Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಪ್ರಧಾನಿಗಳೇ, ಉದ್ಯೋಗ, ಆದಾಯಗಳು...

ಪ್ರಧಾನಿಗಳೇ, ಉದ್ಯೋಗ, ಆದಾಯಗಳು ಏರದಿದ್ದರೂ, ಬಡತನ ಮಾತ್ರ ಶೇ. 5ಕ್ಕೆ ಇಳಿಯಿತೇ?

ಶಿವಸುಂದರ್ಶಿವಸುಂದರ್12 Jun 2025 10:52 AM IST
share
ಪ್ರಧಾನಿಗಳೇ, ಉದ್ಯೋಗ, ಆದಾಯಗಳು ಏರದಿದ್ದರೂ, ಬಡತನ ಮಾತ್ರ ಶೇ. 5ಕ್ಕೆ ಇಳಿಯಿತೇ?

ಭಾಗ- 2

ಮೋದಿ ಸರಕಾರ: ಬಡವರ ಮೇಲೆ ದಾಳಿ, ಅಂಕಿಅಂಶಗಳ ದಮನ

ಭಾರತದ ರಾಷ್ಟ್ರೀಯ ಅಂಕಿಅಂಶ ಸಂಸ್ಥೆಯು ಈ ಮೇಲಿನ ಅಂಕಿಅಂಶಗಳನ್ನು ಆಧರಿಸಿ ದೇಶದಲ್ಲಿನ ಬಡತನದ ಪ್ರಮಾಣವನ್ನು ಅಂದಾಜಿಸಲು ಪ್ರತೀ ಐದು ವರ್ಷಗಳಿಗೊಮ್ಮೆ ಕುಟುಂಬವಾರು ಬಳಕೆ ವೆಚ್ಚ ಸಮೀಕ್ಷೆ (Household Consumption Expenditure Survey- HCES) ವನ್ನು ಮಾಡುತ್ತದೆ. ವಿಸ್ತೃತವಾದ ಸ್ಯಾಂಪಲ್ ಪ್ರಮಾಣವನ್ನು ಹೊಂದಿರುವ ಈ ಸರ್ವೇ ನಿರ್ದಿಷ್ಟವಾದ ಪ್ರಶ್ನಾವಳಿ ಮತ್ತು ನಿರ್ದಿಷ್ಟವಾದ ಮಾಹಿತಿ ಸಂಗ್ರಹ ವಿಧಾನವನ್ನು ಅನುಸರಿಸುತ್ತದೆ, ಆದ್ದರಿಂದ 2012ರವರೆಗೆ ನಡೆದ ಎಲ್ಲಾ ಒಂಭತ್ತು ಸಮೀಕ್ಷೆಗಳನ್ನು ಪರಸ್ಪರ ಹೋಲಿಸಿ ಹಿಂದಿಗಿಂತ ಬಡತನ ಪ್ರಮಾಣ ಎಷ್ಟು ಕಡಿಮೆಯಾಗಿದೆ ಎಂದು ತಿಳಿಯಲು ಸಾಧ್ಯವಾಗುತ್ತಿತ್ತು. ಉದಾಹರಣೆಗೆ 1983ರಲ್ಲಿ ಶೇ. 56ರಷ್ಟು ಬಡವರು, 1993ರಲ್ಲಿ ಶೇ. 48, 2004ರಲ್ಲಿ ಶೇ. 40 ಮತ್ತು 2012ರಲ್ಲಿ ಶೇ. 22 ಎಂಬುದು ಸರಕಾರ ಕೊಟ್ಟಿರುವ ಅಂಕಿಅಂಶ. ಇದರಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಬಡತನದ ಮಾನದಂಡಗಳಲ್ಲೇ ಸಮಸ್ಯೆ ಇದೆ. ಹೀಗಾಗಿ 2022ರಲ್ಲಿ ಅದೂ 1991ರ ನವ ಉದಾರೀಕರಣದ ನೀತಿಗಳು ಜನರ ಬದುಕಿನ ಮೇಲೆ ಮಾಡುತ್ತಲೇ ಇರುವ ದಾಳಿಗಳ ಹಿನ್ನೆಲೆಯಲ್ಲಿ 2012ರಲ್ಲಿ ಭಾರತದ ಬಡತನ ಪ್ರಮಾಣ 1993ಕ್ಕಿಂತ ಇಳಿದಿರಲು ಸಾಧ್ಯವೇ ಇಲ್ಲ. ಆದರೂ ಈ ಎಲ್ಲಾ ಸಮೀಕ್ಷೆಗಳು ಅನುಸರಿಸಿದ ಮಾನದಂಡಗಳು ಒಂದೇ ಇದ್ದುದರಿಂದ ಕನಿಷ್ಠ ಹೋಲಿಕೆ ಸಾಧ್ಯವಿತ್ತು.

ಆದರೆ ಮೋದಿ ಸರಕಾರ ಬಂದಮೇಲೆ ಇದೂ ಕೂಡ ಬುಡಮೇಲಾಯಿತು. 2017-18ರಲ್ಲಿ ನಡೆದ 10ನೇ ಸುತ್ತಿನ HCES ಸಮೀಕ್ಷೆಯ ವರದಿಯನ್ನು ಸರಕಾರ ಬಿಡುಗಡೆ ಮಾಡಲೇ ಇಲ್ಲ. ಅದರಲ್ಲಿ ಅಂಕಿಅಂಶಗಳ ಗುಣಮಟ್ಟದ ಸಮಸ್ಯೆ ಇದೆಯೆಂದು ಸಬೂಬು ಕೊಟ್ಟು ಅದನ್ನು ರದ್ದೇ ಮಾಡಿಬಿಟ್ಟಿತು.

ಸೋರಿಕೆಯಾದ ಆ ವರದಿಯ ಕೆಲವು ಆಘಾತಕಾರಿ ಅಂಶಗಳು ಬಯಲಾದಾಗ ಮೋದಿ ಸರಕಾರ ಅದನ್ನು ರದ್ದು ಮಾಡಿದ್ದೇಕೆ ಎಂಬುದು ಬಯಲಾಯಿತು. ಅದರ ಪ್ರಕಾರ ಸ್ವಾತಂತ್ರ್ಯ ಬಂದ ನಂತರದಲ್ಲೇ ಪ್ರಥಮ ಬಾರಿಗೆ ಭಾರತದ ಬಡಜನರ ಬಳಕೆ ವೆಚ್ಚ ಹಿಂದಿಗಿಂತ ಕಡಿಮೆಯಾಗಿತ್ತು. 2011-12ರಲ್ಲಿ ಭಾರತದ ಗ್ರಾಮೀಣ ಕುಟುಂಬಗಳು ಆಹಾರಗಳ ಮೇಲೆ ತಿಂಗಳಿಗೆ 643 ರೂ. ವೆಚ್ಚ ಮಾಡುತ್ತಿದ್ದರೆ 2017-18ರಲ್ಲಿ ಅದು ರೂ. 580ಕ್ಕೆ ಇಳಿದಿತ್ತು. ಇದರ ಅರ್ಥ ಮೋದಿ ಸರಕಾರ ಬಂದ ಮೇಲೆ ಗ್ರಾಮೀಣ ಆದಾಯ ಕಡಿಮೆಯಾಗಿ ಬಡತನದ ಪ್ರಮಾಣ ಹೆಚ್ಚಾಗಿದೆ. 2019ರ ಚುನಾವಣೆಗೆ ಮುಂಚೆ ಬಂದ ಈ ವರದಿಯು ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮೋದಿ ಸರಕಾರ ಆ ವರದಿಯನ್ನೇ ರದ್ದು ಮಾಡಿತು. ಅದೇ ರೀತಿ ಭಾರತದ ಶ್ರಮ ಭಾಗೀದಾರಿಕೆ (Perodical Labour Force Participation) ಸಮೀಕ್ಷೆಯಲ್ಲೂ ಕಳೆದ ನಾಲ್ಕು ದಶಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಮೋದಿಯವರ ಮೊದಲ ಅವಧಿಯಲ್ಲಿ ದಾಖಲಾಗಿತ್ತು. ಅದನ್ನು ಕೂಡ ಚುನಾವಣೆ ಮುಗಿಯುವ ತನಕ ಬಿಡುಗಡೆೆ ಮಾಡಲಿಲ್ಲ.

2023ರ HCES-ಮೋದಿಗಾಗಿ ವಿಧಾನಗಳು ಮತ್ತು ಫಲಿತಾಂಶಗಳೇ ಬದಲು

ಹತ್ತನೇ HCES ಸಮೀಕ್ಷೆಯನ್ನು ಕೋವಿಡ್ ನಂತರದಲ್ಲಿ 2002-23ರಲ್ಲಿ ನಡೆಸಲಾಯಿತು. ಅದರ ವರದಿಯನ್ನು ಈವರೆಗೆ ಬಿಡುಗಡೆ ಮಾಡಿಲ್ಲವಾದರೂ ಚುನಾವಣೆಗೆ ಮುನ್ನ 27 ಪುಟಗಳ ಒಂದು ಫ್ಯಾಕ್ಟ್ ಶೀಟನ್ನು ಬಿಡುಗಡೆ ಮಾಡಲಾಯಿತು. ಅದರ ಪ್ರಕಾರ 2011-2022ರ ಒಂದು ದಶಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಬಳಕೆ ವೆಚ್ಚ ಪ್ರತೀ ತಿಂಗಳು ರೂ. 1,430ರಿಂದ ರೂ. 3,773ಕ್ಕೆ ಮತ್ತು ನಗರಗಳಲ್ಲಿ ರೂ. 2,630ರಿಂದ ರೂ. 6,459ಕ್ಕೆ ಜಿಗಿದಿದೆ. ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರ ವೆಚ್ಚದ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಭಾರತದ ಜನಸಂಖ್ಯೆಯ ಕೆಳಸ್ತರದ ಶೇ. 5ರಷ್ಟು ಜನಸಂಖ್ಯೆಯ ಮಾಹೆಯಾನ ವೆಚ್ಚ ಮಾತ್ರ ಗ್ರಾಮೀಣ ಪ್ರದೇಶದಲ್ಲಿ 1,300 ಮತ್ತು 2,000ಕ್ಕಿಂತ ಕಡಿಮೆ ಇದೆ. ಈ ಅಂಕಿ ಅಂಶಗಳನ್ನೇ ಆಧರಿಸಿ 2024ರ ಫೆಬ್ರವರಿಯಲ್ಲಿ ನೀತಿ ಆಯೋಗದ ಮುಖ್ಯಸ್ಥ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಭಾರತದಲ್ಲಿ ಬಡತನ ತೀವ್ರವಾಗಿ ಕುಸಿದಿದೆಯೆಂದೂ, ಈಗ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇ. 5ಕ್ಕಿಂತ ಕೆಳಗಿಳಿದಿದೆಯೆಂದೂ ಘೋಷಿಸಿಬಿಟ್ಟರು. ಈಗ ಅದನ್ನೇ ಆಧರಿಸಿ ವಿಶ್ವಬ್ಯಾಂಕ್ ಕೂಡ ಅದೇ ಘೋಷಣೆ ಮಾಡಿದೆ. ಏಕೆಂದರೆ ವಿಶ್ವಬ್ಯಾಂಕ್ ಆಗಲೀ, ಐಎಂಎಫ್ ಆಗಲೀ ಆಯಾ ಸರಕಾರಗಳು ಕೊಟ್ಟ ಅಂಕಿ ಅಂಶಗಳನ್ನೇ ಆಧರಿಸಿ ತಮ್ಮ ವಿಧಾನಗಳನ್ನು ಅನ್ವಯಿಸಿ ಅಂದಾಜುಗಳನ್ನು ಘೋಷಿಸುತ್ತವೆ.

ಆದರೆ ಈ ಘೋಷಣೆಗೆ ಬುನಾದಿಯೇ ಇಲ್ಲ. ಏಕೆಂದರೆ 2023ರ ಸಮೀಕ್ಷಾ ವರದಿಯನ್ನು ಹಿಂದಿನ ಸಮೀಕ್ಷೆಗಳೊಂದಿಗೆ ಹೋಲಿಸಲು ಸಾಧ್ಯವೇ ಇಲ್ಲ. ಇದನ್ನು ಆ ಫ್ಯಾಕ್ಟ್ ಶೀಟಿನಲ್ಲಿ ‘‘Issues related to Comparability’ ಎಂಬ ಶೀರ್ಷಿಕೆಯಡಿ ಸರಕಾರವೇ ಸ್ಪಷ್ಟಪಡಿಸಿದೆ. ಅದು ಈವರೆಗೆ ಇತರ ಸಮೀಕ್ಷೆಗಳು ಅನುಸರಿಸದ ವಿಧಾನಗಳನ್ನು ಮತ್ತು ಮಾನದಂಡಗಳನ್ನು ಅನುಸರಿಸಿ ಈ ತೀರ್ಮಾನಕ್ಕೆ ಬಂದಿದೆ ಮತ್ತು ಈವರೆಗೆ ಆ ಮಾನದಂಡಗಳನ್ನು ಅನುಸರಿಸಲು ಕಾರಣವೇನು ಮತ್ತು ಅದರ ವೈಜ್ಞಾನಿಕತೆಯೇನು ಎಂದು ಸರಕಾರ ಒಂದು ವರ್ಷದ ನಂತರವೂ ಬಯಲು ಪಡಿಸಿಲ್ಲ.

ಆದಾಯ ಹೆಚ್ಚದಿದ್ದರೂ ಬಳಕೆ ವೆಚ್ಚ ಹೆಚ್ಚಿದ್ದು ಹೇಗೆ?

ಆದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಜನತೆಯ ಬಳಕೆ ವೆಚ್ಚ ಹೆಚ್ಚಿರಬೇಕೆಂದರೆ ಅವರ ಆದಾಯಗಳು ಹೆಚ್ಚಿರಬೇಕಲ್ಲವೇ?

ಅದಕ್ಕೆ ಸರಕಾರ ಕೊಡುವ ಉತ್ತರವೇನೆಂದರೆ ದೇಶದ ಆರ್ಥಿಕ ಅಭಿವೃದ್ಧಿ ಗತಿ ಹೆಚ್ಚಿರುವುದರಿಂದ ಅದರ ಲಾಭ ಎಲ್ಲರಿಗೂ ದಕ್ಕಿದೆ ಎಂಬುದು. ಸಾಮಾನ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕೆಗಳು, ನಗರೀಕರಣ ಹೆಚ್ಚಾದಂತೆ ಕೃಷಿಯ ಮೇಲಿನ ಅವಲಂಬನೆ ಕಡಿಮೆಯಾಗುತ್ತಾ ನಗರಗಳಲ್ಲಿ ಕಾರ್ಖಾನೆಗಳಲ್ಲಿ ಉತ್ತಮ ಆದಾಯದ ಉದ್ಯೋಗ ಸಿಗುತ್ತದೆ. ಹೀಗಾಗಿ ಅಭಿವೃದ್ಧಿ ಹೆಚ್ಚಾದರೆ ಆದಾಯ ಹೆಚ್ಚಾಗುತ್ತದೆ ಎಂಬ ಸಿದ್ಧಾಂತ ವಿದೆ. ಆದರೆ ಭಾರತದಲ್ಲಿ 1991ರ ನಂತರದ ಎಲ್ಲಾ ಸರಕಾರಗಳು ಮತ್ತು ಅವೆಲ್ಲಕ್ಕಿಂತ ಹೆಚ್ಚಾಗಿ ಮೋದಿ ಸರಕಾರ ಅದನ್ನು ಸುಳ್ಳು ಮಾಡಿದೆ.

ಭಾರತದ ಜಿಡಿಪಿಯಲ್ಲಿ ಕೃಷಿಯ ಪಾಲು ಕಡಿಮೆಯಾಗುತ್ತಿದ್ದರೂ (ಶೇ.17) ಅದನ್ನು ಈಗಲೂ ಶೇ. 60ಕ್ಕೂ ಹೆಚ್ಚು ಜನರು ಅವಲಂಬಿಸಿದ್ದಾರೆ. ಮೋದಿ ಸರಕಾರ ಕೃಷಿ ಆದಾಯ ಡಬಲ್ ಮಾಡಲಾಗುವುದೆಂದು ಬುರುಡೆ ಬಿಟ್ಟಿದ್ದರೂ ಆದಾಯ ಸ್ಥಗಿತಗೊಂಡಿದೆ ಮತ್ತು ಬಿಕ್ಕಟ್ಟು ಹೆಚ್ಚಾಗಿ ಸಾಲ ಮತ್ತು ಆತ್ಮಹತ್ಯೆಗಳು ಹೆಚ್ಚಾಗಿವೆ. ಹೀಗಾಗಿ ಕೃಷಿಯಲ್ಲಿ 2011-22ರ ನಡುವೆ ಕೃಷಿ ಆದಾಯ ಕಡಿಮೆಯಾಗಿ ಬಡತನ ಹೆಚ್ಚಾಗಿದೆಯೇ ವಿನಾ ಕಡಿಮೆಯಾಗಿಲ್ಲ.

ಇನ್ನು ಭಾರತದ ಉತ್ಪಾದಕಾ ಕೈಗಾರಿಕಾ ಕ್ಷೇತ್ರ ಸ್ಥಗಿತಗೊಂಡಿದೆ. ಹೆಚ್ಚಿರುವುದು ಸೇವಾ ಕ್ಷೇತ್ರ. ಶೇ. 24ರಷ್ಟು ಜಿಡಿಪಿ ಪಾಲು ಉತ್ಪಾದಕಾ ಕ್ಷೇತ್ರವಾದರೆ, ಶೇ. 65ರಷ್ಟು ಸೇವಾ ಕ್ಷೇತ್ರ. ಸೇವಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಲಾಭ ಶೇ. 10ರಷ್ಟು ಸುಶಿಕ್ಷಿತ ಮೇಲ್ವರ್ಗ ಮತ್ತು ಮೇಲ್ಜಾತಿ ಜನರಿಗೆ ದಕ್ಕುತ್ತಿದೆಯೇ ವಿನಃ ಉಳಿದವರಿಗಲ್ಲ. ಈಗಲೂ ಭಾರತದ ಒಟ್ಟಾರೆ ಕ್ಷೇತ್ರಗಳಲ್ಲಿ ಸಂಘಟಿತ ಕ್ಷೇತ್ರದಲ್ಲಿ ಕಾರ್ಮಿಕರ ಸಂಖ್ಯೆ ಕೇವಲ ಶೇ.8. ಉಳಿದ ಶೇ. 92ರಷ್ಟು ಕಾರ್ಮಿಕರು ಯಾವುದೇ ಭದ್ರತೆಗಳಿಲ್ಲದ ಅಸಂಘಟಿತ ಕ್ಷೇತ್ರದ ದುಡಿಮೆಯವರು.

ಈ ಕ್ಷೇತ್ರವು ಕಳೆದ ಹತ್ತು ವರ್ಷಗಳಲ್ಲಿ ಮೋದಿ ಒಂದಾದ ನಂತರ ಒಂದರಂತೆ ಮಾಡಿದ ಆಕ್ರಮಣಗಳಾದ ನೋಟು ನಿಷೇಧ, ಜಿಎಸ್‌ಟಿ ಮತ್ತು ಕೋವಿಡ್ ಲಾಕ್ ಡೌನ್‌ಗಳಿಗೆ ಸಿಕ್ಕಿ ತತ್ತರಿಸಿವೆ.

ಕಾರ್ಮಿಕ ಆರ್ಥಿಕತೆಯ ವಿದ್ವಾಂಸ ಸಂತೋಷ್ ಮೆಹ್ರೋತ್ರ ಮಾಡಿರುವ ಅಧ್ಯಯನದ ಪ್ರಕಾರ ಈ ದೇಶದಲ್ಲಿ 2010ರ ದರದಲ್ಲಿ ದಿನಕ್ಕೆ 100 ರೂ. ಮಾತ್ರ ಕೂಲಿ ಪಡೆಯುತ್ತಾ, ಅಮಾನವೀಯ ಬಡತನ ಅನುಭವಿಸುತ್ತಿದ್ದವರ ಸಂಖ್ಯೆ 2011ರಲ್ಲಿ 10 ಕೋಟಿ ಯಷ್ಟಿದ್ದರೆ ಇಂದು 19 ಕೋಟಿಯಾಗಿದೆ. ದಿನಕ್ಕೆ 100-200 ರೂ. ಆದಾಯ ಪಡೆಯುತ್ತಿದ್ದವರ ಸಂಖ್ಯೆ 14 ಕೋಟಿ. ದಿನಕ್ಕೆ 200-300 ರೂ. ಆದಾಯ ಪಡೆಯುವರ ಸಂಖ್ಯೆ 12.7 ಕೋಟಿ. ಅಂದರೆ 46 ಕೋಟಿ ಕೂಲಿ ಕಾರ್ಮಿಕರು ಈಗಲೂ ತಿಂಗಳಿಗೆ 10,000 ರೂ.ಗಿಂತಲೂ ಕಡಿಮೆ ಆದಾಯ ಪಡೆಯುತ್ತಿದ್ದಾರೆ. ತೆಂಡುಲ್ಕರ್ ವರದಿಯ ಬಡತನ ರೇಖೆಯನ್ನೇ ಹಿಡಿದರೂ 2025ರಲ್ಲಿ ಕನಿಷ್ಠ ತಿಂಗಳಿಗೆ 12,000 ಆದಾಯ ಪಡೆಯದ ಕುಟುಂಬಗಳು ಅಮಾನವೀಯ ಬಡತನ ಎದುರಿಸುತ್ತಿವೆ ಎಂದರ್ಥ. ಇದರ ಜೊತೆ ಗ್ರಾಮೀಣ ಪ್ರದೇಶದ ಸಣ್ಣ ರೈತ ಹಾಗೂ ಕೃಷಿ ಕೂಲಿಗಳನ್ನು ಸೇರಿಸಿದರೆ ಭಾರತದಲ್ಲಿ ಅಮಾನವೀಯ ಬಡತನ ಎದುರಿಸುತ್ತಿರುವವರ ಸಂಖ್ಯೆ ಶೇ. 5 ಅಲ್ಲ. ಶೇ. 50ನ್ನು ದಾಟುತ್ತದೆ. ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ ಅದು ಶೇ. 75 ಅನ್ನು ಮುಟ್ಟುತ್ತದೆ.

ಆ ಕಾರಣಕ್ಕಾಗಿಯೇ ಅಲ್ಲವೇ PM-GAKY-ಯೋಜನೆಯಡಿ ಮೋದಿ ಸರಕಾರ ಗ್ರಾಮೀಣ ಭಾರತದ ಶೇ. 75 ಬಡಜನರಿಗೆ ಮತ್ತು ನಗರ ಭಾರತದ ಶೇ. 50 ಬಡಜನರಿಗೆ ಒಟ್ಟು ಭಾರತದ ಶೇ. 60 ಬಡ ಭಾರತೀಯರನ್ನು ಗರೀಬರು ಎಂದು ಪರಿಗಣಿಸಿ ಗರೀಬ್ ಅನ್ನ ಕಲ್ಯಾಣ ಯೋಜನೆ ಜಾರಿಗೆ ತಂದಿರುವುದು.

ಹೀಗೆ ಸರಕಾರಿ ಅಂಕಿಆಂಶಗಳೇ ಮೋದಿ ಭಾರತದಲ್ಲಿ ಭಾರತದ ಬಡತನ, ಹಸಿವು, ಬಡತನದ ದಾರುಣತೆ ಹೆಚ್ಚಿದೆ ಎಂಬುದನ್ನು ಸಾಬೀತು ಮಾಡುತ್ತದೆಯೇ ವಿನಾ ಕಡಿಮೆಯಾಗಿದೆ ಎಂದಲ್ಲ. ಆಪರೇಷನ್ ಬಡತನ ನಿರ್ಮೂಲ ಮಾಡದ ಮೋದಿ ಸರಕಾರ ಆಪರೇಷನ್ ಸಿಂಧೂರದ ಭ್ರಾಮಕತೆಯಲ್ಲಿ ನಮ್ಮ ತಲೆಯನ್ನೇ ನಮ್ಮ ಹೊಟ್ಟೆಯ ವಿರುದ್ಧ ಯುದ್ಧ ಮಾಡುವ ಯೋಧನನ್ನಾಗಿ ತಯಾರು ಮಾಡುತ್ತಿದೆ ಅಷ್ಟೆ.

share
ಶಿವಸುಂದರ್
ಶಿವಸುಂದರ್
Next Story
X