ವಿನಯ್ ಕುಲಕರ್ಣಿ ಕೈದಿ ನಂ. 16110

ವಿನಯ್ ಕುಲಕರ್ಣಿ
ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಕೈದಿ ಸಂಖ್ಯೆಯನ್ನು ನೀಡಲಾಗಿದೆ.
ಶಾಸಕ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳನ್ನು ಶುಕ್ರವಾರ(ಎ.17) ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು. ಈ ವೇಳೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ ಯುಟಿಪಿ ನಂಬರ್ (ವಿಚಾರಣಾಧೀನ ಖೈದಿ) ನೀಡಿದ್ದರು. ಆದರೆ, ಈಗ ಕೆಲವು ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿಗೆ ಸಜಾ ಬಂಧಿ ಖೈದಿ ಸಂಖ್ಯೆ 16110 ನೀಡಲಾಗಿದೆ. ಜೊತೆಗೆ ಎಲ್ಲ ಅಪರಾಧಿಗಳಿಗೆ ಸಜಾ ಬಂಧಿ ಖೈದಿ ಸಂಖ್ಯೆಗಳನ್ನು ಅಧಿಕೃತವಾಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿನಯ್ ಕುಲಕರ್ಣಿ ಹಾಗೂ ಈ ಪ್ರಕರಣದ ಇತರ 17 ಅಪರಾಧಿಗಳನ್ನು ಪ್ರಸ್ತುತ ಡಿ ಬ್ಯಾರಕ್ನ ಕ್ವಾರಂಟೈನ್ ಸೆಲ್ಗೆ ಕಳುಹಿಸಲಾಗಿದೆ. ಅಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಇತರ ಮೂವರು ಅಪರಾಧಿಗಳನ್ನು ಒಂದು ಬ್ಯಾರಕ್ನಲ್ಲಿ ಇರಿಸಿದರೆ, ಇತರ ಅಪರಾಧಿಗಳನ್ನು ಪಕ್ಕದ ಬ್ಯಾರಕ್ನಲ್ಲಿ ಇರಿಸಲಾಗಿದೆ. ಮುಂದಿನ 10 ದಿನಗಳ ಕಾಲ ಎಲ್ಲರೂ ಇಲ್ಲೇ ಇರಲಿದ್ದಾರೆ. ನಂತರ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
17 ಅಪರಾಧಿಗಳ ಸಜಾ ಬಂಧಿ ಕೈದಿ ಸಂಖ್ಯೆಗಳು..!
1) ವಿಕ್ರಂ ಬಳ್ಳಾರಿ - 16097
2) ಕೀರ್ತಿ ಕುಮಾರ್ ಬೆಳ್ಳಟ್ಟಿ - 16098
3) ಸಂದೀಪ್ ಸವದತ್ತಿ - 16099
4) ವಿನಾಯಕ ಕಟಗಿ - 16100
5) ಮಹಾಬಲೇಶ್ವರ ಹೊಂಗಳೇ - 16101
6) ಸಂತೋಷ ಸವದತ್ತಿ - 16102
7) ದಿನೇಶ್ -16103
8) ಅಶ್ವಥ್ - 16104
9) ಸುನಿಲ್ - 16105
10) ನಜೀರ್ ಅಹ್ಮದ್ - 16106
11) ಶನವಾಜ್ - 16107
12) ನೂತನ್ - 16108
13) ಹರ್ಷೀತ್ - 16109
14) ವಿನಯ್ ಕುಲಕರ್ಣಿ -16110
15) ಚಂದ್ರಶೇಖರ್ ಇಂಡಿ -16111
16) ವಿಕಾಸ್ ಕಲಬುರ್ಗಿ - 16112
17) ಚನ್ನಕೇಶವ ಟಿಂಗರಿಕರ್ - 16113






