Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಸೆಕ್ಯುಲರ್ ಗಣರಾಜ್ಯ v/s ಕರಾವಳಿಯ ಸಂಘಿ...

ಸೆಕ್ಯುಲರ್ ಗಣರಾಜ್ಯ v/s ಕರಾವಳಿಯ ಸಂಘಿ ರಾಜ್ಯ!

ಶಿವಸುಂದರ್ಶಿವಸುಂದರ್4 Jun 2025 10:48 AM IST
share
ಸೆಕ್ಯುಲರ್ ಗಣರಾಜ್ಯ v/s ಕರಾವಳಿಯ ಸಂಘಿ ರಾಜ್ಯ!
ಕರಾವಳಿಯ ಅಥವಾ ಇಡೀ ದೇಶದ ಕೋಮು ಘರ್ಷಣೆಗಳು 80ರ ದಶಕದ ಹಿಂದಿನಂತೆ ತಪ್ಪುಕಲ್ಪನೆ ಅಥವಾ ತಾತ್ಕಾಲಿಕ ಪೂರ್ವಾಗ್ರಹಗಳ ಕಾರಣಕ್ಕಾಗಿ ಒಂದೆರಡು ದಿನಗಳ ಕಾಲ ಹೊತ್ತಿ ಉರಿದು ತಣ್ಣಗಾಗುವ ಕೋಮು ಗಲಭೆಗಳಾಗಿ ಉಳಿದಿಲ್ಲ. ಬದಲಿಗೆ ಅದು ಮತ್ತೊಂದು ಸಮುದಾಯವನ್ನು ಶಾಶ್ವತ ಶತ್ರುಗಳನ್ನಾಗಿ ಚಿತ್ರಿಸುತ್ತಾ, ಭಾರತ ಗಣರಾಜ್ಯಕ್ಕೆ ಪ್ರತಿಯಾಗಿ ಬ್ರಾಹ್ಮಣೀಯ ಹಿಂದೂ ರಾಷ್ಟ್ರವನ್ನು ಕಟ್ಟುವ ಫ್ಯಾಶಿಸಂ ಆಗಿ ಬೆಳೆದು ನಿಂತಿದೆ. ಅದರ ಬಿಳಲುಗಳು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲೂ, ಮಾಧ್ಯಮದಲ್ಲೂ, ಎಲ್ಲಕ್ಕಿಂತ ಹೆಚ್ಚಾಗಿ ಜನಮಾನಸದಲ್ಲೂ ಬೇರು ಬಿಟ್ಟುಕೊಂಡಿವೆ.

ಭಾಗ- 1

ಕರಾವಳಿಯಲ್ಲಿ ಸಂಘಿಗಳ ಫ್ಯಾಶಿಸ್ಟ್ ಹಿಂಸಾಚಾರ ಮತ್ತು ಅದಕ್ಕೆ ಪ್ರತಿಯಾಗಿ ಪ್ರತೀಕಾರ ಹಿಂಸೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೂ ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕರಾವಳಿಯಲ್ಲಿ ಸಾಲು ಕೊಲೆಗಳಾಗಿವೆ ಮತ್ತು ರಾಜ್ಯಾದ್ಯಂತ 114ಕ್ಕೂ ಹೆಚ್ಚು ಕೋಮು ಸಂಘರ್ಷಗಳಾಗಿವೆ, ಅದರಲ್ಲೂ ಮಂಗಳೂರಿನಲ್ಲಿ ಸಂಘಿ ಫ್ಯಾಶಿಸ್ಟರು ಬಿಜೆಪಿ ಕಾಲದಂತೆ ಶಿಕ್ಷಾಭೀತಿ ಇಲ್ಲದೆ ಹಿಂಸಾಚಾರ ನಡೆಸುತ್ತಿದ್ದಾರೆ. ಇದು ಹೆಚ್ಚಾಗುತ್ತಿದ್ದಂತೆ ಕರ್ನಾಟಕದ ನಾಗರಿಕ ಸಮಾಜ ತೀವ್ರವಾದ ಅಸಮಾಧಾನ ಹೊರಹಾಕತೊಡಗಿದೆ ಮತ್ತು ಕಾಂಗ್ರೆಸ್‌ಗೆ ಮುಸ್ಲಿಮ್ ಸದಸ್ಯರು ಮತ್ತು ನಾಯಕರೇ ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಂತೆ ಕಂಡ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ನಿರಂತರ ಕೋಮು ದ್ವೇಷ ಪ್ರಚಾರದಲ್ಲಿ ತೊಡಗಿರುವ ಸಂಘಿ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಸ್ಲಿಮ್ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗಡಿಪಾರು ಕ್ರಮವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಮತ್ತೊಂದು ಕಡೆ ಇದರ ವಿರುದ್ಧ ಧ್ವನಿ ಎತ್ತಿದ ನಾಯಕರಿಗೆ ಶೋಕಾಸ್ ನೋಟಿಸನ್ನು ಕಳಿಸಿದೆ!

ಗಡಿಪಾರು ಪಟ್ಟಿಯಲ್ಲಿ ಮುಸ್ಲಿಮ್ ಸಮುದಾಯದ ‘ತಾಂಟ್ ಕೋರ’ ನಾಯಕರ ಹೆಸರುಗಳು ಹೆಚ್ಚಾಗಿಲ್ಲ. ಏಕೆಂದರೆ ಮುಸ್ಲಿಮ್ ಸಂಘಟನೆ ಮತ್ತು ನಾಯಕರಲ್ಲಿ ಯಾರನ್ನು ಸರಕಾರ ಅಪಾಯಕಾರಿ ಎಂದು ಪರಿಗಣಿಸುತ್ತದೆಯೋ ಅಂತಹವರನ್ನು ಮಾತ್ರವಲ್ಲದೆ, ಸಂಘಿಗಳ ಸಿದ್ಧಾಂತವನ್ನು ವಿರೋಧಿಸುತ್ತಿದ್ದ ಬಹುಪಾಲು ಮುಸ್ಲಿಮ್ ನಾಯಕರನ್ನು ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಸರಕಾರ ಬಂಧಿಸಿ ಜೈಲಿಗೆ ದೂಡಿದೆ. ಹೀಗಾಗಿ ಈಗ ಘೋಷಿತವಾಗಿರುವ ಗಡಿಪಾರು ಪಟ್ಟಿಯು ಸಮತೋಲನ ತೋರಿಸಲೆಂದೇ ಕೆಳಹಂತದ ಮುಸ್ಲಿಮ್ ನಾಯಕರನ್ನು ಒಳಗೊಂಡಿದೆ.

ಗಡಿಪಾರು: ಶಿಕ್ಷೆಯೋ?

ಕೋಮುಗಡಿಗಳ ವಿಸ್ತರಣೆಯೋ?

ಆದರೆ ಗಡಿಪಾರು ಪಟ್ಟಿಯಲ್ಲಿ ಅರುಣ್ ಪುತ್ತಿಲರನ್ನು ಬಿಟ್ಟರೆ ಇಡೀ ಕರಾವಳಿಗೆ ನಿರಂತರವಾಗಿ ಬೆಂಕಿ ಹಚ್ಚುತ್ತಾ ಬಂದ ಸಂಘಪರಿವಾರದ ಹಿರಿಯ ಮತ್ತು ಬಹುಪಾಲು ಮೇಲ್ಜಾತಿ ನಾಯಕರು ಪಟ್ಟಿಯಲ್ಲಿಲ್ಲ. ಉದಾಹರಣೆಗೆ ಕಲ್ಲಡ್ಕ ಪ್ರಭಾಕರ ಭಟ್ಟರು. ಅಲ್ಲದೆ ಸಂಘಪರಿವಾರದ ಬಣಗಳ ನಡುವಿನ ರಾಜಕಾರಣವೂ ಕಾಂಗ್ರೆಸ್‌ನ ಪಟ್ಟಿಯ ಮೇಲೆ ಪ್ರಭಾವ ಬೀರಿರುವಂತಿದೆ. ಹೀಗಾಗಿ ಈಗ ಕಾಂಗ್ರೆಸ್ ಸರಕಾರ ಮಾಡುತ್ತಿರುವುದು ಇಂಗ್ಲಿಷಿನಲ್ಲಿ ಹೇಳುವಂತೆ Too Little-Too Late. ಆದರೆ ಇದನ್ನಾದರೂ ಸರಕಾರ ಚಿತ್ತಶುದ್ಧಿಯಿಂದ ಅದರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವಂತೆ ನಾಗರಿಕ ಸಮಾಜ ನಿರಂತರ ಎಚ್ಚರವನ್ನು ಮತ್ತು ಒತ್ತಡವನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಏಕೆಂದರೆ ಕಾಂಗ್ರೆಸ್ ಪಕ್ಷಕ್ಕಿಂತ, ಪ್ರಗತಿಪರ ಸಂಘಟನೆಗಳಿಗಿಂತ ಕರಾವಳಿಯ ಜನತೆಯ ನಡುವೆ ಬೇರುಗಳಿರುವ ಸಂಘ ಪರಿವಾರ, ಕಾಂಗ್ರೆಸ್ ಸರಕಾರದ ಈ ಅರೆಮನಸ್ಸಿನ ಕ್ರಮವನ್ನೂ ಹಿಂದೂ ವಿರೋಧಿ ಎಂದು ಬಣ್ಣಿಸುತ್ತಾ ಬೀದಿ ಹಿಂಸಾಚಾರಕ್ಕಿಳಿಯಬಹುದು. ಅದನ್ನು ಬೀದಿಗಳಲ್ಲಿ ಎದುರಾಗುವ ಅಥವಾ ರಾಜಕೀಯವಾಗಿ ಹಿಮ್ಮೆಟ್ಟಿಸುವ ಸಂಕಲ್ಪ ಕರಾವಳಿ ಕಾಂಗ್ರೆಸ್‌ಗಂತೂ ಇಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿರುವ ಸಂಗತಿ.

ಹೀಗಾಗಿ ಗಡಿಪಾರು ಬಹುಪಾಲು ಸಂಘಿಗಳನ್ನು ಶಿಕ್ಷೆಯಿಂದ ಪಾರು ಮಾಡುವ ಕ್ರಮವಾಗಿಯೂ ಪರಿಣಮಿಸಬಹುದು ಅಥವಾ ಕೋಮುವಾದ ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳಲೂ ಅವಕಾಶ ಒದಗಿಸಬಹುದು.

ಕೋಮುವಾದವಲ್ಲ-ಫ್ಯಾಶಿಸ್ಟ್ ಸವಾಲು!

ಹೀಗಾಗಿ ಗಡಿಪಾರು ಕ್ರಮ ಸ್ವಾಗತಾರ್ಹವಾದರೂ, ಅದರ ಬಗ್ಗೆ ಕಾಂಗ್ರೆಸ್‌ನ ಬದ್ಧತೆ ವಿಶ್ವಾಸ ಹುಟ್ಟಿಸುವುದಿಲ್ಲ ಅಥವಾ ಕೇವಲ 22 ಜನರನ್ನು ಗಡಿಪಾರು ಮಾಡುವುದರಿಂದ ಕರಾವಳಿಯಲ್ಲಿ, ಸಂಘಿ ಫ್ಯಾಶಿಸಂನ ಬೇರುಗಳೇನೂ ಅಲುಗಾಡುವುದಿಲ್ಲ.

ಏಕೆಂದರೆ ಕರಾವಳಿಯ ಅಥವಾ ಇಡೀ ದೇಶದ ಕೋಮು ಘರ್ಷಣೆಗಳು 80ರ ದಶಕದ ಹಿಂದಿನಂತೆ ತಪ್ಪುಕಲ್ಪನೆ ಅಥವಾ ತಾತ್ಕಾಲಿಕ ಪೂರ್ವಾಗ್ರಹಗಳ ಕಾರಣಕ್ಕಾಗಿ ಒಂದೆರಡು ದಿನಗಳ ಕಾಲ ಹೊತ್ತಿ ಉರಿದು ತಣ್ಣಗಾಗುವ ಕೋಮು ಗಲಭೆಗಳಾಗಿ ಉಳಿದಿಲ್ಲ. ಬದಲಿಗೆ ಅದು ಮತ್ತೊಂದು ಸಮುದಾಯವನ್ನು ಶಾಶ್ವತ ಶತ್ರುಗಳನ್ನಾಗಿ ಚಿತ್ರಿಸುತ್ತಾ, ಭಾರತ ಗಣರಾಜ್ಯಕ್ಕೆ ಪ್ರತಿಯಾಗಿ ಬ್ರಾಹ್ಮಣೀಯ ಹಿಂದೂ ರಾಷ್ಟ್ರವನ್ನು ಕಟ್ಟುವ ಫ್ಯಾಶಿಸಂ ಆಗಿ ಬೆಳೆದು ನಿಂತಿದೆ. ಅದರ ಬಿಳಲುಗಳು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲೂ, ಮಾಧ್ಯಮದಲ್ಲೂ, ಎಲ್ಲಕ್ಕಿಂತ ಹೆಚ್ಚಾಗಿ ಜನಮಾನಸದಲ್ಲೂ ಬೇರು ಬಿಟ್ಟುಕೊಂಡಿವೆ.

ಸಮಾಜದಲ್ಲಿ ನಿರಂತರವಾಗಿ ದ್ವೇಷದ ಹಿಂದುತ್ವವನ್ನು ಯೋಜಿತವಾಗಿ ಬಿತ್ತುತ್ತಾ ಕಳೆದ ನೂರು ವರ್ಷಗಳಲ್ಲಿ ಸಂಘ ಪರಿವಾರ ಒಂದು ಹಿಂದುತ್ವ ಸಮಾಜವನ್ನು ಕಟ್ಟಿಕೊಂಡಿದೆ. ಈ ಹಿಂದುತ್ವ ಸಮಾಜ ನಿಧಾನವಾಗಿ ಇಡೀ ಹಿಂದೂ ಸಮುದಾಯವನ್ನು ಆವರಿಸಿಕೊಳ್ಳುತ್ತಿದೆ. ಈ ದ್ವೇಷಸಿಕ್ತ ಹಿಂದುತ್ವ ಸಮಾಜ ಚುನಾವಣೆಯಲ್ಲಿ ಹಿಂದೂ ರಾಷ್ಟ್ರವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಆದ್ದರಿಂದಲೇ ಬಲವಾದ ಪ್ರಜಾತಾಂತ್ರಿಕ ಸಮಾಜವನ್ನು ಕಟ್ಟದೆ ಚುನಾವಣೆಯಲ್ಲೂ ಸಂಘಿ ಪಕ್ಷಗಳನ್ನು ಸೋಲಿಸಲು ಸೋಗಲಾಡಿ ಸೆಕ್ಯುಲರ್ ಪಕ್ಷಗಳು ಮಾತ್ರವಲ್ಲ ನೈಜ ಸೆಕ್ಯುಲರ್ ಪಕ್ಷಗಳೂ ಏದುಸಿರು ಬಿಡುತ್ತವೆ. ಆದ್ದರಿಂದ ಒಂದು ಪ್ರಬಲ ಪ್ರಜಾತಾಂತ್ರಿಕ ಸಮಾಜವನ್ನು ಮತ್ತು ಅದನ್ನು ಆಧರಿಸಿದ ಪ್ರಜಾತಾಂತ್ರಿಕ ರಾಷ್ಟ್ರವನ್ನು ಕಟ್ಟದೆ ಕೇವಲ ಕಾನೂನಿನ ಮೂಲಕ ಅಥವಾ ಚುನಾವಣೆಗಳ ಮೂಲಕ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ ಕಾಂಗ್ರೆಸನ್ನೂ ಒಳಗೊಂಡಂತೆ ಬಿಜೆಪಿಯೇತರ ಆಳುವ ವರ್ಗದ ಪಕ್ಷಗಳಿಗೆ ಬಿಜೆಪಿಯ ಜೊತೆ ಚುನಾವಣಾ ವೈರುಧ್ಯವಿದೆಯೇ ವಿನಹ ಫ್ಯಾಶಿಸ್ಟ್ ರಾಜಕಾರಣದ ಜೊತೆ ಮೂಲಭೂತ ವೈರುಧ್ಯಗಳಿಲ್ಲ. ಹೀಗಾಗಿ ಅವು ತೆಗೆದುಕೊಳ್ಳುವ ಕಾನೂನು ಕ್ರಮಗಳು ನಿತ್ರಾಣವಾಗಿಯೇ ಇರುತ್ತವೆ.

ಹಾಗೆ ನೋಡಿದರೆ ಕಾನೂನು ಕ್ರಮಗಳ, ಬಂಧನ ಮತ್ತು ಶಿಕ್ಷೆಗಳ ಉದ್ದೇಶ ಅಪರಾಧ ಮಾಡುವವರಲ್ಲಿ ಶಿಕ್ಷಾಭೀತಿ ಹುಟ್ಟಿಸುವುದು. ಆದರೆ ಈವರೆಗೆ ಕಾಂಗ್ರೆಸ್ ಸರಕಾರವಿದ್ದರೂ, ಬಿಜೆಪಿ ಸರಕಾರವಿದ್ದರೂ ಕೋಮು ಹಿಂಸಾಚಾರ ಹಬ್ಬಿಸಿದವರಿಗೆ ಶಿಕ್ಷಾಭೀತಿ ಹುಟ್ಟುವಂತೆ ಪರಿಣಾಮಕಾರಿ ಕ್ರಮಗಳನ್ನೇ ಕೈಗೊಂಡಿಲ್ಲ. ಬದಲಿಗೆ ಕೋಮು ಗಲಭೆ ಮಾಡಿದವರು ಶಾಸಕರಾಗಿ ಮತ್ತು ಮಂತ್ರಿಗಳಾಗಿ ಭಡ್ತಿ ಪಡೆದಿದ್ದಾರೆ. ಇದಕ್ಕೆ ಈ ಹಿಂದಿನ ಮತ್ತು ಈಗಿನ ಕಾಂಗ್ರೆಸ್ ಸರಕಾರದ ಕೊಡುಗೆಗಳು ಕಡಿಮೆಯೇನಲ್ಲ. ಏಕೆಂದರೆ ಕರಾವಳಿ ಕಾಂಗ್ರೆಸ್‌ನ ಕೆಲವು ನಿವೃತ್ತಿಯ ಅಂಚಿನಲ್ಲಿರುವ ಸೆಕ್ಯುಲರ್ ನಾಯಕರನ್ನು ಬಿಟ್ಟರೆ, ಬಹುಪಾಲು ಹಾಲಿ ನಾಯಕರು ಸೈದ್ಧಾಂತಿಕವಾಗಿ ಸಂಘಿಗಳೇ. ಕರಾವಳಿಯ ಬಹುಪಾಲು ಕಾಂಗ್ರೆಸ್ ನಾಯಕರು ಸಂಘಿ ಮಠಗಳ ಕೃಪಾಶೀರ್ವಾದವಿಲ್ಲದೆ ಚುನಾವಣೆಯನ್ನು ನಡೆಸುತ್ತಿಲ್ಲ. ಸಂಘಪರಿವಾರದ ಹಿರಿಯ ನಾಯಕರೊಂದಿಗೆ ಸೇರಿಕೊಂಡೇ ಮುಸ್ಲಿಮ್ ಸಮುದಾಯದ ಹಲವು ಸಿರಿವಂತ ಉದ್ಯಮಿಗಳು ಜಂಟಿ ವ್ಯವಹಾರವನ್ನು ನಡೆಸುತ್ತಾರೆ. ರಾಜಕಾರಣ ಮತ್ತು ಆರ್ಥಿಕತೆಗಳು ಹೀಗೆ ಬೆಸೆದುಕೊಂಡಿರುವುದರಿಂದಲೇ 2023ರಲ್ಲಿ ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬಂದರೂ ಸ್ಪೀಕರ್ ಖಾದರ್ ಅವರು ಆಶೀರ್ವಚನ ನೀಡಲು ಫ್ಯಾಶಿಸ್ಟ್ ಸಂಘಿಗಳ ಘೋಷಿತ ಹಿತೈಷಿಗಳನ್ನೇ ಆಹ್ವಾನಿಸಿದ್ದರು. ಬಿಜೆಪಿಯ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರ ಸಂಸ್ಥಾನದ ಮೇಲೆ ಸಾಕಷ್ಟು ಆರೋಪಗಳಿದ್ದು ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಅವರ ಆಶೀರ್ವಾದ ಪಡೆದು ಬರುತ್ತಾರೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರು ಸಾವಿರ ಡಿಕೆಶಿಗಳು ಅವರ ರಕ್ಷಣೆಗಿವೆ ಎಂದು ಲಜ್ಜೆಯಿಲ್ಲದೆ ಘೋಷಿಸುತ್ತಾರೆ.

ಶಾಸಕಾಂಗ ಈ ರೀತಿ ಇದ್ದರೆ ಮತ್ತೊಂದು ಕಡೆ ನ್ಯಾಯಾಂಗ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಹಿಂದುತ್ವ ಪಕ್ಷಪಾತಿಯಂತಹ ತೀರ್ಮಾನಗಳನ್ನು ನೀಡುತ್ತಿವೆ. ಹಿಂದುತ್ವದ ಯಾಜಮಾನ್ಯ ಸುಪ್ರೀಂನ ಸಾಂವಿಧಾನಿಕ ಪೀಠದಿಂದ ಹಿಡಿದು ತಳಮಟ್ಟದ ಸೆಷನ್ಸ್ ಕೋರ್ಟ್‌ಗಳ ನ್ಯಾಯಾಧೀಶರವರೆಗೆ ಪ್ರಬಲವಾಗಿ ಹಬ್ಬಿದೆ. ಹೀಗಾಗಿಯೇ ಒಂದೇ ಆರೋಪಕ್ಕೆ ಇತರರು ರಾಷ್ಟ್ರದ್ರೋಹದ ಆರೋಪಕ್ಕೆ ಗುರಿಯಾಗಿ ವಿಚಾರಣೆ ಇಲ್ಲದೆ ಹಲವಾರು ವರ್ಷ ಜೈಲು ಅನುಭವಿಸಿದರೆ, ಅದೇ ಆರೋಪಕ್ಕೆ ಗುರಿಯಾದ ಸಂಘಿ ಕಾರ್ಯಕರ್ತರು ದೋಷಮುಕ್ತರಾಗಿ ಬಿಡುಗಡೆಯಾಗುತ್ತಾರೆ. ಯಾವ ದಾಖಲೆಗಳು ಇಲ್ಲದಿದ್ದರೂ ಕೇವಲ ಹಿಂದೂಗಳು ಬಹುಸಂಖ್ಯಾತರು ಎನ್ನುವ ಕಾರಣಕ್ಕೆ ಬಾಬರಿ ಮಸೀದಿಯನ್ನು ರಾಮಮಂದಿರ ಮಾಡಲು, ಬಾಬಾಬುಡಾನ್ ದರ್ಗಾವನ್ನು ಅರೆ ದೇವಸ್ಥಾನ ಮಾಡಲು ಆದೇಶ ನೀಡುವ ನ್ಯಾಯಾಲಯ, ಅದೇ ಧರ್ಮ ವಿಶ್ವಾಸವನ್ನು ಹಿಜಾಬ್ ಹಾಕಿಕೊಳ್ಳಲು ಒಪ್ಪುವುದಿಲ್ಲ. ಇನ್ನೀಗ ವಕ್ಫ್ ಮೇಲೆ ಮೋದಿ ಸರಕಾರದ ಆಕ್ರಮಣವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ನ್ಯಾಯಾಂಗದ ಮೇಲೆ ಹಿಂದುತ್ವ ಸಾಧಿಸಿರುವ ಈ ಯಾಜಮಾನ್ಯದ ಕಾರಣಕ್ಕಾಗಿಯೇ ಕರಾವಳಿಯ ಸಂಘ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರು ಎಷ್ಟೇ ದ್ವೇಷ ಭಾಷಣ ಮಾಡಿದರೂ ಅವರ ಮೇಲೆ ಕೋರ್ಟ್‌ಗಳು ಸ್ವಪ್ರೇರಿತ ದೂರು ದಾಖಲಿಸುವುದಿಲ್ಲ. ಸರಕಾರ ಕೇಸು ದಾಖಲಿಸಿದರೂ ಒಮ್ಮೆಯೂ ಅವರ ಬಂಧನಕ್ಕೆ ಆದೇಶಿಸುವುದಿಲ್ಲ. ಆದ್ದರಿಂದಲೇ ಭಾರತದ ರಿಪಬ್ಲಿಕ್ ಕಲ್ಲಡ್ಕ ರಿಪಬ್ಲಿಕ್ ಮುಂದೆ ಸೋಲುತ್ತಲೇ ಬಂದಿದೆ.

ಫ್ಯಾಶಿಸಂ ಬಗ್ಗೆ ಎಲ್ಲಕ್ಕಿಂತ ಅತ್ಯಂತ ಆತಂಕದ ವಿಷಯ ಅದು ಸುಳ್ಳು-ಭ್ರಾಂತಿಗಳನ್ನು ಹರಡುತ್ತಾ ದಮನಿತ ಸಮುದಾಯದಲ್ಲಿ ಬೇರು ಬಿಟ್ಟುಕೊಳ್ಳುವುದು ಮತ್ತು ಅವರನ್ನು ತನ್ನ ದ್ವೇಷದ ಕಾಲಾಳುಗಳನ್ನಾಗಿ ಮಾಡಿಕೊಳ್ಳುವುದು. ಹೀಗಾಗಿಯೇ ಒಂದು ಕಡೆ ಕೊಲೆಗೀಡಾದ ರಹ್ಮಾನ್ ಅವರ ಬಗ್ಗೆ ಆಸುಪಾಸಿನ ಕೆಲವು ಹಿಂದೂ ಒಡನಾಡಿಗಳು ಹಿಂಜರಿಕೆಯಿಲ್ಲದೆ ವ್ಯಕ್ತಪಡಿಸಿರುವ ತೀವ್ರ ಸಂತಾಪ, ತೆಕ್ಕಾರುವಿನ ದೇವಸ್ಥಾನದ ಧರ್ಮದರ್ಶಿಗಳು ಬಿಜೆಪಿ ಎಂಎಲ್‌ಎ ಹರೀಶ್ ಪೂಂಜಾರ ಹೇಳಿಕೆಗೆ ಮುಸ್ಲಿಮ್ ಸಮುದಾಯದೆದುರು ವ್ಯಕ್ತಪಡಿಸಿದ ವಿಷಾದಗಳು ಭರವಸೆಯ ಚಿಲುಮೆಯಾಗುತ್ತವೆ. ಆದರೆ ಈ ಸಂವೇದನಾಶೀಲ ಭಾವನೆಗಳು ಹಿಂದುತ್ವದ ದ್ವೇಷ ರಾಜಕಾರಣವನ್ನು ತಿರಸ್ಕರಿಸುವಷ್ಟು ಬಲಿಷ್ಠವಾಗಿವೆಯೇ?

1970ರ ದಶಕದ ತನಕ ಪ್ರಗತಿಪರ ಮತ್ತು ಸಮಾಜವಾದಿ ಚಿಂತನೆ ಮತ್ತು ಹೋರಾಟಗಳ ನೆಲೆಯಾಗಿದ್ದ ಅತ್ಯಂತ ಯಶಸ್ವಿ ಭೂ ಹಂಚಿಕೆಯ ಫಲಾನುಭವಿಯಾಗಿದ್ದ ಅವಿಭಜಿತ ದಕ್ಷಿಣ ಕನ್ನಡ 80-90ರ ದಶಕದ ಜಾಗತೀಕರಣ ಮತ್ತು ಹಿಂದುತ್ವದ ದಾಳಿಗೆ ತುತ್ತಾಗಿ ತನ್ನ ಚಹರೆಯನ್ನೇ ಬದಲಿಸಿಕೊಂಡು ಹಿಂದುತ್ವದ ಪ್ರಯೋಗಶಾಲೆಯಾಗಿದ್ದು ಹೇಗೆ? 1990ರಿಂದ ಬಿಜೆಪಿ ತನ್ನ ಚುನಾವಣಾ ಬೆಂಬಲದ ನೆಲೆಯನ್ನು ನಿರಂತರವಾಗಿ ವಿಸ್ತರಿಸಿಕೊಂಡಿದ್ದು ಹೇಗೆ? ಇದಕ್ಕೆ ಬದಲಾದ ಆರ್ಥಿಕತೆ ಎಷ್ಟು ಕಾರಣ? ಪ್ರಗತಿಪರ ಶಕ್ತಿಗಳ ಬಲಹೀನತೆ ಎಷ್ಟು ಕಾರಣ? ಕಾಂಗ್ರೆಸ್‌ನಂತಹ ಪಕ್ಷಗಳ ಅವಕಾಶವಾದವೆಷ್ಟು ಕಾರಣ? ಈಗ ಅವೆಲ್ಲವನ್ನೂ ಹಿಮ್ಮೆಟ್ಟಿಸಿ ಸೌಹಾರ್ದ ಕರಾವಳಿಯನ್ನು ಕಟ್ಟುವುದು ಹೇಗೆ? ಇದು ಕೆಲವರ ಬಂಧನ, ಹಲವರ ಗಡಿಪಾರುಗಳಿಂದ ಮಾತ್ರ ಸಾಧ್ಯವೇ? ಕಾಂಗ್ರೆಸ್‌ನ ಮೂಲಕ ಸಾಧ್ಯವೇ? ಚುನಾವಣೆಯ ಮೂಲಕ ಸಾಧ್ಯವೇ? ಅಂದರೆ ಶತ್ರುವಿನ ಅಸಲಿ ಚಹರೆಯನ್ನು ಈಗಲಾದರೂ ಅರಿಯಬಲ್ಲವೇ ಎಂಬುದಷ್ಟೇ ಈಗ ಎದುರಿಗಿರುವ ಪ್ರಶ್ನೆ.

ಇತಿಹಾಸದಲ್ಲಿ ಹಿಟ್ಲರ್-ಮುಸ್ಸೋಲಿನಿಗಳು ತಮ್ಮ ನಾಝಿ-ಫ್ಯಾಶಿಸ್ಟ್ ಯೋಜನೆಗಳ ಸೂಚನೆಗಳನ್ನು ನೀಡಿದ್ದರೂ ಅದನ್ನು ಕಾಣಲು ನಿರಾಕರಿಸಿದ್ದಕ್ಕೆ ಜಗತ್ತು ಅತ್ಯಂತ ದೊಡ್ಡ ಬೆಲೆ ತೆತ್ತಿತು.

ಫ್ಯಾಶಿಸಂ ಮತ್ತು ಕಂಫರ್ಟ್ ರೆನ್‌ನ ನಿರುದ್ವಿಗ್ನ ನಿರ್ಲಿಪ್ತತೆ

ಕಣ್ಣಿಗೆ ಕಂಡದ್ದನ್ನು ಮತ್ತು ಸಾಮಾನ್ಯ ಜನರು ಅನುಭವಿಸುತ್ತಿದ್ದ ದಾರುಣತೆಯನ್ನು ಸತ್ಯವಲ್ಲವೆಂದು ನಿರಾಕರಿಸಿ ಕ್ರೌರ್ಯವನ್ನು ಸಹಜಮಾನ್ಯಗೊಳಿಸಿದ್ದರಲ್ಲಿ ಕಂಫರ್ಟ್ ರೆನ್‌ಗಳಲ್ಲಿದ್ದ ಮಧ್ಯಮವರ್ಗದ ಬುದ್ಧಿಜೀವಿಗಳ ಮತ್ತು ಅವರ ಸೋಗಲಾಡಿ ಸಜ್ಜನಿಕೆ ಮತ್ತು ಸುಶಿಕ್ಷಿತ ನಾಗರಿಕತೆಯ ಪಾತ್ರ ಬಹುದೊಡ್ಡದು. ಎಲ್ಲಕ್ಕಿಂತ ಹೆಚ್ಚಾಗಿ ಸಹಜೀವಿಗಳನ್ನು ಅನ್ಯೀಕರಿಸಿ, ತಮ್ಮ ನೈತಿಕ ವಿಶ್ವದಿಂದ ಹೊರಗು ಮಾಡಿ ಅವರ ನರಮೇಧ ಗಳನ್ನು ‘ನಾಗರಿಕ ಸಮಾಜ’ ಒಪ್ಪುವಂತೆ, ಬೆಂಬಲಿಸುವಂತೆ ಮಾಡಿದ ಪರಿ ಗಾಬರಿ ಹುಟ್ಟಿಸುತ್ತದೆ. ಇಂದು ಭಾರತದಲ್ಲಿ ಇದೇ ನರಮೇಧದ ಮತ್ತು ನರಭಕ್ಷಕ ರಾಜಕಾರಣ ಸಮಾಜದಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿದೆ.

ಉದಾಹರಣೆಗೆ, ರುವಂಡಾ ದೇಶದಲ್ಲಿ 1994ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್ ಕೇನ್ ಅವರು ನಂತರ ಅದರ ಬಗ್ಗೆಯೇ -Season Of Blood- A Rwandan Journey ಎಂಬ ಪುಸ್ತಕ ಬರೆದರು. ಅದರಲ್ಲಿ ಅವರು ಆ ದೇಶದಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ:

‘‘...ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡ ಜನರನ್ನು ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನು ಟುಟ್ಸಿಗಳ ವಿರುದ್ಧ ದ್ವೇಷದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರಿ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು. ಅವರು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡ ಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು.’’

ಸಂಘಿಗಳು ನಡೆಸುವ ಹಿಂಸಾಚಾರವನ್ನು ಕುಲೀನ ಜನರು ಮತ್ತು ಅವರು ನೋಡುವ ಟಿ.ವಿ.ಗಳ ಆ್ಯಂಕರ್‌ಗಳು ನಡೆಸುವ ಸುಶಿಕ್ಷಿತ ಚರ್ಚೆಗಳು ರುವಾಂಡಾದ ಮಧ್ಯಮವರ್ಗದ ಜನರ ಸೋಗಲಾಡಿತನವನ್ನೇ ನಾಚಿಸುತ್ತವೆ.

share
ಶಿವಸುಂದರ್
ಶಿವಸುಂದರ್
Next Story
X