Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಎಲ್ಲರ ಚಿತ್ತ, ಚಂದ್ರನ ದಕ್ಷಿಣ...

ಎಲ್ಲರ ಚಿತ್ತ, ಚಂದ್ರನ ದಕ್ಷಿಣ ಧ್ರುವದತ್ತ

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ15 Oct 2023 9:37 AM IST
share
ಎಲ್ಲರ ಚಿತ್ತ, ಚಂದ್ರನ ದಕ್ಷಿಣ ಧ್ರುವದತ್ತ
ಚಂದ್ರನ ದಕ್ಷಿಣ ಧ್ರುವದಲ್ಲಿ ಕೆಲವು ಪ್ರದೇಶ ಶಾಶ್ವತವಾಗಿ ಕತ್ತಲೆಯಲ್ಲಿವೆ. ಅಂತಹ ಕಡೆಗಳಲ್ಲಿ ಟೆಲಿಸ್ಕೋಪ್ ಅಳವಡಿಸಿದರೆ ವೀಕ್ಷಣೆ ಮತ್ತು ಅಧ್ಯಯನಕ್ಕೆ ಹೆಚ್ಚು ಅನುಕೂಲ. ಸದ್ಯಕ್ಕೆ ಚಂದ್ರನ ನೆಲವು ತ್ಯಾಜ್ಯ ಮುಕ್ತವಾಗಿದ್ದು, ಸಂಶೋಧನೆಗಳಿಗೆ ಸೂಕ್ತವಾದ ತಾಣವಾಗಿದೆ. ಈ ಎಲ್ಲಾ ಕಾರಣಗಳಿಗೆ ಚಂದ್ರನ ದಕ್ಷಿಣ ಧ್ರುವದತ್ತ ಎಲ್ಲರ ಚಿತ್ತ ನೆಟ್ಟಿರುವುದು ಸೂಕ್ತವಾಗಿಯೇ ಇದೆ.

ಭಾರತದ ಚಂದ್ರಯಾನವು ಅನೇಕ ಹೊಸತನಗಳಿಗೆ ನಾಂದಿಯಾಯಿತು. 1969ರಲ್ಲಿ ಅಪೊಲೊ-11ರ ನೌಕೆಯಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಚಂದ್ರನ ಮೇಲೆ ಇಳಿದು ವಾಪಸ್ ಬಂದ ನಂತರ ಚಂದ್ರನ ಮೇಲೆ ಮಾನವ ವಾಸದ ಊಹಾಪೋಹಗಳು ಪ್ರಾರಂಭವಾಗಿದ್ದವು. ಅದರಲ್ಲೂ 2008ರಲ್ಲಿ ಚಂದ್ರಯಾನ-1 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಂತರವಂತೂ ಬಹುತೇಕ ರಾಷ್ಟ್ರಗಳ ಚಿತ್ತ ಚಂದ್ರನತ್ತ ನೆಟ್ಟಿದೆ.

ಚಂದ್ರನ ಕೆಲ ಪ್ರದೇಶಗಳಲ್ಲಿ ನೀರಿನ ಅಂಶ ಇರುವ ಬಗ್ಗೆ ವಿಜ್ಞಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಂತೆ ಕೆಲವರು ಚಂದ್ರನಲ್ಲಿ ಜಾಗ ಖರೀದಿಸಲು ಮುಂದಾದರು. ಅದರಲ್ಲೂ ನಮ್ಮ ಭಾರತದ ಕೆಲ ನಟರೂ ಚಂದ್ರನಲ್ಲಿ ಜಾಗ ಖರೀದಿಸಿದ ಮಾಹಿತಿಯನ್ನು ಹಂಚಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಚಂದ್ರಯಾನ-3ರ ಯಶಸ್ಸಿನ ನಂತರ ಗೋವಾದ ಥಾಣೆ ಸತ್ತಾರಿಯ ಯುವಕ ಪರಾಗ್ ದೇಸಾಯಿ ಅವರು ಚಂದ್ರನ ಮೇಲೆ ಸುಮಾರು ಒಂದು ಎಕರೆ ಭೂಮಿಯನ್ನು ಖರೀದಿಸಿರುವುದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ಬ್ಯಾಚುಲರ್ ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ಅಧ್ಯಯನ ಮಾಡಿದ ಪರಾಗ್, ಪ್ರಸಕ್ತ ಜರ್ಮನಿಯಲ್ಲಿ ಯುಎಸ್‌ಎ ರಕ್ಷಣಾ ಇಲಾಖೆಯಲ್ಲಿ ನೆಟ್‌ವರ್ಕ್ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿ ಲೂನಾರ್ ರಿಜಿಸ್ಟ್ರಿಯಿಂದ ಚಂದ್ರನ ಮೇಲೆ ಮನಿಲಿಯಸ್ ಕ್ರೇಟರ್ ಎಂಬ ಸ್ಥಳದಲ್ಲಿ 1 ಎಕರೆ ಭೂಮಿಯನ್ನು ಖರೀದಿಸಿರುವ ಪತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಚಂದ್ರನಲ್ಲಿ ಜಾಗ ಖರೀದಿಸಿದವರಲ್ಲಿ ಪರಾಗ್ ದೇಸಾಯಿ ಮೊದಲಿಗ ಏನಲ್ಲ. ಈಗಾಗಲೇ ಕೆಲ ಬಾಲಿವುಡ್ ನಟರೂ ಸೇರಿದಂತೆ ಅನೇಕ ಅಂತರ್‌ರಾಷ್ಟ್ರೀಯ ಮಟ್ಟದ ಉದ್ಯಮಿಗಳೂ ಚಂದ್ರನಲ್ಲಿ ಜಾಗ ಖರೀದಿಸಿದ್ದಾರೆ. ಲೂನಾರ್ ಸೊಸೈಟಿ ಇಂಟರ್‌ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ಕಂಪೆನಿಗಳು ಆನ್‌ಲೈನ್ ಮೂಲಕ ಚಂದ್ರನ ಮೇಲೆ ಭೂಮಿಯನ್ನು ಖರೀದಿಗೆ ನೇಮಿಸಲ್ಪಟ್ಟ ಏಜೆನ್ಸಿಗಳಾಗಿವೆ. ಇವುಗಳ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡು, ನಿಗದಿತ ಹಣ ಪಾವತಿಸಿ ಚಂದ್ರನಲ್ಲಿ ಜಾಗ ಖರೀದಿಸಬಹುದು.

ಪ್ರಸಕ್ತ ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುತ್ತಿದ್ದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ನಿಬ್ಬೆರಗಾಗಿ ಭಾರತದ ಸಾಧನೆಯನ್ನು ಗಮನಿಸಿದವು. ಏಕೆಂದರೆ ಭಾರತವು ಅತೀ ಕಡಿಮೆ ವೆಚ್ಚದಲ್ಲಿ ಚಂದ್ರನ ಮೇಲೆ ತನ್ನ ಆಧಿಪತ್ಯ ಸಾಧಿಸಿತ್ತು. ಅದೂ ಚಂದ್ರನ ದಕ್ಷಿಣ ಧ್ರುವದ ಮೇಲೆ ಎನ್ನುವುದು ಕೆಲವು ರಾಷ್ಟ್ರಗಳ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ಚಂದ್ರಯಾನ-3 ರ ಉಡಾವಣೆಯಾದ ಸಮಯದಲ್ಲೇ ರಶ್ಯವು ಲೂನಾ-25 ಹೆಸರಿನ ಉಪಗ್ರಹವನ್ನು ಚಂದ್ರನತ್ತ ಕಳಿಸಿತ್ತು. ಚಂದ್ರಯಾನ-3ಕ್ಕೆ ಭಾರತವು 615 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೆ ಲೂನಾ-25ಕ್ಕೆ ರಶ್ಯವು 1,600ಕೋಟಿ ರೂಗಳನ್ನು ವ್ಯಯಿಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ.

ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ನಂತರ ಒಂದೊಂದೇ ರಾಷ್ಟ್ರಗಳು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ಪೈಪೋಟಿ ನಡೆಸಿವೆ. ಅಮೆರಿಕವು 2025ರಲ್ಲಿ ಗಗನಯಾತ್ರಿಯನ್ನು ಅಲ್ಲಿಗೆ ಇಳಿಸಲು ಯೋಜಿಸಿದೆ ಮತ್ತು ಚೀನಾ ತನ್ನ ಗಗನಯಾತ್ರಿರಹಿತ ಲ್ಯಾಂಡರ್‌ಗಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ಜಾಗ ಹುಡುಕುತ್ತಿದೆ. ದಶಕಗಳಿಗೂ ಮಿಗಿಲಾಗಿ ಕಡೆಗಣಿಸಲ್ಪಟ್ಟಿದ್ದ ಚಂದ್ರ ಈಗ ಎಲ್ಲರ ಆಸಕ್ತಿಯ ಕೇಂದ್ರವಾಗಿದ್ದಾನೆ.

1960ರ ದಶಕದಲ್ಲಿ ಚಂದ್ರನ ಮೇಲೆ ಮಾನವ ಪಾದಾರ್ಪಣೆ ಮಾಡಿದ್ದಕ್ಕಿಂತ ವಿಭಿನ್ನವಾದ ಪರಿಸ್ಥಿತಿಗಳು ಈಗ ತಲೆದೋರಿವೆ. ಬಾಹ್ಯಾಕಾಶ ಯಾನದ ಆರಂಭದ ದಿನಗಳಲ್ಲಿ ಚಂದ್ರನತ್ತ ಮಾನವ ಪಯಣ ಕೇವಲ ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ಸೀಮಿತ ಎನ್ನುವ ಪರಿಸ್ಥಿತಿ ಇತ್ತು. ಏಕೆಂದರೆ ಶ್ರೀಮಂತ ರಾಷ್ಟ್ರಗಳು ಮಾತ್ರ ಹೆಚ್ಚು ಹಣ ವ್ಯಯ ಮಾಡಲು ಸಾಧ್ಯ ಮತ್ತು ಅವರಲ್ಲಿ ಮಾತ್ರ ಪಾಂಡಿತ್ಯ ಇದೆ ಎನ್ನುವಂತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿದ್ವತ್ತಿನಲ್ಲಿ ಅಥವಾ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರವೂ ಸಹ ಶ್ರೀಮಂತ ದೇಶಗಳಿಗಿಂತ ಮಿಗಿಲಾದ ಸಾಧನೆಯನ್ನು ಮಾಡಿದೆ.

ಚಂದ್ರನ ದಕ್ಷಿಣ ಧ್ರುವದ ಪ್ರದೇಶವು ಹೆಚ್ಚು ಕುಳಿಗಳಿಂದ ಕೂಡಿದೆ ಮತ್ತು ಅತ್ಯಂತ ಒರಟು ಭೂಪ್ರದೇಶವಾಗಿದೆ. 1969ರಲ್ಲಿ ಅಪೊಲೊ ಗಗನಯಾತ್ರಿಗಳ ಪರಿಶೋಧನೆಯಿಂದ ಈ ಮಾಹಿತಿಯು ಗಟ್ಟಿಗೊಂಡಿತು. ಚಂದ್ರನ ದಕ್ಷಿಣ ಧ್ರುವದ ಸುತ್ತಲಿನ ಆಳವಾದ ಕುಳಿಗಳಲ್ಲಿ ನೀರು ಮಂಜುಗಡ್ಡೆಯ ರೂಪದಲ್ಲಿ ಹೆಪ್ಪುಗಟ್ಟಿದೆ. ಚಂದ್ರನ ಮೇಲೆ ನೆಲೆಯನ್ನು ಸ್ಥಾಪಿಸಲು ಬೇಕಾದ ಅಗತ್ಯಗಳಲ್ಲಿ ನೀರು ಅತ್ಯಂತ ಮಹತ್ವದ್ದು. ಚಂದ್ರನ ಇನ್ನಿತರ ಭಾಗಗಳಿಗಿಂತ ದಕ್ಷಿಣ ಧ್ರುವದ ಬಳಿ ಹೆಪ್ಪುಗಟ್ಟಿದ ನೀರು ಇರುವುದು ಎಲ್ಲರ ಗಮನ ಕೇಂದ್ರೀಕರಿಸಲು ಕಾರಣವಾಗಿದೆ. ರಾಕೆಟ್ ಮೂಲಕ ಚಂದ್ರನಲ್ಲಿಗೆ ನೀರನ್ನು ತೆಗೆದುಕೊಂಡು ಹೋಗುವುದಕ್ಕಿಂತ ಅಲ್ಲಿಯೇ ಇರುವ ಮಂಜುಗಡ್ಡೆ ರೂಪದ ನೀರನ್ನು ಬಳಸಿಕೊಳ್ಳುವುದು ಸುಲಭ. ಹಾಗಾಗಿ ಎಲ್ಲ ರಾಷ್ಟ್ರಗಳ ಚಿತ್ತ ದಕ್ಷಿಣ ಧ್ರುವದತ್ತ ನೆಟ್ಟಿದೆ.

ಇನ್ನೊಂದು ಪ್ರಮುಖ ಕಾರಣ ಏನೆಂದರೆ ಭೂಮಿಗೆ ವಾಯುಮಂಡಲ ಇರುವಂತೆ ಚಂದ್ರನಲ್ಲಿ ವಾಯುಮಂಡಲ ಇಲ್ಲ. ವಾಯುಮಂಡಲವು ಟೆಲಿಸ್ಕೋಪ್‌ಗಳ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಬಾಹ್ಯಾಕಾಶದಿಂದ ಬರುವ ರೇಡಿಯೊ ತರಂಗಗಳಿಗೂ ಅಡ್ಡಿಯನ್ನುಂಟು ಮಾಡುತ್ತದೆ. ಅದರ ಬದಲು ಬಾಹ್ಯಾಕಾಶದಲ್ಲಿ ಟೆಲಿಸ್ಕೋಪ್ ಅಳವಡಿಸಲು ಅನೇಕ ರಾಷ್ಟ್ರಗಳು ಹವಣಿಕೆಯಲ್ಲಿವೆ. ಸಾಮಾನ್ಯವಾಗಿ ಹಗಲಿನ ವೇಳೆ ರೇಡಿಯೊ ತರಂಗಗಳು ಸ್ಪಷ್ಟವಾಗಿ ಕೇಳುವುದಿಲ್ಲ. ರಾತ್ರಿಯಲ್ಲಿ ಸ್ಪಷ್ಟವಾಗಿ ಕೇಳುತ್ತವೆ. ಚಂದ್ರನ ಮೇಲೆ ಹದಿನೈದು ದಿನ ಹಗಲು ಮತ್ತು ಹದಿನೈದು ದಿನ ರಾತ್ರಿ. ಹಾಗಾಗಿ ಬಾಹ್ಯಾಕಾಶದಿಂದ ಬರುವ ರೇಡಿಯೊ ತರಂಗಗಳ ಅಧ್ಯಯನಕ್ಕೆ ಇದು ಸೂಕ್ತವಾದ ಸ್ಥಳ ಎಂಬುದು ಖಗೋಳ ವಿಜ್ಞಾನಿಗಳ ಅಭಿಮತ. ಅಲ್ಲದೆ ಚಂದ್ರನ ದಕ್ಷಿಣ ಧ್ರುವದಲ್ಲಿ ಕೆಲವು ಪ್ರದೇಶ ಶಾಶ್ವತವಾಗಿ ಕತ್ತಲೆಯಲ್ಲಿವೆ. ಅಂತಹ ಕಡೆಗಳಲ್ಲಿ ಟೆಲಿಸ್ಕೋಪ್ ಅಳವಡಿಸಿದರೆ ವೀಕ್ಷಣೆ ಮತ್ತು ಅಧ್ಯಯನಕ್ಕೆ ಹೆಚ್ಚು ಅನುಕೂಲ. ಸದ್ಯಕ್ಕೆ ಚಂದ್ರನ ನೆಲವು ತ್ಯಾಜ್ಯ ಮುಕ್ತವಾಗಿದ್ದು, ಸಂಶೋಧನೆಗಳಿಗೆ ಸೂಕ್ತವಾದ ತಾಣವಾಗಿದೆ. ಈ ಎಲ್ಲಾ ಕಾರಣಗಳಿಗೆ ಚಂದ್ರನ ದಕ್ಷಿಣ ಧ್ರುವದತ್ತ ಎಲ್ಲರ ಚಿತ್ತ ನೆಟ್ಟಿರುವುದು ಸೂಕ್ತವಾಗಿಯೇ ಇದೆ.

ಇಲ್ಲಿಯವರೆಗಿನ ಪ್ರಮುಖ ಸ್ಪರ್ಧಿಗಳಾದ ಚೀನಾ, ಭಾರತ, ರಶ್ಯ ಮತ್ತು ಅಮೆರಿಕಗಳು ಮಾತ್ರ ಚಂದ್ರನ ಮೇಲೆ ಇಳಿಯುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಮುಂದಿನ ದಿನಗಳಲ್ಲಿ ಫ್ರಾನ್ಸ್, ಇಟಲಿ, ಸ್ವೀಡನ್ ಮತ್ತು ಪಾಕಿಸ್ತಾನಗಳೂ ಚಂದ್ರನ ಮೇಲೆ ಕಾಲಿಡಲು ಹಾತೊರೆಯುತ್ತಿವೆ. ಭಾರತದ ಮುಂದಿನ ಚಂದ್ರಯಾನವು ಜಪಾನ್‌ನೊಂದಿಗೆ ಜಂಟಿ ಪ್ರಯತ್ನವಾಗಿದೆ. ಜರ್ಮನಿ, ಇಸ್ರೇಲ್, ಇಟಲಿ ಮತ್ತು ಜಪಾನ್‌ನ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ನಾಸಾ ಸಂಸ್ಥೆಯು ಜಂಟಿಯಾಗಿ ಉಪಗ್ರಹ ಉಡಾವಣೆಯಲ್ಲಿ ಕೆಲಸ ಮಾಡುತ್ತಿವೆ.

ವಿವಿಧ ರಾಷ್ಟ್ರಗಳು ಚಂದ್ರನ ಮೇಲೆ ಇಳಿಯಲು ಮಾಡಿಕೊಂಡ ಯೋಜಿತ ಕಾರ್ಯಾಚರಣೆಗಳು ಹೀಗಿವೆ. 2024ರಲ್ಲಿ ನಾಸಾದ ಗಗನಯಾತ್ರಿಗಳು ಆರ್ಟೆಮಿಸ್-2 ಮಿಷನ್‌ನಲ್ಲಿ ಚಂದ್ರನನ್ನು ಸುತ್ತಲಿದ್ದಾರೆ. ಚೀನಾದ ಚಾಂಗ್’ಇ-6 ಲ್ಯಾಂಡರ್ ಚಂದ್ರನ ದೂರದ ಭಾಗದಿಂದ ರಾಕ್ ಮತ್ತು ರೆಗೋಲಿತ್ ಮಾದರಿಗಳನ್ನು ಭೂಮಿಗೆ ತರಲಿದೆ. 2025ರಲ್ಲಿ ನಾಸಾವು ಚಂದ್ರನ ಮೇಲೆ ಗೇಟ್‌ವೇ ಬಾಹ್ಯಾಕಾಶ ನಿಲ್ದಾಣದ ಮೊದಲ ಎರಡು ಮಾಡ್ಯೂಲ್‌ಗಳನ್ನು ಪ್ರಾರಂಭಿಸುತ್ತದೆ. ನಾಸಾದ ಸಿಬ್ಬಂದಿ ಆರ್ಟೆಮಿಸ್-3 ಮಿಷನ್‌ನಲ್ಲಿ ಗಗನಯಾತ್ರಿಗಳು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದ್ದಾರೆ.

2026ರಲ್ಲಿ ಚೀನಾದ ಚಾಂಗ್’ಇ-7 ಮಿಷನ್ ಲ್ಯಾಂಡರ್ ಮತ್ತು ಹಾರುವ ಡ್ರೋನ್‌ನೊಂದಿಗೆ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. 2027ರಲ್ಲಿ ರಶ್ಯದ ಲೂನಾ-26 ಮಿಷನ್ ಚಂದ್ರನ ಧ್ರುವಗಳನ್ನು ಸುತ್ತಲಿದೆ. 2026-2028ರಲ್ಲಿ ಜಪಾನ್‌ನೊಂದಿಗೆ ಭಾರತದ ಸಿಬ್ಬಂದಿರಹಿತ ಚಂದ್ರಯಾನ-4 ಮಿಷನ್ ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್ ಅನ್ನು ಇಳಿಸುತ್ತದೆ. 2028ರಲ್ಲಿ ಚೀನಾದ ಸಿಬ್ಬಂದಿರಹಿತ ಚಾಂಗ್’ಇ-8 ಮಿಷನ್ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯುತ್ತದೆ ಮತ್ತು ರೆಗೋಲಿತ್‌ನಿಂದ 3ಡಿ ಮಾದರಿಯ ಕಟ್ಟಡಗಳಿಗಾಗಿ ತಂತ್ರಜ್ಞಾನವನ್ನು ಪರೀಕ್ಷಿಸುತ್ತದೆ. ನಾಸಾದ ಸಿಬ್ಬಂದಿ ಆರ್ಟೆಮಿಸ್-4 ಮಿಷನ್ ಚಂದ್ರನ ಮೇಲೆ ಹೆಚ್ಚು ಗಗನಯಾತ್ರಿಗಳನ್ನು ಇಳಿಸುತ್ತದೆ ಮತ್ತು ಮುಖ್ಯ ಆವಾಸಸ್ಥಾನದ ಮಾಡ್ಯೂಲ್ ಅನ್ನು ಗೇಟ್‌ವೇಗೆ ತಲುಪಿಸುತ್ತದೆ. 2029ರಲ್ಲಿ ನಾಸಾದ ಸಿಬ್ಬಂದಿ ಆರ್ಟೆಮಿಸ್ 5 ಮಿಷನ್ ಗಗನಯಾತ್ರಿಗಳನ್ನು ಮತ್ತು ರೋವರನ್ನು ಚಂದ್ರನ ಮೇಲೆ ಇಳಿಸಲಿದೆ. 2029-2031ರಲ್ಲಿ ನಾಸಾವು ಗೇಟ್‌ವೇಗೆ ಇನ್ನೂ ನಾಲ್ಕು ಮಾಡ್ಯೂಲ್‌ಗಳನ್ನು ತಲುಪಿಸುತ್ತದೆ ಮತ್ತು ಆರ್ಟೆಮಿಸ್-6 ಮಿಷನ್‌ನೊಂದಿಗೆ ಹೆಚ್ಚು ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸುತ್ತದೆ. 2035ರಲ್ಲಿ ಚೀನಾ ಮತ್ತು ರಶ್ಯ ಜಂಟಿಯಾಗಿ ಚಂದ್ರನ ಮೇಲೆ ಅಂತರ್‌ರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರ ಎಂಬ ಚಂದ್ರ ನೆಲೆಯನ್ನು ಸ್ಥಾಪಿಸಲು ಯೋಜಿಸಿವೆ.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X