Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಜನಸ್ನೇಹಿ ನಿಜ ಆದರೆ ಎಸ್‌ಐಆರ್...

ಜನಸ್ನೇಹಿ ನಿಜ ಆದರೆ ಎಸ್‌ಐಆರ್ ಸ್ನೇಹಿಯೇ? ಇಸಿಐ ಮಾನ್ಯವೇ?

ಶಿವಸುಂದರ್ಶಿವಸುಂದರ್1 July 2026 10:44 AM IST
share
ಜನಸ್ನೇಹಿ ನಿಜ ಆದರೆ ಎಸ್‌ಐಆರ್ ಸ್ನೇಹಿಯೇ? ಇಸಿಐ ಮಾನ್ಯವೇ?
ಕರ್ನಾಟಕದ ಹೊಸ ಖಾಯಂ ನಿವಾಸಿ(ಪಿಆರ್‌ಸಿ) ನಿಯಮಗಳು

ಪ. ಬಂಗಾಳ ಸರಕಾರ ಮಾಡಿದ ಸರಳೀಕರಣ ಮತ್ತು ಅದನ್ನು ಆಧರಿಸಿ ನೀಡಿದ ದಾಖಲೆಯನ್ನು ಇಸಿಐ ಮಾನ್ಯ ಮಾಡಲಿಲ್ಲ.

ಪ. ಬಂಗಾಳಕ್ಕೂ ಕರ್ನಾಟಕಕ್ಕೂ ಇರುವುದು ಒಂದೇ ಇಸಿಐ. ಆದ್ದರಿಂದ ಇಸಿಐ ಆದೇಶ ಮತ್ತು ಷರತ್ತುಗಳು ಸ್ಪಷ್ಟಪಡಿಸುವಂತೆ ಸರಳೀಕೃತ ನಿಯಮಗಳಿಂದ ಪಡೆದುಕೊಳ್ಳುವ ಪಿಆರ್‌ಸಿಯನ್ನು ಮಾನ್ಯ ಮಾಡುವಂತಿಲ್ಲ ಮತ್ತು ಇಸಿಐ ವಿಧಿಸಿದ ಮಾನದಂಡಗಳ ಅನ್ವಯ ಪಡೆದುಕೊಂಡ ಪಿಆರ್‌ಸಿ ಮಾತ್ರ ಮಾನ್ಯ.

ಹೀಗಾಗಿ ಕರ್ನಾಟಕದಲ್ಲೂ ಹೊಸ ಪಿಆರ್‌ಸಿ ನಿಯಮಗಳು ಮೊದಲಿಗಿಂತ ಹೆಚ್ಚು ಜನಸ್ನೇಹಿಯಾದರೂ ಇಸಿಐ ಸ್ನೇಹಿ ಮತ್ತು ಎಸ್‌ಐಆರ್ ಮಾನ್ಯವಾಗುವುದು ಕಷ್ಟ.

ವೈರುಧ್ಯವೆಂದರೆ ಅವು ಹೆಚ್ಚು ಜನಸ್ನೇಹಿಯಾದಷ್ಟೂ ಎಸ್‌ಐಆರ್ ಮಾನ್ಯವಾಗುವುದು ಕಷ್ಟ.

ಏಕೆಂದರೆ ಎಸ್‌ಐಆರ್ ಸರ್ವಾಧಿಕಾರದ ಸಾಧನ. ಅದರ ತಾಂತ್ರಿಕ ಪ್ರಜಾತಾಂತ್ರೀಕರಣ ಸಾಧ್ಯವಿಲ್ಲ.

ಕರ್ನಾಟಕ ಸರಕಾರ ಎಸ್‌ಐಆರ್ ವಿರೋಧಿ ಹೋರಾಟಗಾರರ ಒತ್ತಡ ಮತ್ತು ಕಾಂಗ್ರೆಸ್‌ನ ಪಕ್ಷ ಹಿತಾಸಕ್ತಿ ಎರಡನ್ನೂ ಗಮನದಲ್ಲಿಟ್ಟುಕೊಂಡು ಮೊನ್ನೆ ಹೊಸ ಹಾಗೂ (ಸೀಮಿತ) ಖಾಯಂ ನಿವಾಸಿ ದಾಖಲೆ (ಪಿಆರ್‌ಸಿ) ನಿಯಮಗಳನ್ನು ಪ್ರಕಟಿಸಿದೆ. ಈ ಪಿಆರ್‌ಸಿಯು ಎಸ್‌ಐಆರ್‌ನಲ್ಲಿ ಅರ್ಹತೆ ಪಡೆಯಲು ಬೇಕಿರುವ ದಾಖಲೆಗಳಲ್ಲಿ ಒಂದು.

ಎಸ್‌ಐಆರ್ ವಿರೋಧಿ ಹೋರಾಟಗಾರರು ಎಸ್‌ಐಆರ್‌ನಲ್ಲಿ ಅರ್ಹತೆ ಪಡೆಯಲು ಚುನಾವಣಾ ಆಯೋಗ ನಿಗದಿ ಪಡಿಸಿರುವ ದಾಖಲೆಗಳಲ್ಲಿ ಕರ್ನಾಟಕ ಸರಕಾರ ಮುಂದೊಡಗಿನಿಂದ ಕೊಡಬಹುದಾದ ಈ ಪಿಆರ್‌ಸಿ, ಜಾತಿ ಪ್ರಮಾಣ ಪತ್ರ ಮತ್ತು ಕುಟುಂಬ ದಾಖಲೆಗಳನ್ನು ಸುಲಭವಾಗಿ ವಿತರಿಸಿ ಅರ್ಹ ಮತದಾರರು ಮತ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸುತ್ತಾ ಬಂದಿದ್ದರು.

ಆದರೆ ಕರ್ನಾಟಕ ಸರಕಾರ ಕೊಡಮಾಡುವ ಕುಟುಂಬ ಪ್ರಮಾಣ ಪತ್ರವನ್ನು ಮಾನ್ಯ ಮಾಡಲು ಸರಕಾರವೇ ಆಯೋಗಕ್ಕೆ ಪತ್ರ ಬರೆದು ತಿಂಗಳು ಕಳೆದರೂ ಈವರೆಗೆ ಆಯೋಗ ಅದಕ್ಕೆ ಉತ್ತರ ಕೊಡುವ ಗೋಜಿಗೂ ಹೋಗಿಲ್ಲ ಎಂದು ಮಂತ್ರಿ ಪ್ರಿಯಾಂಕ್ ಖರ್ಗೆಯವರು ಮೊನ್ನೆ ಪತ್ರಕರ್ತರಿಗೆ ತಿಳಿಸಿದ್ದಾರೆ.

ಇನ್ನು ಜಾತಿ ಪ್ರಮಾಣ ಪತ್ರ ಸುಲಭವಾಗಿ ದೊರೆಯಬೇಕಿದ್ದರೂ ಕೂಡ ಅದಕ್ಕೆ ತಂದೆಗೆ ಸಂಬಂಧಿಸಿದ ಹಲವು ದಾಖಲೆಗಳು ಕಡ್ಡಾಯವಾಗಿವೆ. ಅದನ್ನು ಅಂಚಿನ ಸಮುದಾಯಗಳು ಪಡೆದುಕೊಳ್ಳುವುದು ದುಸ್ತರ. ಹೀಗಾಗಿ ಲಕ್ಷಾಂತರ ಅರ್ಜಿಗಳು ಈಗಲೂ ನನೆಗುದಿಗೆ ಬಿದ್ದಿವೆ. ಮುಖ್ಯಮಂತ್ರಿ ಡಿಕೆಶಿ ಹೇಳುವಂತೆ 5.5 ಕೋಟಿ ಮತದಾರರಿರುವ ಈ ರಾಜ್ಯದಲ್ಲಿ 5.4 ಕೋಟಿ ಮತದಾರರಿಗೆ ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ.

ಜನಸ್ನೇಹಿ ಹೊಸ ಖಾಯಂ ನಿವಾಸಿ ನಿಯಮಗಳು..ಆದರೆ..

ಅಂತಿಮವಾಗಿ ಖಾಯಂ ವಾಸಸ್ಥಳ ಪ್ರಮಾಣ ದಾಖಲೆಗೆ ಸರಕಾರ ಕೊಡಬಹುದಾಗಿದ್ದ ಮತ್ತೊಂದು ಸುಲಭ ದಾಖಲೆ. ಆದರೆ ಸರಕಾರ ಅದರಲ್ಲಿರುವ ಖಾಯಂ ಎಂಬ ಕೊಕ್ಕೆಯನ್ನು ಗಮನಿಸದೆ ರಾಜ್ಯದ ಪಿಡಿಒಗಳು ಗ್ರಾಮ ಪಂಚಾಯತ್ ಕಚೇರಿಯಿಂದಲೇ ‘ವಾಸ ಸ್ಥಳ ಪ್ರಮಾಣ ಪತ್ರ’ ಕೊಡಲು ಆದೇಶ ಹೊರಡಿಸಿತ್ತು. ಆದರೆ ಅದರಿಂದ ಯಾವ ಪ್ರಯೋಜನವೂ ಎಸ್‌ಐಆರ್ ವಿಷಯದಲ್ಲಿ ಆಗುವುದಿಲ್ಲವೆಂದೂ ಹೋರಾಟಗಾರರು ಗಮನಕ್ಕೆ ತಂದ ನಂತರ ಮೊನ್ನೆ ಕರ್ನಾಟಕ ಸರಕಾರ ಸುಲಭವಾಗಿ ಖಾಯಂ ನಿವಾಸಿ ಪ್ರಮಾಣ ಪತ್ರವನ್ನು ಕೊಡಲು ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಬಿಡುಗಡೆ ಮಾಡಿದೆ.

ಇದು ಮೇಲ್ನೋಟಕ್ಕೆ ಹೋರಾಟಗಾರರು ಪಟ್ಟು ಹಿಡಿದು ಮಾಡಿದ ಹೋರಾಟದ ಪ್ರತಿಫಲ. ಆ ನಿಯಮಗಳನ್ನು ಕೂಲಂಕಷವಾಗಿ ಓದಿ ನೋಡಿದಾಗ ಅವು ಮೊದಲಿಗಿಂತ ಹೆಚ್ಚು ಜನಸ್ನೇಹಿಯಾಗಿವೆ ಎಂಬುದರಲ್ಲಿ ಸಂಶಯವಿಲ್ಲ. ಉದಾಹರಣೆಗೆ ಕರ್ನಾಟಕದ ಸಾಮಾನ್ಯ ಮತ್ತು ಶಾಶ್ವತ ನಿವಾಸಿ ಎಂದು ಸಾಬೀತು ಪಡಿಸಲು ಕರ್ನಾಟಕದಲ್ಲಿ ಕನಿಷ್ಠ ಹತ್ತು ವರ್ಷ ವಾಸ ಅಥವಾ ಹತ್ತು ವರ್ಷ ಶಾಲಾ ಅಧ್ಯಯನ, ರಾಜ್ಯದಲ್ಲಿ ಸ್ಥಿರಾಸ್ತಿ ಇತ್ಯಾದಿಗಳ ಮಾನದಂಡಗಳನ್ನು ವಿಧಿಸಿದರೂ ಅದನ್ನು ಸಾಬೀತು ಪಡಿಸಲು ಆಧಾರ್, ಪಡಿತರ ಚೀಟಿ, ಕಂದಾಯ ಇಲಾಖೆ ದಾಖಲೆಗಳು, ಮತಪಟ್ಟಿ ಇತ್ಯಾದಿಗಳು ಸಾಕು ಎನ್ನುವ ನಿಯಮ ಸೇರಿಸಿದೆ. ಮಾತ್ರವಲ್ಲದೆ ಇವುಗಳ ಜೊತೆಗೆ ಪರಿಶೀಲನೆ ಮಾಡುವ ಅಧಿಕಾರಿಗಳು ಸ್ಥಳೀಯ ವಿಚಾರಣೆ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ವರದಿಯನ್ನು ಪಡೆದುಕೊಳ್ಳಬಹುದಾದ ಅವಕಾಶಗಳನ್ನು ಸೇರಿಸಿದೆ. ಅಲ್ಲದೆ ಮೌಖಿಕ ಸಾಕ್ಷ್ಯಗಳನ್ನು ಒಂದು ಪುರಾವೆಯಾಗಿ ಒಪ್ಪಿಕೊಂಡಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಯಾವುದೋ ಒಂದು ದಾಖಲೆ ಇಲ್ಲದ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಬಾರದೆಂಬ ನಿಯಮವನ್ನು ಸೇರಿಸಿ ಹೆಚ್ಚು ಒಳಗೊಳ್ಳುವ ಅವಕಾಶವನ್ನು ನಿರ್ಮಿಸಿದೆ. ಅರ್ಜಿ ತಿರಸ್ಕಾರಕ್ಕೆ ಸೂಕ್ತ ಲಿಖಿತ ಕಾರಣವನ್ನು ಒದಗಿಸಬೇಕೆಂದು ಕಡ್ಡಾಯಗೊಳಿಸಿ ಅಧಿಕಾರಿಗಳ ಉತ್ತರದಾಯಿತ್ವವನ್ನೂ ಕೂಡ ಖಾತರಿ ಪಡಿಸುವ ಅವಕಾಶವನ್ನು ಕಲ್ಪಿಸಿದೆ.

ಹೀಗಾಗಿ ಈ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು ಜನಸ್ನೇಹಿ ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಇಷ್ಟು ಸರಳೀಕೃತ ಮತ್ತು ಒಳಗೊಳ್ಳುವ ಪ್ರಕ್ರಿಯೆಯಿಂದ ಪಡೆದುಕೊಳ್ಳುವ ಖಾಯಂ ವಾಸ ದಾಖಲೆ, ಹೆಚ್ಚೆಚ್ಚು ಜನರನ್ನು ಹೊರದಬ್ಬುವ ಉದ್ದೇಶದಿಂದಲೇ ರೂಪುಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಗೆ ಅರ್ಹತಾ ದಾಖಲೆಯಾಗುವುದೇ?

ಕರ್ನಾಟಕದ ಹೊಸ ಖಾಯಂ ನಿವಾಸಿ ದಾಖಲೆ ನಿಯಮಗಳು ಇಸಿಐ ಸ್ನೇಹಿಯಾಗಿದೆಯೇ? ಹಾಗೂ ಅದರ ಆಧಾರದಲ್ಲಿ ಪಡೆದುಕೊಳ್ಳುವ ಪಿಆರ್‌ಸಿಗಳು ಎಸ್‌ಐಆರ್ ಮಾನ್ಯವಾಗುವುದೇ? ದುರದೃಷ್ಟವಶಾತ್ ಅದಕ್ಕೆ ಉತ್ತರ ಆಶಾದಾಯಕವಾಗಿಲ್ಲ.

ಪ. ಬಂಗಾಳದ ಜನಸ್ನೇಹಿ ಪಿಆರ್‌ಸಿ ನಿರ್ಬಂಧಿಸಿ ಇಸಿಐ ಕೊಟ್ಟ ಆದೇಶಗಳು!


ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ ದುರುದ್ದೇಶದ ಎಸ್‌ಐಆರ್ ಅನ್ನು ಬಿಹಾರದಲ್ಲಿ ಪ್ರಾರಂಭಿಸಿದಾಗಲೇ ಎಚ್ಚೆತ್ತುಕೊಂಡ ಪ. ಬಂಗಾಳದ ಟಿಎಂಸಿ ಸರಕಾರ 2025ರ ಜುಲೈನಲ್ಲೇ ಪ. ಬಂಗಾಳದ ಜನರಿಗೆ Domicile ದಾಖಲೆ ಕೊಡುವುದನ್ನು ಸರಳೀಕರಿಸಬೇಕೆಂದು ಮತ್ತು ಜನರನ್ನು ಸತಾಯಿಸದೆ ದಾಖಲೆಗಳನ್ನು ಕೊಡಬೇಕೆಂದು ಆದೇಶ ಹೊರಡಿಸಿತ್ತು.

ಆನಂತರ ಪ. ಬಂಗಾಳದಲ್ಲಿ ಎಸ್‌ಐಆರ್ ಪ್ರಾರಂಭವಾದಾಗ ಜಿಲ್ಲಾಡಳಿತವು Domicile ದಾಖಲೆಗಳನ್ನು ಕೊಡುತ್ತಿದ್ದಂತೆ ಪ. ಬಂಗಾಳದ ವಿರೋಧ ಪಕ್ಷ ಬಿಜೆಪಿ ಯಾವ ಕಾರಣಕ್ಕೂ 2025ರ ಜುಲೈ ನಂತರದಲ್ಲಿ ನೀಡಲಾದ Domicile ದಾಖಲೆ (ಪಿಆರ್‌ಸಿ) ಒಪ್ಪಿಕೊಳ್ಳಬಾರೆದೆಂದು ಆಗ್ರಹಿಸಿತು.

ಅದನ್ನು ಕೂಡಲೇ ಒಪ್ಪಿಕೊಂಡ ಚುನಾವಣಾ ಆಯೋಗ 2025ರ ಜುಲೈ ನಂತರ ಕೊಟ್ಟ ಪಿಆರ್‌ಸಿಯನ್ನು ವಿಶೇಷವಾಗಿ ವರ್ಗೀಕರಿಸಿ ತಿರಸ್ಕರಿಸಲು ಪ್ರಾರಂಭಿಸಿತು. ಅದರ ಬಗ್ಗೆ ಕೂಲಂಕಷ ವರದಿಯನ್ನು ಆಸಕ್ತರು ಈ ವಿಳಾಸದಲ್ಲಿ ಓದಬಹುದು :

https://ommcomnews.com/india-news/sir-in-bengal-domicile-certificates-issued-after-july-2025-will-be-under-ecis-lens/?utm_source=chatgpt.com

ಆನಂತರ ಕೇಂದ್ರ ಚುನಾವಣಾ ಆಯೋಗ ಡೋಮಸೈಲ್ ದಾಖಲೆಯನ್ನೇ ಸಂಪೂರ್ಣವಾಗಿ ನಿರಾಕರಿಸತಲ್ಲದೆ ಈ ಹಿಂದೆ ಆ ದಾಖಲೆ ಕೊಟ್ಟವರಿಗೂ ಮತ್ತೆ ನೋಟೀಸನ್ನು ನೀಡಿತು. ಆಗ ಅದರ ವಿರುದ್ಧ ಮಮತಾ ಬ್ಯಾನರ್ಜಿ ಸರಕಾರ ಬೀದಿಬೀದಿಯಲ್ಲಿ ದೊಡ್ಡ ಹೋರಾಟ ನಡೆಸಿದ ನಂತರ ಚುನಾವಣಾ ಅಯೋಗ ಆ ದಾಖಲೆಯನ್ನು ಅಂಗೀಕರಿಸಲು ಒಪ್ಪಿಕೊಂಡಿತು. ಆದರೆ ಹಲವು ಕಠಿಣ ಶರತ್ತುಗಳನ್ನು ಸೇರಿಸಿತು.

ಅದರ ಪೂರ್ಣ ಪಾಠವನ್ನು ಆಸಕ್ತರು ಇಲ್ಲಿ ಓದಬಹುದು:

https://www.facebook.com/photo/?fbid=1219456843711835 &set=pcb.1219456860378500

ಹಾಗೆಯೇ ಅದರ ಬಗ್ಗೆ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೂ ಕೆಳಗಿದೆ:

(https://indianexpress.com/article/cities/kolkata/eci-to-accept-domicile-certificate-and-residency-documents-for-sir-in-bengal-10520726/)

Domicile ದಾಖಲೆಗೆ ಸಂಬಂಧಪಟ್ಟಂತೆ ಪ. ಬಂಗಾಳದ 1999ರ ನವಂಬರ್ 2ರ ಆದೇಶ ಕೆಳಗಿನ ವಿಳಾಸದಲ್ಲಿದೆ:

https://wbxpress.com/guidelines-issue-domicile-certificate-non-bengali/

ಈ ಆದೇಶವು ಸ್ಪಷ್ಟಪಡಿಸುವಂತೆ Domicile certificate ಪಡೆದುಕೊಳ್ಳುವ ಅರ್ಹತೆಗಳು ಸೀಮಿತವಾಗಿದೆ ಮತ್ತು ಈ ದಾಖಲೆಗಳಾಚೆ ಪ್ರತಿಯೊಬ್ಬ ಅರ್ಜಿದಾರನ ನಾಗರಿಕತೆ ಮತ್ತು ಪೊಲೀಸ್ ಪರಿಶೀಲನೆಯೂ ಆಗಬೇಕೆಂದು ಕಡ್ಡಾಯಗೊಳಿಸುತ್ತದೆ.

ಈ ವಿಷಯದ ಬಗ್ಗೆ ಇಸಿಐ ಫೆಬ್ರವರಿ 8ರಂದು ನೀಡಿದ ಅಂತಿಮ ಆದೇಶದಲ್ಲಿ

1) ಪ. ಬಂಗಾಳದ Domicile ದಾಖಲೆಯು 1999ರ ನವೆಂಬರ್ 2ರ ಆದೇಶದಂತೆ ಮಾತ್ರವಿರಬೇಕು.

2) ಅದನ್ನು ಸಕ್ಷಮ ಪ್ರಾಧಿಕಾರ ಮಾತ್ರ ನೀಡಿರಬೇಕು.

3) ಮತ್ತು ಅದರಲ್ಲಿ ನಿಗದಿ ಮಾಡಿರುವ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪೂರೈಸಲಾಗಿದೆ ಎಂದು ಖಾತರಿ ಪಡಿಸಿಕೊಂಡ ನಂತರವೇ ERO ಅದನ್ನು ಮಾನ್ಯ ಮಾಡಬೇಕು.

ಅದನ್ನು ಪರಿಶೀಲಿಸುವ ಜವಾಬ್ದಾರಿಯನ್ನು Micro Observersಗಳಿಗೆ ನೀಡಲಾಯಿತು. ಅಂದರೆ ಪ. ಬಂಗಾಳ ಸರಕಾರ ಮಾಡಿದ ಸರಳೀಕರಣ ಮತ್ತು ಅದನ್ನು ಆಧರಿಸಿ ನೀಡಿದ ದಾಖಲೆಯನ್ನು ಇಸಿಐ ಮಾನ್ಯ ಮಾಡಲಿಲ್ಲ.

ಪ. ಬಂಗಾಳಕ್ಕೂ ಕರ್ನಾಟಕಕ್ಕೂ ಇರುವುದು ಒಂದೇ ಇಸಿಐ. ಆದ್ದರಿಂದ ಇಸಿಐ ಆದೇಶ ಮತ್ತು ಷರತ್ತುಗಳು ಸ್ಪಷ್ಟಪಡಿಸುವಂತೆ ಸರಳೀಕೃತ ನಿಯಮಗಳಿಂದ ಪಡೆದುಕೊಳ್ಳುವ ಪಿಆರ್‌ಸಿಯನ್ನು ಮಾನ್ಯ ಮಾಡುವಂತಿಲ್ಲ ಮತ್ತು ಇಸಿಐ ವಿಧಿಸಿದ ಮಾನದಂಡಗಳ ಅನ್ವಯ ಪಡೆದುಕೊಂಡ ಪಿಆರ್‌ಸಿ ಮಾತ್ರ ಮಾನ್ಯ.

ಹೀಗಾಗಿ ಕರ್ನಾಟಕದಲ್ಲೂ ಹೊಸ ಪಿಆರ್‌ಸಿ ನಿಯಮಗಳು ಮೊದಲಿಗಿಂತ ಹೆಚ್ಚು ಜನಸ್ನೇಹಿಯಾದರೂ ಇಸಿಐ ಸ್ನೇಹಿ ಮತ್ತು ಎಸ್‌ಐಆರ್ ಮಾನ್ಯವಾಗುವುದು ಕಷ್ಟ.

ವೈರುಧ್ಯವೆಂದರೆ ಅವು ಹೆಚ್ಚು ಜನಸ್ನೇಹಿಯಾದಷ್ಟೂ ಎಸ್‌ಐಆರ್ ಮಾನ್ಯವಾಗುವುದು ಕಷ್ಟ.

ಏಕೆಂದರೆ ಎಸ್‌ಐಆರ್ ಸರ್ವಾಧಿಕಾರದ ಸಾಧನ. ಅದರ ತಾಂತ್ರಿಕ ಪ್ರಜಾತಾಂತ್ರೀಕರಣ ಸಾಧ್ಯವಿಲ್ಲ.

ಆದ್ದರಿಂದ ಕರ್ನಾಟಕ ಸರಕಾರದ ಹೊಸ ಪಿಆರ್‌ಸಿ ನಿಯಮಗಳ ಬಗ್ಗೆ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕಾದು ನೋಡಬೇಕಿದೆ.

ಮೇಲಾಗಿ ಈ ಹೊಸ ನಿಯಮವನ್ನು ರೂಪಿಸುವಾಗ ಕರ್ನಾಟಕ ಸರಕಾರ ಅದನ್ನು ವಿಶೇಷವಾಗಿ ಮತ್ತು ಸೀಮಿತವಾಗಿ ಎಸ್‌ಐಆರ್ ಅಗತ್ಯಗಳಿಗಾಗಿಯೇ ಮಾಡಿರುವ ತಿದ್ದುಪಡಿ ಎಂದು ಪರೋಕ್ಷವಾಗಿ ಇಂಗಿತ ಪಡಿಸಿದೆ. ಉಳಿದಂತೆ ಈ ಆದೇಶದಿಂದ ಇತರ ಯಾವ ಹೆಚ್ಚಿನ ಹಕ್ಕು ಬಾಧ್ಯತೆಗಳು ಸಿಗುವುದಿಲ್ಲವೆಂದು ಅವುಗಳಿಗೆ ಹಳೆಯ ನಿಯಮಗಳೇ ಅನ್ವಯವಾಗುವುದೆಂದು ಕೂಡ ಸೂಚ್ಯವಾಗಿ ತಿಳಿಸಿದೆ.

ಇಸಿಐ ವಿಧಿಸಿದ ನಿಬಂಧನೆಗಳಿಗೆ ಕರ್ನಾಟಕ ಸರಕಾರ ಮಾಡುವ ತಿದ್ದುಪಡಿಗಳನ್ನು ಆಯೋಗ ಒಪ್ಪಿಕೊಳ್ಳಬೇಕಿಲ್ಲ. ಪ. ಬಂಗಾಳದಲ್ಲಿ ಮಾಡಿದಂತೆ ಅವನ್ನು ತಿರಸ್ಕರಿಸಬಹುದು ಅಥವಾ ತನ್ನದೇ ಆದ ಷರತ್ತುಗಳನ್ನು ರೂಪಿಸಿ ತನ್ನ ಅಧಿಕಾರಿಗಳ ಪ್ರತ್ಯೇಕ ವಿಚಕ್ಷಣೆಗೆ ಒಪ್ಪಿಸಿ ಇನ್ನಷ್ಟು ಕಠಿಣಗೊಳಿಸಬಹುದು.

ಈ ವಿಷಯದಲ್ಲಿ ಆಯೋಗದ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿಹಿಡಿರುವುದರಿಂದ ಕರ್ನಾಟಕದ ಜನ ಪಿಆರ್‌ಸಿ ವಿಷಯದಲ್ಲಿ ಇನ್ನೂ ಪೂರ್ಣವಾಗಿ ಗೆದ್ದಿಲ್ಲ.

ಇವೆಲ್ಲಕ್ಕೂ ಆಯೋಗ ಹೇಗೆ ಪ್ರತಿಕ್ರಿಯಿಸಲಿದೆ ಕಾದು ನೋಡಬೇಕಿದೆ. ಕದನ ಮುಂದುವರಿಸಬೇಕಿದೆ.

Logical Discrepancy-ನಾಲ್ಕಲ್ಲ-ಆರಕ್ಕಿಂತ ಹೆಚ್ಚು

ಎರಡನೆಯದಾಗಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯೂ ಕರ್ನಾಟಕದಲ್ಲಿ Logical Discrepancy ಅನುಸರಿಸಬಾರದು ಎಂಬ ಜನಚಳವಳಿಗಳ ಆಗ್ರಹವನ್ನು ಮತ್ತು ಕರ್ನಾಟಕ ಸರಕಾರದ ಮನವಿಯನ್ನು ತಿರಸ್ಕರಿಸಿದ್ದಾರೆ. (ಅದನ್ನು ಪುರಸ್ಕರಿಸುವ ಅಧಿಕಾರವೇ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಿರಲಿಲ್ಲ).

ಅಷ್ಟು ಮಾತ್ರವಲ್ಲ ಕರ್ನಾಟಕದಲ್ಲಿ ಈಗಾಗಲೇ ಆರು ಬಗೆಯ Logical Discrepancy ಗುರುತಿಸಿರುವ ಕರ್ನಾಟಕದ CEO , Enumeration Formಗಳು ಭರ್ತಿಯಾಗಿ ವಾಪಸ್ ಬಂದ ನಂತರ Logical Discrepancyಗಳ ಸಂಖ್ಯೆ ಇನ್ನೂ ಹೆಚ್ಚಬಹುದೆಂಬ ಸೂಚನೆಯನ್ನೂ ಕೊಟ್ಟಿದ್ದಾರೆ.

ಆದ್ದರಿಂದ ಎಸ್‌ಐಆರ್ ವಿರೋಧಿ ಹೋರಾಟವು ಇನ್ನಷ್ಟು ಎಚ್ಚರವನ್ನು ತೋರಬೇಕಿದೆ.

ಅನಗತ್ಯ ಸಂ‘ಭ್ರಮ’ಗಳಿಗೆ ಬಲಿಯಾಗದೆ ಸಂಘರ್ಷವನ್ನು ತೀವ್ರಗೊಳಿಸ ಬೇಕಿದೆ.

Tags

SIRECI valid
share
ಶಿವಸುಂದರ್
ಶಿವಸುಂದರ್
Next Story
X