Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಭಾರತದ ಜಿಡಿಪಿ ಶೇ. 7.8!?: ಮೋದಿ...

ಭಾರತದ ಜಿಡಿಪಿ ಶೇ. 7.8!?: ಮೋದಿ ಪವಾಡವೋ? ಬೂಸಿ ಬುರುಡೆಯೋ?

ಶಿವಸುಂದರ್ಶಿವಸುಂದರ್10 Sept 2026 10:53 AM IST
share
ಭಾರತದ ಜಿಡಿಪಿ ಶೇ. 7.8!?: ಮೋದಿ ಪವಾಡವೋ? ಬೂಸಿ ಬುರುಡೆಯೋ?

ಭಾರತದ ಅಭಿವೃದ್ಧಿ ಮಾದರಿಯು, ಅದರಲ್ಲೂ ಮೋದಿ ಕಾಲದಲ್ಲಿ ಆದಾಯವನ್ನಾಗಲೀ, ಉಳಿತಾಯವನ್ನಾಗಲೀ, ಉದ್ಯೋಗವನ್ನಾಗಲೀ ಹೆಚ್ಚಿಸುತ್ತಿಲ್ಲವಾದ್ದರಿಂದ ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತಿಲ್ಲ. ಹೀಗಾಗಿ ಆರ್ಥಿಕತೆಯಲ್ಲಿ ಖರೀದಿ ಇಲ್ಲವಾಗಿ ಖಾಸಗಿ ಅಥವಾ ವಿದೇಶಿ ಹೂಡಿಕೆಗಳು ಹೆಚ್ಚುತ್ತಿಲ್ಲ. ಚಿನ್ನದ ಖರೀದಿಗಿಂತ ಚಿನ್ನದ ಅಡಮಾನ ಹೆಚ್ಚುತ್ತಿದೆ. ಅಂದರೆ ಬಡ-ಮಧ್ಯಮವರ್ಗಗಳ ಉಳಿತಾಯ ಶೂನ್ಯವಾಗುತ್ತಿದೆ. ಇದೆಲ್ಲವೂ ಭಾರತದ ಶೇ. 90ರಷ್ಟು ಆರ್ಥಿಕತೆಯ ಸ್ಥಗಿತತೆಯನ್ನು ಸೂಚಿಸುತ್ತದೆಯೇ ಹೊರತು ಅಭಿವೃದ್ಧಿಯನ್ನಲ್ಲ.

ಯುದ್ಧ, ಹಣದುಬ್ಬರ, ಹೂಡಿಕೆಯ ಕೊರತೆ, ಆದಾಯ ಕುಸಿತ ಇತ್ಯಾದಿ ಕಾರಣಗಳಿಂದಾಗಿ ಜಗತ್ತಿನ ಎಲ್ಲಾ ದೇಶಗಳ ಅಭಿವೃದ್ಧಿದರ ಕುಸಿಯುತ್ತಿದ್ದರೂ ಭಾರತದಲ್ಲಿ ಮಾತ್ರ 2026-27ರ ಮೊದಲ ತ್ರೈಮಾಸಿಕದ ಅಭಿವೃದ್ಧಿ ದರ ಮಾತ್ರ ಶೇ. 7.8 ಏರಿಕೆಯಾಗಿದೆಯಂತೆ! ಭಾರತದ ಮೋದಾನಿಗಳನ್ನು ಬಿಟ್ಟರೆ ಉಳಿದ ಭಾರತದ ಬದುಕು 7.8 ಏರಿಕೆಯಾಗುವುದಿರಲಿ ದಿನೇದಿನೇ ಕುಸಿಯುತ್ತಿದೆ. ಜನರ ಬದುಕು-ಆರ್ಥಿಕತೆ ಕುಸಿಯುತ್ತಿದ್ದರೂ ದೇಶ ಮಾತ್ರ ಅಬಿವೃದ್ಧಿ ಹೊಂದುತ್ತಿದೆ ಎಂದರೆ, ಅದು ಯಾವ ದೇಶದ ಅಭಿವೃದ್ಧಿ? ಜನರ ಅಭಿವೃದ್ಧಿ ಇಲ್ಲದೇ ಅಭಿವೃದ್ಧಿ ಹೊಂದುತ್ತಿರುವ ದೇಶದ ಜನರು ಯಾರು?

ಸಾಮಾನ್ಯ ಜನರು ತಮ್ಮ ಬದುಕಿನ ಸತ್ಯಗಳಿಂದಲೇ ಮೋದಿಯ ಸುಳ್ಳನ್ನು ಅರ್ಥಮಾಡಿಕೊಳ್ಳುವ ಕಡೆ ಸಾಗುತ್ತಿರುವ ಹೊತ್ತಿನಲ್ಲೇ ಮೋದಿ ಸರಕಾರದ ಹಣಕಾಸು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸುಭಾಶ್ಚಂದ್ರ ಗರ್ಗ್ ಅವರೂ ಕೂಡ ಮೋದಿ ಸರಕಾರ 2026-27 ನೇ ಸಾಲಿನ ಮೊದಲ ತ್ರೈಮಾಸಿಕಕ್ಕೆ ಘೋಷಿಸಿರುವ ಶೇ. 7.8 ಜಿಡಿಪಿ ಅಭಿವೃದ್ಧಿ ದರ ಸುಳ್ಳು ಮಾತ್ರವಲ್ಲ, ಸರಕಾರಿ ಅಂಕಿಅಂಶಗಳೇ ಹೇಳುವಂತೆ ಶೇ. 2.6 ಹಾಗೂ ಅದರಲ್ಲಿ ಹಣದುಬ್ಬರ ದರವನ್ನು ತೆಗೆದರೆ ಕೇವಲ 0 ಎಂದು ಪ್ರತಿಪಾದಿಸಿದ್ದಾರೆ.

ದೇಶದ ಪ್ರಖ್ಯಾತ ಅಂಕಿಶಾಸ್ತ್ರಜ್ಞ ಪ್ರಣೊಬ್ ಸೇನ್ ರಂತಹವರು ಗರ್ಗ್ ಅವರ ಗಣಿತದಲ್ಲಿ ಸಮಸ್ಯೆ ಇದೆಯೆಂದು ಅಭಿಪ್ರಾಯಪಟ್ಟರೂ ಮೋದಿ ಸರಕಾರದ ಜಿಡಿಪಿ ಅಭಿವೃದ್ಧಿ ದರ ನಂಬಲರ್ಹವಲ್ಲ ಎಂದು ಘೋಷಿಸಿದ್ದಾರೆ. ಅರವಿಂದ್ ಸುಬ್ರಹ್ಮಣ್ಯನ್, ಅಶೋಕ್ ಗುಲಾಟಿ ಇನ್ನಿತರ ಮೋದಿ ಸರಕಾರದ ಹಣಕಾಸು ಸಲಹೆಗಾರರಾಗಿದ್ದವರು, ಮೋದಿ ಸರಕಾರದ ಪರವಾಗಿದ್ದ ಅರ್ಥಶಾಸ್ತ್ರಜ್ಞರೂ ಕೂಡ ಇಷ್ಟು ಉತ್ಪ್ರೇಕ್ಷೆಯನ್ನು ಅರಗಿಸಿಕೊಳ್ಳಲಾಗದೆ ಈ ಅಭಿವೃದ್ಧಿ ದರ ಸುಳ್ಳೆಂಬ ಸತ್ಯವನ್ನು ನುಡಿಯುತ್ತಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತದ ಅಭಿವೃದ್ಧಿಯ ಸತ್ಯಾಸತ್ಯತೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಾಗೆಯೇ ಜಿಡಿಪಿ ಎಂಬ ಮಾಪಕ ದೇಶದ ನೈಜ ಅಭಿವೃದ್ಧಿಯ ನೈಜ ಮಾಪಕವಹುದೇ ಎಂಬ ಅಸಲಿ ಪ್ರಶ್ನೆಯನ್ನು ಕೇಳಬೇಕಿದೆ.

ಜಿಡಿಪಿ-ಎಂಬ ಅರ್ಧ ಸುಳ್ಳು, ಅರ್ಧ ಸರಕಾರನಿಷ್ಠ ಊಹೆ

GDP (Gross Domestic Produce) ಎಂಬುದು ಒಂದು ದೇಶದ ಸ್ಥೂಲ ಅಭಿವೃದ್ಧಿಯನ್ನು ಸೂಚಿಸುವ ಲೆಕ್ಕಾಚಾರ. ಅದನ್ನು ಒಟ್ಟು ಉತ್ಪಾದನೆ ಅಥವಾ ಒಟ್ಟು ವೆಚ್ಚಗಳ ಕ್ರೋಡೀಕೃತ ಲೆಕ್ಕಾಚಾರವಾಗಿ ಎರಡು ಬಗೆಯಲ್ಲಿ ಮಾಡಲಾಗುತ್ತದೆ.

ಮೊದಲನೆಯ ರೀತಿಯಲ್ಲಿ ಒಂದು ದೇಶದಲ್ಲಿ ಉತ್ಪಾದಿಸುವ ಎಲ್ಲಾ ಸರಕು ಮತ್ತು ಸೇವೆಗಳ ಉತ್ಪಾದನೆಗಳ ಒಟ್ಟು ಮೊತ್ತಕ್ಕೆ ತೆರಿಗೆಯನ್ನು ಸೇರಿಸಿ ಸಬ್ಸಿಡಿಗಳನ್ನು ಕಳೆದು ಪಡೆದುಕೊಳ್ಳುವ ಮೊತ್ತ. ಅದಕ್ಕಾಗಿ ದೇಶದಲ್ಲಿ ಆ ವರ್ಷ ಕೃಷಿ, ಕೈಗಾರಿಕೆ, ಕಟ್ಟಡ ನಿರ್ಮಾಣ, ಸಾಗಣೆ-ವ್ಯಾಪಾರ-ಹೋಟೆಲ್ ಇತ್ಯಾದಿ, ಹಣಕಾಸು ಸೇವೆ, ಸಾರ್ವಜನಿಕ ಆಡಳಿತ ಹಾಗೂ ಇನ್ನಿತ್ಯಾದಿಗಳಲ್ಲಿ ಸೇರಿಸಲ್ಪಟ್ಟಿರುವ ಹೆಚ್ಚುವರಿ ಮೌಲ್ಯ (GVA- Gross Value Added)ಗಳನ್ನು ಪೂರ್ವ ನಿರ್ಧಾರಿತ ಮೂಲ ವರ್ಷಕ್ಕೆ (base year- ಇದುವರೆಗೆ ಅದು 2011-12 ಆಗಿತ್ತು. ಈ ತ್ರೈಮಾಸಿಕದಿಂದ ಅದನ್ನು 2022-23ಕ್ಕೆ ಬದಲಿಸಲಾಗಿದೆ.) ಹೋಲಿಸಿದಲ್ಲಿ ಎಷ್ಟು ಮೌಲ್ಯ ಸೇರಿಸಲಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಿ ಅದಕ್ಕೆ ಸರಕು ತೆರಿಗೆ ಸೇರಿಸಿ ಸಬ್ಸಿಡಿಗಳನ್ನು ಕಳೆದು ಜಿಡಿಪಿ ಮೌಲ್ಯವನ್ನು ನಿಗದಿ ಮಾಡಲಾಗುತ್ತದೆ.

ಈ ಅಭಿವೃದ್ಧಿ ದರವನ್ನು ವರ್ಷವ್ಯಾಪಿ ಮಾತ್ರವಲ್ಲದೆ ಪ್ರತೀ ಮೂರು ತಿಂಗಳ ತ್ರೈಮಾಸಿಕದ ಲೆಕ್ಕದಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ. (ಮೊದಲ ತ್ರೈಮಾಸಿಕ-ಎಪ್ರಿಲ್, ಮೇ, ಜೂನ್ ಒಳಗೊಂಡಿರುತ್ತದೆ).

ಆದರೆ ಈ ಲೆಕ್ಕಾಚಾರ ಸರಿಯಾಗಿರಲು ಎಲ್ಲಾ ಕ್ಷೇತ್ರಗಳ ಉತ್ಪಾದನೆ ಪ್ರಮಾಣ ಮತ್ತು ಅದಕ್ಕಾಗಿ ಆಗಿರುವ ವೆಚ್ಚದ ನಿಖರ ಅಂದಾಜು ಸರಕಾರಕ್ಕಿರಬೇಕು. ಭಾರತದಲ್ಲಿ ಸಂಘಟಿತ ಕ್ಷೇತ್ರದ ಉತ್ಪಾದನೆಗಳ ಬಗ್ಗೆ ಇದ್ದಿದ್ದರಲ್ಲಿ ಸರಿಯಾದ ವಿವರ ದಕ್ಕುತ್ತದೆ. ಆದರೆ ಅದರಲ್ಲೂ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಬಳಕೆಯಾದ ಮಧ್ಯವರ್ತಿ ಕಚ್ಚಾ ಸರಕು ಮತ್ತು ಸೇವೆಗಳ ಲೆಕ್ಕಾಚಾರ ಭಾರತದ ಅಕೌಂಟಿಂಗ್‌ನಲ್ಲಿ ನಾಪತ್ತೆಯಾಗಿರುತ್ತದೆ ಎಂಬುದು ಭಾರತದ ಜಿಡಿಪಿ ಲೆಕ್ಕಾಚಾರದ ಬಗ್ಗೆ ಇರುವ ಜಾಗತಿಕ ವಿಮರ್ಶೆ.

ಆ ಬಗೆಯ ವಿಮರ್ಶೆ ಮಾಡುವವರು ಭಾರತ ವಿರೋಧಿ, ಮೋದಿ ವಿರೋಧಿ, ದೇಶದ್ರೋಹಿಗಳೆಂದು ಭಾವಿಸಿದರೂ ಆಳದ ಮತ್ತೊಂದು ಅಸಲು ಸಮಸ್ಯೆ ಇದೆ. ಭಾರತದ ಶೇ.45 ರಷ್ಟು ಆರ್ಥಿಕತೆ ಕೃಷಿಯನ್ನೂ ಒಳಗೊಂಡಂತೆ ಅತಿಸಣ್ಣ, ಸಣ್ಣ ವ್ಯಾಪಾರ ಮತ್ತು ಉದ್ದಿಮೆಗಳ ಅಸಂಘಟಿತ ಕ್ಷೇತ್ರಕ್ಕೆ ಸೇರಿದೆ. ಅದರ ಉತ್ಪಾದನೆ ಇನ್ನಿತ್ಯಾದಿ ವಿವರಗಳು ಸರಕಾರಕ್ಕೆ ಸಿಗುವುದೇ ಇಲ್ಲ. ಹೀಗಾಗಿ ಸರಕಾರವು ಜಿಡಿಪಿ ಲೆಕ್ಕಾಚಾರ ಹಾಕುವಾಗ ಸುಸಂಘಟಿತ ಕ್ಷೇತ್ರದ ಬೆಳವಣಿಗೆಯ ದರವನ್ನೇ ಅಸಂಘಟಿತ ಉದ್ಯಮಕ್ಕೂ ಅವೈಜ್ಞಾನಿಕವಾಗಿ ಅನ್ವಯಿಸಿ ಲೆಕ್ಕಾಚಾರ ಮಾಡುತ್ತಾ ಬರುತ್ತಿದೆ. ಇದು ಹಲವಾರು ಅಸಂಬದ್ಧ ಹಾಗೂ ಉತ್ಪ್ರೇಕ್ಷಿತ ಅಭಿವೃದ್ಧಿ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.

ಉದಾಹರಣೆಗೆ 2016ರ ನವೆಂಬರ್‌ನಲ್ಲಿ ನೋಟು ನಿಷೇಧದಿಂದ ಸಂಘಟಿತ ಕ್ಷೇತ್ರಕ್ಕೆ ಹೆಚ್ಚು ಪೆಟ್ಟು ಬೀಳಲಿಲ್ಲ. ಹಾಗೂ ಸರಕಾರ ಹೊಸ ನಗದನ್ನು ಮೊದಲು ಸಂಘಟಿತ ಖಾಸಗಿ ಕ್ಷೇತ್ರಕ್ಕೆ ವರ್ಗಾಯಿಸಿದ್ದರಿಂದಲೂ ಸಂಘಟಿತ ಕ್ಷೇತ್ರಕ್ಕೆ ಹೆಚ್ಚು ಹಾನಿ ಆಗಲಿಲ್ಲ.

ಆದರೆ ದಿನನಿತ್ಯದ ನಗದು ಹರಿವನ್ನೇ ನೆಚ್ಚಿಕೊಂಡಿದ್ದ ಕೃಷಿ ಹಾಗೂ ಅತಿಸಣ್ಣ ಮತ್ತು ಸಣ್ಣ ವ್ಯಾಪಾರ ಹಾಗೂ ಉದ್ದಿಮೆಗಳು ನಲಕಚ್ಚಿದವು. ಅವು ಇದುವರೆಗೂ ಚೇತರಿಸಿಕೊಂಡಿಲ್ಲ. 2016ರ ನಂತರ ಈ ಅಸಂಘಟಿತ ಕ್ಷೇತ್ರವು ಅಭಿವೃದ್ಧಿಯಿರಲಿ ನಕಾರಾತ್ಮಕ ಕುಸಿತವನ್ನೇ ಎದುರಿಸುತ್ತಿವೆ.

ಆದರೂ ಭಾರತದ ಜಿಡಿಪಿ ಲೆಕ್ಕಾಚಾರದಲ್ಲಿ 2016-17ರ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿಯು (ಅಂದರೆ ನೋಟು ನಿಷೇಧದ ನಂತರದ ಅವಧಿಯಾದ 2017ರ ಜನವರಿ-ಫೆೆಬ್ರವರಿ-ಮಾರ್ಚ್ ಅವಧಿಯಲ್ಲಿ ಭಾರತದ ಜಿಡಿಪಿಯು ನೋಟು ನಿಷೇಧ ಪೂರ್ವ 2016ರ ಜನವರಿ-ಫೆಬ್ರವರಿ-ಮಾರ್ಚ್‌ನ ಅವಧಿಗಿಂತ) ಶೇ. 6.4ರಷ್ಟು ಅಭಿವೃದ್ಧಿಯನ್ನು ಸಾಧಿಸಿತ್ತು ಎಂದು ತೋರಿಸಲಾಯಿತು. ಏಕೆಂದರೆ ಸಂಘಟಿತ ಕ್ಷೇತ್ರದ ಅಭಿವೃದ್ಧಿ ಮಾನದಂಡಗಳನ್ನೇ ಅಸಂಘಟಿತ ಕ್ಷೇತ್ರಕ್ಕೂ ಅನ್ವಯಿಸಲಾಯಿತು. ಹೀಗಾಗಿ ಭಾರತದ ಜಿಡಿಪಿ ಅಭಿವೃದ್ಧಿ ದರ ಯಾವಾಗಲೂ ಸುಳ್ಳಿನ ಮತ್ತು ಉತ್ಪ್ರೇಕ್ಷೆಯ ಅಂಕಿಅಂಶ ಆಗಿದೆಯೇ ಹೊರತು ಸತ್ಯವಲ್ಲ ಎಂದು ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ ಅವರು ದಶಕಗಳಿಂದಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಕಳೆದ ಒಂದು ದಶಕದಲ್ಲಿ ಭಾರತದ ಅಭಿವೃದ್ಧಿ ದರ ಶೇ. 2ನ್ನು ದಾಟಿಲ್ಲ!!

ಎರಡನೆಯ ರೀತಿಯಲ್ಲಿ ಒಟ್ಟಾರೆ ಖಾಸಗಿ (ಕಾರ್ಪೊರೇಟ್ ವೆಚ್ಚ, ಗೃಹಬಳಕೆಯ ವೆಚ್ಚ) ಮತ್ತು ಸರಕಾರಿ ವೆಚ್ಚಗಳು ಹಾಗೂ ರಫ್ತು ಮತ್ತು ಆಮದುಗಳ ನಡುವಿನ ವ್ಯತ್ಯಾಸ ಗಳ ಲೆಕ್ಕಾಚಾರಗಳ ಮೂಲಕ ಜಿಡಿಪಿ ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ ಈ ಲೆಕ್ಕಾಚಾರದಲ್ಲಿ ಸರಕಾರದ ವ್ಯಯದ ಲೆಕ್ಕ ಹೆಚ್ಚು ಕಡಿಮೆ ಸರಿಯಾಗಿ ಸಿಗಬಹುದೇ ವಿನಾ ಕಾರ್ಪೊರೇಟ್ ವೆಚ್ಚಗಳ ಬಹುಪಾಲನ್ನು ವಿವಿಧ ರೀತಿಯಲ್ಲಿ ವಂಚಿಸಲಾಗುತ್ತದೆ. ಗೃಹ ಬಳಕೆಯ ತಲಾವಾರು ವೆಚ್ಚ ಕಡಿಮೆಯಾಗುತ್ತಿರುವುದನ್ನು ತೋರಿಸುವ ಲೆಕ್ಕಾಚಾರಗಳನ್ನು ಸರಕಾರ ಮುಚ್ಚಿಡುತ್ತದೆ.

ಪರಸ್ಪರ ಸರಿದೂಗದ ಉತ್ಪಾದನೆ ಮತ್ತು ವೆಚ್ಚಗಳ ಲೆಕ್ಕಗಳು

ಮೇಲಿನ ಅಭಾಸಗಳು ಕಾಂಗ್ರೆಸ್ ಸರಕಾರದ ಕಾಲದಲ್ಲೇ ಹುಟ್ಟಿದವಾದರೂ, ಮೋದಿ ಸರಕಾರವು ಅಂಕಿಅಂಶಗಳ ಮೇಲೂ ದಮನ ಮತ್ತು ಅತ್ಯಾಚಾರ ಮಾಡುತ್ತಿರುವುದರಿಂದ ಅವು ಕೇವಲ ಅಭಾಸವಾಗದೆ ಯೋಜಿತ ಷಡ್ಯಂತ್ರವಾಗಿ ಬದಲಾಗಿದೆ. ಹೀಗಾಗಿ ಮೋದಿ ಕಾಲದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸಾಧಿಸಲು ಸರಕಾರವು ಕೊಡುತ್ತಿರುವ ಹೇಳಿಕೆಗಳು ಅತ್ಯಂತ ವೈರುಧ್ಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ.

ಉದಾಹರಣೆಗೆ ಉತ್ಪಾದನೆ ಹೆಚ್ಚಾಗಿರುವುದು ಸತ್ಯವಾದಲ್ಲಿ ಅದು ಉತ್ಪಾದನೆಯ ಮೂಲ ಸರಕುಗಳಾದ ಕಲ್ಲಿದ್ದಲು, ಇಂಧನ ಮತ್ತು ವಿದ್ಯುತ್ತು ಹಾಗೂ ಬ್ಯಾಂಕ್ ಸಾಲಗಳ ಹೆಚ್ಚಳಗಳಲ್ಲಿ ವ್ಯಕ್ತವಾಗಬೇಕು. ಆದರೆ ಮೋದಿ ಅವಧಿಯಲ್ಲಿ ಮತ್ತು ಈ ತ್ರೈಮಾಸಿಕದಲ್ಲಿ ಕಲ್ಲಿದ್ದಲು ಇತ್ಯಾದಿ ಮೂಲ ಸರಕುಗಳ ಉತ್ಪಾದನೆಯ ಗತಿ ಮಂದವಾಗಿದೆ. ಹಾಗಿದ್ದಲ್ಲಿ ಉತ್ಪಾದಿತ ಸರಕುಗಳ ಅಭಿವೃದ್ಧಿ ಮಾತ್ರ ಅದರ ಎರಡು ಪಟ್ಟು ಹೇಗಿರಲು ಸಾಧ್ಯ? ಮೇಲಾಗಿ ಈ ಮೂಲ ಸರಕುಗಳ ಬಳಕೆಯ ಯಾದಿಯನ್ನೇ ಸಂಘಟಿತ ಕ್ಷೇತ್ರದ ಪ್ರಮುಖ ಉದ್ದಿಮೆಗಳು ತೋರುವುದಿಲ್ಲ.

ಹಾಗೆಯೇ ಆರ್ಥಿಕ ಹವಾಮಾನ ಚೆನ್ನಾಗಿದ್ದಲ್ಲಿ ಲಾಭ ಲೂಟಿಯ ಅವಕಾಶಗಳೂ ಹೆಚ್ಚುವುದರಿಂದ ಖಾಸಗಿ ಹೂಡಿಕೆಗಳು ಹೆಚ್ಚಾಗಬೇಕು. ಮೋದಿ ಸರಕಾರ ಬಂದಮೇಲೆ ಖಾಸಗಿ ಹೂಡಿಕೆಗಳು ಹೆಚ್ಚಾಗುವುದಿರಲಿ ತೀವ್ರವಾಗಿ ಕಡಿಮೆಯಾಗಿದೆ. ಇದರ ಬಗ್ಗೆ ವಿತ್ತ ಮಂತ್ರಿ ನಿರ್ಮಲಕ್ಕರೇ ಹಲವಾರು ಬಾರಿ ಖಾಸಗಿ ಕಾರ್ಪೊರೇಟ್ ಉದ್ದಿಮೆಗಳ ಸಂಸ್ಥೆಗಳಲ್ಲಿ (CII, FICCI, ASSOCHAM) ಅಲವತ್ತುಕೊಂಡಿದ್ದಾರೆ. ಈ ತ್ರೈಮಾಸಿಕದಲ್ಲೂ ಭಾರತದಿಂದ ಹೊರಹೋದ ಹೂಡಿಕೆಯೇ ಹೆಚ್ಚೇ ಹೊರತು ಒಳಬಂದ ಹೂಡಿಕೆಗಳಲ್ಲ. ಇದೇ ಪರಿಸ್ಥಿತಿ ವಿದೇಶಿ ನೇರ ಹೂಡಿಕೆಗಳಿಗೊ ಅನ್ವಯವಾಗುತ್ತದೆ.

ಭಾರತದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದ ಪಕ್ಷದಲ್ಲಿ ರಫ್ತು ಹೆಚ್ಚಾಗಿ ಆಮದು ಕಡಿಮೆಯಾಗಬೇಕಿತ್ತು. ಭಾರತದಲ್ಲಿ ವಿದೇಶಿ ಸಾಂಸ್ಥಿಕ ಮತ್ತು ನೇರ ಹೂಡಿಕೆಗಳು ಹೆಚ್ಚಾಗಿ ಡಾಲರ್ ಸಂಗ್ರಹ ಹೆಚ್ಚಬೇಕಿತ್ತು. ಭಾರತದ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಭಾರತವು ಹೆಚ್ಚಿನ ರುಪಾಯಿ ಕೊಟ್ಟು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರನ್ನು ಖರೀದಿಸುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಆಗ ಡಾಲರ್‌ನ ಎದುರು ರೂಪಾಯಿ ದರವು ಆರು ತಿಂಗಳಲ್ಲಿ ಹತ್ತು ರೂ.ಗಳಷ್ಟು ಕುಸಿದು ಒಂದು ಡಾಲರ್‌ಗೆ 95 ರೂ.ಗೆ ತಲುಪುತ್ತಿರಲಿಲ್ಲ. ಹೀಗಾಗಿ ಡಾಲರ್ ಗಟ್ಟಿಯಾಗುತ್ತಿದೆ ವಿನಾ ರೂಪಾಯಿ ಕುಸಿಯುತ್ತಿಲ್ಲ ಎಂಬ ಮೋದಿ ಸರಕಾರದ ತರ್ಕ ಹುಸಿ ಮಾತ್ರವಲ್ಲ, ಕುಸಿಯುತ್ತಿದ್ದರೂ ಸಬ್ ಚಂಗಾಸಿ ಎಂದು ಬುರುಡೆ ಬಿಡುವ ಕುತಂತ್ರ.

K-ಮಾದರಿ ಅಭಿವೃದ್ಧಿ

-ಅದಾನಿ ಶೇ.7.8- ಭಾರತ-ಶೇ.0

ಹಾಗೆಯೇ ಭಾರತದ ಆರ್ಥಿಕತೆ ಶೇ. 7.8ರಷ್ಟು ಅಭಿವೃದ್ಧಿ ತೋರಿಸುತ್ತಿದ್ದರೆ, ಅದು ಹೆಚ್ಚಿನ ಉದ್ಯೋಗ, ಹೆಚ್ಚಿನ ಆದಾಯ, ಹೆಚ್ಚಿನ ಖರೀದಿ ಇತ್ಯಾದಿಗಳಲ್ಲಿ ವ್ಯಕ್ತವಾಗಬೇಕಿತ್ತಲ್ಲವೇ? ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಯುವಭಾರತದ ಆಕ್ರೋಶವೇ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧದ ರಾಜಕೀಯ ಆಕ್ರೋಶದ ಅಭಿವ್ಯಕ್ತಿಯಾಗಿತ್ತು. ಇದನ್ನು ಮೋದಿ ಸರಕಾರವೂ ಕೂಡ ನಿರಾಕರಿಸಲಾಗದ ಪರಿಸ್ಥಿತಿ ಇರುವುದಕ್ಕಾಗಿಯೇ ಕಳೆದ ವರ್ಷದ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿ ಉತ್ತೇಜಕಗಳನ್ನು ಕಾರ್ಪೊರೇಟ್‌ಗಳಿಗೆ ಕೊಟ್ಟು ಉದ್ಯೋಗ ಜಾಸ್ತಿ ಮಾಡುವ ನಾಟಕವನ್ನು ಮೋದಿ ಸರಕಾರ ಮಾಡಿತ್ತು.

ಹೀಗಾಗಿ ಭಾರತದ ಅಭಿವೃದ್ಧಿ ಮಾದರಿಯು, ಅದರಲ್ಲೂ ಮೋದಿ ಕಾಲದಲ್ಲಿ ಆದಾಯವನ್ನಾಗಲೀ, ಉಳಿತಾಯವನ್ನಾಗಲೀ, ಉದ್ಯೋಗವನ್ನಾಗಲೀ ಹೆಚ್ಚಿಸುತ್ತಿಲ್ಲವಾದ್ದರಿಂದ ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತಿಲ್ಲ. ಹೀಗಾಗಿ ಆರ್ಥಿಕತೆಯಲ್ಲಿ ಖರೀದಿ ಇಲ್ಲವಾಗಿ ಖಾಸಗಿ ಅಥವಾ ವಿದೇಶಿ ಹೂಡಿಕೆಗಳು ಹೆಚ್ಚುತ್ತಿಲ್ಲ. ಚಿನ್ನದ ಖರೀದಿಗಿಂತ ಚಿನ್ನದ ಅಡಮಾನ ಹೆಚ್ಚುತ್ತಿದೆ. ಅಂದರೆ ಬಡ-ಮಧ್ಯಮವರ್ಗಗಳ ಉಳಿತಾಯ ಶೂನ್ಯವಾಗುತ್ತಿದೆ. ಇದೆಲ್ಲವೂ ಭಾರತದ ಶೇ. 90ರಷ್ಟು ಆರ್ಥಿಕತೆಯ ಸ್ಥಗಿತತೆಯನ್ನು ಸೂಚಿಸುತ್ತದೆಯೇ ಹೊರತು ಅಭಿವೃದ್ಧಿಯನ್ನಲ್ಲ.

ಹಾಗೆಂದು ಸರಕಾರ ಹೇಳುವಂತೆ ವಾಹನ ಖರೀದಿ, ಪ್ರವಾಸೋದ್ಯಮ, ಹಣಾಕಾಸು ಸೇವೆ, ಐಟಿ ಕ್ಷೇತ್ರಗಳ ಅಭಿವೃದ್ಧಿ ಆಗುತ್ತಿಲ್ಲ ಎಂದಲ್ಲ. ಉಳಿದವಕ್ಕೆ ಹೋಲಿಸಿದಲ್ಲಿ ಆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಆದರೆ ವಾಹನ ಕ್ಷೇತ್ರದಲ್ಲಿ ಬಡ-ಮಧ್ಯಮ ವರ್ಗಗಳು ಬಳಸುವ ವಾಹನಗಳಿಗಿಂದ ಶೇ. 10ರಷ್ಟು ಭಾರತದ ಮೇಲ್ ಮಧ್ಯಮ ಮತ್ತು ಶ್ರೀಮಂತ ವರ್ಗದವರು ಬಳಸುವ ಐಶಾರಾಮಿ SUಗಿ ಕಾರುಗಳ ಭರಾಟೆ ಹೆಚ್ಚುತ್ತಿದೆ. ಐಟಿ ಕ್ಷೇತ್ರದಲ್ಲಿ ಲಕ್ಷ ಲಕ್ಷದಷ್ಟು ಬೆಲೆ ಬಾಳುವ ಆಧುನಿಕ ಐಫೋನ್ ಇತ್ಯಾದಿಗಳ ಮಾರಾಟ ಹೆಚ್ಚುತ್ತಿದೆಯೇ ವಿನಾ ಜನಸಾಮಾನ್ಯ ಬಳಕೆಯ ಸಾಧನಗಳಲ್ಲ.

ಹೀಗಾಗಿ ಭಾರತದ ಅಭಿವೃದ್ಧಿ ಮಾದರಿಯನ್ನು K ಮಾದರಿ ಅಭಿವೃದ್ಧಿ ಮಾದರಿ ಎಂದು ಬಣ್ಣಿಸಲಾಗುತ್ತದೆ. ಅಂದರೆ ಅತ್ಯಂತ ಅಸಮಾನ ಅಭಿವೃದ್ಧಿ ಮಾದರಿ.

ಗರ್ಗ್ ಗಣಿತ ತಪ್ಪು- ಪ್ರಶ್ನೆಗಳು ಸರಿ

ಹೀಗಾಗಿ ಮಾಜಿ ಕಾರ್ಯದರ್ಶಿ ಗರ್ಗ್ ಗಣಿತ ತಪ್ಪಿರಬಹುದು. ಆದರೆ ಅವರ ಉದ್ದೇಶವೇನೇ ಇದ್ದರೂ ಅವರು ಕೇಳಿದ ಪ್ರಶ್ನೆಗಳು ಸರಿ ಇವೆ.

ಗರ್ಗ್ ಪ್ರಶ್ನೆ ಸರಳ. 2025-26ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 86 ಲಕ್ಷ ಕೋಟಿ ರೂ. ಆಗಿತ್ತು. ಸರಕಾರದ ಲೆಕ್ಕದ ಪ್ರಕಾರ 2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 88.5 ಲಕ್ಷ ಕೋಟಿ ರೂ. ಹೀಗಾಗಿ ಹೆಚ್ಚಳವಾಗಿರುವುದು 2.5 ಲಕ್ಷ ಕೋಟಿ ರೂ. ಅಂದರೆ ಹೋದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದ ಅಭಿವೃದ್ಧಿ ದರ ಶೇ. 2.6 ಮಾತ್ರ ಆಗಬೇಕು.

ಆದರೆ ಸರಕಾರವು 2025-26ರ ಮೊದಲ ತ್ರೈಮಾಸಿಕದ ಜಿಡಿಪಿಯನ್ನು ರೂ. 86 ಲಕ್ಷ ಕೋಟಿಯಿಂದ ರೂ. 80 ಲಕ್ಷ ಕೋಟಿಗೆ ಅಂದರೆ ರೂ. 6 ಲಕ್ಷ ಕೋಟಿಯಷ್ಟು ದಿಢೀರನೇ ಇಳಿಸಿಬಿಟ್ಟಿದೆ. ಆ ಮೂಲಕ ಅಭಿವೃದ್ಧಿ ದರವನ್ನು ಶೇ. 7.8 ಎಂದು ತಪ್ಪಾಗಿ ಹಿಗ್ಗಿಸಿ ಹೇಳುತ್ತಿದೆ. ಅಭಿವೃದ್ಧಿ ದರವನ್ನು ಹೆಚ್ಚಾಗಿ ತೋರಿಸಲೆಂದೇ 2025-26ರ ಜಿಡಿಪಿಯನ್ನು ಕುಗ್ಗಿಸಿದೆ ಎಂಬುದು ಗರ್ಗ್ ಅವರ ಗಣಿತ ಮತ್ತು ವಾದ.

ಆದರೆ ಮೋದಿ ಸರಕಾರ ಈ ತ್ರೈಮಾಸಿಕದಿಂದ ನಮ್ಮ ಜಿಡಿಪಿ ಲೆಕ್ಕಾಚಾರದ ಮೂಲವರ್ಷವನ್ನು 2011-12ರಿಂದ 2022-23ಕ್ಕೆ ಬದಲಿಸಿದೆ. ಈ ಹೊಸ ಲೆಕ್ಕಾಚಾರದಲ್ಲಿ ನಮ್ಮ ಹಳೆಯ ಜಿಡಿಪಿ ಲೆಕ್ಕಾಚಾರಗಳನ್ನೂ ಪುನರ್ ವಿಮರ್ಶೆ ಮಾಡಲಾಗುತ್ತಿದೆ. ಅದರ ಭಾಗವಾಗಿಯೇ 2011-12ರ ಮೂಲ ವರ್ಷದ ಆಧಾರದ ಲೆಕ್ಕಾಚಾರದಲ್ಲಿ 2025-26ರ ಮೊದಲ ತ್ರೈಮಾಸಿಕದ ಜಿಡಿಪಿ ಲೆಕ್ಕ 86 ಲಕ್ಷ ಕೋಟಿ ರೂ. ಇದ್ದದ್ದು ಹೊಸ 2022-23 ಮೂಲ ವರ್ಷದ ಆಧಾರದಲ್ಲಿ ರೂ. 80 ಲಕ್ಷ ಕೋಟಿಗೆ ಇಳಿಯುತ್ತದೆ. ಹೀಗಾಗಿ ಅದನ್ನು 2011-12ರ ಮೂಲ ವರ್ಷದ ಆಧಾರದ ಲೆಕ್ಕದೊಂದಿಗೆ ಹೋಲಿಸಬಾರದು ಎಂಬುದು ಸರಕಾರದ ವಾದ.

ಅಷ್ಟರ ಮಟ್ಟಿಗೆ ಈ ವಾದ ಸರಿ ಇದೆ. ಆದರೆ ಇದು ಗರ್ಗ್ ಅವರ ಗಣಿತಕ್ಕೆ ಉತ್ತರ ಕೊಟ್ಟಿದೆಯೇ ವಿನಾ ಗರ್ಗ್ ಅವರು ಕೇಳಿದ ಇತರ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ:

-ಮೂಲ ವರ್ಷಾಧಾರವನ್ನು 2011ರಿಂದ 2022ಕ್ಕೆ ಬದಲಿಸಿರುವುದು ತಪ್ಪಲ್ಲ. ಆದರೆ ಅದನ್ನು ಈಗ ಮಾಡಿದ್ದೇಕೆ? ಭಾರತದ ಆರ್ಥಿಕತೆ 2011ರ ನಂತರದಲ್ಲಿ ಹಲವಾರು ಮೂಲಭೂತ ಬದಲಾವಣೆಗಳು ಬಂದಿದ್ದರೂ ಜಿಡಿಪಿ ಲೆಕ್ಕಾಚಾರಕ್ಕೆ 2011-12ರ ಮೂಲ ವರ್ಷವನ್ನೇ ಬಳಸಿಕೊಳ್ಳುತ್ತಿರುವುದರಿಂದ ಭಾರತದ ಜಿಡಿಪಿ ಸಂಖ್ಯೆಗಳು ವಿಶ್ವಾಸಾರ್ಹವಲ್ಲ ಎಂದು ಐಎಂಎಫ್ ಮತ್ತು ವಿಶ್ವ ಬ್ಯಾಂಕುಗಳು 2016ರಿಂದಲೂ ಹೇಳುತ್ತಿವೆ. ಆದರೂ ಮೂಲ ವರ್ಷದ ಬದಲಾವಣೆ 2019 ಮತ್ತು 2024ರ ಚುನಾವಣೆಗಳ ನಂತರವೇ ಮಾಡಿದ್ದಕ್ಕೆ ಕಾರಣವೇನು?

-2022ರ ಮೂಲವರ್ಷದ ಲೆಕ್ಕಾಚಾರದಲ್ಲಿ ಭಾರತದ ಎಲ್ಲಾ ಜಿಡಿಪಿ ಅಂದಾಜುಗಳು ಉತ್ಪ್ರೇಕ್ಷಿತ ಎಂದು ಮೋದಿ ಸರಕಾರ ಒಪ್ಪಿಕೊಳ್ಳುತ್ತದೆಯೇ? ಏಕೆಂದರೆ 2019ರ ಚುನಾವಣೆಗೆ ಮುಂಚೆ ಜಿಡಿಪಿ ದರವನ್ನು ಶೇ. 7 ಎಂದು ಪ್ರಚಾರ ಮಾಡಿ, ಚುನಾವಣೆಯ ನಂತರ ಜನರ ಗಮನವನ್ನು ಬೇರೆಡೆ ಹರಿಸಿ ತಣ್ಣಗೆ ಶೇ. 6.1ಕ್ಕೆ ಇಳಿಸಲಾಯಿತು. ಏಕೆಂದರೆ 2020ರ ಅಭಿವೃದ್ಧಿ ದರವನ್ನು ಅಂದಾಜು ಮಾಡುವಾಗ ಶೇ. 7ಕ್ಕೆ ಹೋಲಿಸಿದರೆ ಕಡಿಮೆಯಾಗುತ್ತ್ತಿತ್ತು. ಅದರ ಬದಲಿಗೆ ಶೇ. 6.1ಕ್ಕೆ ಹೋಲಿಸಿದಲ್ಲಿ ಕೃತಕವಾಗಿ ಜಾಸ್ತಿ ತೋರಿಸಬಹುದು! ಹಾಗೆಯೇ ಮತ್ತು 2024ರ ಚುನಾವಣೆಗಳಿಗೆ ಮುನ್ನ ಭಾರತದ ಅಭಿವೃದ್ಧಿ ದರವನ್ನು ಶೇ. 7.6 ಎಂದೂ ಆನಂತರ ಶೇ. 9.2 ಎಂದು ಬೊಗಳೆ ಬಿಡಲಾಯಿತು. ಈಗ ಅದನ್ನು ಹೊಸ 2022ರ ಮೂಲ ವರ್ಷದ ಸಾಲಿನಲ್ಲಿ ಶೇ. 7.2ಕ್ಕೆ ಇಳಿಸಲಾಗಿದೆ.

ಅಂದರೆ ಸರಕಾರವು ಜಿಡಿಪಿ ಅಭಿವೃದ್ಧಿ ದರವನ್ನು ತನ್ನ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳುವ, ಬಗ್ಗಿಸುವ, ಒಗ್ಗಿಸುವ ಕುತಂತ್ರವನ್ನು ಮಾಡುತ್ತಲೇ ಬರುತ್ತಿಲ್ಲವೇ?

-ಸಾಮಾನ್ಯವಾಗಿ ಹಳೆಯ ಮೂಲ ವರ್ಷದಿಂದ ಹೊಸ ಮೂಲ ವರ್ಷಕ್ಕೆ ಬದಲಾದಾಗ ಶೇ.2-3ರಷ್ಟು ಬದಲಾವಣೆ ಸಹಜ. ಆದರೆ ರೂ. 86ಲಕ್ಷ ಕೋಟಿಯಿಂದ ರೂ. 80 ಲಕ್ಷ ಕೋಟಿಗೆ ಅಂದರೆ ಶೇ.7ರಷ್ಟು ಇಳಿಕೆ ಹೇಗಾಯಿತು ಮತ್ತು ಯಾಕಾಯಿತು ಎಂಬುದು ಗರ್ಗ್ ಅವರ ಅಸಲಿ ಪ್ರಶ್ನೆಗಳು. ಈ ಪ್ರಶ್ನೆಗಳನ್ನು ಇತರ ಜನಪರ ಆರ್ಥಿಕ ತಜ್ಞರು ಕೂಡ ಕೇಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯ ಪ್ರಶ್ನೆ ಅದಾನಿಗಳ ದೇಶದ ಅಭಿವೃದ್ಧಿ ಶೇ. 7.8 ಆದರೂ ದೇಶದ ಜನರ ಅಭಿವೃದ್ಧಿ ಮಾತ್ರ ಶೂನ್ಯವಾಗಿರುವುದೇಕೆ? ದೇಶವೆಂದರೆ ಅದಾನಿಗಳೇ? ದೇಶವೆಂದರೆ ಜನರಲ್ಲವೇ?

(ಲೇಖಕರು ಹಿರಿಯ ಚಿಂತಕರು)

Tags

IndiaGDPmodimiracle
share
ಶಿವಸುಂದರ್
ಶಿವಸುಂದರ್
Next Story
X