Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಚುನಾವಣಾ ಫಲಿತಾಂಶ: ಫ್ಯಾಶಿಸ್ಟರ...

ಚುನಾವಣಾ ಫಲಿತಾಂಶ: ಫ್ಯಾಶಿಸ್ಟರ ಗೆಲುವಿಗೆ ಎಸ್‌ಐಆರ್ ಜೊತೆಗೆ ಇನ್ನೂ ಕೆಲವು ಕಾರಣಗಳಿವೆ!

ಶಿವಸುಂದರ್ಶಿವಸುಂದರ್6 May 2026 12:10 PM IST
share
ಚುನಾವಣಾ ಫಲಿತಾಂಶ: ಫ್ಯಾಶಿಸ್ಟರ ಗೆಲುವಿಗೆ ಎಸ್‌ಐಆರ್ ಜೊತೆಗೆ ಇನ್ನೂ ಕೆಲವು ಕಾರಣಗಳಿವೆ!

ಬಂಗಾಳವನ್ನು ಗೆದ್ದುಕೊಳ್ಳಲು ಈ ಬಾರಿ ಬಿಜೆಪಿ ಎಲ್ಲಾ ನೀಚ ಹಾಗೂ ವಿಚ್ಛಿದ್ರಕಾರಿ ತಂತ್ರಗಳನ್ನು ಬಳಸಿತು. ಮೋದಿಯ ಕೇಂದ್ರ ಸರಕಾರ ಈ.ಡಿ., ಸಿಬಿಐ, ಚುನಾವಣಾ ಆಯೋಗ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡಿತು. ಅಂತಿಮ ಅಸ್ತ್ರವಾಗಿ ಎಸ್‌ಐಆರ್ ಅನ್ನು ಕೂಡ ಶತಾಯ ಗತಾಯ ಬಿಜೆಪಿಗೆ ಮಾತ್ರ ಅನುಕೂಲವಾಗುವಂತೆ ಸಂವಿಧಾನ ಬಾಹಿರವಾಗಿ ಏಕಪಕ್ಷೀಯವಾಗಿ ಜಾರಿ ಮಾಡಿತು. ಈ ಎಲ್ಲಾ ದುರ್ಬಳಕೆಗಳನ್ನು ಎಗ್ಗಿಲ್ಲದೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕೂಡ ಪರೋಕ್ಷವಾಗಿ ಸಹಾಯ ಮಾಡಿತು.

ಐದು ರಾಜ್ಯಗಳ ಶಾಸನಸಭಾ ಚುನಾವಣೆಗಳ ಫಲಿತಾಂಶ ಬಂದಿದೆ. ತಮಿಳುನಾಡು (ಡಿಎಂಕೆ), ಕೇರಳ (ಎಡಪಕ್ಷಗಳು) ಮತ್ತು ಪ. ಬಂಗಾಳಗಳಲ್ಲಿ (ಟಿಎಂಸಿ) ಆಡಳಿತ ನಡೆಸುತ್ತಿದ್ದ ವಿರೋಧ ಪಕ್ಷಗಳು ಹೀನಾಯವಾಗಿ ಸೋತಿದ್ದರೆ, ಪುದುಚೇರಿ ಮತ್ತು ಅಸ್ಸಾಂಗಳಲ್ಲಿ ಆಡಳಿತಾರೂಢ ಫ್ಯಾಶಿಸ್ಟ್ ಬಿಜೆಪಿ ಪಕ್ಷವನ್ನು ಜನರು ಪುನರಾಯ್ಕೆ ಮಾಡಿದ್ದಾರೆ. ಅಸ್ಸಾಮಿನಲ್ಲಾದರೆ ಉಗ್ರ ಹಿಂದುತ್ವವಾದಿ ಹಿಮಂತ ಬಿಸ್ವಾ ನೇತೃತ್ವದ ಬಿಜೆಪಿಯನ್ನು ಹೋದಬಾರಿಗಿಂತ ಶೇ. 10ರಷ್ಟು ಹೆಚ್ಚಿನ ಜನಮತದೊಂದಿಗೆ ಅಸ್ಸಾಮಿನ ಜನ ಆಯ್ಕೆ ಮಾಡಿದ್ದಾರೆ. ಫ್ಯಾಶಿಸ್ಟರಿಗೆ ಈವರೆಗೆ ದಕ್ಕದೆ ಹೋಗಿದ್ದ ಪ. ಬಂಗಾಳವನ್ನು ಮೋದಿಯ ಬಿಜೆಪಿ ಸಾಮ-ಭೇದ-ದಂಡೋಪಾಯಗಳ ಮೂಲಕ ಗೆದ್ದುಕೊಂಡಿದೆ. ಕೇವಲ ಚುನಾವಣಾತ್ಮಕವಾಗಿ ಮಾತ್ರವಲ್ಲ. ಫಲಿತಾಂಶಗಳ ವಿವರಗಳನ್ನು ನೋಡುತ್ತಿದ್ದರೆ ಪ. ಬಂಗಾಳ ಸಂಘಿ ಹಿಂದುತ್ವದ ರಾಜಕಾರಣಕ್ಕೆ ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿಯೂ ಬಲಿಯಾಗಿರುವಂತೆ ಕಾಣುತ್ತಿದೆ.

ಈ ಮೂಲಕ ಸಂಘಿ ಫ್ಯಾಶಿಸ್ಟರು ಪೂರ್ವ ಭಾರತದ ದಿಗ್ವಿಜಯವನ್ನೂ ಪೂರ್ಣಗೊಳಿಸಿದ್ದಾರೆ. 2024ರಲ್ಲಿ ತಮಗೆ ದಕ್ಕದ ಒಡಿಶಾವನ್ನು ಕೂಡ ದ್ವೇಷಪೂರಿತ ಹಿಂದುತ್ವ ಸಿದ್ಧಾಂತದ ಮೂಲಕ ಗೆದ್ದುಕೊಂಡಿದ್ದರು. ಇನ್ನು ದಕ್ಷಿಣ ಮಾತ್ರ ಸಂಘಿಗಳಿಗೆ ಪೂರ್ತಿಯಾಗಿ ದಕ್ಕಿಲ್ಲ. ಆದರೆ ಕೇರಳ ಮತ್ತು ತಮಿಳುನಾಡುಗಳಲ್ಲಿ ಅಧಿಕಾರರೂಢ ಪಕ್ಷಗಳ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಮತ್ತು ಸ್ವಾರ್ಥ ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಹುಟ್ಟಿಸಿರುವ ಅಸಮಾಧಾನದ ಲಾಭವನ್ನು ಬಿಜೆಪಿ ಆ ರಾಜ್ಯಗಳಲ್ಲೂ ನಿಧಾನವಾಗಿ ಪಡೆಯುತ್ತಿದೆ. ಅದರ ವೋಟ್ ಶೇರುಗಳು ನಿಧಾನವಾಗಿ ಹೆಚ್ಚುತ್ತಿದ್ದರೆ ಈ ಬಾರಿ ಬಿಜೆಪಿ ಮೊತ್ತ ಮೊದಲ ಬಾರಿಗೆ ಕೇರಳ ಅಸೆಂಬ್ಲಿಯಲ್ಲಿ ಮೂರು ಸೀಟುಗಳನ್ನು ಪಡೆದುಕೊಂಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ. ಬಂಗಾಳವನ್ನು ಗೆದ್ದುಕೊಳ್ಳಲು ಈ ಬಾರಿ ಬಿಜೆಪಿ ಎಲ್ಲಾ ನೀಚ ಹಾಗೂ ವಿಚ್ಛಿದ್ರಕಾರಿ ತಂತ್ರಗಳನ್ನು ಬಳಸಿತು. ಮೋದಿಯ ಕೇಂದ್ರ ಸರಕಾರ ಈ.ಡಿ., ಸಿಬಿಐ, ಚುನಾವಣಾ ಆಯೋಗ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡಿತು. ಅಂತಿಮ ಅಸ್ತ್ರವಾಗಿ ಎಸ್‌ಐಆರ್ ಅನ್ನು ಕೂಡ ಶತಾಯ ಗತಾಯ ಬಿಜೆಪಿಗೆ ಮಾತ್ರ ಅನುಕೂಲವಾಗುವಂತೆ ಸಂವಿಧಾನ ಬಾಹಿರವಾಗಿ ಏಕಪಕ್ಷೀಯವಾಗಿ ಜಾರಿ ಮಾಡಿತು. ಈ ಎಲ್ಲಾ ದುರ್ಬಳಕೆಗಳನ್ನು ಎಗ್ಗಿಲ್ಲದೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕೂಡ ಪರೋಕ್ಷವಾಗಿ ಸಹಾಯ ಮಾಡಿತು. ಚುನಾವಣೆಯ ಕೊನೆಯ ಹಂತದಲ್ಲಿ ಶಾಂತಿಯ ಹೆಸರಿನಲ್ಲಿ ನಿಯೋಜಿಸಲಾದ ಮಿಲಿಟರಿ ಪಡೆಗಳೂ ಸಹ ಆಡಳಿತಾರೂಢ ಟಿಎಂಸಿ ವಿರುದ್ಧ ಮಾತ್ರ ವಿಶೇಷ ಆಸಕ್ತಿಯಿಂದ ಕೆಲಸ ಮಾಡಿದವು.

ಒಟ್ಟಿನಲ್ಲಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಪ. ಬಂಗಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನಿಸಿ ಯಶಸ್ವಿಯಾಗಿದ್ದು ಪ್ರಾಯಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು. ಫ್ಯಾಶಿಸ್ಟ್ ಕಾಲದಲ್ಲಿ ಸಂಸದೀಯ ಪ್ರಜಾತಂತ್ರ ಎನ್ನುವುದು ಎಷ್ಟು ಬೋಗಸ್ ಆಗುತ್ತವೆ ಎಂಬ ಚಾರಿತ್ರಿಕ ಅನುಭವಗಳಿಗೆ ಈ ಚುನಾವಣೆ ಮತ್ತೊಂದು ಜೀವಂತ ಉದಾಹರಣೆಯನ್ನು ಸೇರಿಸಿದೆ.

ಭಾರತದಲ್ಲಿ 90ರ ದಶಕದಲ್ಲಿ ಕೋಮುವಾದಿ ಹಿಂದುತ್ವದ ಅಲೆಯು ಇಡೀ ಉತ್ತರ ಭಾರತವನ್ನು ವ್ಯಾಪಕವಾಗಿ ಆವರಿಸಿದ್ದರೂ ಪ. ಬಂಗಾಳವು ಅದಕ್ಕೆ ಬಲಿಯಾಗಿರಲಿಲ್ಲ. ಹಾಗೆ ನೋಡಿದರೆ ಹಿಂದೂವಾದಿ ರಾಷ್ಟ್ರೀಯವಾದಕ್ಕೆ ಜನ್ಮ ನೀಡಿದ್ದು ಬಂಗಾಳವೇ ಆದರೂ, ಮಧ್ಯಮವರ್ಗದ ಉದಾರವಾದಿ ರಾಷ್ಟ್ರೀಯತೆ ಅದನ್ನು ಬಲಗೊಳ್ಳಲು ಬಿಟ್ಟಿರಲಿಲ್ಲ. ಹಿಂದೂ ಮಹಾಸಭಾ ಅತ್ಯಂತ ಕ್ರಿಯಾಶೀಲಾವಾಗಿದ್ದದ್ದು ಮತ್ತು ಇಂದಿನ ಬಿಜೆಪಿಯ ಮೂಲ ಅವತಾರವಾದ ಭಾರತೀಯ ಜನಸಂಘದ ಮೊದಲ ಅಧ್ಯಕ್ಷ ಶಾಮ ಪ್ರಸಾದ ಮುಖರ್ಜಿಯ ತವರು ಪ. ಬಂಗಾಳವೇ ಆಗಿದ್ದರೂ, ದೇಶ ವಿಭಜನೆಯಿಂದ ಬಂಗಾಳ ಸಂತ್ರಸ್ತ ವಾಗಿ ಆರೆಸ್ಸೆಸ್ ಮಾದರಿ ಕೋಮುವಾದಿ ರಾಜಕಾರಣಕ್ಕೆ ಪ. ಬಂಗಾಲ ಪ್ರಶಸ್ತವಾಗಿದ್ದರೂ, ಹಿಂದುತ್ವ ರಾಜಕಾರಣಕ್ಕೆ ಬಂಗಾಳ ಬಲಿಯಾಗಿರಲಿಲ್ಲ. ಅದಕ್ಕೆ ಸ್ವಾತಂತ್ರ್ಯಾನಂತರದಲ್ಲಿ ಬಂಗಾಳದಲ್ಲಿ ಅಳವಾಗಿ ಬೇರುಬಿಟ್ಟ ಕಾಂಗ್ರೆಸ್ ರಾಜಕೀಯ ಮತ್ತು ಆನಂತರದಲ್ಲಿ ದೀರ್ಘ ಕಾಲ ಬಂಗಾಳವನ್ನು ಆವರಿಸಿದ ಬಡಜನರ ಕಮ್ಯುನಿಸ್ಟ್ ರಾಜಕಾರಣ ಒಂದು ಕಾರಣವಾದರೆ ಬಂಗಾಳದ ಹಿಂದೂವಾದ ತನ್ನದೇ ಶಾಕ್ತ ಪರಂಪರೆಯಲ್ಲಿ ಬೇರುಬಿಟ್ಟಿದ್ದು ಹಾಗೂ ಸಂಘಿಗಳ ರಾಮರಾಜಕಾರಣ ಬಂಗಾಳಕ್ಕೆ ಹೊರಗಿನದ್ದಾಗಿದ್ದು ಒಂದು ಕಾರಣವಾಗಿತ್ತು. ಹೀಗಾಗಿ ಬಂಗಾಳ ಹಿಂದುತ್ವ ರಾಜಕಾರಣಕ್ಕೆ ಒಂದು ಸವಾಲಾಗಿಯೇ ಉಳಿದಿತ್ತು. ಈ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಬಂಗಾಳವನ್ನು ಗೆದ್ದಿರುವುದು ಈ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ ಹಾಗೂ ಫ್ಯಾಶಿಸ್ಟ್ ವಿರೋಧಿ ಕಾರ್ಯಕರ್ತರು ಬಂಗಾಳದಲ್ಲಿ ಬಿಜೆಪಿಯ ಗೆಲುವನ್ನು ಕೇವಲ ಎಸ್‌ಐಆರ್ ಗೆ ಮಾತ್ರವೇ ಸೀಮಿತ ಮಾಡದೇ ವಿಶ್ಲೇಷಿಸುವ ಅಗತ್ಯವಿದೆ.

1967ರ ನಂತರ ಪ. ಬಂಗಾಳದಲ್ಲಿ ಸತತ 34 ವರ್ಷಗಳ ಕಾಲ ಎಡರಂಗದ ಆಳ್ವಿಕೆ ನಡೆಸಿತು. ಈ ಅವಧಿಯಲ್ಲಿ ಬೇರೆ ಏನೇ ಸಮಸ್ಯೆಗಳಿದ್ದರೂ ಹಿಂದುತ್ವ ತನ್ನ ನೆಲೆಯನ್ನು ಬಂಗಾಳದಲ್ಲಿ ವಿಸ್ತರಿಸಿಕೊಳ್ಳಲು ಆಗಿರಲಿಲ್ಲ. ಆದರೂ ಬಂಡವಾಳಶಾಹಿ ರಾಷ್ಟ್ರೀಯ ಚೌಕಟ್ಟಿನಲ್ಲಿ ಕೆಲಸ ಮಾಡುವ ರಾಜ್ಯಮಟ್ಟದ ಎಡಸರಕಾರಗಳು ಎದುರಿಸುವ ಎಲ್ಲಾ ಮಿತಿಗಳು ಮತ್ತು ಅಧಿಕಾರ ಬಂದ ನಂತರ ಅಧಿಕಾರಜನ್ಯ ಕಾಯಿಲೆಗಳು ಮತ್ತು ನಿರುದ್ಯೋಗ, ಬಡತನ ಇತ್ಯಾದಿಗಳು ಎಡಪಕ್ಷಗಳ ಬಗ್ಗೆ ಬಂಗಾಳದ ಜನರಲ್ಲಿ ಅಸಮಾಧಾನ ಮೂಡಿಸಿದವು. ಇದರ ಜೊತೆಗೆ ಎಡರಂಗ ಸರಕಾರ ಅನುಸರಿಸಿದ ನವ ಉದಾರವಾದಿ ಆರ್ಥಿಕ ನೀತಿಗಳೂ ಆ ಅಸಮಾಧಾನಗಳನ್ನು ಆಕ್ರೋಶವನ್ನಾಗಿ ಪರಿವರ್ತಿಸಿದವು. ಜನರು ಬೇರೆ ಪರ್ಯಾಯದ ಬಗ್ಗೆ ಅರಸುತ್ತಿದ್ದಾಗ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಕಟ್ಟಿದ ಮಮತಾ ಬ್ಯಾನರ್ಜಿ ಪರ್ಯಾಯದ ಆಸೆ ಹುಟ್ಟಿಸಿದರು. ಅಲ್ಲದೆ ಸಿಪಿಎಂನ ಅಧಿಕಾರಶಾಹಿ ವರ್ತನೆಯ ವಿರುದ್ಧ ಬೇಸತ್ತಿದ್ದ ಎಲ್ಲಾ ವಿರೋಧ ಪಕ್ಷಗಳು ಮತ್ತು ಸಂಘಟನೆಗಳು ಎಡದ ಏಕಾಧಿಪತ್ಯವನ್ನು ಮುರಿಯಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಟಿಎಂಸಿಯನ್ನು ಬೆಂಬಲಿಸಿದವು. 1977ರಲ್ಲಿ ಇಂದಿರಾ ವಿರೋಧಿ ಅಲೆಯ ಭಾಗವಾಗಿ ಸಮಾಜವಾದಿಗಳ ಜೊತೆ ಬಿಜೆಪಿಯು ಪ್ರಧಾನ ಲಾಭ ಮಾಡಿಕೊಂಡಂತೆ, ಎಡರಂಗ ಸರ್ವಾಧಿಕಾರ ವಿರೋಧಿ ಅಲೆಯ ಲಾಭದಲ್ಲಿ ಬಿಜೆಪಿಯು ಜನರಲ್ಲಿ ಬೇರುಬಿಡತೊಡಗಿತು. ಬಂಗಾಳದ ರಾಜಕಾರಣದಲ್ಲಿ ತಳಮಟ್ಟದ ಹಿಂಸಾಚಾರಗಳು ರಾಜಕೀಯ ಸಂಸ್ಕೃತಿಯ ಭಾಗವೇ ಆಗಿದ್ದು ಕೂಡ ಟಿಎಂಸಿಯನ್ನು ವಿರೋಧಿಗಳು ಬೆಳೆಸಲು ಕಾರಣವಾಗಿತ್ತು. ಆದರೆ ಟಿಎಂಸಿಗೆ ಫ್ಯಾಶಿಸ್ಟ್ ಬಿಜೆಪಿಯ ವಿರುದ್ಧ ಯಾವುದೇ ಸೈದ್ಧಾಂತಿಕ ತಕರಾರು ಇರಲಿಲ್ಲ. ಪ್ರಾರಂಭದಲ್ಲಿ ಟಿಎಂಸಿ ಎನ್‌ಡಿಎ ಭಾಗವೂ ಆಗಿತ್ತು.

ಹೀಗೆ ಟಿಎಂಸಿಯ ಮೇಲೆ ಸವಾರಿ ಮಾಡುತ್ತಾ ಬಂಗಾಳ ಪ್ರವೇಶಿಸಿದ ಬಿಜೆಪಿ, ಇತರ ಎಲ್ಲಾ ಪ್ರದೇಶಗಳಲ್ಲಿ ಮಾಡುವಂತೆ ಆರೆಸ್ಸೆಸ್ ಮತ್ತಿತರ ಸಹಕಾರ ಮತ್ತು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಯೋಜನೆಗಳ ಮೂಲಕ ಹಂತಹಂತವಾಗಿ ಬೆಳೆಯಲು ಪ್ರಾರಂಭಿಸಿತು. ಎಡಪಕ್ಷಗಳ ಪ್ರಭಾವ ಕುಸಿಯುತ್ತಿದ್ದ ಹೊತ್ತಿನಲ್ಲಿ ಬಿಜೆಪಿಯನ್ನು ಕೂಡ ಪರ್ಯಾಯದ ಸುಳ್ಳು ಭರವಸೆ ಒದಗಿಸಿತು. 2016ರ ಚುನಾವಣೆಯಲ್ಲಿ ಬಿಜೆಪಿ ಅಷ್ಟು ದೊಡ್ಡ ಪ್ರಭಾವ ಬೆಳೆಸಿಕೊಳ್ಳದಿದ್ದರೂ, 2014ರಲ್ಲಿ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಭಾರತದ ಪ್ರಭುತ್ವ ಹಿಂದುತ್ವದ ಸಾಧನವಾಗುತ್ತಿದ್ದಂತೆ ಬಂಗಾಳವನ್ನು ತನ್ನ ಗುರಿಯಾಗಿಸಿಕೊಂಡಿತು. 2021ರ ಚುನಾವಣೆಯ ವೇಳೆಗಾಗಲೇ ಬಿಜೆಪಿ ಎಸ್‌ಐಆರ್ ಇತ್ಯಾದಿಗಳೇನು ಇಲ್ಲದೆಯೇ ಶೇ. 38ರಷ್ಟು ವೋಟು ಶೇರು ಮತ್ತು 77 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು ಮತ್ತು ವಿರೋಧ ಪಕ್ಷಗಳಾಗಿದ್ದ ಸಿಪಿಎಂ, ಕಾಂಗ್ರೆಸ್‌ನ ಮತದಾರರನ್ನು ತನ್ನ ಕಡೆಗೆ ಸೆಳೆದುಕೊಂಡಿತ್ತು.

2021ರಲ್ಲೇ ಟಿಎಂಸಿ ಬಿಜೆಪಿಗೆ ಹಾದಿ ಮಾಡಿಕೊಟ್ಟಿತ್ತು!?

2021ರ ಚುನಾವಣೆಯ ನಂತರ ಇದೇ ಕಾಲಂನಲ್ಲಿ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಲಾಗಿತ್ತು:

‘’...ಪ. ಬಂಗಾಳದಲ್ಲಿ 2016ರ ಚುನಾವಣೆಯ ವೇಳೆಯಲ್ಲಿ ಕೇವಲ ಶೇ. 10ರಷ್ಟು ವೋಟುಗಳನ್ನು ಮತ್ತು ಮೂರು ಸೀಟುಗಳನ್ನು ಮಾತ್ರ ಹೊಂದಿದ್ದ ಬಿಜೆಪಿ ಈಗ ಶೇ. 38ರಷ್ಟು ವೋಟುಗಳನ್ನು ಮತ್ತು 77 ಸೀಟುಗಳನ್ನು ಪಡೆದುಕೊಂಡು ಏಕಮಾತ್ರ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. (ಪ. ಬಂಗಾಳದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಈ ಬಾರಿ ಎಡ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಒಬ್ಬರೂ ಪ. ಬಂಗಾಳದ ಅಸೆಂಬ್ಲಿಯಲ್ಲಿ ಇರುವುದಿಲ್ಲ). ಇದು 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಪಡೆದುಕೊಂಡಿದ್ದ ವೋಟುಗಳಿಗಿಂತ ಶೇ. 2ರಷ್ಟು ಮಾತ್ರ ಕಡಿಮೆ. ಸಾಮಾನ್ಯವಾಗಿ ಪ್ರಬಲ ಪ್ರಾದೇಶಿಕ ಪಕ್ಷಗಳೆದುರು, ಅದರಲ್ಲೂ ಅತ್ಯಂತ ಜನಪ್ರಿಯವಾಗಿರುವ ಮಮತಾ ಬ್ಯಾನರ್ಜಿಯ ಎದುರು ಒಂದು ಜನಮಾನ್ಯವಾದ ಬಂಗಾಳಿ ಮುಖವೂ ಇಲ್ಲದೆಯೂ, ಬಿಜೆಪಿ ಪ. ಬಂಗಾಳದಲ್ಲಿ ಶೇ. 38ರಷ್ಟು ವೋಟು ಶೇರುಗಳನ್ನು ಹೆಚ್ಚು ಕಡಿಮೆ ಸದೃಢೀಕರಿಸಿಕೊಂಡಿದೆ.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ಪ. ಬಂಗಾಳದಲ್ಲಿ ಶೇ. 30 ರಷ್ಟು ಅಂದರೆ ಹೆಚ್ಚೂ ಕಡಿಮೆ ಮೂರುಕೋಟಿ ಮುಸ್ಲಿಮ್ ಜನಸಂಖ್ಯೆ ಇದೆ. ಅವರೆಲ್ಲರೂ ಈ ಬಾರಿ ಪ್ರಪ್ರಥಮ ಬಾರಿಗೆ ಕಾಂಗ್ರೆಸ್, ಎಡಪಕ್ಷ ಹಾಗೂ ಹೊಸದಾಗಿ ಸ್ಪರ್ಧಿಸಿದ್ದ ಮುಸ್ಲಿಮ್ ಪಕ್ಷವೇ ಆಗಿದ್ದ ಐಎಸ್‌ಎಫ್ ಅನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿಗೆ ವೋಟು ಹಾಕಿದ್ದಾರೆ. ಅಂದರೆ ಮಮತಾ ಬ್ಯಾನರ್ಜಿಯವರು ಪಡೆದಿರುವ ಶೇ. 48ರಷ್ಟು ವೋಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮುಸ್ಲಿಮರ ವೋಟಾಗಿದೆ.

ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಪಡೆದುಕೊಂಡಿರುವ 77 ಸೀಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳು ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಕ್ಷೇತ್ರಗಳ ಸೀಟುಗಳಾಗಿವೆ. ಹೀಗಾಗಿ ಬಿಜೆಪಿಯ ಒಟ್ಟಾರೆ ವೋಟು ಶೇರು ಶೇ. 38 ಮಾತ್ರ ಆಗಿದ್ದರೂ, ಬಹುಸಂಖ್ಯಾತ ಹಿಂದೂಗಳ ವೋಟಿನಲ್ಲಿ ಅದರ ವೋಟು ಶೇರು ಹೆಚ್ಚಾಗಿಯೇ ಇದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ.ಬಂಗಾಳದಲ್ಲಿ ಅಧಿಕಾರರೂಢ ಪಕ್ಷಗಳು ಯಾವುದೇ ಇದ್ದರೂ- ಅದು ಸಿಪಿಎಂ ಆದರೂ ಸರಿ, ಟಿಎಂಸಿ ಆದರೂ ಸರಿ- ವಿರೋಧಿಗಳನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯುವ ರಾಜಕೀಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡಿವೆ. 2011ರಲ್ಲಿ ಸಿಪಿಎಂನ ಈ ಹಿಂಸಾತ್ಮಕ ರಾಜಕೀಯದ ವಿರುದ್ಧವೇ ಟಿಎಂಸಿಯನ್ನು ಬಂಗಾಳದ ಜನತೆ ಗೆಲ್ಲಿಸಿದರು. ಆದರೆ ಅಧಿಕಾರಕ್ಕೆ ಬಂದಮೇಲೆ ಟಿಎಂಸಿ ಅದೇ ಬಗೆಯ ಟೈರನಿಯನ್ನು ಸಿಪಿಎಂ ಆದಿಯಾಗಿ ಎಲ್ಲಾ ವಿರೋಧಿಗಳ ಮೇಲೆ ಪ್ರಯೋಗಿಸುತ್ತಾ ಬಂದಿತು. ಹೀಗಾಗಿ ಟಿಎಂಸಿಯ ಹಿಂಸೆಯಿಂದ ಬಚಾವಾಗಬೇಕೆಂದರೆ ನಿತ್ರಾಣವಾಗಿರುವ ಸಿಪಿಎಂ ಆಗಲೀ, ಕಾಂಗ್ರೆಸ್ ಆಗಲೀ ಆಯ್ಕೆಯಲ್ಲವೆಂದು ಪರಿಗಣಿಸಿದ ಹಲವಾರು ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ವೋಟು ಹಾಕಿದ್ದಾರೆ. ‘ಈ ಬಾರಿ ರಾಮ್. ಆ ನಂತರ ವಾಮ್’ ಎಂಬ ಜನಪ್ರಿಯ ಮಾತುಗಳು ಹಲವು ಕಡೆಯಿಂದ ಕೇಳಿಬರುತ್ತಿತ್ತೆಂದೂ ಪತ್ರಿಕೆಗಳು ವರದಿ ಮಾಡಿವೆ.

ಇದಲ್ಲದೆ ಈ ಫಲಿತಾಂಶವು ಬಿಜೆಪಿಯನ್ನೇ ಏಕೈಕ ವಿರೋಧ ಪಕ್ಷವನ್ನಾಗಿ ಮಾಡಿರುವುದರಿಂದ ಬರಲಿರುವ ದಿನಗಳಲ್ಲಿ ಟಿಎಂಸಿಯ ಪ್ರತಿಯೊಂದು ತಪ್ಪು ನಡೆಗಳು, ವೈಫಲ್ಯಗಳೂ ಬಿಜೆಪಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಹಾಗೂ ಟಿಎಂಸಿಯ ಪ್ರಧಾನ ಬೆಂಬಲ ನೆಲೆಯಾಗಿರುವ ಮುಸ್ಲಿಮರ ವಿರುದ್ಧ ಬಿಜೆಪಿ ತನ್ನ ಕೋಮುವಾದಿ ದ್ವೇಷದ ರಾಜಕಾರಣವನ್ನು ವಿಸ್ತೃತವಾಗಿ ನಡೆಸಲು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಮೋದಿಯ ಫ್ಯಾಶಿಸ್ಟ್ ರಥಕ್ಕೆ ಈ ಚುನಾವಣೆ ಒಡ್ಡಿರುವುದು ಕೇವಲ ಒಂದು ರೋಡ್ ಹಂಪೇ ಹೊರತು ತಡೆಗೋಡೆಯಲ್ಲ. ಏಕೆಂದರೆ ಫ್ಯಾಶಿಸ್ಟ್ ರಾಜಕಾರಣವನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಎದುರಿಸುವ ಸಿದ್ಧಾಂತವಾಗಲೀ, ರಾಜಕೀಯವಾಗಲೀ ಟಿಎಂಸಿಗಿಲ್ಲ.

ಇನ್ನು ಸತತ 30 ವರ್ಷ ಅಧಿಕಾರ ನಡೆಸಿದ ಕ್ಯಾಡರ್ ಮತ್ತು ಸಿದ್ಧಾಂತ ಆಧರಿತ ಪಕ್ಷವಾದ ಸಿಪಿಎಂ ಕೇವಲ ಹತ್ತು ವರ್ಷದಲ್ಲಿ ಶೇ. 5ರಷ್ಟು ಮತಗಳನ್ನೂ ಗಳಿಸದೆ ರಾಜಕೀಯ ಪ್ರಪಾತಕ್ಕೆ ಕುಸಿಯಲು ಕಾರಣವನ್ನು ಹೊರಗೆ ಹುಡುಕದೆ ತನ್ನೊಳಗೆ ಹುಡುಕುತ್ತಾ, ಆಳವಾದ ಆತ್ಮವಿಮರ್ಶೆ ಮಾಡಿಕೊಂಡು, ತಿದ್ದಿಕೊಂಡು ಮರಳುವ ಯಾವ ಭರವಸೆಯನ್ನೂ ಕಳೆದ ಹತ್ತು ವರ್ಷಗಳಲ್ಲಿ ಅದು ಒದಗಿಸಿಲ್ಲ. ಅದರ ಪರಿಣಾಮವೇ ಅದರ ಇಂದಿನ ಸ್ಥಿತಿ. ಇನ್ನೂ ಕಾಂಗ್ರೆಸ್ ಬಗ್ಗೆ ಏನೂ ಹೇಳದಿರುವುದೇ ಒಳಿತು..’’

ಎಸ್‌ಐಆರ್ ಏಕಮಾತ್ರ ಕಾರಣವಲ್ಲ!

ಆದ್ದರಿಂದ 2026ರ ಪ. ಬಂಗಾಳದಲ್ಲಿನ ಬಿಜೆಪಿ ಗೆಲುವನ್ನು ಇಡಿಯಾಗಿ ಎಸ್‌ಐಆರ್ ಮೇಲೆ ಹೊರಿಸಲು ಸಾಧ್ಯವಿಲ್ಲ. ಎಸ್‌ಐಆರ್‌ನಿಂದಾಗಿ ಒಂದು ವೇಳೆ ಟಿಎಂಸಿಯೇ ಗೆದ್ದಿದ್ದರೂ ಎಸ್‌ಐಆರ್ ರದ್ದಾಗಲೇ ಬೇಕು. ಏಕೆಂದರೆ ಅದು ಬಡ-ದಮನಿತ ಮತದಾರರನ್ನು ನಾಗರಿಕರೇ ಅಲ್ಲವೆಂದು ಹೊರಗಿಡುವ ಅಸಾಂವಿಧಾನಿಕ ಪ್ರಕ್ರಿಯೆ. ಅದರಲ್ಲೂ ಅದು ಪ. ಬಂಗಾಳದಲ್ಲಿ ಜಾರಿಯಾದ ರೀತಿ ಮತ್ತು ಬಂಗಾಳಕ್ಕೆ ಮಾತ್ರ ಸೀಮಿತವಾಗಿ ಪ್ರಯೋಗಿಸಿದ ಹೊಸ ಷರತ್ತುಗಳು ಎಲ್ಲವೂ ಎಸ್‌ಐಆರ್ ಅನ್ನು ಕೂಡ ಬಿಜೆಪಿ ಟಿಎಂಸಿಯನ್ನು ಸೋಲಿಸಲು ಒಂದು ಸಾಧನವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತ್ತು ಎಂಬುದನ್ನು ಸಂದೇಹಾತೀತವಾಗಿ ಸಾಬೀತು ಮಾಡುತ್ತದೆ.

ಆದರೆ ಈ ಬಾರಿ ಟಿಎಂಸಿ ಸೋಲಿಗೆ ಕೇವಲ ಎಸ್‌ಐಆರ್ ಕಾರಣವೇ?

ಫಲಿತಾಂಶಗಳ ವಿವರವು ಮೇಲ್ನೋಟಕ್ಕೆ ಹೇಗೆ ಎಸ್‌ಐಆರ್ ಘಾತುಕವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಉದಾಹರಣೆಗೆ ಈ ಬಾರಿ ಟಿಎಂಸಿ 2.6 ಕೋಟಿ ವೋಟುಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ 2.92 ಕೋಟಿ ವೋಟುಗಳನ್ನು ಪಡೆದುಕೊಂಡಿದೆ. ಅಂದರೆ ಅಂತರ ಕೇವಲ 30 ಲಕ್ಷ ಮಾತ್ರ. ಆದರೆ ಎಸ್‌ಐಆರ್‌ನಿಂದ ಒಟ್ಟು 93 ಲಕ್ಷ ಮತದಾರರು ಹೊರಗಿಡಲ್ಪಟ್ಟಿದ್ದರೆ ಕೊನೆಯ ಹಂತದಲ್ಲಿ ಟ್ರಿಬ್ಯುನಲ್‌ಗಳು ವಿಚಾರಣೆಯನ್ನು ಮಾಡದೆ ಹೊರಗಿಟ್ಟವರ ಸಂಖ್ಯೆ 27 ಲಕ್ಷ. ಅದರಲ್ಲಿ ಶೇ. 80-90ರಷ್ಟು ಮುಸ್ಲಿಮರು. ಪ. ಬಂಗಾಳದಲ್ಲಿ ಮುಸ್ಲಿಮರು ಸಂಭವನೀಯ ಟಿಎಂಸಿ ಮತದಾರರಾಗಿದ್ದಾರೆ. ಅಂದರೆ ಮತದಾನದಿಂದ ಹೊರಗಿಟ್ಟವರ ಸಂಖ್ಯೆ ಹಾಗೂ ಬಿಜೆಪಿ ಮತ್ತು ಟಿಎಂಸಿ ನಡುವಿನ ಗೆಲುವಿನ ಅಂತರ ಎರಡು ಹೆಚ್ಚೂ ಕಡಿಮೆ ಒಂದೇ! ಹೀಗಾಗಿ ಎಸ್‌ಐಆರ್ ಉದ್ದೇಶವೇ ಟಿಎಂಸಿಯನ್ನು ಸೋಲಿಸುವುದು. ಹೀಗಾಗಿ ಅದು ಟಿಎಂಸಿಯನ್ನು ಸೋಲಿಸಿದ್ದರೂ, ಸೋಲಿಸದಿದ್ದರೂ ಅದರ ಉದ್ದೇಶ ಮತ್ತು ಅದು ಕಾರ್ಯಗತವಾದ ಮಾದರಿಯ ಕಾರಣಕ್ಕೇ ಎಸ್‌ಐಆರ್ ಎಲ್ಲೂ ಜಾರಿಯಾಗಬಾರದು.

ಆದರೆ ಫಲಿತಾಂಶದ ವಿವರಗಳನ್ನು ನೋಡಿದರೆ ಟಿಎಂಸಿ ಸೋಲಿನಲ್ಲಿ ಎಸ್‌ಐಆರ್ ಪಾತ್ರದ ಜೊತೆಗೆ ಇತರ ಅಂಶಗಳೂ ಎದ್ದು ಕಾಣುತ್ತವೆ. ಉದಾಹರಣೆಗೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯು ಚುನಾವಣೆಗೆ ಮುನ್ನ ಹೇಗೆ ಬಂಗಾಳದ 44 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕೆ ಹೋಲಿಸಿದಲ್ಲಿ ಎಸ್‌ಐಆರ್ ಮೂಲಕ ಡಿಲೀಟ್ ಆದವರ ಪ್ರಮಾಣ ಹೆಚ್ಚೆಂಬ ವಿವರಗಳನ್ನು ನೀಡಿತ್ತು.

(https://indianexpress.com/article/political-pulse/west-bengal-elections-2026-voter-list-deletion-sir-tmc-bjp-margins-10629439/)

ಬಾಲಿ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ 6,231 ಮತಗಳಿಂದ ಗೆದ್ದಿತ್ತು. ಆದರೆ ಈಗ ಎಸ್‌ಐಆರ್ ಕಾರಣದಿಂದ ಆ ಕ್ಷೇತ್ರದಲ್ಲಿ 11,386 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಆ ಟಿಎಂಸಿ ಕ್ಷೇತ್ರದಲ್ಲಿ ಈಗ ಬಿಜೆಪಿ ಕೇವಲ 11,997 ವೋಟುಗಳಿಂದ ಗೆದ್ದಿದೆ.

ಹೌರಾ ಉತ್ತರ ಕ್ಷೇತ್ರವನ್ನು ಟಿಎಂಸಿ 5,472 ಮತಗಳಿಂದ ಗೆದ್ದಿತ್ತು. ಆದರೆ ಎಸ್‌ಐಆರ್‌ನಿಂದ ಆ ಕ್ಷೇತ್ರದಲ್ಲಿ 11,179 ಮತಗಳು ಡಿಲೀಟ್ ಆದವು. ಈಗ ಆ ಟಿಎಂಸಿ ಕ್ಷೇತ್ರದಲ್ಲಿ ಬಿಜೆಪಿ 11,250 ಮತಗಳಿಂದ ಗೆದ್ದಿದೆ.

ಕೇತುಗ್ರಾಮ್ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ 12,467 ಮತಗಳಿಂದ ಗೆದ್ದಿತ್ತು. ಆದರೆ ಈಗ ಎಸ್‌ಐಆರ್ ಕಾರಣದಿಂದ ಆ ಕ್ಷೇತ್ರದಲ್ಲಿ 26,780 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಆ ಟಿಎಂಸಿ ಕ್ಷೇತ್ರದಲ್ಲಿ ಈಗ ಬಿಜೆಪಿ ಕೇವಲ 27,610 ವೋಟುಗಳಿಂದ ಗೆದ್ದಿದೆ.

ಪಾಂಡವೇಶ್ವರ್ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ 3,350 ಮತಗಳಿಂದ ಗೆದ್ದಿತ್ತು. ಆದರೆ ಈಗ ಎಸ್‌ಐಆರ್ ಕಾರಣದಿಂದ ಆ ಕ್ಷೇತ್ರದಲ್ಲಿ 5,898 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಆ ಟಿಎಂಸಿ ಕ್ಷೇತ್ರದಲ್ಲಿ ಈಗ ಬಿಜೆಪಿ ಕೇವಲ 1,398 ವೋಟುಗಳಿಂದ ಗೆದ್ದಿದೆ.

ಹೀಗೆ ಕನಿಷ್ಠ ಟಿಎಂಸಿ ಗೆದ್ದಿದ್ದ ಹತ್ತು ಕ್ಷೇತ್ರಗಳಲ್ಲಿ ಎಸ್‌ಐಆರ್ ವೋಟರ್ ಡಿಲೀಶನ್‌ನಿಂದ ಬಿಜೆಪಿ ಗೆದ್ದಿದೆ. ಆದರೆ ವೋಟರ್ ಡಿಲೀಶನ್‌ನಿಂದ ಯಾವ ಬಿಜೆಪಿ ಕ್ಷೇತ್ರಗಳಲ್ಲೂ ಟಿಎಂಸಿ ಗೆದ್ದಿಲ್ಲ!

ಹೀಗಾಗಿ ಎಸ್‌ಐಆರ್‌ನಿಂದ ಟಿಎಂಸಿ ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂಬುದರಲ್ಲಿ ಯಾವ ವಿವಾದವೂ ಇಲ್ಲ. ಆದರೆ ಒಟ್ಟಾರೆ ಟಿಎಂಸಿ ಸೋಲಿಗೆ ಎಸ್‌ಐಆರ್ ಒಂದೇ ಕಾರಣವೆಂಬುದೂ ವಾಸ್ತವವಲ್ಲ. ಏಕೆಂದರೆ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ಮತ್ತೊಂದು ಅಧ್ಯಯನವು ಹೇಳುವಂತೆ ಅತಿ ಹೆಚ್ಚು ಡಿಲೀಶನ್ ಆಗಿದ್ದ 20 ಕ್ಷೇತ್ರಗಳಲ್ಲಿ ಟಿಎಂಸಿ 13ನ್ನು ಗೆದ್ದುಕೊಂಡಿದೆ.

(https://indianexpress.com/article/political-pulse/bengal-sir-tmc-won-13-of-20-seats-with-highest-voter-deletions -10672965/)

ಹೀಗಾಗಿ ಟಿಎಂಸಿ ಸೋಲಿಗೆ ಎಸ್‌ಐಆರ್ ಕಾರಣ. ಆದರೆ ಎಸ್‌ಐಆರ್ ಒಂದೇ ಕಾರಣವಲ್ಲ. ಇನ್ನು ಹಲವಾರು ಮೂಲಭೂತ ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು:

1. ಬಹುಪಾಲು ಹಿಂದೂ ವೋಟುಗಳು ಬಿಜೆಪಿ ಪಾಲಾಗಿದೆ, ಆದರೆ ಎಲ್ಲಾ ಮುಸ್ಲಿಮ್ ವೋಟುಗಳು ಟಿಎಂಸಿಗೆ ದಕ್ಕಲಿಲ್ಲ.

2. ಬಿಜೆಪಿಯ ಮತ್ತು ಸಂಘೀ ಫ್ಯಾಶಿಸಂನ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಟಿಎಂಸಿಯನ್ನು ಒಳಗೊಂಡಂತೆ ಯಾವುದೇ ವಿರೋಧ ಪಕ್ಷಗಳ ಬಳಿ ಪರ್ಯಾಯವಾಗಲೀ, ಕಟುವಾದ ವಿರೋಧವಾಗಲೀ ಇರದಿರುವುದು.

3. ಹಿಂದೂ ರಾಷ್ಟ್ರ ನರೇಟಿವ್ ಮತ್ತು ಯೋಜನೆಗಳಿಗೆ ಪರ್ಯಾಯವಾದ ಪ್ರಜಾತಾಂತ್ರಿಕ ರಾಷ್ಟ್ರ ನಿರ್ಮಾಣದ ಆಶಯವಾಗಲೀ, ಯೋಜನೆಯಾಗಲೀ ಇರದಿರುವುದು. ಮೃದು ಹಿಂದುತ್ವವೇ ರಾಜಕೀಯವಾಗಿರುವುದು.

4. ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಗಿಂತ ಭಿನ್ನ ಅಥವಾ ಜನಪರ ಎನಿಸಬಹುದಾದ ಯಾವುದೇ ದೀರ್ಘಕಾಲೀನ ಯೋಜನೆ ಅಥವಾ ಕಾರ್ಯಕ್ರಮ ಗಳಿಲ್ಲದಿರುವುದು. ಮೂಲಭೂತವಾಗಿ ಭಾರತೀಯ ಫ್ಯಾಶಿಸ್ಟರಂತೆ ವಿರೋಧ ಪಕ್ಷಗಳೂ ಸಹ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯಾಗಿಯೇ ಇರುವುದು.

5. ಅಧಿಕಾರದಲ್ಲಿದ್ದಾಗ ಪರಮ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಸ್ವಾರ್ಥ, ಸ್ವಜನ ಪಕ್ಷಪಾತ, ದಮನ-ದಬ್ಬಾಳಿಕೆಗಳಲ್ಲಿ ತೊಡಗಿಕೊಳ್ಳುವುದು. ಬಿಜೆಪಿಯೂ ಅಧಿಕಾರದಲ್ಲಿ ಇರುವ ಎಲ್ಲಾ ಕಡೆಗಳಲ್ಲೂ ಅದನ್ನು ಮಾಡುತ್ತದೆ. ಆದರೆ ಅವೆಲ್ಲವನ್ನು ಹುಸಿ ಶತ್ರುಗಳನ್ನು ತೋರಿಸುತ್ತಾ ಹಿಂದುತ್ವದ ಅಮಲನ್ನು ತೋರಿಸಿ ಮರೆಸಿ ಬಿಡುತ್ತದೆ.

5. ಎಲ್ಲಕ್ಕಿಂತ ಮುಖ್ಯವಾಗಿ ಫ್ಯಾಶಿಸ್ಟ್ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಪ್ರಜಾತಂತ್ರವೇ ಪ್ರಜಾತಾಂತ್ರಿಕ ಸಾಧ್ಯತೆಗಳನ್ನೆಲ್ಲಾ ಕಳೆದುಕೊಂಡಿದೆ. ಹೀಗಾಗಿ ಪರ್ಯಾಯ ಪ್ರಜಾತಾಂತ್ರಿಕ ಮಾರ್ಗವೆಂದರೆ ತಳವರ್ಗದ ಮತ್ತು ದಮನಿತ ಜನರೆಲ್ಲರನ್ನೂ ಒಳಗೊಂಡ ಫ್ಯಾಶಿಸ್ಟ್ ವಿರೋಧಿ ಜನಚಳವಳಿ ಕಟ್ಟುವು ದೊಂದೇ ಮಾರ್ಗ. ಅದು ಮುಂದಿನ ಚುನಾವಣೆಗಲ್ಲವಾದರೂ ಮೂವತ್ತು ವರ್ಷಗಳ ನಂತರ ಫಲ ನೀಡಬಲ್ಲದು. ಐ

ದು ರಾಜ್ಯಗಳ ಶಾಸನಸಭಾ ಚುನಾವಣೆಗಳ ಫಲಿತಾಂಶ ಬಂದಿದೆ. ತಮಿಳುನಾಡು (ಡಿಎಂಕೆ), ಕೇರಳ (ಎಡಪಕ್ಷಗಳು) ಮತ್ತು ಪ. ಬಂಗಾಳಗಳಲ್ಲಿ (ಟಿಎಂಸಿ) ಆಡಳಿತ ನಡೆಸುತ್ತಿದ್ದ ವಿರೋಧ ಪಕ್ಷಗಳು ಹೀನಾಯವಾಗಿ ಸೋತಿದ್ದರೆ, ಪುದುಚೇರಿ ಮತ್ತು ಅಸ್ಸಾಂಗಳಲ್ಲಿ ಆಡಳಿತಾರೂಢ ಫ್ಯಾಶಿಸ್ಟ್ ಬಿಜೆಪಿ ಪಕ್ಷವನ್ನು ಜನರು ಪುನರಾಯ್ಕೆ ಮಾಡಿದ್ದಾರೆ. ಅಸ್ಸಾಮಿನಲ್ಲಾದರೆ ಉಗ್ರ ಹಿಂದುತ್ವವಾದಿ ಹಿಮಂತ ಬಿಸ್ವಾ ನೇತೃತ್ವದ ಬಿಜೆಪಿಯನ್ನು ಹೋದಬಾರಿಗಿಂತ ಶೇ. 10ರಷ್ಟು ಹೆಚ್ಚಿನ ಜನಮತದೊಂದಿಗೆ ಅಸ್ಸಾಮಿನ ಜನ ಆಯ್ಕೆ ಮಾಡಿದ್ದಾರೆ. ಫ್ಯಾಶಿಸ್ಟರಿಗೆ ಈವರೆಗೆ ದಕ್ಕದೆ ಹೋಗಿದ್ದ ಪ. ಬಂಗಾಳವನ್ನು ಮೋದಿಯ ಬಿಜೆಪಿ ಸಾಮ-ಭೇದ-ದಂಡೋಪಾಯಗಳ ಮೂಲಕ ಗೆದ್ದುಕೊಂಡಿದೆ. ಕೇವಲ ಚುನಾವಣಾತ್ಮಕವಾಗಿ ಮಾತ್ರವಲ್ಲ. ಫಲಿತಾಂಶಗಳ ವಿವರಗಳನ್ನು ನೋಡುತ್ತಿದ್ದರೆ ಪ. ಬಂಗಾಳ ಸಂಘಿ ಹಿಂದುತ್ವದ ರಾಜಕಾರಣಕ್ಕೆ ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿಯೂ ಬಲಿಯಾಗಿರುವಂತೆ ಕಾಣುತ್ತಿದೆ.

ಈ ಮೂಲಕ ಸಂಘಿ ಫ್ಯಾಶಿಸ್ಟರು ಪೂರ್ವ ಭಾರತದ ದಿಗ್ವಿಜಯವನ್ನೂ ಪೂರ್ಣಗೊಳಿಸಿದ್ದಾರೆ. 2024ರಲ್ಲಿ ತಮಗೆ ದಕ್ಕದ ಒಡಿಶಾವನ್ನು ಕೂಡ ದ್ವೇಷಪೂರಿತ ಹಿಂದುತ್ವ ಸಿದ್ಧಾಂತದ ಮೂಲಕ ಗೆದ್ದುಕೊಂಡಿದ್ದರು. ಇನ್ನು ದಕ್ಷಿಣ ಮಾತ್ರ ಸಂಘಿಗಳಿಗೆ ಪೂರ್ತಿಯಾಗಿ ದಕ್ಕಿಲ್ಲ. ಆದರೆ ಕೇರಳ ಮತ್ತು ತಮಿಳುನಾಡುಗಳಲ್ಲಿ ಅಧಿಕಾರರೂಢ ಪಕ್ಷಗಳ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಮತ್ತು ಸ್ವಾರ್ಥ ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಹುಟ್ಟಿಸಿರುವ ಅಸಮಾಧಾನದ ಲಾಭವನ್ನು ಬಿಜೆಪಿ ಆ ರಾಜ್ಯಗಳಲ್ಲೂ ನಿಧಾನವಾಗಿ ಪಡೆಯುತ್ತಿದೆ. ಅದರ ವೋಟ್ ಶೇರುಗಳು ನಿಧಾನವಾಗಿ ಹೆಚ್ಚುತ್ತಿದ್ದರೆ ಈ ಬಾರಿ ಬಿಜೆಪಿ ಮೊತ್ತ ಮೊದಲ ಬಾರಿಗೆ ಕೇರಳ ಅಸೆಂಬ್ಲಿಯಲ್ಲಿ ಮೂರು ಸೀಟುಗಳನ್ನು ಪಡೆದುಕೊಂಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ. ಬಂಗಾಳವನ್ನು ಗೆದ್ದುಕೊಳ್ಳಲು ಈ ಬಾರಿ ಬಿಜೆಪಿ ಎಲ್ಲಾ ನೀಚ ಹಾಗೂ ವಿಚ್ಛಿದ್ರಕಾರಿ ತಂತ್ರಗಳನ್ನು ಬಳಸಿತು. ಮೋದಿಯ ಕೇಂದ್ರ ಸರಕಾರ ಈ.ಡಿ., ಸಿಬಿಐ, ಚುನಾವಣಾ ಆಯೋಗ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡಿತು. ಅಂತಿಮ ಅಸ್ತ್ರವಾಗಿ ಎಸ್‌ಐಆರ್ ಅನ್ನು ಕೂಡ ಶತಾಯ ಗತಾಯ ಬಿಜೆಪಿಗೆ ಮಾತ್ರ ಅನುಕೂಲವಾಗುವಂತೆ ಸಂವಿಧಾನ ಬಾಹಿರವಾಗಿ ಏಕಪಕ್ಷೀಯವಾಗಿ ಜಾರಿ ಮಾಡಿತು. ಈ ಎಲ್ಲಾ ದುರ್ಬಳಕೆಗಳನ್ನು ಎಗ್ಗಿಲ್ಲದೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕೂಡ ಪರೋಕ್ಷವಾಗಿ ಸಹಾಯ ಮಾಡಿತು. ಚುನಾವಣೆಯ ಕೊನೆಯ ಹಂತದಲ್ಲಿ ಶಾಂತಿಯ ಹೆಸರಿನಲ್ಲಿ ನಿಯೋಜಿಸಲಾದ ಮಿಲಿಟರಿ ಪಡೆಗಳೂ ಸಹ ಆಡಳಿತಾರೂಢ ಟಿಎಂಸಿ ವಿರುದ್ಧ ಮಾತ್ರ ವಿಶೇಷ ಆಸಕ್ತಿಯಿಂದ ಕೆಲಸ ಮಾಡಿದವು.

ಒಟ್ಟಿನಲ್ಲಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಪ. ಬಂಗಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶತಾಯ ಗತಾಯ ಪ್ರಯತ್ನಿಸಿ ಯಶಸ್ವಿಯಾಗಿದ್ದು ಪ್ರಾಯಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು. ಫ್ಯಾಶಿಸ್ಟ್ ಕಾಲದಲ್ಲಿ ಸಂಸದೀಯ ಪ್ರಜಾತಂತ್ರ ಎನ್ನುವುದು ಎಷ್ಟು ಬೋಗಸ್ ಆಗುತ್ತವೆ ಎಂಬ ಚಾರಿತ್ರಿಕ ಅನುಭವಗಳಿಗೆ ಈ ಚುನಾವಣೆ ಮತ್ತೊಂದು ಜೀವಂತ ಉದಾಹರಣೆಯನ್ನು ಸೇರಿಸಿದೆ.

ಭಾರತದಲ್ಲಿ 90ರ ದಶಕದಲ್ಲಿ ಕೋಮುವಾದಿ ಹಿಂದುತ್ವದ ಅಲೆಯು ಇಡೀ ಉತ್ತರ ಭಾರತವನ್ನು ವ್ಯಾಪಕವಾಗಿ ಆವರಿಸಿದ್ದರೂ ಪ. ಬಂಗಾಳವು ಅದಕ್ಕೆ ಬಲಿಯಾಗಿರಲಿಲ್ಲ. ಹಾಗೆ ನೋಡಿದರೆ ಹಿಂದೂವಾದಿ ರಾಷ್ಟ್ರೀಯವಾದಕ್ಕೆ ಜನ್ಮ ನೀಡಿದ್ದು ಬಂಗಾಳವೇ ಆದರೂ, ಮಧ್ಯಮವರ್ಗದ ಉದಾರವಾದಿ ರಾಷ್ಟ್ರೀಯತೆ ಅದನ್ನು ಬಲಗೊಳ್ಳಲು ಬಿಟ್ಟಿರಲಿಲ್ಲ. ಹಿಂದೂ ಮಹಾಸಭಾ ಅತ್ಯಂತ ಕ್ರಿಯಾಶೀಲಾವಾಗಿದ್ದದ್ದು ಮತ್ತು ಇಂದಿನ ಬಿಜೆಪಿಯ ಮೂಲ ಅವತಾರವಾದ ಭಾರತೀಯ ಜನಸಂಘದ ಮೊದಲ ಅಧ್ಯಕ್ಷ ಶಾಮ ಪ್ರಸಾದ ಮುಖರ್ಜಿಯ ತವರು ಪ. ಬಂಗಾಳವೇ ಆಗಿದ್ದರೂ, ದೇಶ ವಿಭಜನೆಯಿಂದ ಬಂಗಾಳ ಸಂತ್ರಸ್ತ ವಾಗಿ ಆರೆಸ್ಸೆಸ್ ಮಾದರಿ ಕೋಮುವಾದಿ ರಾಜಕಾರಣಕ್ಕೆ ಪ. ಬಂಗಾಲ ಪ್ರಶಸ್ತವಾಗಿದ್ದರೂ, ಹಿಂದುತ್ವ ರಾಜಕಾರಣಕ್ಕೆ ಬಂಗಾಳ ಬಲಿಯಾಗಿರಲಿಲ್ಲ. ಅದಕ್ಕೆ ಸ್ವಾತಂತ್ರ್ಯಾನಂತರದಲ್ಲಿ ಬಂಗಾಳದಲ್ಲಿ ಅಳವಾಗಿ ಬೇರುಬಿಟ್ಟ ಕಾಂಗ್ರೆಸ್ ರಾಜಕೀಯ ಮತ್ತು ಆನಂತರದಲ್ಲಿ ದೀರ್ಘ ಕಾಲ ಬಂಗಾಳವನ್ನು ಆವರಿಸಿದ ಬಡಜನರ ಕಮ್ಯುನಿಸ್ಟ್ ರಾಜಕಾರಣ ಒಂದು ಕಾರಣವಾದರೆ ಬಂಗಾಳದ ಹಿಂದೂವಾದ ತನ್ನದೇ ಶಾಕ್ತ ಪರಂಪರೆಯಲ್ಲಿ ಬೇರುಬಿಟ್ಟಿದ್ದು ಹಾಗೂ ಸಂಘಿಗಳ ರಾಮರಾಜಕಾರಣ ಬಂಗಾಳಕ್ಕೆ ಹೊರಗಿನದ್ದಾಗಿದ್ದು ಒಂದು ಕಾರಣವಾಗಿತ್ತು. ಹೀಗಾಗಿ ಬಂಗಾಳ ಹಿಂದುತ್ವ ರಾಜಕಾರಣಕ್ಕೆ ಒಂದು ಸವಾಲಾಗಿಯೇ ಉಳಿದಿತ್ತು. ಈ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಬಂಗಾಳವನ್ನು ಗೆದ್ದಿರುವುದು ಈ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ ಹಾಗೂ ಫ್ಯಾಶಿಸ್ಟ್ ವಿರೋಧಿ ಕಾರ್ಯಕರ್ತರು ಬಂಗಾಳದಲ್ಲಿ ಬಿಜೆಪಿಯ ಗೆಲುವನ್ನು ಕೇವಲ ಎಸ್‌ಐಆರ್ ಗೆ ಮಾತ್ರವೇ ಸೀಮಿತ ಮಾಡದೇ ವಿಶ್ಲೇಷಿಸುವ ಅಗತ್ಯವಿದೆ.

1967ರ ನಂತರ ಪ. ಬಂಗಾಳದಲ್ಲಿ ಸತತ 34 ವರ್ಷಗಳ ಕಾಲ ಎಡರಂಗದ ಆಳ್ವಿಕೆ ನಡೆಸಿತು. ಈ ಅವಧಿಯಲ್ಲಿ ಬೇರೆ ಏನೇ ಸಮಸ್ಯೆಗಳಿದ್ದರೂ ಹಿಂದುತ್ವ ತನ್ನ ನೆಲೆಯನ್ನು ಬಂಗಾಳದಲ್ಲಿ ವಿಸ್ತರಿಸಿಕೊಳ್ಳಲು ಆಗಿರಲಿಲ್ಲ. ಆದರೂ ಬಂಡವಾಳಶಾಹಿ ರಾಷ್ಟ್ರೀಯ ಚೌಕಟ್ಟಿನಲ್ಲಿ ಕೆಲಸ ಮಾಡುವ ರಾಜ್ಯಮಟ್ಟದ ಎಡಸರಕಾರಗಳು ಎದುರಿಸುವ ಎಲ್ಲಾ ಮಿತಿಗಳು ಮತ್ತು ಅಧಿಕಾರ ಬಂದ ನಂತರ ಅಧಿಕಾರಜನ್ಯ ಕಾಯಿಲೆಗಳು ಮತ್ತು ನಿರುದ್ಯೋಗ, ಬಡತನ ಇತ್ಯಾದಿಗಳು ಎಡಪಕ್ಷಗಳ ಬಗ್ಗೆ ಬಂಗಾಳದ ಜನರಲ್ಲಿ ಅಸಮಾಧಾನ ಮೂಡಿಸಿದವು. ಇದರ ಜೊತೆಗೆ ಎಡರಂಗ ಸರಕಾರ ಅನುಸರಿಸಿದ ನವ ಉದಾರವಾದಿ ಆರ್ಥಿಕ ನೀತಿಗಳೂ ಆ ಅಸಮಾಧಾನಗಳನ್ನು ಆಕ್ರೋಶವನ್ನಾಗಿ ಪರಿವರ್ತಿಸಿದವು. ಜನರು ಬೇರೆ ಪರ್ಯಾಯದ ಬಗ್ಗೆ ಅರಸುತ್ತಿದ್ದಾಗ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಕಟ್ಟಿದ ಮಮತಾ ಬ್ಯಾನರ್ಜಿ ಪರ್ಯಾಯದ ಆಸೆ ಹುಟ್ಟಿಸಿದರು. ಅಲ್ಲದೆ ಸಿಪಿಎಂನ ಅಧಿಕಾರಶಾಹಿ ವರ್ತನೆಯ ವಿರುದ್ಧ ಬೇಸತ್ತಿದ್ದ ಎಲ್ಲಾ ವಿರೋಧ ಪಕ್ಷಗಳು ಮತ್ತು ಸಂಘಟನೆಗಳು ಎಡದ ಏಕಾಧಿಪತ್ಯವನ್ನು ಮುರಿಯಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಟಿಎಂಸಿಯನ್ನು ಬೆಂಬಲಿಸಿದವು. 1977ರಲ್ಲಿ ಇಂದಿರಾ ವಿರೋಧಿ ಅಲೆಯ ಭಾಗವಾಗಿ ಸಮಾಜವಾದಿಗಳ ಜೊತೆ ಬಿಜೆಪಿಯು ಪ್ರಧಾನ ಲಾಭ ಮಾಡಿಕೊಂಡಂತೆ, ಎಡರಂಗ ಸರ್ವಾಧಿಕಾರ ವಿರೋಧಿ ಅಲೆಯ ಲಾಭದಲ್ಲಿ ಬಿಜೆಪಿಯು ಜನರಲ್ಲಿ ಬೇರುಬಿಡತೊಡಗಿತು. ಬಂಗಾಳದ ರಾಜಕಾರಣದಲ್ಲಿ ತಳಮಟ್ಟದ ಹಿಂಸಾಚಾರಗಳು ರಾಜಕೀಯ ಸಂಸ್ಕೃತಿಯ ಭಾಗವೇ ಆಗಿದ್ದು ಕೂಡ ಟಿಎಂಸಿಯನ್ನು ವಿರೋಧಿಗಳು ಬೆಳೆಸಲು ಕಾರಣವಾಗಿತ್ತು. ಆದರೆ ಟಿಎಂಸಿಗೆ ಫ್ಯಾಶಿಸ್ಟ್ ಬಿಜೆಪಿಯ ವಿರುದ್ಧ ಯಾವುದೇ ಸೈದ್ಧಾಂತಿಕ ತಕರಾರು ಇರಲಿಲ್ಲ. ಪ್ರಾರಂಭದಲ್ಲಿ ಟಿಎಂಸಿ ಎನ್‌ಡಿಎ ಭಾಗವೂ ಆಗಿತ್ತು.

ಹೀಗೆ ಟಿಎಂಸಿಯ ಮೇಲೆ ಸವಾರಿ ಮಾಡುತ್ತಾ ಬಂಗಾಳ ಪ್ರವೇಶಿಸಿದ ಬಿಜೆಪಿ, ಇತರ ಎಲ್ಲಾ ಪ್ರದೇಶಗಳಲ್ಲಿ ಮಾಡುವಂತೆ ಆರೆಸ್ಸೆಸ್ ಮತ್ತಿತರ ಸಹಕಾರ ಮತ್ತು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಯೋಜನೆಗಳ ಮೂಲಕ ಹಂತಹಂತವಾಗಿ ಬೆಳೆಯಲು ಪ್ರಾರಂಭಿಸಿತು. ಎಡಪಕ್ಷಗಳ ಪ್ರಭಾವ ಕುಸಿಯುತ್ತಿದ್ದ ಹೊತ್ತಿನಲ್ಲಿ ಬಿಜೆಪಿಯನ್ನು ಕೂಡ ಪರ್ಯಾಯದ ಸುಳ್ಳು ಭರವಸೆ ಒದಗಿಸಿತು. 2016ರ ಚುನಾವಣೆಯಲ್ಲಿ ಬಿಜೆಪಿ ಅಷ್ಟು ದೊಡ್ಡ ಪ್ರಭಾವ ಬೆಳೆಸಿಕೊಳ್ಳದಿದ್ದರೂ, 2014ರಲ್ಲಿ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಭಾರತದ ಪ್ರಭುತ್ವ ಹಿಂದುತ್ವದ ಸಾಧನವಾಗುತ್ತಿದ್ದಂತೆ ಬಂಗಾಳವನ್ನು ತನ್ನ ಗುರಿಯಾಗಿಸಿಕೊಂಡಿತು. 2021ರ ಚುನಾವಣೆಯ ವೇಳೆಗಾಗಲೇ ಬಿಜೆಪಿ ಎಸ್‌ಐಆರ್ ಇತ್ಯಾದಿಗಳೇನು ಇಲ್ಲದೆಯೇ ಶೇ. 38ರಷ್ಟು ವೋಟು ಶೇರು ಮತ್ತು 77 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು ಮತ್ತು ವಿರೋಧ ಪಕ್ಷಗಳಾಗಿದ್ದ ಸಿಪಿಎಂ, ಕಾಂಗ್ರೆಸ್‌ನ ಮತದಾರರನ್ನು ತನ್ನ ಕಡೆಗೆ ಸೆಳೆದುಕೊಂಡಿತ್ತು.

2021ರಲ್ಲೇ ಟಿಎಂಸಿ ಬಿಜೆಪಿಗೆ ಹಾದಿ ಮಾಡಿಕೊಟ್ಟಿತ್ತು!?

2021ರ ಚುನಾವಣೆಯ ನಂತರ ಇದೇ ಕಾಲಂನಲ್ಲಿ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಲಾಗಿತ್ತು:

‘’...ಪ. ಬಂಗಾಳದಲ್ಲಿ 2016ರ ಚುನಾವಣೆಯ ವೇಳೆಯಲ್ಲಿ ಕೇವಲ ಶೇ. 10ರಷ್ಟು ವೋಟುಗಳನ್ನು ಮತ್ತು ಮೂರು ಸೀಟುಗಳನ್ನು ಮಾತ್ರ ಹೊಂದಿದ್ದ ಬಿಜೆಪಿ ಈಗ ಶೇ. 38ರಷ್ಟು ವೋಟುಗಳನ್ನು ಮತ್ತು 77 ಸೀಟುಗಳನ್ನು ಪಡೆದುಕೊಂಡು ಏಕಮಾತ್ರ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. (ಪ. ಬಂಗಾಳದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಈ ಬಾರಿ ಎಡ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಒಬ್ಬರೂ ಪ. ಬಂಗಾಳದ ಅಸೆಂಬ್ಲಿಯಲ್ಲಿ ಇರುವುದಿಲ್ಲ). ಇದು 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಪಡೆದುಕೊಂಡಿದ್ದ ವೋಟುಗಳಿಗಿಂತ ಶೇ. 2ರಷ್ಟು ಮಾತ್ರ ಕಡಿಮೆ. ಸಾಮಾನ್ಯವಾಗಿ ಪ್ರಬಲ ಪ್ರಾದೇಶಿಕ ಪಕ್ಷಗಳೆದುರು, ಅದರಲ್ಲೂ ಅತ್ಯಂತ ಜನಪ್ರಿಯವಾಗಿರುವ ಮಮತಾ ಬ್ಯಾನರ್ಜಿಯ ಎದುರು ಒಂದು ಜನಮಾನ್ಯವಾದ ಬಂಗಾಳಿ ಮುಖವೂ ಇಲ್ಲದೆಯೂ, ಬಿಜೆಪಿ ಪ. ಬಂಗಾಳದಲ್ಲಿ ಶೇ. 38ರಷ್ಟು ವೋಟು ಶೇರುಗಳನ್ನು ಹೆಚ್ಚು ಕಡಿಮೆ ಸದೃಢೀಕರಿಸಿಕೊಂಡಿದೆ.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ಪ. ಬಂಗಾಳದಲ್ಲಿ ಶೇ. 30 ರಷ್ಟು ಅಂದರೆ ಹೆಚ್ಚೂ ಕಡಿಮೆ ಮೂರುಕೋಟಿ ಮುಸ್ಲಿಮ್ ಜನಸಂಖ್ಯೆ ಇದೆ. ಅವರೆಲ್ಲರೂ ಈ ಬಾರಿ ಪ್ರಪ್ರಥಮ ಬಾರಿಗೆ ಕಾಂಗ್ರೆಸ್, ಎಡಪಕ್ಷ ಹಾಗೂ ಹೊಸದಾಗಿ ಸ್ಪರ್ಧಿಸಿದ್ದ ಮುಸ್ಲಿಮ್ ಪಕ್ಷವೇ ಆಗಿದ್ದ ಐಎಸ್‌ಎಫ್ ಅನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿಗೆ ವೋಟು ಹಾಕಿದ್ದಾರೆ. ಅಂದರೆ ಮಮತಾ ಬ್ಯಾನರ್ಜಿಯವರು ಪಡೆದಿರುವ ಶೇ. 48ರಷ್ಟು ವೋಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮುಸ್ಲಿಮರ ವೋಟಾಗಿದೆ.

ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಪಡೆದುಕೊಂಡಿರುವ 77 ಸೀಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳು ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಕ್ಷೇತ್ರಗಳ ಸೀಟುಗಳಾಗಿವೆ. ಹೀಗಾಗಿ ಬಿಜೆಪಿಯ ಒಟ್ಟಾರೆ ವೋಟು ಶೇರು ಶೇ. 38 ಮಾತ್ರ ಆಗಿದ್ದರೂ, ಬಹುಸಂಖ್ಯಾತ ಹಿಂದೂಗಳ ವೋಟಿನಲ್ಲಿ ಅದರ ವೋಟು ಶೇರು ಹೆಚ್ಚಾಗಿಯೇ ಇದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ.ಬಂಗಾಳದಲ್ಲಿ ಅಧಿಕಾರರೂಢ ಪಕ್ಷಗಳು ಯಾವುದೇ ಇದ್ದರೂ- ಅದು ಸಿಪಿಎಂ ಆದರೂ ಸರಿ, ಟಿಎಂಸಿ ಆದರೂ ಸರಿ- ವಿರೋಧಿಗಳನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯುವ ರಾಜಕೀಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡಿವೆ. 2011ರಲ್ಲಿ ಸಿಪಿಎಂನ ಈ ಹಿಂಸಾತ್ಮಕ ರಾಜಕೀಯದ ವಿರುದ್ಧವೇ ಟಿಎಂಸಿಯನ್ನು ಬಂಗಾಳದ ಜನತೆ ಗೆಲ್ಲಿಸಿದರು. ಆದರೆ ಅಧಿಕಾರಕ್ಕೆ ಬಂದಮೇಲೆ ಟಿಎಂಸಿ ಅದೇ ಬಗೆಯ ಟೈರನಿಯನ್ನು ಸಿಪಿಎಂ ಆದಿಯಾಗಿ ಎಲ್ಲಾ ವಿರೋಧಿಗಳ ಮೇಲೆ ಪ್ರಯೋಗಿಸುತ್ತಾ ಬಂದಿತು. ಹೀಗಾಗಿ ಟಿಎಂಸಿಯ ಹಿಂಸೆಯಿಂದ ಬಚಾವಾಗಬೇಕೆಂದರೆ ನಿತ್ರಾಣವಾಗಿರುವ ಸಿಪಿಎಂ ಆಗಲೀ, ಕಾಂಗ್ರೆಸ್ ಆಗಲೀ ಆಯ್ಕೆಯಲ್ಲವೆಂದು ಪರಿಗಣಿಸಿದ ಹಲವಾರು ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ವೋಟು ಹಾಕಿದ್ದಾರೆ. ‘ಈ ಬಾರಿ ರಾಮ್. ಆ ನಂತರ ವಾಮ್’ ಎಂಬ ಜನಪ್ರಿಯ ಮಾತುಗಳು ಹಲವು ಕಡೆಯಿಂದ ಕೇಳಿಬರುತ್ತಿತ್ತೆಂದೂ ಪತ್ರಿಕೆಗಳು ವರದಿ ಮಾಡಿವೆ.

ಇದಲ್ಲದೆ ಈ ಫಲಿತಾಂಶವು ಬಿಜೆಪಿಯನ್ನೇ ಏಕೈಕ ವಿರೋಧ ಪಕ್ಷವನ್ನಾಗಿ ಮಾಡಿರುವುದರಿಂದ ಬರಲಿರುವ ದಿನಗಳಲ್ಲಿ ಟಿಎಂಸಿಯ ಪ್ರತಿಯೊಂದು ತಪ್ಪು ನಡೆಗಳು, ವೈಫಲ್ಯಗಳೂ ಬಿಜೆಪಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಹಾಗೂ ಟಿಎಂಸಿಯ ಪ್ರಧಾನ ಬೆಂಬಲ ನೆಲೆಯಾಗಿರುವ ಮುಸ್ಲಿಮರ ವಿರುದ್ಧ ಬಿಜೆಪಿ ತನ್ನ ಕೋಮುವಾದಿ ದ್ವೇಷದ ರಾಜಕಾರಣವನ್ನು ವಿಸ್ತೃತವಾಗಿ ನಡೆಸಲು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಮೋದಿಯ ಫ್ಯಾಶಿಸ್ಟ್ ರಥಕ್ಕೆ ಈ ಚುನಾವಣೆ ಒಡ್ಡಿರುವುದು ಕೇವಲ ಒಂದು ರೋಡ್ ಹಂಪೇ ಹೊರತು ತಡೆಗೋಡೆಯಲ್ಲ. ಏಕೆಂದರೆ ಫ್ಯಾಶಿಸ್ಟ್ ರಾಜಕಾರಣವನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಎದುರಿಸುವ ಸಿದ್ಧಾಂತವಾಗಲೀ, ರಾಜಕೀಯವಾಗಲೀ ಟಿಎಂಸಿಗಿಲ್ಲ.

ಇನ್ನು ಸತತ 30 ವರ್ಷ ಅಧಿಕಾರ ನಡೆಸಿದ ಕ್ಯಾಡರ್ ಮತ್ತು ಸಿದ್ಧಾಂತ ಆಧರಿತ ಪಕ್ಷವಾದ ಸಿಪಿಎಂ ಕೇವಲ ಹತ್ತು ವರ್ಷದಲ್ಲಿ ಶೇ. 5ರಷ್ಟು ಮತಗಳನ್ನೂ ಗಳಿಸದೆ ರಾಜಕೀಯ ಪ್ರಪಾತಕ್ಕೆ ಕುಸಿಯಲು ಕಾರಣವನ್ನು ಹೊರಗೆ ಹುಡುಕದೆ ತನ್ನೊಳಗೆ ಹುಡುಕುತ್ತಾ, ಆಳವಾದ ಆತ್ಮವಿಮರ್ಶೆ ಮಾಡಿಕೊಂಡು, ತಿದ್ದಿಕೊಂಡು ಮರಳುವ ಯಾವ ಭರವಸೆಯನ್ನೂ ಕಳೆದ ಹತ್ತು ವರ್ಷಗಳಲ್ಲಿ ಅದು ಒದಗಿಸಿಲ್ಲ. ಅದರ ಪರಿಣಾಮವೇ ಅದರ ಇಂದಿನ ಸ್ಥಿತಿ. ಇನ್ನೂ ಕಾಂಗ್ರೆಸ್ ಬಗ್ಗೆ ಏನೂ ಹೇಳದಿರುವುದೇ ಒಳಿತು..’’

ಎಸ್‌ಐಆರ್ ಏಕಮಾತ್ರ ಕಾರಣವಲ್ಲ!

ಆದ್ದರಿಂದ 2026ರ ಪ. ಬಂಗಾಳದಲ್ಲಿನ ಬಿಜೆಪಿ ಗೆಲುವನ್ನು ಇಡಿಯಾಗಿ ಎಸ್‌ಐಆರ್ ಮೇಲೆ ಹೊರಿಸಲು ಸಾಧ್ಯವಿಲ್ಲ. ಎಸ್‌ಐಆರ್‌ನಿಂದಾಗಿ ಒಂದು ವೇಳೆ ಟಿಎಂಸಿಯೇ ಗೆದ್ದಿದ್ದರೂ ಎಸ್‌ಐಆರ್ ರದ್ದಾಗಲೇ ಬೇಕು. ಏಕೆಂದರೆ ಅದು ಬಡ-ದಮನಿತ ಮತದಾರರನ್ನು ನಾಗರಿಕರೇ ಅಲ್ಲವೆಂದು ಹೊರಗಿಡುವ ಅಸಾಂವಿಧಾನಿಕ ಪ್ರಕ್ರಿಯೆ. ಅದರಲ್ಲೂ ಅದು ಪ. ಬಂಗಾಳದಲ್ಲಿ ಜಾರಿಯಾದ ರೀತಿ ಮತ್ತು ಬಂಗಾಳಕ್ಕೆ ಮಾತ್ರ ಸೀಮಿತವಾಗಿ ಪ್ರಯೋಗಿಸಿದ ಹೊಸ ಷರತ್ತುಗಳು ಎಲ್ಲವೂ ಎಸ್‌ಐಆರ್ ಅನ್ನು ಕೂಡ ಬಿಜೆಪಿ ಟಿಎಂಸಿಯನ್ನು ಸೋಲಿಸಲು ಒಂದು ಸಾಧನವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತ್ತು ಎಂಬುದನ್ನು ಸಂದೇಹಾತೀತವಾಗಿ ಸಾಬೀತು ಮಾಡುತ್ತದೆ.

ಆದರೆ ಈ ಬಾರಿ ಟಿಎಂಸಿ ಸೋಲಿಗೆ ಕೇವಲ ಎಸ್‌ಐಆರ್ ಕಾರಣವೇ?

ಫಲಿತಾಂಶಗಳ ವಿವರವು ಮೇಲ್ನೋಟಕ್ಕೆ ಹೇಗೆ ಎಸ್‌ಐಆರ್ ಘಾತುಕವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಉದಾಹರಣೆಗೆ ಈ ಬಾರಿ ಟಿಎಂಸಿ 2.6 ಕೋಟಿ ವೋಟುಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ 2.92 ಕೋಟಿ ವೋಟುಗಳನ್ನು ಪಡೆದುಕೊಂಡಿದೆ. ಅಂದರೆ ಅಂತರ ಕೇವಲ 30 ಲಕ್ಷ ಮಾತ್ರ. ಆದರೆ ಎಸ್‌ಐಆರ್‌ನಿಂದ ಒಟ್ಟು 93 ಲಕ್ಷ ಮತದಾರರು ಹೊರಗಿಡಲ್ಪಟ್ಟಿದ್ದರೆ ಕೊನೆಯ ಹಂತದಲ್ಲಿ ಟ್ರಿಬ್ಯುನಲ್‌ಗಳು ವಿಚಾರಣೆಯನ್ನು ಮಾಡದೆ ಹೊರಗಿಟ್ಟವರ ಸಂಖ್ಯೆ 27 ಲಕ್ಷ. ಅದರಲ್ಲಿ ಶೇ. 80-90ರಷ್ಟು ಮುಸ್ಲಿಮರು. ಪ. ಬಂಗಾಳದಲ್ಲಿ ಮುಸ್ಲಿಮರು ಸಂಭವನೀಯ ಟಿಎಂಸಿ ಮತದಾರರಾಗಿದ್ದಾರೆ. ಅಂದರೆ ಮತದಾನದಿಂದ ಹೊರಗಿಟ್ಟವರ ಸಂಖ್ಯೆ ಹಾಗೂ ಬಿಜೆಪಿ ಮತ್ತು ಟಿಎಂಸಿ ನಡುವಿನ ಗೆಲುವಿನ ಅಂತರ ಎರಡು ಹೆಚ್ಚೂ ಕಡಿಮೆ ಒಂದೇ! ಹೀಗಾಗಿ ಎಸ್‌ಐಆರ್ ಉದ್ದೇಶವೇ ಟಿಎಂಸಿಯನ್ನು ಸೋಲಿಸುವುದು. ಹೀಗಾಗಿ ಅದು ಟಿಎಂಸಿಯನ್ನು ಸೋಲಿಸಿದ್ದರೂ, ಸೋಲಿಸದಿದ್ದರೂ ಅದರ ಉದ್ದೇಶ ಮತ್ತು ಅದು ಕಾರ್ಯಗತವಾದ ಮಾದರಿಯ ಕಾರಣಕ್ಕೇ ಎಸ್‌ಐಆರ್ ಎಲ್ಲೂ ಜಾರಿಯಾಗಬಾರದು.

ಆದರೆ ಫಲಿತಾಂಶದ ವಿವರಗಳನ್ನು ನೋಡಿದರೆ ಟಿಎಂಸಿ ಸೋಲಿನಲ್ಲಿ ಎಸ್‌ಐಆರ್ ಪಾತ್ರದ ಜೊತೆಗೆ ಇತರ ಅಂಶಗಳೂ ಎದ್ದು ಕಾಣುತ್ತವೆ. ಉದಾಹರಣೆಗೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯು ಚುನಾವಣೆಗೆ ಮುನ್ನ ಹೇಗೆ ಬಂಗಾಳದ 44 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕೆ ಹೋಲಿಸಿದಲ್ಲಿ ಎಸ್‌ಐಆರ್ ಮೂಲಕ ಡಿಲೀಟ್ ಆದವರ ಪ್ರಮಾಣ ಹೆಚ್ಚೆಂಬ ವಿವರಗಳನ್ನು ನೀಡಿತ್ತು.

(https://indianexpress.com/article/political-pulse/west-bengal-elections-2026-voter-list-deletion-sir-tmc-bjp-margins-10629439/)

ಬಾಲಿ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ 6,231 ಮತಗಳಿಂದ ಗೆದ್ದಿತ್ತು. ಆದರೆ ಈಗ ಎಸ್‌ಐಆರ್ ಕಾರಣದಿಂದ ಆ ಕ್ಷೇತ್ರದಲ್ಲಿ 11,386 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಆ ಟಿಎಂಸಿ ಕ್ಷೇತ್ರದಲ್ಲಿ ಈಗ ಬಿಜೆಪಿ ಕೇವಲ 11,997 ವೋಟುಗಳಿಂದ ಗೆದ್ದಿದೆ.

ಹೌರಾ ಉತ್ತರ ಕ್ಷೇತ್ರವನ್ನು ಟಿಎಂಸಿ 5,472 ಮತಗಳಿಂದ ಗೆದ್ದಿತ್ತು. ಆದರೆ ಎಸ್‌ಐಆರ್‌ನಿಂದ ಆ ಕ್ಷೇತ್ರದಲ್ಲಿ 11,179 ಮತಗಳು ಡಿಲೀಟ್ ಆದವು. ಈಗ ಆ ಟಿಎಂಸಿ ಕ್ಷೇತ್ರದಲ್ಲಿ ಬಿಜೆಪಿ 11,250 ಮತಗಳಿಂದ ಗೆದ್ದಿದೆ.

ಕೇತುಗ್ರಾಮ್ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ 12,467 ಮತಗಳಿಂದ ಗೆದ್ದಿತ್ತು. ಆದರೆ ಈಗ ಎಸ್‌ಐಆರ್ ಕಾರಣದಿಂದ ಆ ಕ್ಷೇತ್ರದಲ್ಲಿ 26,780 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಆ ಟಿಎಂಸಿ ಕ್ಷೇತ್ರದಲ್ಲಿ ಈಗ ಬಿಜೆಪಿ ಕೇವಲ 27,610 ವೋಟುಗಳಿಂದ ಗೆದ್ದಿದೆ.

ಪಾಂಡವೇಶ್ವರ್ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ 3,350 ಮತಗಳಿಂದ ಗೆದ್ದಿತ್ತು. ಆದರೆ ಈಗ ಎಸ್‌ಐಆರ್ ಕಾರಣದಿಂದ ಆ ಕ್ಷೇತ್ರದಲ್ಲಿ 5,898 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಆ ಟಿಎಂಸಿ ಕ್ಷೇತ್ರದಲ್ಲಿ ಈಗ ಬಿಜೆಪಿ ಕೇವಲ 1,398 ವೋಟುಗಳಿಂದ ಗೆದ್ದಿದೆ.

ಹೀಗೆ ಕನಿಷ್ಠ ಟಿಎಂಸಿ ಗೆದ್ದಿದ್ದ ಹತ್ತು ಕ್ಷೇತ್ರಗಳಲ್ಲಿ ಎಸ್‌ಐಆರ್ ವೋಟರ್ ಡಿಲೀಶನ್‌ನಿಂದ ಬಿಜೆಪಿ ಗೆದ್ದಿದೆ. ಆದರೆ ವೋಟರ್ ಡಿಲೀಶನ್‌ನಿಂದ ಯಾವ ಬಿಜೆಪಿ ಕ್ಷೇತ್ರಗಳಲ್ಲೂ ಟಿಎಂಸಿ ಗೆದ್ದಿಲ್ಲ!

ಹೀಗಾಗಿ ಎಸ್‌ಐಆರ್‌ನಿಂದ ಟಿಎಂಸಿ ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂಬುದರಲ್ಲಿ ಯಾವ ವಿವಾದವೂ ಇಲ್ಲ. ಆದರೆ ಒಟ್ಟಾರೆ ಟಿಎಂಸಿ ಸೋಲಿಗೆ ಎಸ್‌ಐಆರ್ ಒಂದೇ ಕಾರಣವೆಂಬುದೂ ವಾಸ್ತವವಲ್ಲ. ಏಕೆಂದರೆ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ಮತ್ತೊಂದು ಅಧ್ಯಯನವು ಹೇಳುವಂತೆ ಅತಿ ಹೆಚ್ಚು ಡಿಲೀಶನ್ ಆಗಿದ್ದ 20 ಕ್ಷೇತ್ರಗಳಲ್ಲಿ ಟಿಎಂಸಿ 13ನ್ನು ಗೆದ್ದುಕೊಂಡಿದೆ.

(https://indianexpress.com/article/political-pulse/bengal-sir-tmc-won-13-of-20-seats-with-highest-voter-deletions-10672965/)

10672965/)

ಹೀಗಾಗಿ ಟಿಎಂಸಿ ಸೋಲಿಗೆ ಎಸ್‌ಐಆರ್ ಕಾರಣ. ಆದರೆ ಎಸ್‌ಐಆರ್ ಒಂದೇ ಕಾರಣವಲ್ಲ. ಇನ್ನು ಹಲವಾರು ಮೂಲಭೂತ ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು:

1. ಬಹುಪಾಲು ಹಿಂದೂ ವೋಟುಗಳು ಬಿಜೆಪಿ ಪಾಲಾಗಿದೆ, ಆದರೆ ಎಲ್ಲಾ ಮುಸ್ಲಿಮ್ ವೋಟುಗಳು ಟಿಎಂಸಿಗೆ ದಕ್ಕಲಿಲ್ಲ.

2. ಬಿಜೆಪಿಯ ಮತ್ತು ಸಂಘೀ ಫ್ಯಾಶಿಸಂನ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಟಿಎಂಸಿಯನ್ನು ಒಳಗೊಂಡಂತೆ ಯಾವುದೇ ವಿರೋಧ ಪಕ್ಷಗಳ ಬಳಿ ಪರ್ಯಾಯವಾಗಲೀ, ಕಟುವಾದ ವಿರೋಧವಾಗಲೀ ಇರದಿರುವುದು.

3. ಹಿಂದೂ ರಾಷ್ಟ್ರ ನರೇಟಿವ್ ಮತ್ತು ಯೋಜನೆಗಳಿಗೆ ಪರ್ಯಾಯವಾದ ಪ್ರಜಾತಾಂತ್ರಿಕ ರಾಷ್ಟ್ರ ನಿರ್ಮಾಣದ ಆಶಯವಾಗಲೀ, ಯೋಜನೆಯಾಗಲೀ ಇರದಿರುವುದು. ಮೃದು ಹಿಂದುತ್ವವೇ ರಾಜಕೀಯವಾಗಿರುವುದು.

4. ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಗಿಂತ ಭಿನ್ನ ಅಥವಾ ಜನಪರ ಎನಿಸಬಹುದಾದ ಯಾವುದೇ ದೀರ್ಘಕಾಲೀನ ಯೋಜನೆ ಅಥವಾ ಕಾರ್ಯಕ್ರಮ ಗಳಿಲ್ಲದಿರುವುದು. ಮೂಲಭೂತವಾಗಿ ಭಾರತೀಯ ಫ್ಯಾಶಿಸ್ಟರಂತೆ ವಿರೋಧ ಪಕ್ಷಗಳೂ ಸಹ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯಾಗಿಯೇ ಇರುವುದು.

5. ಅಧಿಕಾರದಲ್ಲಿದ್ದಾಗ ಪರಮ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಸ್ವಾರ್ಥ, ಸ್ವಜನ ಪಕ್ಷಪಾತ, ದಮನ-ದಬ್ಬಾಳಿಕೆಗಳಲ್ಲಿ ತೊಡಗಿಕೊಳ್ಳುವುದು. ಬಿಜೆಪಿಯೂ ಅಧಿಕಾರದಲ್ಲಿ ಇರುವ ಎಲ್ಲಾ ಕಡೆಗಳಲ್ಲೂ ಅದನ್ನು ಮಾಡುತ್ತದೆ. ಆದರೆ ಅವೆಲ್ಲವನ್ನು ಹುಸಿ ಶತ್ರುಗಳನ್ನು ತೋರಿಸುತ್ತಾ ಹಿಂದುತ್ವದ ಅಮಲನ್ನು ತೋರಿಸಿ ಮರೆಸಿ ಬಿಡುತ್ತದೆ.

5. ಎಲ್ಲಕ್ಕಿಂತ ಮುಖ್ಯವಾಗಿ ಫ್ಯಾಶಿಸ್ಟ್ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಪ್ರಜಾತಂತ್ರವೇ ಪ್ರಜಾತಾಂತ್ರಿಕ ಸಾಧ್ಯತೆಗಳನ್ನೆಲ್ಲಾ ಕಳೆದುಕೊಂಡಿದೆ. ಹೀಗಾಗಿ ಪರ್ಯಾಯ ಪ್ರಜಾತಾಂತ್ರಿಕ ಮಾರ್ಗವೆಂದರೆ ತಳವರ್ಗದ ಮತ್ತು ದಮನಿತ ಜನರೆಲ್ಲರನ್ನೂ ಒಳಗೊಂಡ ಫ್ಯಾಶಿಸ್ಟ್ ವಿರೋಧಿ ಜನಚಳವಳಿ ಕಟ್ಟುವು ದೊಂದೇ ಮಾರ್ಗ. ಅದು ಮುಂದಿನ ಚುನಾವಣೆಗಲ್ಲವಾದರೂ ಮೂವತ್ತು ವರ್ಷಗಳ ನಂತರ ಫಲ ನೀಡಬಲ್ಲದು.

Tags

Election ResultsSIR
share
ಶಿವಸುಂದರ್
ಶಿವಸುಂದರ್
Next Story
X