Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಹೋರಾಡುವ...

ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಹೋರಾಡುವ ದಿಟ್ಟ ಮಹಿಳೆ: ಯಾಸ್ಮೀನ್ ರಶೀದ್

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ28 Jan 2024 9:40 AM IST
share
ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಹೋರಾಡುವ ದಿಟ್ಟ ಮಹಿಳೆ: ಯಾಸ್ಮೀನ್ ರಶೀದ್

ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಸುಸ್ಥಿರತೆ ಸಂಶೋಧನೆ ಸೇರಿದಂತೆ ಮಲೇಶ್ಯದಲ್ಲಿ ಪರಿಸರ ನಿರ್ವಹಣೆ, ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿ 20 ವರ್ಷಗಳಿಂದ ಯಾಸ್ಮೀನ್ ರಶೀದ್ ಕೆಲಸ ಮಾಡಿದ್ದಾರೆ. ಅವರು ಮಲೇಶ್ಯದ ಪರಿಸರ ಸಂರಕ್ಷಣೆಗೆ ಮೀಸಲಾದ ಸರಕಾರೇತರ ಸಂಸ್ಥೆ

ಎಕೋನೈಟ್ಸ್ ನ ಸ್ಥಾಪಕರೂ ಆಗಿದ್ದಾರೆ. ಎಕೋನೈಟ್ಸ್ ಎಂದರೆ ಪರಿಸರ ಬದಲಾವಣೆಯ ಸೈನ್ಯ ಎಂದರ್ಥ. ಹೆಚ್ಚು ಸಮರ್ಥನೀಯ ಭವಿಷ್ಯವನ್ನು ಸೃಷ್ಟಿಸಲು ಜನರು ತಮ್ಮನ್ನು ತಾವು ಸಜ್ಜುಗೊಳಿಸಲು ಸಶಕ್ತರನ್ನಾಗಿಸುವುದು ಯಾಸ್ಮೀನ್ ಅವರ ಉದ್ದೇಶ.

ನಾವು ಚಿಕ್ಕವರಿದ್ದಾಗ ನಮ್ಮೂರಿನಲ್ಲಿ ಚರಂಡಿ ವ್ಯವಸ್ಥೆ ಇರಲೇ ಇಲ್ಲ. ಮನೆಯ ಮುಂದಿನ ಅಂಗಳವೆಲ್ಲವೂ ಮಣ್ಣಿನಿಂದ ಕೂಡಿರುತ್ತಿತ್ತು. ಅಂದು ನೀರಿನ ಬಳಕೆ ಮಿತವಾಗಿದ್ದ ಕಾರಣ ಅನಗತ್ಯ ನೀರು ಚರಂಡಿ ಪಾಲಾಗುತ್ತದೆ ಎಂಬ ಮಾತೇ ಇರಲಿಲ್ಲ. ಒಂದು ವೇಳೆ ಯಾರಾದರೂ ಹೆಚ್ಚಿಗೆ ನೀರು ಬಳಸಿದರೆ ಆ ನೀರು ಅವರ ಮನೆಯ ಬಳಿಯ ಮಣ್ಣಿನಲ್ಲಿ ಇಂಗುತ್ತಿತ್ತು. ಮುಂದಕ್ಕೆ ಹರಿದು ಹೋಗುತ್ತಲೇ ಇರಲಿಲ್ಲ. ಮಳೆಗಾಲದಲ್ಲಿ ಮಾತ್ರ ನೀರು ಹರಿಯಲು ಒಂದು ವ್ಯವಸ್ಥಿತ ಮಾರ್ಗ ಇಲ್ಲದೆ ಅದು ಎಲ್ಲೆಡೆ ಹರಿದಾಡುತ್ತಿತ್ತು. ನಮ್ಮೂರಿಗೆ ಚರಂಡಿ ಬಂದು 20-25 ವರ್ಷಗಳಾಗಿರಬಹುದು. ಆಗಿನ ಚರಂಡಿ ಬಳಕೆಗೂ ಈಗಿನ ಚರಂಡಿ ಬಳಕೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಅಂದಿನ ಚರಂಡಿಯಲ್ಲಿ ತ್ಯಾಜ್ಯ ನೀರು ಮಾತ್ರ ಕಾಣುತ್ತಿತ್ತು. ಆದರೆ ಇಂದಿನ ಚರಂಡಿಯಲ್ಲಿ ಪ್ಲಾಸ್ಟಿಕ್‌ನ ತ್ಯಾಜ್ಯ ತುಂಬಿಕೊಂಡಿರುತ್ತದೆ. ಈ ತ್ಯಾಜ್ಯವು ನೀರನ್ನು ಮುಂದಕ್ಕೆ ಹರಿಯಲು ಬಿಡದೇ ಕಟ್ಟಿಕೊಳ್ಳುತ್ತದೆ. ಆಗ ನೀರು ಚರಂಡಿಯಲ್ಲಿ ಬಿಟ್ಟು ಬೇರೆ ಕಡೆ ಅಂದರೆ ರಸ್ತೆಗೆ ಹರಿಯುವುದೇ ಹೆಚ್ಚು.

ಚರಂಡಿ ಸಮಸ್ಯೆ ಕೇವಲ ಒಂದು ಹಳ್ಳಿ ಅಥವಾ ಒಂದು ನಗರ ಅಥವಾ ಒಂದು ದೇಶದ ಸಮಸ್ಯೆಯಲ್ಲ. ಇದು ಜಾಗತಿಕ ಸಮಸ್ಯೆಯಾಗಿದೆ. ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯಂತೂ ಕಳವಳಕಾರಿಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಕೇವಲ ಚರಂಡಿಗೆ ಮಾತ್ರ ಸೀಮಿತವಾಗಿದ್ದರೆ ಅಷ್ಟೊಂದು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿರಲಿಲ್ಲ. ಆದರೆ ಅದು ನಮ್ಮ ಜೀವಜಲದ ಆಗರಗಳಾದ ನದಿ, ಸಾಗರಗಳನ್ನೂ ತಲುಪಿರುವುದು ಆತಂಕಕಾರಿಯಾಗಿದೆ. ನದಿ ಹಾಗೂ ಸಾಗರ ಸೇರಿದ ಪ್ಲಾಸ್ಟಿಕ್ ಅಲ್ಲಿನ ಜಲಚರಗಳ ಜೀವಕ್ಕೆ ಕಂಟಕವಾಗುತ್ತಿದೆ. ಅದೆಷ್ಟೋ ಜಲಚರಗಳು ನೀರಿನಲ್ಲಿ ತೇಲುವ ಪ್ಲಾಸ್ಟಿಕ್‌ಗಳನ್ನು ಜೆಲ್ಲಿಫಿಶ್ ಎಂದು ಭಾವಿಸಿ ಸೇವಿಸುತ್ತವೆ. ಇಂತಹ ಪ್ಲಾಸ್ಟಿಕ್‌ಗಳು ಅವುಗಳ ಜೀವಕ್ಕೆ ಕುತ್ತು ತರುತ್ತದೆ. 2050ರ ವೇಳೆಗೆ ಪ್ಲಾಸ್ಟಿಕ್‌ನ ಪ್ರಮಾಣವು ಸಮುದ್ರದಲ್ಲಿನ ಮೀನುಗಳಿಗಿಂತ ಹೆಚ್ಚಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಪ್ರಕಾರ, ಪ್ರತೀ ವರ್ಷ ಕನಿಷ್ಠ 14 ಮಿಲಿಯನ್ ಟನ್ ಪ್ಲಾಸ್ಟಿಕ್ ವಿಶ್ವದ ವಿವಿಧ ಸಾಗರಗಳಲ್ಲಿ ಸಂಚಯಗೊಳ್ಳುತ್ತದೆ. ಇದು ಪ್ರಪಂಚದಾದ್ಯಂತ ಕಂಡುಬರುವ ಎಲ್ಲಾ ಅವಶೇಷಗಳಲ್ಲಿ ಶೇ. 80ರಷ್ಟು ಆಗಿದೆ. ಇಂತಹ ಆಪತ್ತುಗಳಿಂದ ಜೀವಿಗಳನ್ನು ಹಾಗೂ ಪರಿಸರವನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ.




ಅದೃಷ್ಟವಶಾತ್ ಒಂದಿಷ್ಟು ನವೀನ ಮನಸ್ಸುಗಳು ಮತ್ತು ಪರಿಸರವಾದಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಯ ಸಂಪನ್ಮೂಲವಾಗಿ ಪರಿವರ್ತಿಸುವ ಮೂಲಕ ಹೊಸ ಅಲೆಯನ್ನು ಸೃಷ್ಟಿಸುತ್ತಿದ್ದಾರೆ. ಅಂತಹ ಕೆಲವರಲ್ಲಿ ಮಲೇಶ್ಯದ ಯಾಸ್ಮೀನ್ ರಶೀದ್ ಹೆಚ್ಚು ಚಲನಶೀಲ ವ್ಯಕ್ತಿ ಎನಿಸುತ್ತಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಯಾಸ್ಮೀನ್‌ಗೂ ಇತರರಂತೆ ಯೋಚನೆ ಪ್ರಾರಂಭವಾಯಿತು. ಆದರೆ ಆಕೆ ಎಲ್ಲರಂತೆ ಸುಮ್ಮನೆ ಕೂರದೆ ತನ್ನ ಯೋಚನೆಗೆ ಯೋಜನೆ ರೂಪಿಸಿದರು. ಅದರ ಭಾಗವಾಗಿ ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಸುಸ್ಥಿರತೆ ಸಂಶೋಧನೆ ಸೇರಿದಂತೆ ಮಲೇಶ್ಯದಲ್ಲಿ ಪರಿಸರ ನಿರ್ವಹಣೆ, ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿ 20 ವರ್ಷಗಳಿಂದ ಯಾಸ್ಮೀನ್ ರಶೀದ್ ಕೆಲಸ ಮಾಡಿದ್ದಾರೆ. ಅವರು ಮಲೇಶ್ಯದ ಪರಿಸರ ಸಂರಕ್ಷಣೆಗೆ ಮೀಸಲಾದ ಸರಕಾರೇತರ ಸಂಸ್ಥೆ ಎಕೋನೈಟ್ಸ್‌ನ ಸ್ಥಾಪಕರೂ ಆಗಿದ್ದಾರೆ. ಎಕೋನೈಟ್ಸ್ ಎಂದರೆ ಪರಿಸರ ಬದಲಾವಣೆಯ ಸೈನ್ಯ ಎಂದರ್ಥ. ಹೆಚ್ಚು ಸಮರ್ಥನೀಯ ಭವಿಷ್ಯವನ್ನು ಸೃಷ್ಟಿಸಲು ಜನರು ತಮ್ಮನ್ನು ತಾವು ಸಜ್ಜುಗೊಳಿಸಲು ಸಶಕ್ತರನ್ನಾಗಿಸುವುದು ಯಾಸ್ಮೀನ್ ಅವರ ಉದ್ದೇಶ.

ವೃತ್ತಿಯಲ್ಲಿ ಜೀವಶಾಸ್ತ್ರಜ್ಞರಾಗಿರುವ ಯಾಸ್ಮೀನ್ ಉತ್ಸಾಹದಿಂದ ಪರಿಸರವಾದಿಯಾಗಿ ರೂಪುಗೊಂಡಿದ್ದಾರೆ. ಎಕೋನೈಟ್ಸ್ ಸಂಸ್ಥೆಯ ಮೂಲಕ ಶಿಕ್ಷಣ ಮತ್ತು ಜಾಗೃತಿ, ಸುಸ್ಥಿರ ಸಮುದಾಯ ಅಭಿವೃದ್ಧಿ, ಸುಸ್ಥಿರ ತ್ಯಾಜ್ಯ ನಿರ್ವಹಣೆ ಮತ್ತು ಸ್ವಯಂಸೇವಕತೆ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ.

ನಿತ್ಯ ಜೀವನದಲ್ಲಿ ಹೆಚ್ಚು ತ್ಯಾಜ್ಯಕಾರಿಯಾದ ಪ್ಲಾಸ್ಟಿಕ್ ಬಹುತೇಕ ಚರಂಡಿಗಳನ್ನು ಮುಚ್ಚಿಹಾಕಿದೆ. ಇದರಿಂದಾಗಿ ಮಳೆಗಾಲದಲ್ಲಿ ನಗರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗುತ್ತದೆ. ಆ ಮೂಲಕ ಪ್ಲಾಸ್ಟಿಕ್ ನದಿ ಹಾಗೂ ಸಮುದ್ರಗಳನ್ನು ಸೇರುತ್ತಿದೆ. ಇಂತಹ ಪ್ಲಾಸ್ಟಿಕ್ ಕಾಲಾನಂತರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಅಂದರೆ ಮೈಕ್ರೋಪ್ಲಾಸ್ಟಿಕ್ ಆಗಿ ವಿಘಟನೆಗೊಳ್ಳುತ್ತದೆ. ಈ ಮೈಕ್ರೋಪ್ಲಾಸ್ಟಿಕ್ ಮೀನು ಹಾಗೂ ಇನ್ನಿತರ ಜಲಚರಗಳ ಮೂಲಕ ಸುಲಭವಾಗಿ ಆಹಾರ ಸರಪಳಿಯನ್ನು ಪ್ರವೇಶಿಸುತ್ತದೆ. ಇದು ದೀರ್ಘಾವಧಿಯಲ್ಲಿ ಮಾನವರಾದ ನಮಗೂ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದನ್ನರಿತ ಯಾಸ್ಮೀನ್ ಇದಕ್ಕೊಂದು ಯೋಜನೆ ರೂಪಿಸಿದರು.

ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪ್ಲಾಸ್ಟಿಕ್ ಬಳಸುವುದು. ಆ ಕಾರಣಕ್ಕಾಗಿ ಅವರಿಗೆ ಸರಿಯಾದ ಶಿಕ್ಷಣ ನೀಡಿದರೆ ಅವರಲ್ಲೂ ಪರಿಸರ ಜಾಗೃತಿ ಮೂಡಲು ಸಾಧ್ಯ ಎಂಬುದನ್ನು ಯಾಸ್ಮೀನ್ ಕಂಡುಕೊಂಡರು. ಅದಕ್ಕಾಗಿ ಅವರು ತಮ್ಮ ಸಂಸ್ಥೆಯ ಮೂಲಕ ಗಲ್ಲಿ ಹಾಗೂ ವಠಾರಗಳಲ್ಲಿನ ಮಹಿಳೆಯರಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ಅನಾಹುತಗಳ ಬಗ್ಗೆ ತಿಳುವಳಿಕೆ ನೀಡಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಂತ್ರಗಳ ಕುರಿತು ಅರಿವು ಮೂಡಿಸಿದರು. ಇದರಿಂದ ನಿತ್ಯದ ಕಸದ ಜೊತೆಗೆ ತ್ಯಾಜ್ಯ ಸೇರುತ್ತಿದ್ದ ಪ್ಲಾಸ್ಟಿಕನ್ನು ಪ್ರತ್ಯೇಕಗೊಳಿಸಿ ಕಳಿಸುವ ಪ್ರಯತ್ನದಲ್ಲಿ ಯಶಸ್ವಿಯಾದರು.

ನಂತರ ಮೂರು ತಿಂಗಳಿಗೊಮ್ಮೆ ಮಲೇಶ್ಯದ ರಾಜಧಾನಿ ಕೌಲಾಲಂಪುರದಲ್ಲಿನ ಆಯ್ದ ಕೆರೆ, ನದಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಪ್ರಾರಂಭದಲ್ಲಿ ಇದು ಕಷ್ಟ ಎನಿಸಿದರೂ ಕ್ರಮೇಣವಾಗಿ ಜನರ ಸಹಭಾಗಿತ್ವ ದೊರೆಯತೊಡಗಿತು. ಅದಕ್ಕಾಗಿ ಕೆಲ ಯುವಕರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾದರು. ಜೊತೆಗೆ ಸ್ಥಳೀಯ ಸರಕಾರಗಳೂ ಇವರ ಕಾರ್ಯಕ್ಕೆ ಕೈಜೋಡಿಸಲು ಮುಂದೆ ಬಂದವು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರ ತಂಡಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದರಿಂದ ಇಂದು ಬಹುತೇಕ ಕೆರೆ ಮತ್ತು ನದಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರ್ಯ ಅವ್ಯಾಹತವಾಗಿ ಸಾಗಿದೆ.

ಪರಿಸರ ಸ್ವಚ್ಛತೆಯ ಸಣ್ಣ ಪ್ರಯತ್ನಗಳಿಂದ ಪ್ರಾರಂಭವಾದ ಯಾಸ್ಮೀನ್ ಅವರ ಕಾರ್ಯ ಇಂದು ವಿಸ್ತಾರಗೊಂಡಿದೆ. ಯಾಸ್ಮೀನ್ ಮಲೇಶ್ಯದಲ್ಲಿ ಪರಿಸರ ನಿರ್ವಹಣೆ, ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿ 20 ವರ್ಷಗಳ ಅನುಭವ ಮತ್ತು ಜ್ಞಾನವನ್ನು ಹೊಂದಿದ್ದಾರೆ. ಅವರು ಸಮುದಾಯ ಸಜ್ಜುಗೊಳಿಸುವಿಕೆ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಂಶೋಧನೆ ಆಧಾರಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾಸ್ಮೀನ್ ಅವರು ಉದ್ಯಮಶೀಲತೆ, ನಾಯಕತ್ವ, ಸುಸ್ಥಿರತೆ, ಯುವ ಸಬಲೀಕರಣ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂಶೋಧನೆ ಮತ್ತು ಮಾನವ ಆರೋಗ್ಯದ ಕುರಿತು ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ವರ್ಷಗಳಲ್ಲಿ ಯಾಸ್ಮೀನ್ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಭಾವಿ ವ್ಯಕ್ತಿಯಾಗಿ ರೂಪುಗೊಳ್ಳುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸೃಜನಶೀಲ ಯೋಜನೆಗಳು ಮತ್ತು ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಆ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಅವರೊಬ್ಬ ಯುವಕಣ್ಮಣಿಯಾಗಿ ಮಿನುಗುತ್ತಿದ್ದಾರೆ. ತಮ್ಮದೇ ಆದ ಸ್ವಯಂಸೇವಕ ಬಳಗವನ್ನು ಸೃಷ್ಟಿಸಿದ್ದಾರೆ. ಇಂತಹ ಯುವ ಮನಸ್ಸುಗಳು ಇನ್ನಷ್ಟು ವೃದ್ಧಿಯಾಗಲಿ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತಾಗಲಿ. ಪರಿಸರ ಸಂರಕ್ಷಣೆ ಎಂಬುದು ಕೇವಲ ಒಬ್ಬ ವ್ಯಕ್ತಿಯಿಂದಾಗುವ ಕಾರ್ಯವಲ್ಲ. ಅದು ಸಮಷ್ಠಿಯ ಪ್ರಜ್ಞೆ ಅಲ್ಲವೇ?

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X