ಈದ್ ಉಲ್ ಅಝ್ಹಾ ಪ್ರಾರ್ಥನೆಯಲ್ಲಿ ಸಚಿವ ಝಮೀರ್ ಅಹಮದ್ ಖಾನ್ ಭಾಗಿ

ಬೆಂಗಳೂರು, ಮೇ 28: ಬಕ್ರೀದ್(ಈದ್ ಉಲ್ ಅಝ್ಹಾ) ಹಬ್ಬದ ಅಂಗವಾಗಿ ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಗುರುವಾರ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ನಟ ಝೈದ್ ಖಾನ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಸೇರಿದಂತೆ ಮುಖಂಡರಾದ ಡಿಸಿ ರಮೇಶ್, ಅಪ್ಪೋಡ ಚಂದ್ರಶೇಖರ, ಗೋವಿಂದರಾಜು, ರವಿಪ್ರಸಾದ್, ವಿನಾಯಕ್ ಹಾಗೂ ಗೌಸಿ ಉಪಸ್ಥಿತರಿದ್ದರು.
Next Story




