Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ...

ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ ದೇಶಾದ್ಯಂತ NRC ಜಾರಿ ಮಾಡುತ್ತಿದೆಯೇ?

ಶಿವಸುಂದರ್ಶಿವಸುಂದರ್16 July 2025 11:37 AM IST
share
ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ ದೇಶಾದ್ಯಂತ NRC ಜಾರಿ ಮಾಡುತ್ತಿದೆಯೇ?
ಇದೀಗ 2026ರಲ್ಲಿ ಜನಗಣತಿ ನಡೆಸುವ ಉದ್ದೇಶವನ್ನು ಘೋಷಿಸಿರುವ ಮೋದಿ ಸರಕಾರ, ಅದರಲ್ಲಿ NPR-NRC ತಯಾರಿಗೆ ಬೇಕಿರುವ ಪ್ರಶ್ನೆಗಳನ್ನೂ ಸೇರಿಸಲಾಗಿದೆಯೇ ಎಂಬ ಬಗ್ಗೆ ಯಾವ ಉತ್ತರವನ್ನೂ ನೀಡುತ್ತಿಲ್ಲ. ಹಾಗೆಂದು ಬಿಜೆಪಿಗೆ ಬಹುಮತವಿಲ್ಲದ ಕಾರಣ ಮತ್ತು 2020ರ ಪ್ರತಿರೋಧದ ಕಾರಣಗಳಿಂದ NPR-NRC ಯೋಜನೆ ಕೈಬಿಟ್ಟಿರಬಹುದೇ ಎಂದು ಆಶಾವಾದಿ ಪಂಡಿತರು ಊಹಿಸಲು ಶುರುಮಾಡುವ ಮುಂಚೆಯೇ ಮೋದಿ ಸರಕಾರ ನವೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿರುವ ಬಿಹಾರದಲ್ಲಿ ಚುನಾವಣಾ ಆಯೋಗದ ಮೂಲಕ ದಿಢೀರನೇ NRC ರೀತಿಯ ಪ್ರಕ್ರಿಯೆ ಪ್ರಾರಂಭಿಸಿದೆ.

ಭಾಗ- 1

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಬಂದಿದ್ದರೆ ಸಂವಿಧಾನವನ್ನೇ ಬದಲಿಸುತ್ತಿತ್ತು ಎಂಬ ಮಾತಿಗೆ ಯಾವ ಅರ್ಥವೂ ಉಳಿದಂತಿಲ್ಲ. ಏಕೆಂದರೆ 400 ಸೀಟುಗಳು ಬರದಿದ್ದರೂ ಮೋದಿ ಸರಕಾರ ಹಂತಹಂತವಾಗಿ ಸಂವಿಧಾನವನ್ನು ನಾಶಮಾಡುವ ಯೋಜನೆಗಳನ್ನೇ ಜಾರಿಗೊಳಿಸುತ್ತಿದೆ. 2019ರಲ್ಲಿ ತನಗೆ ಅತ್ಯಧಿಕ ಬಹುಮತವಾಗಿದ್ದಾಗ ಈ ದೇಶದ ಬಡಜನರ ಮತ್ತು ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ನಾಗರಿಕತ್ವವನ್ನು ನಿರಾಕರಿಸುವ NRC (National Register Of Citizens-ರಾಷ್ಟ್ರೀಯ ನಾಗರಿಕರ ರಿಜಿಸ್ಟರ್) ಯನ್ನು ಜಾರಿ ಮಾಡಲು ಹೊರಟಿತ್ತು. ಆ ಮೂಲಕ ಭಾರತವನ್ನು ಹಿಂದೂ-ಅರ್ಥಾತ್ ಮೇಲ್ಜಾತಿ ಸವರ್ಣೀಯರ ರಾಷ್ಟ್ರವಾಗಿ ಘೋಷಿಸಿ ಉಳಿದವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಹುನ್ನಾರ ನಡೆಸಿತ್ತು.

ಅದಕ್ಕಾಗಿ 2020-21ರಲ್ಲಿ ನಡೆಯಬೇಕಿದ್ದ ಜನಗಣತಿಯಲ್ಲಿ ಪ್ರತಿಯೊಬ್ಬ ಭಾರತೀಯರು ತಾವು ಭಾರತದಲ್ಲೇ ಹುಟ್ಟಿದ್ದು ಎಂದು ಸಾಬೀತು ಪಡಿಸುವ ದಾಖಲೆಗಳನ್ನು ತೋರಿಸಬೇಕೆಂದೂ ಕಡ್ಡಾಯಗೊಳಿಸಿತ್ತು. 1987ಕ್ಕೆ ಮುಂಚೆ ಹುಟ್ಟಿರುವ ಭಾರತದ ಪ್ರತಿಯೊಬ್ಬರೂ ಹುಟ್ಟಿದ ದಿನ ಮತ್ತು ಸ್ಥಳದ ಪುರಾವೆ ತೋರುವ ದಾಖಲೆಗಳನ್ನೂ, 1987-2004ರ ನಡುವೆ ಹುಟ್ಟಿರುವವರು ತಮ್ಮ ಹುಟ್ಟಿದ ದಿನ ಮತ್ತು ಸ್ಥಳದ ದಾಖಲೆಗಳಲ್ಲದೆ ತಮ್ಮ ತಂದೆ ತಾಯಿಗಳಲ್ಲಿ ಒಬ್ಬರು ಭಾರತೀಯ ನಾಗರಿಕರು ಎಂದು ಸಾಬೀತು ಪಡಿಸುವ ದಾಖಲೆಗಳನ್ನೂ, 2004ರ ನಂತರ ಹುಟ್ಟಿದವರು ತಮ್ಮ ದಾಖಲೆಗಳ ಜೊತೆಜೊತೆಗೆ, ತಮ್ಮ ತಂದೆ ತಾಯಿಗಳಿಬ್ಬರ ದಾಖಲೆಗಳನ್ನೂ ತೋರಿಸಿ ತಮ್ಮ ನಾಗರಿಕತ್ವವನ್ನು ಸಾಬೀತುಗೊಳಿಸಬೇಕೆಂದು ಆ ಆದೇಶ ಸ್ಪಷ್ಟಗೊಳಿಸಿತ್ತು.

ಆದರೆ ಈ ಪ್ರಕ್ರಿಯೆಯಲ್ಲಿ ದಾಖಲೆ ಪತ್ರ ತೋರಿಸದೆ ನಾಗರಿಕತ್ವ ಕಳೆದುಕೊಳ್ಳುವ ಮುಸ್ಲಿಮೇತರರಿಗೆ CAA (Citizenship Amendment Act- ನಾಗರಿಕತ್ವ ತಿದ್ದುಪಡಿ ಕಾಯ್ದೆ)ಯ ಮೂಲಕ ನಾಗರಿಕತ್ವ ಕೊಡಲಾಗುವುದೆಂದು ಗೃಹಮಂತ್ರಿ ಅಮಿತ್ ಶಾ ಈ ಯೋಜನೆಯ ಹಿಂದಿನ ಕೋಮುವಾದಿ ಉದ್ದೇಶಗಳನ್ನು ಸ್ಪಷ್ಟಗೊಳಿಸಿದ್ದರು. ಆದರೆ ಸಿಎಎ ಮೂಲಕ ನಾಗರಿಕತ್ವಗಳನ್ನು ಪಡೆದುಕೊಳ್ಳಲು ಮುಸ್ಲಿಮೇತರರು ತಾವು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದ ನಿರಾಶ್ರಿತರು ಎಂದು ಸಾಬೀತು ಮಾಡಿಕೊಳ್ಳಬೇಕು. ಹೀಗಾಗಿ ಅದು ದಾಖಲೆಗಳಿಲ್ಲದ ಭಾರತೀಯರಿಗೆ ಅನ್ವಯವಾಗುವುದಿಲ್ಲ ಎಂಬ ಸತ್ಯವನ್ನು ಮುಚ್ಚಿಟ್ಟಿದ್ದರು.

ವಾಸ್ತವವಾಗಿ ಎನ್‌ಆರ್‌ಸಿ ಪ್ರಕ್ರಿಯೆ ಜಾರಿಯಾಗಿರುವ ಏಕೈಕ ರಾಜ್ಯ ಅಸ್ಸಾಂ. ಅಲ್ಲಿಯ ಮೂರು ಕೋಟಿ ರಾಜ್ಯವಾಸಿಗಳಲ್ಲಿ 19 ಲಕ್ಷ ಜನರ ಬಳಿ ಸರಕಾರ ಕೇಳಿದ ದಾಖಲೆಗಳಿರಲಿಲ್ಲ. ಅವರಲ್ಲಿ 12 ಲಕ್ಷ ಜನ ಬಡ ಹಿಂದೂಗಳು, ಆದಿವಾಸಿಗಳು ಮತ್ತು ಮಹಿಳೆಯರೇ ಆಗಿದ್ದರು. ಈ ಕಾರಣಕ್ಕೆ ಅಸ್ಸಾಮಿನ ಬಿಜೆಪಿ ಸರಕಾರ ಇಡೀ ಎನ್‌ಆರ್‌ಸಿಯನ್ನೇ ರದ್ದು ಮಾಡಿತ್ತು.

2019-20ರಲ್ಲಿ ಕೋಮುವಾದಿ ಬಿಜೆಪಿ ಸರಕಾರದ NPR-NRC-CAA ಯೋಜನೆಯ ವಿರುದ್ಧ ಮೊದಲು ದೇಶಪ್ರೇಮಿ ಮುಸ್ಲಿಮರು ಮತ್ತು ಆ ನಂತರದಲ್ಲಿ ದೇಶದ ಎಲ್ಲಾ ಧೀಮಂತ ಬಡವರ್ಗಗಳು ಎರಡನೇ ಸ್ವಾತಂತ್ರ್ಯ ಸಮರದ ರೀತಿಯಲ್ಲಿ ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ಬೃಹತ್ ಜನಹೋರಾಟಗಳನ್ನು ದೇಶದೆಲ್ಲೆಡೆ ಪ್ರಾರಂಭಿಸಿದರು. ಅದೇ ವೇಳೆ 2020ರ ಮಾರ್ಚ್‌ನಲ್ಲಿ ಕೋವಿಡ್ ಕೂಡ ಅಪ್ಪಳಿಸಿದ್ದರಿಂದ ಮೋದಿ ಸರಕಾರ ಜನಗಣತಿ ಮತ್ತು NPR-NRCಅಯನ್ನು ಕೈಬಿಡಬೇಕಾಯಿತು.

ಇದೀಗ 2026ರಲ್ಲಿ ಜನಗಣತಿ ನಡೆಸುವ ಉದ್ದೇಶವನ್ನು ಘೋಷಿಸಿರುವ ಮೋದಿ ಸರಕಾರ, ಅದರಲ್ಲಿ NPR-NRC ತಯಾರಿಗೆ ಬೇಕಿರುವ ಪ್ರಶ್ನೆಗಳನ್ನೂ ಸೇರಿಸಲಾಗಿದೆಯೇ ಎಂಬ ಬಗ್ಗೆ ಯಾವ ಉತ್ತರವನ್ನು ನೀಡುತ್ತಿಲ್ಲ. ಹಾಗೆಂದು ಬಿಜೆಪಿಗೆ ಬಹುಮತವಿಲ್ಲದ ಕಾರಣ ಮತ್ತು 2020ರ ಪ್ರತಿರೋಧದ ಕಾರಣಗಳಿಂದ NPR-NRC ಯೋಜನೆ ಕೈಬಿಟ್ಟಿರಬಹುದೇ ಎಂದು ಆಶಾವಾದಿ ಪಂಡಿತರು ಊಹಿಸಲು ಶುರುಮಾಡುವ ಮುಂಚೆಯೇ ಮೋದಿ ಸರಕಾರ ನವೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿರುವ ಬಿಹಾರದಲ್ಲಿ ಚುನಾವಣಾ ಆಯೋಗದ ಮೂಲಕ ದಿಢೀರನೇ NRC ರೀತಿಯ ಪ್ರಕ್ರಿಯೆ ಪ್ರಾರಂಭಿಸಿದೆ.

ಈ ಆದೇಶದ ಹಿಂದಿನ ಚುನಾವಣಾ ಆಯೋಗದ ಉದ್ದೇಶ ಮತ್ತು ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇದೇ ಜುಲೈ 10ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಅಹವಾಲುದಾರರ ಪ್ರಶ್ನೆಗಳಲ್ಲಿನ ಯಥಾರ್ಥತೆಯನ್ನು ಎತ್ತಿ ಹಿಡಿದಿದೆ ಮತ್ತು ಪ್ರಕ್ರಿಯೆಯಲ್ಲಿನ ದೋಷಗಳನ್ನು ಗುರುತಿಸಿ ವಿಸ್ತೃತ ವಿಚಾರಣೆಗೆ ಜುಲೈ 28ರ ದಿನಾಂಕವನ್ನು ಗೊತ್ತುಪಡಿಸಿದೆ.

ಆದರೆ ಮೋದಿ ಸರಕಾರದಡಿಯಲ್ಲಿರುವ ಚುನಾವಣಾ ಆಯೋಗ ಆ ಆದೇಶವನ್ನೇ ಕಡೆಗಣಿಸುವಂತೆ ಬಿಹಾರದ ಪರೋಕ್ಷ NRC ಪ್ರಕ್ರಿಯೆಯನ್ನು ಇಡೀ ದೇಶಾದ್ಯಂತ ನಡೆಸಲು ಜುಲೈ 13 ರಂದು ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾಧಿಕಾರಿಗಳಿಗೆ ಆದೇಶ ನೀಡಿದೆ!

ಆ ಮೂಲಕ ದೇಶಾದ್ಯಂತ ಪರೋಕ್ಷವಾಗಿ NRC ನಡೆಸುವ ತಂತ್ರವನ್ನು ಪ್ರಾರಂಭಿಸಿದೆ.

ಚುನಾವಣಾ ಆಯೋಗ ನಡೆಸುತ್ತಿರುವ NRC ತಂತ್ರಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಬಿಹಾರದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಬಿಹಾರ: ಮತಪರಿಷ್ಕರಣೆಯಲ್ಲ, ನಾಗರಿಕತ್ವ ನಿರಾಕರಣೆ

ಬಿಹಾರದಲ್ಲಿ ರಾಜ್ಯ ಶಾಸನಸಭೆಗೆ 2025ರ ನವೆಂಬರ್ ಒಳಗೆ ಚುನಾವಣೆ ನಡೆಯಬೇಕಿದೆ. ಭಾರತದಲ್ಲಿ ಸಂವಿಧಾನದ ಆರ್ಟಿಕಲ್ 324, 325, 326ರ ಪ್ರಕಾರ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಅದರಂತೆ ಚುನಾವಣಾ ಆಯೋಗವು ದೇಶದಲ್ಲಿ 18 ವಯಸ್ಸು ತುಂಬಿರುವ ಪ್ರತಿಯೊಬ್ಬ ಭಾರತೀಯರಿಗೂ ಮತದಾನದ ಹಕ್ಕು ಒದಗಿಸಿಕೊಡಬೇಕು. ಅದಕ್ಕೆ ಪೂರಕವಾಗಿ 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 21 (3), 1960ರ ಮತಪಟ್ಟಿ ತಯಾರಿ ನಿಯಮಗಳ ಪ್ರಕಾರ ಚುನಾವಣಾ ಆಯೋಗ ರಾಜ್ಯದಲ್ಲಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಅನರ್ಹರಿದ್ದರೆ, ಮೃತರಾಗಿದ್ದರೆ, ಬೇರೆ ಜಾಗಗಳಿಗೆ ಸ್ಠಳಾಂತರಗೊಂಡಿರುವವರ ಹೆಸರನ್ನು ತೆಗೆದುಹಾಕಬೇಕು.

ಇದಕ್ಕಾಗಿ ಚುನಾವಣಾ ಆಯೋಗಗಳು ಸಾಮಾನ್ಯವಾಗಿ ಪ್ರತಿ ಚುನಾವಣೆಗೆ ಮುನ್ನ Summary Revision ಎಂಬ ಪರಿಷ್ಕರಣೆಯನ್ನೂ ಹಾಗೂ ಕಾಲಕಾಲಕ್ಕೆ ಇಡೀ ಮತಪಟ್ಟಿಯನ್ನು ಸಮಯಕ್ಕೆ ತಕ್ಕಹಾಗೆ ಸಿದ್ಧಪಡಿಸಲು Intensive Revision ಎಂಬ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ. ಈಗ ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ Special Intensive Revision (SIR) ಎಂಬ ಪ್ರಕ್ರಿಯೆಯ 1960 ರ ಮತಪಟ್ಟಿ ಪರಿಷ್ಕರಣೆ ನಿಯಮಗಳಲ್ಲಿ ಇಲ್ಲವೇ ಇಲ್ಲ.

ಸಾಮಾನ್ಯವಾಗಿ ಚುನಾವಣೆಗಳಿಗೆ ಮುಂಚೆ ನಡೆಯುವ ಸಮ್ಮರಿ ರಿವಿಶನ್- ಮತಪಟ್ಟಿ ಪರಿಷ್ಕರಣೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಸಿದ್ಧಪಡಿಸಲಾದ ಚುನಾವಣಾ ಪಟ್ಟಿಯನ್ನು ಆಕರವಾಗಿಟ್ಟುಕೊಂಡು (ರೆಫರೆನ್ಸ್) ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಅಂದರೆ ಈಗಾಗಲೇ ಹಿಂದಿನ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿತರಾದವರು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಹಿಂದಿನ ಚುನಾವಣೆಯ ನಂತರ 18 ವರ್ಷ ತುಂಬಿದವರ ವಯಸ್ಸು ಮತ್ತು ಹುಟ್ಟಿದ ಸ್ಥಳದ ದಾಖಲೆಗಳನ್ನು ಪರಿಶೀಲಿಸಿ ಮತಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ. ಹಿಂದಿನ ಚುನಾವಣೆಯ ನಂತರ ಮೃತರಾದವರನ್ನು ಕೈಬಿಡಲಾಗುತ್ತದೆ.

ಯಾವುದಾದರೂ ಮತದಾರರ ಅರ್ಹತೆ ಬಗ್ಗೆ ದೂರುಗಳು ಬಂದಿದ್ದಲ್ಲಿ ಮಾತ್ರ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಇವೆಲ್ಲ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿ ಮತದಾರರೋ ಅಲ್ಲವೋ ಎಂದು ಸಾಬೀತು ಮಾಡುವ ಹೊಣೆ ಅಧಿಕಾರಿಗಳದ್ದೇ ಹೊರತು ಮತದಾರರದ್ದಲ್ಲ.

ಹಲವು ವರ್ಷಗಳಿಗೊಮ್ಮೆ ನಡೆಯುವ ಇಂಟೆನ್ಸಿವ್ ರಿವಿಶನ್ ಪ್ರಕ್ರಿಯೆಗಳು ಸಾಮಾನ್ಯವಾಗಿ ಚುನಾವಣೆಗೆ ಮುಂಚೆ ನಡೆಯುವುದಿಲ್ಲ. ಅದು ಸಾಮಾನ್ಯವಾಗಿ ಚುನಾವಣೆ ಒತ್ತಡಗಳಿಲ್ಲದ ಸಮಯದಲ್ಲಿ ಚುನಾವಣಾಧಿಕಾರಿಗಳು ಮತಪಟ್ಟಿಯಲ್ಲಿ ಇರುವ ಎಲ್ಲರ ಅಸ್ತಿತ್ವವನ್ನು ಸ್ಥಳಕ್ಕೆ ಭೇಟಿ ಕೊಟ್ಟು ಖಾತರಿ ಪಡಿಸಿಕೊಳ್ಳುತ್ತಾರೆ. ಈಗಾಗಲೇ ಕೊಟ್ಟಿರುವ ದಾಖಲೆಗಳ ಋಜುತ್ವವನ್ನು ಅಗತ್ಯ ಬಿದ್ದಲ್ಲಿ ಪರಿಶೀಲಿಸುತ್ತಾರೆ. ಉದಾಹರಣೆಗೆ ಬಿಹಾರದಲ್ಲಿ 2003ರಲ್ಲಿ Intensive Revision ಎಂಬ ಪ್ರಕ್ರಿಯೆ ನಡೆದಿತ್ತು. ಅಲ್ಲಿ ಚುನಾವಣೆ ಬಾಕಿ ಇದ್ದದ್ದು 2005ರಲ್ಲಿ.

ಬಿಹಾರದಲ್ಲಿ 2024ರಲ್ಲಿ ಲೋಕಸಭಾ ಚುನಾವಣೆಯ ಭಾಗವಾಗಿ ಮತಪಟ್ಟಿ ಪರಿಷ್ಕರಣೆ ನಡೆದು ಅರ್ಹ ಮತದಾರರ ಪಟ್ಟಿ ಸಿದ್ಧವಾಗಿದೆ.

ಈಗ 2025ರ ನವೆಂಬರ್‌ನಲ್ಲಿ ನಡೆಯಬೇಕಿರುವ ಚುನಾವಣೆಗೆ ಆಗಬೇಕಿದ್ದೇನು? 2024ರ ಮೇ ತಿಂಗಳಲ್ಲಿ ನಡೆದ ಚುನಾವಣೆಯ ನಂತರದಲ್ಲಿ ಮತದಾನಕ್ಕೆ ಅರ್ಹರಾದವರನ್ನು ಸೇರಿಸಿಕೊಳ್ಳುವುದು ಮತ್ತು ಮತದಾರರನ್ನು ಕೈಬಿಡಲು ನಿರ್ದಿಷ್ಟ ದೂರುಗಳಿದ್ದಲ್ಲಿ ಪರಿಶೀಲಿಸುವ Summary Revision ಎಂಬ ಪ್ರಕ್ರಿಯೆ ಮಾತ್ರ.

2025ರ ಮೇ ತಿಂಗಳ ತನಕವೂ ಮೋದಿ ಸರಕಾರ ಮತ್ತು ಚುನಾವಣಾ ಆಯೋಗ ಆ ಪ್ರಕ್ರಿಯೆಯಲ್ಲೇ ನಿರತವಾಗಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಜೂನ್ 4ರಂದು 2020ರಿಂದ ನನೆಗುದಿಗೆ ಬಿದ್ದಿದ್ದ ಜನಗಣತಿಯನ್ನು 2026ರಲ್ಲಿ ನಡೆಸಲಿರುವುದಾಗಿ ಘೋಷಿಸಿತು. ಅದರಲ್ಲಿ 2020ರಲ್ಲಿ ಸೇರಿಸಿದ್ದಂತೆ NPR-NRC ಯೋಜನೆಗೆ ಬೇಕಾದ ಪ್ರಶ್ನಾವಳಿಗಳಿರುತ್ತವೆಯೇ ಎಂಬ ಪ್ರಶ್ನೆಗೆ ಮೋದಿ ಸರಕಾರ ಸರಿಯಾಗಿ ಉತ್ತರಿಸಿರಲಿಲ್ಲ.

ಆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ದಿಢೀರನೆ ಜೂನ್ 24ರಂದು ಬಿಹಾರದ ಚುನಾವಣಾಧಿಕಾರಿಗಳು ಇಡೀ ಮತಪಟ್ಟಿಯನ್ನು Special Intensive Revisionಗೆ ಒಳಪಡಿಸಬೇಕೆಂದು ಆದೇಶಿಸಿತು.

share
ಶಿವಸುಂದರ್
ಶಿವಸುಂದರ್
Next Story
X