ಯ ಅರ್ಜಿ; ಬ್ಯಾಂಕ್ಗಳು, ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್

ವಿಜಯ್ ಮಲ್ಯ x.com/TheVijayMallya
ಬೆಂಗಳೂರು: ಕಿಂಗ್ ಫಿಷರ್ ಏರ್ಲೈನ್ಸ್ ನ ಕಂಪನಿಗಳಿಂದ ಬ್ಯಾಂಕ್ ಗಳು ವಸೂಲಿ ಮಾಡಿರುವ ಲೆಕ್ಕ ಕೋರಿ ಹೈಕೋರ್ಟ್ ಗೆ ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಬ್ಯಾಂಕ್ಗಳು, ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ವಿಜಯ್ ಮಲ್ಯ ಪರ ಹಿರಿಯ ವಕೀಲ ಸಾಜನ್ ಪೂವಯ್ಯ ವಾದಿಸಿ, 6200 ಕೋಟಿ ಸಾಲ ಕೊಡಬೇಕಿತ್ತು. 14,000 ಕೋಟಿ ವಸೂಲಾಗಿದೆ. ಎಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ನಿರ್ದೇಶಿಸಲು ಮನವಿ ಮಾಡಿದರು. ವಾದ ಆಲಿಸಿದ ಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
Next Story