Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಕುಮಾರಸ್ವಾಮಿಯವರ ಭಗವದ್ಗೀತಾ ಪಾರಾಯಣ...

ಕುಮಾರಸ್ವಾಮಿಯವರ ಭಗವದ್ಗೀತಾ ಪಾರಾಯಣ ಮತ್ತು ಮನುವಾದಿ ರಾಜಕಾರಣ

ಶಿವಸುಂದರ್ಶಿವಸುಂದರ್11 Dec 2025 10:00 AM IST
share
ಕುಮಾರಸ್ವಾಮಿಯವರ ಭಗವದ್ಗೀತಾ ಪಾರಾಯಣ ಮತ್ತು ಮನುವಾದಿ ರಾಜಕಾರಣ

ಭಾಗ - 2

3. ತಮ್ಮ ಕಸುಬುಗಳಿಗೆ ಚೆನ್ನಾಗಿ ಹೊಂದಿಕೊಂಡಿರುವ ಅವಿದ್ಯಾವಂತರ ನಂಬಿಕೆಗಳನ್ನು ವಿದ್ಯಾವಂತರು ಅಭದ್ರಗೊಳಿಸಬಾರದು. ಅವನ ವರ್ಣಕ್ಕನುಸಾರವಾದ ಕಸುಬಿನಲ್ಲಿ ಅವನೇ ಮೊದಲು ತೊಡಗಬೇಕು.

ಬಳಿಕ ಇತರರೂ ಅವರವರ ವರ್ಣಾನುಸಾರವಾದ ಕಸುಬನ್ನು ಅಂಗೀಕರಿಸುವಂತೆ ಮಾಡಬೇಕು. ಒಬ್ಬ ವಿದ್ಯಾವಂತನು ತನ್ನ ಉದ್ಯೋಗಕ್ಕೆ ಅಂಟಿಕೊಳ್ಳದೆ ಇರಬಹುದು. ಆದರೆ ಅವಿದ್ಯಾವಂತರೂ ಮಂದಮತಿಗಳೂ ಆದವರು ತಮ್ಮ ಕಸುಬಿಗೆ ಅಂಟಿಕೊಂಡಿರುತ್ತಾರೆ. ವಿದ್ಯಾವಂತರು ಅವರನ್ನು ಕೆಡಿಸಬಾರದು. ಅವರ ಕಸುಬನ್ನು ತ್ಯಜಿಸಿ ಅಡ್ಡಹಾದಿ ಹಿಡಿಯುವಂತೆ ಅವರನ್ನು ಪ್ರೇರೇಪಿಸಬಾರದು.

(ಅಧ್ಯಾಯ III, ಶ್ಲೋಕ 26,29 )

ಭಗವದ್ಗೀತೆಯಲ್ಲಿ ಹೇಗೆ ಯಾವುದೇ ನೀತಿಯಾಗಲೀ, ನ್ಯಾಯವಾಗಲೀ ಇಲ್ಲ, ಅದರಲ್ಲಿರುವುದು ಕೇವಲ ಬ್ರಾಹ್ಮಣ ಶ್ರೇಷ್ಠತೆಯನ್ನು ಸ್ಥಾಪಿಸುವ ಹುನ್ನಾರ ಮಾತ್ರ ಎಂಬುದಕ್ಕೆ ಈ ಶ್ಲೋಕವನ್ನು ಉದಾಹರಿಸುತ್ತಾ ಅಂಬೇಡ್ಕರ್ ಅವರು ವಿವರವಾದ ವಿಶ್ಲೇಷಣೆಯನ್ನು ಕೊಡುತ್ತಾರೆ.

ಜಗತ್ತಿನಲ್ಲಿ ಧರ್ಮ ಎಂದು ಕರೆಸಿಕೊಳ್ಳುವ ಇತರ ಯಾವುದೇ ಧರ್ಮಗಳು ತಮ್ಮ ಧರ್ಮಶಾಸ್ತ್ರದ ಭಾಗವಾಗಿಯೇ ಸಮಾಜದ ಇತರರಿಗೆ ತಾನು ಪಡೆದ ಜ್ಞಾನವನ್ನು ವಿಸ್ತರಿಸಿಕೊಳ್ಳಬಾರದು ಎಂದು ಬೋಧಿಸುವುದಿಲ್ಲ.

ಅಷ್ಟು ಮಾತ್ರವಲ್ಲ. ತನ್ನ ಪ್ರತಿಭೆಯನ್ನು ಬಳಸಿಕೊಂಡೂ ಕೂಡ ಒಬ್ಬ ಅಬ್ರಾಹ್ಮಣನು ಮೇಲಕ್ಕೇರುವುದನ್ನು ಅಡ್ಡಹಾದಿ, ಪಾಪ ಎಂದು ಭಗವದ್ಗೀತೆಯೆಂಬ ದೈವವಾಣಿಯ ಮೂಲಕ ಬ್ರಾಹ್ಮಣರು ಸ್ಥಾಪಿಸುತ್ತಾರೆ ಎಂದು ಅಂಬೇಡ್ಕರ್ ಗೀತೆಯ ಅಸಲೀ ಹುನ್ನಾರವನ್ನು ಬಯಲು ಮಾಡುತ್ತಾರೆ.

4. ಅಯ್ಯಾ, ಅರ್ಜುನ! ಕರ್ತವ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಈ ಧರ್ಮ (ಅಂದರೆ ಚಾತುರ್ವರ್ಣ್ಯನುಸಾರಿಯಾದ ಧರ್ಮ) ಅವನತಿ ಹೊಂದಿದಾಗಲೆಲ್ಲಾ ನಾನೇ ಭೂಮಿಯಲ್ಲಿ ಅವತರಿಸಿ ಈ ಅವನತಿಗೆ ಕಾರಣರಾದವರನ್ನು ಶಿಕ್ಷಿಸಿ ಮತ್ತೆ ಅದನ್ನು ಸುಸಿತ್ಥಿಗೆ ತರುತ್ತೇನೆ.

(ಅಧ್ಯಾಯ IV . ಶ್ಲೋಕ 8)

ಅಂದರೆ ಹಿಂದೂ ಧರ್ಮದಲ್ಲಿ ದೈವ ಮತ್ತು ಧರ್ಮಗಳಿರುವುದೇ ಬ್ರಾಹ್ಮಣ್ಯಕ್ಕೆ ಆಪತ್ತು ಬರದಂತೆ ತಡೆಯುವುದಕ್ಕೆ!

ಹೀಗಾಗಿ ನ್ಯಾಯ ಮತ್ತು ಸಾಮಾಜಿಕ ಉಪಯುಕ್ತತೆ ಎರಡರ ಮಾನದಂಡಗಳಿಂದಲೂ ನೋಡಿದರೂ ಭಗವದ್ಗೀತೆ ಕೇವಲ ಬ್ರಾಹ್ಮಣ್ಯ ಶ್ರೇಷ್ಠತೆಯನ್ನೂ ಮತ್ತು ಬ್ರಾಹ್ಮಣೀಯ ಸಮಾಜಿಕ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲು ರಚಿಸಲಾದ ಅನೈತಿಕ, ಅನ್ಯಾಯಯುತ ಗ್ರಂಥವಾಗಿದೆ ಎಂದು ಅಂಬೇಡ್ಕರ್ ಘೋಷಿಸುತ್ತಾರೆ.

ಹಿಂದೂ ಧರ್ಮದೊಳಗಿನ ಬ್ರಾಹ್ಮಣೀಯ ಕಟ್ಟುಪಾಡುಗಳಿಗೆ ತಾತ್ವಿಕ ಸಮರ್ಥನೆ ಒದಗಿಸುವುದೇ ಇದರ ಉದ್ದೇಶವಾಗಿದೆ ವಿನಾ ಇದರಲ್ಲಿ ಧರ್ಮ ಅಥವಾ ನೀತಿಯನ್ನು ಹುಡುಕುವುದು ವ್ಯರ್ಥ ಸಾಹಸ ಎಂದು ಅಂಬೇಡ್ಕರ್ ಘೋಷಿಸುತ್ತಾರೆ.

ಹಿಂಸೆಗೆ ಪ್ರೋತ್ಸಾಹ, ಕರ್ಮ ಸಿದ್ಧಾಂತದ ಕಾಲ್ಕಟ್ಟು

ಇದಲ್ಲದೆ, ಭಗವದ್ಗೀತೆಯ ಮತ್ತೊಂದು ಉದ್ದೇಶ ಕರ್ಮ ಸಿದ್ಧಾಂತದ ಪ್ರತಿಪಾದನೆ ಮತ್ತು ಹಿಂಸೆಯ ಆರಾಧನೆಯಾಗಿದೆ ಎಂದು ಅಂಬೇಡ್ಕರ್ ವಿವರಿಸುತ್ತಾರೆ.(ಕರ್ಮಣ್ಯೆವಧಿಕರೇಶು ಮಾ ಫಲೇಶು ಕದಾಚನ- ಫಲಾಫಲಗಳ ಅಪೇಕ್ಷೆಯಿಲ್ಲದೆ ನಿನ್ನ ಧರ್ಮ ಹೇಳುವ ಕರ್ಮ ಮಾಡು).

ಬೌದ್ಧರು ಬ್ರಾಹ್ಮಣ್ಯವನ್ನು ವಿರೋಧಿಸಲು ಹಲವು ಪ್ರಮುಖ ಕಾರಣಗಳಲಿ ಅದರ ಅಡಕವಾಗಿದ್ದ ಹಿಂಸಾಚಾರವೂ ಒಂದು. ಆದರೆ ಗೀತೆಯು ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಹಲವು ಕಸರತ್ತುಗಳನ್ನು ಮಾಡುತ್ತದೆ.

ಅದರಲ್ಲಿ ಒಂದು ಪ್ರತಿಪಾದನೆ ಆತ್ಮ ಅವಿನಾಶಿ ಎಂಬುದು. ಕೊಂದಾಗ ಸಾಯುವುದು ದೇಹವೇ ಹೊರತು ಆತ್ಮವಲ್ಲ. ಹಾಗೂ ಕೊಂದವರು ಮತ್ತು ಕೊಲ್ಲಲ್ಪಟ್ಟವರು ಎಲ್ಲರೂ ಅಂತಿಮವಾಗಿ ನನ್ನನ್ನೇ ಸೇರುವರು.. ಆದ್ದರಿಂದ ನನ್ನವರು, ತಮ್ಮವರು ಎಂಬುದೆಲ್ಲಾ ಭ್ರಮೆ..ಕರ್ಮ ಮಾತ್ರ ಸತ್ಯ ಎಂದು ಗೀತೆ ಹಿಂಸೆಯನ್ನು ಸಮರ್ಥಿಸಿಕೊಳ್ಳುತ್ತದೆ.

ಅಂಬೇಡ್ಕರ್ ಈ ವಾದಗಳನ್ನು ಲೇವಡಿ ಮಾಡುತ್ತಾರೆ!

ಬೌದ್ಧರ ಮೇಲೆ ಹಾಗೂ ಬ್ರಾಹ್ಮಣ್ಯವನ್ನು ಒಪ್ಪದವರ ಮೇಲೆ ಆಗಿನ ಬ್ರಾಹ್ಮಣೀಯ ಸಾಮ್ರಾಟರು ನಡೆಸುತ್ತಿದ್ದ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದೇ ಇದರ ಉದ್ದೇಶ.

ಅಷ್ಟು ಮಾತ್ರವಲ್ಲದೆ ಮುಂದೆಯೂ ಕನಿಕರ ಹಾಗೂ ಭ್ರಾತೃತ್ವ ಇಲ್ಲದ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಲು ಬೇಕಾಗುವ ಹಿಂಸೆಯನ್ನು ಸರ್ವಸಹಜವಾಗಿಸಲೆಂದೇ ಭಗವದ್ಗೀತೆಯು ಸೃಷ್ಟಿಯಾಗಿದೆ ಎಂದು ಅಂಬೇಡ್ಕರ್ ಸಾಬೀತು ಪಡಿಸುತ್ತಾರೆ.

ಮೋಕ್ಷದಲ್ಲೂ ಚಾರ್ತುವರ್ಣ್ಯ!

ಇತರ ಧರ್ಮಗಳಂತಲ್ಲದೆ ಹಿಂದೂ ಧರ್ಮವು ನೀನು ಯಾವುದೇ ಧರ್ಮವನ್ನು ಅನುಸರಿಸಿದರೂ ಅಂತಿಮವಾಗಿ ನನ್ನನ್ನೇ ಸೇರುವೆ ಎಂದು ಒಳಗೊಳ್ಳುವ ಹಿರಿಮೆಯನ್ನು ಹೊಂದಿದೆ ಎಂಬ ಸೋಗಲಾಡಿ ವಾದದ ಬಗ್ಗೆಯೂ ಅಂಬೇಡ್ಕರ್ ಅತ್ಯಂತ ಪ್ರಖರವಾಗಿ ಕೌಂಟರ್ ಕೊಡುತ್ತಾರೆ.

ಬ್ರಾಹ್ಮಣ್ಯ ಅವನತಿ ಹೊಂದಿ ಬೌದ್ಧವು ಪ್ರವರ್ಧಮಾನಕ್ಕೆ ಬಂದಿದ್ದ ಕಾಲಘಟ್ಟದಲ್ಲಿ ಹಲವು ಜನಧರ್ಮಗಳು ಸಮಾಜದಲ್ಲಿ ತಲೆ ಎತ್ತಿದ್ದವು. ಅವೆಲ್ಲವನ್ನೂ ಏಕಕಾಲದಲ್ಲಿ ನಾಶಮಾಡಲಾಗದ ಸಂದರ್ಭದಲ್ಲಿ ಬ್ರಾಹ್ಮಣ್ಯವು ಅವೆಲ್ಲವೂ ತನ್ನನ್ನೇ ಸೇರುವ ವಿವಿಧ ರೂಪಗಳಷ್ಟೇ ಎಂದು ಅರಗಿಸಿಕೊಳ್ಳುವ ಪ್ರಯತ್ನ ಮಾಡಿತು ಎಂದು ಅಂಬೇಡ್ಕರ್ ವಿವರಿಸುತ್ತಾರೆ.

ಆದರೆ ಅವನ್ನು ಅರಗಿಸಿಕೊಳ್ಳುವ ಪ್ರಕ್ರಿಯೆಯಲ್ಲೂ ದೇವರುಗಳನ್ನು ಮೇಲು ಕೀಳಿನ ಸ್ತರಗಳಲ್ಲಿ ಸ್ಥಾಪಿಸುತ್ತಲೇ ಒಳಗೊಂಡಿತು ಎಂದು ಅಂಬೇಡ್ಕರ್ ವಿವರಿಸುತ್ತಾರೆ.

ಉದಾಹರಣೆಗೆ ಗೀತೆಯ ಪ್ರಕಾರ ಮನುಷ್ಯರಲ್ಲಿ ಉತ್ತಮವಾದ ಸಾತ್ವಿಕ ಗುಣವಿರುವವರು ಬ್ರಾಹ್ಮಣ ಜಾತಿಯಲ್ಲಿರುತ್ತಾರೆ. ಅವರು ಜ್ಞಾನ ಮಾರ್ಗದ ಮೂಲಕ ಪರಿಶುದ್ಧರಾಗಿ ದೇವರನ್ನು ಅರಸುತ್ತಾರೆ. ಅವರ ದೈವಗಳಿಂದ ಅವರು ಮೋಕ್ಷವನ್ನು ಮತ್ತು ಜ್ಞಾನವನ್ನು ಮಾತ್ರ ಅರಸುತ್ತಾರೆ.

ನಂತರದವರು ರಜೋ ಗುಣದವರು. ಇವರು ಕ್ಷಾತ್ರ ಗುಣದವರಾಗಿರುತ್ತಾರೆ. ಅವರು ತಮ್ಮ ದೈವಗಳಿಂದ ಇಹಲೋಕದಲ್ಲಿ ಸಂಪತ್ತು ಮತ್ತು ಅಧಿಕಾರದ ಅನುಗ್ರಹ ಕೇಳುತ್ತಾರೆ.

ನಂತರದವರು ತಮಸ್ ಗುಣವುಳ್ಳ ಸಮಾಜದ ಕೆಳಸ್ತರದ ಶೂದ್ರರು. ಅವರು ಮತಿಹೀನರು, ಮೂಢರೂ ಅಗಿರುತ್ತಾರೆ ಎಂದು ಗೀತೆ ವಿವರಿಸುತ್ತದೆ.

ಅಂದರೆ ಎಲ್ಲರೂ ನನ್ನನ್ನೇ ಸೇರುವರು ಎಂದಾಗ ಪುರುಷ ಸೂಕ್ತ ಹೇಳುವಂತೆ ಸತ್ತ ಮೇಲೂ ಅಬ್ರಾಹ್ಮಣರು ಮತ್ತವರ ದೇವರುಗಳು ಬ್ರಾಹ್ಮಣ ಶ್ರೇಷ್ಠತೆಯ ಪಾರಮಾರ್ಥಿಕ ವ್ಯವಸ್ಥೆಯ ಭಾಗವಾಗಿಯೇ ಇರುತ್ತಾರೆ.

ಇದು ತಾನು ಒಪ್ಪದ ಧರ್ಮದವನನ್ನು ಕೊಲ್ಲುವುದಕ್ಕಿಂತಲೂ ಹೀನಾತಿ ಹೀನವಾದದ್ದು.

ಭಗವದ್ಗೀತೆ ನೀತಿ ಪಾಠ- ದಲಿತ, ಶೂದ್ರ ಪ್ರಜ್ಞೆಯನ್ನು ಬಲಿಹಾಕುವ ಪೀಠ

ಹೀಗೆ ಭಗವದ್ಗೀತೆಯಲ್ಲಿ ಯಾವ ಧರ್ಮವೂ ಇಲ್ಲ. ನೀತಿಯೂ ಇಲ್ಲ. ಅದು ಹಿಂಸೆಯನ್ನು ಸಮರ್ಥಿಸುವ, ವರ್ಣಾಶ್ರಮವನ್ನು ಪ್ರತಿಪಾದಿಸುವ, ಸಮಾಜದಲ್ಲಿ ಶಾಶ್ವತ ಬೇಧಭಾವಗಳನ್ನು ಹುಟ್ಟುಹಾಕುವ ಬ್ರಾಹ್ಮಣ್ಯದ ಕುತಂತ್ರವಾಗಿದೆ.

ಈ ಕಾಲದಲ್ಲಿ ಬಿಜೆಪಿ ಮತ್ತು ಬಿಜೆಪೀಕರಣಗೊಂಡ ಜೆಡಿಎಸ್ ಪಕ್ಷಗಳು ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ನೀತಿ ಪಾಠವಾಗಿ ಸೇರಿಸುವ ಉದ್ದೇಶವೇ ಎಚ್ಚೆತ್ತ ದಲಿತ-ಶೂದ್ರ-ಮಹಿಳಾ ಪ್ರಜ್ಞೆಯನ್ನು ಮೊಂಡು ಮಾಡಿ, ಅಳಿಸಿ ಹಾಕಿ ಮತ್ತೊಮ್ಮೆ ಹಿಂದುತ್ವದ ಹೆಸರಲ್ಲಿ ಬ್ರಾಹ್ಮಣ್ಯದ ದಾಸ್ಯಕ್ಕೆ ಎಳೆತರುವುದೇ ಆಗಿದೆ.

ಆದ್ದರಿಂದ ನೈತಿಕ ಪಾಠದ ಭಾಗವಾಗಿ ಭಗವದ್ಗೀತೆಯನ್ನು ಸೇರಿಸಬೇಕೆಂಬ ಹುನ್ನಾರವನ್ನು ಇತರ ಧರ್ಮೀಯರಿಗಿಂತ ಹೆಚ್ಚಾಗಿ ಹಿಂದೂಗಳಲ್ಲಿನ ಅಬ್ರಾಹ್ಮಣ ಕುಲವರ್ಗಗಳೇ ವಿರೋಧಿಸಬೇಕಿದೆ.

ಭಗವದ್ಗೀತೆಯ ಬದಲಿಗೆ ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಅವರ ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಗ್ರಂಥವನ್ನೋ ಅಥವಾ ‘ಕೃಷ್ಣ ಮತ್ತವನ ಗೀತೆ’ ಎಂಬ ಅಂಬೇಡ್ಕರ್ ಲೇಖನವನ್ನೋ ಕಡ್ಡಾಯಗೊಳಿಸಬೇಕೆಂದು ಹೋರಾಡಬೇಕಿದೆ.

ಅಲ್ಲವೇ?

share
ಶಿವಸುಂದರ್
ಶಿವಸುಂದರ್
Next Story
X