Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಸೆಕ್ಯುಲರ್ ಗಣರಾಜ್ಯ v/s ಕರಾವಳಿಯ ಸಂಘಿ...

ಸೆಕ್ಯುಲರ್ ಗಣರಾಜ್ಯ v/s ಕರಾವಳಿಯ ಸಂಘಿ ರಾಜ್ಯ!

ಶಿವಸುಂದರ್ಶಿವಸುಂದರ್5 Jun 2025 10:34 AM IST
share
ಸೆಕ್ಯುಲರ್ ಗಣರಾಜ್ಯ v/s ಕರಾವಳಿಯ ಸಂಘಿ ರಾಜ್ಯ!

ಭಾಗ- 2

ಅನಾಗರಿಕ, ಅಮಾನುಷ ನರಮೇಧಗಳಿಗೆ ಬಹುಸಂಖ್ಯಾತರ ಜನಸಮ್ಮತಿ ದೊರೆಯುವುದಾದರೂ ಹೇಗೆ?

ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆ ಫೇನ್ ಅವರು ಇದಕ್ಕೆ ಕಂಡುಕೊಂಡಿರುವ ಉತ್ತರವಿದು:

‘‘ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ, ಅಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಇದು ಜನಮಾನಸದಲ್ಲಿ ಇತರ ಮನುಷ್ಯರನ್ನು ತಮ್ಮ ನೈತಿಕ ಹೊಣೆಗಾರಿಕೆಯ ಲೋಕದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ.

ನಮ್ಮವರ ಬಗ್ಗೆ ನಾವು ಸಹಜವಾಗಿ ಹೊಂದಿರುವ ನೈತಿಕ ಹೊಣೆಗಾರಿಕೆಯನ್ನು ಅನ್ಯರಿಗೆ ನಿರಾಕರಿಸಲು ಬೇಕಾದ ಮನಸ್ಥಿತಿ ಹಾಗೂ ಸಮರ್ಥನೆಗಳನ್ನು ಈ ಕಲ್ಪಿತ ದ್ವೇಷ, ಭೀತಿ ಮತ್ತು ಸಾಮಾಜಿಕ ಪೂರ್ವಾಗ್ರಹಗಳು ಬಿತ್ತುತ್ತವೆ.’’

ನಾಗರಿಕ ಸಮಾಜ ನರಭಕ್ಷಕ ಸಮಾಜವಾಗುವ ಹತ್ತು ಹಂತಗಳು

ಸಹವಾಸಿಗಳ ಈ ಅನ್ಯೀಕರಣ ಮತ್ತು ಪರಾಯೀಕರಣವು ಕೂಡಾ ಏಕಾಏಕಿ ಸಂಭವಿಸುವುದಿಲ್ಲ.

ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್ ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:

1.Classification: ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ.

2. Symbolisation: ಆ ಗುಂಪಿನ ಚಹರೆಗಳ ಪಟ್ಟೀಕರಣ.

3. Discrimination: ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು.

4. Dehumanisation: ಆ ಗುಂಪನ್ನು ಅಪಮಾನಿಸುತ್ತಾ ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು.

5. Organisation: ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು.

6. Polarisation: ಇವುಗಳ ಆಧಾರದ ಮೇಲೆ ನಾವು-ಅವರು ಎಂದು ಸಮಾಜವನ್ನು ಧ್ರುವೀಕರಿಸುವುದು

7. Preparation: ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು

8. Parsecution: ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.

9. Extermination: ಸಾಮೂಹಿಕ ಕಗ್ಗೊಲೆ

10. Denial: ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ.

ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು.

ಮೋದಿ ಅಧಿಕಾರ ವಹಿಸಿದ ನಂತರದ ಭಾರತೀಯ ಸಮಾಜದಲ್ಲಿ ಮತ್ತು ಕರಾವಳಿ ಕರ್ನಾಟಕದಲ್ಲೂ ಮೇಲಿನ ಹತ್ತೂ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ. ನಾಗರಿಕ ಸಮಾಜವನ್ನು ಮೃಗೀಯಗೊಳಿಸುತ್ತಿದೆ ಮುಸ್ಲಿಮರನ್ನು ಅನ್ಯೀಕರಣಗೊಳಿಸುತ್ತಾ, ದಲಿತ-ಶೂದ್ರ ಸಮುದಾಯವನ್ನು ಅಮಾನ್ಯಗೊಳಿಸುತ್ತಾ ಸಾಂಸ್ಕೃತಿಕ-ರಾಜಕೀಯ ನರಮೇಧಗಳನ್ನು ನಡೆಸುತ್ತಿವೆ.

Active ಮತ್ತು Passive ಕೊಲೆಗಡುಕತನಗಳ ಫ್ಯಾಶಿಸ್ಟ್ ನಾಗರಿಕೆ

ಇಂತಹ ರಾಜಕಾರಣ ಮನುಷ್ಯರನ್ನು ಹೇಗೆ ಕೊಲೆಗಡುಕ ಯಂತ್ರಗಳನ್ನಾಗಿಸುತ್ತದೆ ಎಂಬುದನ್ನು ಹನ್ನಾ ಆರೆಂಡ್ಟ್ ಎಂಬ ವಿದ್ವಾಂಸೆ ತನ್ನ ಅಧ್ಯಯನದಲ್ಲಿ ಹೀಗೆ ಸ್ಪಷ್ಟಪಡಿಸುತ್ತಾರೆ. ಅದರಲ್ಲೂ ನಾಝಿ ಯೋಧ ಐಶ್ ಮೆನ್ ಎಂಬ ವ್ಯಕ್ತಿ ಹೇಗೆ ‘ನಿರುದ್ವಿಗ್ನ ನಿರ್ಲಿಪ್ತತೆ’ಯಿಂದ ಸಾವಿರಾರು ಯಹೂದಿಗಳ ಕಗ್ಗೊಲೆ ನಡೆಸಲು ಸಾಧ್ಯವಾಯಿತು ಎಂದು ವಿವರಿಸುತ್ತಾರೆ.

‘‘ಐಶ್‌ಮನ್‌ನಂತಹವರು ಕಾಡುವುದೇಕೆಂದರೆ ಅವರಂತಹವರು ಅಲ್ಲಿ ಸಾವಿರಾರು ಮಂದಿಯಿದ್ದಾರೆ ಮತ್ತು ಅವರಲ್ಲಿ ಬಹಳಷ್ಟು ಜನ ವಿಕೃತ ಮನಸ್ಸುಳ್ಳವರು ಅಥವಾ ಹಿಂಸಾನಂದಿಗಳು ಅಲ್ಲ. ಅಂಥ ಬಹಳಷ್ಟು ಜನ ಈಗಲೂ-ಆಗಲೂ ಭೀತಿ ಹುಟ್ಟಿಸುವಷ್ಟು ನಾರ್ಮಲ್ ಸ್ಥಿತಿಯಲ್ಲೇ ಇದ್ದಾರೆ. ನಮ್ಮ ಕಾನೂನು ಸಂಸ್ಥೆಗಳ ದೃಷ್ಟಿಕೋನದಲ್ಲಿ ಹಾಗೂ ನಮ್ಮ ನೈತಿಕ ಮಾನದಂಡಗಳ ತೀರ್ಮಾನಗಳಲ್ಲಿ ನೋಡುವುದಾದರೆ ಅವರು ನಡೆಸಿದ ಎಲ್ಲಾ ಅತ್ಯಾಚಾರಗಳ ಒಟ್ಟು ಭೀಕರತೆಗಿಂತಲೂ ಈ ನಾರ್ಮಾಲಿಟಿಯು (ಸಾಮಾನ್ಯ ಸ್ಥಿತಿ) ಅತ್ಯಂತ ಭಯಾನಕವಾದದ್ದು’’

-ಹನಾ ಆರೆಂಡ್ಟ್

ಅಡಾಲ್ಫ್ ಐಶ್‌ಮ್ಯಾನ್ ಹಿಟ್ಲರ್‌ನ ಒಬ್ಬ ನಾಝಿ ಕಮಾಂಡರ್. ಲಕ್ಷಾಂತರ ಯೆಹೂದಿಗಳ ಕೊಲೆಗೆ ಬೇಕಾದ ಸಿದ್ಧತೆಗಳನ್ನು ಮಾಡುವ ಜವಾಬ್ದಾರಿ ನಿರ್ವಹಿಸಿದವ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸೋತ ನಂತರ ಸಾವಿರಾರು ನಾಝಿಗಳ ಜೊತೆ ಈತನೂ ದಕ್ಷಿಣ ಅಮೆರಿಕದ ಅರ್ಜೆಂಟೀನಾಗೆ ಪಲಾಯನ ಮಾಡಿ, ಅಲ್ಲಿ ಸಭ್ಯ ಗೃಹಸ್ಥನಾಗಿ ನೆಮ್ಮದಿಯಿಂದ ವಾಸ ಮಾಡುತ್ತಿದ್ದ. ಆದರೆ 1960ರಲ್ಲಿ ಇಸ್ರೇಲ್‌ನ ಮೊಸ್ಸಾದ್ ಆತನನ್ನು ಪತ್ತೆಹಚ್ಚಿ ಅಪಹರಿಸಿ ಇಸ್ರೇಲ್‌ಗೆ ಕರೆತರುತ್ತದೆ. ಅಲ್ಲಿ ಎರಡು ವರ್ಷಗಳ ಕಾಲ ಆತನ ವಿಚಾರಣೆ ನಡೆದು 1962ರಲ್ಲಿ ಮರಣದಂಡನೆ ವಿಧಿಸಲಾಗುತ್ತದೆ.

ಈ ವಿಚಾರಣೆಯನ್ನು ವರದಿ ಮಾಡಿದ ಪತ್ರಕರ್ತೆ, ವಿದ್ವಾಂಸೆ ಹನಾ ಆರೆಂಡ್ಟ್ ಅವರು ವಿಚಾರಣೆಯಲ್ಲಿ ಐಶ್‌ಮ್ಯಾನ್ ತೋರುವ ‘ನಿರುದ್ವಿಗ್ನ ನಿರ್ಲಿಪ್ತತೆ’ ಹಾಗೂ ತಾನು ಭಾಗವಹಿಸಿದ ನರಮೇಧಗಳ ಬಗ್ಗೆ ಯಾವುದೇ ವ್ಯಥೆ ಇಲ್ಲದ ಪ್ರತಿಕ್ರಿಯೆಗಳನ್ನು ಕಂಡು ಆಶ್ಚರ್ಯ ಚಕಿತರಾಗುತ್ತಾರೆ. ಆನಂತರ ಹತ್ಯಾಕಾಂಡದಲ್ಲಿ ಭಾಗವಹಿಸಿದ ಕೊಲೆಪಾತಕರ ಈ ಮನಸ್ಥಿತಿಯ ಬಗ್ಗೆ ಅಧ್ಯಯನ ಮಾಡುತ್ತಾರೆ.

‘‘ಲಕ್ಷಾಂತರ ಜನರ ಕಗ್ಗೊಲೆಯ ನಂತರವೂ ಮನುಷ್ಯ ಮಾತ್ರರಿಗೆ ಈ ಯಾಂತ್ರಿಕ ನಿರ್ಲಿಪ್ತತೆ ಹೇಗೆ ಸಾಧ್ಯ?’’

‘‘ಅಮಾನುಷ ಕ್ರೌರ್ಯಗಳನ್ನೂ ನಡೆಸಿಯೂ ಕಿಂಚಿತ್ತೂ ಗಿಲ್ಟ್ ಕೂಡ ಇಲ್ಲದೆ ಸಹಜ ಮನುಷ್ಯರಾಗಿ ಬದುಕಲು ಹೇಗೆ ಸಾಧ್ಯವಾಯಿತು?’’ ಎಂಬ ಬಗ್ಗೆ Banality Of Evil ಎಂಬ ಪುಸ್ತಕ ಬರೆಯುತ್ತಾರೆ.

ಮೇಲಿನ ಅನುವಾದ ಆ ಪುಸ್ತಕದ ಒಂದು ಪ್ಯಾರಾ ..

ಸುದೀರ್ಘ ಸಂಘರ್ಷವಿಲ್ಲದೆ ನಿಜ ಪರ್ಯಾಯವಿಲ್ಲ

ಮಾನವ ಸಹಜವಾಗಿರುವ ಪರಾನುಕಂಪ ಮತ್ತು ಸಹಾನುಭೂತಿಗಳ ಸಂವೇದನೆಯನ್ನು ಕೊಂದು ಹಾಕಿ ಹುಸಿ ಸಿದ್ಧಾಂತ ಮತ್ತು ದ್ವೇಷದ ನೆರೆಟಿವ್ ಗಳ ಮೂಲಕ ಅವರಲ್ಲಿ ತಮ್ಮ ಕಣ್ಣೆದುರುಗಿನ ಕ್ರೌರ್ಯದ ಬಗ್ಗೆ ನಿರುದ್ವಿಗ್ನ ನಿರ್ಲಿಪ್ತತೆಯನ್ನು ಅಥವಾ ಸಕ್ರಿಯ ಕೊಲೆಗಡುಕತೆಯನ್ನು ಸೃಷ್ಟಿಸುತ್ತಿರುವುದೇ ಫ್ಯಾಶಿಸಂ ನಾಗರಿಕತೆಗೆ ಹಾಕುವ ಅತಿ ದೊಡ್ಡ ಸವಾಲು. ಅದು ಬಲಿಪಶು, ಬೇಟೆಗಾರ ಇಬ್ಬರನ್ನೂ ಅಮಾನುಷಗೊಳಿಸುತ್ತದೆ.

ಭಾರತ, ಕರ್ನಾಟಕ ಅಂತಹ ದೊಡ್ದ ಸವಾಲನ್ನು ಎದುರಿಸುತ್ತಿದೆ. ನೂರು ವರ್ಷಗಳ ಕಾಲ ಸಂಘಿಗಳು ನಿರಂತರವಾಗಿ ತಮ್ಮ ದ್ವೇಷ ಸಿದ್ಧಾಂತದ ಮೂಲಕ ಭಾರತೀಯರನ್ನು ಕೊಲೆಗಡುಕರನ್ನಾಗಿ ಮಾಡಿದೆ. ಹೀಗಾಗಿ ಸಮಾನತೆ ಮತ್ತು ಸೌಹಾರ್ದದದ ಭಾರತವನ್ನು ಮರಳಿಕಟ್ಟಬೇಕೆಂದರೆ ಕನಿಷ್ಠ 25-30 ವರ್ಷಗಳ ಕಾಲವಾದರೂ ಸಮರ್ಪಿತ ಸಂಘರ್ಷದ ಅಗತ್ಯವಿದೆ. ಕಾಂಗ್ರೆಸ್‌ನ ಬಗ್ಗೆ, ನ್ಯಾಯಾಂಗದ ಬಗ್ಗೆ ಚುನಾವಣೆಗಳ ಬಗ್ಗೆ ಯಾವುದೇ ಭ್ರಮೆಗಳನ್ನು ಇಟ್ಟುಕೊಳ್ಳದೆ ಜನರಲ್ಲಿ ಸುಪ್ತವಾಗಿರುವ ಮಾನವೀಯತೆಯ ಬಗ್ಗೆ ಭರವಸೆ ಇಟ್ಟು, ಚರಿತ್ರೆಯ ನಡೆಯ ಬಗ್ಗೆ ವಿಶ್ವಾಸವಿಟ್ಟು ಆ ನಿಟ್ಟಿನಲ್ಲಿ ಈಗಲಾದರೂ ತೊಡಗಿಕೊಳ್ಳಬೇಕಿದೆ. ಅಷ್ಟೆ.

share
ಶಿವಸುಂದರ್
ಶಿವಸುಂದರ್
Next Story
X