Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ವಂದೇ ಮಾತರಂ -150: ಜನಗಣದ ಭಾರತ...

ವಂದೇ ಮಾತರಂ -150: ಜನಗಣದ ಭಾರತ ಮಾತೆಗಾಗಿಯೋ? ಗಣವೇಷದ ಹಿಂದೂ ಮಾತೆಗಾಗಿಯೋ?

ಶಿವಸುಂದರ್ಶಿವಸುಂದರ್13 Nov 2025 10:42 AM IST
share
ವಂದೇ ಮಾತರಂ -150: ಜನಗಣದ ಭಾರತ ಮಾತೆಗಾಗಿಯೋ? ಗಣವೇಷದ ಹಿಂದೂ ಮಾತೆಗಾಗಿಯೋ?

ಭಾಗ - 2

‘ಆನಂದ ಮಠ’- ಮುಸ್ಲಿಮ್ ದ್ವೇಷದ ಬ್ರಿಟಿಷ್ ಪರ ಕಾದಂಬರಿ

‘ಆನಂದಮಠ’ ಕಾದಂಬರಿಯನ್ನು ಬಂಕಿಮರು ಬರೆದದ್ದು 1882ರಲ್ಲಿಯಾದರೂ ಅದರ ವಸ್ತು ಮತ್ತು ಕಾಲಘಟ್ಟ 1770-75ರದ್ದು. ಆಗತಾನೆ ಬಂಗಾಳದ ಸ್ವತಂತ್ರ ನವಾಬ ಸಿರಾಜುದ್ದೌಲರನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ಸೋಲಿಸಿ ಇಡೀ ಬಂಗಾಳ ಪ್ರಾಂತದಲ್ಲಿ ತನ್ನ ಗುಲಾಮಿ ನವಾಬರ ಮೂಲಕ ರೈತಾಪಿಯ ರಕ್ತ ಹೀರಲು ಪ್ರಾರಂಭಿಸಿರುತ್ತದೆ. ಇದರ ವಿರುದ್ಧ ಬಂಗಾಳ ಪ್ರಾಂತದಲ್ಲಿ ಹಿಂದೂ ಸನ್ಯಾಸಿಗಳು ಮತ್ತು ಮುಸ್ಲಿಮ್ ಫಕೀರರು ಒಟ್ಟಾಗಿ ನವಾಬ ಮತ್ತು ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ಮಾಡಿದ್ದು ಇತಿಹಾಸ. ಆದರೆ ಈಸ್ಟ್ ಇಂಡಿಯಾ ಕಂಪೆನಿ ನವಾಬನ ಸಹಾಯದೊಂದಿಗೆ ಸನ್ಯಾಸಿಗಳು ಮತ್ತು ಫಕೀರರನ್ನು ಕೊಂದು ಹಾಕುತ್ತದೆ ಮತ್ತು ದಂಗೆಯನ್ನು ಹತ್ತಿಕ್ಕುತ್ತದೆ.

ಬಂಕಿಮರ ಕಾದಂಬರಿಯ ವಸ್ತು ಇದೇ ಆಗಿದ್ದರೂ ಕಾದಂಬರಿಯಲ್ಲಿ ಇದು ಸನ್ಯಾಸಿ ಮತ್ತು ಫಕೀರರ ಜಂಟಿ ಬಂಡಾಯವಾಗದೆ ಕೇವಲ ಹಿಂದೂ ಸನ್ಯಾಸಿಗಳ- ಸಂತಾನರ ಬಂಡಾಯ ಮಾತ್ರವಾಗುತ್ತದೆ. ಹಾಗೂ ಶತ್ರು ನವಾಬ ಮತ್ತು ಬ್ರಿಟಿಷರಿಬ್ಬರೂ ಆಗದೆ ಕೇವಲ ನವಾಬ ಮಾತ್ರ ಆಗುತ್ತಾನೆ. ನವಾಬ ಮಾತ್ರವಲ್ಲ ಹಳ್ಳಿಗಳ ಸಾಮಾನ್ಯ ಮುಸ್ಲಿಮರೂ ಶತ್ರುಗಳಾಗುತ್ತಾರೆ. ಹೀಗೆ ಕಾದಂಬರಿ ಚರಿತ್ರೆಯನ್ನು ವಿಕೃತಗೊಳಿಸಿ ಬ್ರಿಟಿಷ್ ಪರವಾಗಿರುವ ಮುಸ್ಲಿಮ್ ವಿರೋಧಿ ಕೋಮು ಕಥನವಾಗಿ ಬಿಡುತ್ತದೆ.

ಬರಗಾಲದಿಂದ ತನ್ನ ಹಿಂದಿನ ಎಲ್ಲಾ ವೈಭವವನ್ನು ಕಳೆದುಕೊಂಡು ಹೆಂಡತಿ ಮತ್ತು ಮಗಳೊಂದಿಗೆ ಬದುಕನ್ನು ಅರಸುತ್ತಾ ಗುಳೆ ಹೊರಡುವ ಬ್ರಾಹ್ಮಣ ಭೂಮಾಲಕ ಮಹೇಂದ್ರ ಇದರ ಕಥಾನಾಯಕ. ಆದರೆ ಮಹೇಂದ್ರ ಇಲ್ಲಿ ಕಳೆದು ಹೋದ ಹಿಂದೂ ಬ್ರಾಹ್ಮಣ ವೈಭವಕ್ಕೆ ಪ್ರತಿನಿಧಿಯಷ್ಟೆ. ಹೀಗಾಗಿ ಮತ್ತೆ ಆ ವೈಭವವನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದೇ ‘ಆನಂದ ಮಠ’ದ ನಿಜವಾದ ಕಥೆ. ಆದರೆ ಇಲ್ಲಿ ವೈಭವ ಕಿತ್ತುಕೊಂಡವರು ಮುಸ್ಲಿಮ್ ದೊರೆಗಳು. ಹೀಗಾಗಿ ಈ ದೇಶದ ಪ್ರಧಾನ ಶತ್ರುಗಳು ಮುಸ್ಲಿಮರೆಂಬುದೇ ಕಾದಂಬರಿಯ ಸಂದೇಶ. ಆದ್ದರಿಂದಲೇ ಕಾದಂಬರಿಯು ಬರಗಾಲದ ಬವಣೆ, ರೈತಾಪಿಗಳು ಇರುವೆಗಳಂತೆ ಸಾಯುತ್ತಿರುವ ದೃಶ್ಯಗಳಿಂದ ಪ್ರಾರಂಭವಾದರೂ ಅವೆಲ್ಲವೂ ನಂತರ ಸಂಪೂರ್ಣ ಮರೆಯಾಗಿ ಬಿಡುತ್ತದೆ. ಅದೇ ರೀತಿ ಈ ಬರಗಾಲಕ್ಕೆ ಕಾರಣವಾದ ಬ್ರಿಟಿಷ್ ಆಡಳಿದ ಪ್ರಸ್ತಾಪವೂ ಕಾದಂಬರಿಯಲ್ಲಿ ಬರುವುದಿಲ್ಲ.

ಮುಸ್ಲಿಮ್ ದರೋಡೆಕೋರರು ಮತ್ತು ಮುಸ್ಲಿಮ್ ನವಾಬರ ದಾಳಿ ಇವೆರಡರ ವಿರುದ್ಧ ಸಮರ ಸಾರಲು ಹಿಂದೂಗಳು ಸಂಸಾರವನ್ನು ತೊರೆದು ಸನ್ಯಾಸಿಗಳಾಗಿ ಸಶಸ್ತ್ರ ಬಂಡಾಯ ಹೂಡಿರುತ್ತಾರೆ. ಮಹೇಂದ್ರನನ್ನು ಈ ಬಂಡಾಯದಲ್ಲಿ ಸೇರುವಂತೆ ಮಾಡಲು ಆತನನ್ನು ಗುಪ್ತ ಗುಹೆಯಲ್ಲಿ ಕರೆದುಕೊಂಡು ದೇವಿ-ಭಾರತ ಮಾತೆ-ಯ ದರ್ಶನ ಮಾಡಿಸಲಾಗುತ್ತದೆ. ಆ ದೇವಿಯ ಮುಂದೆ ಮುಸ್ಲಿಮರನ್ನು ಕೊಂದುಹಾಕಿ ಈ ದೇಶವನ್ನು ವೀಮೋಚನೆಮಾಡುವ ವೀರ ಪ್ರತಿಜ್ಞೆಯ ಭಾಗವಾಗಿಯೇ ‘ವಂದೇ ಮಾತರಂ’ ಹಾಡನ್ನು ಹಾಡಲಾಗುತ್ತದೆ. ‘ವಂದೇ ಮಾತರಂ’ ಹಾಡುತ್ತಲೇ ಮಹೇಂದ್ರನಂತಹವರು ಮುಸ್ಲಿಮರ ಮಾರಣ ಹೋಮಕ್ಕೆ ಸಜ್ಜಾಗುತ್ತಾರೆ. ಬರಗಾಲದ ಬವಣೆಯಿಂದ ಹಿಂದೂಗಳಷ್ಟೇ ಮುಸ್ಲಿಮ್ ರೈತರು ಸಹ ತುತ್ತಾಗಿ ಇರುವೆಗಳಂತೆ ಸಾಯುತ್ತಿದ್ದರೂ ಇಡೀ ಮುಸ್ಲಿಮ್ ಸಮುದಾಯವನ್ನೇ ಹಿಂದೂಗಳ ಬವಣೆಗೆ ಕಾರಣವೆಂಬಂತೆ ಚಿತ್ರಿಸಲಾಗಿದೆ.

ಹೀಗೆ ಕಾದಂಬರಿ ಮೊದಲಿನಿಂದಲೂ ಇಡೀ ಮುಸ್ಲಿಮ್ ಸಮುದಾಯವನ್ನೇ ದೇಶದಿಂದ ಬಿಟ್ಟೋಡಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿರಿಗಿಸಿಕೊಳ್ಳುತ್ತದೆ. ಕಾದಂಬರಿಯ ನಾಯಕ ಸತ್ಯಾನಂದ ಘೋಷಿಸುವಂತೆ ‘‘ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಉದ್ದೇಶ ಎಲ್ಲಾ ಮುಸ್ಲಿಮರನ್ನು ಕೊಂದುಹಾಕುವುದು. ಏಕೆಂದರೆ ಅವರು ದೇವರ ಶತ್ರುಗಳು!.’’ ಇದೇ ಆ ಕಾದಂಬರಿಯ ಪ್ರಧಾನ ಧಾತು. ‘‘ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿ’’ಯೆಂದು ಘೋಷಿಸುವ ‘ಆನಂದಮಠ’ದ ಬಂಡಾಯಗಾರರು ತಮ್ಮನ್ನು ತಾವು ಸನಾತನಿಗಳೆಂದೇ ಗುರುತಿಸಿಕೊಳ್ಳುತ್ತಾರೆ.

ಆನಂದ ಮಠ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಷ್ ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಮ್ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ.

ಬಂಕಿಮಚಂದ್ರರ ‘ಆನಂದ ಮಠ’ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ. ಇದನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ 2007ರಲ್ಲಿ ಮರುಮುದ್ರಣ ಮಾಡಿ ಪ್ರಕಟಿಸಿತ್ತು. ಅದರ ಕೆಲವು ಆಯ್ದ ಭಾಗಗಳು ಕೆಳಗಿವೆ:

‘ಆನಂದ ಮಠ’ ಕಾದಂಬರಿಯ ಕೆಲವು ಆಯ್ದ ಭಾಗಗಳು

ಸತ್ಯಾನಂದ: ನಮಗೆ ನಮ್ಮ ಹದಿನಾಲ್ಕು ತಲೆಯಾಂತರದಿಂದ ಬಂದ ಮಾತು, ಅಂಥದ್ದನ್ನು ನಿನಗೆ ಹೇಳುತ್ತೇನೆ. ಈಶ್ವರನು ತ್ರಿಗುಣಾತ್ಮಕನು. ಅದನ್ನು ಬಲ್ಲೆಯಷ್ಟೆ?

ಮಹೇಂದ್ರ: ಹೌದು, ಸತ್ವ ರಜಃ ತಮಃ ಈ ಮೂರು ಗುಣಗಳು. ಗೊತ್ತಾಯಿತು. ಸಂತಾನರು ಹಾಗಾದರೆ ಉಪಾಸಕ ಸಂಪ್ರದಾಯದವರಾಗಿ ಮಾತ್ರ ಇದ್ದಾರೆ?

ಸತ್ಯಾನಂದ: ಹೌದು. ನಮಗೆ ರಾಜ್ಯ ಬೇಡ -ಮುಸಲ್ಮಾನರು ಭಗವಂತನ ವಿದ್ವೇಷಿಗಳಾಗಿರುವ ಕಾರಣ ಅವರನ್ನು ಸವಂಶವಾಗಿ ನಿಪಾತಮಾಡುವ ಇಷ್ಟ ಒಂದೇ. (ಪು.73)

ಈ ಸಮಯದಲ್ಲಿ ಆ ಪ್ರದೇಶಕ್ಕೆ ನಾಲ್ಕೈದು ಪಟಾಲಂಗಳ ಸಹಿತವಾಗಿ ಕೇಪ್ಟನ್ ಥಾಮಸ್ ಸಾಹೇಬರ ಸವಾರಿಯು ಚಿತ್ತೈಸಿತ್ತು. ಆ ಸಮಯದಲ್ಲಿ ಕೆಲ ಹೊಲೆಯರು ಮುಂತಾದ ಕೀಳು ಜಾತಿಯರಾದ ಹೊಸದಾಗಿ ಆದ ಸಂತಾನರು ಆ ಕಾಲದ ಉತ್ಸಾಹವನ್ನು ನೋಡಿ ಪರದ್ರವ್ಯಾಪಹರಣದಲ್ಲಿ ಉತ್ಸಾಹಿಗಳಾಗಿದ್ದರು. ಕೇಪ್ಟನ್ ಥಾಮಸ್ ಸಾಹೇಬರು ಸೈನ್ಯದ ಸರಬರಾಯಿಗೋಸ್ಕರ ಉತ್ತಮವಾದ ಅಕ್ಕಿ, ತುಪ್ಪ, ಗೋಧಿ ಮುಂತಾದ್ದನ್ನು ಬಂಡಿ ಬಂಡಿಗಳ ಮೇಲೆ ತರಿಸುತ್ತಲಿದ್ದರು. ಅದನ್ನು ನೋಡಿ ಬಾಯಿ ನೀರು ಕರಗಿ ಆ ನೂತನವಾಗಿ ಸಂತಾನರಾದ ಹೊಲೆಯರ ಗುಂಪಿಗೆ ಸೆರಿದವರು ಬಂಡಿಗಳ ಮೇಲೆ ಬಿದ್ದರು. ಆದರೆ ಥಾಮಸನ ಶಿಪಾಯಿಗಳ ಕೈಲಿದ್ದ ಬಂದೂಕುಗಳಿಂದ ಪೆಟ್ಟು ತಿಂದು ಹಿಂದಿರುಗಿ ಓಡಿಹೋಗಿಬಿಟ್ಟರು. (ಪು.94)

ಥಾಮಸನು ನೋಡುತ್ತಿದ್ದ ಹಾಗೆ ಒಂದಪೂರ್ವವಾದ ಸುಂದರ ಸ್ತ್ರೀಮೂರ್ತಿಯು ನಿಂತಿತು. ಸುಂದರಿಯು ನಗುನಗುತ, ಸಾಹೇಬ ! ನಾನು ಹೆಂಗಸು; ಯಾರನ್ನೂ ಆಘಾತಮಾಡುವುದಿಲ್ಲ ; ಹಿಂದೂಗಳಿಗೂ ಮುಸಲ್ಮಾನರಿಗೂ ಕನರ್ವ ಕದನವಾಗುತ್ತದೆ ; ಮಧ್ಯೆ ನೀವೇತಕ್ಕೆ ಬರಬೇಕು? ನೀವು ಮನೆಗೆ ಹಿಂದಿರುಗಬೇಕು ಎಂದಳು. (ಪು.96)

ಆಗ ಆ ಸ್ವಲ್ಪ ಜನ ಸಂತಾನರು ‘‘ಜಯಜಗದೀಶಹರೆ’’ ಹೇಳುತ್ತ ಹುಲಿಗಳ ಹಾಗೆ ಕೇಪ್ಟನ್ ಥಾಮಸನ ಮೇಲೆ ಬಿದ್ದರು. ಆ ಬಿದ್ದ ಜೋರನ್ನು ಆ ಅಲ್ಪ ಸಂಖ್ಯಾಕರಾದ ಸಿಪಾಯಿಗಳು ತೆಲಂಗೀ ದಳದವರು ಸಹಿಸಲಾರದೆ ಎಲ್ಲರೂ ನಷ್ಟರಾಗಿಹೋದರು. ಆಗ ಭವಾನಂದನು ತಾನೇ ಹೋಗಿ ಕೇಪ್ಟನ್ ಥಾಮಸನ ತಲೆಯ ಕೂದಲನ್ನು ಹಿಡಿದುಕೊಂಡನು. ಕೇಪ್ಟನ್ ಥಾಮಸನು ಕಡೆಯವರೆಗೆ ಯುದ್ಧಮಾಡಿದನು. ಭವಾನಂದನು, ಕೇಪ್ಟನ್ ಸಾಹೇಬ! ನಿನ್ನನ್ನು ಹೊಡೆದುಹಾಕುವುದಿಲ್ಲ, ಇಂಗ್ಲಿಷರು ನಮಗೆ ಶತ್ರುಗಳಲ್ಲ. ನೀವು ಮುಸಲ್ಮಾನರ ಸಹಾಯಕ್ಕೆ ಏತಕ್ಕೆ ಬಂದಿರಿ? ಬಾ -ನಿನಗೆ ಪ್ರಾಣದಾನ ಮಾಡಿದ್ದೇನೆ. ನೀನೇನೋ ಈಗ ಬಂದಿಯಾಗಿದ್ದಿ. ಇಂಗ್ಲೀಷರಿಗೆ ಜಯವಾಗಲಿ, ನಾವು ನಿಮ್ಮ ಹಿತಚಿಂತಕರು ಎಂದು ಹೇಳಿದನು. ಆಗ ಥಾಮಸನು ಭವಾನಂದನನ್ನು ವಧೆ ಮಾಡುವುದಕ್ಕೆ ಸನೀನ ಸಹಿತವಾದ ಬಂದೂಕನ್ನು ಎತ್ತುವುದಕ್ಕೆ ಪ್ರಯತ್ನಪಟ್ಟನು. ಆದರೆ ಭವಾನಂದನು ಅವನನ್ನು ಹುಲಿಯ ಹಾಗೆ ಹಿಡಿದಿದ್ದನಾದ್ದರಿಂದ ಥಾಮಸನು ಅಲ್ಲಾಡುವುದಕ್ಕಾಗದೆ ಹೋಯಿತು. ಭವಾನಂದನು ಇವನನ್ನು ಕಟ್ಟಿಹಾಕಿರೆಂದು ಅನುಚರರಿಗೆ ಹೇಳಿದನು. ಎರಡು ಮೂರು ಜನ ಸಂತಾನರು ಬಂದು ಥಾಮಸನನ್ನು ಕಟ್ಟಿದರು. ಭವಾನಂದನ ಅಪ್ಪಣೆಯ ಪ್ರಕಾರ ಕಟ್ಟಿದವನನ್ನು ಕುದುರೆಯ ಮೇಲೆ ಕಟ್ಟಿಹಾಕಿ ‘ವಂದೇ ಮಾತರಂ’ ಹಾಡುತ್ತಾ ವಾಟ್ಸನ್ ಇದ್ದ ಕಡೆಗೆ ಹೊರಟರು. (ಪು.123)

ಚಿಕಿತ್ಸಕ: ಸತ್ಯಾನಂದ ಕಾತರನಾಗಬೇಡ. ಆಗುವುದೆಲ್ಲ ಒಳ್ಳೆಯದಾಗುತ್ತೆ. ಇಂಗ್ಲಿಷರು ರಾಜರಾಗದೆ ಹೋದರೆ ಆರ್ಯಧರ್ಮವು ಪುನರುದ್ಧಾರವಾಗುವ ಸಂಭವವಿಲ್ಲ.

ಮಹಾತ್ಮರು ಹೇಳಿರುವ ಮಾತನ್ನೇ ನಾನು ಹೇಳುತ್ತೇನೆ. ಮನವಿಟ್ಟು ಕೇಳು. ಮೂವತ್ತುಮೂರು ಕೋಟಿ ದೇವತೆಗಳನ್ನು ಪೂಜೆಮಾಡುವುದು ಆರ್ಯರ ಧರ್ಮವಲ್ಲ -ಅದೊಂದು ಲೌಕಿಕವಾದ ಅಪಕೃಷ್ಟವಾದ ಧರ್ಮ : ಅದರ ಪ್ರಭಾವವೇ ಈಗಿನ ಆರ್ಯಧರ್ಮವಾಗಿದೆ. ಮ್ಲೇಂಛರು ಯಾವುದನ್ನು ಹಿಂದೂ ಧರ್ಮವೆನ್ನುತ್ತಾರೋ ಅದು ಲೋಪವಾಗಿಹೋಗಿದೆ. ಶುದ್ಧವಾದ ಹಿಂದೂ ಧರ್ಮವು ಜ್ಞಾನಾತ್ಮಕವಾದುದು. ಕೇವಲ ಕರ್ಮಾತ್ಮಕವಾದುದಲ್ಲ; ಆ ಜ್ಞಾನವು ಎರಡು ಪ್ರಕಾರ, ಬಹಿರ್ವಿಷಯಕವಾದುದೊಂದು, ಅಂತರ್ವಿಷಯಕವಾದುದೊಂದು. ಅಂತರ್ವಿಷಯಕವಾದ ಜ್ಞಾನವೇ ಆರ್ಯಧರ್ಮದ ಪ್ರಧಾನ ಭಾಗ. ಆದರೆ ಬಹಿರ್ವಿಷಯಕವಾದ ಜ್ಞಾನವು ಮೊದಲು ಹುಟ್ಟದಿದ್ದರೆ ಅಂತರ್ವಿಷಯಕವಾದ ಜ್ಞಾನ ಹುಟ್ಟುವುದರ ಸಂಭವವು ಕಡಿಮೆ. ಸ್ಥೂಲವಾದುದನ್ನು ತಿಳಿಯದಿದ್ದರೆ ಸೂಕ್ಷ್ಮವಾದುದವನ್ನು ತಿಳಿಯುವುದು ಕಷ್ಟ. ಈಗ ಈ ದೇಶದಲ್ಲಿ ಬಹಳ ಕಾಲದಿಂದ ಬಹಿರ್ವಿಷಯಕ ಜ್ಞಾನವು ವಿಲುಪ್ತವಾಗಿ ಹೋಗಿದೆ. ಅದರೊಂದಿಗೆ ಸ್ವಭಾವಸಿದ್ಧವಾದ ಆರ್ಯಧರ್ಮವೂ ಲೋಪವಾಗಿದೆ. ಆರ್ಯಧರ್ಮವನ್ನು ಪುನರುದ್ಧಾರಮಾಡಬೇಕಾದರೆ ಮೊದಲು ಬಹಿರ್ವಿಷಯಕವಾದ ಜ್ಞಾನವನ್ನು ಪ್ರಚಾರಮಾಡಬೇಕು.

(ಮುಂದುವರಿಯುವುದು)

share
ಶಿವಸುಂದರ್
ಶಿವಸುಂದರ್
Next Story
X