Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಮಾನ
  5. ಕರ್ನಾಟಕದ ಸಂಕಷ್ಟಗಳು

ಕರ್ನಾಟಕದ ಸಂಕಷ್ಟಗಳು

ರಾಮಚಂದ್ರ ಗುಹಾರಾಮಚಂದ್ರ ಗುಹಾ11 Jan 2026 11:55 AM IST
share
ಕರ್ನಾಟಕದ ಸಂಕಷ್ಟಗಳು

ಸ್ಥಳೀಯ ಪತ್ರಿಕೆಗಳ ವರದಿಗಳನ್ನು ಪರಿಶೀಲಿಸಿದರೆ, ರಾಜ್ಯದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ಈ ವಿಷಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ವಿವಾದದಷ್ಟು ಗಮನವನ್ನು ಸೆಳೆಯುವುದಿಲ್ಲ. ವಾಸ್ತವವಾಗಿ, ಕೆಲವೊಮ್ಮೆ ಈ ಇಬ್ಬರೂ ಬೇರೆ ಯಾವುದರಲ್ಲೂ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಸಿದ್ದರಾಮಯ್ಯನವರಿಗೆ ಒಮ್ಮೆ ರಾಜ್ಯದ ಬಗ್ಗೆ ಒಂದು ದೃಷ್ಟಿಕೋನವಿತ್ತು; ದಾರಿಯುದ್ದಕ್ಕೂ ಅವರು ಅದನ್ನು ಕಳೆದುಕೊಂಡಿದ್ದಾರೆ. ಶಿವಕುಮಾರ್ ಅವರ ವಿಷಯದಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಅವರ ಹತಾಶ ಬಯಕೆಯ ಹೊರತಾಗಿ, ಅವರಿಗೆ ಆಸಕ್ತಿ ತೋರುವ ಏಕೈಕ ವಿಷಯವೆಂದರೆ ಆ ಕೆಟ್ಟ ಕಲ್ಪನೆಯ ಮತ್ತು ಅತ್ಯಂತ ದುಬಾರಿಯಾದ ಸುರಂಗ ಯೋಜನೆ.

ಇತ್ತೀಚಿನ ವಾರಗಳಲ್ಲಿ, ನನ್ನ ತವರು ರಾಜ್ಯವಾದ ಕರ್ನಾಟಕದ ಪತ್ರಿಕೆಗಳು ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರದ ಜಗಳ ಕುರಿತು ಹಲವಾರು ವರದಿಗಳನ್ನು ಪ್ರಕಟಿಸಿವೆ. ಮೇ 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ, ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮೊದಲ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಹೇಳಿತ್ತು ಮತ್ತು ನಂತರ ಡಿ.ಕೆ. ಶಿವಕುಮಾರ್ ಅವರು ಹುದ್ದೆ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರ ಅನುಯಾಯಿಗಳು ಇದನ್ನು ವಿರೋಧಿಸುತ್ತಾರೆ ಮತ್ತು ತಮ್ಮ ನಾಯಕನೇ ಪೂರ್ಣ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುವುದಾಗಿ ಹೇಳುತ್ತಾರೆ. ಆ ಅರ್ಧದಾರಿ ತಲುಪಿದಾಗ ಮತ್ತು ಹೈಕಮಾಂಡ್ ಮೌನವಾಗಿದ್ದಾಗ, ಉಪಾಹಾರ, ಊಟ ಮತ್ತು ಭೋಜನ ಸಭೆಗಳ ಸರಣಿ ನಡೆದವು. ಅಲ್ಲಿ ಪ್ರತಿಯೊಬ್ಬ ನಾಯಕರು ಸ್ಥಳೀಯ ಶಾಸಕರು, ಜಾತಿ ಸಂಸ್ಥೆಗಳ ಮುಖ್ಯಸ್ಥರ ಬಳಿ ತಮ್ಮನ್ನು ಬೆಂಬಲಿಸಲು ಕೇಳಿದರು.

ಈ ಅಂಕಣವು ನಾಯಕತ್ವದ ವಿವಾದವನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಕಾರ್ಯಕ್ಷಮತೆಯ ಬಗ್ಗೆ ನೋಡುತ್ತದೆ. ಮೊದಲು ಕಳೆದ ವಿಧಾನಸಭಾ ಚುನಾವಣೆಗೆ ಹಿಂದಿನ ತಿಂಗಳುಗಳನ್ನು ನೆನಪಿಸಿಕೊಳ್ಳೋಣ. ಆಗ ಹಿಜಾಬ್, ಹಲಾಲ್, ‘ಲವ್ ಜಿಹಾದ್’ ಮುಂತಾದ ವಿಷಯಗಳು ಹೆಚ್ಚು ಸುದ್ದಿಯಾಗುತ್ತಿದ್ದವು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿತ್ತು ಮತ್ತು ಎಂದಿನಂತೆ ಕೋಮು ಧ್ರುವೀಕರಣವನ್ನು ಪ್ರಚೋದಿಸುವ ಮೂಲಕ ಮರುಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತು. ಅದರ ಆಡಳಿತಾತ್ಮಕ ಕಾರ್ಯಕ್ಷಮತೆ ದುರ್ಬಲವಾಗಿತ್ತು; ಇದನ್ನು ತಿಳಿದೂ, ರಾಜ್ಯದ ಮುಸ್ಲಿಮರನ್ನು ರಾಕ್ಷಸೀಕರಿಸುವ ಮೂಲಕ, ಹಿಂದೂಗಳ ಬಲದಿಂದ ಮರುಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ನೆಲೆಯನ್ನು ಹೇಗಾದರೂ ಮರಳಿ ಪಡೆಯಬಹುದು ಎಂದು ಅದು ಆಶಿಸಿತು.

ಕರ್ನಾಟಕದ ಅದೃಷ್ಟದಿಂದಾಗಿ ಅದರ ಈ ತಂತ್ರವು ವಿಫಲವಾಯಿತು. ಕಾಂಗ್ರೆಸ್ ಚುನಾವಣೆಯಲ್ಲಿ ಗಣನೀಯ ಬಹುಮತದಿಂದ ಗೆದ್ದಿತು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸರಕಾರದ ಅಧಿಕಾರಾವಧಿಯ ಒಂದು ನಿರಾಕರಿಸಲಾಗದ ವೈಶಿಷ್ಟ್ಯವೆಂದರೆ, ಕೋಮು ಉದ್ವಿಗ್ನತೆಯಲ್ಲಿನ ಗಮನಾರ್ಹ ಇಳಿಕೆ. ರಾಜ್ಯವು ಮುಸ್ಲಿಮರ ದೊಡ್ಡ ಜನಸಂಖ್ಯೆಯನ್ನು (ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ. 13) ಹೊಂದಿದೆ, ಜೊತೆಗೆ ಅಲ್ಪಸಂಖ್ಯೆಯ ಕ್ರಿಶ್ಚಿಯನ್ನರನ್ನು ಹೊಂದಿದೆ ಮತ್ತು ಈ ಎರಡೂ ಸಮುದಾಯಗಳು, ನಿಸ್ಸಂದೇಹವಾಗಿ, ಮೇ 2023ರಿಂದ ಅವರು ಅದಕ್ಕೂ ಹಿಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಇದ್ದುದಕ್ಕಿಂತ ಹೆಚ್ಚು ಸುರಕ್ಷಿತರೆಂದು ಭಾವಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ಇತರ ವಿಷಯಗಳ ಜೊತೆಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಯಜಮಾನಿಗೆ ನಗದು ವರ್ಗಾವಣೆ, ಹೆಚ್ಚುವರಿ ಆಹಾರ ಧಾನ್ಯಗಳು, ಪ್ರತೀ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ವಿದ್ಯಾವಂತ ಆದರೆ ನಿರುದ್ಯೋಗಿ ಯುವಕರಿಗೆ ಸ್ಟೈಫಂಡ್ ಎಂಬ ಐದು ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಯೋಜನೆಗಳ ಬಗ್ಗೆ ಇನ್ನೂ ಪೂರ್ಣ ಪ್ರಮಾಣದ ವಿದ್ವತ್ಪೂರ್ಣ ಅಧ್ಯಯನಗಳನ್ನು ನಡೆಸಲಾಗಿಲ್ಲವಾದರೂ, ಸ್ವತಂತ್ರ ವೀಕ್ಷಕರ ವರದಿಗಳು ಸಾಮಾಜಿಕ ಸುರಕ್ಷತಾ ಜಾಲವನ್ನು ಸೃಷ್ಟಿಸುವಲ್ಲಿ ಅವರು ಸಾಧಾರಣ ಯಶಸ್ಸನ್ನು ಕಂಡಿರಬಹುದು ಎಂದು ಸೂಚಿಸುತ್ತವೆ.

ಕರ್ನಾಟಕದ ಸಿದ್ದರಾಮಯ್ಯ ಸರಕಾರದ ಸಾಧನೆಗಳು ಇವು; ಸಾಪೇಕ್ಷ ಕೋಮು ಶಾಂತಿ ಮತ್ತು ಉದ್ದೇಶಿತ ಕಲ್ಯಾಣ. ನನ್ನ ತವರು ರಾಜ್ಯದಲ್ಲಿ ಮೂವತ್ತೊಂದು ತಿಂಗಳ ಕಾಂಗ್ರೆಸ್ ಆಡಳಿತದ ಯಾವುದೇ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಯೋಚಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟ. ರಾಜಧಾನಿ ಬೆಂಗಳೂರಿನಲ್ಲಿ ಆಡಳಿತಾತ್ಮಕ ಉದಾಸೀನತೆ ಮತ್ತು ಅಸಮರ್ಥತೆಯ ಚಿಹ್ನೆಗಳು ವಿಶೇಷವಾಗಿ ಗೋಚರಿಸುತ್ತವೆ. ಅಲ್ಲಿ ರಸ್ತೆಗಳ ಹದಗೆಡುತ್ತಿರುವ ಪರಿಸ್ಥಿತಿಗಳು ಮತ್ತು ನಂತರದ ಸಂಚಾರ ದಟ್ಟಣೆಗಳು ನಗರದ ನಿವಾಸಿಗಳಿಗೆ ಹೆಚ್ಚಿನ ತೊಂದರೆಯನ್ನುಂಟುಮಾಡಿವೆ. ಭಾರತದ ಐಟಿ ಕ್ರಾಂತಿಯ ಪ್ರದರ್ಶನ ಕೇಂದ್ರವಾಗಿರುವ ನಗರವು ತನ್ನ ಮೂಲಸೌಕರ್ಯಗಳ ಕುಸಿತದಿಂದಾಗಿ ಹೇಗೆ ನಿಶ್ಚಲತೆ ಮತ್ತು ಕೊಳೆಯುವಿಕೆಯನ್ನು ಎದುರಿಸುತ್ತಿದೆ ಎಂಬುದರ ಕುರಿತು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಪತ್ರಿಕೆಗಳು ಸರಣಿ ವರದಿಗಳನ್ನು ಪ್ರಕಟಿಸಿವೆ.

ಸಾರ್ವಜನಿಕ ಆಕ್ರೋಶವನ್ನು ಎದುರಿಸುತ್ತಿರುವ ಬೆಂಗಳೂರಿನ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ, ವಿಮಾನ ನಿಲ್ದಾಣ ಇರುವ ನಗರದ ಉತ್ತರ ಭಾಗವನ್ನು ಪ್ರಮುಖ ಸಾಫ್ಟ್‌ವೇರ್ ಮತ್ತು ಬಯೋಟೆಕ್ ಸಂಸ್ಥೆಗಳು ನೆಲೆಗೊಂಡಿರುವ ದಕ್ಷಿಣ ಭಾಗದೊಂದಿಗೆ ಸಂಪರ್ಕಿಸಲು ಭೂಗತ ಸುರಂಗವನ್ನು ನಿರ್ಮಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಇದು ಇಂಜಿನಿಯರ್‌ಗಳು ಮತ್ತು ವೈಟ್‌ಕಾಲರ್ ಕೆಲಸಗಾರರ ಸಂಚಾರವನ್ನು ಸುಗಮಗೊಳಿಸುತ್ತದೆ ಮತ್ತು ನಾಗರಿಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೂ, ಯಾವುದೇ ಸರಕಾರಿ ಕಾರ್ಯಕ್ರಮವು ಬಿಳಿ ಆನೆ ಎಂಬ ಹೆಸರನ್ನು ಪಡೆಯಲು ಅರ್ಹವಾಗಿದ್ದರೆ, ಅದು ಇದೇ ಆಗಿದೆ. ದೇಶದ ಪ್ರಮುಖ ಸಾರಿಗೆ ತಜ್ಞರು ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಉಪಮುಖ್ಯಮಂತ್ರಿಯ ಯೋಜನೆ ಅವಿವೇಕತನ ಮತ್ತು ಕಾರ್ಯಸಾಧ್ಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಏಕೆಂದರೆ ಅದು ನಗರದ ಸಂಕೀರ್ಣ ಭೂಸ್ಥಿತಿಯನ್ನು ಲೆಕ್ಕಿಸುವುದಿಲ್ಲ ಮತ್ತು ಖಾಸಗಿ ವಾಹನಗಳ ಮಾಲಕರಿಗೆ ಅನುಚಿತವಾಗಿ ಅನುಕೂಲಕರವಾಗಿದೆ. ನಗರದ ಸಾರಿಗೆ ಅಡಚಣೆಗಳನ್ನು ಪರಿಹರಿಸಲು ಉತ್ತಮ ಆಯ್ಕೆಯೆಂದರೆ, ಅಸ್ತಿತ್ವದಲ್ಲಿರುವ ಮೆಟ್ರೊ ವ್ಯವಸ್ಥೆಯೊಂದಿಗೆ ಸಂಯೋಜಿಸಬಹುದಾದ ಬಸ್‌ಗಳ ದೊಡ್ಡ ಸಮೂಹವನ್ನು ಹೊಂದಿರುವುದು ಎಂದು ಈ ತಜ್ಞರು ವಾದಿಸುತ್ತಾರೆ. ಗಮನಾರ್ಹವಾಗಿ, ಉಪ ಮುಖ್ಯಮಂತ್ರಿ ಈ ತಜ್ಞರನ್ನು ಭೇಟಿ ಮಾಡಲು ಸಹ ನಿರಾಕರಿಸಿದ್ದಾರೆ ಮತ್ತು ಸಾರ್ವಜನಿಕ ಖಜಾನೆಗೆ ಭಾರೀ ವೆಚ್ಚದಲ್ಲಿ ತಮ್ಮ ಕೆಟ್ಟ ಕಲ್ಪನೆಯ ಸುರಂಗ ಯೋಜನೆಯನ್ನು ಮುಂದುವರಿಸಲು ಯೋಜಿಸಿದ್ದಾರೆ.

ಶಿವಕುಮಾರ್ ಅವರ ರಾಜಕೀಯವು ಮಹತ್ವಾಕಾಂಕ್ಷೆ ಮತ್ತು ಆತುರದಿಂದ ಕೂಡಿದೆ. ಏತನ್ಮಧ್ಯೆ, ಒಂದು ಕಾಲದಲ್ಲಿ ಆತ್ಮವಿಶ್ವಾಸ ಮತ್ತು ಸಂಯಮದ ರಾಜಕಾರಣಿಯಾಗಿದ್ದ, ನಿಜವಾದ ಜನಸಾಮಾನ್ಯರ ನೆಲೆಯಿಂದ ಬರುವ ಅಧಿಕಾರವನ್ನು ಹೊಂದಿದ್ದ ಸಿದ್ದರಾಮಯ್ಯ ಈಗ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವ ಮತ್ತು ರಾಜ್ಯದ ಇತಿಹಾಸದಲ್ಲಿ ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿಯಾಗುವತ್ತ ಗಮನಹರಿಸಿದ್ದಾರೆ. ಈ ಇಬ್ಬರ ನಡುವಿನ ಈ ಜಗಳವು ರಾಜ್ಯದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅತ್ಯಂತ ಸಮರ್ಥರಾಗಿರುವ ಹಲವಾರು ಕ್ಯಾಬಿನೆಟ್ ಮಂತ್ರಿಗಳಿದ್ದರೂ, ಅವರು ತಮ್ಮ ಖಾತೆಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರು ಇಬ್ಬರು ಉನ್ನತ ನಾಯಕರ ನಡುವಿನ ಘರ್ಷಣೆಯಲ್ಲಿದ್ದಾರೆ.

ಪಕ್ಷದ ರಾಷ್ಟ್ರೀಯ ನಾಯಕತ್ವದ ತೀವ್ರ ಅಸಮರ್ಥತೆಯಿಂದಾಗಿ ಕರ್ನಾಟಕ ಕಾಂಗ್ರೆಸ್‌ನ ಸಮಸ್ಯೆಗಳು ಜಟಿಲವಾಗಿವೆ. ಇದು ಅವರು ಬಹು ಅಧಿಕಾರದ ಕೇಂದ್ರಗಳಾಗಿರುವುದರಿಂದ ಉಂಟಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ತಾಂತ್ರಿಕವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಮತ್ತು ಅವರು ಸ್ವತಃ ಕರ್ನಾಟಕದವರಾಗಿರುವುದರಿಂದ ಮುಖ್ಯಮಂತ್ರಿ ಹುದ್ದೆಯ ಕುರಿತು ಹೈಕಮಾಂಡ್‌ನ ಸ್ಥಾನದಲ್ಲಿ ಅವರಿಗೆ ನಿರ್ಣಾಯಕ ಪಾತ್ರವಿದೆ ಎಂದು ನಿರೀಕ್ಷಿಸಬಹುದು. ಆದರೂ, ಖರ್ಗೆ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಅತ್ಯಂತ ನಿಷ್ಠರಾಗಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯವನ್ನು ಸಹ ಕೇಳಲು ಇಷ್ಟಪಡುತ್ತಾರೆ ಎಂದು ತೋರುತ್ತದೆ. ಹಾಗಾಗಿ ಹೊಸದಿಲ್ಲಿಯಲ್ಲಿ ನಾಲ್ಕು ವಿಭಿನ್ನ ಅಧಿಕಾರ ಮೂಲಗಳಿವೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮತ್ತು ಅವರ ಬೆಂಬಲಿಗರು ಅವರಿಗೆ ಮನವಿ ಮಾಡಬೇಕು. ರಾಜ್ಯ ಕಾಂಗ್ರೆಸ್ ಆ ಸ್ಥಿತಿಯಲ್ಲಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಮೊದಲೇ ಮಾತನಾಡಿದ್ದೇನೆ. ಆದರೂ, ನಗರವು ರಾಜ್ಯದ ಐದನೇ ಒಂದು ಭಾಗಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಗುರುತಿಸುವುದು ಮುಖ್ಯ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಅದರ ರಾಜಧಾನಿಯ ಸಾರಿಗೆ ಮತ್ತು ನೀರಿನ ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತ ಹೆಚ್ಚಿನ ಅಗತ್ಯವಿದೆ. ಇದರಲ್ಲಿ ಆಧುನಿಕ ಆರ್ಥಿಕ ಚಟುವಟಿಕೆಯ ಇತರ ಕೇಂದ್ರಗಳನ್ನು ರಚಿಸುವುದೂ ಸೇರಿದೆ. ಆದ್ದರಿಂದ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಮಹಾರಾಷ್ಟ್ರದಂತೆ, ಕರ್ನಾಟಕವು ದೊಡ್ಡ ಪ್ರಮಾಣದ ಕೈಗಾರಿಕಾ/ವಾಣಿಜ್ಯ ಉದ್ಯೋಗ ಮತ್ತು ತೆರಿಗೆ ಆದಾಯವನ್ನು ಉತ್ಪಾದಿಸಲು ಒಂದೇ ನಗರವನ್ನು ಅವಲಂಬಿಸಿಲ್ಲ ಮತ್ತು ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ಕೃಷಿಯನ್ನು ಅವಲಂಬಿಸಿರುವುದರಿಂದ, ರೈತರಿಗೆ ನೀರಾವರಿ ಮತ್ತು ಸಾಲವನ್ನು ಒದಗಿಸುವುದರ ಬಗ್ಗೆ ಗಮನ ಕೋಡಬೆಕಾಗುತ್ತದೆ ಮತ್ತು ಅವರನ್ನು ಹೆಚ್ಚು ಸುಸ್ಥಿರ ಅಭ್ಯಾಸಗಳತ್ತ ತಿರುಗಿಸುವುದು ಅಗತ್ಯವಾಗುತ್ತದೆ. ಇದಲ್ಲದೆ, ನಗರ ಮತ್ತು ಗ್ರಾಮೀಣ ನಿವಾಸಿಗಳಿಗೆ ಸಮಾನವಾಗಿ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಸುಧಾರಿಸಲು ಕರ್ನಾಟಕ ಸರಕಾರವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಕೊನೆಯದಾಗಿ, ರಾಜ್ಯದ ಅಸಾಧಾರಣ ಶ್ರೀಮಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದರೆ, ಕನಿಷ್ಠ ಉದ್ಯೋಗ ಮತ್ತು ಆದಾಯ ಎರಡನ್ನೂ ಸೃಷ್ಟಿಸುವ ಅದರ ಅಗಾಧ ಸಾಮರ್ಥ್ಯದಿಂದಾಗಿ ಪ್ರವಾಸೋದ್ಯಮವು ಸರಕಾರಕ್ಕೆ ಆಸಕ್ತಿಯ ಪ್ರಮುಖ ಕ್ಷೇತ್ರವಾಗಿರಬೇಕು.

ಆದರೆ ಸ್ಥಳೀಯ ಪತ್ರಿಕೆಗಳ ವರದಿಗಳನ್ನು ಪರಿಶೀಲಿಸಿದರೆ, ರಾಜ್ಯದ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ಈ ವಿಷಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ವಿವಾದದಷ್ಟು ಗಮನವನ್ನು ಸೆಳೆಯುವುದಿಲ್ಲ. ವಾಸ್ತವವಾಗಿ, ಕೆಲವೊಮ್ಮೆ ಈ ಇಬ್ಬರೂ ಬೇರೆ ಯಾವುದರಲ್ಲೂ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಸಿದ್ದರಾಮಯ್ಯನವರಿಗೆ ಒಮ್ಮೆ ರಾಜ್ಯದ ಬಗ್ಗೆ ಒಂದು ದೃಷ್ಟಿಕೋನವಿತ್ತು; ದಾರಿಯುದ್ದಕ್ಕೂ ಅವರು ಅದನ್ನು ಕಳೆದುಕೊಂಡಿದ್ದಾರೆ. ಶಿವಕುಮಾರ್ ಅವರ ವಿಷಯದಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಅವರ ಹತಾಶ ಬಯಕೆಯ ಹೊರತಾಗಿ, ಅವರಿಗೆ ಆಸಕ್ತಿ ತೋರುವ ಏಕೈಕ ವಿಷಯವೆಂದರೆ ಆ ಕೆಟ್ಟ ಕಲ್ಪನೆಯ ಮತ್ತು ಅತ್ಯಂತ ದುಬಾರಿಯಾದ ಸುರಂಗ ಯೋಜನೆ.

ಗಮನಾರ್ಹವಾಗಿ, ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಈ ದೊಡ್ಡ ಪ್ರಶ್ನೆಗಳು ವಿರೋಧ ಪಕ್ಷಗಳಲ್ಲೂ ಕಳವಳ ಮೂಡಿಸುವುದಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತ್ತು ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್‌ರಂತಹ ಪ್ರಭಾವಿ ಮುಖ್ಯಮಂತ್ರಿಗಳು ಇಟ್ಟ ಮಾದರಿಯನ್ನು ಅನುಸರಿಸಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಹೆಚ್ಚು ಹೆಚ್ಚು ಜನಾಂಗೀಯವಾಗಿದೆ. ಇದು ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದ್ವೇಷ ಮತ್ತು ಅನುಮಾನದಿಂದ ಪ್ರೇರಿತವಾಗಿದೆ. ಕರ್ನಾಟಕದ ಮತದಾರರಿಗೆ ನೀಡುವ ಯಾವುದೇ ಸಕಾರಾತ್ಮಕ ದೃಷ್ಟಿಕೋನವನ್ನು ಬಿಜೆಪಿ ಹೊಂದಿಲ್ಲ ಮತ್ತು ಜೆಡಿಎಸ್ ವಿಷಯದಲ್ಲಿ, ಅದು ಎಚ್.ಡಿ. ದೇವೇಗೌಡ ಮತ್ತು ಅವರ ಕುಟುಂಬದವರ ಸ್ವಾರ್ಥವನ್ನು ಉತ್ತೇಜಿಸಲು ಮಾತ್ರ ಅಸ್ತಿತ್ವದಲ್ಲಿದೆ.

2013 ಮತ್ತು 2018ರ ನಡುವಿನ ತಮ್ಮ ಮೊದಲ ಅವಧಿಯಲ್ಲಿ, ಸಿದ್ದರಾಮಯ್ಯ ಸ್ಥಿರ ಮತ್ತು ಸಮಂಜಸವಾಗಿ ಸಮರ್ಥ ಆಡಳಿತವನ್ನು ಒದಗಿಸಿದರು. ಅವರ ಎರಡನೇ ಅವಧಿ ಅಲೆದಾಡುವಿಕೆ, ಗೊಂದಲ ಮತ್ತು ತೀವ್ರವಾದ ಗುಂಪು ಪೈಪೋಟಿಯಿಂದ ಕೂಡಿದೆ. ಇತರ ಸಂದರ್ಭಗಳಲ್ಲಿ ನಾಗರಿಕರು ವಿರೋಧ ಪಕ್ಷಗಳನ್ನು ಒಟ್ಟಾಗಿ ಕೆಲಸ ಮಾಡಲು ಕೇಳಿಕೊಳ್ಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ, ಮೇ 2028ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ, ಅದು ರಚಿಸುವ ಯಾವುದೇ ಸರಕಾರವು ಈಗಿನದಕ್ಕಿಂತ ಅಸಮರ್ಥವಾಗಿರುತ್ತದೆ ಮತ್ತು ಹೆಚ್ಚು ದುರುದ್ದೇಶಪೂರಿತವಾಗಿರುತ್ತದೆ. ಆದರೂ, ಮುಂದಿನ ಚುನಾವಣೆಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯವಿದೆ. ಕರ್ನಾಟಕ ಕಾಂಗ್ರೆಸ್ ಮರುಸಂಘಟಿಸಲು, ಮರುಕೇಂದ್ರೀಕರಿಸಲು ಮತ್ತು ರಾಜ್ಯ ಮತ್ತು ಅದರ ನಾಗರಿಕರಿಗೆ ತಾನು ಬಯಸುವ ಮತ್ತು ಅರ್ಹವಾದ ರೀತಿಯ ಆಡಳಿತವನ್ನು ಒದಗಿಸಲು ಸಾಕಷ್ಟು ಸಮಯವಿದೆ. ಕಾಂಗ್ರೆಸ್ ನಿಜವಾಗಿಯೂ ಇದನ್ನು ಮಾಡಬಹುದೇ ಎಂಬುದು ಬೇರೆ ವಿಷಯ.

Tags

Karnataka's troubles
share
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
Next Story
X