Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಜ್ಞಾನೇಶ್ ಕುಮಾರ್‌ರ ಎಸ್‌ಐಆರ್...

ಜ್ಞಾನೇಶ್ ಕುಮಾರ್‌ರ ಎಸ್‌ಐಆರ್ ಪ್ರಮಾದಗಳಲ್ಲಿ ಸುಪ್ರೀಂನ ಪಾಲು ದೊಡ್ಡದು! : ಸಿಜೆಐ ಸಾಹೇಬರೇ ಒಪ್ಪಿಕೊಳ್ಳಿ-ತಿದ್ದಿಕೊಳ್ಳಿ

ಶಿವಸುಂದರ್ಶಿವಸುಂದರ್7 Oct 2026 10:07 AM IST
share
ಜ್ಞಾನೇಶ್ ಕುಮಾರ್‌ರ ಎಸ್‌ಐಆರ್ ಪ್ರಮಾದಗಳಲ್ಲಿ ಸುಪ್ರೀಂನ ಪಾಲು ದೊಡ್ಡದು! : ಸಿಜೆಐ ಸಾಹೇಬರೇ ಒಪ್ಪಿಕೊಳ್ಳಿ-ತಿದ್ದಿಕೊಳ್ಳಿ

ಇಂದು ದೇಶಾದ್ಯಂತ ಎಸ್‌ಐಆರ್ ಸೃಷ್ಟಿಸಿರುವ ಕೋಲಾಹಲ ಮತ್ತು ಮತದಾರರ ‘ನಾಗರಿಕ ಕಗ್ಗೊಲೆ’ ಮೊದಲು ಬಿಹಾರದಲ್ಲಿ ಪ್ರಾರಂಭವಾಗಿತ್ತು. ಈ ಪ್ರಕರಣದಲ್ಲಿ ಜುಲೈ-ಸೆಪ್ಟಂಬರ್ ನಡುವೆ ಬಿಹಾರದಲ್ಲಿ ಆದ ಎಲ್ಲಾ ಪ್ರಮಾದಗಳನ್ನು ಸುಪ್ರೀಂ ಗಮನಿಸಿತ್ತು. ಎಸ್‌ಐಆರ್‌ನ ಸಾಂವಿಧಾನಿಕತೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುನ್ನವೇ ಎರಡನೇ ಹಂತದ ಎಸ್‌ಐಆರ್ 13 ರಾಜ್ಯಗಳಲ್ಲಿ ನಡೆಸಲು ಅನುಮತಿ ನೀಡಿತು. ಪ. ಬಂಗಾಳದಲ್ಲಿ ಚುನಾವಣಾ ಆಯೋಗವು ದುರುದ್ದೇಶಪೂರ್ವಕವಾಗಿ ಕಾನೂನು ಬಾಹಿರವಾಗಿ ಸೇರಿಸುತ್ತಲೇ ಹೋದ ಲಾಜಿಕಲ್ ಡಿಸ್ಕ್ರಿಪೆನ್ಸಿ ಇತ್ಯಾದಿ ಷರತ್ತುಗಳ ಬಗ್ಗೆ ಮತ್ತು ಅದು ಕಾನೂನು ಬಾಹಿರವಾಗಿ ಕೋಟ್ಯಂತರ ಅರ್ಹ ಮತದಾರರನ್ನು ಹೊರದಬ್ಬಿರುವುದನ್ನು ಎಲ್ಲವನ್ನೂ ಸುಪ್ರೀಂ ಗಮನಿಸುತ್ತಲೇ ಇತ್ತು ಮತ್ತು ಅದರ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಿದಾಗ ಈ ಪ್ರಮಾದಗಳು ನಡೆಯಲು ಅನುಮತಿ ನೀಡಿದ್ದು ಕೂಡ ಸುಪ್ರೀಂ ಕೋರ್ಟೇ.

ಎಸ್‌ಐಆರ್ ಬಗೆಗಿನ ತೀರ್ಮಾನಗಳನ್ನು ಮುಖ್ಯ ಚುನಾವಣಾ ಅಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ಮತ್ತು ಕಾನೂನು ಬಾಹಿರವಾಗಿ ತೆಗೆದುಕೊಂಡಿದ್ದಾರೆಂಬುದನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಬಹಿರಂಗಪಡಿಸುತ್ತಿದ್ದಂತೆ ಎಸ್‌ಐಆರ್ ವಿರೋಧಿ ಹೋರಾಟ ದೇಶದೆಲ್ಲೆಡೆ ಇನ್ನಷ್ಟು ತೀವ್ರಗೊಂಡಿದೆ. ಮೋದಿ ಸರಕಾರದಲ್ಲಿ ಕೆಲಸ ಮಾಡಿದ ನೂರಾರು ಅತ್ಯಂತ ಹಿರಿಯ ಅಧಿಕಾರಿಗಳು ಕೂಡ ಸಿಇಸಿ ಜ್ಞಾನೇಶ್ ಕುಮಾರ್ ಗುಪ್ತಾ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಎನ್‌ಡಿಎ ಕೂಟದ ಇತರ ಸಹಭಾಗಿ ಪಕ್ಷಗಳು ಈ ಬಗ್ಗೆ ಬಿಜೆಪಿಯ ನಿಲುವನ್ನು ಬಹಿರಂಗವಾಗಿ ಸಮರ್ಥಿಸುತ್ತಿಲ್ಲ ಅಥವಾ ಸಣ್ಣಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಿವೆ. ‘ಇಂಡಿಯಾ’ ಒಕ್ಕೂಟದಲ್ಲಿ ಎಸ್‌ಐಆರ್ ರದ್ದು ಮಾಡಬೇಕೆಂಬ ಬಗ್ಗೆ ಮತ್ತು ಜ್ಞಾನೇಶ್ ರಾಜೀನಾಮೆ ಬಗ್ಗೆ ನಿಧಾನಕ್ಕೆ ಏಕಾಭಿಪ್ರಾಯ ಮೂಡುತ್ತಿದೆ. ಅದನ್ನು ಆಧರಿಸಿ ಈ ವಿರೋಧ ಪಕ್ಷಗಳು ಜೀವನ್ಮರಣದ ಹೋರಾಟ ಕಟ್ಟುವ ಬಗ್ಗೆ ಯಾವ ಭರವಸೆಗಳು ಇಲ್ಲದಿದ್ದರೂ ಈ ವಿಷಯದ ಬಗ್ಗ ಆಳುವ ವರ್ಗಗಳಲ್ಲಿ ಭಿನ್ನಾಭಿಪ್ರಾಯ ಮತ್ತು ವೈರುಧ್ಯ ನಿಧಾನಕ್ಕೆ ಹರಿತವಾಗುತ್ತಿದೆ.

ಇದರ ಭಾಗವಾಗಿಯೇ ಎಸ್‌ಐಆರ್‌ಗೆ ಕಾರಣಕರ್ತರಾದ ಆಳುವ ವ್ಯವಸ್ಥೆಯ ಭಾಗೀದಾರರೇ ಒಬ್ಬೊಬ್ಬರಾಗಿ ಎಸ್‌ಐಆರ್ ಪ್ರಮಾದಕ್ಕೆ ನಾವು ಕಾರಣರಲ್ಲ ಎನ್ನುತ್ತಾ ಜಾರಿಕೊಳ್ಳಲು ಪ್ರಾರಂಭಿಸಿದ್ದಾರೆ.

ಅದರ ಇತ್ತೀಚಿನ ಸರದಿ ಸುಪ್ರೀಂ ಕೋರ್ಟ್‌ನದ್ದು. ಎಸ್‌ಐಆರ್ ವಿಷಯದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಉಳಿದ ಇಬ್ಬರು ಆಯುಕ್ತರನ್ನು ಕತ್ತಲಲ್ಲಿ ಇಟ್ಟು ಕಾನೂನು ಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಕ್ರಮ ಕೈಗೊಂಡಿರುವುದರಿಂದ ಎಸ್‌ಐಆರ್ ಅನ್ನು ರದ್ದುಗೊಳಿಸಬೇಕು ಮತ್ತು ಜ್ಞಾನೇಶ್ ಕುಮಾರ್‌ರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂಬ ಅಹವಾಲನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ ಅಕ್ಟೊಬರ್ 5ರಿಂದ ವಿಚಾರಣೆ ಪ್ರಾರಂಭಿಸಿದೆ ಮತ್ತು ಈ ಅಹವಾಲಿನ ಬಗ್ಗೆ ತಮ್ಮ ಪ್ರತ್ಯುತ್ತರ ನೀಡಲು ಆಯೋಗಕ್ಕೆ ನೋಟಿಸ್ ನೀಡಿದೆ.

ವಾಸ್ತವದಲ್ಲಿ ಆಯೋಗದ ಏಕಪಕ್ಷೀಯ ಹಾಗೂ ಕಾನೂನು ಬಾಹಿರ ತೀರ್ಮಾನಗಳಲ್ಲಿ ಪ್ರಮುಖವಾದದ್ದು ಹೊಸ ಮತದಾರರು ನೋಂದಾಯಿಸಿಕೊಳ್ಳಲು ನಿಗದಿಯಾಗಿರುವ ಫಾರಂ-6ಕ್ಕೆ ಸಿಇಸಿ ಜ್ಞಾನೇಶ್ ಏಕಪಕ್ಷೀಯವಾಗಿ ತಂದಿರುವ ತಿದ್ದುಪಡಿಗಳ ಕುರಿತಾದದ್ದು. ಅದರ ಬಗ್ಗೆ ಸೆಪ್ಟಂಬರ್ 26ರಂದು ಆಯೋಗದ ಸರ್ವಸದಸ್ಯ ಸಭೆಯಲ್ಲಿ ಸರ್ವಾನುಮತಿಯಿಂದ ತೆಗೆದುಕೊಂಡ ತೀರ್ಮಾನವು ‘‘ಎಸ್‌ಐಆರ್ ಅವಧಿಯಲ್ಲಿ ಫಾರಂ-6ರ ಜೊತೆಗೆ ಒಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕೆಂಬ ಆಯೋಗದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಇದು ಎಸ್‌ಐಆರ್ ನಂತರದ ಅವಧಿಗೆ ಅನ್ವಯವಾಗುವುದಿಲ್ಲ’’ ಎಂದು ಸಮರ್ಥಿಸಿಕೊಂಡಿತ್ತು.

ಆದರೆ ಅಕ್ಟೋಬರ್ 5ರಂದು ಇದರ ವಿಚಾರಣೆ ಪ್ರಾರಂಭವಾದಾಗ ಮುಖ್ಯ ನ್ಯಾಯಾಧೀಶ ನ್ಯಾ. ಸೂರ್ಯಕಾಂತ್ ಅವರು:

‘‘ಫಾರಂ-6ರ ಬಗ್ಗೆ ಯಾವುದೇ ತಿದ್ದುಪಡಿಗೆ ನಾವು ಅನುಮತಿ ನೀಡಿರಲಿಲ್ಲ ಎಂದು ಈ ಹಂತದಲ್ಲೇ ನಾವು ಸ್ಪಷ್ಟಪಡಿಸುತ್ತೇವೆ ಮತ್ತು ಯಾರ ಆದೇಶದ ಮೇರೆಗೆ ಈ ತಿದ್ದುಪಡಿಗಳಾದವು ಎಂಬ ಬಗ್ಗೆ ನಾವು ವಿಚಾರಣೆಯಲ್ಲಿ ತಿಳಿದುಕೊಳ್ಳಲು ಇಷ್ಟಪಡುತ್ತೇವೆ’’ ಎಂದು ಸ್ಪಷ್ಟ ಮಾತುಗಳ ಮೂಲಕ ಜ್ಞಾನೇಶ್ ಕುಮಾರ್‌ರ ಕೈ ಬಿಟ್ಟಿದ್ದಾರೆ.

ಆದರೆ ಇದು ಸುಪ್ರೀಂನ ಈ ಹೇಳಿಕೆ ಎಷ್ಟು ಸತ್ಯ? ಹೆಚ್ಚುತ್ತಿರುವ ಜನಪ್ರತಿರೋಧದ ಹಿನ್ನೆಲೆಯಲ್ಲಿ ಸುಪ್ರೀಂ ತನ್ನ ನಿಲುವು ಬದಲಿಸುತ್ತಾ ಈ ಪ್ರಮಾದದಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆಯೇ?

ಫಾರಂ-6 ತಿದ್ದುಪಡಿ ಮತ್ತು ಎಸ್‌ಐಆರ್ ಪ್ರಮಾದದಲ್ಲಿ ಸುಪ್ರೀಂನ ನಿರ್ಣಾಯಕ ಪಾಲು

ಈ ವಿಷಯವು ಸ್ಪಷ್ಟವಾಗುವುದು ಎಸ್‌ಐಆರ್‌ನ ಸಾಂವಿಧಾನಿಕತೆ ಮತ್ತು ಶಾಸನಬದ್ಧತೆಯ ಬಗ್ಗೆ ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠ ಮೇ 27ರಂದು ಕೊಟ್ಟ ತೀರ್ಪನ್ನು ಕೂಲಂಕಶವಾಗಿ ವಿಶ್ಲೇಷಿಸಿದಾಗ..

(ಅದರ ಪೂರ್ಣ ಪಠ್ಯ ಕೆಳಗಿನ ವೆಬ್ ವಿಳಾಸದಲ್ಲಿದೆ. ಆಸಕ್ತರು ಓದಬಹುದು: https://api.sci.gov.in/supremecourt/2025/35785/ 35785_2025_1_1501_71617_Judgement_27-May-2026.pdf)

ಇಂದು ದೇಶಾದ್ಯಂತ ಎಸ್‌ಐಆರ್ ಸೃಷ್ಟಿಸಿರುವ ಕೋಲಾಹಲ ಮತ್ತು ಮತದಾರರ ‘ನಾಗರಿಕ ಕಗ್ಗೊಲೆ’ ಮೊದಲು ಬಿಹಾರದಲ್ಲಿ ಪ್ರಾರಂಭವಾಗಿತ್ತು. ಈ ಪ್ರಕರಣದಲ್ಲಿ ಜುಲೈ-ಸೆಪ್ಟಂಬರ್ ನಡುವೆ ಬಿಹಾರದಲ್ಲಿ ಆದ ಎಲ್ಲಾ ಪ್ರಮಾದಗಳನ್ನು ಸುಪ್ರೀಂ ಗಮನಿಸಿತ್ತು. ಎಸ್‌ಐಆರ್‌ನ ಸಾಂವಿಧಾನಿಕತೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುನ್ನವೇ ಎರಡನೇ ಹಂತದ ಎಸ್‌ಐಆರ್ 13 ರಾಜ್ಯಗಳಲ್ಲಿ ನಡೆಸಲು ಅನುಮತಿ ನೀಡಿತು. ಪ. ಬಂಗಾಳದಲ್ಲಿ ಚುನಾವಣಾ ಆಯೋಗವು ದುರುದ್ದೇಶಪೂರ್ವಕವಾಗಿ ಕಾನೂನು ಬಾಹಿರವಾಗಿ ಸೇರಿಸುತ್ತಲೇ ಹೋದ ಲಾಜಿಕಲ್ ಡಿಸ್ಕ್ರಿಪೆನ್ಸಿ ಇತ್ಯಾದಿ ಷರತ್ತುಗಳ ಬಗ್ಗೆ ಮತ್ತು ಅದು ಕಾನೂನು ಬಾಹಿರವಾಗಿ ಕೋಟ್ಯಂತರ ಅರ್ಹ ಮತದಾರರನ್ನು ಹೊರದಬ್ಬಿರುವುದನ್ನು ಎಲ್ಲವನ್ನೂ ಸುಪ್ರೀಂ ಗಮನಿಸುತ್ತಲೇ ಇತ್ತು ಮತ್ತು ಅದರ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಿದಾಗ ಈ ಪ್ರಮಾದಗಳು ನಡೆಯಲು ಅನುಮತಿ ನೀಡಿದ್ದು ಕೂಡ ಸುಪ್ರೀಂ ಕೋರ್ಟೇ.

ಅಂತಿಮವಾಗಿ ಮೇ 27ರಂದು ಎಸ್‌ಐಆರ್ ಬಗ್ಗೆ ತೀರ್ಪು ನೀಡಿದ ಸಿಜೆಐ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠ ಅಹವಾಲುದಾರರ ಯಾವ ದೂರುಗಳನ್ನೂ ಪರಿಗಣಿಸದೆ ಹಾಗೂ ಪ. ಬಂಗಾಳ ಮತ್ತು ಬಿಹಾರಗಳಲ್ಲಿ ತಾನೇ ಗಮನಿಸಿದ ವ್ಯವಸ್ಥಿತ ಮತ್ತು ಯೋಜಿತ ಪ್ರಮಾದಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೆ:

ಎಸ್‌ಐಆರ್ ಸಾಂವಿಧಾನಿಕ, ಕಾನೂನುಬದ್ಧ ಮಾತ್ರವಲ್ಲದೆ ಎಸ್‌ಐಆರ್ ಆಶಯಗಳನ್ನು ಈಡೇರಿಸಿಕೊಳ್ಳಲು ಈವರೆಗೆ ಆಯೋಗವು ಅನುಸರಿಸಿರುವ ಎಲ್ಲಾ ಕ್ರಮಗಳು ಸಿಂಧುವಾಗಿವೆ ಮತ್ತು ಇಂಥ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಆಯೋಗಕ್ಕೆ ಅಧಿಕಾರವಿದೆ ಎಂದು ಅತ್ಯಂತ ಏಕಪಕ್ಷೀಯ ಮತ್ತು ಪಕ್ಷಪಾತಿ ತೀರ್ಮಾನವನ್ನು ಸುಪ್ರೀಂ ನೀಡಿತ್ತು.

ಅಷ್ಟು ಮಾತ್ರವಲ್ಲ. ಎಸ್‌ಐಆರ್ ಅಪರಾಧದಲ್ಲಿ ಸುಪ್ರೀಂನ ಪಾಲಿಗೆ ಇನ್ನೂ ಎರಡು ಉದಾಹರಣೆಗಳಿವೆ:

ಪ. ಬಂಗಾಳದಲ್ಲಿ 27 ಲಕ್ಷ ಮತದಾರ ಮತದಾರಿಕೆ ಬಗೆಹರಿಯುವ ಮುನ್ನವೇ ಪ. ಬಂಗಾಳದ ಚುನಾವಣೆಗೆ ಸುಪ್ರೀಂ ಅನುಮತಿ ಕೊಟ್ಟಿತು. ‘‘ಈ ಚುನಾವಣೆಯಲ್ಲಿ ವೋಟು ಹಾಕದಿದ್ದರೇನು ಮುಂದಿನ ಚುನಾವಣೆಯಲ್ಲಿ ವೋಟು ಹಾಕಬಹುದು’’ ಎಂದು ಜನತೆಯ ಮೂಲಭೂತ ಹಕ್ಕಿನ ಹರಣದ ಬಗ್ಗೆಯೇ ಅತ್ಯಂತ ಬೇಜವಬ್ದಾರಿ ನಿಲುವು ತೆಗೆದುಕೊಂಡು ಪ. ಬಂಗಾಳದಲ್ಲಿ ಬಿಜೆಪಿಯ ವಿಜಯಕ್ಕೆ ಪರೋಕ್ಷವಾಗಿ ಕಾರಣವಾಯಿತು.

(https://www.barandbench.com/news/they-cant-vote-this-time-but-what-supreme-court-said-on-wb-election-duty-officers-deleted-from-voters-list)

ಅಕ್ಟೊಬರ್ 6ರಂದು ಪ. ಬಂಗಾಳದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಅಲ್ಲಿ ಮತದಾರರಾಗಿದ್ದ 19,000 ಮತದಾರರ ಅಹವಾಲುಗಳು ಇನ್ನೂ ಟ್ರಿಬ್ಯುನಲ್‌ಗಳಲ್ಲಿ ಬಾಕಿ ಇವೆ. ಆದರೂ ಉಪ ಚುನಾವಣೆಗೆ ಅವಕಾಶ ಮಾಡಿಕೊಟ್ಟ ಸುಪ್ರೀಂ ‘‘ಅದು ಕೇವಲ ಉಪ ಚುನಾವಣೆ ತಾನೇ’’ ಎಂಬ ಲೇವಡಿಯ ಹೇಳಿಕೆ ನೀಡಿದೆ.

(https://indianexpress.com/article/legal-news/west-bengal-sir-supreme-court-voter-appeals-nandigram-rejinagar-bypolls-10898218/)

ಹೀಗಾಗಿ ಎಸ್‌ಐಆರ್ ಮೂಲಕ ಮೋದಿ ಸರಕಾರ ಮತ್ತು ಜ್ಞಾನೇಶ್‌ರ ಆಯೋಗ ನಡೆಸಿರುವ ‘ನಾಗರಿಕತ್ವ ನರಮೇಧ’ದಲ್ಲಿ ಸುಪ್ರೀಂನ ನೇರ ಪಾಲಿದೆ.

ಫಾರಂ-6ರ ಬದಲಾವಣೆಗೆ ಸುಪ್ರೀಂ ನೇರ ಕಾರಣವಲ್ಲವೇ?

ಅದೇ ರೀತಿ ಈಗ ಏನೇ ಸಬೂಬು ಹೇಳಿದರೂ ಸುಪ್ರೀಂ ತನ್ನ ಮೇ 27ರ ತೀರ್ಮಾನದಲ್ಲಿ ಫಾರಂ-6ಕ್ಕೆ ಆಯೋಗವು ಏನು ಬೇಕಾದರೂ ಬದಲಾವಣೆ ಮಾಡುವ ಅಧಿಕಾರವಿದೆಯೆಂದು ಕೂಡ ಸ್ಪಷ್ಟಪಡಿಸಿತ್ತು.

ಆಗ ಆಯೋಗವು ಬಿಹಾರದ ಸಂದರ್ಭದಲ್ಲಿ ಫಾರಂ-6ರ ಜೊತೆಗೆ ಮತದಾರರು ಘೋಷಣಾ ಪತ್ರಕ್ಕೂ ಸಹಿ ಹಾಕಬೇಕೆಂದು ವಿಧಿಸಿದ್ದ ಷರತ್ತು ಸುಪ್ರೀಂ ಮುಂದಿತ್ತು. ಅದರ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಮಾನದ ಪ್ಯಾರಾ 152ರಲ್ಲಿ ಹೀಗೆ ಸ್ಪಷ್ಟವಾಗಿ ಹೇಳಿದೆ:

" It is true that Form 6, as prescribed under the Registration of Electors Rules, 1960, sets out a framework of documentation; however, the same is tailored to the process of revision contemplated under Section 21(2) of the RP Act and may not, in all situations, be capable of literal application to an exercise of the present nature....

".. The Commission, therefore, retains a degree of residual authority to formulate an appropriate documentation framework suited to the exigencies of a Special Intensive Revision"

ಅಂದರೆ: ಸಾಮಾನ್ಯ ಸಂದರ್ಭದಲ್ಲಿ ಫಾರಂ-6 ಪ್ರಜಾಪ್ರತಿನಿಧಿ ಕಾಯ್ದೆಯಡಿ ಸಾಮಾನ್ಯ ಷರತ್ತುಗಳನ್ನು ಹೊಂದಿರಬೇಕು. ಆದರೆ ಎಸ್‌ಐಆರ್ ಎನ್ನುವ ಪ್ರಸ್ತುತ ವಿಶೇಷ ಪ್ರಕ್ರಿಯೆಗೆ ಈ ಸಾಮಾನ್ಯ ಷರತ್ತುಗಳು ಸೂಕ್ತವಾಗಲಾರದು. ಮೇಲಾಗಿ ಎಸ್‌ಐಆರ್ ಅಗತ್ಯಗಳನ್ನು ಪೂರೈಸುವಂತಹ ದಾಖಲೆಗಳನ್ನು ಕಡ್ಡಾಯ ಮಾಡುವ ಅಧಿಕಾರ ಆಯೋಗದಲ್ಲಿ ಉಳಿದುಕೊಂಡಿರುತ್ತದೆ ಎಂದು ಸುಪ್ರೀಂ ಅತ್ಯಂತ ಸ್ಪಷ್ಟವಾಗಿ ಹೇಳಿದೆ.

ಆಯೋಗವು ಈ ತೀರ್ಮಾನ ಬಂದ ನಂತರ ಜುಲೈನಲ್ಲಿ ಹೊಸ ಮತದಾರರ ಫಾರಂ-6ರ ಜೊತೆಗೆ ಹೊಸ ಮತದಾರರ ಪೋಷಕರು ಹಿಂದಿನ ಎಸ್‌ಐಆರ್ ನಲ್ಲಿದ್ದರೆ ಮಾತ್ರ ಊರ್ಜಿತವಾಗುವಂತೆ ಮತ್ತೊಂದು ಷರತ್ತು ಸೇರಿಸಿತು. ಸುಪ್ರೀಂ ಕೋರ್ಟ್ ಈ ನಿರ್ದಿಷ್ಟ ಸೇರ್ಪಡೆಯ ಬಗ್ಗೆ ತಾನು ಅನುಮತಿ ನೀಡಿರಲಿಲ್ಲ ಎಂದು ಈಗ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಆದರೆ residual authority to formulate an appropriate documentation framework ಎಂದು ಏನು ಬೇಕಾದರೂ ಮಾಡುವುದಕ್ಕೆ ಅನುಮತಿ ಕೊಟ್ಟಿದ್ದು ಇದೇ ಸುಪ್ರೀಂ ಕೋರ್ಟ್ ಅಲ್ಲವೇ? ಹಾಗಾಗಿ ಸುಪ್ರೀಂನ ಈ ಆದೇಶವೇ ಆಯೋಗದ ಎಲ್ಲ ಬಗೆಯ ಎಸ್‌ಐಆರ್ ದಮನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಆದ್ದರಿಂದ ಸುಪ್ರೀಂ ಈಗಲಾದರೂ ತನ್ನ ತಪ್ಪಿನ ಜವಾಬ್ದಾರಿ ಹೊರಬೇಕಿದೆ. ಮತ್ತು ಎಸ್‌ಐಆರ್ ರದ್ದು ಮಾಡಬೇಕಿದೆ.

ಜನರ ಕೋರ್ಟಿನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಪಡೆಯುವುದೇ?

ತನ್ನ ತಪ್ಪನ್ನು ತಿದ್ದಿಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಈಗ ಹೊಸ ಅವಕಾಶವೊಂದು ಬಂದಿದೆ. ಆಯೋಗವು ತನ್ನ ಬಣ್ಣ ಬಯಲಾದ ನಂತರ ಅಕ್ಟೊಬರ್ 1ರಂದು ಒಂದು ಹೊಸ ಆದೇಶ ಹೊರಡಿಸಿದೆ.

ಆಯೋಗದ ಹೊಸ ಆದೇಶವು:

-ಹೊಸ ಮತದಾರರು ಇನ್ನು ಮುಂದೆ ‘non-SIR Period’ನಲ್ಲಿ ಎಸ್‌ಐಆರ್ ದಾಖಲೆಗಳನ್ನು ತೋರಿಸದೆ ಮಾಮೂಲಿ ಫಾರಂ-6 ಬಳಸಿ ಮರು ಸೇರ್ಪಡೆಗೊಳ್ಳಬಹುದು.

-ಎಸ್‌ಐಆರ್ ಮುಗಿದಿರುವ 20 ರಾಜ್ಯಗಳಲ್ಲಿ ಬಿಟ್ಟುಹೋಗಿರುವ ಮತದಾರರನ್ನು ಎಸ್‌ಐಆರ್ ದಾಖಲೆಗಳ ಅಗತ್ಯವಿಲ್ಲದ ಮಾಮೂಲಿ ‘Continuous Updation Process’ ನಲ್ಲಿ ಒಳಗೊಳ್ಳಬಹುದು ಎಂದು ಆದೇಶಿಸಿದೆ.

-ಎಸ್‌ಐಆರ್ ಮುಗಿದಿರುವ 20 ರಾಜ್ಯಗಳಲ್ಲೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಟ್ಟು ಹೋಗಿರುವ ಮತದಾರರನ್ನು ಎಸ್‌ಐಆರ್ ದಾಖಲೆಗಳ ಅಗತ್ಯವಿಲ್ಲದ ಮಾಮೂಲಿ ಫಾರಂ-6 ಭರ್ತಿ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲು ವಿಶೇಷ ಅಭಿಯಾನ ಮಾಡಲು ಸೂಚಿಸಿದೆ

- ಅದರಂತೆ ಬಿಎಲ್‌ಒಗಳು ಈಗ:

1) ಎಸ್‌ಐಆರ್ ಪೂರ್ವ ಪಟ್ಟಿ ಮತ್ತು ನಂತರದ ಪಟ್ಟಿಯನ್ನು ಹೋಲಿಸಿ ಎಸ್‌ಐಆರ್‌ನಲ್ಲಿ ಬಿಟ್ಟು ಹೋದವರ ಪಟ್ಟಿಯನ್ನು ತಯಾರಿಸಬೇಕು.

2) ವಾರಕ್ಕೆ 25 ಮನೆಗಳಂತೆ ಒಂದು ತಿಂಗಳಲ್ಲಿ ಎಲ್ಲ ಮನೆಗಳಿಗೆ ಭೇಟಿ ಕೊಟ್ಟು ಬಿಟ್ಟು ಹೋದವರನ್ನು ಮಾಮೂಲಿ ಫಾರಂ 6ರ ಮೂಲಕ ಸೇರಿಸಿಕೊಂಡು ಇಆರ್‌ಒ ಪರಿಶೀಲನೆಗೆ ಕೊಡಬೇಕು.

3) ಇಆರ್‌ಒ ಅದನ್ನು 1950ರ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕು..

(https://x.com/ECISVEEP/status/2105885504122319011)

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವೆಲ್ಲವೂ ಆದಲ್ಲಿ ಎಸ್‌ಐಆರ್ ಮಾಡುವ ಅಗತ್ಯವೇನಿತ್ತು? ಅದು ಅಸಂಬದ್ಧ ಮತ್ತು ಅತಾರ್ಕಿಕ ಆಗುವುದಿಲ್ಲವೇ? ಹಾಗಿದ್ದ ಮೇಲೆ ಹಾಲಿ ಎಸ್‌ಐಆರ್ ನಡೆಯುತ್ತಿರುವ ಎಲ್ಲಾ ರಾಜ್ಯಗಳಲ್ಲೂ ಈ ಕೂಡಲೇ ಎಸ್‌ಐಆರ್ ಸ್ಥಗಿತಗೊಳಿಸಬೇಕಲ್ಲವೇ?

ಅಷ್ಟು ಮಾತ್ರವಲ್ಲ.

2026ರ ಜನವರಿ 22ರಂದು ಆಯೋಗವು ಎಸ್‌ಐಆರ್ ಏಕೆ ಅಗತ್ಯ ಎಂದು ಪ್ರತಿಪಾದಿಸುವಾಗ 2003ರಲ್ಲಿ Citizenship Amendment Act ಗೆ ತಿದ್ದುಪಡಿ ಮಾಡಿದ ಮೇಲೆ ಎಸ್‌ಐಆರ್ ನಡೆದಿಲ್ಲವಾದ್ದರಿಂದ ಈಗ ಆ ತಿದ್ದುಪಡಿಯ ಹಿನ್ನೆಲೆಯಲ್ಲಿ ಎಸ್‌ಐಆರ್ ಮಾಡಲಾಗುತ್ತಿದೆ ಎಂದು ಸಬೂಬು ನೀಡಿತ್ತು.

2003ರ Citizenship Amendment Act ತಿದ್ದುಪಡಿ ಪ್ರಕಾರ 2004ರ ನಂತರ ಹುಟ್ಟಿದವರು ತಮ್ಮ ತಂದೆ ಮತ್ತು ತಾಯಿ ಇಬ್ಬರೂ ಭಾರತೀಯರು ಎಂದು ಪುರಾವೆ ನೀಡಿದರೆ ಮಾತ್ರ ಅವರ ನಾಗರಿಕತ್ವ ಊರ್ಜಿತವಾಗುತ್ತದೆ.

ಇದೇ ಕಾರಣವನ್ನು ಕೊಟ್ಟೇ ಹೊಸ ಮತದಾರರೂ ಕೂಡ ತಮ್ಮ ತಂದೆ ತಾಯಿ 2003ರಲ್ಲಿ ನಡೆದ ಎಸ್‌ಐಆರ್‌ನಲ್ಲಿ ಇದ್ದರೇ ಎಂಬ ಪ್ರಶ್ನೆಯನ್ನು ಹೊಸ ಮತದಾರರಿಗೆ ಷರತ್ತಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು.

ಈಗ ಜನಾಂದೋಲನ ಮತ್ತು ಆಯೋಗದ ಒಳಗಿನ ಮತಬೇದದ ಕಾರಣ ಆ ಷರತ್ತನ್ನು ಹೊಸ ಮತದಾರರಿಗೆ ತೆಗೆದು ಹಾಕಲಾಗಿದೆ.

ಅಂದರೆ ಎಸ್‌ಐಆರ್ ದುಷ್ಟ ಉದ್ದೇಶವನ್ನು ಈಡೇರಿಸಲು ರೂಪಿಸಲಾಗಿದ್ದ ದುಷ್ಟ ಸಾಧನವನ್ನು ಕಿತ್ತುಹಾಕಲಾಗಿದೆ.

ಹೀಗಾಗಿ ಎಸ್‌ಐಆರ್ ಉದ್ದೇಶಕ್ಕೂ ಮತ್ತು ಸಾಧನಕ್ಕೂ ಇದ್ದ logical nexus ಈಗ ಇಲ್ಲವಾಗಿದೆ.

ಇದೂ ಕೂಡ ಎಸ್‌ಐಆರ್ ಉದ್ದೇಶವನ್ನು ಮತ್ತಷ್ಟು Irrational , Illegal and Improper ಮಾಡಿದೆ.

ಹಾಗಿದ್ದ ಮೇಲೆ ಎಸ್‌ಐಆರ್ ಮಾಡಿದ್ದೇಕೆ?

13 ಕೋಟಿ ಜನಗಳನ್ನು ಚಿತ್ರಹಿಂಸೆಗೆ ಗುರಿ ಮಾಡಿದ್ದೇಕೆ?

ಈಗಲೂ ಎಸ್‌ಐಆರ್ ನಿಲ್ಲುತ್ತಿಲ್ಲವೇಕೆ?

ಆದ್ದರಿಂದ: ಈಗಲಾದರೂ ಸುಪ್ರೀಂ ಕೋರ್ಟ್ ತನ್ನ ತಪ್ಪುಗಳನ್ನು ತಿದ್ದಿಕೊಂಡು ಎಸ್‌ಐಆರ್ ರದ್ದೆಂದು ಘೋಷಿಸಿ ಜನರ ಕೋರ್ಟ್‌ನಲ್ಲಿ ತಾತ್ಕಾಲಿಕ ಜಾಮೀನು ಪಡೆಯುವುದೇ?

ಅದೇನೇ ಇರಲಿ. ಈ ಇಡೀ ಎಸ್‌ಐಆರ್ ಹಗರಣ ಈ ದೇಶದಲ್ಲಿ ಚುನಾವಣಾ ಪ್ರಜಾತಂತ್ರವೆಂಬುದು ಎಂಥ ಸೋಗಲಾಡಿ ತಂತ್ರವೆಂಬುದನ್ನು ಮಾತ್ರ ಗಾಂಧಾರಿ ಕುರುಡಿನ ಉದಾರವಾದಿಗಳಿಗೂ ಕಣ್ಣಿಗೆ ರಾಚುವಷ್ಟು ನಿಚ್ಚಳವಾಗಿ ಸಾಬೀತು ಮಾಡುತ್ತಿದೆ. ಅಲ್ಲವೇ?

(ಅಂಕಣಕಾರರು ಹಿರಿಯ ಚಿಂತಕರು)

Tags

Gyanesh KumarSupreme CourtSIR
share
ಶಿವಸುಂದರ್
ಶಿವಸುಂದರ್
Next Story
X