Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ‘ಸಿದ್ದರಸರು’ ಎಸಗಿರುವ 12 ಸಾಮಾಜಿಕ...

‘ಸಿದ್ದರಸರು’ ಎಸಗಿರುವ 12 ಸಾಮಾಜಿಕ ಅನ್ಯಾಯಗಳು..

ಶಿವಸುಂದರ್ಶಿವಸುಂದರ್14 Jan 2026 9:03 AM IST
share
‘ಸಿದ್ದರಸರು’ ಎಸಗಿರುವ 12 ಸಾಮಾಜಿಕ ಅನ್ಯಾಯಗಳು..
ಫ್ಯಾಶಿಸ್ಟ್ ಕಾಲಘಟ್ಟದಲ್ಲಿ ಸಾಮಾಜಿಕ ನ್ಯಾಯದ ಭ್ರಾಂತಿಗಳು!

ಸಿದ್ದು 2.0 ಸರಕಾರದ ಸಾಧನೆಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷಿತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಸಿದ್ದು ಅಭಿಮಾನಿಗಳು ಕುರುಡರಾಗಿ, ಫಲಾನುಭವಿಗಳು ಋಣಿಗಳಾಗಿ, ಅವರನ್ನು ಎರಡನೇ ದೇವರಾಜ ಅರಸರೆಂದು ಹೊಗಳಾಡುತ್ತಿದ್ದಾರೆ. ಪ್ರಗತಿಪರರ ಬಹುದೊಡ್ಡ ಗುಂಪು ಉಳಿದಿರುವ ಏಕೈಕ ದಿಕ್ಕು ಎಂಬ ಅನಿವಾರ್ಯತೆ ಮತ್ತು ಅಸಹಾಯಕತೆಯಿಂದಾಗಿ ಇದೇ ಸಿದ್ದು ಸರಕಾರ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್‌ನ ಮೃದು ಹಿಂದುತ್ವ, ಮನುವಾದ ಮತ್ತು ಕಾರ್ಪೊರೇಟ್ ಪರತೆಯಿಂದಾಗಿ ಮಾಡಿರುವ ಹಲವು ಮಹಾ ಸಾಮಾಜಿಕ ಅನ್ಯಾಯಗಳ ಬಗ್ಗೆ ಗಾಂಧಾರಿ ಕುರುಡು ವ್ಯಕ್ತ ಪಡಿಸುತ್ತಿವೆ.

ಇದೇ ಜನವರಿ 7ರಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 2,793 ದಿನಗಳನ್ನು ಪೂರೈಸಿ ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರೆಂಬ ದೇವರಾಜ ಅರಸರ ದಾಖಲೆಯನ್ನು ಮುರಿದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಅವರ ಸಾಧನೆಯ ಬಗ್ಗೆ ಜಾಹೀರಾತುಗಳ, ಪ್ರಗತಿಪರರ ಹೇಳಿಕೆಗಳ ಮಹಾಪೂರ ಹರಿಯತೊಡಗಿದೆ. ಸ್ವಯಂ ಸಿದ್ದರಾಮಯ್ಯನವರೇ ‘ಬೇಡ’ವೆಂದರೂ ದೇವರಾಜ ಅರಸರ ಮತ್ತು ಸಿದ್ದರಾಮಯ್ಯನವರ ಆಳ್ವಿಕೆಯ ಹೋಲಿಕೆಗಳು ನಡೆಯತೊಡಗಿವೆ.

ದೇವರಾಜ ಅರಸರಂತೆ ಸಿದ್ದರಾಮಯ್ಯನವರು ಶೋಷಿತ ಸಮುದಾಯಗಳಲ್ಲಿ ಭರವಸೆಯ ಆಶಾಕಿರಣಗಳನ್ನು ಹುಟ್ಟಿಸಿದ್ದರು ಎಂಬುದರಲ್ಲಿ ಒಂದಷ್ಟು ಸತ್ಯವಿದೆ. ಹಿಂದುತ್ವವಾದಿ ರಾಜಕಾರಣಿಗಳು ಬಹಿರಂಗವಾಗಿ ‘ಕಡಿ-ಕೊಲ್ಲು’ ರಾಜಕಾರಣ ಹಾಗೂ ಸಾಮಾಜಿಕ ನ್ಯಾಯವನ್ನು ನಿರಾಕರಿಸಿ ಸಂವಿಧಾನವನ್ನು ಬುಡಮೇಲುಗೊಳಿಸುವ ರಾಜಕಾರಣ ಮಾಡುತ್ತಿರುವಾಗ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾದ, ಸಂವಿಧಾನ ಪರವಾದ, ಕೋಮು ಸೌಹಾರ್ದ ಪರವಾದ ಸ್ಪಷ್ಟ ಹಾಗೂ ಖಡಕ್ ಮಾತುಗಳು ದಲಿತ ಮತ್ತು ದಮನಿತರಲ್ಲಿ ಭರವಸೆಯನ್ನು ಹುಟ್ಟಿಸಿದ್ದು ನಿಜ.

ಆದರೆ ಆ ಭರವಸೆಗಳನ್ನು ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ಈಡೇರಿಸಿದೆಯೇ ಅಥವಾ ಬಿಜೆಪಿ ಕಾಲದ ವಂಚನೆಗಳನ್ನು ಮುಂದುವರಿಸಿವೆಯೇ? ಇನ್ನಷ್ಟು ಒಳಹೋಗಿ ಕೇಳಬೇಕಾದ ಪ್ರಶ್ನೆ, ಬಿಜೆಪಿ ಬಹಿರಂಗವಾಗಿ ಮಾಡುತ್ತಿರುವ ವಂಚನೆ ಹಾಗೂ ದ್ರೋಹದ ಮೂಲಗಳೆಲ್ಲ 1991ರ ನಂತರ ಕಾಂಗ್ರೆಸ್ ನೇತೃತ್ವದಲ್ಲೇ ಜಾರಿಯಾದ ಕಾರ್ಪೊರೇಟ್‌ವಾದಿ ಆರ್ಥಿಕತೆ ಮತ್ತು ಅಂತರಂಗದ ಮೃದು ಹಿಂದುತ್ವದಲ್ಲೇ ಇರಲಿಲ್ಲವೇ? ಸಿದ್ದರಾಮಯ್ಯನವರು ಅಂತಹ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಅಲ್ಲವೇ?

ಹೀಗೆ ಕಾಂಗ್ರೆಸ್‌ನ ಪ್ರತ್ಯಕ್ಷ ಹಾಗೂ ಪರೋಕ್ಷ ಪೋಷಣೆಯೊಂದಿಗೆ ಆಳವಾಗಿ ಅಗಲವಾಗಿ ಬೆಳೆದು ನಿಂತಿರುವ ಬ್ರಾಹ್ಮಣಶಾಹಿ ಹಿಂದುತ್ವ ನಾಡಿನ ರಾಜಕೀಯ, ಸಮಾಜ ಮತ್ತು ಆರ್ಥಿಕತೆಯನ್ನು ಫ್ಯಾಶೀಕರಿಸಿರುವಾಗ ಕಾಂಗ್ರೆಸ್‌ನ ಮುಖ್ಯಮಂತ್ರಿಯಾಗಿ ಘೋಷಣೆ, ಭರವಸೆ ಹಾಗೂ ಅಲ್ಲಲ್ಲಿ ಕೆಲವು ಸೀಮಿತ ಪರಿಹಾರಗಳನ್ನು ಕೊಡ ಬಹುದೇ ವಿನಾ ಸಾಮಾಜಿಕ ನ್ಯಾಯದ ಮತ್ತು ಕೋಮು ಸೌಹಾರ್ದ ಹಾಗೂ ಕಲ್ಯಾಣ ಆರ್ಥಿಕತೆಯ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವೇ?

ಸಿದ್ದು 2.0 ಸರಕಾರದ ಸಾಧನೆಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷಿತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಸಿದ್ದು ಅಭಿಮಾನಿಗಳು ಕುರುಡರಾಗಿ, ಫಲಾನುಭವಿಗಳು ಋಣಿಗಳಾಗಿ, ಅವರನ್ನು ಎರಡನೇ ದೇವರಾಜ ಅರಸರೆಂದು ಹೊಗಳಾಡುತ್ತಿದ್ದಾರೆ. ಪ್ರಗತಿಪರರ ಬಹುದೊಡ್ಡ ಗುಂಪು ಉಳಿದಿರುವ ಏಕೈಕ ದಿಕ್ಕು ಎಂಬ ಅನಿವಾರ್ಯತೆ ಮತ್ತು ಅಸಹಾಯಕತೆಯಿಂದಾಗಿ ಇದೇ ಸಿದ್ದು ಸರಕಾರ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್‌ನ ಮೃದು ಹಿಂದುತ್ವ, ಮನುವಾದ ಮತ್ತು ಕಾರ್ಪೊರೇಟ್ ಪರತೆಯಿಂದಾಗಿ ಮಾಡಿರುವ ಹಲವು ಮಹಾ ಸಾಮಾಜಿಕ ಅನ್ಯಾಯಗಳ ಬಗ್ಗೆ ಗಾಂಧಾರಿ ಕುರುಡು ವ್ಯಕ್ತ ಪಡಿಸುತ್ತಿವೆ.

ವಾಸ್ತವವಾಗಿ ಸಿದ್ದು ಸರಕಾರ ಮಾಡಿರುವ ಈ ಹನ್ನೆರಡು ಸಾಮಾಜಿಕ ಅನ್ಯಾಯಗಳು ಕರ್ನಾಟಕದಲ್ಲಿ ಸಂಘಿ ಫ್ಯಾಶಿಸಂನ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಹಾಗೂ ಫ್ಯಾಶಿಸಂ ವಿರುದ್ಧದ ಸಂಘರ್ಷದಲ್ಲಿ ಸಿದ್ದು ನೇತೃತ್ವದ ಕಾಂಗ್ರೆಸ್ ಕೂಡ ಮಿತ್ರನಾಗಲಾರದು ಎಂಬ ವಾಸ್ತವವನ್ನು ಕುರುಡರಿಗೂ ಕಣ್ಣಿಗೆ ರಾಚುವಂತೆ ಅರಹುತ್ತಿದೆ. ಗಾಂಧಾರಿ ಕುರುಡನ್ನು ಕಳಚಿ ಗಮನಿಸಿದರೆ ಫ್ಯಾಶಿಸಂ ನ ಬೇರುಗಳು, ಅದನ್ನು ಕಡಿಯಬೇಕಾದ ದಾರಿಗಳು ಗೋಚರಿಸಬಹುದು.

ಸಿದ್ದು ಸರಕಾರದ 12 ಮಹಾ ಸಾಮಾಜಿಕ ಅನ್ಯಾಯಗಳು

1. ಸಿದ್ದು ಸರಕಾರಕ್ಕೆ ಸಂಘಿ ಶ್ರೀಗಳ ಆಶೀರ್ವಚನ ಮತ್ತು ಮಂತ್ರಿಗಳಿಂದ ಪಾದಪೂಜೆ

ಅಧಿಕಾರಕ್ಕೆ ಬಂದಕೂಡಲೇ ಹೊಸ ಶಾಸಕರ ತರಬೇತಿಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸ್ಪೀಕರ್‌ರಿಂದ ಸಂಘಿ ಮನಸ್ಥಿತಿಯ ಶ್ರೀಗಳಿಂದ ಆಶೀರ್ವಚನ ಕೊಡಿಸಿದರು. ಅದರಲ್ಲಿ ರವಿಶಂಕರ ಸ್ವಾಮೀಜಿ, ವೀರೆಂದ್ರ ಹೆಗ್ಗಡೆಯವರೂ ಇದ್ದರು. ಮುಖ್ಯಮಂತ್ರಿ ಸಿದ್ದು ಇದಕ್ಕೆ ಯಾವ ಆಕ್ಷೇಪ ವ್ಯಕ್ತಪಡಿಸುವ ಇರಾದೆಯನ್ನು ತೋರಲಿಲ್ಲ. ಬದಲಿಗೆ ಅವರೊಂದಿಗೆ ವೇದಿಕೆ ಹಂಚಿಕೊಂಡು ಆಶೀರ್ವಚನದಲ್ಲಿ ಪಾಲ್ಗೊಂಡರು.. ಅದಾದ ಕೆಲವೇ ದಿನಗಳಲ್ಲಿ ಗೃಹಮಂತ್ರಿ ಪರಮೇಶ್ವರ್ ಅವರು ಸಂಘಿಗಳ ಗುರು ಪೇಜಾವರ ಶ್ರೀಗಳನ್ನು ಸ್ವಗೃಹಕ್ಕೆ ಕರೆದು ಪಾದಪೂಜೆ ಮಾಡಿದ್ದೇ ಅಲ್ಲದೆ, ಬಿಜೆಪಿ ಕಾಲದಲ್ಲಿ ಇಡೀ ಕರ್ನಾಟಕದಲ್ಲಿ ಹಿಂಸಾತ್ಮಕ ಅರಾಜಕತೆ ಸೃಷ್ಟಿಸಿದ್ದ ಬಜರಂಗದಳವನ್ನು ನಿಷೆೇಧಿಸುವುದಿಲ್ಲ ಎಂಬ ಸ್ಪಷ್ಟ ಭರವಸೆಯನ್ನು ನೀಡಿದರು. ಇದರ ಹಿಂದೆ ಸಿದ್ದು ಸರಕಾರ ಹಿಂದೂ ಪರ ಎಂಬ ಸಂದೇಶ ಕಳಿಸುವ ತುರ್ತಿತ್ತೇ ಹೊರತು ಬೇರೆ ಯಾವ ರಾಜಕಾರಣವೂ ಇರಲಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದರೂ ಇದು ಕಾಂಗ್ರೆಸ್‌ನ ಅಸಲಿ ರಾಜಕಾರಣ. ವ್ಯಕ್ತಿಯಾಗಿ ಸಿದ್ದು ಏನೇ ಆಗಿದ್ದರೂ ಅವರು ಇಂತಹ ಸಂಘೀ ಪರ ಕಾರ್ಯಕ್ರಮ ನಡೆಸಿದ ಶಾಸಕಾಂಗ ಪಕ್ಷದ ನಾಯಕರು ಮತ್ತು ಆ ಪಕ್ಷದ ಮುಖ್ಯಮಂತ್ರಿ ಅಷ್ಟೇ.

2. ಬಾಬಾಬುಡಾನ್ ದರ್ಗಾದಲ್ಲಿ ಸಂಘಿಗಳ ಅಜೆಂಡಾ ಜಾರಿ

ಸಿದ್ದು ಸರಕಾರ ಈ ನಾಡಿನ ಸೌಹಾರ್ದ ಸಂಸ್ಕೃತಿಗೆ ಎಸಗಿದ ಬಹುದೊಡ್ಡ ಅನ್ಯಾಯವಿದು. ರಾಜ್ಯದ ಅನನ್ಯ ಸೌಹಾರ್ದ ತಾಣವಾದ ಬಾಬಾಬುಡಾನ್ ದರ್ಗಾವನ್ನು ದತ್ತಾತ್ರೇಯ ದೇವಸ್ಥಾನವೆಂದು ಅದನ್ನು ವಿಮೋಚನೆ ಮಾಡುತ್ತೇವೆಂದು ಸಂಘಿಗಳು 1990ರ ದಶಕದಿಂದ ನಾಡಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದರು. ಸಂಘಿಗಳನ್ನು ಮಟ್ಟ ಹಾಕಲು 1994-99ರ ತನಕ ಅಧಿಕಾರದಲ್ಲಿದ್ದ ಜನತಾದಳ ಸರಕಾರವಾಗಲೀ, 1999-2003ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವಾಗಲೀ ಯಾವುದೇ ಕ್ರಮ ತೆಗೆದುಕೊಳ್ಳದೆ ಅವರ ಆಗ್ರಹಗಳಿಗೆ ಮಣಿಯುತ್ತಾ ಹೋದವು. ನಾಡಿನ ಸೌಹಾರ್ದಪ್ರಿಯ ಸೆಕ್ಯುಲರ್, ಪ್ರಗತಿಪರ, ದಲಿತ, ರೈತ ಸಂಘಟನೆಗಳು ಸಂಘಿಗಳ ಈ ಸಂಚಿನ ವಿರುದ್ಧ ಬೀದಿಗಳಲ್ಲೂ, ಕೋರ್ಟಿನಲ್ಲೂ ಹೋರಾಟ ನಡೆಸಿದ್ದವು. ಇದರ ಭಾಗವಾಗಿಯೇ ಸುಪ್ರೀಂ ಕೋರ್ಟ್ 2015ರಲ್ಲಿ, ಕರ್ನಾಟಕ ರಾಜ್ಯ ಸರಕಾರವೇ ಎರಡೂ ವಾದಗಳನ್ನು ಆಲಿಸಿ, ಅಧ್ಯಯನ ನಡೆಸಿ ಒಂದು ತೀರ್ಮಾನ ತೆಗೆದುಕೊಳ್ಳಲು ಆದೇಶಿಸಿತು. ಅದರಂತೆ ಆಗ ಮೊದಲ ಬಾರಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದು ಸರಕಾರವೇ ಅದರ ಬಗ್ಗೆ ಅಧ್ಯಯನ ನಡೆಸಿ ಶಿಫಾರಸು ಮಾಡಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತು. ಅದು ಕೊಟ್ಟ ಶಿಫಾರಸಿನಂತೆ ಸಿದ್ದು ಸರಕಾರವೇ 2018ರಲ್ಲಿ ಬಾಬಾಬುಡಾನ್ ದರ್ಗ ಒಂದು ದರ್ಗಾ ಆಗಿತ್ತು-ಆಗಿದೆ ಎಂದು ಘೋಷಿಸಿತು ಮತ್ತು ಸಂಘಿಗಳ ಬೇಡಿಕೆಯಂತೆ ಅಲ್ಲಿ ಹಿಂದೂ ಅರ್ಚಕನ ನೇಮಕಾತಿ ಮಾಡುವುದರಿಂದ ದರ್ಗಾದ ಧಾರ್ಮಿಕ ಸ್ವರೂಪ ಬದಲಾಗುತ್ತದೆ ಮತ್ತು ಧಾರ್ಮಿಕ ಕೇಂದ್ರಗಳ ಧಾರ್ಮಿಕ ಸ್ವರೂಪಗಳನ್ನು ಬದಲಿಸದೆ 1947ರಲ್ಲಿ ಯಾವ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕೆಂಬ 1991ರ ಧಾರ್ಮಿಕ ಕೇಂದ್ರಗಳ ವಿಶೇಷ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತೀರ್ಮಾನಿಸಿ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಮತ್ತೆ ಸಂಘಿಗಳು ಹೈಕೋರ್ಟಿನಲ್ಲಿ ಪ್ರಶ್ನಿಸಿದರು. 2021 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇರುವಾಗ ಹೈಕೋರ್ಟು ಸಿದ್ದು ಸರಕಾರದ ಆದೇಶವನ್ನು ರದ್ದುಗೊಳಿಸಿತು. ಮತ್ತೊಮೆ ಅಧ್ಯಯನ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಕರ್ನಾಟಕ ಸರಕಾರಕ್ಕೆ ಅದೇಶಿಸಿತು. ಬಿಜೆಪಿ ಸರಕಾರ ಹಿಂದೂ ಅರ್ಚಕನನ್ನು ನೇಮಿಸಿತು. ಅದರ ವಿರುದ್ಧ ದರ್ಗಾದ ಶಾಖಾದ್ರಿ ಸುಪ್ರೀಂ ಕೋರ್ಟಿಗೆ ಹೋದರು. ಸುಪ್ರೀಂ ಮತ್ತೊಮ್ಮೆ 2023ರಲ್ಲಿ ಕರ್ನಾಟಕದಲ್ಲಿ ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗ ರಾಜ್ಯ ಸರಕಾರವೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಆದೇಶಿಸಿತು.

ಆದರೆ 2025ರ ಫೆಬ್ರವರಿಯಲ್ಲಿ ಈ ಬಗ್ಗೆ ಸಿದ್ದು ಸರಕಾರ ಸುಪ್ರೀಂಗೆ ಬಾಬಾಬುಡಾನ್ ದರ್ಗಾದಲ್ಲಿ ಹಿಂದೂ ಅರ್ಚಕರ ನೇಮಕಾತಿ ಸೂಕ್ತವಾಗಿದೆ ಎಂದು ಅಫಿಡವಿಟ್ ಸಲ್ಲಿಸಿತು. ಆ ಮೂಲಕ 2018ರಲ್ಲಿ ತಾನು ತೆಗೆದುಕೊಂಡ ತೀರ್ಮಾನಕ್ಕೆ ತದ್ವಿರುದ್ಧವಾಗಿ ಸಂಘಿಗಳನ್ನು ಓಲೈಸುವ ತೀರ್ಮಾನ ತೆಗೆದುಕೊಂಡು ನಾಡಿಗೆ ಬಹುದೊಡ್ಡ ಅನ್ಯಾಯ ಮಾಡಿದೆ.

ಈ ತೀರ್ಮಾನ ತೆಗೆದುಕೊಂಡ ಸರಕಾರದ ಮುಖ್ಯಸ್ಥರು ಸಿದ್ದರಾಮಯ್ಯನವರು.

3. SCSP, TSP ನಿಧಿಯ ದುರ್ಬಳಕೆ

2023ರಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದದ್ದು ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ, ದಲಿತ ಮತ್ತು ಮುಸ್ಲಿಮ್ ವಿರೋಧಿ ನಿಲುವುಗಳು ಮತ್ತು ಅದರ ಜೊತೆಗೆ ಕಾಂಗ್ರೆಸ್ ಪಕ್ಷ ಮುಂದಿಟ್ಟ ಐದು ಗ್ಯಾರಂಟಿಗಳು. ಸಿದ್ದರಾಮಯ್ಯನವರು ಈ ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲವನ್ನು ಆಡಳಿತ ಸುಧಾರಣೆ, ಆರ್ಥಿಕ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ನಿಗ್ರಹದ ಮೂಲಕ ಪೂರೈಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು ಮತ್ತು ಮುಖ್ಯಮಂತ್ರಿಯಾದ ಮೇಲೂ ಅದನ್ನೇ ಪುನರುಚ್ಚರಿಸಿದರು.

ಅದೇ ಸಮಯದಲ್ಲಿ ಕೇಂದ್ರದ ಮೋದಿ ಸರಕಾರವೂ ಅಕ್ಕಿ ಕೊಡದೆ, ಕೇಂದ್ರ ತೆರಿಗೆಯಲ್ಲಿನ ರಾಜ್ಯದ ಪಾಲಿನಲ್ಲೂ, ಅನುದಾನಗಳಲ್ಲೂ ತಾರತಮ್ಯ ಮಾಡುತ್ತಾ ಕಿರುಕುಳ ಕೊಟ್ಟಿದ್ದು ನಿಜ. ಆದರೆ ಅದು ರಾಜ್ಯದ ಬಜೆಟ್‌ನ ಶೇ. 5ರಷ್ಟು ಮಾತ್ರ.

ಆದರೆ ಸಿದ್ದು ಸರಕಾರ ಕಳೆದ ಎರಡೂವರೆ ವರ್ಷಗಳಲ್ಲಿ ತಾನು ಭರವಸೆ ನೀಡಿದಂತೆ ಗ್ಯಾರಂಟಿಗಳಿಗೆ ಸಂಪನ್ಮೂಲ ಪಡೆಯುವ ಮಾರ್ಗವೆಂದು ಹೇಳಿದ್ದ ಆಡಳಿತ ಸುಧಾರಣೆಯಾಗಲೀ, ಭ್ರಷ್ಟಾಚಾರ ನಿಗ್ರಹವನ್ನಾಗಲೀ ಮಾಡಲೇ ಇಲ್ಲ. ಬಿಜೆಪಿ ಕಾಲದ ಭ್ರಷ್ಟಾಚಾರದ ಬಗ್ಗೆ ದೂರು ಸಲ್ಲಿಸಿದ್ದ ಕಂಟ್ರಾಕ್ಟುದಾರರೇ ಕಾಂಗ್ರೆಸ್ ಕಾಲದಲ್ಲಿ ಅದೇ ಮುಂದುವರಿದಿದೆ ಎಂದು ದೂರುವಂತೆ ಆಗಿದೆ. ಇನ್ನು ಅಭಿವೃದ್ಧಿ ಮಾದರಿಯಲ್ಲೂ ಉದ್ಯಮಗಳ ಮೇಲೆ ತೆರಿಗೆ ಹಾಕುವುದಕ್ಕಿಂತ ಅವುಗಳಿಗೆ ಬಜೆಟ್‌ನಿಂದಲೇ ಸಬ್ಸಿಡಿ ಕೊಡುವ, ತೆರಿಗೆ ವಿನಾಯಿತಿ, ಬಿಟ್ಟಿ ಭೂಮಿ ಇತ್ಯಾದಿ ಕೊಡುವ ಮಾರ್ಗ ಅನುಸರಿಸಿದ್ದರಿಂದ ಗ್ಯಾರಂಟಿಗಳಿಗೆ ಬೇಕಾದ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣ ಆಗಲೇ ಇಲ್ಲ.

ಹೀಗಾಗಿ ಸಿದ್ದು ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾರಂಟಿಗಳಿಗೆ ಸಂಪನ್ಮೂಲ ಒದಗಿಸಿಕೊಳ್ಳಲು SCSP, TSP ನಿಧಿಯ ದುರ್ಬಳಕೆ ಮಾಡಲು ಪ್ರಾರಂಭಿಸಿದೆ. ಇದು ಸಾಮಾಜಿಕ ನ್ಯಾಯದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದು ಸರಕಾರ ಮಾಡುತ್ತಿರುವ ಅತಿ ದೊಡ್ಡ ಸಾಮಾಜಿಕ ಅನ್ಯಾಯ.

ಹಾಗೆ ನೋಡಿದರೆ ಈ ರಾಜ್ಯದಲ್ಲಿSCSP, TSP ಗೆ ಶಾಸನಾತ್ಮಕ ಸ್ವರೂಪವನ್ನು ಕೊಟ್ಟಿದ್ದೇ ಸಿದ್ದು ಸರಕಾರ. ಯಾವ ಬಿಜೆಪಿ ಸರಕಾರಗಳಲ್ಲೂ ಈ ಬಗೆಯ ದಲಿತ ಪರ ಶಾಸನಗಳಿಲ್ಲವಾದ್ದರಿಂದ ಬಿಜೆಪಿಗರಿಗೆ ಈ ಅನ್ಯಾಯದ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಇಲ್ಲ ಎನ್ನುವುದು ನಿಜ. ಆದರೆ ಈ ನಾಡಿನ ಜನತೆಗೆ ಈ ಅನ್ಯಾಯವನ್ನು ಪ್ರಶ್ನಿಸುವ ಅಧಿಕಾರವಿದ್ದೇ ಇದೆ.

ವಾಸ್ತವವಾಗಿ ಒಟ್ಟಾರೆ ಗ್ಯಾರಂಟಿ ವೆಚ್ಚದ ಶೇ. 24ರಷ್ಟು ಹಣವನ್ನು SCSP, TSP ಯಿಂದ ಪೂರೈಸಲಾಗುತ್ತಿದೆ. ಅಷ್ಟು ಮಾತ್ರವಲ್ಲ ಅದಕ್ಕೆ ಈ ಕಾಯ್ದೆಯ 7(ಸಿ)ಯಲ್ಲಿ ಅವಕಾಶವಿದೆಯೆಂಬ ವಿತಂಡವಾದವನ್ನು ಸಿದ್ದು ಸರಕಾರ ಮಾಡುತ್ತಿದೆ.

SಅSP, ಖಿSP ಕಾಯ್ದೆಯ 7 (ಎ) ಪ್ರಕಾರ ಆ ನಿಧಿಯನ್ನು ದಲಿತ ವ್ಯಕ್ತಿಗಳ ನಿರ್ದಿಷ್ಟ ಕಲ್ಯಾಣಕ್ಕೆ, 7 (ಬಿ) ದಲಿತ ಸಮುದಾಯಕ್ಕೆ ಮಾತ್ರ ಲಾಭವಾಗುವಂತೆ ಸಾಮುದಾಯಿಕ ಆಸ್ತಿ ನಿರ್ಮಾಣಕ್ಕೆ, 7 (ಸಿ) ಸರಕಾರದ ಸಾಮಾನ್ಯ ಕಲ್ಯಾಣ ಕಾರ್ಯಕ್ರಮಗಳಲ್ಲಿ ದಲಿತ ಪಾಲಿನ ವೆಚ್ಚವನ್ನು ನಿಭಾಯಿಸಲು ಮತ್ತು 7 (ಡಿ) ದಲಿತರಿಗೆ ಪರೋಕ್ಷವಾಗಿ ಬಳಕೆಯಾಗುತ್ತಿದ್ದರೂ ಅಂತಹ ಸಾಮಾನ್ಯ ಕಾರ್ಯಕ್ರಮಗಳಿಗೆ ಈ ನಿರ್ದಿಷ್ಟ ನಿಧಿಯನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಆದರೆ ಇದೇ ಸಿದ್ದು ಸರಕಾರ ಈ ಯೋಜನೆಯು ಸಾಮಾನ್ಯ ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ. ಬದಲಿಗೆ ದಲಿತ-ಆದಿವಾಸಿಗಳಿಗೆ ಬಡತನ ನಿರ್ಮೂಲನ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಳ್ಳಲು ಬೇಕಿರುವ ಸಾಮರ್ಥ್ಯ ಒದಗಿಸುವ ನಿರ್ದಿಷ್ಟ, ಪ್ರತ್ಯೇಕ ಮತ್ತು ಪೂರಕ ಕಾರ್ಯಕ್ರಮವೆಂದು ಒಪ್ಪಿ 7 (ಡಿ)ಯನ್ನು ರದ್ದು ಮಾಡಿತು. ಅದೇ ಕಾರಣಕ್ಕೆ 7 (ಸಿ)ಯನ್ನು ರದ್ದು ಮಾಡಬೇಕಿತ್ತು. ಅಸಲು ಶಾಸನ ರೂಪಿಸುವಾಗ 7 (ಸಿ) ಮತ್ತು 7 (ಡಿ)ಗಳು ಇರಲೇ ಬಾರದಿತ್ತು. ಆದರೆ ಸಿದ್ದು ಸರಕಾರ ಗ್ಯಾರಂಟಿಗಳಿಗೆ ಸಂಪನ್ಮೂಲ ಕೊರತೆ ಉಂಟಾಗುತ್ತಿದ್ದಂತೆ ಅದೇ 7 (ಸಿ)ಯನ್ನು ಬಳಸಿಕೊಂಡು SCSP, TSP ಸಂಪನ್ಮೂಲವನ್ನು ಗ್ಯಾರಂಟಿಗಳಿಗೆ ಬಳಸುತ್ತ ದಲಿತ-ಆದಿವಾಸಿ ಸಮುದಾಯಗಳಿಗೆ ಅತ್ಯಂತ ದೊಡ್ಡ ಸಾಮಾಜಿಕ ಅನ್ಯಾಯ ಮಾಡುತ್ತಿದೆ.

ಇದು ಸಿದ್ದರಾಮಯ್ಯನವರು ವೈಯಕ್ತಿಕವಾಗಿ ದಲಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದೇನೂ ಅಲ್ಲ. ಇದು ಅವರ ಸರಕಾರ ಮತ್ತು ಎಲ್ಲಾ ಪಕ್ಷಗಳ ಸರಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಸೃಷ್ಟಿಸುವ ಸಹಜ ವೈರುಧ್ಯ.

ಒಂದು ಕಲ್ಯಾಣ ರಾಜ್ಯದಲ್ಲಿ ಇದ್ದವರ ಮೇಲೆ, ಬಂಡವಾಳಶಾಹಿಗಳ ಮೇಲೆ ಹೆಚ್ಚಿನ ತೆರಿಗೆ ಹಾಕಿ ಇಲ್ಲದವರಿಗೆ ಸೌಲಭ್ಯವನ್ನು ಕಲ್ಪಿಸಲು ಬೇಕಾದ ಸಂಪನ್ಮೂಲ ರೂಢಿಸಿಕೊಳ್ಳಬೇಕು. ಆದರೆ ಇಂದು ಕಾಂಗ್ರೆಸ್ ಅನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳ ಆರ್ಥಿಕ ನೀತಿಗಳು ಕಾರ್ಪೊರೇಟ್‌ಗಳ ಹೂಡಿಕೆಗೆ ಬೇಕಾದ ಅನುಕೂಲಕರ ವಾತಾವರಣವನ್ನು ಕಲ್ಪಿಸಲು ಕಾರ್ಪೊರೇಟ್‌ಗಳಿಗೆ ಸಬ್ಸಿಡಿ ಮತ್ತು ತೆರಿಗೆ ರಿಯಾಯಿತಿ ನೀತಿಗಳನ್ನು ಅನುಸರಿಸಲು ಪೈಪೋಟಿ ಮಾಡುತ್ತವೆ. ಸಿದ್ದು ಮತ್ತು ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ GIMನಲ್ಲೂ ಮಾಡಿದ್ದು ಇದೇ. ಇದ್ದವರ ಮೇಲೆ ತೆರಿಗೆ ಹಾಕದೆ ಗ್ಯಾರಂಟಿಯಂತೆ ಹೆಚ್ಚುವರಿ ವೆಚ್ಚ ಹೇಗೆ ನಿಭಾಯಿಸಬೇಕು? ಆಗ ಇಲ್ಲದವರಿಗೆ ಕೊಡುತ್ತಿದ್ದ ಪಾಲನ್ನು ಕತ್ತರಿಸಬೇಕು. ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಿತ್ತುಕೊಳ್ಳಬೇಕು.

ಸಿದ್ದುವಾದರೂ, ರಾಹುಲ್ ಆದರೂ, ಬಹುಜನಪಕ್ಷ ಅಥವಾ ಆಪ್ ಆದರೂ ಕಮ್ಯುನಿಸ್ಟ್ ಆದರೂ (ಬಿಜೆಪಿಯನ್ನು ಬಿಡಿ, ಅದು ಸಾಮಾಜಿಕ ನ್ಯಾಯದ ಮಾತೇ ಆಡುವುದಿಲ್ಲವಲ್ಲ.) ಎಲ್ಲಿಯತನಕ ಕಾರ್ಪೊರೇಟ್ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾರೋ ಅಲ್ಲಿಯವರೆಗೆ ಅವರ ಸಾಮಾಜಿಕ ನ್ಯಾಯ ಇನ್ನಿತ್ಯಾದಿ ನೀತಿಗಳು ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ನೀತಿಗಳೇ ಆಗಿರುತ್ತವೆ. ಹೀಗಾಗಿ ಇದು 1991ರಿಂದ ಜಾರಿಯಲ್ಲಿರುವ ಆರ್ಥಿಕ ನೀತಿಗಳೇ ಮಾಡುವ ಸಾಮಾಜಿಕ ನ್ಯಾಯವಾಗಿವೆ. ಅದನ್ನು ಬದಲಿಸದೇ ಸಾಮಾಜಿಕ ನ್ಯಾಯ ಮಾಡುತ್ತಿದ್ದೇವೆ ಎಂಬ ವಾದ ವಂಚಕವಾದವೇ ಆಗಿದೆ. ಅದು ಸಿದ್ದು ಸರಕಾರದ ಮೇಲಿನ ನೀತಿಯಲ್ಲಿ ಸಾಬೀತಾಗಿದೆ.

4. ಬಲಿಷ್ಠ ಜಾತಿಗಳಿಗೆ ಮಣಿದು ಕಾಂತರಾಜು ವರದಿ ಸಾಮಾಜಿಕ ನ್ಯಾಯ ಮೂಲೆಗುಂಪು

ಸಾಮಾಜಿಕ ನ್ಯಾಯದ ಬಹುಮುಖ್ಯ ಭಾಗ ಸಾಮಾಜಿಕ ಹಿಂದುಳಿದಿರುವಿಕೆಗೆ ತಕ್ಕಂತೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ. ಅದನ್ನು ಮಾಡಲು ಜಾತಿ ಗಳ ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ಅತ್ಯಗತ್ಯ. ಅದನ್ನೇ 1994ರಲ್ಲಿ ಸುಪ್ರೀಂ ಕೋರ್ಟ್‌ನ ಒಂಭತ್ತು ಸದಸ್ಯರ ಸಾಂವಿಧಾನಿಕ ಪೀಠವು ಆದೇಶಿಸಿರುವುದು. ಅದರ ಭಾಗವಾಗಿಯೇ 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದು ನೇತೃತ್ವದ ಕಾಂಗ್ರೆಸ್ ಸರಕಾರ ಕಾಂತರಾಜು ನೇತೃತ್ವದಲ್ಲಿ ಸಾಮಾಜಿಕ ಸಮೀಕ್ಷೆಯನ್ನು ನಡೆಸಿತು. ಅದು ಸಾಕಷ್ಟು ತಯಾರಿ ಮತ್ತು ವೈಜ್ಞಾನಿಕತೆಯೊಂದಿಗೆ ಸಮೀಕ್ಷೆ ಮುಗಿಸಿ ತನ್ನ ವರದಿಯನ್ನೂ ನೀಡಿತು. ಒಂದು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದ ಸರಕಾರ ಅದನ್ನು ಕೂಡಲೇ ಒಪ್ಪಿಕೊಂಡು ಜಾರಿಗೊಳಿಸಬೇಕಿತ್ತು. ಆದರೆ ಸಿದ್ದು ಸರಕಾರ ಮೊದಲ ಅವಧಿಯಲ್ಲೂ ಹಾಗೂ ಎರಡನೇ ಅವಧಿಯಲ್ಲೂ ಕೂಡ ಕಾಂತರಾಜು ವರದಿಯನ್ನು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ಬಿಜೆಪಿಯ ಮತ್ತು ಕಾಂಗ್ರೆಸ್‌ನೊಳಗಿನ ಬಲಿಷ್ಠ ಜಾತಿಗಳ ಮನುವಾದಿಗಳ ಒತ್ತಡಕ್ಕೆ ಮಣಿದು ಕಾಂತರಾಜು ವರದಿ ಸ್ವೀಕರಿಸಿದಂತೆ ಮಾಡಿ ಸಮಯ ಬಾಹಿರವೆಂದು ಸಾರದಲ್ಲಿ ನಿರಾಕರಿಸಿ ಹಿಂದುಳಿದ ಸಮುದಾಯಕ್ಕೆ ಅತಿ ದೊಡ್ಡ ಅನ್ಯಾಯವನ್ನು ಮಾಡಿತು.

ಅದರ ಬದಲಿಗೆ ತಯಾರಿಯಿಲ್ಲದ ಅವಸರದ, ಅಪೂರ್ಣವಾದ, ಸಾರದಲ್ಲಿ ಪರಿಣಾಮಕಾರಿಯಲ್ಲದ ಸಾಮಾಜಿಕ ಸಮೀಕ್ಷೆ ನಡೆಸಿದೆ. ಸರಿಯಾದ ಕಾನೂನಾತ್ಮಕವಾದ ಬೆಂಬಲವಿಲ್ಲವೆಂದು ಹೈಕೋರ್ಟ್ ಕೂಡ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲವೆಂದು ಆದೇಶ ನೀಡಿರುವುದರಿಂದ ಇದನ್ನು ಆಧರಿಸಿ ತೆಗೆದುಕೊಳ್ಳುವ ಯಾವುದೇ ನಿರ್ಧಾರ ನ್ಯಾಯಿಕ ಮಾನದಂಡಗಳನ್ನು ಪೂರೈಸುವುದು ಕಷ್ಟವೇ.

ಕಾಂಗ್ರೆಸ್ ಪಕ್ಷವು ಇರುವುದೇ ಹೀಗೆ. 1969ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಿ ಇಂದಿರಾ ನೇತೃತ್ವದ ಕಾಂಗ್ರೆಸ್ ಮತ್ತು ಅದರ ಭಾಗವಾಗಿ ಕರ್ನಾಟಕದಲ್ಲಿ ದೇವರಾಜ ಅರಸರು ಹೊಸದಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಆವರೆಗೆ ಪ್ರಾತಿನಿಧ್ಯವಿಲ್ಲದ ಅಹಿಂದ ವರ್ಗಗಳ ನೇತೃತ್ವವನ್ನು ಹುಟ್ಟುಹಾಕಿ ಹೊಸ ಕಾಂಗ್ರೆಸ್ ಪಕ್ಷವನ್ನು ಕಟ್ಟಿದರು. ಆ ಕಾರಣಕ್ಕಾಗಿಯೇ ಉಳುವವನಿಗೆ ಭೂಮಿ, ಮೀಸಲಾತಿ ನೀತಿಗಳು ಘೋಷಣೆಯಾದವು. ರಾಷ್ಟ್ರ ಮಟ್ಟದಲ್ಲಿ ಆ ನೀತಿಗಳು ಭೂಹೀನರ ಚಳವಳಿಗಳು ಗಟ್ಟಿಯಾಗಿದ್ದ ಪ.ಬಂಗಾಳ, ಕೇರಳದಲ್ಲಿ ಬಿಟ್ಟರೆ ಬೇರೆಲ್ಲೂ ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ. ಕರ್ನಾಟಕದಲ್ಲೂ ದ. ಕನ್ನಡ ಮತ್ತು ಶಿವಮೊಗ್ಗಗಳಲ್ಲಿ ಬಿಟ್ಟರೆ ಬೇರೆಲ್ಲೂ ಜಾರಿಯಗಲಿಲ್ಲ. ಹಾವನೂರ್ ವರದಿಯಿಂದ ಈವರೆಗಿನ ಅವಕಾಶ ವಂಚಿತರಿಗೆ ಪ್ರಾತಿನಿಧ್ಯ ಸಿಕ್ಕರೂ ಬಲಾಢ್ಯರು ಅದರೊಳಗೂ ಒಳನುಸುಳಿ ಮೀಸಲಾತಿಯ ಸಾಮಾಜಿಕ ನ್ಯಾಯದ ತತ್ವವನ್ನೇ ಲೇವಡಿ ಮಾಡಿದರು.

Tags

Social injustices
share
ಶಿವಸುಂದರ್
ಶಿವಸುಂದರ್
Next Story
X