Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಕರ್ನಾಟಕದ ಎಸ್‌ಐಆರ್ ವಿರೋಧಿ ಹೋರಾಟ:...

ಕರ್ನಾಟಕದ ಎಸ್‌ಐಆರ್ ವಿರೋಧಿ ಹೋರಾಟ: ಒಂದು ಭಿನ್ನಾಭಿಪ್ರಾಯ ಮತ್ತು ಕಳಕಳಿಯ ಬಿನ್ನಹ

ಶಿವಸುಂದರ್ಶಿವಸುಂದರ್24 Jun 2026 11:09 AM IST
share
ಕರ್ನಾಟಕದ ಎಸ್‌ಐಆರ್ ವಿರೋಧಿ ಹೋರಾಟ: ಒಂದು ಭಿನ್ನಾಭಿಪ್ರಾಯ ಮತ್ತು ಕಳಕಳಿಯ ಬಿನ್ನಹ

ಎಸ್‌ಐಆರ್ ಸಂಪೂರ್ಣ ರದ್ದಾಗದೆ ಭಾರತದ ದಾಖಲೆಗಳಿರದ 10-15 ಕೋಟಿ ಭಾರತೀಯ ಬಡ-ದಮನಿತ ಮತದಾರರ ಬದುಕುವ ಹಕ್ಕು ರಕ್ಷಿಸಲು ಸಾಧ್ಯವಿಲ್ಲ. ಜನರನ್ನು ಮತ್ತು ತನ್ನನ್ನು ರಕ್ಷಿಸಿಕೊಳ್ಳಬೇಕೆಂದರೂ ವಿರೋಧ ಪಕ್ಷಗಳು ಬಾಯಿ ಮಾತಿನಲ್ಲಿ ಅಲ್ಲದೆ ನಿಜಕ್ಕೂ ಎರಡನೇ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಬೇಕು.

ಕರ್ನಾಟಕದಲ್ಲಿ ಎಸ್‌ಐಆರ್ ವಿರೋಧಿ ಹೋರಾಟ ಹಲವಾರು ಜನಪರ ಸಂಘಟನೆಗಳ ಅವಿರತ ಶ್ರಮ ಮತ್ತು ಪ್ರಚಾರಾಂದೋಲನಗಳ ಪರಿಣಾಮದಿಂದಾಗಿ, ಈಗ ನಿಧಾನಕ್ಕೆ ಒಂದು ಮಜಲನ್ನು ಮುಟ್ಟುತ್ತಿದೆ. ಆದರೂ 2019-2020ರ ಎನ್‌ಆರ್‌ಸಿ ವಿರೋಧಿ ಚಳವಳಿಗೆ ಹೋಲಿಸಿದಲ್ಲಿ ಚಳವಳಿ ಬಿರುಸಾಗುತ್ತಿಲ್ಲ. ಅದಕ್ಕೆ ಒಂದು ಪ್ರಧಾನ ಕಾರಣ ಎಸ್‌ಐಆರ್ ಎಂಬುದು ಎನ್‌ಆರ್‌ಸಿಯಂತೆ ಪೌರತ್ವವನ್ನೇ ಕಸಿಯುವ ಮಹಾ ಹುನ್ನಾರ ಎನ್ನುವುದು ಬಾಧಿತ ಸಮುದಾಯಕ್ಕೆ ತಲುಪದಿರುವುದು. ಎಲ್ಲಾ ರಾಜ್ಯಗಳಲ್ಲೂ ಎಸ್‌ಐಆರ್ ಮುಗಿದು ಮತಪಟ್ಟಿಯಿಂದ ಹೊರದಬ್ಬಲ್ಪಟ್ಟವರ ಪೌರತ್ವ ಹಕ್ಕುಗಳನ್ನು, ಸರಕಾರಿ ಸೌಲಭ್ಯಗಳನ್ನು ಮತ್ತು ಸಾಂವಿಧಾನಿಕ ರಕ್ಷಣೆಗಳನ್ನು ಪ್ರಭುತ್ವವು ಒಂದೊಂದಾಗಿ ಕಿತ್ತುಕೊಳ್ಳಲು ಪ್ರಾರಂಭಿಸಿತ್ತದೆನ್ನುವುದು ಸ್ಪಷ್ಟ. ಅದು ಪ್ರಾರಂಭವಾಗುತ್ತಿದ್ದಂತೆ ದಮನಿತ ಹಾಗೂ ದಲಿತ ಸಮುದಾಯಗಳ ಅರಿವು ಮತ್ತು ಪ್ರತಿರೋಧ ಹೆಚ್ಚಾಗತೊಡಗುತ್ತದೆ. ಹೀಗಾಗಿ ಎಸ್‌ಐಆರ್ ರದ್ದಾಗಬೇಕೆಂಬ ಹೋರಾಟವು ಎಸ್‌ಐಆರ್ ಪ್ರಕ್ರಿಯೆ ಮುಗಿದ ನಂತರವೇ ಬೃಹತ್ ಜನಾಂದೋಲನವಾಗುವ ಸಾಧ್ಯತೆ ಹೆಚ್ಚು. ಜನಸಂಘಟನೆಗಳು ಅದಕ್ಕಾಗಿ ಸಜ್ಜುಗೊಳ್ಳಬೇಕಿದೆ.

ಆದರೆ ಕರ್ನಾಟಕದಲ್ಲಿ ಎಸ್‌ಐಆರ್ ಬಗ್ಗೆ ಕೆಲವು ವಲಯಗಳಲ್ಲಿ ಕೆಲವು ತಪ್ಪು ಗ್ರಹಿಕೆಗಳಿವೆ ಮತ್ತು ಅದನ್ನು ಈಗಿರುವಂತೆಯೇ ಜನಸ್ನೇಹಿ ಮಾಡುವ ಸಾಧ್ಯತೆಯ ಬಗ್ಗೆ ಕೆಲವು ಉತ್ಪ್ರೇಕ್ಷಿತ ಮತ್ತು ತಪ್ಪು ನಿಲುವುಗಳಿವೆ. ಕಾಂಗ್ರೆಸ್‌ಗಿಂತ ಸಕ್ರಿಯವಾಗಿ ತಳಮಟ್ಟದಲ್ಲಿ ಮತ್ತು ಸಮರಶೀಲವಾಗಿ ಪ. ಬಂಗಾಳದಲ್ಲಿ ಮತ್ತು ತಮಿಳುನಾಡಿನಲ್ಲಿ ಜನರು ಮತ್ತು ಇತರ ವಿರೋಧ ಪಕ್ಷಗಳು ಆ ರಾಜ್ಯಗಳಲ್ಲಿ ಎಸ್‌ಐಆರ್ ಅನ್ನು ಜನಸ್ನೇಹಿಯಾಗಿ ಮಾಡಲಾಗದ್ದನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಸಹಕಾರದೊಂದಿಗೆ ಮಾಡಬಹುದೆಂಬ ಭ್ರಮೆಗಳಿವೆ

ಹೀಗಾಗಿ:

1) ರಾಜ್ಯ ಸರಕಾರವು ತ್ವರಿತಗತಿಯಲ್ಲಿ ಗ್ರಾಮಸಭೆಗಳನ್ನು ನಡೆಸಿ ಜನರ ಸಮಕ್ಷಮದಲ್ಲಿ ಮತಪಟ್ಟಿಗಳ ಪರಿಶೀಲನೆ ನಡೆಸಿ, ಸ್ವತಂತ್ರ ಮತಪಟ್ಟಿ ತಯಾರಿಸಿಟ್ಟುಕೊಂಡರೆ, 2) ಆ ಪರಿಶೀಲನೆಯಲ್ಲಿ ಎಸ್‌ಐಆರ್ ಕೇಳುವ ದಾಖಲೆಗಳು ಇಲ್ಲದಿದ್ದರೂ ಗ್ರಾಮಸಭೆ ಅನುಮೋದಿಸಿದರೆ ಅವರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವ ಕ್ರಮ ಕೈಗೊಂಡರೆ, 3) ಅಥವಾ ವಾಸಸ್ಥಳ ದಾಖಲೆಯಂತಹ ದಾಖಲೆಗಳನ್ನು ಸ್ಥಳದಲ್ಲಿಯೇ ವಿತರಿಸಿದರೆ, 4) ಮತ್ತು ಜನರ ಬಳಿ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಒಂದು ಸ್ಮಾರ್ಟ್ ಕಾರ್ಡ್ ಕೊಟ್ಟು ಅದನ್ನು ಒಪ್ಪಬೇಕೆಂದು ಆಯೋಗದ ಮೇಲೆ ಒತ್ತಡ ತಂದರೆ.. ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗಿಂತ ಭಿನ್ನವಾಗಿ ಒಬ್ಬ ಅರ್ಹ ಮತದಾರರೂ ಹೊರಗಿಳಿಯದಂತೆ ಮಾಡಬಹುದೆಂಬ ಅಭಿಪ್ರಾಯ ಹೋರಾಟಗಾರರ ಒಂದು ವಲಯದಲ್ಲಿ ಪ್ರಚಾರದಲ್ಲಿದೆ. ಅದರ ಜೊತೆಗೆ ಹೋರಾಟಗಾರರು ಜನರು ತಮ್ಮ ದಾಖಲೆಗಳನ್ನು ಕೊಡುವ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಬೇಕೆಂದೂ ಆಗ್ರಹಿಸುತ್ತಿದ್ದಾರೆ.

ಒಂದು ವೇಳೆ ಆಯೋಗವು ಈ ಮೇಲಿನ ಬೇಡಿಕೆಗಳಿಗೆ ಒಪ್ಪದಿದ್ದರೆ ಬೃಹತ್ ಹೋರಾಟ ರೂಪಿಸುವ ಎಚ್ಚರಿಕೆಯನ್ನು ನೀಡುತ್ತಿದೆ.

ಅದಕ್ಕೆ ತಕ್ಕಂತೆ ಎಸ್‌ಐಆರ್ ಹೋರಾಟಗಾರರ ಒತ್ತಡಕ್ಕೆ ಸ್ಪಂದಿಸಿ ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿಗಳು ಎಸ್‌ಐಆರ್‌ನಲ್ಲಿ ಒಬ್ಬ ಅರ್ಹ ಮತದಾರರೂ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ತಮ್ಮ ಕಾರ್ಯಕರ್ತರಿಗೆ ಪದೇ ಪದೇ ಎಚ್ಚರಿಸುತ್ತಿದ್ದಾರೆ.

ಈ ಬೆಳವಣಿಗೆಗಳು ಕೂಡ ಕಾಂಗ್ರೆಸ್ ಸಹಾಯದೊಂದಿಗೆ ಕರ್ನಾಟಕದಲ್ಲಿ ಎಸ್‌ಐಆರ್ ಅಪಾಯಗಳನ್ನು ಮೀರಬಹುದೆಂಬ ನಿರೀಕ್ಷೆಯನ್ನು ಕೆಲವು ವಲಯದಲ್ಲಿ ಹುಟ್ಟಿಸುತ್ತಿದೆ.

ಇದರ ಹಿಂದಿರುವ ಸದಾಶಯಗಳ ಪ್ರಾಮಾಣಿಕತೆ ಸಂಶಯಾತೀತ. ಈ ಆಗ್ರಹಗಳನ್ನು ಈ ದೇಶದ ಹಲವಾರು ವಿದ್ವಾಂಸರು ಮತ್ತು ಚುನಾವಣಾ ಆಯೋಗದ ಮಾಜಿ ಆಯುಕ್ತರುಗಳು ಕೂಡ ಅನುಮೋದಿಸುತ್ತಾರೆ. ಅವುಗಳು ನಮ್ಮ ಇಡೀ ಚುನಾವಣಾ ವ್ಯವಸ್ಥೆಯ ಪ್ರಜಾತಾಂತ್ರೀಕರಣದ ಭಾಗವಾಗಿ ಹುಟ್ಟಿಕೊಂಡಿರುವ ಆಶಯಗಳು. ಆದರೆ ಸಮಸ್ಯೆ ಇರುವುದು ಈ ಆಗ್ರಹಗಳ ಹಿಂದಿನ ಪ್ರಜಾತಾಂತ್ರಿಕ ಆಶಯದ್ದಲ್ಲ. ಹೋರಾಟಗಾರರು ಅವುಗಳನ್ನು ಈಗಿರುವ ಕಾನೂನಿನಡಿಯಲ್ಲೇ ಸರಕಾರವು ಮನಸ್ಸು ಮಾಡಿದರೆ ಜಾರಿಗೆ ತರಬಹುದು ಎಂದು ಭಾವಿಸಿರುವುದರಲ್ಲಿ.

ಆದರೆ ಎಸ್‌ಐಆರ್ ಎಂಬುದೇ ಅದಕ್ಕೆ ತದ್ವಿರುದ್ಧವಾದ ಸರ್ವಾಧಿಕಾರಿ ಪ್ರಕ್ರಿಯೆ. ವಾಸ್ತವವೆಂದರೆ ಈವರೆಗೆ ಅಲಸ್ವಲ್ಪ ಅನ್ವಯವಾಗುತ್ತಿದ್ದ ಪ್ರಜಾತಾಂತ್ರಿಕ ನಿಯಂತ್ರಣಗಳೂ ಕೂಡ ಅದಕ್ಕೆ ಅನ್ವಯವಾಗುತ್ತಿಲ್ಲ. ಹೀಗಾಗಿ:

-ಎಸ್‌ಐಆರ್ ಪ್ರಕ್ರಿಯೆಯ ಸಾಂವಿಧಾನಿಕತೆ, ಅದರಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ರಾಜ್ಯ ಸರಕಾರಕ್ಕಿರುವ ಸಾಧ್ಯತೆ ಮತ್ತು ಆ ಹಿನ್ನೆಲೆಯಲ್ಲಿ ಎಸ್‌ಐಆರ್ ಒಳಗೆ ದಮನಿತರು ಉಳಿಯುವ ಸಾಧ್ಯತೆಗಳ ಬಗ್ಗೆ ಮತ್ತೊಮ್ಮೆ ಅವಲೋಕಿಸುವ ಅಗತ್ಯವಿದೆ.

ಗ್ರಾಮ ಸಭೆ, ಸ್ಮಾರ್ಟ್ ಕಾರ್ಡ್, ಸೋಷಿಯಲ್ ಆಡಿಟ್ ಆಗ್ರಹಗಳೆಲ್ಲವೂ ಅತ್ಯಂತ ಪ್ರಜಾತಾಂತ್ರಿಕ ಆಗ್ರಹಗಳು. ಆದರೆ ಅವು ಈಗಿರುವ ಕಾನೂನಿನ ಅಡಿಯಲ್ಲೇ ಸರಕಾರಗಳು ಜಾರಿ ಮಾಡಿ ಎಸ್‌ಐಆರ್ ಅನ್ನು ನಿಗ್ರಹಿಸಬಹುದು ಎಂಬುದು ಉತ್ಪ್ರೇಕ್ಷೆ. ಏಕೆಂದರೆ ಈ ಗ್ರಹಿಕೆಯ ಹಿಂದೆ ರಾಜ್ಯ ಸರಕಾರಕ್ಕೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರವಿದೆಯೆಂಬ ತಪ್ಪು ಕಲ್ಪನೆಯಿದೆ.

ಆದ್ದರಿಂದಲೇ ಕರ್ನಾಟಕದ ಕಾಂಗ್ರೆಸ್‌ಗಿಂತ ತಳಮಟ್ಟದ ಸಂಘಟನೆ, ಹೋರಾಟಗಳಿರುವ ಮತ್ತು ಕರ್ನಾಟಕಕ್ಕಿಂತ ಸಕ್ರಿಯವಾದ ನಾಗರಿಕ ಸಮಾಜ, ಕಾಂಗ್ರೆಸ್‌ಗಿಂತ ಸಾಪೇಕ್ಷವಾಗಿ ಹೆಚ್ಚಿನ ಉತ್ತರದಾಯಿ ಸರಕಾರಗಳಿದ್ದರೂ ಕೇರಳ, ಪ. ಬಂಗಾಳ, ತಮಿಳುನಾಡಿನಲ್ಲಿ ಎಸ್‌ಐಆರ್ ಯಾವ ಜನಸ್ನೇಹಿ ಕ್ರಮಗಳನ್ನೂ ತೆಗೆದುಕೊಳ್ಳಲಾಗಲಿಲ್ಲ. ಹೀಗಾಗಿ ಯಾವುದೇ ಉತ್ಪ್ರೇಕ್ಷೆ ಮತ್ತು ಭ್ರಮೆಗಳಿಲ್ಲದೆ, ಈ ಸರ್ವಾಧಿಕಾರಿ ಎಸ್‌ಐಆರ್ ಅನ್ನು ಅರಿಯುವ ಮತ್ತು ಅದರ ಆಧಾರದಲ್ಲಿ ಅದನ್ನು ನಿಗ್ರಹಿಸುವ ಮಾರ್ಗಗಳನ್ನು ಹುಡುಕಬೇಕಿದೆ.

ಎಸ್‌ಐಆರ್- ಅಧಿಕಾರವಿಲ್ಲದ ರಾಜ್ಯ ಸರಕಾರಗಳು

ಸಂವಿಧಾನವು ಆರ್ಟಿಕಲ್ 324-326ರಲ್ಲಿ ರಾಜ್ಯ ಶಾಸನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಮತಪಟ್ಟಿ ತಯಾರಿಸುವ ಮತ್ತು ಚುನಾವಣಾ ನಡೆಸುವ ಮತ್ತದರ ಪ್ರಕ್ರಿಯೆಗಳ ಮಾರ್ಗದರ್ಶನ ಮತ್ತು ನಿಯಂತ್ರಣ ಮಾಡುವ ಸಂಪೂರ್ಣ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿಬಿಟ್ಟಿದೆ. ಇದು ಅಪ್ರಜಾತಾಂತ್ರಿಕ. ಇದು ಸರಿಯಲ್ಲ. ಆದರೆ ಇದು ಬದಲಾಗುವ ತನಕ ಇದೇ ವಾಸ್ತವ. ಹೀಗಾಗಿಯೇ ಈ ವ್ಯವಸ್ಥೆಯ ಪ್ರಜಾತಾಂತ್ರಿಕ ಸುಧಾರಣೆ ಆಗಬೇಕಿದೆ. ಆ ಸುಧಾರಣೆಯ ಭಾಗವಾಗಿಯೇ ಗ್ರಾಮಸಭೆಗಳು ಮತ್ತು ವಾರ್ಡ್ ಸಭೆಗಳ ಮೂಲಕ ಮತಪಟ್ಟಿಗಳ ಸೋಷಿಯಲ್ ಆಡಿಟ್ ಆಗುವುದು ಅತ್ಯಂತ ಪ್ರಜಾತಾಂತ್ರಿಕ ಕ್ರಮ. ಅದರ ಬಗ್ಗೆ ಸಂದೇಹವಿಲ್ಲ.

ಆದರೆ ಪ್ರಶ್ನೆಯೆಂದರೆ ಈಗಿರುವ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಆ ಬಗೆಯ ಸುಧಾರಣೆಗಳನ್ನು ರಾಜ್ಯ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಜಾರಿ ಮಾಡುವ ಅಧಿಕಾರವಿದೆಯೇ ಎಂಬುದು...

ಉತ್ತರ ಸ್ಪಷ್ಟ: ಅಂತಹ ಸುಧಾರಣೆಗಳಿಗೆ ಸಂಬಂಧಪಟ್ಟ ಸಂವಿಧಾನ ತಿದ್ದುಪಡಿಯಾಗದೆ ಈಗಿರುವ ಸಂವಿಧಾನ, ಕಾನೂನು ಮತ್ತು ನಿಯಮಗಳಡಿಯಲ್ಲಿ ರಾಜ್ಯ ಸರಕಾರಗಳು ತಮ್ಮ ರಾಜ್ಯದೊಳಗೆ ರಾಜ್ಯ ಶಾಸನಸಭಾ ಮತಪಟ್ಟಿ ತಯಾರಿಸುವಾಗ ಜಾರಿ ಮಾಡುವುದು ಸಾಧ್ಯವಿಲ್ಲ.

ಅದಕ್ಕೆ ಕಾರಣಗಳೇನೆಂದು ಒಂದೊಂದಾಗಿ ಗಮನಿಸೋಣ:

ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್ ಆದೇಶವನ್ನು ಸಂವಿಧಾನದ ಆರ್ಟಿಕಲ್ 324 (1), ಪ್ರಜಾಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 21 ಮತ್ತು 13 (ಸಿಸಿ), 32 ಹಾಗೂ ಮತಪಟ್ಟಿ ಪರಿಷ್ಕರಣೆ ನಿಯಮ-1960 ರ ನಿಮಯಗಳನ್ವಯ ಮಾಡಿದೆ.

ಆಸಕ್ತರು ಇಸಿಐ ನೋಟಿಫಿಕೇಷನ್‌ನ ಪೂರ್ಣಪಾಠವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

https://www.scobserver.in/wp-content/uploads/2025/07/Bihar-SIR-Notification.pdf

ಈಗ ಆ ಕಾಯ್ದೆ ಮತ್ತು ನಿಯಮಗಳು ಏನು ಹೇಳುತ್ತವೆ ನೋಡೋಣ

1) ಸಂವಿಧಾನದ ಆರ್ಟಿಕಲ್ 324 (1):

ಎಲ್ಲಾ ಶಾಸನಸಭಾ ಚುನಾವಣೆಗಳ ಮತಪಟ್ಟಿ ತಯಾರಿಯ ಉಸ್ತುವಾರಿ ಕೇಂದ್ರ ಚುನಾವಣಾ ಆಯೋಗದ್ದು.

2) ಪ್ರಜಾ ಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 21:

ಸೂಕ್ತ ಕಾರಣಗಳನ್ನು ಕೊಟ್ಟು ಯಾವುದೇ ಬಗೆಯ ಮತಪಟ್ಟಿ ಪರಿಷ್ಕರಣೆ ಮಾಡುವ ಪರಮಾಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕಿದೆ ಮತ್ತು ಅದರ ಮಾರ್ಗದರ್ಶನದಲ್ಲಿ (21 ಬಿ) ಸಿದ್ಧವಾಗದ ಮತಪಟ್ಟಿಗೆ ಮಾನ್ಯತೆ ಇರುವುದಿಲ್ಲ.

ಆದರೆ ಎಸ್‌ಐಆರ್ ಮತಪಟ್ಟಿ ಪರಿಷ್ಕರಣೆಯಲ್ಲ. ನಾಗರಿಕತ್ವ ಪರಿಶೀಲನೆ. ಅದನ್ನು ಮಾಡುವ ಅಧಿಕಾರ ಆಯೋಗಕ್ಕಿಲ್ಲ. ಆದರೆ ಅದನ್ನು ತಡೆಯುವ ಅಧಿಕಾರ ಇದ್ದದ್ದು ಸುಪ್ರೀಂ ಕೋರ್ಟ್‌ಗೆ ಮಾತ್ರ. ಆದರೆ ಸುಪ್ರೀಂ ಕೋರ್ಟ್ ಕೂಡ ಅಯೋಗದ ಈ ಸರ್ವಾಧಿಕಾರಿ ಪಾರಮ್ಯವನ್ನು ಎತ್ತಿಹಿಡಿದುಬಿಟ್ಟಿದೆ.

3) 2) ಪ್ರಜಾ ಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 13 (ಸಿಸಿ):

ಮತಪಟ್ಟಿ ತಯಾರಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮುಖ್ಯ ಚುನಾವಣಾ ಅಧಿಕಾರಿಯನ್ನು ಒಳಗೊಂಡಂತೆ ಎಲ್ಲಾ ಚುನಾವಣಾ ಅಧಿಕಾರಿಗಳು ಆ ಕಾರ್ಯವನ್ನು ನಿರ್ವಹಣೆ ಮಾಡುವ ಅವಧಿಯಲ್ಲಿ ಸಂಪೂರ್ಣವಾಗಿ ಚುನಾವಣಾ ಆಯೋಗದ ನಿಯಂತ್ರಣ, ಉಸ್ತುವಾರಿ ಮತ್ತು ಶಿಸ್ತಿಗೆ ಒಳಪಟ್ಟಿರುತ್ತಾರೆ.

ಹೀಗಾಗಿ ಎಸ್‌ಐಆರ್ ನಡೆಸುವುದು ಮತ್ತು ಅದಕ್ಕೆ ಬೇಕಿರುವ ಮಾರ್ಗಸೂಚಿಗಳನ್ನು ರೂಪಿಸುವುದು ಆಯೋಗದ ಪರಮಾಧಿಕಾರವಾಗಿಬಿಟ್ಟಿದೆ ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯ ಈ ಅವಧಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಶಿಸ್ತಿಗೆ ಒಳಪಟ್ಟಿರುತ್ತದೆ.

2023ರ ಐಆರ್ ಮಾರ್ಗಸೂಚಿ ಎಸ್‌ಐಆರ್ ಅನ್ನು ನಿರ್ಬಂಧಿಸುವುದೇ?

2023ರ Manualನಲ್ಲಿ ಕರಡು ಮತಪಟ್ಟಿಯನ್ನು ಗ್ರಾಮಸಭೆಯಲ್ಲಿ ಓದಬಹುದು ಎಂಬ ಅವಕಾಶವಿದ್ದರೂ ಅದು ಎಸ್‌ಆರ್ ಮತ್ತು ಐಆರ್‌ಸಂದರ್ಭಕ್ಕೆ ಮಾತ್ರ ರೂಪಿಸಲಾದ ನಿಯಮ.

ಎಸ್‌ಐಆರ್‌ಗೆ ಆಯೋಗ ರೂಪಿಸಿರುವ ನಿಯಮಗಳಲ್ಲಿ ಆ ಅವಕಾಶವಿಲ್ಲ. ಅದಿಲ್ಲದಿರುವಾಗ ರಾಜ್ಯ ಸರಕಾರ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪರ್ಯಾಯ ಪ್ರಕ್ರಿಯೆ ಸೂಚಿಸಿದರೆ ಚುನಾವಣಾ ಆಯೋಗದ ಶಿಸ್ತು ಪಾಲಿಸಬೇಕೆಂಬ 13 (ಸಿಸಿ) ನಿಯಮದ ಉಲ್ಲಂಘನೆಯಾಗುತ್ತದೆ.

ರಾಜ್ಯಗಳ ‘ರಾಜ್ಯ ಚುನಾವಣಾ ಆಯೋಗವು’ ಸ್ಥಳೀಯ ಸಂಸ್ಥೆಗಳಿಗೆ ನಡೆಸುವ ಚುನಾವಣೆಗಳಿಗೆ ಮತಪಟ್ಟಿಯನ್ನು ರೂಪಿಸುವಾಗ ರಾಜ್ಯ ಸರಕಾರದ ಸಮಾಲೋಚನೆಗೆ ಅವಕಾಶವಿದೆ. ಆದರೆ ಅದು ರಾಜ್ಯ ಶಾಸನಸಭಾ ಮತಪಟ್ಟಿಯ ಮೇಲೆ ಯಾವ ಪ್ರಭಾವವನ್ನು ಬೀರುವುದಿಲ್ಲ.

ಮೇಲಾಗಿ ಸುಪ್ರೀಂ ಕೋರ್ಟ್ ಎಸ್‌ಐಆರ್ ಬಗ್ಗೆ ಮೇ 27ರಂದು ಕೊಟ್ಟಿರುವ ತನ್ನ ತೀರ್ಪಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೊರಗಿಡಲ್ಪಟ್ಟವರ ಪೌರತ್ವದ ಬಗ್ಗೆ ಸಕ್ಷಮ ಪ್ರಾಧಿಕಾರ ತೀರ್ಮಾನ ತೆಗೆದುಕೊಂಡ ನಂತರವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸತಕ್ಕದ್ದೆಂದು ಆದೇಶಿಸಿದೆ. ಹೀಗಾಗಿ ಈ ಸುಪ್ರೀಂ ಆದೇಶದ ನಂತರ ರಾಜ್ಯ ಚುನಾವಣಾ ಆಯೋಗಕ್ಕಿದ್ದ ಸೀಮಿತ ಅಧಿಕಾರವೂ ಇಲ್ಲವಾಗಿದೆ. ಕೇಂದ್ರದ ಸರ್ವಾಧಿಕಾರ ಹೆಚ್ಚಾಗಿದೆ.

ಹೀಗಾಗಿ ಎಲ್ಲಿಯತನಕ ಒಂದು ಸಂವಿಧಾನ ತಿದ್ದುಪಡಿಯ ಮೂಲಕ ರಾಜ್ಯ ಶಾಸನಸಭಾ ಮತ್ತು ಲೋಕಸಭಾ ಚುನಾವಣೆ ಮತ್ತು ಮತಪಟ್ಟಿಗಳ ತಯಾರಿಯನ್ನು ರಾಜ್ಯ ಶಾಸನಸಭೆಯ ವ್ಯಾಪ್ತಿಗೆ ತರುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯ ಸರಕಾರಕ್ಕೆ ಈ ವಿಷಯಗಳಲ್ಲಿ ರಾಜ್ಯ ಚುನಾವಣಾ ಕಾರ್ಯಾಲಯಕ್ಕೆ ಸೂಚನೆಗಳನ್ನು ಕೊಡುವ ಅಧಿಕಾರವಿಲ್ಲ.

ಗ್ರಾಮಸಭೆಗಳಲ್ಲಿ ಕರಡು ಮತಪಟ್ಟಿ ಓದಿ ಪರಿಶೀಲನೆಗೆ ಒಳಪಡಿಸುವುದು ಒಂದು ಉತ್ತಮ ಪ್ರಜಾತಾಂತ್ರಿಕ ಪದ್ಧತಿ.

ಆದರೆ 2023ರ ಆಯೋಗದ Manualನ ಹಲವಾರು ಅಧ್ಯಾಯಗಳಲ್ಲಿ ಹೇಳಿರುವುದು ಐಆರ್ ಮಾಡುವಾಗ, ಎಸ್‌ಐಆರ್ ಅಲ್ಲ, ಗ್ರಾಮ ಸಭೆಗಳಲ್ಲಿ ಕರಡು ಮತಪಟ್ಟಿಯ ಪ್ರದರ್ಶನ ಮಾಡಬಹುದು ವಿನಾ ಗ್ರಾಮ ಸಭೆಯ ಪರಿಶೀಲನೆಗೆ ಒಳಪಡಬೇಕು ಎಂಬುದಿಲ್ಲ.

ಆದರೆ ಈಗ ಆಯೋಗವು ಮಾಡುತ್ತಿರುವುದು ಎಸ್‌ಆರ್ ಅಥವಾ ಐಆರ್ ಅಲ್ಲ. ಇದು ಎಸ್‌ಐಆರ್. ಈಗಾಗಲೇ ಕೇಂದ್ರ ಆಯೋಗ ಮತ್ತು ಕರ್ನಾಟಕದ ಅದರ ಕಾರ್ಯಾಲಯ 2023ರ Manualಗೆ ಭಿನ್ನವಾದ ಹಾಗೂ ಎಸ್‌ಐಆರ್‌ಗೆ ಪ್ರತ್ಯೇಕವಾದ ಉuiಜeಟiಟಿes ಬಿಡುಗಡೆ ಮಾಡಿದೆ. ಅದರಲ್ಲಿ ಗ್ರಾಮಸಭೆಯಲ್ಲಿ ಓದುವ ಪ್ರಸ್ತಾವವನ್ನು ಕೂಡ ತೆಗೆದು ಹಾಕಲಾಗಿದೆ. ಎಸ್‌ಐಆರ್ ಅನ್ನು ಆಯೋಗ ಮಾಡುವುದು ಸರಿ ಎಂದಾದರೆ, ಅದಕ್ಕೆ ಬೇಕಾದ ಮಾನದಂಡಗಳನ್ನು, ಪ್ರಕ್ರಿಯೆಗಳನ್ನು ಅಳವಡಿಸಬಹುದಾದ ಸ್ವಾಯತ್ತತೆಯನ್ನು ಸಂವಿಧಾನ ಕೇಂದ್ರ ಆಯೋಗಕ್ಕೆ ನೀಡಿದೆ. ಅದನ್ನು ಸುಪ್ರೀಂ ಸಂಪೂರ್ಣವಾಗಿ ಎತ್ತಿ ಹಿಡಿದಿದೆ. ಹೀಗಾಗಿ ಅದಕ್ಕೆ ತಿದ್ದುಪಡಿ ಸೂಚಿಸುವ ಅಥವಾ ಪರ್ಯಾಯ ರೂಪಿಸುವ ಅಧಿಕಾರ ಸದ್ಯಕ್ಕೆ ಸಾಂವಿಧಾನಿಕವಾಗಿ ರಾಜ್ಯ ಸರಕಾರಕ್ಕಿಲ್ಲ.

ಆ ಕಾರಣಗಳಿಂದಾಗಿಯೇ ಪ. ಬಂಗಾಳ, ಕೇರಳ, ತಮಿಳುನಾಡುಗಳಲ್ಲಿ ಕರ್ನಾಟಕ ಕಾಂಗ್ರೆಸ್‌ಗಿಂತ ಗಟ್ಟಿ ವಿರೋಧ ಪಕ್ಷಗಳಿದ್ದರೂ, ಕರ್ನಾಟಕಕ್ಕಿಂತ ಸಮರಶೀಲ ಜನಸಂಘಟನೆಗಳು ಮತ್ತು ನಾಗರಿಕ ಸಮಾಜವಿದ್ದರೂ ಆ ರಾಜ್ಯಗಳಲ್ಲಿ ಮೇಲೆ ಬಯಸುವ ತಿದ್ದುಪಡಿಗಳನ್ನು ಜಾರಿಗೆ ತರಲಾಗದೆ ಇದ್ದುದಕ್ಕೆ ಕಾರಣ ಇದು.

ಸ್ಮಾರ್ಟ್ ಕಾರ್ಡ್ ಅಥವಾ ವಾಸ ಸ್ಥಳ ಪ್ರಮಾಣ ಪತ್ರ ಎಸ್‌ಐಆರ್ ದಾಖಲೆಯಲ್ಲ

ಇತ್ತೀಚೆಗೆ ಕರ್ನಾಟಕ ಮುಖ್ಯಮಂತ್ರಿ ಡಿಕೆಶಿಯವರು ತ್ವರಿತ ಗತಿಯಲ್ಲಿ ‘ವಾಸಸ್ಥಳ ಪತ್ರ’ ಕೊಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಹಾಗೆಯೇ ಕಾಂಗ್ರೆಸ್‌ನ ಹೊಸ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಎಸ್‌ಐಆರ್ ವಿಷಯ ದಲ್ಲಿ ಕರ್ನಾಟಕ ಸರಕಾರ ಜನಪರವಾಗಿ ನಡೆದುಕೊಳ್ಳುವಂತೆ ಹೇಳುತ್ತಿದ್ದಾರೆ.

ಆದರೆ ಆಯೋಗ ನಿಗದಿ ಮಾಡಿರುವುದು ಕೇವಲ ವಾಸ ಸ್ಥಳ ಪತ್ರವಲ್ಲ- ಶಾಶ್ವತ ವಾಸ ಸ್ಥಳ ಪತ್ರ- Permanent Residence Certificate.

ಪ. ಬಂಗಾಳದಲ್ಲಿ ಆಯೋಗವು Domicile Certificate ಅನ್ನು ಕೂಡ ಒಪ್ಪಲಿಲ್ಲ. ಆಯೋಗದ ವಿರುದ್ಧ ಅಲ್ಲಿನ ಆಳುವ ಪಕ್ಷ ಬೀದಿಗಿಳಿದು ಸಂಘರ್ಷ ಮಾಡಿ, ಸುಪ್ರೀಂ ನಲ್ಲಿ ಕೂಡ ತಕರಾರು ಮಾಡಿದ್ದರಿಂದ ಕೊನೆಗೆ Domicile Certificate ಒಪ್ಪಿಕೊಂಡಿತು. ಕೇವಲ ವಾಸ ಸ್ಥಳ ಪತ್ರವನ್ನಲ್ಲ. ಆದರೆ ಅದಕ್ಕೆ ಕೂಡ ಸರಿಯಾದ ಪ್ರಕ್ರಿಯೆ ಮತ್ತು ಸಕ್ಷಮ ಪ್ರಾಧಿಕಾರದ ಅಧಿಕೃತ ಪರಿಶೀಲನೆ ಎಲ್ಲವನ್ನೂ ಕಡ್ಡಾಯ ಮಾಡಿದೆ. ಹೀಗಾಗಿ ಕರ್ನಾಟಕ ಸರಕಾರ ದಿಢೀರನೆ ಕೊಡುವ ಕೇವಲ ವಾಸ ಸ್ಥಳ ಪತ್ರವನ್ನು ಆಯೋಗ ಮಾನ್ಯ ಮಾಡುವುದಿಲ್ಲ.

ತನ್ನ ಅಂತಿಮ ತೀರ್ಪಿನಲ್ಲಂತೂ ಸುಪ್ರೀಂ ಎಸ್‌ಐಆರ್ ಪ್ರಕ್ರಿಯೆಗೆ ಯಾವುದೇ ಬಗೆಯ ಸಮಯಾವಧಿಯನ್ನು ನಿಗದಿ ಪಡಿಸುವ ಮತ್ತು ಯಾವುದೇ ದಾಖಲೆಗಳನ್ನು ಕಡ್ಡಾಯ ಮಾಡುವ ಪರಮಾಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕಿದೆ ಎಂದು ತೀರ್ಪು ಕೊಟ್ಟುಬಿಟ್ಟಿದೆ. ಎಲ್ಲಿಯತನಕ ಎಂದರೆ ತನ್ನ ಅಧಿಕೃತ ನೋಟಿಸ್‌ನಲ್ಲಿ ಇಲ್ಲದಿದ್ದರೂ ಪ. ಬಂಗಾಳಕ್ಕೆ ಅನ್ವಯಿಸಿದ ಅತ್ಯಂತ ದುರುದ್ದೇಶದ Logical Discrepancy ಮಾನದಂಡಗಳನ್ನು ಕೂಡ ಸುಪ್ರೀಂ ಮಾನ್ಯ ಮಾಡಿದೆ.

ಈಗ 11 ಬಗೆಯ Logical Discrepancy ಅಗ್ನಿ ಪರೀಕ್ಷೆಗಳು

ಹೀಗಾಗಿ ಸುಪ್ರೀಂ ಆದೇಶದಿಂದ ಇನ್ನಷ್ಟು ಸರ್ವಧಿಕಾರಿಯಾಗಿರುವ ಆಯೋಗವು ಪ. ಬಂಗಾಳದಲ್ಲಿ ಕೇವಲ 4-5 ಬಗೆಯ Logical Discrepancy ಅನ್ವಯಿಸಿದ್ದರೆ ಈಗ ಮೂರನೇ ಹಂತದಲ್ಲಿ ಕರ್ನಾಟಕವನ್ನೂ ಒಳಗೊಂಡಂತೆ ಎಸ್‌ಐಆರ್ ನಡೆಯುತ್ತಿರುವ 16 ರಾಜ್ಯಗಳಲ್ಲಿ 11 ಬಗೆಯ Logical Discrepancy ಮಾನದಂಡಗಳನ್ನು ಅನ್ವಯಿಸಿ ಹೆಚ್ಚೆಚ್ಚು ಜನರನ್ನು ಹೊರದಬ್ಬಲಿದೆ. ಅವುಗಳೆಂದರೆ:

1.ಒಂದೇ ತಂದೆ-ತಾಯಿಯ ಹೆಸರನ್ನು ಆರಕ್ಕಿಂತ ಹೆಚ್ಚು ಮಕ್ಕಳು ಸೂಚಿಸುವುದು. 2. ತಂದೆ-ತಾಯಿಗೂ ಮಕ್ಕಳಿಗೂ ನಡುವಿನ ವಯಸ್ಸಿನ ಅಂತರ 15ಕ್ಕಿಂತ ಕಡಿಮೆ ಇರುವುದು. 3. ತಂದೆ-ತಾಯಿಗೂ ಮಕ್ಕಳಿಗೂ ನಡುವಿನ ವಯಸ್ಸಿನ ಅಂತರ 50ಕ್ಕಿಂತ ಜಾಸ್ತಿ ಇರುವುದು. 4. ಒಂದೇ ತಂದೆ-ತಾಯಿಯ ನಡುವಿನ ಮಕ್ಕಳ ನಡುವೆ 9 ತಿಂಗಳ ಅಂತರ ಇಲ್ಲದಿರುವುದು. 5. 2002ರ ಎಸ್‌ಐಆರ್ ಮತ್ತು ಈಗಿನ 2026ರ ಎಸ್‌ಐಆರ್‌ಗಳಲ್ಲಿ ತಂದೆ ತಾಯಿಯ ಹೆಸರು ಬೇರೆಬೇರೆ ಇರುವುದು. 6. ಈಗಿನ ಮತ್ತು 2002ರ ದಾಖಲೆಗಳಿಗೆ ತಕ್ಕಂತೆ ವಯಸ್ಸು ಕೂಡ ಏರಿಕೆ ಆಗಿರದಿರುವುದು. 7. ಆಧಾರ್ ಅನ್ನು ಮಾತ್ರ ದಾಖಲೆಯಾಗಿ ಕೊಟ್ಟಿರುವುದು. 8. ಅಜ್ಜ-ಅಜ್ಜಿಗೂ ಮೊಮ್ಮಕ್ಕಳಿಗೂ ನಡುವೆ ವಯಸ್ಸಿನ ಅಂತರ 40 ವಯಸ್ಸಿಗಿಂತ ಕಡಿಮೆ ಇರುವುದು. 9. ತಂದೆ ಹೆಸರು ಹೊಂದಾಣಿಕೆಯಾಗದಿರುವುದು. 10. ಹೆಸರಿನಲ್ಲಿ ಸ್ಪೆಲ್ಲಿಂಗ್ ತಪ್ಪು ಇರುವುದು. 11. 2002ರ ಮತಪಟ್ಟಿಯಲ್ಲಿ ತಂದೆಯನ್ನು ಹತ್ತಿರದ ಸಂಬಂಧಿಯೆಂದು ತೋರಿಸಿ 2025ರಲ್ಲಿ ಹತ್ತಿರದ ಸಂಬಂಧಿ ಗಂಡನೆಂದು ತೋರಿಸುವುದು.

ಹೀಗೆ ಚುನಾವಣಾ ಆಯೋಗ ಮತ್ತು ಮೋದಿ ಸರಕಾರಗಳು ಎಸ್‌ಐಆರ್ ನ ಹಿಂದಿನ ಹಂತದ ಅನುಭವವನ್ನು ಗಮನಿಸಿ ಪ್ರತೀ ಹೊಸ ಹಂತದಲ್ಲಿ ಹೆಚ್ಚೆಚ್ಚು ಜನರನ್ನು ಹೊರದಬ್ಬಲೆಂದೇ ಹೊಸ ಹೊಸ ರೀತಿಯ ಪ್ರಕ್ರಿಯೆಗಳನ್ನು ಸೇರಿಸುತ್ತಿದೆ. ಸುಪ್ರೀಂ ಕೂಡ ಹಾಗೆ ಮಾಡುವ ಆಯೋಗದ ಪ್ರಜಾತಂತ್ರ ವಿರೋಧಿ ಸರ್ವಾಧಿಕಾರವನ್ನು ಎತ್ತಿ ಹಿಡಿದಿದೆ. ಇದು ವಾಸ್ತವ ಪರಿಸ್ಥಿತಿ.

ಆದ್ದರಿಂದ ಅದು ಗ್ರಾಮಸಭೆಯ ಪ್ರಮಾಣವನ್ನಾಗಲೀ, ತಾನು ಕೇಳಿರುವ ದಾಖಲೆಗಳನ್ನು ಬಿಟ್ಟು ಜನರ ಬಳಿ ಇರುವ ದಾಖಲೆಗಳನ್ನು ಆಧರಿಸಿ ನೀಡುವ ಸ್ಮಾರ್ಟ್ ಕಾರ್ಡನ್ನಾಗಲೀ, ಕೇವಲ ವಾಸಸ್ಥಳ ಪ್ರಮಾಣ ಪತ್ರವನ್ನಾಗಲೀ ಎಸ್‌ಐಆರ್ ಅರ್ಹತಾ ದಾಖಲೆಯೆಂದು ಒಪ್ಪುವುದಿಲ್ಲ.

ಹಾಗೆ ಅದು ಒಪ್ಪದಿರುವ ಅಧಿಕಾರವನ್ನೂ ಕೂಡ ಸುಪ್ರೀಂ ಎತ್ತಿ ಹಿಡಿದಿದೆ.

ಏಕೆಂದರೆ ಎಸ್‌ಐಆರ್‌ನಡಿ ಮೋದಿ ಸರಕಾರ ನಡೆಸುತ್ತಿರುವುದು ಮತ್ತು ಸುಪ್ರೀಂ ಮಾನ್ಯತೆ ನೀಡಿರುವುದು ಮತಪಟ್ಟಿ ಪರಿಷ್ಕರಣೆಯಲ್ಲ. ಪೌರತ್ವ ನಿರಾಕರಣೆ. ಅದು ಮುಂದಿಟ್ಟುರುವ ಪ್ರಕ್ರಿಯೆ, ಸಮಯಾವಧಿ, 11 ಅರ್ಹತಾ ದಾಖಲೆಗಳ ಹಿಂದಿರುವ ದುಷ್ಟ ತರ್ಕವೂ ಸಹ ಪೌರತ್ವ ನಿರಾಕರಣೆಯೇ ಆಗಿದೆ.

ಎರಡನೇ ಸ್ವಾತಂತ್ರ್ಯ ಹೋರಾಟವೊಂದೇ ದಾರಿ

ಆದ್ದರಿಂದ ಎಸ್‌ಐಆರ್ ಸಂಪೂರ್ಣ ರದ್ದಾಗದೆ ಭಾರತದ ದಾಖಲೆಗಳಿರದ 10-15 ಕೋಟಿ ಭಾರತೀಯ ಬಡ-ದಮನಿತ ಮತದಾರರ ಬದುಕುವ ಹಕ್ಕು ರಕ್ಷಿಸಲು ಸಾಧ್ಯವಿಲ್ಲ. ಜನರನ್ನು ಮತ್ತು ತನ್ನನ್ನು ರಕ್ಷಿಸಿಕೊಳ್ಳಬೇಕೆಂದರೂ ವಿರೋಧ ಪಕ್ಷಗಳು ಬಾಯಿ ಮಾತಿನಲ್ಲಿ ಅಲ್ಲದೆ ನಿಜಕ್ಕೂ ಎರಡನೇ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಬೇಕು. ಅಧಿಕಾರದ ಆಸೆ ತೊರೆದು ಚುನಾವಣಾ ಆಯೋಗ ಮತ್ತು ಮೋದಿ ಸರಕಾರದ ವಿರುದ್ಧ ಅಧಿಕೃತ ಅಸಹಕಾರ ಚಳವಳಿ ಪ್ರಾರಂಭಿಸಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಬೇಕು. ಅಸಾಧಾರಣ ಸಂದರ್ಭಗಳಲ್ಲಿ ಅಸಾಧಾರಣ ಕ್ರಮಗಳಿಗೆ ಮುಂದಾಗಬೇಕು. ಆದರೆ ಅವಕಾಶವಾದಿ, ಅಧಿಕಾರದಾಹಿ, ಸಂಭಾವ್ಯ ಬಿಜೆಪಿಗಳೇ ಆಗಿರುವ ವಿರೋಧ ಪಕ್ಷಗಳಿಂದ ಅದನ್ನು ನಿರೀಕ್ಷಿಸುವುದು ದುರಾಸೆಯಾದೀತು.

ಅದ್ದರಿಂದ ಈಗ ಈ ದೇಶ ಉಳಿಸಿಕೊಳ್ಳಲು ಉಳಿದಿರುವುದು ‘ನಾವು ಈ ದೇಶದ ಜನ ಮಾತ್ರ’. ದೇಶವನ್ನು ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗುವಂತೆ ಮಾಡಲು ಜನಚಳವಳಿಗಳು ಮುಂದಾಗಬೇಕಿದೆ. ಅದನ್ನು ಬಿಟ್ಟು ಬೇರಿನ್ನಾವುದೇ ಅಡ್ಡದಾರಿಗಳು ಕೇವಲ ತಪ್ಪಲ್ಲ- ದೊಡ್ಡ ಪ್ರಮಾದವೇ ಆದೀತು!

Tags

anti-SIRagitationKarnatakaDissent
share
ಶಿವಸುಂದರ್
ಶಿವಸುಂದರ್
Next Story
X