ಒಂದು ವಾರ ಅಧಿವೇಶನ ನಡೆಸಿ : ವಿಜಯೇಂದ್ರ

ಬೆಂಗಳೂರು : ರಾಜ್ಯದಲ್ಲಿನ ಬರ ಪರಿಸ್ಥಿತಿ, ರೈತರ ಸಮಸ್ಯೆ-ಸಂಕಷ್ಟಗಳನ್ನು ಚರ್ಚಿಸಲು ಮೂರು ದಿನ ಅಧಿವೇಶನ ನಡೆಸಿದರೆ ಸಾಲದು, ಅದನ್ನು ಒಂದು ವಾರದ ಅವಧಿಗೆ ವಿಸ್ತರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆÉದಿದ್ದೇವೆಂದು ಹೇಳುತ್ತಿದೆ. ಕಸ್ತೂರಿ ರಂಗನ್ ವರದಿ, ಬರಗಾಲದ ಕುರಿತು ಚರ್ಚೆಗೆ ಅಧಿವೇಶನ ಕರೆದಿದ್ದು, ವಿಪಕ್ಷ ನಾಯಕರು, ಬಿಜೆಪಿ-ಜೆಡಿಎಸ್‍ನ ಶಾಸಕರು ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ ಎಂದರು.
ನಮ್ಮ ಹೋರಾಟದ ಒತ್ತಡಕ್ಕೆ ಮಣಿದು ವಿಶೇಷ ಅಧಿವೇಶನ ಕರೆಯುವ ಸ್ಥಿತಿಗೆ ಸರಕಾರ ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ರೈತರ ಪರವಾಗಿ ಒತ್ತಾಯ ಮಾಡಲಿವೆ. ಪಶ್ಚಿಮ ಘಟ್ಟ ಅರಣ್ಯ ಹಾಗೂ ಕಾಡಂಚಿನ ರೈತರ ರಕ್ಷಣೆಯೂ ಆಗಬೇಕಾಗುತ್ತದೆ. ಅವರ ಬದುಕನ್ನು ಕಟ್ಟಿ ಕೊಡುವ ಕೆಲಸವೂ ಆಗಬೇಕು ಎಂದು ಅವರು ಪ್ರತಿಪಾದಿಸಿದರು.
Next Story




