Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ದಲಿತ-ದಮನಿತ ವಿರೋಧಿ ಎಸ್‌ಐಆರ್: ಕರ್ನಾಟಕ...

ದಲಿತ-ದಮನಿತ ವಿರೋಧಿ ಎಸ್‌ಐಆರ್: ಕರ್ನಾಟಕ ಹೇಳುತ್ತಿರುವ ಸಾಕ್ಷ್ಯಗಳು

ಶಿವಸುಂದರ್ಶಿವಸುಂದರ್2 Sept 2026 11:29 AM IST
share
ದಲಿತ-ದಮನಿತ ವಿರೋಧಿ ಎಸ್‌ಐಆರ್: ಕರ್ನಾಟಕ ಹೇಳುತ್ತಿರುವ ಸಾಕ್ಷ್ಯಗಳು

ಐಆರ್ ಎಂಬುದು ಮತಪಟ್ಟಿ ಶುದ್ಧೀಕರಣವೂ ಅಲ್ಲ. ಪರಿಷ್ಕರಣೆಯೂ ಅಲ್ಲ. ಅದು ಮೋದಿ ಸರಕಾರ ಈ ದೇಶದ ದಲಿತ ದಮನಿತರ ನಾಗರಿಕತ್ವವನ್ನು ಕಿತ್ತುಕೊಳ್ಳುವ ಸಂಚು. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಮೂಲಕ ಸೃಷ್ಟಿಸಿದ ಗಣರಾಜ್ಯವನ್ನು ಒಳಗಿನಿಂದಲೇ ನಾಶ ಮಾಡಿ ಕಾರ್ಪೊರೇಟ್ ಹಿಂದುತ್ವ ರಾಷ್ಟ್ರವನ್ನು ಕಟ್ಟುವ ಬೃಹತ್ ಹುನ್ನಾರ.

ಕರ್ನಾಟಕದಲ್ಲಿ ಎಸ್‌ಐಆರ್‌ನ ಮೊದಲ ಹಂತ ಮುಕ್ತಾಯವಾಗಿ ಆಗಸ್ಟ್ 24ರಂದು ಕರಡು ಪಟ್ಟಿ ಬಿಡುಗಡೆ ಆಗಿದೆ. ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಕರ್ನಾಟಕದಲ್ಲಿ 5.54 ಕೋಟಿ ಮತದಾರರಿದ್ದರೆ ಈಗ ಅದು 4.46 ಕೋಟಿಗೆ ಇಳಿದಿದೆ. ಅಂದರೆ 1.07 ಕೋಟಿ (ಶೇ. 19.48) ಮತದಾರರನ್ನು ಹೊರದಬ್ಬಲಾಗಿದೆ. ಹೀಗೆ ಹೊರದಬ್ಬಲು A (Abesent), S (Shifted), D (Dead), Duplicate (D), O (Others) - ASDDO ಎಂಬ ಅವೈಜ್ಞಾನಿಕ ವರ್ಗಗಳನ್ನು ಸೃಷ್ಟಿಸಿದೆ. ಅದಲ್ಲದೆ ಕರಡು ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡ 44 ಲಕ್ಷ ಮತದಾರರಿಗೆ ಮ್ಯಾಪಿಂಗ್ ಆಗಿಲ್ಲ, ಆಗಿದ್ದರೂ ಹೊಂದಾಣಿಕೆಯಿಲ್ಲ (Logical Discrepancy) ಎನ್ನುವ ಹೆಸರಲ್ಲಿ ನೋಟಿಸ್ ಕಳಿಸಲಾಗಿದೆ. ಅಂದರೆ 1.51 ಕೋಟಿ ಜನ ಎಸ್‌ಐಆರ್ ಸಂತ್ರಸ್ತರಾಗಿದ್ದಾರೆ.

ಆದರೆ ಈ 1.51 ಕೋಟಿ ಜನ ಯಾರು? ಅನರ್ಹ ಮತದಾರರೇ? ಬಾಂಗ್ಲಾ ದೇಶದಿಂದ ನುಸುಳಿ ಬಂದಿರುವ ಅಕ್ರಮ ವಲಸಿಗರೇ?

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು (ಸಿಇಒ) ಆಗಸ್ಟ್ 19ರಂದು ಪ್ರತೀ ಅಸೆಂಬ್ಲಿ ಮತಕ್ಷೇತ್ರದ ASDDO ಪ್ರಮಾಣ ಮತ್ತು ವರ್ಗಾವಾರು ವಿವರಗಳನ್ನು ನೀಡಿದೆ.

(https://ceo.karnataka.gov.in/uploads/Press%20Note%20-%2019.08.2026.pdf)

ಇದನ್ನು ಕರ್ನಾಟಕದ ಸಾಮಾಜಿಕ ತಾರತಮ್ಯಗಳ ಹಾಗೂ ಭೌಗೋಳಿಕ ಮತ್ತು ಅಭಿವೃದ್ಧಿ ತಾರತಮ್ಯಗಳ ವಿವರಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಎಸ್‌ಐಆರ್ ಹೇಗೆ ಕರ್ನಾಟಕ ರಾಜ್ಯದ ಅತ್ಯಂತ ದಮನಿತ-ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ವಿಶೇಷವಾಗಿ ಬಲಿ ತೆಗೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟಗೊಳ್ಳುತ್ತದೆ.

ಕರ್ನಾಟಕ ರಾಜ್ಯದ ಅಭಿವೃದ್ಧಿ ತಾರತಮ್ಯದ ಬಗ್ಗೆ 2002ರ ನಂಜುಂಡಪ್ಪ ವರದಿಯ ನಂತರದ ಕಳೆದ 23 ವರ್ಷಗಳಲ್ಲಿ ಯಾವ ಯಾವ ತಾಲೂಕು ಮತ್ತು ಜಿಲ್ಲೆಗಳು ಎಷ್ಟು ಹಿಂದುಳಿದಿವೆ ಎಂಬ ಬಗ್ಗೆ ಪ್ರೊ. ಗೋವಿಂದರಾವ್ ಸಮಿತಿಯು 2026ರ ಜನವರಿಯಲ್ಲಿ ತನ್ನ ವರದಿಯನ್ನು ನೀಡಿದೆ.

(https://planning.karnataka.gov.in/128/prof.govinda-rao-committee-report/en)

ಸಿಇಒ ಅವರು ಕರ್ನಾಟಕದ ಅಸೆಂಬ್ಲಿ ಮಟ್ಟದ ASDDO ವಿವರಗಳನ್ನು ಗೋವಿಂದರಾವ್ ವರದಿಯ ಜೊತೆಗೆ ತುಲನೆ ಮಾಡಿದಾಗ ASDDO ಹೆಚ್ಚಿರುವ ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶಗಳೆಷ್ಟು ಎಂಬ ಸ್ಥೂಲ ವಿವರಗಳು ಸಿಗುತ್ತವೆ.

ಹಾಗೆಯೇ ಕರ್ನಾಟಕದಲ್ಲಿ 36 ಎಸ್‌ಸಿ ಮೀಸಲು ಕ್ಷೇತ್ರಗಳು ಮತ್ತು 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಸಿಇಒ ನೀಡಿರುವ ಅಸೆಂಬ್ಲಿ ಮಟ್ಟದ ASDDO ವಿವರಗಳ ಜೊತೆಗೆ ಹೋಲಿಸಿ ನೋಡಿದರೆ ASDDO ಹೆಚ್ಚಿರುವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಎಸ್‌ಸಿ-ಎಸ್‌ಟಿ ಕ್ಷೇತ್ರಗಳೆಷ್ಟು ಎಂಬ ವಿವರಗಳು, ಹೊರದಬ್ಬಿದವರಲ್ಲಿ ದಲಿತ ದಮನಿತರ ಪಾಲು ಪ್ರಮಾಣಕ್ಕೆ ತಕ್ಕಂತೆ ಇದೆಯೋ ಅಥವಾ ಹೆಚ್ಚಿದೆಯೋ ಎಂಬ ಚಿತ್ರಣ ಸಿಗುತ್ತದೆ.

ಹಾಗೆಯೇ 2011ರ ಸೆನ್ಸಸ್‌ನ ಅಂಕಿಅಂಶಗಳು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಧರ್ಮವಾರು ಜನಸಂಖ್ಯೆಯ ಪ್ರಮಾಣವನ್ನು ನೀಡುತ್ತದೆ. ಇದರ ಒಟ್ಟಾರೆ ಸಂಖ್ಯೆ ಜಾಸ್ತಿ ಆಗಿದ್ದರೂ ಪ್ರಮಾಣ ಹೆಚ್ಚು ಕಡಿಮೆ ಅದೇ ರೀತಿಯಲ್ಲಿವೆ. ಇದನ್ನು ಸಿಇಒ ನೀಡಿರುವ ASDDO ವಿವರಗಳೊಂದಿಗೆ ಹೋಲಿಸಿದಲ್ಲಿ ಮುಸ್ಲಿಮರು ಹೆಚ್ಚಿರುವ ಜಿಲ್ಲೆ ಮತ್ತು ಕ್ಷೇತ್ರಗಳಲ್ಲಿASDDO ಪ್ರಮಾಣ ಹೆಚ್ಚಿದೆಯೇ ಎಂಬ ವಿವರಗಳು ಸಿಗುತ್ತವೆ.

(https://www.censusindia.gov.in/nada/index.php/catalog/11361?utm_source=chatgpt.com)

ಹೆಚ್ಚು ಹಿಂದುಳಿದ ಪ್ರದೇಶ- ಹೆಚ್ಚು ASDDO

ಕರ್ನಾಟಕ ರಾಜ್ಯದ ASDDO ಪ್ರಮಾಣ ಶೇ. 19.48. ಹೀಗಾಗಿ ಕರ್ನಾಟಕವು ಇಡಿ ಭಾರತದಲ್ಲೇ ಅತಿ ಹೆಚ್ಚು ASDDO ಇರುವ ರಾಜ್ಯಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರಧಾನ ಕಾರಣ ಬೆಂಗಳೂರು ಪ್ರದೇಶ. ಬೆಂಗಳೂರಿನಲ್ಲಿ ಅಂದಾಜು 1.03 ಕೋಟಿ ಮತದಾರರಿದ್ದು ಅಂದಾಜು 50 ಲಕ್ಷ ಜನರು ಹೊರದಬ್ಬಲ್ಪಟ್ಟಿದಾರೆ. ಹೀಗಾಗಿ ಬೆಂಗಳುರಿನ ಸರಾಸರಿ ASDDO ಶೇ. 46. ಇದರಿಂದಾಗಿ ಒಟ್ಟಾರೆ ಕರ್ನಾಟಕದ ಸರಾಸರಿಯು ಶೇ. 19.48 ಆಗಿದೆ. ಆದರೆ ಬೆಂಗಳೂರಿಗೆ ವಲಸೆ ಬರುವರು ಹಿಂದುಳಿದ ಜಿಲ್ಲೆಯವರೇ ಆಗಿರುತ್ತಾರೆ. ಬೆಂಗಳೂರನ್ನು ಹೊರತು ಪಡಿಸಿದರೆ ಉಳಿದ ಕರ್ನಾಟಕದ ASDDOಸರಾಸರಿ ಶೇ. 13.56 ಆಗಿದೆ. ಅದು ಕೂಡ ಉಳಿದ ರಾಜ್ಯಗಳಿಗಿಂತ ಹೆಚ್ಚೇ ಆಗಿದೆ.

ಈ ಲೇಖನದ ಜೊತೆಗೆ ಕೊಟ್ಟಿರುವ ಕೋಷ್ಟಕವು ಸ್ಪಷ್ಟಪಡಿಸುವಂತೆ ಬೆಂಗಳೂರನ್ನು ಹೊರತು ಪಡಿಸಿದಂತೆ ASDDO ಹೆಚ್ಚಿರುವ ಜಿಲ್ಲೆಗಳಲ್ಲಿ ಗೋವಿಂದರಾವ್ ಸಮಿತಿ ಗುರುತಿಸಿರುವಂತೆ ಅತ್ಯಂತ ಹಿಂದುಳಿದ ತಾಲೂಕುಗಳು ಹೆಚ್ಚಿರುವ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರುಗಳೇ ಪ್ರಮುಖವಾಗಿವೆ.

ಅಷ್ಟು ಮಾತ್ರವಲ್ಲ. ಈ ಜಿಲ್ಲೆಗಳ ASDDO ವರ್ಗೀಕರಣದಲ್ಲಿ Shifting-ಸ್ಥಳಾಂತರ ಪ್ರಮಾಣ ಶೇ.70-75ರಷ್ಟು!. ಏಕೆಂದರೆ ಈ ಜಿಲ್ಲೆಗಳಿಂದ ಬೆಂಗಳೂರು ಇತ್ಯಾದಿ ನಗರಗಳಿಗೆ ವಲಸೆ ಹೆಚ್ಚು. ಆದರೆ ಜಿಲ್ಲೆಗಳಲ್ಲೂ ಈ ಜನರು Shifted, ಬೆಂಗಳೂರಿನಲ್ಲೂ Shifted ಎಂದು ಗುರುತಿಸಲ್ಪಟ್ಟು ನಾಡಿನ ಪಟ್ಟಿಯಿಂದಲೇ ಹೊರಹಾಕಲ್ಪಟ್ಟಿದ್ದಾರೆ.

ಅಂದರೆ ಸಾರದಲ್ಲಿ ಹೆಚ್ಚು ಹಿಂದುಳಿದಿರುವಿಕೆ- ಹೆಚ್ಚು ವಲಸೆ - ಹೆಚ್ಚು ಡಿಲೀಶನ್ ಎಂಬ ಸೂತ್ರ ಕರ್ನಾಟಕದಲ್ಲೂ ಸಾಬೀತಾಗಿದೆ.

ಎಸ್‌ಸಿ-ಎಸ್‌ಟಿ ಅಸೆಂಬ್ಲಿ ಕ್ಷೇತ್ರಗಳು- ರಾಜ್ಯವಾರು ಸರಾಸರಿಗಿಂತ ಹೆಚ್ಚು ASDDO

ಲೇಖನದೊಳಗಿನ ಕೋಷ್ಟಕವು ಸ್ಪಷ್ಟಪಡಿಸುವಂತೆ ರಾಜ್ಯದ 36 ಎಸ್‌ಸಿ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ASDDO ಪ್ರಮಾಣ ಬೆಂಗಳೂರು ಹೊರತು ಪಡಿಸಿದ ರಾಜ್ಯವಾರು ASDDO ಪ್ರಮಾಣಕ್ಕಿಂತ ಹೆಚ್ಚಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಚಿತ್ತಾಪುರ, ಚಿಂಚೋಳಿ, ಔರಾದ್, ಗುಲ್ಬರ್ಗ ಗ್ರಾಮೀಣದಂತಹ ಎಸ್‌ಸಿ ಕ್ಷೇತ್ರಗಳಲ್ಲಿ Shifted ಪ್ರಮಾಣ ಶೇ.70-75!

ಹಾಗೆಯೇ 15 ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ASDDO ಬೆಂಗಳೂರು ಹೊರತುಪಡಿಸಿದ ಕರ್ನಾಟಕದ ಸರಾಸರಿಗಿಂತ ಹೆಚ್ಚು. ಮಸ್ಕಿ, ಮಾನ್ವಿ ಮತ್ತು ದೇವದುರ್ಗದಂತಹ ವಲಸೆ ಹೆಚ್ಚಿರುವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಶೇ. 65ರಷ್ಟು ಸ್ಥಳಾಂತರ-Shifted!

ಮತ್ತೊಂದು ರೀತಿಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು Permanently Shifted ಎಂದು ದಾಖಲಾಗಿರುವ 20 ಅಸೆಂಬ್ಲಿ ಕ್ಷೇತ್ರಗಳಲ್ಲಿ 14 ಎಸ್‌ಸಿ-ಎಸ್‌ಟಿ ಕ್ಷೇತ್ರಗಳಾಗಿವೆ. ಅಂದರೆ ಎಸ್‌ಸಿ-ಎಸ್‌ಟಿ ಹೆಚ್ಚಿರುವ ಶೇ. 70 ಕ್ಷೇತ್ರಗಳು.

ಹೊಟ್ಟೆಪಾಡಿಗೆ ವಲಸೆ ಹೋಗುತ್ತಿರುವುದಕ್ಕೆ ದಲಿತರನ್ನು ಎಸ್‌ಐಆರ್ ಪ್ರಕ್ರಿಯೆ ಬಲಿಹಾಕುತ್ತಿದೆ ಎಂಬುದಕ್ಕೆ ಇನ್ನು ಹೆಚ್ಚಿನ ಉದಾಹರಣೆ ಬೇಕೆ?

ಎಸ್‌ಐಆರ್ ಎಂಬುದು ಮತಪಟ್ಟಿ ಶುದ್ಧೀಕರಣವೂ ಅಲ್ಲ. ಪರಿಷ್ಕರಣೆಯೂ ಅಲ್ಲ. ಅದು ಮೋದಿ ಸರಕಾರ ಈ ದೇಶದ ದಲಿತ ದಮನಿತರ ನಾಗರಿಕತ್ವವನ್ನು ಕಿತ್ತುಕೊಳ್ಳುವ ಸಂಚು. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಮೂಲಕ ಸೃಷ್ಟಿಸಿದ ಗಣರಾಜ್ಯವನ್ನು ಒಳಗಿನಿಂದಲೇ ನಾಶ ಮಾಡಿ ಕಾರ್ಪೊರೇಟ್ ಹಿಂದುತ್ವ ರಾಷ್ಟ್ರವನ್ನು ಕಟ್ಟುವ ಬೃಹತ್ ಹುನ್ನಾರ. ಹೀಗಾಗಿಯೇ ಎಸ್‌ಐಆರ್ ಜೊತೆಜೊತೆಗೆ ಒಂದು ದೇಶ ಒಂದು ರಾಷ್ಟ್ರ, ಡಿಲಿಮಿಟೇಶನ್ ಇನ್ನಿತ್ಯಾದಿ ಸಾಲು ಸಾಲು ಪ್ರಹಾರಗಳಿಗೆ ಸಿದ್ಧತೆ ಮಾಡಿಕೊಂಡಿದೆ.

ಅದಕ್ಕಾಗಿ ಮೋದಿ ಸರಕಾರ ಈವರೆಗೆ ಇಲ್ಲದಿದ್ದ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅನರ್ಹ ಮತದಾರರನ್ನು ಹೊರಹಾಕುವ ನೆಪದಲ್ಲಿ ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರತೀ ರಾಜ್ಯದಲ್ಲೂ ಅದು ಅರ್ಹ ಅದರಲ್ಲೂ ದಲಿತ-ದಮನಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಹೊರಹಾಕುವ ಪ್ರಕ್ರಿಯೆಯೆಂದು ಪದೇ ಪದೇ ಸಾಬೀತು ಮಾಡುತ್ತಿದೆ.

ಮುಸ್ಲಿಮರು ಹೆಚ್ಚಿದ್ದರೆ ASDDO ಮತ್ತು Absent ವರ್ಗ ಹೆಚ್ಚೇಕೆ?

ಲೇಖನದ ಜೊತೆಗಿರುವ ಕೋಷ್ಟಕವು ಸ್ಪಷ್ಟಪಡಿಸುವಂತೆ ಕರ್ನಾಟಕದಲ್ಲಿ ಮುಸ್ಲಿಮ್ ಜನಸಂಖ್ಯೆ ಸಾಪೇಕ್ಷವಾಗಿ ಹೆಚ್ಚಿರುವ 20 ಅಸೆಂಬ್ಲಿ ಕ್ಷೇತ್ರಗಳಲ್ಲಿ ರಾಮನಗರ, ಶಿಗ್ಗಾವಿ ಮತ್ತು ಕರಾವಳಿ ಪ್ರಾಂತದ ಬಂಟ್ವಾಳ, ಭಟ್ಕಳ ಮತ್ತು ಮಂಗಳೂರನ್ನು ಹೊರತುಪಡಿಸಿದರೆ ಉಳಿದ 15 ಅಸೆಂಬ್ಲಿ ಕ್ಷೇತ್ರಗಳಲ್ಲಿ ASDDO ಪ್ರಮಾಣವು ಬೆಂಗಳೂರು ಪ್ರಾಂತವಾಗಿದ್ದರೆ ಬೆಂಗಳೂರು ಸರಾಸರಿಗಿಂತ ಜಾಸ್ತಿ, ಬೆಂಗಳೂರು ಹೊರಗಿನ ಕ್ಷೇತ್ರಗಳಾಗಿದ್ದರೆ ಬೆಂಗಳೂರು ಹೊರತು ಪಡಿಸಿದ ರಾಜ್ಯದ ಸರಾಸರಿಗಿಂತ (ಶೇ.13.56) ಜಾಸ್ತಿ. ಮುಸ್ಲಿಮ್ ಕ್ಷೇತ್ರಗಳಲ್ಲಿ ಇನ್ನೊಂದು ವಿಚಿತ್ರ ಸಂಗತಿ ಎಂದರೆ ಇತರ ಕ್ಷೇತ್ರಗಳಿಗಿಂತ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳ ASDDO ಪ್ರಮಾಣದಲ್ಲಿ Absent ಪ್ರಮಾಣ ಅತೀ ಹೆಚ್ಚು!. ನರಸಿಂಹರಾಜದ ASDDOದಲ್ಲಿ ಶೇ.40ರಷ್ಟು, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಶೇ. 53, ಬಿಜಾಪುರ ನಗರ ಶೇ. 48Absent ವರ್ಗದಲ್ಲಿವೆ. ಇದು ಹಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟಿಹಾಕುತ್ತಿವೆ.

ಎಸ್‌ಐಆರ್ ಎಂಬುದು ದಲಿತ ದಮನಿತ ಮತ್ತು ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರದಬ್ಬುವ ಹುನ್ನಾರವೇ ವಿನಾ ವಿದೇಶಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ಅಲ್ಲ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕೆ?

ಎಸ್‌ಐಆರ್ ರದ್ದು ಮಾಡಲು ಬೃಹತ್ ಜನಚಳವಳಿ ಕಟ್ಟುವುದನ್ನು ಬಿಟ್ಟು ಬೇರೆ ದಾರಿ ಇದೆಯೇ?

Tags

evidenceArgumentSIRKarnataka
share
ಶಿವಸುಂದರ್
ಶಿವಸುಂದರ್
Next Story
X