Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ‘ಸಿದ್ದರಸರು’ ಎಸಗಿರುವ 12 ಸಾಮಾಜಿಕ...

‘ಸಿದ್ದರಸರು’ ಎಸಗಿರುವ 12 ಸಾಮಾಜಿಕ ಅನ್ಯಾಯಗಳು..

ಶಿವಸುಂದರ್ಶಿವಸುಂದರ್15 Jan 2026 9:30 AM IST
share
‘ಸಿದ್ದರಸರು’ ಎಸಗಿರುವ 12 ಸಾಮಾಜಿಕ ಅನ್ಯಾಯಗಳು..
ಫ್ಯಾಶಿಸ್ಟ್ ಕಾಲಘಟ್ಟದಲ್ಲಿ ಸಾಮಾಜಿಕ ನ್ಯಾಯದ ಭ್ರಾಂತಿಗಳು!

ಕೆಪಿಎಸ್ ಯೋಜನೆ ಸಂಪೂರ್ಣವಾಗಿ ಜಾರಿಗೆ ಬಂದಮೇಲೆ ಸಾರಿಗೆ ವ್ಯವಸ್ಥೆಗೆ ಅಂದಾಜು ವಾರ್ಷಿಕ 200 ಕೋಟಿ ರೂ. ವೆಚ್ಚ ತಗಲಬಹುದು. ಆದರೆ ಸರಕಾರವೇ ತನ್ನ ಮತ್ತೊಂದು ಸುತ್ತೋಲೆಯಲ್ಲಿ ಕೆಪಿಎಸ್ ಶಾಲೆಗಳು ನಿರ್ಮಾಣವಾದ ನಂತರ ಅದರ ಬಲವರ್ಧನೆಗೆ ಸರಕಾರ ಯಾವುದೇ ಹಣವನ್ನು ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಅದಕ್ಕೆ ಬೇಕಿರುವ ಹಣವನ್ನು ಕಾರ್ಪೊರೇಟ್‌ಗಳಿಂದ, ಸ್ಥಳೀಯ ದಾನಿಗಳಿಂದ ಹಾಗೂ ಇತರ ಮಾರ್ಗಗಳಿಂದ ಒದಗಿಸಿಕೊಳ್ಳಬೇಕೆಂದು ಆದೇಶಿಸಲಾಗಿದೆ. ಹಾಗಿದ್ದಲ್ಲಿ ನಿರಂತರವಾದ ಸಾರಿಗೆ ವೆಚ್ಚ ಭರಿಸುವುದು ಯಾರು? ಸಾರಿಗೆ ವ್ಯವಸ್ಥೆಯನ್ನು ನಿರಂತರವಾಗಿ ಮತ್ತು ಉಚಿತವಾಗಿ ಸರಕಾರ ಮಾಡದಿದ್ದರೆ ಮಕ್ಕಳು ಶಾಲೆಗೆ ಬರಲು ಸಾಧ್ಯವೇ ಇಲ್ಲ. ಡ್ರಾಪ್ ಔಟ್ ದರ ಹೆಚ್ಚುತ್ತಲೇ ಹೋಗುತ್ತದೆ. ಉತ್ತಮ ಗುಣಮಟ್ಟದ ಶಾಲೆಯ ಹೆಸರಿನಲ್ಲಿ ಕಳಪೆ ಶಾಲೆಯೂ ಇಲ್ಲದ ಒಟ್ಟಿನಲ್ಲಿ ಸಂಪೂರ್ಣ ಅಕ್ಷರ ನಿರಾಕರಣೆಗೆ ಗುರಿಯಾಗುತ್ತಾರೆ.

ಭಾಗ - 2

5. ಪರಿಶಿಷ್ಟರ ಒಳಮೀಸಲಲ್ಲಿ ಅಲೆಮಾರಿಗಳಿಗೆ ಮಹಾ ಅನ್ಯಾಯ

ಪರಿಶಿಷ್ಟರ ಒಳಮೀಸಲಾತಿ ವಿಷಯದಲ್ಲಿ ಸಿದ್ದು ಸರಕಾರ ಪರಿಶಿಷ್ಟರಲ್ಲೇ ಅತ್ಯಂತ ಹಿಂದುಳಿದ ಪರಿಶಿಷ್ಟ ಅಲೆಮಾರಿ ಸಮುದಾಯಕ್ಕೆ ಘೋರವಾದ ಸಾಮಾಜಿಕ ಅನ್ಯಾಯವನ್ನೇ ಮಾಡಿಬಿಟ್ಟಿದೆ. ಮೊದಲನೆಯದಾಗಿ ಪರಿಶಿಷ್ಟರಲ್ಲಿ ಒಳಮೀಸಲಾತಿ ನೀಡಲು ಕಾಂಗ್ರೆಸ್-ಜೆಡಿಎಸ್ ಸರಕಾರ ರಚಿಸಿದ ನ್ಯಾ. ಸದಾಶಿವ ಆಯೋಗ 2012ರಲ್ಲಿ ಬಿಜೆಪಿ ಸರಕಾರಕ್ಕೆ ತನ್ನ ಶಿಫಾರಸು ಕೊಡುವ ವೇಳೆಗೆ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ನ್ಯಾಯಪೀಠ ಪರಿಶಿಷ್ಟರಲ್ಲಿ ಒಳಮೀಸಲಾತಿ ಕೂಡದು ಮತ್ತು ಅದನ್ನು ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲ ಎಂದು ಆದೇಶ ನೀಡಿತ್ತು. ಹೀಗಾಗಿ ಒಳಮೀಸಲಾತಿ ನೀಡಲು ಇದ್ದ ಅವಕಾಶ ಸಂವಿಧಾನದ ಆರ್ಟಿಕಲ್ 341ಕ್ಕೆ ಸಾಂವಿಧಾನಿಕ ತಿದ್ದುಪಡಿ ತರುವುದು ಅಥವಾ ಏಳು ಸದಸ್ಯರ ಮತ್ತೊಂದು ಸಾಂವಿಧಾನಿಕ ಪೀಠಕ್ಕೆ ಒಳಮೀಸಲಾತಿ ತರವಲ್ಲವೆಂಬ ಐವರು ನ್ಯಾಯಪೀಠದ ಆದೇಶವನ್ನು ಹೆಚ್ಚಿನ ನ್ಯಾಯತೀರ್ಮಾನಕ್ಕೆ ಸಲ್ಲಿಸುವುದು.

ಆದರೆ 2012ರಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರಕಾರಕ್ಕೆ ಸಂವಿಧಾನ ತಿದ್ದುಪಡಿ ಮಾಡುವಂತಹ ಸಂಖ್ಯಾ ಸಾಮರ್ಥ್ಯವಿರಲಿಲ್ಲ. ಸುಪ್ರೀಂನ ಉನ್ನತ ಪೀಠಕ್ಕೆ ಕೋರಿಕೆಯನ್ನು ಸಲಿಸಲಿಲ್ಲ.

ಆದರೆ 2014ರ ನಂತರ ಈವರೆಗೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಮೋದಿ ಸರಕಾರಕ್ಕೆ ಸಂವಿಧಾನ ತಿದ್ದುಪಡಿ ಮಾಡುವ ಸಂಖ್ಯಾ ಸಾಮರ್ಥ್ಯವಿತ್ತು. ಅದನ್ನು ಬಳಸಿಕೊಂಡು ಅದು ಮೇಲ್ಜಾತಿ ಮಧ್ಯಮವರ್ಗಗಳಿಗೆ ಆರ್ಥಿಕ ಆಧಾರಿತ ಮೀಸಲಾತಿ (ಇಡಬ್ಲ್ಯುಎಸ್) ನೀಡುವ ತಿದ್ದುಪಡಿಯನ್ನು ತಂದಿತು. ಆದರೆ ಪರಿಶಿಷ್ಟರ ಒಳಮೀಸಲಾತಿಯ ಬಗ್ಗೆ ಮಾತ್ರ ಚಕಾರವೆತ್ತಲಿಲ್ಲ. ಹೀಗಾಗಿ ಒಳಮೀಸಲಾತಿಗೆ ಮಾಡಿದ ದ್ರೋಹದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಪಾಲುದಾರರಾದರೂ ಬಿಜೆಪಿಯ ದ್ರೋಹದ ಪಾಲು ಹೆಚ್ಚು.

ಅದಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಶಾಸನಾತ್ಮಕ ಅಧಿಕಾರವಿರದಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ತಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇವೆಂದು ಪೈಪೋಟಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೋಸ ಮಾಡಿದರು.

2024 ಆಗಸ್ಟ್ 1ರಂದು ಸುಪ್ರೀಂನ ಏಳು ಸದಸ್ಯರ ಉನ್ನತ ಸಾಂವಿಧಾನಿಕ ಪೀಠ ಪರಿಶಿಷ್ಟರ ಒಳಮೀಸಲಾತಿ ಸಂವಿಧಾನ ಸಮ್ಮತವೆಂದೂ, ಅದನ್ನು ಜಾರಿ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆಯೆಂದೂ ಆದೇಶಿಸಿತು.

ಆದರೆ ಸುಪ್ರೀಂ ತೀರ್ಪು ಬಂದ ನಂತರ ಕೂಡಲೇ ತಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಾಗಿ ಸಿದ್ದರಾಮಯ್ಯನವರು ಘೋಷಿಸಿದರೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತಾ ಒಳಮೀಸಲಾತಿ ದ್ರೋಹದ ಎರಡನೇ ಅಧ್ಯಾಯವನ್ನು ಪ್ರಾರಂಭಿಸಿದರು. ಸುಪ್ರೀಂ ತೀರ್ಪಿನ ನಂತರ ಬಾಧಿತ ಪರಿಶಿಷ್ಟ ಸಮುದಾಯಗಳು ಎರಡನೇ ಸುತ್ತಿನ ಹೋರಾಟ ಮಾಡಿದ ನಂತರವೇ ಪರಿಶಿಷ್ಟರಲ್ಲಿ ಸಾಪೇಕ್ಷವಾಗಿ ಬಲಿಷ್ಠರ ಒತ್ತಡಕ್ಕೆ ಬಲಿಯಾಗಿದ್ದ ಸಿದ್ದು ಸರಕಾರ ಅರೆಮನಸ್ಸಿನಿಂದ ಒಳಮೀಸಲಾತಿ ಅನುಷ್ಠಾನದ ಸೂತ್ರಗಳನ್ನು ಶಿಫಾರಸು ಮಾಡಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ನೇಮಕ ಮಾಡಿತು.

ಆದರೆ ಅಧ್ಯಯನ ಮಾಡಿ ವೈಜ್ಞಾನಿಕವಾದ ಸೂತ್ರವನ್ನು ನೀಡಿದ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸಿದ್ದು ಸರಕಾರ ಒಪ್ಪಿಕೊಂಡಂತೆ ಮಾಡಿ ತಿರಸ್ಕರಿಸಿತು.

6. ನಕ್ಸಲ್ ಶರಣಾಗತಿ-ಬಿಜೆಪಿಯಂತೆಯೇ ಅಪ್ರಾಮಾಣಿಕತೆ, ಭರವಸೆ ದ್ರೋಹ

ಕರ್ನಾಟಕದಲ್ಲಿ ಸಿದ್ದು ಸರಕಾರ 2013ರಲ್ಲಿ ರಾಜ್ಯದ ನಕ್ಸಲ್ ಶರಣಾಗತಿ ಯೋಜನೆಯಲ್ಲಿ ನಾಗರಿಕ ಸಮಾಜದ ಮಧ್ಯಪ್ರವೇಶದಿಂದ ಕೆಲವು ನಾಮಮಾತ್ರ ಬಲಾವಣೆಗಳನ್ನು ಮಾಡಿತು. ಸಾರದಲ್ಲಿ ನೋಡಿದರೆ ಸಿದ್ದು ಸರಕಾರದ ನಕ್ಸಲ್ ಶರಣಾಗತಿ ಯೋಜನೆಗೂ ಬಿಜೆಪಿ ಸರಕಾರಗಳ ಶರಣಾಗತಿ ಯೋಜನೆಗೂ ದೊಡ್ಡ ವ್ಯತ್ಯಾಸವಿಲ್ಲ. ನಕ್ಸಲರು ಬೇಷರತ್ತಾಗಿ ಕಾನೂನಿಗೆ ಶರಣಾಗಬೇಕು. ಕೇಸುಗಳನ್ನು ವಾಪಸ್ ಪಡೆಯುವುದಿಲ್ಲ. ಆದರೆ ಶರಣಾದವರಿಗೆ ಜಾಮೀನು ಪಡೆಯಲು ಸಹಕರಿಸಲಾಗುವುದು ಹಾಗೂ ಅವರ ಪುನರ್ ವಸತಿಗೆ ಸಕ್ರಿಯ ಸಹಕಾರ ಕೊಡಲಾಗುವುದು. ಒಪ್ಪದಿದ್ದರೆ ಎನ್‌ಕೌಂಟರಿನಲ್ಲಿ ಕೊಂದು ಹಾಕಲಾಗುವುದು.

ಕಾಂಗ್ರೆನದ್ದೂ ಇದೇ ನೀತಿ. ಬಿಜೆಪಿಯದ್ದೂ ಇದೇ ನೀತಿ. ಆದರೆ ಒಮ್ಮೆ ನಕ್ಸಲ್ ಚಳವಳಿ ಹಿಮ್ಮುಖವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೂಡ ತಾನು ಕೊಟ್ಟ ಭರವಸೆಗಳಿಗೆ ತಾನೇ ದ್ರೋಹ ಬಗೆಯಲು ಪ್ರಾರಂಭಿಸುತ್ತದೆ. ಹೀಗಾಗಿಯೇ 2013ರ ರಾಜ್ಯ ಸರಕಾರದ ಶರಣಾಗತಿ ನೀತಿಯಡಿ ಕಾನೂನಿಗೆ ಶರಣಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಹಲವಾರು ಹಿರಿಯ ನಕ್ಸಲ್ ನಾಯಕರು ಕೋರ್ಟ್‌ಗಳಿಗೆ ತಿರುಗುತ್ತಾ ಜೀವನ ರೂಪಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕೆಲವರ ಮೇಲೆ ಪೊಲೀಸರು ಸಕ್ರಿಯವಾಗಿ ಜಾಮೀನು ಹಿಂಪಡೆಯಲೂ ಸಹ ಪ್ರಯತ್ನಿಸಿದ್ದುಂಟು. ಇನ್ನು ಕೆಲವರು ಸಿದ್ದು ಭರವಸೆಯನ್ನು ಒಪ್ಪಿ ಶರಣಾದವರು 2017ರಿಂದಲೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆ.

7. ದೇವನಹಳ್ಳಿ ರೈತರಿಗೆ ಅನ್ಯಾಯ ಮತ್ತು ಸೇಡಿನ ಕ್ರಮ

ದೇವನಹಳ್ಳಿಯ 13 ಹಳ್ಳಿಗೆ ಸೇರಿದ ರೈತರು ತಮ್ಮ 1,778 ಎಕರೆ ಜಮೀನನ್ನು ತಮ್ಮ ಒಪ್ಪಿಗೆ ಇಲ್ಲದೆ KIADB ಮೂಲಕ ವಶಪಡಿಸಿಕೊಂಡ ಬಿಜೆಪಿ ಸರಕಾರದ ವಿರುದ್ಧ 2022ರಿಂದಲೂ ನಿರಂತರವಾಗಿ ಹೋರಾಡುತ್ತಿದ್ದರು. ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಆಸುಪಾಸಿನಲ್ಲಿರುವ ಈ ಗ್ರಾಮಗಳ ರೈತರನ್ನು ಒಕ್ಕಲೆಬ್ಬಿಸಿ ಅಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉದ್ದಿಮೆಗಳನ್ನು ತಂದು ರಾಜ್ಯದ ‘ಅಭಿವೃದ್ಧಿ’ ಸಾಧಿಸಲು ಈ ಜಮೀನುಗಳು ಬೇಕೇ ಬೇಕೆಂಬುದು ಆಗ ಬಿಜೆಪಿ ಸರಕಾರದ ಹಠವಾಗಿತ್ತು.

ಇದರಲ್ಲಿ ಎರಡು ರೈತ ವಿರೋಧಿ ಪ್ರಜಾತಂತ್ರ ವಿರೋಧಿ ಧೋರಣೆಗಳಿದ್ದವು. 1) ರೈತರ ಒಪ್ಪಿಗೆ ಇಲ್ಲದೆ ಅವರ ಜಮೀನು ಸ್ವಾಧೀನ 2) ಬಂಡವಾಳಶಾಹಿ ಅಭಿವೃದ್ಧಿಗೆ ರೈತರ ಬಲಿ. ರೈತರು ಈ ಎರಡು ಧೋರಣೆಗಳ ವಿರುದ್ಧವೂ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ರೈತರ ಧರಣಿ ಸ್ಥಳಕ್ಕೆ ಆಗಮಿಸಿ ರೈತ ಹೋರಾಟದ ತಾತ್ವಿಕ ನೆಲೆಯನ್ನು ಒಪ್ಪಿಕೊಂಡು ತಾವು ಅಧಿಕಾರಕ್ಕೆ ಬಂದರೆ ಕೂಡಲೇ ಭೂ ಸ್ವಾಧೀನ ಕೈಬಿಡುವುದಾಗಿ ಘೋಷಿಸಿದ್ದರು.

2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದು ಸರಕಾರ ಭೂ ಸ್ವಾಧೀನ ಕೈಬಿಡುವುದಿರಲಿ 2025ರಲ್ಲಿ KIADB 1,778 ಎಕರೆಗಳ ಸ್ವಾಧೀನಕ್ಕೆ ಅಂತಿಮ ನೋಟಿಸು ಕೊಟ್ಟಿತು. ಆದರೆ ದೇವನಹಳ್ಳಿ ರೈತರ ಜೊತೆಗೆ ಸೇರಿಕೊಂಡ ನಾಡಿನ ಪ್ರಗತಿಪರ, ಕಾರ್ಮಿಕ, ರೈತ ಸಂಘಟನೆಗಳು ಚಳವಳಿಯನ್ನು ತೀವ್ರಗೊಳಿಸಿತು. ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪ್ರಚಾರಗಳು ಈ ಹೋರಾಟವನ್ನು ಪ್ರಮುಖ ಚರ್ಚಾ ವಿಷಯವನ್ನಾಗಿ ಮಾಡಿತ್ತು.

ಈ ಕಾರಣಗಳಿಂದಾಗಿ ಹೋರಾಟಕ್ಕೆ ಮಣಿದಂತೆ ಮಾಡಿದ ಸಿದ್ದು ಸರಕಾರ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಘೋಷಿಸಿ ಪ್ರಗತಿಪರ, ರೈತ ಸಂಘಟನೆಗಳಿಂದ ಅಪಾರವಾಗಿ ಹೊಗಳಿಸಿಕೊಂಡಿತು. ಆದರೆ ಹಿಂಬಾಗಿಲಿಂದ ರೈತರನ್ನು ಹೆದರಿಸುವ ಮತ್ತು ಅಷ್ಟೂ ಜಮೀನನ್ನು ಶಾಶ್ವತ ಕೃಷಿ ವಲಯ ಮಾಡಿ ರೈತರನ್ನು ಅಸಹಾಯಕಗೊಳಿಸುವ ಸಂಚುಗಳನ್ನು ಮುಂದುವರಿಸಿತು. ನವೆಂಬರ್‌ವರೆಗೆ ಡಿನೋಟಿಫಿಕೇಶನ್ ಮಾಡಲಿಲ್ಲ. ಕೊನೆಗೆ ಡಿಸೆಂಬರ್‌ನಲ್ಲಿ ಹೊರಡಿಸಿದ ಆದೇಶದಲ್ಲಿ ಸಿದ್ದು ಸರಕಾರ ರೈತರು ಆಗ್ರಹಿಸುತ್ತಿದ್ದ ಸರಳ ಡಿನೋಟಿಫಿಕೇಶನ್ ಮಾಡಿರಲೇ ಇಲ್ಲ. ರೈತರು ಕೇಳದಿದ್ದರೂ ಅದನ್ನು ಕಾನೂನಲ್ಲೇ ಇಲ್ಲದ ರೀತಿಯಲ್ಲಿ ಶಾಶ್ವತ ಕೃಷಿ ವಲಯ ಎಂದು ಘೋಷಿಸಿದೆ ಹಾಗೂ ಅದರ ಸುತ್ತಲೂ ಏರೋಸ್ಪೇಸ್ ಮತ್ತು ರಕ್ಷಣಾ ಉದ್ದಿಮೆಗಳಿಗೆ ಜಮೀನು ವಶಪಡಿಸಿಕ್ಕೊಳ್ಳುವುದನ್ನು ಮುಂದುವರಿಸುವುದಾಗಿ ಘೋಷಿಸಿದೆ. ಹಾಗೂ ಈ 1,778 ಎಕರೆ ಜಮೀನಿನಲ್ಲಿ ರೈತರ ಅನುಮತಿ ಇಲ್ಲದೆ ರೈತರನ್ನು ಕೃಷಿ ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ರಫ್ತು ಕೃಷಿ, ಕಾಂಟ್ರಾಕ್ಟ್ ಕೃಷಿ ಖಾಸಗಿ ಸಂಗ್ರಹಾಗಾರ, ಡಿಜಿಟಲ್ ಮಾರ್ಕೆಟಿಂಗ್, ವಿದೇಶಿ ಕೃಷಿ ಬಂಡವಾಳಿಗರಿಗೆ ಹೂಡಿಕಾ ಪ್ರೋತ್ಸಾಹ ಯೋಜನೆ ರೂಪಿಸಲಾಗುವುದೆಂದು ಕೈಗಾರಿಕಾ ಕಾರ್ಯದರ್ಶಿ ಘೋಷಿಸಿದ್ದಾರೆ. ಅರ್ಥಾತ್ ಮೋದಿ ಸರಕಾರ ಜಾರಿ ಮಾಡಿದ್ದ ಸಣ್ಣ ರೈತ ವಿರೋಧಿ ನೀತಿಗಳನ್ನೇ ಸಿದ್ದು ಸರಕಾರವೂ ಅಲ್ಲಿ ಜಾರಿ ಮಾಡಲಿದೆ. ಸೇಡು ತೀರಿಸಿಕೊಳ್ಳುತ್ತಿದೆ.

8. ಕಾಂಗ್ರೆಸ್ ಸರಕಾರ-ಬಿಜೆಪಿ ಬುಲ್ಡೋಜರ್?

ಬುಲ್ಡೋಜರ್ ಎಂಬುದು ಈ ದೇಶ ಅನುಸರಿಸುತ್ತಿರುವ ದಮನಕಾರಿ ಮತ್ತು ಬಡವರ ವಿರೋಧಿ ಅಭಿವೃದ್ಧಿ ಮಾದರಿಯ ಸಂಕೇತವಾಗಿದೆ. ಇತ್ತೀಚೆಗೆ ಬುಲ್ಡೋಜರ್‌ಗಳು ನೆಲಸಮ ಮಾಡಿದ ಕೋಗಿಲು, ಥಣಿಸಂದ್ರ ಗುಡಿಸಲುಗಳು ಸ್ಲಂ ಜನರ ದೃಷ್ಟಿಯಿಂದ ನೋಡಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ಎಂಬುದನ್ನೇ ಧ್ವನಿಸುತ್ತದೆ.

9. ಕೆಪಿಎಸ್ ಶಾಲೆಗಳು: ಅಹಿಂದ ವರ್ಗದ ಮಕ್ಕಳಿಗೆ ಅಕ್ಷರ ಅನ್ಯಾಯ

ಬಿಜೆಪಿ ಸರಕಾರ ತನ್ನ ಜನವಿರೋಧಿ, ಜನದ್ರೋಹಿ ಹಿಂದುತ್ವವಾದಿ ಕಾರ್ಪೊರೇಟ್ ಪರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಭಾಗವಾಗಿ ಸರಕಾರಿ ಶಾಲೆಗಳ ಮುಚ್ಚುವಿಕೆಯ ಹೆಸರಿನ ಮಹಾನ್ ಸಾಮಾಜಿಕ ಅನ್ಯಾಯದ ಯೋಜನೆಯನ್ನು ಜಾರಿ ಮಾಡಿದೆಯಷ್ಟೆ. ಈಗ ಸಾಮಾಜಿಕ ನ್ಯಾಯದ ಸಿದ್ದು ಸರಕಾರ ಕೂಡ ಅದೇ ಉದ್ದೇಶದಿಂದAsian Development Bank (ADB) ಅನುದಾನದಿಂದ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಮತ್ತು ಮ್ಯಾಗ್ನೆಟ್ ಶಾಲಾ ಯೋಜನೆಯನ್ನು ವೇಗವಾಗಿ ಜಾರಿಗೆ ತರುತ್ತಿದೆ.

ಹಾಲಿ ಇರುವ ಸರಕಾರಿ ಶಾಲೆಗಳನ್ನು ಮುಚ್ಚದೆ, ಅವುಗಳ ಗುಣಮಟ್ಟವನ್ನು ಹೆಚ್ಚಿಸುತ್ತಾ, ಗ್ರಾಮ ಪಂಚಾಯತ್‌ಗೆ ಒಂದು ಉತ್ತಮ ಗುಣಮಟ್ಟದ ಉನ್ನತ ಪ್ರೌಢ ಶಾಲೆಯವರೆಗೆ ಒಂದೇ ಆವರಣದಲ್ಲಿರುವ, ಖಾಸಗಿ ಶಾಲೆಗೆ ಪೈಪೋಟಿ ಕೊಡಬಲ್ಲ ಕೆಪಿಎಸ್ ಶಾಲೆಯನ್ನು ಕಟ್ಟುವುದಾದಲ್ಲಿ ಅದು ಸ್ವಾಗತಾರ್ಹವಾಗುತ್ತಿತ್ತು.

ಆದರೆ ಸಿದ್ದು ಸರಕಾರ ಮಾಡುತ್ತಿರುವುದು ಇರುವ ಶಾಲೆಗಳ ಜೊತೆಗಲ್ಲ. ಬದಲಿಗೆ, ಹಾಲಿ ದೂರ ದೂರದ ಗ್ರಾಮಗಳಲ್ಲಿರುವ 32,000 ಸರಕಾರಿ ಶಾಲೆಗಳನ್ನು ಮುಚ್ಚಿ ಅವುಗಳನ್ನು ದೂರದ ಪಂಚಾಯತ್ ಕೇಂದ್ರದಲ್ಲಿ ಸ್ಥಾಪಿಸಲಾಗುವ 6,000 ಕೆಪಿಎಸ್ ಶಾಲೆಯಲ್ಲಿ ವಿಲೀನಗೊಳಿಸುವ ಯೋಜನೆಯನ್ನು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಿದ್ದು ಸರಕಾರ ಜಾರಿಗೆ ತರುತ್ತಿದೆ.

ಆದರೆ ಇದರಿಂದಾಗಿ ಕೆಪಿಎಸ್ ಶಾಲೆಯ ಆರು ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳನ್ನು ಮುಚ್ಚಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಆರು ಕಿ.ಮೀ. ದೂರದ ಕೆಪಿಎಸ್‌ಗೆ ವರ್ಗಾಯಿಸಲಾಗುವುದು. ಹಾಗಿದ್ದಲ್ಲಿ ಪ್ರತಿನಿತ್ಯ ಅಲ್ಲಿಗೆ ಹೋಗಿ ಬರುವುದು? ಬಸ್ ವ್ಯವಸ್ಥೆ? ಸರಕಾರ ಸಾರಿಗೆ ವ್ಯವಸ್ಥೆ ಮಾಡುವ ಖಚಿತ ಭರವಸೆಯನ್ನೇನು ನೀಡಿಲ್ಲ. ಏಕೆಂದರೆ ಅದರ ಉದ್ದೇಶವೇ ಖರ್ಚು ಕಡಿಮೆ ಮಾಡಿಕೊಳ್ಳುವುದೇ ಹೊರತು ಹೆಚ್ಚಿಸಿಕೊಳ್ಳುವುದಲ್ಲ.

ಕೆಪಿಎಸ್ ಯೋಜನೆ ಸಂಪೂರ್ಣವಾಗಿ ಜಾರಿಗೆ ಬಂದಮೇಲೆ ಸಾರಿಗೆ ವ್ಯವಸ್ಥೆಗೆ ಅಂದಾಜು ವಾರ್ಷಿಕ 200 ಕೋಟಿ ರೂ. ವೆಚ್ಚ ತಗಲಬಹುದು. ಆದರೆ ಸರಕಾರವೇ ತನ್ನ ಮತ್ತೊಂದು ಸುತ್ತೋಲೆಯಲ್ಲಿ ಕೆಪಿಎಸ್ ಶಾಲೆಗಳು ನಿರ್ಮಾಣವಾದ ನಂತರ ಅದರ ಬಲವರ್ಧನೆಗೆ ಸರಕಾರ ಯಾವುದೇ ಹಣವನ್ನು ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಅದಕ್ಕೆ ಬೇಕಿರುವ ಹಣವನ್ನು ಕಾರ್ಪೊರೇಟ್‌ಗಳಿಂದ, ಸ್ಥಳೀಯ ದಾನಿಗಳಿಂದ ಹಾಗೂ ಇತರ ಮಾರ್ಗಗಳಿಂದ ಒದಗಿಸಿಕೊಳ್ಳಬೇಕೆಂದು ಆದೇಶಿಸಲಾಗಿದೆ. ಹಾಗಿದ್ದಲ್ಲಿ ನಿರಂತರವಾದ ಸಾರಿಗೆ ವೆಚ್ಚ ಭರಿಸುವುದು ಯಾರು? ಸಾರಿಗೆ ವ್ಯವಸ್ಥೆಯನ್ನು ನಿರಂತರವಾಗಿ ಮತ್ತು ಉಚಿತವಾಗಿ ಸರಕಾರ ಮಾಡದಿದ್ದರೆ ಮಕ್ಕಳು ಶಾಲೆಗೆ ಬರಲು ಸಾಧ್ಯವೇ ಇಲ್ಲ. ಡ್ರಾಪ್ ಔಟ್ ದರ ಹೆಚ್ಚುತ್ತಲೇ ಹೋಗುತ್ತದೆ. ಉತ್ತಮ ಗುಣಮಟ್ಟದ ಶಾಲೆಯ ಹೆಸರಿನಲ್ಲಿ ಕಳಪೆ ಶಾಲೆಯೂ ಇಲ್ಲದ ಒಟ್ಟಿನಲ್ಲಿ ಸಂಪೂರ್ಣ ಅಕ್ಷರ ನಿರಾಕರಣೆಗೆ ಗುರಿಯಾಗುತ್ತಾರೆ.

ಎಲ್ಲಕ್ಕಿಂತ ಮುಖ್ಯವಾದದ್ದು ಗ್ರಾಮೀಣ ಹಾಗೂ ಶೋಷಿತ ವರ್ಗದ ಮಕ್ಕಳ ಶೈಕ್ಷಣಿಕ ಸಮಸ್ಯೆ ಕೇವಲ ಸಾರಿಗೆ ಸಮಸ್ಯೆಯಲ್ಲ. ಈ ಕೆಪಿಎಸ್ ಪರಿಕಲ್ಪನೆ ಮಕ್ಕಳ ಶೈಕ್ಷಣಿಕ ವಿಕಸದ ವಿಜ್ಞಾನಕ್ಕೂ ವ್ಯತಿರಿಕ್ತ. ಅದರಲ್ಲೂ ಶೋಷಿತ ಸಮುದಾಯದ ಶೈಕ್ಷಣಿಕ ಕಲಿಕಾ ಪರಿಸರದ ವಿವೇಕಕ್ಕೂ ವಿರುದ್ಧವಾಗಿದೆ.

10. ಉಳುವವರ ಭೂಮಿ ಉಳ್ಳವರಿಗೆ

ದೇವರಾಜ ಅರಸು ಅವರನ್ನು ನೆನಸಿಕೊಳ್ಳುವುದೇ ಅವರು ಉಳುವವನೇ ನೆಲದೊಡೆಯ ಎಂಬ ನೀತಿ ತಂದಿದ್ದಕ್ಕೆ. ಆದರೆ 1991ರ ನಂತರ ಕಾಂಗ್ರೆಸ್ ಮತ್ತು ಎಲ್ಲಾ ಸರಕಾರಗಳು ರೈತರ ಭೂಮಿಯನ್ನು ಮತ್ತು ಸರಕಾರದ ಭೂಮಿಯನ್ನು ಉಳ್ಳವರ ಪಾಲಾಗಿ ಮಾಡಲು ಹೊರಟಿವೆ. ಹೀಗಾಗಿಯೇ ಹತ್ತಾರು ವರ್ಷಗಳಿಂದ ಸರಕಾರಿ ಜಮೀನನ್ನು ಉಳುಮೆ ಮಾಡುತ್ತಿರುವ ಭೂ ಹೀನ ರೈತರಿಗೆ ಇನ್ನೂ ಜಮೀನು ಅಥವಾ ಒಡೆತನ ಸಿಕ್ಕಿಲ್ಲ. ಬಿಜೆಪಿ ಸರಕಾರವಂತೂ ಉಳುವವರಿಗೆ ಭೂಮಿಯ ಬದಲಿಗೆ ಉಳ್ಳವರಿಗೆ ಭೂಮಿ ನೀತಿಯನ್ನು ಜಾರಿ ಮಾಡಿತ್ತು. ಆದರೆ ಇಲ್ಲದವರ ಪರವಾಗಿ ಅಧಿಕಾರಕ್ಕೆ ಬಂದ ಸಿದ್ದು ಸರಕಾರವೂ ಈವರೆಗೆ ಒಂದು ಇಂಚೂ ಭೂಮಿಯನ್ನು ಇಲ್ಲದವರಿಗೆ ನೀಡಿಲ್ಲ. ಭೂಮಿ ಮತ್ತು ವಸತಿ ಹೀನರು ನೀಡಿರುವ 34 ಲಕ್ಷಕ್ಕೂ ಹೆಚ್ಚು ಅಹವಾಲನ್ನು ತ್ವರಿತವಾಗಿ ತೀರ್ಮಾನಿಸುವ ಹೆಸರಿನಲ್ಲಿ ಸಿದ್ದು ಸರಕಾರ ತ್ವರಿತವಾಗಿ ತಿರಸ್ಕರಿಸುತ್ತಿದೆ. ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಸರಕಾರದಂತೆ ಪ್ರತೀ ಜಿಲ್ಲೆಯಲ್ಲೂ ಕಾರ್ಪೊರೇಟ್ ಉದ್ದಿಮೆಗಳಿಗೆ ಬಿಟ್ಟಿಯಾಗಿ ಅಥವಾ ರಿಯಾಯತಿ ದರದಲ್ಲಿ ಕೇಳಿದ್ದಕ್ಕಿಂತ ಹೆಚ್ಚಿನ ಭೂಮಿಯನ್ನು ಕೊಡಲು ಲ್ಯಾಂಡ್ ಬ್ಯಾಂಕ್ ಮಾಡಿಟ್ಟಿದೆ. ಹಾಗಿದ್ದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆ ವ್ಯತ್ಯಾಸವೇನಿದೆ?

11. ಧರ್ಮಸ್ಥಳೋ ರಕ್ಷತಿ ರಕ್ಷಿತ

ಸಿದ್ದು ಸರಕಾರದ ಈ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಮತ್ತು ಮಹಿಳೆಯರಿಗೆ ಮಾಡಿರುವ ಮತ್ತೊಂದು ಮಹಾನ್ ಅನ್ಯಾಯವೆಂದರೆ ಧರ್ಮಸ್ಥಳದ ಸುತ್ತಮುತ್ತಲೂ ಅಧಿಕಾರಸ್ಥರ ಕುಮ್ಮಕ್ಕಿನೊಂದಿಗೆ ನಿರಂತರವಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಸರಕಾರ ಬಹಿರಂಗವಾಗಿ ಶಂಕಿತರೊಂದಿಗೆ ನಿಂತುಕೊಂಡು ನಿಷ್ಪಕ್ಷ ವಿಚಾರಣೆಯನ್ನೇ ಹಳ್ಳ ಹಿಡಿಸಿರುವುದು. ಮತ್ತೊಂದು ಕಡೆ ನಿರಂತರವಾಗಿ ಮುಸ್ಲಿಮ್ ಮಹಿಳೆಯರ ಮೇಲೆ ದ್ವೇಷ ಭಾಷಣ ಮಾಡುತ್ತಾ ಸಾಮಾಜಿಕ ಅಪಮಾನ ಮತ್ತು ಸಂಕ್ಷೋಭೆಗೆ ಕಾರಣವಾಗಿರುವ ಸಂಘಿ ನಾಯಕರಿಗೆ ಸುಲಭವಾಗಿ ಜಾಮೀನು ಸಿಗುವಂತೆ ಸರಕಾರಿ ವಕೀಲರು ಸಹಕರಿಸುತ್ತಿರುವುದು.

ಇದೂ ಕೂಡ ಕಾಂಗ್ರೆಸ್ ಪಕ್ಷ ಜನಪರ ಎನ್ನುವುದಕ್ಕಿಂತ ಹಿಂದೂ ಪರ ಅದರಲ್ಲೂ ಸಂಘಿ ಪರ ಎನ್ನುವ ಪರೋಕ್ಷ ಸಂದೇಶ ಕೊಡುವ ಉದ್ದೇಶವನ್ನೇ ಹೊಂದಿದೆ. ಅಂತರಂಗದಲ್ಲಿ ಸಂಘಿ ಧೋರಣೆಗಳ ಬಗ್ಗೆ ಯಾವುದೇ ವಿರೋಧವಿರದ ಕಾಂಗ್ರೆಸ್‌ನಿಂದ ಸಂಘಿ ಫ್ಯಾಶಿಸಂಅನ್ನು ಸೋಲಿಸಲು ಸಾಧ್ಯವೇ?

12. ಬಿಜೆಪಿ ಸರಕಾರ ಗೋಹತ್ಯಾ, ಮತಾಂತರ ನಿಷೇಧ

ಮತ್ತು APMC ನೀತಿಗಳ ಮುಂದುವರಿಕೆ

ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಾಗಳಾಗುತ್ತಾ ಬಂದರೂ ಬಿಜೆಪಿ ಸರಕಾರ ಜಾರಿಗೆ ತಂದ ಭೂ ಹಿಡುವಳಿ, ಖಾಸಗಿ ಂPಒಅ, ಗೋಹತ್ಯಾ ನಿಷೇಧ ಕಾಯ್ದೆ ಇತ್ಯಾದಿಗಳನ್ನು ಈವರೆಗೆ ಮುಂದುವರಿಸಿಕೊಂಡೇ ಹೋಗುತ್ತಿದೆ.

ಸಾರವಿಷ್ಟೇ....

ಸಿದ್ದರಾಮಯ್ಯ ವ್ಯಕ್ತಿಯಾಗಿ ಎಷ್ಟೇ ಸಾಮಾಜಿಕ ಕಳಕಳಿ ಇದ್ದರೂ...

ಇರದಿದ್ದರೂ...

ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿದ್ದಾರೆ.

ಅವರ ಸಕ್ರಿಯ ಒಪ್ಪಿಗೆ ಅಥವಾ ಗಾಂಧಾರಿ ಕುರುಡಿನ ಒಪ್ಪಿಗೆಯ ಮೂಲಕವೇ ಈ ಎಲ್ಲಾ ಸಾಮಾಜಿಕ ಅನ್ಯಾಯದ ಯೋಜನೆಗಳು ಜಾರಿಗೆ ಬಂದಿವೆ.

ಇದರ ಅರ್ಥ ಇದಕ್ಕಿಂತ ಬಿಜೆಪಿ ಉತ್ತಮ ಎಂದಲ್ಲ.

ಬಿಜೆಪಿ ಅಪಾಯ. ಕಾಂಗ್ರೆಸ್ ನಿರಾಶೆ. ಬಿಜೆಪಿ ಸಮಸ್ಯೆ. ಕಾಂಗ್ರೆಸ್ ಸಮಸ್ಯೆಯ ಮುಂದುವರಿಕೆ.

ಸಿದ್ದು ಮುಖ್ಯಮಂತ್ರಿಯಾಗಿದ್ದರೂ....

ಬಿಜೆಪಿಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಗಳನ್ನು ಕಾಂಗ್ರೆಸ್ ಸರಕಾರ ಮೃದುವಾಗಿ ಮುಂದುವರಿಸುತ್ತದೆ.

ಬಿಜೆಪಿ ಅದೇ ನೀತಿಗಳನ್ನು ಉಗ್ರವಾಗಿ ಜಾರಿ ಮಾಡುತ್ತದೆ.

ಹೀಗಾಗಿ ಸಾರಾಂಶ: ಕಾಂಗ್ರೆಸ್- ಬಿಜೆಪಿ ಒಂದೇ ಅಲ್ಲ.

ಆದರೆ... ಅವೆರೆಡರ ನಡುವೆ ವ್ಯತ್ಯಾಸ ಹೆಚ್ಚೇನಿಲ್ಲ.

Tags

Social injustices
share
ಶಿವಸುಂದರ್
ಶಿವಸುಂದರ್
Next Story
X