Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಹೊಸಬಾಳೆ, ಹಳೆಬಾಳೆ, ಮರಿಬಾಳೆಗಳೇ.... ...

ಹೊಸಬಾಳೆ, ಹಳೆಬಾಳೆ, ಮರಿಬಾಳೆಗಳೇ.... ಮೂಲ ಸಂವಿಧಾನದಲ್ಲಿ ಸೆಕ್ಯುಲರಿಸಂ-ಸೋಷಿಯಲಿಸಂ ಇರಲಿಲ್ಲವೇ?

ಶಿವಸುಂದರ್ಶಿವಸುಂದರ್3 July 2025 10:58 AM IST
share
ಹೊಸಬಾಳೆ, ಹಳೆಬಾಳೆ, ಮರಿಬಾಳೆಗಳೇ....  ಮೂಲ ಸಂವಿಧಾನದಲ್ಲಿ ಸೆಕ್ಯುಲರಿಸಂ-ಸೋಷಿಯಲಿಸಂ ಇರಲಿಲ್ಲವೇ?
ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಹಿರಂಗವಾಗಿ ಮತ್ತು ಅಧಿಕಾರಯುತವಾಗಿಯೇ ಮೂಲ ಸಂವಿಧಾನವನ್ನು ಅಮಾನ್ಯಗೊಳಿಸುವ ಯೋಜನೆಯನ್ನು ಜಾರಿ ಮಾಡುತ್ತಿದೆ. ಒಂದು ದೇಶ-ಒಂದು ಚುನಾವಣೆ, ಭಾರತೀಕರಣದ ಹೆಸರಲ್ಲಿ ಬ್ರಾಹ್ಮಣೀಕರಣ, ಅನೌಪಚಾರಿಕವಾಗಿ ಹಾಗೂ ಅಸಾಂವಿಧಾನಿಕವಾಗಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ತೆಗೆದುಹಾಕುವುದು ಇವೆಲ್ಲವೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಘೋಷಿಸದೆಯೇ ಬದಲಾವಣೆ ಮಾಡುವ ಯೋಜನೆಗಳಾಗಿವೆ.

ಭಾಗ- 2

ನಮ್ಮ ಸಂವಿಧಾನದ 4ನೇ ಪರಿಚ್ಛೇದದ ಪ್ರಭುತ್ವ ನಿರ್ದೇಶನಾ ತತ್ವಗಳಲ್ಲಿ:

ಆರ್ಟಿಕಲ್ 38(1)-ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಈ ದೇಶದ ಎಲ್ಲಾ ಜನರಿಗೆ ಆರ್ಥಿಕ ನ್ಯಾಯವನ್ನು ಒದಗಿಸುವಂತೆ ಅದೇಶಿಸಲಾಗುವುದು.

38(2)-ಪ್ರಭುತ್ವವು ಆದಾಯಗಳಲ್ಲಿನ ಅಸಮಾನತೆಯನ್ನು ಮತ್ತು ಸ್ಥಾನಮಾನ, ಸೌಲಭ್ಯ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸಲು ಶ್ರಮಿಸುವುದು.

ಆರ್ಟಿಕಲ್ 39(ಎ)-ದೇಶದ ಎಲ್ಲಾ ವ್ಯಕ್ತಿಗಳಿಗೂ ಅತ್ಯಗತ್ಯ ಜೀವನೋಪಾಯಗಳನ್ನು ಸಮಾನವಾಗಿ ಪಡೆದುಕೊಳ್ಳುವ ಹಕ್ಕನ್ನು ಖಾತರಿ ಪಡಿಸಲಾಗುವುದು.

39(ಬಿ)-ಸಮುದಾಯದ ಸಂಪತ್ತಿನ ಮೇಲೆ ಒಡೆತನವನ್ನು ಸಮುದಾಯವಾದ ಸಾರ್ವತ್ರಿಕ ಒಳಿತಿಗಾಗಿ ಬಳಸುವಂತೆ ನಿಯೋಜಿಸಲಾಗುವುದು.

39(ಸಿ)-ಆರ್ಥಿಕ ನೀತಿಗಳು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ರೂಪಿಸಲಾಗುವುದು.

39(ಡಿ)-ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನ ಕೆಲಸಕ್ಕೆ ಸಮಾನ ವೇತನ.

ಆರ್ಟಿಕಲ್ 41-ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ.

ಇವೆಲ್ಲವೂ ನಮ್ಮ ಮೂಲ ಸಂವಿಧಾನದಲ್ಲೇ ಇದೆ. ಈ ಎಲ್ಲಾ ನೀತಿಗಳನ್ನೇ ಒಂದೇ ಪದದಲ್ಲಿ ಸಮಾಜವಾದ ಎಂದು ಕರೆಯುತ್ತಾರೆ. ಅದನ್ನೇ ಒಂದು ಪದವಾಗಿ ಮುನ್ನುಡಿಯಲ್ಲಿ ಸೇರಿಸಲಾಗಿದೆ.

ಆದರೆ ಇವು ಯಾವುವೂ ಜಾರಿಯಾಗುತ್ತಿಲ್ಲ ಎಂಬುದು ಬೇರೆ ಪ್ರಶ್ನೆ.

ಸೆಕ್ಯುಲರ್-ಸಮಾಜವಾದಿ ಸೇರ್ಪಡೆಯನ್ನು ಅಂಬೇಡ್ಕರ್ ವಿರೋಧಿಸಿದ್ದರೇ?

ಅಂಬೇಡ್ಕರ್ ಅವರು ಈ ದೇಶ ಕಂಡ ಮಹಾನ್ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಆಗಿದ್ದರು. ಜೀವನದುದ್ದಕ್ಕೂ ಅವರು ಆ ಎರಡು ಮೌಲ್ಯಗಳಿಗಾಗಿ ಹೋರಾಡುತ್ತಾ ಬಂದಿದ್ದರು. ವಾಸ್ತವದಲ್ಲಿ ರಾಜಕೀಯ ಪ್ರಜಾತಂತ್ರ ಮಾತ್ರ ದೊರೆತು ಆರ್ಥಿಕ ಪ್ರಜಾತಂತ್ರ ಮತ್ತು ಸಾಮಾಜಿಕ ಪ್ರಜಾತಂತ್ರ ದೊರೆಯದಿದ್ದರೆ ರಾಜಕೀಯ ಪ್ರಜಾತಂತ್ರವೂ ಉಳಿಯುವುದಿಲ್ಲವೆಂಬುದು ಅವರ ಚಿಂತನೆಯ ಸಾರವಾಗಿತ್ತು. ಅದು ಸಾಧ್ಯವಾಗಬೇಕೆಂದರೆ ಸಂಪತ್ತಿನ ರಾಷ್ಟ್ರೀಕರಣ, ಸಮಾಜವಾದ, ಬ್ರಾಹ್ಮಣಶಾಹಿ ಸಮಾಜ ವ್ಯವಸ್ಥೆಯ ನಾಶದಿಂದ ಮಾತ್ರ ಸಾಧ್ಯ ಎಂದೇ ಪ್ರತಿಪಾದಿಸುತ್ತಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಹಿಂದುತ್ವವೆಂಬುದು ಪ್ರಜಾತಂತ್ರಕ್ಕೆ ತದ್ವಿರುದ್ಧವಾದ ಸಂಗತಿಯಾಗಿದ್ದು, ಹಿಂದೂ ರಾಷ್ಟ್ರವೆಂಬುದು ಭಾರತದ ದಮನಿತ ಜನತೆಗೆ ಮಹಾ ವಿಪತ್ತಾಗಿದ್ದು ಯಾವ ಬೆಲೆ ತೆತ್ತಾದರೂ ಅದನ್ನು ತಡೆಗಟ್ಟಬೇಕೆಂಬುದು ಅಂಬೇಡ್ಕರ್ ಅವರು ಕರೆ ಕೊಟ್ಟಿದ್ದರು. ಇಂತಹ ಅಂಬೇಡ್ಕರ್ ಸಂವಿಧಾನದಲ್ಲಿ ಸಮಾಜವಾದ ಮತ್ತು ಸೆಕ್ಯುಲರಿಸಂ ಸೇರಿಸಬಾರದೆಂದು ವಾದಿಸಿದ್ದಾರೆಂದು ಹೇಳುತ್ತಾ ಸಂಘಿಗಳು ಅಂಬೇಡ್ಕರರನ್ನೂ ವಿಕೃತಗೊಳಿಸುತ್ತಿದ್ದಾರೆ.

ವಾಸ್ತವದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಮುನ್ನುಡಿಯ ಬಗೆಗಿನ ಚರ್ಚೆಯನ್ನು ಅತ್ಯಂತ ಕೊನೆಗೆ ಕೈಗೆತ್ತಿಕೊಳ್ಳಲಾಗಿತ್ತು. ಈ ಬಗ್ಗೆ ಹಲವಾರು ಚರ್ಚೆಗಳು ನಡೆದು 17-10-1949ರಂದು ಸಂವಿಧಾನದ ಮುನ್ನುಡಿಯನ್ನು ಅಂಗೀಕರಿಸಲಾಗಿತ್ತು.

ಚರ್ಚೆಯ ಭಾಗವಾಗಿ ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸೇರಿಸಲು ಕೆಲವು ಸದಸ್ಯರು ಆಗ್ರಹಪಡಿಸಿದ್ದರು. ಅದಕ್ಕೆ ಅಂಬೇಡ್ಕರ್ ಅವರು ಆ ಎರಡೂ ಆಶಯಗಳು ನಮ್ಮ ಸಂವಿಧಾನದಲ್ಲಿ ಅಂತರ್ಧಾರೆಯಾಗಿ ಹರಿದಿರುವುದರಿಂದ ಅದನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದರೇ ವಿನಾ ಆ ಪ್ರಸ್ತಾವಗಳನ್ನು ವಿರೋಧಿಸಿರಲಿಲ್ಲ.

ಉದಾಹರಣೆಗೆ ಕೆ.ಟಿ. ಶಾ ಎಂಬ ಸಂವಿಧಾನ ಸಭೆಯ ಮಾನ್ಯ ಸದಸ್ಯರು ಮುನ್ನುಡಿಯಲ್ಲಿ ಸಮಾಜವಾದ ಎಂಬ ಪದವನ್ನು ಸ್ಪಷ್ಟವಾಗಿ ಸೇರಿಸಬೇಕೆಂಬ ತಿದ್ದುಪಡಿಯನ್ನು ಸೂಚಿಸಿದಾಗ ಅಂಬೇಡ್ಕರ್ ಕೊಟ್ಟ ಉತ್ತರ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.

ಈ ಬಗ್ಗೆ 15-11-1948ರಂದು ಕೆ.ಟಿ. ಶಾ ಅವರ ಪ್ರಸ್ತಾವನೆಗೆ ದೀರ್ಘವಾಗಿ ಉತ್ತರಿಸುತ್ತಾ ಅಂಬೇಡ್ಕರ್ ಅವರು:

‘‘ಇಂದು ಶೋಷಕ ಬಂಡವಾಳಶಾಹಿ ಸಮಾಜಕ್ಕಿಂತ ಸಮಾಜವಾದಿ ಸಮಾಜ ಉತ್ತಮವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಸಮಾಜವಾದಕ್ಕಿಂತ ಉತ್ತಮವಾದ ಮತ್ತೊಂದು ವ್ಯವಸ್ಥೆಯನ್ನು ಹುಡುಕಬಹುದು.’’ ಮುಂದುವರಿದು...

‘‘ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಈಗ ಅಡಕಗೊಳಿಸಲಾಗಿರುವ ಪರಿಚ್ಛೇದ 4ರ ಪ್ರಭುತ್ವ ನಿರ್ದೇಶನಾ ತತ್ವಗಳೆಲ್ಲ ಸಮಾಜವಾದಿ ಆಶಯಗಳನ್ನು ಪಾಲಿಸುವಂತೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ’’ ಎಂದು ಹೇಳುತ್ತಾರೆ.

ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನವು ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಭುತ್ವವು ಪಕ್ಕಾ ಸೆಕ್ಯುಲರ್ ಹಾಗೂ ಸಮಾಜವಾದಿಯಾಗಿಯೇ ಇರಬೇಕೆಂದು ನಿರೀಕ್ಷಿಸಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಅ ಪದಗಳಿರಬೇಕೇ ಬೇಡವೇ ಎಂಬ ಬಗ್ಗೆ ಅವರ ಅಭಿಪ್ರಾಯ ತಾಂತ್ರಿಕ ಸ್ವರೂಪದ್ದೇ ವಿನಾ ತಾತ್ವಿಕ ರೂಪದ್ದಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

(https://eparlib.nic.in/bitstream/ 123456789/763023/1/cad_15-11-1948.pdf)

ಸಂಘಿಗಳ ಮೂಲ ಸಂವಿಧಾನ ಕುತರ್ಕ-ಮೀಸಲಾತಿ ವಿರೋಧಿ ಹುನ್ನಾರವೇ?

ಸಂಘಿಗಳು ಇದ್ದಕ್ಕಿದ್ದ ಹಾಗೆ ಮೂಲ ಸಂವಿಧಾನ ಮಂತ್ರ ಜಪಿಸುತ್ತಿರುವುದೇಕೆ? ಏಕೆಂದರೆ ಮೂಲ ಸಂವಿಧಾನವೆಂದರೆ 1950ರ ನಂತರ ಕಾಂಗ್ರೆಸ್-ಬಿಜೆಪಿ ಸರಕಾರಗಳ ನೇತೃತ್ವದಲ್ಲಿ ಸಂಸತ್ತು ಸಂವಿಧಾನಕ್ಕೆ ಮಾಡಿದ 128 ತಿದ್ದುಪಡಿಗಳಿಲ್ಲದ ಸಂವಿಧಾನ ಎಂದರ್ಥವಲ್ಲವೇ?

ಹಾಗೆ ನೋಡಿದರೆ ಮೂಲ ಸಂವಿಧಾನದಲ್ಲಿ ಮೀಸಲಾತಿಯೂ ಇರಲಿಲ್ಲ. ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ಮಾಡುವ ಮೂಲಕ ದಲಿತರಿಗೆ ಮತ್ತು ಒಬಿಸಿಗಳಿಗೆ ಮೀಸಲಾತಿ ಕೊಡುವ, ಭೂಹೀನರಿಗೆ ಭೂಮಿ ಹಂಚುವ ಸಾಮಾಜಿಕ ನ್ಯಾಯದ ಮತ್ತು ಸಮಾಜವಾದದ ಆಶಯದ ತಿದ್ದುಪಡಿಯಾದವು. ಮೂಲ ಸಂವಿಧಾನ ಬೇಕು ಎನ್ನುತ್ತಾ ಬಿಜೆಪಿ ಮತ್ತು ಸಂಘಪರಿವಾರ ಈ ಮೀಸಲಾತಿ ಮತ್ತು ಭೂ ಹಂಚಿಕೆ ಕ್ರಮಗಳ ರದ್ದಿಗೆ ಒತ್ತಾಯಿಸುತ್ತಿದೆಯೇ?

ಸಂವಿಧಾನಕ್ಕೆ 103ನೇ ತಿದ್ದುಪಡಿ ಮಾಡುವ ಮೂಲಕ ಮೇಲ್ಜಾತಿ ಮಧ್ಯಮ ವರ್ಗಕ್ಕೆ ಮೋದಿ ಸರಕಾರ ಮೀಸಲಾತಿ ನೀಡಿತು. ಮೂಲ ಸಂವಿಧಾನವೆನ್ನುತ್ತಾ ಅದನ್ನೂ ಬಿಜೆಪಿ ರದ್ದುಗೊಳಿಸಲಿದೆಯೇ?

128ನೇ ತಿದ್ದುಪಡಿಯ ಮೂಲಕ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಅದೂ ಕೂಡ ಮೂಲ ಸಂವಿಧಾನದಲ್ಲಿಲ್ಲ. ಬಿಜೆಪಿ ಸರಕಾರ ಅದನ್ನೂ ರದ್ದುಗೊಳಿಸಲಿದೆಯೇ?

ಹಾಗೆ ನೋಡಿದರೆ 1977ರಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ಮಣಿಸಿ ಇವತ್ತಿನ ಬಿಜೆಪಿಯ ಅಂದಿನ ಅವತಾರವಾಗಿದ್ದ ಭಾರತೀಯ ಜನ ಸಂಘ ಹಾಗೂ ಇನ್ನಿತರ ಪಕ್ಷಗಳು ಒಟ್ಟುಗೂಡಿ ರಚಿಸಿಕೊಂಡ ಜನತಾ ಪಕ್ಷ ಅಧಿಕಾರಕ್ಕೆ ಬಂತು.

ಅವರು ಸಂವಿಧಾನಕ್ಕೆ 44ನೇ ತಿದ್ದುಪಡಿಯನ್ನು ತಂದು ಇಂದಿರಾ ಗಾಂಧಿ 42ನೇ ತಿದ್ದುಪಡಿಯ ಮೂಲಕ ಜಾರಿ ಮಾಡಿದ್ದ ಇತರ ತಿದ್ದುಪಡಿಗಳನ್ನು ರದ್ದುಗೊಳಿಸಿದರೇ ವಿನಾ ಅದೇ 42ನೇ ತಿದ್ದುಪಡಿಯ ಪ್ರಮುಖ ಅಂಶವಾದ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಸೇರ್ಪಡೆಗಳನ್ನಲ್ಲ!

ಆ ನಂತರ ಈವರೆಗೆ ಸಂವಿಧಾನಕ್ಕೆ 80ಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದರೂ ಬಿಜೆಪಿಯನ್ನು ಒಳಗೊಂಡಂತೆ ಹಲವು ಪಕ್ಷಗಳ ಸರಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂಗೆ ತಿದ್ದುಪಡಿ ಮಾಡಿರಲಿಲ್ಲ.

ಸಾವರ್ಕರ್ ರಚಿಸಿದ್ದ ಸ್ವತಂತ್ರ ಹಿಂದುಸ್ಥಾನ್ ಸೆಕ್ಯುಲರ್ ಸಂವಿಧಾನ!

ಹಾಗೆ ನೋಡಿದರೆ ಈ ಸಂಘಿಗಳಷ್ಟು ಸೊಗಲಾಡಿಗಳು, ಹಲವು ನಾಲಗೆಯ ಜೀವಿಗಳು ಭೂಮಿಯ ಮೇಲೆ ಬೇರೆ ಯಾವುದೂ ಇರಲಾರದು. ಈಗ ಸಂವಿಧಾನದಿಂದ ಸೆಕ್ಯುಲರ್ ಮತ್ತು ಸಮಾಜವಾದ ಪದಗಳನ್ನೂ ತೆಗೆದು ಹಾಕಬೇಕೆಂದು ರಚ್ಚೆ ಹಿಡಿದಿರುವ ಸಂಘಿಗಳು, ಇತಿಹಾಸದಲ್ಲಿ ತಾವು ದುರ್ಬಲರಾಗಿದ್ದಾಗ ಮತ್ತು ಸಮಾಜದಲ್ಲಿ ಸೆಕ್ಯುಲರ್ ಮತ್ತು ಸಮಾಜವಾದಿ ಶಕ್ತಿಗಳು ಪ್ರಭಾವಿಗಳಾಗಿದ್ದಾಗ..

‘‘ನಾವು ಕೂಡ ಸೆಕ್ಯುಲರ್ ಸಮಾಜವಾದಿಗಳೇ, ನಮ್ಮ ಅರ್ಥ ಮಾತ್ರ ಬೇರೆ’’ ಎಂಬ ನಾಟಕವಾಡುತ್ತಾ ಜನರನ್ನು ಮೋಸಗೊಳಿಸುತ್ತಾ ಬಂದಿದ್ದಾರೆ.

-1969ರ ಚುನಾವಣೆಯ ಭಾರತೀಯ ಜನಸಂಘದ (ಇಂದಿನ ಭಾರತೀಯ ಜನತಾ ಪಕ್ಷದ ಮೂಲ ರೂಪ) ಪ್ರಣಾಳಿಕೆ ಆರ್ಥಿಕ ವಿಷಯದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆಯ ನಕಲೆಂಬಷ್ಟು ಸಮಾಜವಾದಿಯಾಗಿತ್ತು.

-1980ರಲ್ಲಿ ಜನತಾ ಪಕ್ಷದಿಂದ ಹೊರಬಂದು ಮೂಲ ಜನಸಂಘಿಗಳು ಭಾರತೀಯ ಜನತಾ ಪಕ್ಷ ರಚಿಸಿಕೊಂಡಾಗ, ಅವರ ಪ್ರಣಾಳಿಕೆ ಅಂದಿನ ಯುಗಧರ್ಮಕ್ಕೆ ತಕ್ಕಂತೆ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಅನ್ನು ಪ್ರತಿಪಾದಿಸುತ್ತಿತ್ತು.

-ಎಲ್ಲಕ್ಕಿಂತ ಮುಖ್ಯವಾಗಿ ಸಂಘಿಗಳ ಸೈದ್ಧಾಂತಿಕ ಪಿತಾಮಹ ಸಾವರ್ಕರ್ ಅವರು ತಮ್ಮ ‘ಅಖಿಲ ಭಾರತ ಹಿಂದೂ ಮಹಾಸಭಾ’ದ ವತಿಯಿಂದ 1944ರಲ್ಲಿ ಸ್ವತಂತ್ರ ಭಾರತದ ಸಂವಿಧಾನ ಹೇಗಿರಬೇಕೆಂಬ ಕರಡನ್ನು ಮುಂದಿಟ್ಟಿದ್ದರು.

ಅದರಲ್ಲಿ ಭಾರತವನ್ನು ಸ್ವತಂತ್ರ ಹಿಂದೂಸ್ಥಾನ- Free Hindusthan -ಎಂದು ಕರೆದರು. ಈ ಪರಿಕಲ್ಪನೆಯನ್ನು ಅವರು ನೇರವಾಗಿ ವಿದೇಶಿ -Free Ireland-ಎಂಬ ಪರಿಕಲ್ಪನೆಯಿಂದ ಸಾರಾ ಸಗಟು ತೆಗೆದುಕೊಂಡಿದ್ದರು. ಹಿಂದೂ ಮಹಾ ಸಭಾದ ಸಾವರ್ಕರ್ ಪ್ರಾಯೋಜಿತ: ‘ಸ್ವತಂತ್ರ ಹಿಂದೂಸ್ಥಾನದ ಸಂವಿಧಾನ’ದಲ್ಲಿ ಹಿಂದೂಸ್ಥಾನವು ಸೆಕ್ಯುಲರ್ ಆಗಿರಬೇಕೆಂದು ಸ್ಪಷ್ಟವಾಗಿ ಸೂಚಿಸಿದ್ದರು.

ಸಾವರ್ಕರ್‌ರ ಸ್ವತಂತ್ರ ಹಿಂದೂಸ್ಥಾನದಲ್ಲಿ:

ಹಿಂದೂಸ್ಥಾನದ ಕೇಂದ್ರ ಪ್ರಭುತ್ವ, ಅಥವಾ ಸಂಸ್ಥಾನಗಳ ಪ್ರಭುತ್ವಗಳಿಗೆ ಯಾವುದೇ ಒಂದು ಧರ್ಮವು ನಿರ್ದಿಷ್ಟ ರಾಜಧರ್ಮವಾಗಿರುವುದಿಲ್ಲ.

‘ಹಾಗೆಯೇ, ಹಿಂದೂಸ್ಥಾನದ ಸ್ವತಂತ್ರ ಪ್ರಭುತ್ವವು ನಾಗರಿಕರಿಗೆ ತಮ್ಮ ಧರ್ಮವನ್ನು ಆಚರಿಸುವ ಮತ್ತು ಪ್ರತಿಪಾದಿಸುವ ಹಕ್ಕನ್ನು ಕೊಡುತ್ತದೆ ಮತ್ತು ಧರ್ಮವನ್ನು ಆಧಾರಿಸಿ ತಾರತಮ್ಯ ಮಾಡುವುದಿಲ್ಲ....’ ಎಂದು ಘೋಷಿಸುತ್ತದೆ.

(ಸಾವರ್ಕರ್ ಸಂವಿಧಾನದ ಪೂರ್ಣ ಪಾಠವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು: https://www.constitutionofindia.net/.../the-constitution.../)

ಹೀಗಾಗಿ ಈ ಸಂಘದ ಹೊಸಬಾಳೆಗಳು ಮತ್ತು ಹಳೆ ಬಾಳೆಗಳು, ಮರಿ ಕಿರಿ ಬಾಳೆಗಳು ಮೊದಲು ಸಾವರ್ಕರ್‌ಗೆ ಧಿಕ್ಕಾರವೇನ್ನಬೇಕಲ್ಲವೇ?

ಆದರೆ ಇದೇ ಸಾವರ್ಕರ್ ಮತ್ತು ಗೋಳ್ವಾಲ್ಕರ್‌ಗಳೇ ಮನುಸ್ಮತಿಯೇ ಜಗತ್ತಿನ ಶ್ರೇಷ್ಠ ಸಂವಿಧಾನ, ಅದೇ ಭಾರತದ ಸಂವಿಧಾನ ಆಗಬೇಕೆಂದು ಆಗ್ರಹಿಸಿದ್ದರು.

ಈಗ ಮತ್ತೆ ಅದೇ ಮಾತನ್ನು ಬೇರೊಂದು ರೂಪದಲ್ಲಿ ಆಗ್ರಹಿಸುತ್ತಿದ್ದಾರೆ. ಇದೇ ಅವರ ನಿಜ ರೂಪ. ಆದರೆ ಹಲವು ನಾಲಗೆಗಳ ಈ ಸಂಘಿಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ತಂತ್ರಗಳನ್ನು, ಮಾತುಗಳನ್ನು ಬದಲಿಸುತ್ತಿರುತ್ತಾರೆ ಅಷ್ಟೇ.

ಬ್ರಾಹ್ಮಣ ಭಾರತದ ಸಾಮಮರಸ್ಯವೊ? ಮತ್ತು ಶ್ರಮಣ ಭಾರತದ ಸಂಘರ್ಷವೊ?

ಅದನ್ನು ಸಾಧಿಸಿಕೊಳ್ಳಲು ಭಾರತದ ಸಂಸ್ಕೃತಿ ಮತ್ತು ನಾಗರಿಕತೆಗೆ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪರಕೀಯ ಎಂದು ಸಂಘಿಗಳು ವಾದಿಸುತ್ತಾರೆ ಹಾಗೂ ಭಾರತದ ನಾಗರಿಕತೆಯಲ್ಲೇ ಪರಧರ್ಮ ಸಹಿಷ್ಣುತೆ ಮತ್ತು ಸಾಮರಸ್ಯ ಹಾಸುಹೊಕ್ಕಾಗಿದೆ ಎಂದು ವಾದಿಸುತ್ತಾರೆ.

ಆದರೆ ಭಾರತದ ಇತಿಹಾಸದಲ್ಲಿ ಬ್ರಾಹ್ಮಣ ಭಾರತ ಅತ್ಯಂತ ಅಸಹಿಷ್ಣುವಾಗಿದ್ದದ್ದು ಸಮತೆ ಮಮತೆಯ ಪ್ರತೀಕವಾಗಿದ್ದ ಬೌದ್ಧರನ್ನು ಅತ್ಯಂತ ಅಮಾನುಷವಾಗಿ ಕೊಂದುಹಾಕಿದ್ದನ್ನು ಸಾವರ್ಕರ್ ಅವರೇ ಹೆಮ್ಮೆಯಿಂದ ದಾಖಲಿಸುತ್ತಾರೆ. ಅಲ್ಲದೆ ವೈದಿಕತೆಯ ಸೋಗಲಾಡಿ ಅಲೌಕಿಕತೆಯನ್ನು ಪ್ರಶ್ನಿಸಿದ ಚಾರ್ವಾಕ, ಲೋಕಾಯತರನ್ನು ಅತ್ಯಂತ ಬರ್ಬರವಾಗಿ ದಮನ ಮಾಡಿದ ಇತಿಹಾಸವೇ ಭಾರತದ ಸನಾತನ ಪರಂಪರೆಯಲ್ಲಿದೆ. ಅದರ ಮುಂದುವರಿಕೆಯಾಗಿಯೇ ಪೇಶ್ವೆಗಳ ಕಾಲದಲ್ಲೂ ಈಗಲೂ ಭಾರತದ ದಲಿತ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್, ಬೌದ್ಧರ ಮೇಲೆ ಬ್ರಾಹ್ಮಣೀಯ ಸಂಘಿಗಳ ಹಲ್ಲೆ ಮುಂದುವರಿದಿದೆ.

ಅದಕ್ಕೆ ತದ್ವಿರುದ್ಧವಾಗಿ ಭಾರತದ ಶ್ರಮಣ ಪರಂಪರೆಯ ಭಾಗವಾಗಿ ಹುಟ್ಟಿಕೊಂಡ ಬೌದ್ಧ, ಜೈನ, ಬಸವ ಇನ್ನಿತರ ಅವೈದಿಕ ಶ್ರಮಣ ಧರ್ಮಗಳು ಸಮತೆ, ಮಮತೆ, ಕರುಣೆ ಹಾಗೂ ಮೈತ್ರಿಗಳನ್ನು ಬೋಧಿಸಿದವು. (ಆದರೆ ಅವನ್ನೂ ಉಳ್ಳವರು ಮತ್ತು ಪ್ರಭುತ್ವ ಒಳಸೇರಿಸಿ ಕೊಂಡಾಗ ಅವುಗಳ ಜಂಗಮತ್ವ ಹೋಗಿ ಸ್ಥಾವರವಾಗಿ ಬ್ರಾಹ್ಮಣೀಯ ತಾರತಮ್ಯದ ಅನಾಗರಿಕತೆಯನ್ನು ಮೈಗೂಡಿಸಿಕೊಂಡಿದ್ದು ಮತ್ತೊಂದು ವಿಷಯ). ಆದ್ದರಿಂದಲೇ ಅಂಬೇಡ್ಕರ್ ಅವರು ಭಾರತದ ಇತಿಹಾಸವನ್ನು ಬ್ರಾಹ್ಮಣ ಭಾರತ ಹಾಗೂ ಬೌದ್ಧ ಭಾರತದ ನಡುವಿನ ಸಂಘರ್ಷದ ಇತಿಹಾಸವೆನ್ನುತ್ತಾರೆ.

ಹೀಗಾಗಿ ಸಮಾಜವಾದ ಮತ್ತು ಸೆಕ್ಯುಲರಿಸಂ ಪರಕೀಯವಾಗಿರುವುದು ಭಾರತದೊಳಗಿನ ಬ್ರಾಹ್ಮಣೀಯ ನಾಗರಿಕತೆ, ಸಂಸ್ಕೃತಿ ಮತ್ತು ಪರಂಪರೆ ಗಳಿಗೆ. ಭಾರತದ ಅವೈದಿಕ ಪರಂಪರೆಗಳಿಗೆ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪರಕೀಯವಲ್ಲ. ಬದಲಿಗೆ ಅವು ತಮ್ಮ ಬದುಕಿನಿಂದಲೇ ಪಡೆದುಕೊಂಡ ದರ್ಶನಗಳು.

ಈಗಲೂ ಭಾರತದ ಈ ಎರಡು ಪರಂಪರೆಗಳ ನಡುವೆ ಸಂಘರ್ಷ ಮುಂದುವರಿದಿದೆ. ಸಂವಿಧಾನದ ಅರೆ ಕ್ರಾಂತಿಯು ಬ್ರಾಹ್ಮಣ್ಯಕ್ಕೆ ಹಿನ್ನಡೆಯುಂಟು ಮಾಡಿತು. ಹೀಗಾಗಿ ಅವರಿಗೆ ಸಮಸ್ಯೆ ಇರುವುದು ಸಂವಿಧಾನದ ಮುನ್ನುಡಿಯಲ್ಲಿ ಅಪ್ರಜಾತಾಂತ್ರಿಕವಾಗಿ ಸೆಕ್ಯುಲರ್, ಸೋಷಿಯಲಿಸಂ ಎಂಬ ಪದಗಳನ್ನು ಸೇರಿಸಿಬಿಟ್ಟರು ಎಂಬುದಲ್ಲ. ಅವರ ಅಸಲಿ ಸಮಸ್ಯೆ ಇರುವುದು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಾರದ ಬಗ್ಗೆ.

ಏಕೆಂದರೆ ಅವರು ಭಾರತವನ್ನು ‘ಅಗ್ರಹಾರಗಳ ರಿಪಬ್ಲಿಕ್’ ಮಾಡಬಯಸುತ್ತಾರೆ.

ಅವರು ಭಾರತವನ್ನು ‘ಬಂಡವಾಳಶಾಹಿ, ಬ್ರಾಹ್ಮಣ ಶಾಹಿಗಳ ಚಕ್ರಾಧಿಪತ್ಯ’ ಮಾಡಬಯಸುತ್ತಾರೆ. ಅಲ್ಲಿಯವರೆಗೆ ಅವರು ಜನರನ್ನು ಮೋಸಮಾಡಲು ಪ್ರಜಾತಂತ್ರ ಮತ್ತು ಗಣರಾಜ್ಯದ ಭಾಷೆಯನ್ನೇ ಬಳಸುತ್ತಿರುತ್ತಾರೆ. ‘ನಾವು ಈ ದೇಶದ ಜನ’ ಮೋಸಹೋಗಬಾರದಷ್ಟೇ.

ಪದಗಳ ಪ್ರಶ್ನೆಯಲ್ಲ-ಸಾರದ ಪ್ರಶ್ನೆ

ಹೀಗಾಗಿ ಸ್ವಾತಂತ್ರ್ಯ ಬಂದು 75 ವರ್ಷಗಳಾದ ನಂತರ ಈ ದೇಶ ಕೇಳಬೇಕಿರುವುದು ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳು ಏಕಿವೆ ಎಂಬ ಪ್ರಶ್ನೆಯನ್ನಲ್ಲ.

ಬದಲಿಗೆ ಕೇಳಬೇಕಿರುವುದು ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಪದಗಳು ಕೇವಲ ಪದಗಳಾಗಿಯೇ ಏಕೆ ಉಳಿದುಕೊಂಡಿವೆ ಎಂಬ ಪ್ರಶ್ನೆಯನ್ನು. ತುರ್ತುಸ್ಥಿತಿಯಲ್ಲಿ ಇಂದಿರಾ ಸರಕಾರ ಪ್ರಜಾತಂತ್ರದ ಆತ್ಮವನ್ನು ಕೊಂದು ಸಂವಿಧಾನದ ಪೀಠಿಕೆಯಲ್ಲಿ ಅದಕ್ಕೆ ಪದಗಳ ಸ್ಮಾರಕ ನಿರ್ಮಿಸಿದರು. ಈಗ ಮೋದಿ ಸರಕಾರ ಮತ್ತು ಸಂಘ ಪರಿವಾರ ಆ ಪದಗಳ ಸ್ಮಾರಕವನ್ನೂ ಕೂಡ ನಾಶ ಪಡಿಸಲು ಹೊರಟಿದೆ. ಈಗ ನಾವು ಕೇಳಬೇಕಿರುವುದು ಮತ್ತೆ ಪದಸ್ಮಾರಕವನ್ನಲ್ಲ. ಸಾರರೂಪಿ ಸಾಕಾರವನ್ನು.

ದುರಂತವೆಂದರೆ ಸೋಷಿಯಲಿಸಂ ಆಶಯಗಳು ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಅದು ಮೂಲಭೂತ ಹಕ್ಕುಗಳಲ್ಲ. ಅದನ್ನು ಸರಕಾರ ಜಾರಿ ಮಾಡದಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಹೀಗಾಗಿಯೇ ಕಾಂಗ್ರೆಸನ್ನೂ ಒಳಗೊಂಡಂತೆ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡದೆಯೇ ಸೆಕ್ಯುಲರಿಸಂ ವಿರೋಧಿ, ಸೋಷಿಯಲಿಸಂ ವಿರೋಧಿ ನೀತಿಗಳನ್ನೇ ಅನುಸರಿಸುತ್ತಾ ಬಂದಿದ್ದವು. 1991ರ ನಂತರ ಈ ಅನಧಿಕೃತ ಸಂವಿಧಾನ ಉಲ್ಲಂಘನೆ ಇನ್ನೂ ವೇಗ ಪಡೆಯಿತು. ಅದರಿಂದ ಪುಷ್ಟಿ ಪಡೆದುಕೊಂಡ ಸಂಘಪರಿವಾರದ ಹಿಂದುತ್ವವಾದಿಗಳು ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಮೇಲೆ ಈಗ ಬಹಿರಂಗವಾಗಿ ಹಾಗೂ ಅಧಿಕೃತವಾಗಿಯೇ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಮೇಲೆ ಸಮರ ಸಾರಿವೆ.

ಹೀಗಾಗಿ ಇದು ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಎಂಬ ಎರಡು ಪದಗಳ ಮೇಲಿನ ದಾಳಿಯೂ ಅಲ್ಲ. ಸಾಂವಿಧಾನಿಕ ತಾಂತ್ರಿಕತೆಯ ವಿಷಯಗಳೂ ಅಲ್ಲ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಹಿರಂಗವಾಗಿ ಮತ್ತು ಅಧಿಕಾರಯುತವಾಗಿಯೇ ಮೂಲ ಸಂವಿಧಾನವನ್ನು ಅಮಾನ್ಯಗೊಳಿಸುವ ಯೋಜನೆಯನ್ನು ಜಾರಿ ಮಾಡುತ್ತಿದೆ. ಒಂದು ದೇಶ-ಒಂದು ಚುನಾವಣೆ, ಭಾರತೀಕರಣದ ಹೆಸರಲ್ಲಿ ಬ್ರಾಹ್ಮಣೀಕರಣ, ಅನೌಪಚಾರಿಕವಾಗಿ ಹಾಗೂ ಅಸಾಂವಿಧಾನಿಕವಾಗಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ತೆಗೆದುಹಾಕುವುದು ಇವೆಲ್ಲವೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಘೋಷಿಸದೆಯೇ ಬದಲಾವಣೆ ಮಾಡುವ ಯೋಜನೆಗಳಾಗಿವೆ.

ಹಾಲಿ ಸಂವಿಧಾನವನ್ನು ಅಮಾನ್ಯಗೊಳಿಸಿ ತಮ್ಮ ಹಿಂದುತ್ವವಾದಿ-ಕಾರ್ಪೊರೇಟ್ ಬಂಡವಾಳಶಾಹಿ- ಬ್ರಾಹ್ಮಣಶಾಹಿ ಸಂವಿಧಾನಕ್ಕೆ ಮಾನ್ಯತೆಗಳಿಸಿಕೊಳ್ಳುವ ಯೋಜನೆಯಾಗಿದೆ.

ನಿಜವಾದ ದೇಶಭಕ್ತರು ಈ ಹುನ್ನಾರವನ್ನು ಸೋಲಿಸಲೇಬೇಕು.

share
ಶಿವಸುಂದರ್
ಶಿವಸುಂದರ್
Next Story
X