Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ದ್ವೇಷದ ಆರೆಸ್ಸೆಸ್ ಮತ್ತು ಹುಸಿವೀರ...

ದ್ವೇಷದ ಆರೆಸ್ಸೆಸ್ ಮತ್ತು ಹುಸಿವೀರ ಸಾವರ್ಕರ್: 12 ಮಿಥ್ಯೆಗಳು

ಶಿವಸುಂದರ್ಶಿವಸುಂದರ್17 Oct 2025 10:28 AM IST
share
ದ್ವೇಷದ ಆರೆಸ್ಸೆಸ್ ಮತ್ತು ಹುಸಿವೀರ ಸಾವರ್ಕರ್: 12 ಮಿಥ್ಯೆಗಳು

ಭಾಗ - 3

1921ರಲ್ಲೇ ಸಾವರ್ಕರ್‌ರನ್ನು ಅಂಡಮಾನ್‌ನಿಂದ ಪುಣೆಯ ಯೆರವಾಡ ಜೈಲಿಗೆ ವರ್ಗಾಯಿಸಲಾಯಿತು. ಅದಾದ ಎರಡೇ ವರ್ಷದಲ್ಲಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿ ರತ್ನಗಿರಿಯ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. 1937ರಲ್ಲಿ ಅವರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಬ್ರಿಟಿಷರು ತೆಗೆದುಹಾಕಿದರು.

1923ರಲ್ಲಿ ರತ್ನಗಿರಿಯಲ್ಲಿ ಮನೆಗೆ ಮರಳಿದ ನಂತರ ಬ್ರಿಟಿಷ್ ಸರಕಾರ ಮತ್ತೆ ಅವರನ್ನು ಯಾವತ್ತೂ ಬಂಧಿಸಲೇ ಇಲ್ಲ.

ಕಾರಣವಿಷ್ಟೆ. 1911ರಲ್ಲಿ ಬ್ರಿಟಿಷರು ಸಾವರ್ಕರ್ ಅವರನ್ನು ಬಂಧಿಸಿದಾಗ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ನಾಯಕ ಎಂದುಕೊಂಡಿದ್ದರು. ಆದ್ದರಿಂದಲೇ ಅಂಡಮಾನ್ ಶಿಕ್ಷೆಯನ್ನೂ ಕೊಟ್ಟರು. ಆದರೆ ಯಾವಾಗ ಸಾವರ್ಕರ್ ಅವರು ಶಿಕ್ಷೆ ಪ್ರಾರಂಭಗೊಂಡ ಎರಡು ತಿಂಗಳಲ್ಲೇ ಶರಣಾಗತಿ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರೋ, ಅಂಡಮಾನ್ ಜೈಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ಕೈಗೂಡಿಸಿ ಸನ್ನಡತೆಯನ್ನೂ ತೋರಿ ಮತ್ತೆಂದೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೋ, ಆಗ ಅವರನ್ನು ಬ್ರಿಟಿಷರು ಬಿಡುಗಡೆ ಮಾಡಿ ಗೃಹಬಂಧನದ ಸೌಕರ್ಯ ಒದಗಿಸಿಕೊಟ್ಟರು.

1923-37ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಎಲ್ಲವನ್ನೂ ಸಾವರ್ಕರ್ ಅವರು ರತ್ನಗಿರಿಯಿಂದಲೇ ವಿರೋಧಿಸಿದ್ದು ಮಾತ್ರವಲ್ಲದೆ ಬ್ರಿಟಿಷರ ಪರವಾಗಿ ಹಿಂದೂ ಯುವಕರನ್ನು ಸಂಘಟಿಸುತ್ತಾರೆ. ಅಷ್ಟು ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅನುಕೂಲವಾಗುವಂತೆ ಹಿಂದೂ-ಮುಸ್ಲಿಮ್ ಕೋಮು ವಿಭಜನೆಯನ್ನೂ ಹುಟ್ಟುಹಾಕುತ್ತಾರೆ.

ಹೀಗೆ ತಮ್ಮ ಬ್ರಿಟಿಷರ ಪರವಾದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧವಾದ ನಿಲುವುಗಳನ್ನು ತಮ್ಮ ನಡೆನುಡಿಗಳಿಂದ ಸಾಬೀತು ಪಡಿಸಿದ್ದಕ್ಕಾಗಿಯೇ ಇತರ ಕ್ರಾಂತಿಕಾರಿಗಳನ್ನು ಕೊಂದುಹಾಕಿದ, ಕಾಂಗ್ರೆಸ್‌ನಂತಹ ಮಂದ ಸ್ವಾತಂತ್ರ್ಯವಾದಿಗಳನ್ನು ಜೈಲು ಶಿಕ್ಷೆಗೆ ದೂಡುತ್ತಿದ್ದ ಬ್ರಿಟಿಷ್ ಸರಕಾರ ಸಾವರ್ಕರ್ ಅವರನ್ನು ಮಾತ್ರ ಬಿಡುಗಡೆ ಮಾಡಿತು.

ಈಗ ಹೇಳಿ ಇಂತಹ ಸಾವರ್ಕರ್ ಸ್ವಾತಂತ್ರ್ಯ ವೀರನೇ?

ಮಿಥ್ಯೆ 8: ಬ್ರಿಟಿಷರು ತಮ್ಮ ಸಾಮ್ರಾಜ್ಯಕ್ಕೆ ಅಪಾಯ ಎನಿಸಿದವರಿಗೆ ಮಾತ್ರ ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು. ಅಂತಹ ಶಿಕ್ಷೆ ಅನುಭವಿಸಿದ ಏಕೈಕ ಸ್ವಾತಂತ್ರ್ಯವೀರ ಸಾವರ್ಕರ್!

ಈ ಪ್ರಶ್ನೆಯಲ್ಲಿ ಅರ್ಧ ಸತ್ಯ ಇದೆ. ಬ್ರಿಟಿಷರು ತಮ್ಮ ಸಾಮ್ರಾಜ್ಯಕೆ ಅಪಾಯ ಎಂದೆನಿಸಿದವರನ್ನು ಒಂದೋ ಕೊಂದು ಹಾಕುತ್ತಿದ್ದರು ಅಥವಾ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು ಅಥವಾ ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು.

ಈ ಮೊದಲ ಗುಂಪಿನಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಕೊಂದುಹಾಕುತ್ತಿದ್ದ ಕ್ರಾಂತಿಕಾರಿಗಳು, ಬ್ರಿಟಿಷ್ ಬಂಡವಾಳಶಾಹಿ ಪ್ರಭುತ್ವದ ವಿರುದ್ಧ ಮತ್ತು ಬ್ರಿಟಿಷರ ರಕ್ಷಣೆಯೊಂದಿಗೆ ರೈತಾಪಿಗಳ ರಕ್ತ ಹೀರುತ್ತಿದ್ದ ಭೂ ಮಾಲಕರ ವಿರುದ್ಧ ಸೆಣೆಸುತ್ತಿದ್ದ ಆದಿವಾಸಿ ಹಾಗೂ ರೈತ ಬಂಡಾಯಗಾರರು, ಕಮ್ಯುನಿಸ್ಟರು ಹಾಗೂ ಹಲವಾರು ಕಡೆಗಳಲ್ಲಿ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸೇರಿಕೊಳ್ಳುತ್ತಾರೆ. ಹಾಗೆ ನೋಡಿದರೆ ಅಂಡಮಾನ್‌ನಲ್ಲಿ ಸೆರೆಯಾದ ಬಹುಪಾಲು ಕಮ್ಯುನಿಸ್ಟ್ ಕ್ರಾಂತಿಕಾರಿಗಳು ಹತ್ತಾರು ವರ್ಷ ಸೆರೆಯಲ್ಲೂ ಹೋರಾಟ ಮುಂದುವರಿಸಿದ್ದರು ಅಥವಾ ಅಲ್ಲೇ ಹುತಾತ್ಮರೂ ಆದರು ಅಥವಾ ಸ್ವಾತಂತ್ರ್ಯದ ಆಸುಪಾಸಿನಲ್ಲಿ ಹೊರಬಂದರು. ಯಾರೊಬ್ಬರೂ ಕ್ಷಮಾ ಭಿಕ್ಷೆ ಕೋರಲಿಲ್ಲ. ಆದರೆ ಈ ಉಜ್ವಲ ಇತಿಹಾಸ ಈಗ ಕಮ್ಯುನಿಸ್ಟರೇ ಮರೆತಂತಿದೆ.

ಅಂಡಮಾನ್ ಶಿಕ್ಷೆಗೆ ಗುರಿಯಾದವರಲ್ಲಿ ಕ್ಷಮಾಭಿಕ್ಷೆಗೆ ಶರಣಾಗಿ ಗೋಗೆರೆದಿದ್ದೂ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಭಾರತದ ಸ್ವಾತಂತ್ರ್ಯವನ್ನು ಒತ್ತೆಯಿಟ್ಟು ಬಿಡುಗಡೆ ಪಡೆದುಕೊಂಡಿದ್ದೂ ಸ್ವಘೋಷಿತ ‘ಸಮರವೀರ’ ಸಾವರ್ಕರ್ ಬಿಟ್ಟರೆ ಮತ್ತೊಂದು ಉದಾಹರಣೆಯಿಲ್ಲ.

ಎರಡನೇ ಸ್ವಾತಂತ್ರ್ಯ ಹೋರಾಟಗಾರರ ಗುಂಪು ಸಶಸ್ತ್ರ ಹೋರಾಟವನ್ನು ಅನುಸರಿಸುತ್ತಿರಲಿಲ್ಲ. ಅವರು ಬ್ರಿಟಿಷರನ್ನು ಸಾಂವಿಧಾನಿಕ ಮಾರ್ಗದಿಂದಲೇ ಹಂತಹಂತವಾಗಿ ಭಾರತ ಬಿಟ್ಟು ತೊಲಗಿಸಬೇಕೆಂದು ರಾಜಿ ಮತ್ತು ಸಂಘರ್ಷ ಮಾರ್ಗವನ್ನು ಅನುಸರಿಸುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಹಿಂಸಾತ್ಮಕ ಹಾಗೂ ಶಾಂತಿಯುತ ಹೋರಾಟಗಳನ್ನು ಮಾಡುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವಾದ ಬಂಡವಳಶಾಹಿ ಹಾಗೂ ಭೂ ಮಾಲಕರ ಬೆಂಬಲವೂ ಅವರಿಗಿರುತ್ತಿತ್ತು. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಾದರಿ ಹೋರಾಟಗಾರರು ಈ ಎರಡನೇ ಗುಂಪಿಗೆ ಸೇರುವವರು. ಕಾಂಗ್ರೆಸ್ ನಾಯಕತ್ವಕ್ಕೆ ಪಾಠ ಕಲಿಸಬೇಕೆಂದಾಗ ಬ್ರಿಟಿಷರು ಅವರನ್ನೂ ಹಲವಾರು ವರ್ಷಗಳ ಕಾಲ ಜೈಲಿಗೆ ದೂಡಿದ್ದಾರೆ. ಗಾಂಧಿ, ನೆಹರೂ, ಪಟೇಲ್ ಇನ್ನಿತ್ಯಾದಿ ನಾಯಕರು ಈ ಎರಡನೇ ಸರಣಿಗೆ ಸೇರುವರು.

ಆದರೆ ಮೂರನೇ ಗುಂಪು ಬ್ರಿಟಿಷರೊಡನೆ ಸಹಕರಿಸಿದವರು. ಯಾರು ತಮ್ಮ ಸಾಮ್ರಾಜ್ಯದ ಬುನಾದಿಗೆ ಸಹಕರಿಸುತ್ತಿದ್ದರೋ, ಯಾರು ಭಾರತೀಯರಲ್ಲಿ ಏಕತೆ ಮೂಡದಂತೆ ಕೋಮು ವಿಭಜನೆಯನ್ನು ಬಿತ್ತುತ್ತಾ ಬ್ರಿಟಿಷರೊಂದಿಗೆ ಕೈಜೋಡಿಸುತ್ತಿದ್ದರೋ, ಯಾರು ಬ್ರಿಟಿಷ್ ಸಾಮ್ರಾಜ್ಯದ ಸಾಮಾಜಿಕ ಬೇರುಗಳಾದ ಭೂ ಮಾಲಕರು, ರಾಜರು ಮತ್ತು ಬಂಡವಾಳಶಾಹಿಗಳ ವಿರುದ್ಧ ಹೋರಾಡದಂತೆ ಜನರನ್ನು ಕೋಮು ಉನ್ಮಾದಕ್ಕೆ ದೂಡಿ ಬ್ರಿಟಿಷ್ ಆಡಳಿತ ಮುಂದುವರಿಯಲು ಸಹಾಯ ಮಾಡುತ್ತಿದ್ದರೋ ಅಂಥವರನ್ನು ಬ್ರಿಟಿಷರು ಬಂಧಿಸುವುದಿರಲಿ ಅವರಿಗೆ ಸಕಲ ಸಹಕಾರ, ಜೈಲಿನಿಂದ ಗೃಹಬಂಧನ, ಸಂಬಳ ಎಲ್ಲಾ ಕೊಟ್ಟು ಗೌರವಿಸುತ್ತಿದ್ದರು.

ಸಾವರ್ಕರ್, ಆರೆಸ್ಸೆಸ್, ಮುಸ್ಲಿಮ್ ಲೀಗ್, ಹಿಂದೂ ಮಹಾಸಭಾ ಇವೆಲ್ಲವೂ ಈ ಕೊನೆಯ ಗುಂಪಿಗೆ ಸೇರುತ್ತಾರೆ.

ಮಿಥ್ಯೆ 9: ಸಾವರ್ಕರ್ ಮನೆತನದ ಮೂವರು ಸಹೋದರರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಬೀದಿಗೆ ಬಿದ್ದರು. ಕಾಂಗ್ರೆಸ್‌ನಲ್ಲಿ ಹೀಗೆ ಹೋರಾಡಿದವರುಂಟೆ?

ಸಾವರ್ಕರ್ ಮತ್ತು ಅವರ ಸಹೋದರರು 1911ಕ್ಕೆ ಮುನ್ನ ಅಭಿನವ್ ಭಾರತ್ ಸದಸ್ಯರಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಮತ್ತು ಅಂಡಮಾನ್ ಜೈಲಿಗೆ ತಳ್ಳಲ್ಪಟ್ಟಿದ್ದು ನಿಜ. ಆದರೆ ಅಷ್ಟು ಮಾತ್ರ ನಿಜ.

ಅಂಡಮಾನ್ ಜೈಲಿನಲ್ಲಿದ್ದಾಗಲೇ ಬ್ರಿಟಿಷರ ಆಳ್ವಿಕೆಯನ್ನು ತ್ರಿಕರಣ ಪೂರ್ವಕವಾಗಿ ಬೆಂಬಲಿಸುತ್ತೇವೆಂದು ಬರೆದುಕೊಟ್ಟ ಮೇಲೆ ಸಾವರ್ಕರ್ ಸಹೋದರರು ತಮ್ಮ ಇಡೀ ರಾಜಕೀಯ ಬದುಕನ್ನು ಸಂಪೂರ್ಣವಾಗಿ ಬ್ರಿಟಿಷರ ಪರವಾಗಿ, ಮುಸ್ಲಿಮರ ವಿರುದ್ಧವಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿ ಮೀಸಲಾಗಿಟ್ಟರು.

1939ರಲ್ಲಿ ಎರಡನೇ ಮಹಾಯುದ್ಧ ಪ್ರಾರಂಭವಾದಾಗ ಸಾವರ್ಕರ್ ಸಹೋದರರು ಹಿಂದೂಗಳನ್ನು ಬ್ರಿಟಿಷ್ ಸೇನೆಯಲ್ಲಿ ಭರ್ತಿ ಮಾಡುತ್ತಾ, ಬ್ರಿಟಿಷ್ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದರು. 1942ರಲ್ಲಿ ಇಡೀ ದೇಶ ಬ್ರಿಟಿಷರ ವಿರುದ್ಧ ಬೀದಿಯಲ್ಲಿದ್ದಾಗ ಸಾವರ್ಕರ್ ಮತ್ತವರ ಹಿಂದೂ ಮಹಾ ಸಭಾ ಬ್ರಿಟಿಷರೊಂದಿಗೆ ಸೇರಿಕೊಂಡು ಸರಕಾರ ರಚಿಸಿತ್ತು. ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಜನರ ಮೇಲೆ ಹಿಂದೂ ಮಹಾಸಭಾ ಸರಕಾರ ಗುಂಡಿನ ಮಳೆ ಸುರಿಸಿ ದಮನ ಮಾಡಿತ್ತು. ಅದಕ್ಕಾಗಿ ಬ್ರಿಟಿಷ್ ಸರಕಾರದಿಂದ ಮಾನ್ಯತೆ ಹಾಗೂ ಸವಲತ್ತುಗಳನ್ನು ಕೂಡಾ ಅವರು ಪಡೆದುಕೊಂಡರು.

ಹೀಗಾಗಿ ಸಾವರ್ಕರ್ ಸಹೋದರರು ಬೀದಿಗೆ ಬಿದ್ದರೆಂಬುದಾಗಲೀ, 1923ರ ನಂತರವೂ ಬ್ರಿಟಿಷರು ಅವರ ಮೇಲೆ ನಿಗಾ ಇಟಿದ್ದರೆಂಬುದಾಗಲೀ ನಿಜವಲ್ಲ. ಹೆಚ್ಚಿನ ಮಾಹಿತಿಗಳಿಗೆ ಸಂಘಪರಿವಾರದವರೂ ಕೂಡ ನಿಜವೆಂದು ಒಪ್ಪುವ ಧನಂಜಯ್ ಕೀರ್ ಅವರು ಬರೆದಿರುವ ಸಾವರ್ಕರ್ ಜೀವನ ಚರಿತ್ರೆಯನ್ನು ಓದಬಹುದು. ಹಾಗೂ ಆ ಕಾಲದ ಸಾವರ್ಕರ್ ಅವರ ಭಾಷಣಗಳನ್ನು ಓದಬಹುದು.

ಇನ್ನು ಕಾಂಗ್ರೆಸ್ ಅದೇ ರೀತಿಯ ಹೋರಾಟ ಮಾಡಿತ್ತೇ ಎಂಬ ಪ್ರಶ್ನೆ.

ಆಗ ಸ್ವಾತಂತ್ರ್ಯ ಹೋರಾಟದ ಪ್ರಮುಖ ಧಾರೆಯಲ್ಲಿದ್ದ ಕಾಂಗ್ರೆಸ್ ಒಂದು ಚಳವಳಿಯಾಗಿತ್ತು. ಈ ದೇಶದ ಕೆಲವು ದೇಶಪ್ರೇಮಿ ಭೂಮಾಲಕರು, ರಾಜರನ್ನೂ ಒಳಗೊಂಡಂತೆ ಸುಶಿಕ್ಷಿತ ಮೇಲ್ ಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ವಕೀಲರು, ರೈತಾಪಿಗಳು, ರೈತ ಕೂಲಿಗಳು ಸಹ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಸಮರದಲ್ಲಿದ್ದರು.

ಕೆಲವು ಕಾಂಗ್ರೆಸ್ ನಾಯಕರು ಸಾವರ್ಕರ್ ಸಹೋದರರಿಗಿಂತ ಹೆಚ್ಚು ಬಂಧನ ಮತ್ತು ಜೈಲು ವಾಸಗಳನ್ನು ಅನುಭವಿಸಿದರು. ಅದರಲ್ಲಿ ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಅಂಥವರುಗಳು ಇದ್ದಾರೆ.

ಮಿಕ್ಕಂತೆ ಕಾಂಗ್ರೆಸ್‌ನ ಹಲವಾರು ಅನಾಮಧೇಯ ಕಾರ್ಯಕರ್ತರು ಮತ್ತು ಕೆಳಹಂತದ ಹಾಗೂ ಬಡ-ಮಧ್ಯಮ ವರ್ಗದ ನಾಯಕರು, ಸಾವರ್ಕರ್ ಸಹೋದರರುಗಳಿಗಿಂತ, ನೆಹರೂ-ಗಾಂಧಿಗಳಿಗಿಂತ ಹೆಚ್ಚಿನ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ.

ಮಿಥ್ಯೆ 10: ಇಂದಿರಾಗಾಂಧಿಯವರು ಸಾವರ್ಕರ್ ಅವರನ್ನು ದೇಶಭಕ್ತರೆಂದು ಹೊಗಳಿ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಹಾಗಿದ್ದಲ್ಲಿ ಇಂದಿರಾಗಾಂಧಿಯವರಿಗೆ ಸಾವರ್ಕರ್ ಬಗ್ಗೆ ಗೊತ್ತಿರಲಿಲ್ಲವೇ?

ಸಾವರ್ಕರ್ ಅವರು 1966ರಲ್ಲಿ ನಿಧನರಾದ ನಂತರ ಇಂದಿರಾಗಾಂಧಿಯವರು 1970ರಲ್ಲಿ ಸಾವರ್ಕರ್ ಹೆಸರಲ್ಲಿ ಅಂಚೆ ಚೀಟಿ ತಂದಿದ್ದು ನಿಜ. ಅಷ್ಟು ಮಾತ್ರವಲ್ಲ. ಸಾವರ್ಕರ್ ಅವರ ಬಗ್ಗೆ ಒಂದು ಸಾಕ್ಷ್ಯ ಚಿತ್ರವನ್ನು ಕೂಡ ಬಿಡುಗಡೆ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಉತ್ತರ ಹೇಳಲೇ ಬೇಕು.

ಏಕೆಂದರೆ, 1967ರಲ್ಲಿ ಗಾಂಧಿ ಹತ್ಯೆಯ ಹಿಂದಿನ ಸಂಚಿನ ಕುರಿತು ಜೀವನ್ ಕಪೂರ್ ಆಯೋಗ ತನ್ನ ವರದಿಯನ್ನು ನೀಡಿತ್ತು. ಆ ವರದಿಯು ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಅವರ ಸ್ಪಷ್ಟ ಪಾತ್ರವನ್ನು ಹಾಗೂ ಹತ್ಯೆಗೆ ಮುಂಚೆ ಗೋಡ್ಸೆ ಮತ್ತು ಸಾವರ್ಕರ್ ಭೇಟಿ ಮಾಡಿ ಸಂಚು ಮಾಡಿದ್ದನ್ನು ಸಾಬೀತು ಮಾಡಿತ್ತು. ಇಷ್ಟು ಸ್ಪಷ್ಟ ನಿದರ್ಶನಗಳು ದೊರೆತ ಮೇಲೂ ಇಂದಿರಾಗಾಂಧಿ ಸರಕಾರ ಸಾವರ್ಕರ್ ಅವರನ್ನು ಹೇಗೆ ಭಾರತಾಂಬೆಯ ಹೆಮ್ಮೆಯ ಮಗನೆಂದು ಬಣ್ಣಿಸಿತೆಂದು ಕಾಂಗ್ರೆಸ್ ಸ್ಪಷ್ಟೀಕರಣ ನೀಡುವ ಅಗತ್ಯವಿದೆ.

ಆಗ ತಾನೆ ಕಾಂಗ್ರೆಸ್ ಒಳ ವಿಭಜನೆಯಿಂದ ಹೊರಬಂದು ಹೊಸದಾಗಿ ತನ್ನದೇ ಆದ ಪಕ್ಷ ಕಟ್ಟಿಕೊಳ್ಳುತ್ತಿದ್ದ ಇಂದಿರಾಗಾಂಧಿಯವರು ತನ್ನ ರಾಜಕೀಯ ವಿರೋಧಿಗಳನ್ನು ಹಲವು ರೀತಿಗಳಿಂದ ನಿಭಾಯಿಸುತ್ತಿದ್ದರು. ಅದರ ಭಾಗವಾಗಿಯೂ ಈ ಅಪಾಯಕಾರಿ ಧೋರಣೆ ತಳೆದಿರಬಹುದು. ಏಕೆಂದರೆ 1971ರ ಬಾಂಗ್ಲಾ ಯುದ್ಧದ ನಂತರ 1974ರ ತನಕ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘ ಇಂದಿರಾಗಾಂಧಿಯವರಿಗೆ ಅಷ್ಟು ತಲೆ ನೋವು ಕೊಡುವುದಿಲ್ಲ. ಇಂತಹ ಅವಕಾಶವಾದಿ ರಾಜಕೀಯ ಪ್ರಯೋಜನಗಳಿಗಾಗಿ ಕಾಂಗ್ರೆಸ್ ಹಿಂದೂ ರಾಷ್ಟ್ರ ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿರುವ ಹಲವಾರು ಉದಾಹರಣೆಗಳಿವೆ.

ಆದರೆ ಇಂದಿರಾಗಾಂಧಿಯವರು ಹೇಳಿದ್ದೆಲ್ಲವನ್ನು ಆರೆಸ್ಸೆಸ್ ಒಪ್ಪಿಕೊಳ್ಳುವುದಾದರೆ 1975ರಲ್ಲಿ ಆರೆಸ್ಸೆಸ್ ಪರಮ ದೇಶದ್ರೋಹಿ ಸಂಘಟನೆಯೆಂದು ಇಂದಿರಾಗಾಂಧಿ ಹೇಳಿದ್ದನ್ನು ಕೂಡ ಒಪ್ಪಿಕೊಳ್ಳುವುದೇ?

ಮಿಥ್ಯೆ 11: ಆರೆಸ್ಸೆಸಿಗರು ಎಲ್ಲೇ ಪ್ರಕೃತಿ ವಿಕೋಪಗಳಾದರೂ ಜಾತಿ-ಧರ್ಮ ಭೇದವಿಲ್ಲದೆ, ಪ್ರಚಾರ ಮಾಡಿಕೊಳ್ಳದೆ ನಿಸ್ವಾರ್ಥ ಸೇವೆ ಸಲ್ಲಿಸುವುದಿಲ್ಲವೇ?

ದೇಶದಲ್ಲಿ ಹಲವಾರು ಕಡೆ ಪ್ರಕೃತಿ ವಿಕೋಪಗಳಾದಾಗ ಆರೆಸ್ಸೆಸ್ ಸೇವಕರು ಅಲ್ಲಿಗೆ ಹೋಗಿರುವ ಬಗ್ಗೆ ಕೆಲವು ಹಳೆಯ ಉದಾಹರಣೆಗಳು ಇವೆ. ಆದರೆ ಅವನ್ನೇ ಇಟ್ಟುಕೊಂಡು ಈಗಲೂ ಪ್ರಚಾರ ಮಾಡಿಕೊಳ್ಳುತ್ತಾರೆ ಎಂಬ ಆಪಾದನೆಗಳೂ ಇವೆ.

ಇನ್ನು ವಿಕೋಪಗಳು ಸಂಭವಿಸಿದಾಗ ಜಾತಿ-ಧರ್ಮ ಭೇದ ಮಾಡದೆ ಪರಿಹಾರ ನೀಡುತ್ತಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. 2000ನೇ ಇಸವಿಯಲ್ಲಿ ಗುಜರಾತ್‌ನ ಭುಜ್‌ನಲ್ಲಿ ನಡೆದ ಭೂಕಂಪದ ಸಂದರ್ಭದಲ್ಲಿ ಅಲ್ಲಿನ ಬಿಜೆಪಿ ಸರಕಾರ ಹಾಗೂ ಆರೆಸ್ಸೆಸ್ ಪರಿಹಾರದಲ್ಲಿ ಪ್ರದರ್ಶಿಸಿದ ಕೋಮುವಾದ, 2004ರಲ್ಲಿ ಸುನಾಮಿ ಅಪ್ಪಳಿಸಿದಾಗ ಪರಿಹಾರದಲ್ಲಿ ನಡೆದ ಜಾತಿ ತಾರತಮ್ಯಗಳ ಪರವಾಗಿ ನೀಡಿದ ಮೌನ ಬೆಂಬಲ, 2002ರ ಗುಜರಾತಿನ ನರಮೇಧದದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವುದೆಂದರೆ ದೆಶದ್ರೋಹಿಗಳನ್ನು ಸಾಕಿದಂತೆ ಎಂದು ಹೇಳುತ್ತಾ ಪರಿಹಾರಗಳನ್ನು ತಡೆಗಟ್ಟಿದ್ದು ಎಲ್ಲವೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ.

ಹೆಚ್ಚೆಂದರೆ ಪ್ರಕೃತಿ ವಿಕೋಪ ನಡೆದ ರಾಜ್ಯಗಳಲ್ಲಿ ಬಿಜೆಪಿ ವಿರೋಧಿಸುವ ಸರಕಾರ ಇದ್ದರೆ ಅಲ್ಲಿ ಹೋಗಿ ಕೋಮುವಾದಿ ಪರಿಹಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬಾಧೆಯಲ್ಲೂ ಜಾತಿ-ಧರ್ಮ ರಾಜಕಾರಣ ಮಾಡುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ.

ಆದ್ದರಿಂದ ಆರೆಸ್ಸೆಸ್‌ನ ಪರಿಹಾರ ಕಾರ್ಯಕ್ರಮಗಳು ಸಹ ಪ್ರಚಾರ ಪ್ರಿಯತೆ ಮತ್ತು ದೇಶವನ್ನು ಧರ್ಮಾಧಾರಿತವಾಗಿ ಒಡೆಯುವ ಅಜೆಂಡಾದ ಭಾಗವಾಗಿಯೇ ಇದೆ.

ಮಿಥ್ಯೆ 12- ಗಾಂಧಿಯವರು ಕಾಂಗ್ರೆಸನ್ನು ವಿಸರ್ಜಿಸಲು ಹೇಳಿದ್ದರು, ಪಾನ ನಿಷೇಧ, ಗೋಹತ್ಯಾ ನಿಷೇಧದ ಬಗ್ಗೆ ಹೇಳಿದ್ದರು. ಅದನ್ನು ಮಾಡದ ಕಾಂಗ್ರೆಸ್ ಗಾಂಧಿ ವಿರೋಧಿಗಳಲ್ಲವೇ?

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಂವಿಧಾನದಲ್ಲಿ ಹೇಳಿರುವ ಇನ್ನೂ ಹಲವು ಜನಪರ ನೀತಿಗಳನ್ನು ಕಾಂಗ್ರೆಸ್ ಜಾರಿಗೆ ತರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೃದು ಹಿಂದುತ್ವವನ್ನು ಅನುಸರಿಸುತ್ತಾ ಹಿಂದೂರಾಷ್ಟ್ರ ಸಿದ್ಧಾಂತದ ಹೆಸರಿನಲ್ಲಿ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಬೆಳೆಯಲು ಕಾರಣರಾದರು. 1991ರ ನಂತರವಂತೂ ಕಾಂಗ್ರೆಸ್‌ನ ನೇತೃತ್ವದಲ್ಲೇ ಸಂವಿಧಾನ ವಿರೋಧಿ ಮಾರುಕಟ್ಟೆ ಪರ ನೀತಿಗಳು ಜಾರಿಯಾದವು. ರಾಮಜನ್ಮಭೂಮಿ ಚಳವಳಿ ಹುಟ್ಟಿಕೊಳ್ಳಲೂ ಪರೋಕ್ಷವಾಗಿ ಕಾಂಗ್ರೆಸೇ ಕಾರಣ.

ಕಾಂಗ್ರೆಸ್ ಈ ದೇಶಕ್ಕೆ ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ.

ಆದರೆ ಆರೆಸ್ಸೆಸ್‌ಗೆ ಆ ಪ್ರಶ್ನೆಗಳನ್ನು ಕೇಳುವ ನೈತಿಕತೆ ಇದೆಯೇ?

ಗಾಂಧಿಯವರು ಕಾಂಗ್ರೆಸ್ ವಿಸರ್ಜಿಸಲು ಹೇಳಿದಂತೆ ಆರೆಸ್ಸೆಸ್ ತನ್ನ ಕೊಮು ವಿಭಜಕ ಸಿದ್ಧಾಂತ ಹಾಗೂ ಸಂಘಟನೆಯನ್ನು ಬರ್ಖಾಸ್ತು ಮಾಡಲು ಹೇಳಿರಲಿಲ್ಲವೇ? ಮೋದಿ ಸರಕಾರವೇಕೆ ಪಾನ ನಿಷೇಧ ಮಾಡಿಲ್ಲ? ಗೋವನ್ನು ತಿನ್ನುವುದು ಆರೋಗ್ಯಕಾರಕ ಎಂದು ಆರೆಸ್ಸೆಸ್ ಪಿತಾಮಹ ಸಾವರ್ಕರ್ ಹೇಳಿದ್ದರೂ ಗೋಹತ್ಯಾ ನಿಷೇಧ ಮಾಡುತ್ತಿರುವುದು ಗುರುದ್ರೋಹವಲ್ಲವೇ?

share
ಶಿವಸುಂದರ್
ಶಿವಸುಂದರ್
Next Story
X