Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಸಂಘದ ಹುಂಜಗಳಿಗೆ ಬುದ್ಧ, ಬಸವ,...

ಸಂಘದ ಹುಂಜಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಎಂದರೆ ದ್ವೇಷವೇಕೆ?

ಶಿವಸುಂದರ್ಶಿವಸುಂದರ್25 Nov 2026 10:24 AM IST
share
ಸಂಘದ ಹುಂಜಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಎಂದರೆ ದ್ವೇಷವೇಕೆ?

12ನೇ ಶತಮಾನದಲ್ಲಿ ಬಸವ ಪಂಥವನ್ನು ದುರುಳೀಕರಿಸಿ ನರಮೇಧ ಮಾಡಿದರೂ ಉಳಿದು ಬೆಳೆದ ಬಸವ ಪಂಥವನ್ನು ಅವಗಣನೆ ಮಾಡಿದರು. ನಂತರದ ಹಂತದಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಹಿಂದುವೀಕರಿಸುವ ನಿರಂತರ ಪ್ರಯತ್ನ ಮುಂದುವರಿದಿದೆ. ಈಗ ಲಿಂಗಾಯತವನ್ನು ಹಿಂದುತ್ವೀಕರಿಸುವ ಭಾಗವಾಗಿ ಬಸವ ಮತ್ತು ವಚನಗಳ ಬಗ್ಗೆ ಏಕಾಕಾಲದಲ್ಲಿ ಮೂರೂ ಬಗೆಯ ದಾಳಿಯನ್ನು ಪ್ರಾರಂಭಿಸಿದ್ದಾರೆ.

ಆದರೆ ಇದೆಲ್ಲದರ ತಿರುಳು ಅಬ್ರಾಹ್ಮಣ್ಯದ ಮೇಲೆ ಬ್ರಾಹ್ಮಣ್ಯದ ಹೇರಿಕೆ ಮತ್ತು ಜಾತಿ ಶ್ರೇಣೀಕರಣದ ಪುನರ್ ಸ್ಥಾಪನೆ.

ಸ್ವತಂತ್ರ ಹಾಗೂ ಬ್ರಾಹ್ಮಣ್ಯ ವಿರೋಧಿ ಬಸವ ಧರ್ಮವನ್ನು ನಿರಾಕರಿಸುವುದು, ದುರುಳೀಕರಿಸುವುದು ಅಥವಾ ಹಿಂದುವೀಕರಿಸಲು ಪ್ರಯತ್ನಿಸುವುದು ಹಿಂದುತ್ವವಾದಿಗಳು ಆರೆಸ್ಸೆಸ್ ಹುಟ್ಟಿದಾಗಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ಯೋಜಿತ ಕುತಂತ್ರ. ಕಾಲಕಾಲಕ್ಕೆ ಅದಕ್ಕೆ ಬೇಕಿರುವ ಹುಂಜಗಳನ್ನು ಅವರು ಅಂಕಣಕ್ಕೆ ಬಿಡುತ್ತಾ ಬಂದಿದ್ದಾರೆ.

‘ಬಸವ ಮಂಟಪ’ ಪುಸ್ತಕವು ಆ ಸಾಲಿನಲ್ಲಿ ಇತ್ತೀಚಿನದ್ದು ಅಷ್ಟೆ. ಮತ್ತದು ಕೇವಲ ಬಸವಕ್ಕೆ ಮಾತ್ರ ಸೀಮಿತವಾಗಿರುವುದೂ ಅಲ್ಲ.

ಸಂಘಪರಿವಾರವು ತನ್ನ ಬ್ರಾಹ್ಮಣ್ಯ ಸಿದ್ಧಾಂತವನ್ನು ಬಯಲು ಮಾಡುವ ಮತ್ತು ವಿರೋಧಿಸುವ ಎಲ್ಲಾ ಅವೈದಿಕ ಮತ್ತು ಅಬ್ರಾಹ್ಮಣವಾದ ಪಂಥಗಳನ್ನು ಸೋಲಿಸಲು ಅನುಸರಿಸುತ್ತಿರುವುದು ಮೇಲಿನ ಮೂರು ಬಗೆಯ ಕುತಂತ್ರಗಳನ್ನೇ!

ಪ್ರಾರಂಭದಲ್ಲಿ ಅವೈದಿಕ ಶ್ರಮಣರನ್ನು ದುರುಳೀಕರಿಸುವುದು. ಅದು ವಿಫಲವಾದಾಗ ಅವಗಣನೆ ಮಾಡುವುದು. ಅದೂ ವಿಫಲವಾದಾಗ ಅದನ್ನು ತನ್ನ ವೈದಿಕ ಪರಂಪರೆಗೆ ಅಧೀನಗೊಳಿಸಿ ‘ಒಳಗೊಳ್ಳುವುದು’. ಧೃತರಾಷ್ಟ್ರ ಆಲಿಂಗನ ಮಾಡುವುದು (ಅಪ್ಪಿಕೊಂಡು ಕೊಲ್ಲುವುದು).

12ನೇ ಶತಮಾನದಲ್ಲಿ ಬಸವ ಪಂಥವನ್ನು ದುರುಳೀಕರಿಸಿ ನರಮೇಧ ಮಾಡಿದರೂ ಉಳಿದು ಬೆಳೆದ ಬಸವ ಪಂಥವನ್ನು ಅವಗಣನೆ ಮಾಡಿದರು. ನಂತರದ ಹಂತದಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ಹಿಂದುವೀಕರಿಸುವ ನಿರಂತರ ಪ್ರಯತ್ನ ಮುಂದುವರಿದಿದೆ. ಈಗ ಲಿಂಗಾಯತವನ್ನು ಹಿಂದುತ್ವೀಕರಿಸುವ ಭಾಗವಾಗಿ ಬಸವ ಮತ್ತು ವಚನಗಳ ಬಗ್ಗೆ ಏಕಾಕಾಲದಲ್ಲಿ ಮೂರೂ ಬಗೆಯ ದಾಳಿಯನ್ನು ಪ್ರಾರಂಭಿಸಿದ್ದಾರೆ.

ಆದರೆ ಇದೆಲ್ಲದರ ತಿರುಳು ಅಬ್ರಾಹ್ಮಣ್ಯದ ಮೇಲೆ ಬ್ರಾಹ್ಮಣ್ಯದ ಹೇರಿಕೆ ಮತ್ತು ಜಾತಿ ಶ್ರೇಣೀಕರಣದ ಪುನರ್ ಸ್ಥಾಪನೆ.

ಆದ್ದರಿಂದಲೇ ಜಾತಿ ವಿನಾಶ ಮತ್ತು ಮನುಷ್ಯ ಸಮಾನತೆಯನ್ನು ಬೋಧಿಸಿದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ರ ಮೇಲೆ ಈ ಸಂಘಿಗಳ ಪಿತಾಮಹರು ವಿಷ ಕಾರಿಕೊಂಡಿದ್ದಾರೆ.

ಸಂಘಿಗಳ ಅಂಕಣದಲ್ಲಿ ಬೆಳೆದ ಅವರ ಸಾಕು ಹುಂಜಗಳನ್ನು ವಿರೋಧಿಸುತ್ತಲೇ ಅದರ ಗುರುಮಠವಾದ ಆರೆಸ್ಸೆಸ್‌ನ ಅಸಲಿ ಧೋರಣೆಯನ್ನು ಅರ್ಥಮಾಡಿಕೊಂಡು ಅದರ ಹಿಡಿತದಿಂದ ಸಂಪೂರ್ಣವಾಗಿ ಹೊರಬರುವ ಅಗತ್ಯವಿದೆ.

ಆದ್ದರಿಂದ ಬುದ್ಧ, ಬಸವ ಮತ್ತು ಅಂಬೇಡ್ಕರರ ಬಗ್ಗೆ ಸಂಘಿಗಳ ಅಸಲಿ ನಿಲುವನ್ನು ಅರಿಯೋಣ:

ಲಿಂಗಾಯತರ ಅಹಿಂದೂವಾದ ದೇಶದ್ರೋಹ-ಗೋಳ್ವಾಲ್ಕರ್

ಉದಾಹರಣೆಗೆ ಬುದ್ಧ, ಬಸವ, ಸಿಖ್, ಲಿಂಗಾಯತಗಳ ಬಗ್ಗೆ ಸಂಘಪರಿವಾರದ ಪಿತಾಮಹರ ಈ ಪ್ರತಿಪಾದನೆಗಳನ್ನು ಗಮನಿಸಿ:

-ಈ ದೇಶವನ್ನು ಉಳಿಸಿದ್ದು ಬ್ರಾಹ್ಮಣರು-ಬುದ್ಧ ದೇಶದ್ರೋಹಿ-ಸಿಖ್, ಜೈನ ಲಿಂಗಾಯತರು ಅದೇ ತಪ್ಪನ್ನು ಮಾಡುತ್ತಿದ್ದಾರೆ.

-ಬ್ರಾಹ್ಮಣವಾದಿ ಬಿಜೆಪಿಯ ಪಿತಾಮಹ ಗೋಳ್ವಾಲ್ಕರ್

ಭಾರತದಲ್ಲಿ ಹುಟ್ಟಿರುವ ಧರ್ಮಗಳೆಲ್ಲಾ ಹಿಂದುತ್ವದ ಕವಲುಗಳೇ. ಅವೆಲ್ಲವೂ ಒಟ್ಟು ಸೇರಿಯೇ ಹಿಂದುತ್ವ, ಸನಾತನ ಮತ್ತು ಭಾರತೀಯತೆ ಎಂದೆಲ್ಲ ಪುಂಗಿ ಬಿಡುವ ಆರೆಸ್ಸೆಸ್ಸಿಗರು ಈ ನೆಲದಲ್ಲಿ ಹುಟ್ಟಿದ ಬ್ರಾಹ್ಮಣೇತರ ಮತ್ತು ಬ್ರಾಹ್ಮಣ ವಿರೋಧಿ ಧರ್ಮ-ಪಂಥ-ದರ್ಶನಗಳನ್ನು ಮಾತ್ರ ದೇಶದ್ರೋಹಿ ಎಂದೇ ಪರಿಗಣಿಸುತ್ತಾರೆ...

ಉದಾಹರಣೆಗೆ ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ಗೋಳ್ವಾಲ್ಕರ್‌ಅವರ ‘Bunch Of Thoughts’ ಬರಹ ಗುಚ್ಛವನ್ನು ಗಮನಿಸಿ.

ಅದರಲ್ಲಿ ಅವರು ಭಾರತದ ಉಳಿವಿಗೆ ಕಾರಣ ಧರ್ಮಸತ್ತಾ ಅರ್ಥಾತ್ ಬ್ರಾಹ್ಮಣ ಸಾಮ್ರಾಜ್ಯ ಎಂದು ಘೋಷಿಸುತ್ತಾರೆ.

ಅದರ ಮೇಲೆ ದಾಳಿಯಾದಾಗಲೆಲ್ಲಾ ಭಾರತದ ಋಷಿ ಮುನಿಗಳು ಕ್ಷತ್ರಿಯರಿಗೆ ಮಾರ್ಗದರ್ಶನ ಮಾಡುವ ಮೂಲಕ ಭಾರತವನ್ನು ಉಳಿಸಿದ್ದಾರೆ ಎಂದು ಬರೆಯುತ್ತಾರೆ.

ಉದಾಹರಣೆಗೆ ರಾಮಾಯಣದ ಕಾಲದಲ್ಲಿ ರಾವಣನಿಂದ ಧರ್ಮ ಸಂಕರ ಆಗುತ್ತಿದ್ದಾಗ ಬ್ರಾಹ್ಮಣ ಸಂತರಾದ ವಿಶ್ವಾಮಿತ್ರ, ವಶಿಷ್ಠ ಮತ್ತು ಅಗಸ್ತ್ಯರು ರಾಮನಿಗೆ ರಾಷ್ಟ್ರ ರಕ್ಷಣೆಯ ಸಂಕಲ್ಪ ಬೋಧಿಸುತ್ತಾರೆ ಮತ್ತು ರಾವಣನನ್ನು ಕೊಲ್ಲಲು ಬಾಣವನ್ನು ಕೂಡ ಅಗಸ್ತ್ಯ ಮುನಿಯೇ ಮಂತ್ರಿಸಿ ಕೊಡುತ್ತಾರೆ ಎಂದು ಹೇಳುತ್ತಾ ರಾಷ್ಟ್ರವೆಂದರೆ ಬ್ರಾಹ್ಮಣ ಎಂದು ಪ್ರತ್ಯಕ್ಷವಾಗಿಯೇ ಬೋಧಿಸುತ್ತಾರೆ...

(Bunch Of Thoughts, Sahitya Sindhu Prakashana, Bangalore, 1996.p.70)

ಮುಂದುವರಿದು....,

ಬೌದ್ಧರ ಕಾಲದಲ್ಲಿಯೂ ಭಾರತಕ್ಕೆ ಇದೇ ಬಗೆಯ ಆಪತ್ತು ಎದುರಾಗಿತ್ತು. ಬೌದ್ಧರು ಭಾರತದ ಧರ್ಮಸತ್ತೆಯನ್ನು ವಿರೋಧಿಸುವ ದೇಶದ್ರೋಹಿಗಳಾಗಿ ಬದಲಾಗಿದ್ದರು ಎಂದು ಬಡಬಡಿಸುತ್ತಾರೆ.

‘The Buddhist sect had turned a traitor to the mother society and the mother religion’ ಎಂದು ಬರೆಯುತ್ತಾರೆ.

ಆಗ ಭಾರತವನ್ನು ಉಳಿಸಿದ್ದು ಶಂಕರಾಚಾರ್ಯರಂತೆ..!

(Bunch Of Thoughts, Sahitya Sindhu Prakashana, Bangalore, 1996.p.70-71)

ಆ ಸಂಕಲನದ ಪುಟ ೬೬-೬೭ರಲ್ಲಿ ಗೋಳ್ವಾಲ್ಕರ್ ಹೀಗೆ ಬರೆಯುತ್ತಾರೆ:

‘‘... ಬೌದ್ಧ ಪಂಥವು ಮಾತೃ ಸಮಾಜಕ್ಕೂ, ಮಾತೃ ದೇಶಕ್ಕೂ ದ್ರೋಹವೆಸಗಿತು. ಅಂತಹ ಸಂಕಷ್ಟಕರ ಸಂದರ್ಭದಲ್ಲಿ ಧರ್ಮವನ್ನು, ಸಮಾಜವನ್ನು ರಕ್ಷಿಸಲು ಬಂದವರು ಯಾರು? ಭಾರತದ ಸಂತ ಪರಂಪರೆಯೇ ಶ್ರೀ ಶಂಕರಾಚಾರ್ಯರ ರೂಪದಲ್ಲಿ ಮತ್ತೆ ಅವತರಿಸಿ ಧರ್ಮವನ್ನು ರಕ್ಷಿಸಿದರು.’’

ಆ ಮೂಲಕ ಒಂದು ಪ್ರತ್ಯೇಕ ಪಂಥವಾಗಿ ಬೌದ್ಧವನ್ನು ಈ ನೆಲದಿಂದ ಅಳಿಸಿಹಾಕಲಾಯಿತು. ಬುದ್ಧನನ್ನು ದೇವರ ಅವತಾರವಾಗಿ ಉಳಿಸಿಕೊಳ್ಳಲಾಯಿತು.

‘ನಾವು ಶಿವನನ್ನು ಆರಾಧಿಸುವುದು ನಿಸ್ಸಂಶಯ. ಆದರೆ ಹಾಗೆಂದು ಆತನ ಸುತ್ತ ಇರುವ ದೆವ್ವಗಳನ್ನು ಅಪ್ಪಿಕೊಳ್ಳುತ್ತೇವೆಯೇ?’

(Bunch Of Thoughts, Vikrama prakasahana, Bangalore Fourth Impression 1968-p.66-67)

ಆರೆಸ್ಸೆಸ್‌ನ ಹಿಂದೂ ಧರ್ಮ ಎಂದರೆ ಕೇವಲ ಬ್ರಾಹ್ಮಣಶಾಹಿಯೇ ಹೊರತು ಬೇರೇನಲ್ಲ ಎಂದು ಇದಕ್ಕಿಂತ ಇನ್ನೆಷ್ಟು ಸ್ಪಷ್ಟವಾಗಿ ಗೋಳ್ವಾಲ್ಕರ್ ತಾನೇ ಹೇಳಲು ಸಾಧ್ಯ? ಅಲ್ಲವೇ?

ಹಾಗೆಯೇ 12ನೇ ಶತಮಾನದಲ್ಲಿ ಬಸವ ಪ್ರಣೀತ ಲಿಂಗಾಯತ, 16-17ನೇ ಶತಮಾನದಲ್ಲಿ ಸಿಖ್ಖರು ಕೂಡ ಭಾರತದ ಧರ್ಮಸತ್ತೆಗೆ -ಅರ್ಥಾತ್ ಬ್ರಾಹ್ಮಣ್ಯಕ್ಕೆ ಸವಾಲೊಡ್ಡಿದ್ದನ್ನು ರಾಷ್ಟ್ರ ಭದ್ರತೆಗೆ ಒದಗಿದ್ದ ಅಪಾಯ ಎಂದು ಬಣ್ಣಿಸುತ್ತಾರೆ... ಮತ್ತು ಸಿಖ್ ಮತ್ತು ಲಿಂಗಾಯತರನ್ನು ಆ ಕಾರಣಕ್ಕೆ ದೇಶದ್ರೋಹಿಗಳ ಪಟ್ಟಿಗೆ ಸೇರಿಸುತ್ತಾರೆ...

ಸ್ವಾತಂತ್ರ್ಯಾನಂತರವೂ ಸಿಖ್ಖರು ಮತ್ತು ಲಿಂಗಾಯತರು ತಾವು ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುತ್ತಿರುವುದು ದೇಶದ್ರೋಹ ಎಂದು ಗೋಳ್ವಾಲ್ಕರ್ ಸ್ಪಷ್ಟವಾದ ಮಾತುಗಳಲ್ಲಿ ಘೋಷಿಸುತ್ತಾರೆ.

ಪಂಜಾಬಿಗಳು ಭಾಷೆಯ ಆಧಾರದಲ್ಲಿ ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟಿದ್ದನ್ನು ದೇಶ ವಿಭಜನೆಗೆ ಹೋಲಿಸುತ್ತಾರೆ...!

Some of the Sikhs, Jains, Lingayats and Aryasamajists declare that they are separate from Hindus. Some prominent Sikh leaders are demanding and agitating for a separate sectarian Sikh State (p.105)

ಮುಂದುವರಿದು ಬ್ರಾಹ್ಮಣ್ಯದ ಸನಾತನವನ್ನು ವಿರೋಧಿಸುವುದು ದೇಶದ್ರೋಹ ಎಂದು ಗೋಳ್ವಾಲ್ಕರ್ ಪ್ರತಿಪಾದಿಸುತ್ತಾರೆ.

2015ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಉತ್ತುಂಗದಲ್ಲಿದ್ದಾಗ ಆರೆಸ್ಸೆಸ್‌ನ ಹಾಲಿ ಸರಸಂಘ ಚಾಲಕ ಭಾಗವತ್ ಕೂಡ ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾನ ಮಾನ ಚಳವಳಿ ದೇಶದೊಳಗೆ ಒಡಕು ಹುಟ್ಟಿಸುವ ತಂತ್ರವೆಂದು ತೀವ್ರವಾಗಿ ವಿರೋಧಿಸಿದ್ದರು.

(https://www.thehindu.com/news/national/karnataka/rss-publicly-criticises-demand-for-religion-status-for-lingayats/article19786856ece)

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕ ಸರಕಾರ ಕಳಿಸಿದ್ದ ಪ್ರಸ್ತಾವವನ್ನು ನಿರಾಕರಿಸಿತ್ತು.

(https://www.thehindu.com/news/national/karnataka/centre-rejects-states-request-to-grant-religious-minority-tag-to-lingayatveerashaiva-community/article257101101.ece)

ಬುದ್ಧನನ್ನು ದೇಶದ್ರೋಹಿ ಎನ್ನುವ ಸಂಘಿಗಳು

ಈ ದೇಶದಲ್ಲಿ ಮೊತ್ತಮೊದಲ ಬಾರಿಗೆ ಸಮಾನತೆಯನ್ನು ಒಂದು ತಾತ್ವಿಕ ದರ್ಶನವಾಗಿ ಸಾರಿದ ಬುದ್ಧನನ್ನು ಅಂಬೇಡ್ಕರ್ ತನ್ನ ಗುರುವೆಂದು ಘೋಷಿಸುತ್ತಾರೆ ಹಾಗೂ ಅಂತಿಮವಾಗಿ ಹಿಂದೂ ಧರ್ಮವನ್ನು ತೊರೆದು ೧೯೫೬ರಲ್ಲಿ ಬೌದ್ಧ ಧರ್ಮಕ್ಕೆ ಹೋಗುತ್ತಾರೆ.

ಆದರೆ ಅಂಬೇಡ್ಕರ್ ತನ್ನ ಸೈದ್ಧಾಂತಿಕ ಗುರು ಎಂದು ಮಾನ್ಯ ಮಾಡಿದ ಬುದ್ಧನ ಬಗ್ಗೆ, ತಾವೇ ನಿಜವಾದ ಅಂಬೇಡ್ಕರ್ ಅನುಯಾಯಿಗಳೆಂದು ಹೇಳುವ ಸಂಘಿಗಳ ನಿಲುವೇನಿತ್ತು?

ಇದನ್ನು ಸಂಘಿಗಳ ಪಿತಾಮಹ ತಮ್ಮ ‘Six Glorious Epochs Of Indian History’ ಎಂಬ ತಮ್ಮ ಕೊನೆಯ ಪುಸ್ತಕದಲ್ಲಿ ಬುದ್ಧ ಹಾಗೂ ಬೌದ್ಧ ಧರ್ಮ ಈ ದೇಶದ ಪ್ರಥಮ ದೇಶದ್ರೋಹಿ ಧರ್ಮ ಮತ್ತು ವ್ಯಕ್ತಿ ಎಂದು ಕನಿಷ್ಠ 28 ಸಾರಿ ಹೀಗೆಳೆಯುವ ಮೂಲಕ ಸ್ಪಷ್ಟಪಡಿಸುತ್ತಾರೆ.

‘ಬೌದ್ಧ ಧರ್ಮವು ಜಾತಿ, ಜನಾಂಗ ಅಥವಾ ರಾಷ್ಟ್ರೀಯತೆಗಳ ವ್ಯತ್ಯಾಸಗಳನ್ನೇ ಗುರುತಿಸಲಿಲ್ಲ. ಇಂತಹ ರಾಷ್ಟ್ರದ್ರೋಹಿ, ಭಾರತ ದ್ರೋಹಿ ಚಿಂತನೆಗಳ ಮೂಲಕ ಬೌದ್ಧ ಪ್ರಚಾರಕರು ಭಾರತದ ಜನರನ್ನು ದಾರಿತಪ್ಪಿಸಲು ಪ್ರಾರಂಭಿಸಿದರು’(-ಪು. 60)

‘ಈ ಭಾರತೀಯ ಬೌದ್ಧರ ಇಂತಹ ಅತ್ಯಂತ ಖಂಡನಾರ್ಹ ದ್ರೋಹಪೂರಿತ ಕೃತ್ಯಗಳನ್ನು, ರಾಷ್ಟ್ರೀಯ ಸ್ವಾತಂತ್ರ್ಯವನ್ನು ಕಡೆಗಣಿಸಲು ರೂಪಿಸಿದ ತಂತ್ರಗಳನ್ನು ಮತ್ತು ಬೌದ್ಧ ವಿಹಾರಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ದೇಶದ್ರೋಹೀಕೃತ್ಯಗಳನ್ನು ಎಸಗಲು ದೊರೆಯುತ್ತಿದ್ದ ಬಹಿರಂಗ ಪ್ರಚೋದನೆಗಳನ್ನು ಕಠಿಣವಾಗಿ ನಿಗ್ರಹಿಸಲು ಪುಷ್ಯಮಿತ್ರ ಮತ್ತವರ ದಂಡನಾಯಕರು ಕಾಲದ ಅನಿವಾರ್ಯತೆಯಿಂದಾಗಿ ದೇಶದ್ರೋಹಿ ಕೃತ್ಯಗಳಲ್ಲಿ ಭಾಗವಹಿಸಿದ್ದ ಬೌದ್ಧರನ್ನು ಗಲ್ಲಿಗೇರಿಸಬೇಕಾಯಿತು ಮತ್ತು ದೇಶದ್ರೋಹೀ ಕೃತ್ಯಗಳ ಕೇಂದ್ರವಾಗಿದ್ದ ಬೌದ್ಧವಿಹಾರಗಳನ್ನು ಕೆಡವಿ ನಾಶಗೊಳಿಸಬೇಕಾಯಿತು. ಅದು ಶತ್ರುಗಳ ಜೊತೆ ಕೈಗೂಡಿಸಿದ್ದಕ್ಕಾಗಿ, ದೇಶದ್ರೋಹದ ಅಪರಾಧಕ್ಕಾಗಿ ಮತ್ತು ಭಾರತದ ಸಾಮ್ರಾಜ್ಯ ಮತ್ತು ಸ್ವಾತಂತ್ರ್ಯಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ನೀಡಿದ ಶಿಕ್ಷೆಯಾಗಿತ್ತು. ಆದ್ದರಿಂದ ಅದು ಧಾರ್ಮಿಕ ಕಾರಣಕ್ಕಾಗಿ ನೀಡಿದ ಶಿಕ್ಷೆಯಾಗಿರಲಿಲ್ಲ. ಅದು, ಭಾರತದ ಸಾಮ್ರಾಜ್ಯದ ಆಡಳಿತ ಯಂತ್ರಾಂಗವನ್ನು ನಡೆಸುವ ಅತ್ಯುನ್ನತ ಅಧಿಕಾರ ಸ್ಥಾನದಲ್ಲಿದ್ದವನಾಗಿ ಪುಷ್ಯಮಿತ್ರ ಮಾಡಲೇ ಬೇಕಾದ ಕರ್ತವ್ಯವಾಗಿತ್ತು.’ (ಪು-72)

ಅಂಬೇಡ್ಕರ್‌ಗೆ ಸಹಾಯವೆಂದರೆ ಹಾವಿಗೆ ಹಾಲೆರೆದಂತೆ -ಮೂಂಜೆ

‘‘ಅಂಬೇಡ್ಕರ್‌ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ!’’- ಹಿಂದೂ ಮಹಾಸಭಾ.

1935ರಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮ ತೊರೆಯುತ್ತೇನೆ ಎಂದು ಘೋಷಿಸುವ ತನಕ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳು ಅಸ್ಪಶ್ಯರನ್ನು ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಕಾಂಗ್ರೆಸ್ ನಾಯಕರು ಕೂಡಾ ದಲಿತರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ 1932ರ ದುಂಡು ಮೇಜಿನ ಪರಿಷತ್ತಿನ ಒಪ್ಪಂದಗಳು ಶಾಸನ ಸಭೆಗಳಲ್ಲಿ ಕೋಮುವಾರು ಜನಸಂಖ್ಯಾಧಾರಿತ ಪ್ರಾತಿನಿಧ್ಯವನ್ನು ಘೋಷಿಸಿತೋ ಆಗ ಹಿಂದೂಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾಯಿತು.

ಅಸ್ಪಶ್ಯರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಸಭಾ ಎರಡನ್ನೂ ಸಮಾನವಾಗಿ ಆವರಿಸಿಕೊಂಡಿತ್ತು. ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದುದ್ದು ಸಹ ಹಿಂದೂ ಮಹಾ ಸಭಾದ ಆತಂಕವನ್ನು ಹೆಚ್ಚಿಸಿತು.

ಈ ಅನಿವಾರ್ಯತೆ ಸೃಷ್ಟಿಯಾಗುವ ಕೇವಲ ಎರಡು ವಾರಗಳ ಮುನ್ನವೂ ಹಿಂದೂ ಸಭಾದ ನಾಯಕ ಮೂಂಜೆ ಅವರು ತಮ್ಮ ಡೈರಿಯಲ್ಲಿ ಹೀಗೆ ಬರೆದುಕೊಂಡಿರುತ್ತಾರೆ:

‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ.’’

ಇದು ಹಿಂದೂ ಸಭಾದ ಮೂಂಜೆ ಹಿಂದೂ ಧರ್ಮವನ್ನು ತೊರೆಯುವ ಸನ್ನಾಹದಲ್ಲಿದ್ದ ಮತ್ತು ಇತರ ದಲಿತರಿಗೂ ಪ್ರೇರಣೆ ನೀಡುತ್ತಿದ್ದ ಅಂಬೇಡ್ಕರ್ ಅವರನ್ನು ಗಮನದಲ್ಲಿಟ್ಟುಕೊಂಡು ಹಾಕಿದ ಬೆದರಿಕೆ.

ಹಾಗೆ ನೋಡಿದರೆ 1932ರ ಪೂನಾ ಒಪ್ಪಂದದಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ದಲಿತ ದ್ರೋಹಿ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರು ಒಬ್ಬರು. ಅವರು ಅಸ್ಪಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು:

‘‘....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ. ನಾವು ಅಸ್ಪಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು.’’

(Moonje Diary, Nehru Memorial Museum and Library. ಕೀತ್ ಮೇದೋಕ್ರಾಫ್ಟ್ ಅವರ ‘the Moonje-Ambedkar Pact’ ಎಂಬ ಉಲ್ಲೇಖ)

ವಿಕೃತ ಅಂಬೇಡ್ಕರ್ ಎಂದಿದ್ದ ಸಂಘಿ ಗೋಳ್ವಾಲ್ಕರ್

ಅಷ್ಟು ಮಾತ್ರವಲ್ಲ. ಬ್ರಾಹ್ಮಣಶಾಹಿಯ ದ್ರೋಹವನ್ನು ಬಯಲು ಮಾಡುವ ಅಂಬೇಡ್ಕರ್ ಅವರ ಪ್ರತಿಯೊಂದು ಕ್ರಮವನ್ನು ಸಂಘಿಗಳು ದ್ವೇಷಿಸುತ್ತಾರೆ. ಉದಾಹರಣೆಗೆ 1927ರಲ್ಲಿ ಅಂಬೇಡ್ಕರ್ ಅವರು ಭೀಮಾ ಕೋರೆಗಾಂವ್ ಸ್ತೂಪಕ್ಕೆ ಹೋಗಿ ಅಲ್ಲಿ ಬ್ರಾಹ್ಮಣಶಾಹಿ ಪೇಶ್ವೆಗಳ ವಿರುದ್ಧ ಸಮರ ಹೂಡಿ ಹುತಾತ್ಮರಾದ ದಲಿತ ಯೋಧರಿಗೆ ನಮನ ಸಲ್ಲಿಸುತ್ತಾರೆ ಮತ್ತು ಅದು ಭಾರತದ ಇತಿಹಾಸದಲ್ಲಿ ಆಂತರಿಕ ವಸಾಹತುಶಾಹಿಯಾಗಿರುವ ಬ್ರಾಹ್ಮಣಶಾಹಿಯ ವಿರುದ್ಧ ಹೂಡಿದ ಸ್ವಾತಂತ್ರ್ಯ ಸಂಗ್ರಾಮವೆಂದು ಬಣ್ಣಿಸುತ್ತಾರೆ.

ಆದರೆ ಅಂಬೇಡ್ಕರ್ ಅವರ ಈ ಬ್ರಾಹ್ಮಣಶಾಹಿ ವಿರೋಧದಿಂದ ಕನಲುವ ಸಂಘಪರಿವಾರದ ಸರಸಂಘಚಾಲಕ ಗೋಳ್ವಾಲ್ಕರ್ ಅಂಬೇಡ್ಕರ್ ಅವರ ನಿಲುವನ್ನು ವಿಕೃತಿ ಎಂದು ನಿಂದಿಸುತ್ತಾ ಹೀಗೆ ಬರೆಯುತ್ತಾರೆ.

‘‘...ಹಾಲಿ ಜಾತಿ ವಿಕೃತಿಗಳನ್ನು ಮೀರಿ ಎಲ್ಲರೊಡನೆ ಒಂದುಗೂಡಬೇಕೆಂಬ ಹೊಣೆಗಾರಿಕೆಯು ಕೆಲವೇ ಕೆಲವು ಜಾತಿ ವಿರೋಧಿ ಉತ್ಸಾಹಿಗಳ ಹೃದಯದಲ್ಲಿ ಮಾತ್ರ ಕಂಡುಬರುತ್ತದೆ. ವಾಸ್ತವವಾಗಿ ಜಾತಿ ವಿರೋಧ ಎಂಬುದನ್ನು ಬಹುಪಾಲು ನಾಯಕರು ತಮ್ಮದೇ ಜಾತಿ ಜನರಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಮುಖವಾಡವಾಗಿ ಬಳಸುತ್ತಿದ್ದಾರೆ. ಈ ವಿಷವು ನಮ್ಮ ರಾಜಕಾರಣದಲ್ಲಿ ಎಷ್ಟು ಆಳವಾಗಿ ಹೊಕ್ಕಿಬಿಟ್ಟಿದೆ ಎಂಬುದಕ್ಕೆ ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಪೂನಾದ ಬಳಿ ಬ್ರಿಟಿಷರು ಪೇಶ್ವೆಗಳ ವಿರುದ್ಧ ಗಳಿಸಿದ ಜಯದ ಸ್ಮಾರಕವಾಗಿ 1818ರಲ್ಲಿ ಸ್ಥಾಪಿಸಿರುವ ಒಂದು ವಿಜಯಸ್ತಂಭವಿದೆ. ಒಬ್ಬ ಪ್ರಖ್ಯಾತ ಹರಿಜನ ನಾಯಕರು ಒಮ್ಮೆ ಈ ಸ್ತಂಭದ ಕೆಳಗೆ ತನ್ನ ಜಾತಿಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಬ್ರಾಹ್ಮಣರಾದ ಪೇಶ್ವೆಗಳನ್ನು ಸೋಲಿಸುವಲ್ಲಿ ತಮ್ಮ ಜನರೇ ದೊಡ್ಡ ಪಾತ್ರವನ್ನು ವಹಿಸಿದ್ದರಿಂದ, ಈ ಸ್ತಂಭವು ಬ್ರಾಹ್ಮಣರ ವಿರುದ್ಧ ಹರಿಜನರ ವಿಜಯವನ್ನು ಸೂಚಿಸುವ ಸ್ತಂಭವಾಗಿದೆ ಎಂದು ಅವರು ಹೇಳಿದ್ದರು. ಒಬ್ಬ ದೊಡ್ಡ ನಾಯಕರು ನಮ್ಮ ಗುಲಾಮಗಿರಿಯ ಸಂಕೇತವನ್ನು ನಮ್ಮ ವಿಜಯದ ಸಂಕೇತವೆಂದು ಬಣ್ಣಿಸುವುದನ್ನು ಹಾಗೂ ವಿದೇಶಿಯರ ಗುಲಾಮರಾಗಿ ನಮ್ಮದೇ ಅಣ್ಣತಮ್ಮಂದಿರ ವಿರುದ್ಧ ಸಮರ ನಡೆಸಿದ ಹೀನಾಯ ಕೃತ್ಯವನ್ನು ಒಂದು ಹಿರಿಮೆಯೆಂದು ಬಣ್ಣಿಸುವುದನ್ನು ಕೇಳಿಸಿಕೊಂಡರೆ ಹೃದಯ ಹೆಪ್ಪುಗಟ್ಟುತ್ತದೆ. ಆ ನಾಯಕರ ಕಣ್ಣುಗಳು ದ್ವೇಷದಿಂದ ಎಷ್ಟು ಕುರುಡಾಗಿದೆಯೆಂದರೆ ಆ ಯುದ್ಧದಲ್ಲಿ ಗೆದ್ದವರು ಯಾರು ಮತ್ತು ಸೋತವರು ಯಾರು ಎಂಬುದನ್ನೂ ಕೂಡ ಗುರುತಿಸಲಾಗದಷ್ಟು ಕುರುಡಾಗಿದೆ. ಎಂಥಾ ವಿಕೃತಿ..!’’

Bunch Of Thoughts, ಠಿ.111)

ಅಷ್ಟು ಮಾತ್ರವಲ್ಲ. 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದಾಗ ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ಎಂದು ಸಾವರ್ಕರ್ ಅಂಬೇಡ್ಕರ್ ಅವರನ್ನು ಹೀಗಳೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಸಮಾಲೋಚನೆಯೊಂದಿಗೆ ಪ್ರಕಟವಾಗುತ್ತಿದ್ದ ಪ್ರಬುದ್ಧ ಭಾರತ್ ಪತ್ರಿಕೆಯಲ್ಲಿ ಸಾವರ್ಕರ್ ಅವರ ವೀರ ಎಂಬ ಅಭಿದಾನದ ಔಚಿತ್ಯವನ್ನು ಹಾಗೂ ಅವರ ಶರಣಾಗತಿಯ ಚರಿತ್ರೆಯನ್ನು ನೆನಪಿಸಲಾಗುತ್ತದೆ.

(https://thewire.in/politics/rss-ambedkar-camaraderie-fictional-narratives)

ಇದು ಆರೆಸ್ಸೆಸ್-ಬಿಜೆಪಿಗಳ ನಿಜಸ್ವರೂಪ.

ಅವರ ಹಿಂದುತ್ವ ಎಂದರೆ ಬ್ರಾಹ್ಮಣತ್ವ.

ಅವರ ಹಿಂದುತ್ವ ಎಂದರೆ ಬಸವ ದ್ವೇಷಿ, ಬುದ್ಧ ದ್ವೇಷಿ, ಅಂಬೇಡ್ಕರ್ ದ್ವೇಷಿ..

ಹೀಗಾಗಿ ಸಂಘದ ಸಾಕು ಹುಂಜಗಳನ್ನು ಕಟ್ಟಿಹಾಕುತ್ತಲೇ, ಅದರ ಸೃಷ್ಟಿಕರ್ತ ಕುತಂತ್ರಿಗಳನ್ನು ಮಟ್ಟಹಾಕಬೇಕು. ಬುದ್ಧ, ಬಸವ, ಅಂಬೇಡ್ಕರರ ಹಾಗೂ ಕಾಯಕ ಜೀವಿಗಳ ಕೂಡಲಸಂಗಮವಾಗಬೇಕು.

(ಅಂಕಣಕಾರರು ಹಿರಿಯ ಚಿಂತಕರು)

Tags

BuddhaBasavaAmbedkarSocialJustice
share
ಶಿವಸುಂದರ್
ಶಿವಸುಂದರ್

ಕರ್ನಾಟಕದ ಪ್ರಗತಿಪರ ಚಿಂತಕ, ಬರಹಗಾರ, ಹೋರಾಟಗಾರ

Next Story
X