Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಎಸ್‌ಐಆರ್ ವಿರೋಧವೂ ಮತ್ತು ಕಾಂಗ್ರೆಸ್...

ಎಸ್‌ಐಆರ್ ವಿರೋಧವೂ ಮತ್ತು ಕಾಂಗ್ರೆಸ್ ಸರಕಾರವೂ!

ಶಿವಸುಂದರ್ಶಿವಸುಂದರ್13 May 2026 11:12 AM IST
share
ಎಸ್‌ಐಆರ್ ವಿರೋಧವೂ ಮತ್ತು ಕಾಂಗ್ರೆಸ್ ಸರಕಾರವೂ!

ಎಸ್‌ಐಆರ್ ಎನ್ನುವುದೇ ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಮಾನ ಮಾಡದೆ ಅಥವಾ ಬೃಹತ್ ಜನಚಳವಳಿಗಳ ಮೂಲಕ ಎಸ್‌ಐಆರ್ ರದ್ದು ಮಾಡುವಂತಹ ಒತ್ತಡ ಸೃಷ್ಟಿಯಾಗದೆ, ಈಗಿರುವಂತೆ ಎಸ್‌ಐಆರ್ ಒಳಗೆ ಸೋಷಿಯಲ್ ಆಡಿಟ್ ಆಗಲೀ ಅಥವಾ ಗ್ರಾಮಸಭೆಯ ಮೂಲಕ ಪರಿಶೀಲನೆಯಾಗಲೀ ಹಾಗೂ ಅದನ್ನು ಮಾಡಲು ರಾಜ್ಯ ಸರಕಾರ ಸೂಚನೆ ನೀಡುವುದಾಗಲೀ ಸಾಧ್ಯವಿಲ್ಲ.

ಎಸ್‌ಐಆರ್ ರದ್ದಾಗಬೇಕೆಂದು ನಿರಂತರವಾಗಿ ಹೋರಾಡುತ್ತಿರುವ ಚಿಂತಕರ ಮತ್ತು ಹೋರಾಟಗಾರರ ಸಮಿತಿಯು ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇನ್ನಿತರ ಕ್ಯಾಬಿನೆಟ್ ಸದಸ್ಯರ ಜೊತೆಗೆ ಸುದೀರ್ಘ ಮಾತುಕತೆಯಾಡಿ, ಎಸ್‌ಐಆರ್ ಹೇಗೆ ಭಾರತದ ಪ್ರಜಾತಂತ್ರಕ್ಕೆ ಮತ್ತು ದಮನಿತರ ನಾಗರಿಕತ್ವಕ್ಕೆ ಮಾರಕ ಎಂಬ ಗಂಭೀರತೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ.

ಕರ್ನಾಟಕದಲ್ಲಿ ಎಸ್‌ಐಆರ್ ತಡೆಹಿಡಿಯಬೇಕೆಂದು ಕೆಲವು ಹಕ್ಕೊತ್ತಾಯಗಳನ್ನು ಮುಂದಿಟ್ಟಿದೆ.

ಯಥಾ ಪ್ರಕಾರ ಕಾಂಗ್ರೆಸ್ ಸರಕಾರ ಯಾವುದೇ ಬಗೆಯ ಕಮಿಟ್‌ಮೆಂಟ್ ಮಾಡಿಕೊಳ್ಳದೆ, ತಮ್ಮವರೊಡನೆ ಮಾತಾಡಿ ತಿಳಿಸುವುದಾಗಿ ಹೋರಾಟಗಾರರನ್ನು ಬೀಳ್ಕೊಟ್ಟಿದೆ.

ಎಸ್‌ಐಆರ್ ಪರಿಣಾಮಗಳಿಗಿಂತ ಜಾಸ್ತಿ ಆ ದಿನ ರಾಜ್ಯ ಚುನಾವಣಾ ಆಯೋಗ ತಮ್ಮ ಗಮನಕ್ಕೆ ತರದೆ GBA ಚುನಾವಣೆ ಘೋಷಿಸಿದ ಹಿಂದಿರಬಹುದಾದ ತಮ್ಮದೇ ಪಕ್ಷದ ಕುತಂತ್ರಗಳ ಬಗ್ಗೆ ಡಿಕೆಶಿ ಹೆಚ್ಚು ತಲೆಕೆಡಿಸಿಕೊಂಡಿದ್ದರೆಂಬುದು ಬಲ್ಲ ಮೂಲಗಳ ಸುದ್ದಿ!

ವಾಸ್ತವದಲ್ಲಿ ಈವರೆಗೆ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸಿಲ್ಲ. ಕರ್ನಾಟಕದಲ್ಲಂತೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್‌ಐಆರ್‌ನಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಘೋಷಿಸಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಎಸ್‌ಐಆರ್ ಅನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದ್ದರು. ನೀಡುತ್ತಲೇ ಇದ್ದಾರೆ..

ಕೆಲವು ಮಂತ್ರಿಗಳು ಈ ವಿಷಯದಲ್ಲಿ ಆಸಕ್ತಿ ತೋರುತ್ತಿದ್ದರೂ ಅದು ಎಸ್‌ಐಆರ್ ಅನ್ನು ವಿರೋಧಿಸುವುದಕ್ಕಿಂತ ಸಾಧ್ಯವಾದಷ್ಟು ಒಳಗೊಳ್ಳುವ ಎಸ್‌ಐಆರ್ ಮಾಡುವ ದಿಕ್ಕಿನೆಡೆಗೆ ಸಾಗುತ್ತಿದೆ. ಆದರೆ ಕ್ರೂರ ವಾಸ್ತವವೆಂದರೆ ಆಯೋಗವು ನಿಗದಿ ಮಾಡಿರುವ 11 ದಾಖಲೆಗಳಲ್ಲಿ ಒಂದನ್ನು ಕೊಟ್ಟು ನಾಗರಿಕತೆ ಸಾಬೀತು ಮಾಡಿಕೊಳ್ಳಬೇಕೆಂಬ ಅಸಾಂವಿಧಾನಿಕ ಎಸ್‌ಐಆರ್ ಪ್ರಕ್ರಿಯೆಯೊಳಗೆ ಒಂದೂ ದಾಖಲೆ ಇಲ್ಲದ ಕೋಟ್ಯಂತರ ಜನರನ್ನು ಒಳಗೊಳ್ಳುವ ಎಸ್‌ಐಆರ್ ಸಾಧ್ಯವೇ ಇಲ್ಲ. ಹೀಗಾಗಿ ಈ ಬೆಳವಣಿಗೆಗಳು ಐದು ಮುಖ್ಯ ಸ್ಪಷ್ಟತೆಗಳನ್ನು ಕೇಳುತ್ತವೆ.

1. ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರದ ಮಧ್ಯಪ್ರವೇಶಕ್ಕೆ ಸಾಂವಿಧಾನಿಕ ಅವಕಾಶವಿದೆಯೇ?

ಅದನ್ನು ಅರ್ಥ ಮಾಡಿಕೊಳ್ಳಲು ಚುನಾವಣಾ ಆಯೋಗವು ಯಾವ ಅಧಿಕಾರದಡಿ ಎಸ್‌ಐಆರ್ ಆದೇಶ ಹೊರಡಿಸಿದೆ ಎಂಬುದನ್ನು ಗಮನಿಸಬೇಕು.

ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್ ಆದೇಶವನ್ನು ಸಂವಿಧಾನದ ಆರ್ಟಿಕಲ್ 324(1), ಪ್ರಜಾಪ್ರತಿನಿಧಿ ಕಾಯ್ದೆ -1950ರ ಸೆಕ್ಷನ್ 21 ಮತ್ತು 13 (CC), 32 ಹಾಗೂ ಮತಪಟ್ಟಿ ಪರಿಷ್ಕರಣೆ ನಿಯಮ-1960ರ ನಿಯಮಗಳನ್ವಯ ಮಾಡಿದೆ.

ಆಸಕ್ತರು ಇಅI ನೋಟಿಫಿಕೇಷನ್‌ನ ಪೂರ್ಣಪಾಠವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

https://www.scobserver.in/.../07/Bihar-SIR-Notification.pdf

ಈಗ ಆ ಕಾಯ್ದೆ ಮತ್ತು ನಿಯಮಗಳು ಏನು ಹೇಳುತ್ತವೆ ನೋಡುವುದಾದರೆ:

ಎ) ಸಂವಿಧಾನದ ಆರ್ಟಿಕಲ್ 324 (1)-ಎಲ್ಲಾ ಶಾಸನಸಭಾ ಚುನಾವಣೆಗಳ ಮತಪಟ್ಟಿ ತಯಾರಿಯ ಉಸ್ತುವಾರಿ ಕೇಂದ್ರ ಚುನಾವಣಾ ಆಯೋಗದ್ದು.

ಬಿ) ಪ್ರಜಾ ಪ್ರತಿನಿಧಿ ಕಾಯ್ದೆ -1950ರ ಸೆಕ್ಷನ್ 13 (CC)-ಮತಪಟ್ಟಿ ತಯಾರಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮುಖ್ಯ ಚುನಾವಣಾ ಅಧಿಕಾರಿಯನ್ನು ಒಳಗೊಂಡಂತೆ ಎಲ್ಲಾ ಚುನಾವಣಾ ಅಧಿಕಾರಿಗಳು ಆ ಕಾರ್ಯವನ್ನು ನಿರ್ವಹಣೆ ಮಾಡುವ ಅವಧಿಯಲ್ಲಿ ಸಂಪೂರ್ಣವಾಗಿ ಚುನಾವಣಾ ಆಯೋಗದ ನಿಯಂತ್ರಣ, ಉಸ್ತುವಾರಿ ಮತ್ತು ಶಿಸ್ತಿಗೆ ಒಳಪಟ್ಟಿರುತ್ತಾರೆ.

ಸಿ) ಪ್ರಜಾ ಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 21:

ತನ್ನ ವ್ಯಾಪ್ತಿಯೊಳಗೆ ಬರುವ ರಾಜ್ಯ ಶಾಸನಾಸಭಾ ಮತ್ತು ಲೋಕಸಭಾ ಚುನಾವಣೆಗಳ ಬಗ್ಗೆ ಸೂಕ್ತ ಕಾರಣಗಳನ್ನು ಕೊಟ್ಟು ಯಾವುದೇ ಬಗೆಯ ಮತಪಟ್ಟಿ ಪರಿಷ್ಕರಣೆ ಮಾಡುವ ಪರಮಾಧಿಕಾರ ಕೇಂದ್ರ ಚುನಾವಣಾ ಆಯೋಗಕ್ಕಿದೆ ಮತ್ತು ಅದರ ಮಾರ್ಗದರ್ಶನದಲ್ಲಿ ಸಿದ್ಧವಾಗದ ಯಾವುದೇ ಮತಪಟ್ಟಿಗೆ ಮಾನ್ಯತೆ ಇರುವುದಿಲ್ಲ.

ಆದರೆ ಎಸ್‌ಐಆರ್ ಮತಪಟ್ಟಿ ಪರಿಷ್ಕರಣೆಯಲ್ಲ. ನಾಗರಿಕತ್ವ ಪರಿಶೀಲನೆ.

ಅದನ್ನು ಮಾಡುವ ಅಧಿಕಾರ ಆಯೋಗಕ್ಕಿಲ್ಲ. ಆದರೆ ಅದನ್ನು ತಡೆಯುವ ಅಧಿಕಾರ ಇರುವುದು ಸುಪ್ರೀಂ ಕೋರ್ಟ್‌ಗೆ ಮಾತ್ರ. ಆದರೆ ಸುಪ್ರೀಂ ಈವರೆಗೆ ಆ ಸಾಂವಿಧಾನಿಕ ವಿಷಯವನ್ನು ಬಗೆಹರಿಸದಿರುವುದರಿಂದ ಮತ್ತು ಎಸ್‌ಐಆರ್ ಅನ್ನು ಎಲ್ಲಾ ರಾಜ್ಯಗಳಲ್ಲೂ ನಡೆಸಲು ಅವಕಾಶ ಕೊಟ್ಟಿರುವುದರಿಂದ ಆಯೋಗದ ಪರಮಾಧಿಕಾರ ಮುಂದುವರಿಯುತ್ತಿದೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸಂಪೂರ್ಣ ಪಠ್ಯವನ್ನು ಈ ವಿಳಾಸದಲ್ಲಿ ಓದಬಹುದು:

https://www.indiacode.nic.in/.../1234.../1663/1/A1950-43.pdf

ಹೀಗಾಗಿ ಎಸ್‌ಐಆರ್ ನಡೆಸುವುದೇ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸದೆ ಅಥವಾ ಜನಹೋರಾಟದಿಂದ ಎಸ್‌ಐಆರ್ ರದ್ದಾಗದ ಹೊರತು ಎಸ್‌ಐಆರ್ ನಡೆಸುವುದು ಮತ್ತು ಅದಕ್ಕೆ ಬೇಕಿರುವ ಮಾರ್ಗಸೂಚಿಗಳನ್ನು ರೂಪಿಸವುದು ಆಯೋಗದ ಪರಮಾಧಿಕಾರ ಮತ್ತು

-ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯ ಈ ಅವಧಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಶಿಸ್ತಿಗೆ ಒಳಪಟ್ಟಿರುತ್ತದೆ.

-ಅರ್ಥಾತ್ ಚುನಾವಣಾ ಆಯೋಗ ನಿಗದಿ ಪಡಿಸಿದ ಪ್ರಕ್ರಿಯೆ ಮತ್ತು ನಿಯಮಗಳನ್ನು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿ ಪಾಲಿಸಬೇಕೇ ವಿನಾ ರಾಜ್ಯ ಸರಕಾರದ ಚುನಾವಣಾ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುವಂತಿಲ್ಲ.

ಹೀಗಾಗಿ ಎಲ್ಲಿಯತನಕ ಒಂದು ಸಂವಿಧಾನ ತಿದ್ದುಪಡಿಯ ಮೂಲಕ ರಾಜ್ಯ ಶಾಸನಸಭಾ ಮತ್ತು ಲೋಕಸಭಾ ಚುನಾವಣಾ ಮತ್ತು ಮತಪಟ್ಟಿಗಳ ತಯಾರಿಯನ್ನು ರಾಜ್ಯ ಶಾಸನಸಭೆಯ ವ್ಯಾಪ್ತಿಗೆ ತರುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯ ಸರಕಾರಕ್ಕೆ ಈ ವಿಷಯಗಳಲ್ಲಿ ರಾಜ್ಯ ಚುನಾವಣಾ ಕಾರ್ಯಾಲಯಕ್ಕೆ ಸೂಚನೆಗಳನ್ನು ಕೊಡುವ ಅಧಿಕಾರವಿಲ್ಲ. ಹೀಗಾಗಿ ಕಾನೂನಿನ ಮೂಲಕವೋ, ಸುಗ್ರೀವಾಜ್ಞೆಯ ಮೂಲಕವೋ ರಾಜ್ಯ ಸರಕಾರವು ರಾಜ್ಯದ ಚುನಾವಣಾ ಕಾರ್ಯಾಲಯಕ್ಕೆ ಎಸ್‌ಐಆರ್ ವಿಷಯಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನಕ್ಕೆ ವ್ಯತಿರಿಕ್ತವಾದ ಹೊಸ ಕಾರ್ಯಸೂಚಿಗಳನ್ನು ಕೊಡಲಾಗುವುದಿಲ್ಲ.

ಮತ್ತೆ, ಗ್ರಾಮಸಭೆಗಳಲ್ಲಿ ಕರಡು ಮತಪಟ್ಟಿ ಓದಿ ಪರಿಶೀಲನೆಗೆ ಒಳಪಡಿಸುವುದು ಒಂದು ಉತ್ತಮ ಪ್ರಜಾತಾಂತ್ರಿಕ ಪದ್ಧತಿ.

ಆದರೆ ಅದು ಆಯೋಗವು ಮಾಮೂಲಿನಂತೆ ಮಾಡುವ Summary Revision ಮತ್ತು Intensive Revisionಗಳ ಸಂದರ್ಭದಲ್ಲಿ ಗ್ರಾಮಸಭೆಯಲ್ಲಿ ಓದಬಹುದು ಅಷ್ಟೇ. 2023ರ ಆಯೋಗದ Manual ನ ಹಲವಾರು ಅಧ್ಯಾಯಗಳಲ್ಲಿ ಹೇಳಿರುವುದು ಕೂಡ ಇದನ್ನೇ.

ಆದರೆ ಈಗ ಆಯೋಗವು ಮಾಡುತ್ತಿರುವುದು SR ಅಥವಾ IR ಅಲ್ಲ. ಇದು ಎಸ್‌ಐಆರ್. ಈಗಾಗಲೇ ಕೇಂದ್ರ ಆಯೋಗ ಮತ್ತು ಕರ್ನಾಟಕದ ಅದರ ಕಾರ್ಯಾಲಯ 2023ರ Guidelinesಗೆ ಭಿನ್ನವಾದ ಹಾಗೂ ಎಸ್‌ಐಆರ್‌ಗೆ ಪ್ರತ್ಯೇಕವಾದ Guidelines ಬಿಡುಗಡೆ ಮಾಡಿದೆ. ಅದರಲ್ಲಿ ಗ್ರಾಮಸಭೆಯಲ್ಲಿ ಓದುವ ಪ್ರಸ್ತಾವವನ್ನು ತೆಗೆದು ಹಾಕಲಾಗಿದೆ. ಎಸ್‌ಐಆರ್ ಅನ್ನು ಆಯೋಗ ಮಾಡುವುದು ಸರಿ ಎಂದಾದರೆ, ಅದಕ್ಕೆ ಬೇಕಾದ ಮಾನದಂಡಗಳನ್ನು, ಪ್ರಕ್ರಿಯೆಗಳನ್ನು ಅಳವಡಿಸಬಹುದಾದ ಸ್ವಾಯತ್ತೆಯನ್ನು ಸಂವಿಧಾನ ಕೇಂದ್ರ ಆಯೋಗಕ್ಕೆ ನೀಡಿದೆ. ಅದಕ್ಕೆ ತಿದ್ದುಪಡಿ ಸೂಚಿಸುವ ಅಥವಾ ಕಡ್ಡಾಯ ಮಾಡುವ ಅಧಿಕಾರ ಸದ್ಯಕ್ಕೆ ಸಾಂವಿಧಾನಿಕವಾಗಿ ರಾಜ್ಯ ಸರಕಾರಕ್ಕಿಲ್ಲ..

ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ (ಶಾಸನ ಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲ) ರಾಜ್ಯ ಚುನಾವಣಾ ಅಧಿಕಾರಿಯ ವ್ಯಾಪ್ತಿ. ಅಲ್ಲಿ ರಾಜ್ಯ ಸರಕಾರಕ್ಕೆ ಸಮಾಲೋಚನೆಯ ಪಾತ್ರವಿದೆ. ಸ್ಥಳೀಯ ಸಂಸ್ಥೆಯ ಚುನಾವಣೆ ಮತಪಟ್ಟಿ ತಯಾರಿಸುವಾಗ ಗ್ರಾಮಸಭೆ ಮತ್ತು ಆಡಿಟ್ ಅಂಶಗಳನ್ನು ಸೇರಿಸುವಂತೆ ಕೋರುವ ಅಧಿಕಾರ ರಾಜ್ಯ ಸರಕಾರಕ್ಕಿದೆ.

ಅದರ ಭಾಗವಾಗಿಯೇ ಕರ್ನಾಟಕ ರಾಜ್ಯ ಸರಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವಂತೆ ಆದೇಶಿಸುವ ಅಧಿಕಾರವಿದೆ. ಆದರೆ ರಾಜ್ಯದಲ್ಲಿ ನಡೆಸುವ ಶಾಸನ ಸಭಾ ಚುನಾವಣೆಗಳಲ್ಲಾಗಲೀ, ಲೋಕಸಭಾ ಚುನಾವಣೆಗಳಲ್ಲಾಗಲೀ ಪೇಪರ್ ಬ್ಯಾಲೆಟ್ ಬಳಸುತ್ತೇವೆ ಎನ್ನುವ ಅಧಿಕಾರವಿಲ್ಲ. ಆದರೆ ನಿಜವಾದ ಫೆಡರಲ್ ವ್ಯವಸ್ಥೆಯಲ್ಲಿ ಆ ಅಧಿಕಾರ ಇರಬೇಕು. ಆದರೆ ಈಗಿರುವ ವ್ಯವಸ್ಥೆಯಲ್ಲಿ ಅದರಲ್ಲೂ ಎಸ್‌ಐಆರ್‌ನಲ್ಲಿ ಅದು ಸಾಧ್ಯವಿಲ್ಲ.

2) ರಾಜ್ಯಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿಸುವ ದೋಷರಹಿತ ಮತಪಟ್ಟಿಯು ಎಸ್‌ಐಆರ್ ದಾಳಿಯಿಂದ ದಾಖಲೆ ಇಲ್ಲದವರನ್ನು ಬಚಾವು ಮಾಡುವುದೇ?

ಕರ್ನಾಟಕ ಸರಕಾರವು ತನ್ನ ಸ್ಥಳೀಯ ಸಂಸ್ಥೆಗಳ ಮತಪಟ್ಟಿಯನ್ನು ಸೋಷಿಯಲ್ ಆಡಿಟ್ ಮೂಲಕ ತಯಾರು ಮಾಡಬೇಕೆಂದು ಆಗ್ರಹಿಸುವುದರಲ್ಲಿ ತಪ್ಪಿಲ್ಲ. ಅಂತಹ ಒಂದು ದೋಷರಹಿತ ಮತಪಟ್ಟಿ ಎಸ್‌ಐಆರ್ ಮೂಲಕ ತಯಾರಾಗುವ ಮತಪಟ್ಟಿಯ ಹುಳುಕನ್ನು ಬಯಲು ಮಾಡುತ್ತದೆ ಎನ್ನುವುದು ನಿಜ.

ಆದರೆ ಅದರಿಂದ ಎಸ್‌ಐಆರ್ ಮೇಲೆ ಯಾವ ಪ್ರಭಾವವೂ ಆಗದು. ಅಥವಾ ಅದು ಎಸ್‌ಐಆರ್ ದಾಳಿಯಿಂದ ದಾಖಲೆ ಇಲ್ಲದವರ ರಕ್ಷಣೆಗೂ ಬಾರದು.

ಏಕೆಂದರೆ ಎಸ್‌ಐಆರ್ ಘೋಷಿಸಿಕೊಂಡಿರುವಂತೆ ಅದು ಕೇವಲ ಮತಪಟ್ಟಿ ಪರಿಷ್ಕರಣೆಯಲ್ಲ. ನಾಗರಿಕತ್ವ ಪರಿಶೀಲನೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಾಗರಿಕರಲ್ಲ ಎಂದು ಸಾಬೀತಾದವರನ್ನು ಸ್ಥಳೀಯ ಸಂಸ್ಥೆಗಳ ಮತಪಟ್ಟಿಯಿಂದಲೂ ಕಿತ್ತು ಹಾಕಬೇಕೆನ್ನುವುದು ಎಸ್‌ಐಆರ್‌ನ ತರ್ಕವಾಗುತ್ತದೆ.

ಇಷ್ಟಾಗಿಯೂ ಉ. ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಮತಪಟ್ಟಿ ಮತ್ತು ಎಸ್‌ಐಆರ್ ಮತಪಟ್ಟಿ ಏಕಕಾಲಕ್ಕೆ ತಯಾರಾದವು.

ಸ್ಥಳೀಯ ಸಂಸ್ಥೆ ಮತಪಟ್ಟಿ ಪ್ರಕಾರ ಉ. ಪ್ರದೇಶದ ಮತದಾರರ ಸಂಖ್ಯೆ 15 ಕೋಟಿ. ಎಸ್‌ಐಆರ್ ಪ್ರಕಾರ 12.5 ಕೋಟಿ! ವ್ಯತ್ಯಾಸ ಸ್ಪಷ್ಟವಾಗಿತ್ತು. ಆದರೆ ಎಸ್‌ಐಆರ್ ಪ್ರಕ್ರಿಯೆಯ ಮೇಲೆ ಯಾವ ಪ್ರಭಾವವೂ ಆಗಲಿಲ್ಲ. ಏಕೆಂದರೆ ಈ ವ್ಯತ್ಯಾಸ ಎಸ್‌ಐಆರ್ ಪ್ರಕಾರ ಅನ್ಯಾಯ ಅಲ್ಲ. ಏಕೆಂದರೆ ಹೆಚ್ಚುವರಿಯಾಗಿ ಸ್ಠಳೀಯ ಸಂಸ್ಥೆಯ ಮತಪಟ್ಟಿಯಲ್ಲಿ ಇರುವವರು ನಾಗರಿಕತೆ ಸಾಬೀತು ಮಾಡಲಾಗದ ಅಕ್ರಮ ನುಸುಳುಕೋರರು!

ಹೀಗಾಗಿ ಎಸ್‌ಐಆರ್ ಎನ್ನುವುದೇ ಸಂವಿಧಾನ ಬಾಹಿರ ಎಂದು ಸುಪ್ರೀಂ ತೀರ್ಮಾನ ಮಾಡದೆ ಅಥವಾ ಬೃಹತ್ ಜನಚಳವಳಿಗಳ ಮೂಲಕ ಎಸ್‌ಐಆರ್ ರದ್ದು ಮಾಡುವಂತಹ ಒತ್ತಡ ಸೃಷ್ಟಿಯಾಗದೆ, ಈಗಿರುವಂತೆ ಎಸ್‌ಐಆರ್ ಒಳಗೆ ಸೋಷಿಯಲ್ ಆಡಿಟ್ ಆಗಲೀ ಅಥವಾ ಗ್ರಾಮಸಭೆಯ ಮೂಲಕ ಪರಿಶೀಲನೆಯಾಗಲೀ ಹಾಗೂ ಅದನ್ನು ಮಾಡಲು ರಾಜ್ಯ ಸರಕಾರ ಸೂಚನೆ ನೀಡುವುದಾಗಲೀ ಸಾಧ್ಯವಿಲ್ಲ.

3) ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಅದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ರಾಜ್ಯ ಸರಕಾರವೇ ಒದಗಿಸಬೇಕು. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಮತ್ತೊಂದು ದೋಷರಹಿತ ಮತಪಟ್ಟಿಯನ್ನು ರಾಜ್ಯ ಸರಕಾರ ಕೂಡಲೇ ತಯಾರು ಮಾಡಲು ಸಾಧ್ಯವಿಲ್ಲ. ತಯಾರು ಮಾಡಿದರೂ ಎಸ್‌ಐಆರ್ ಪಟ್ಟಿಯಲ್ಲಿ ಇಲ್ಲದವರು ನಾಗರಿಕತ್ವ ಸಾಬೀತಾಗದವರು ಎಂಬ ತರ್ಕವಿರುವಾಗ ಎಸ್‌ಐಆರ್ ಮಾನದಂಡಗಳಲ್ಲಿ ಸ್ಥಳೀಯ ಸಂಸ್ಥೆಗಳ ಮತಪಟ್ಟಿಯೇ ದೋಷ ಪೂರಿತ ಎಂದಾಗುತ್ತದೆ.

4) ಕಾಂಗ್ರೆಸ್‌ನ ಭರವಸೆಗಳು ಎಷ್ಟು ವಿಶ್ವಾಸಾರ್ಹ?

ಚಳವಳಿಗಳ ಮತ್ತು ಜನಸಂಘಟನೆಗಳ ಒತ್ತಡದ ಕಾರಣಕ್ಕಾಗಿ ಕಾಂಗ್ರೆಸ್ ಸರಕಾರ ಎಸ್‌ಐಆರ್ ವಿಷಯದ ಬಗ್ಗೆ ಮಾತುಕತೆ ನಡೆಸಿತು ಅಷ್ಟೆ. ಉಳಿದಂತೆ ಎಸ್‌ಐಆರ್ ಅನ್ನು ವಿರೋಧಿಸಬೇಕೆಂಬ ಯಾವ ಇರಾದೆಯೂ ಕಾಂಗ್ರೆಸ್‌ಗಿಲ್ಲ. ಈಗಲೂ ಕೆಲವು ಉತ್ಸಾಹಿ ಮಂತ್ರಿಗಳು ಚಳವಳಿಗಾರರ ಗ್ರಹಿಕೆಯ ಜೊತೆಗೆ ಏಕೀಭವಿಸಿದಂತೆ ಕಂಡರೂ ಒಟ್ಟಾರೆ ಕಾಂಗ್ರೆಸ್ ಪಕ್ಷ ದೇಶದ ಇತರ ಕಡೆಗಳಲ್ಲಿ ಅಥವಾ ಕರ್ನಾಟಕದಲ್ಲಿ ಅಸಾಂವಿಧಾನಿಕ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸುವ ಯಾವ ಆಸಕ್ತಿಯನ್ನೂ ತೋರಿಲ್ಲ. ಏಕೆಂದರೆ ಎಸ್‌ಐಆರ್ ವಿರೋಧಿಸಿದರೆ ಮುಸ್ಲಿಮ್ ನುಸುಳುಕೋರರ ಪರ ಎಂಬ ಸಂಘಿ ಅಪಪ್ರಚಾರ ಎದುರಿಸಬೇಕೆಂಬ ಆತಂಕ ಮತ್ತು ಅದರಿಂದ ಹಿಂದೂ ವೋಟ್‌ಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಮೃದು ಹಿಂದುತ್ವ.

ಕೇವಲ ಎಸ್‌ಐಆರ್ ವಿಷಯದಲ್ಲಿ ಮಾತ್ರವಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಜನಚಳವಳಿಗಳ ಜೊತೆ ಸಮಾಲೋಚನೆ ಎಂಬ ನಾಟಕವಾಡಿ ದ್ರೋಹ ಮಾಡಿರುವ ಕಿರುಪಟ್ಟಿ ಇಲ್ಲಿದೆ:

► ಮೊದಲು ಕಾಂಗ್ರೆಸ್ ಸರಕಾರ ಬಾಬಾಬುಡಾನ್ ದರ್ಗಾವನ್ನು ಕೇಸರೀಕರಣ ಮಾಡುವುದಿಲ್ಲವೆಂದು ಜನಚಳವಳಿಗೆ ಭರವಸೆ ನೀಡಿತ್ತು.

ಆದರೆ... ಮರುವಾರದಲ್ಲೇ ಬಾಬಾಬುಡಾನ್ ದರ್ಗಾದಲ್ಲಿ ಹಿಂದೂ ಅರ್ಚಕನನ್ನು ನೇಮಿಸುವ ಈ ಹಿಂದಿನ ಬಿಜೆಪಿ ಸರಕಾರದ ತೀರ್ಮಾನಕ್ಕೆ ತಮ್ಮ ಅಭ್ಯಂತರವಿಲ್ಲವೆಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿತು!

► ಮೊದಲು ಕಾಂಗ್ರೆಸ್ ಸರಕಾರ ದಲಿತ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡುವುದಾಗಿ ಜನಚಳವಳಿಗೆಳಿಗೆ ಭರವಸೆ ನೀಡಿತ್ತು.

ಆದರೆ... ಆ ಭರವಸೆ ಕೊಟ್ಟ ಸಂಜೆಯೇ ದಲಿತ ಅಲೆಮಾರಿಗಳು ಲಂಬಾಣಿಗಳಷ್ಟೇ ಮುಂದುವರಿದಿರುವುದರಿಂದ ಅವರನ್ನು ಲಂಬಾಣಿ ಗುಂಪಿಗೆ ಸೇರಿಸಲಾಗಿದೆಯೆಂದೂ, ಈ ಬಗ್ಗೆ ನಾಗಮೋಹನ್ ದಾಸ್ ವರದಿಯ ವಿಶ್ಲೇಷಣೆ ತಪ್ಪೆಂದೂ ಹೈಕೋರ್ಟ್‌ಗೆ ಸಲ್ಲಿಸಲು ಅಫಿಡವಿಟ್ ಸಿದ್ಧಪಡಿಸಿತು. ಅಂತಿಮವಾದ ಒಳಮೀಸಲಾತಿ ಸೂತ್ರದಲ್ಲೂ ಅಲೆಮಾರಿಗಳನ್ನು ಲಂಬಾಣಿಗಳ ಜೊತೆ ಸೇರಿಸುವ ಅನ್ಯಾಯ ಜಾರಿ ಮಾಡಿತು.

► ಮೊದಲು ಕಾಂಗ್ರೆಸ್ ಸರಕಾರ ದೇವನಹಳ್ಳಿ ರೈತರ ಜಮೀನನನ್ನು ರೈತರಿಗೆ ಮರು ಸ್ವಾಧೀನಕ್ಕೆ ಬಿಟ್ಟು ಕೊಡುವುದಾಗಿ ಜನಚಳವಳಿಗಳಿಗೆ ಭರವಸೆ ನೀಡಿತ್ತು. ಆದರೆ...

ಜೂನ್‌ನಲ್ಲಿ ಕೊಟ್ಟ ಭರವಸೆಯನ್ನು ನವೆಂಬರ್‌ವರೆಗೂ ಜಾರಿ ಮಾಡಲಿಲ್ಲ. ಭೂಸ್ವಾಧೀನ ರದ್ದು ಆದೇಶ ಹೊರಡಿಸಿದರೂ, ಅದು ರೈತರ ಒಡೆತನಕ್ಕೆ ಸಂಪೂರ್ಣ ಮರಳದಂತೆ, ರೈತರು ತಮ್ಮ ಒಡೆತನದ ಜಮೀನನ್ನು ಬೇಕಾದಂತೆ ಬಳಸದಂತೆ ಷರತ್ತುಗಳನ್ನು ಹಾಕಿ, ವಿಶೇಷ ಕೃಷಿ ವಲಯದ ವಿದೇಶಿ ಸಂಕೋಲೆಗಳಿಗೆ ಸಿಲುಕಿಸುವ ಸೇಡಿನ ಬಲೆಯನ್ನು ಹೆಣೆಯಿತು.

► ಮೊದಲು ಕಾಂಗ್ರೆಸ್ ಸರಕಾರ ಭೂಮಿ ಮತ್ತು ವಸತಿ ರಹಿತರಿಗೆ ಜಮೀನು ಮತ್ತು ನಿವೇಶನ ಕೊಡುವ ಭರವಸೆಯನ್ನು ನೀಡಿತ್ತು. ಆದರೆ...

ಕಾಂಗ್ರೆಸ್ ಮಂತ್ರಿಗಳು ಈಗಾಗಲೇ ದಾಖಲೆ ಇದ್ದವರಿಗೆ ಪಕ್ಕಾ ದಾಖಲೆ ಮಾಡಿಕೊಡುವುದಾಗಿ ಹೇಳಿ ಕೈತೊಳೆದುಕೊಂಡರಲ್ಲದೆ ಯಾವ ಕಾರಣಕ್ಕೂ ಭೂರಹಿತರಿಗೆ ಸರಕಾರಿ ಜಮೀನು ಕೊಡುವ ಹೊಸ ಕಾರ್ಯಕ್ರಮ ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿಬಿಟ್ಟರು.

► ಮೊದಲು ಕಾಂಗ್ರೆಸ್ ಸರಕಾರ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ..

ಕಾಂಗ್ರೆಸ್ ಸರಕಾರವು ಕೇಂದ್ರ ಬಿಜೆಪಿಯ ಎನ್‌ಇಪಿಯನ್ನು ಪಾಲಿಸುತ್ತಾ ಕರ್ನಾಟಕದಲ್ಲಿ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವ ಹೆಸರಿನಲ್ಲಿ 40,000 ಸರಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ ಜಾರಿ ಮಾಡಿದೆ.

► ಮೊದಲು ಕಾಂಗ್ರೆಸ್ ಸರಕಾರ ಮೋದಿಯ ಎನ್‌ಇಪಿಯ ಬದಲು ಎಸ್‌ಇಪಿ ತರುತ್ತೇವೆ ಎಂದು ನಾಡಿನ ಶಿಕ್ಷಣ ತಜ್ಞರಿಗೆ ಮತ್ತು ಪ್ರಗತಿಪರರಿಗೆ ಮಾತು ಕೊಟ್ಟಿತ್ತು. ಆದರೆ...

ಎಸ್‌ಇಪಿ ಸಿದ್ಧವಾಗಿ ವರ್ಷಗಳೇ ಕಳೆದರೂ, ಈ ಸರಕಾರದ ಸಕ್ರಿಯ ಅವಧಿ ಇನ್ನು ಕೇವಲ ಎರಡು ವರ್ಷವಿದ್ದರೂ ಈವರೆಗೆ ಅದನ್ನು ಬಹಿರಂಗವೂ ಮಾಡಿಲ್ಲ. ಚರ್ಚಿಸಿಯೂ ಇಲ್ಲ.

► ಮೊದಲು ಕಾಂಗ್ರೆಸ್ ಸರಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಬೇಕಾದ ಸಂಪನ್ಮೂಲಗಳನ್ನು ಆಡಳಿತ ದಕ್ಷತೆಯ ಮೂಲಕ ರೂಢಿಸಿಕೊಳ್ಳುವುದಾಗಿ ಭರವಸೆ ಕೊಟ್ಟಿತ್ತು. ಆದರೆ...

ಎಲ್ಲಾ ಭರವಸೆಗಳನ್ನು ಗಾಳಿಗೆ ತೋರಿ SಅSP-ಖಿSP ಹಣವನ್ನು ಎಗ್ಗಿಲ್ಲದೆ ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತದೆ.

► ಮೊದಲು ಕಾಂಗ್ರೆಸ್ ಸರಕಾರ ಮುಸ್ಲಿಮ್ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕೊಡುವುದಲ್ಲದೆ, ಮುಸ್ಲಿಮರಿಗೆ ಕಿರುಕುಳ ಕೊಡಲೆಂದೇ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಮತಾಂತರ, ಗೋಹತ್ಯೆ ಇತ್ಯಾದಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ...

ಈಗ ಪ್ರಾತಿನಿಧ್ಯ ಕೇಳಿದವರನ್ನೇ ಅಮಾನತು ಮಾಡುತ್ತಿದೆ ಹಾಗೂ ಬಿಜೆಪಿಯ ಯಾವ ಕಾಯ್ದೆಗಳನ್ನೂ ವಾಪಸ್ ಪಡೆದಿಲ್ಲ.

ಇದೀಗ ಎಸ್‌ಐಆರ್ ಬಗ್ಗೆ ಭರವಸೆಗಳ ಸರದಿ!!!

5) ಎಸ್‌ಐಆರ್ ರದ್ದಾಗಬೇಕೆಂಬುದೇ ಏಕೈಕ ಆಗ್ರಹವಾಗಲಿ

ಹೀಗಾಗಿ ಇತಿಹಾಸದ ಅನುಭವದಿಂದಲ್ಲವಾದರೆ, ವರ್ತಮಾನದ ಅನುಭವದಿಂದಲಾದರೂ ಪಾಠ ಕಲಿತು ಕಾಂಗ್ರೆಸಿಗರಿಗೆ ಮನವರಿಕೆ ಮಾಡಿಕೊಟ್ಟರೆ ಬದಲಾಗುತ್ತಾರೆಂಬ ಭ್ರಮೆಯಿಂದ ಹೊರಬರಬೇಕಿದೆ. ಕಾಂಗ್ರೆಸ್‌ನ ವರ್ಗ ಮತ್ತು ಅಧಿಕಾರ ಹಿತಾಸಕ್ತಿಗಳು ಮತ್ತು ದಮನಿತ ಜನರ ಪ್ರಜಾತಾಂತ್ರಿಕ ಹಿತಾಸಕ್ತಿಗಳ ನಡುವೆ ಸಮನ್ವಯ ಸಾಧ್ಯವಿಲ್ಲ.

ಆದರೆ ಸರಕಾರವನ್ನು ಆಯ್ಕೆ ಮಾಡಿದ ಜನರ ಆಗ್ರಹವಾಗಿ

-ಕರ್ನಾಟಕದ ಕಾಂಗ್ರೆಸ್ ಸರಕಾರವು ಎಸ್‌ಐಆರ್ ಲೋಪಗಳನ್ನು ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡಲು ಅಪೀಲು ಸಲ್ಲಿಸುವಂತೆ ಆಗ್ರಹಿಸಬೇಕು

-ಎಸ್‌ಐಆರ್ ನ ಸಾಂವಿಧಾನಿಕತೆಯ ಬಗ್ಗೆ ಸುಪ್ರೀಂ ಅಂತಿಮ ತೀರ್ಮಾನ ಮಾಡದ ಹೊರತು ಕರ್ನಾಟಕದಲ್ಲಿ ಎಸ್‌ಐಆರ್ ಮಾಡುವ ಅಗತ್ಯವಿಲ್ಲವೆಂದು ಆಯೋಗಕ್ಕೆ ಮಾರ್ಗದರ್ಶನ ನೀಡಲು ಸುಪ್ರೀಂ ಕೋರ್ಟನ್ನು ಕೋರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಎಸ್‌ಐಆರ್ ವಿರೋಧಿ ಆಂದೋಲನವು ಎಸ್‌ಐಆರ್ ರದ್ದಾಗಲೇ ಬೇಕೆಂಬ ಏಕೈಕ ಘೋಷಣೆಯ ಸುತ್ತ ಪ್ರಬಲ ಜನಾಂದೋಲನ ಕಟ್ಟಲು ತಮ್ಮ ಎಲ್ಲಾ ಶಕ್ತಿ, ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸಬೇಕು.

ಅದೊಂದೇ ಮುಂದಿರುವ ಪರಿಣಾಮಕಾರಿ ಮಾರ್ಗ.

Tags

SIRCongress government
share
ಶಿವಸುಂದರ್
ಶಿವಸುಂದರ್
Next Story
X