ಗಲಾಟೆ ಪ್ರಕರಣ: ವಕೀಲ ಜಗದೀಶ್ ಸೇರಿ ಇಬ್ಬರು ಪೊಲೀಸ್ ವಶಕ್ಕೆ

ವಕೀಲ ಜಗದೀಶ್ PC: fb.com
ಬೆಂಗಳೂರು, ಜ. 25: ಯುವಕರ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ ಹಾಗೂ ಅವರ ಗನ್ಮ್ಯಾನ್ನನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಅಣ್ಣಮ್ಮ ಕೂರಿಸೋ ವಿಚಾರಕ್ಕೆ ಗಲಾಟೆ ನಡೆದಿತ್ತು.ಈ ವೇಳೆ ಜಗದೀಶ್ ಗನ್ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆ ನಂತರ ಸಾಕಷ್ಟು ಗದ್ದಲ ಉಂಟಾಗಿತ್ತು.ಸದ್ಯ ಕೊಡಿಗೇಹಳ್ಳಿ ಪೊಲೀಸರು ಜಗದೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ, ಸಹಕಾರ ನಗರದಲ್ಲಿ ಶುಕ್ರವಾರ ರಾತ್ರಿ ವಕೀಲ ಜಗದೀಶ್ ಮೇಲೆ ಹಲ್ಲೆ ನಡೆಸಲಾಗಿತ್ತು.ನನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಜಗದೀಶ್ ಅವರು ವಿಡಿಯೊ ಮಾಡಿ ಹೇಳಿಕೊಂಡಿದ್ಧಾರೆ.
ಮುಖದಲ್ಲಿ ರಕ್ತದ ಕಲೆಗಳು ಆಗಿರುವುದು ವಿಡಿಯೊದಲ್ಲಿದೆ. ಮೂಗಿನಿಂದ ರಕ್ತ ಬರುವಂತೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಜಗದೀಶ್ ಆರೋಪಿಸಿದ್ಧಾರೆ.
ಅಣ್ಣಮ್ಮ ದೇವಿಯ ಮೂರ್ತಿಯನ್ನು ಕೂರಿಸುವ ವಿಚಾರದಲ್ಲಿ ಸ್ಥಳೀಯರು ಹಾಗೂ 'ಲಾಯರ್' ಜಗದೀಶ್ ನಡುವೆ ಗುರುವಾರ ಸಹ ಗಲಾಟೆ ನಡೆದಿತ್ತು. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು. ಅದೇ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ.





