Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಆಹಾರ ಪ್ಯಾಕೇಜಿಂಗ್ ನ ಚಿತ್ತ ಪರ್ಯಾಯ...

ಆಹಾರ ಪ್ಯಾಕೇಜಿಂಗ್ ನ ಚಿತ್ತ ಪರ್ಯಾಯ ಮಾರ್ಗಗಳತ್ತ ಬದಲಾಗಲಿ

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ2 Jun 2024 10:20 AM IST
share
ಆಹಾರ ಪ್ಯಾಕೇಜಿಂಗ್ ನ ಚಿತ್ತ ಪರ್ಯಾಯ ಮಾರ್ಗಗಳತ್ತ ಬದಲಾಗಲಿ

ಪ್ಲಾಸ್ಟಿಕ್ ಪ್ಯಾಕೇಜಿಂಗ್ ಗೆ ಬದಲಾಗಿ ಜೈವಿಕ ವಿಘಟೀಯ ವಸ್ತುಗಳಿಂದ ಕೂಡಿದ ಪಾಲಿಲ್ಯಾಕ್ಟಿಕ್ ಆಮ್ಲಗಳಂತಹ ವಸ್ತುಗಳನ್ನು ಬಳಸುವುದು ಸೂಕ್ತ. ಜೈವಿಕ ವಿಘಟನೀಯ ವಸ್ತುಗಳು ಆಹಾರ ಪ್ಯಾಕೇಜಿಂಗ್ನ ಪರಿಸರ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಜೈವಿಕ ವಿಘಟನೀಯ ವಸ್ತುಗಳು ಭೂಕುಸಿತ ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತವೆ. ಇಂತಹ ಪರ್ಯಾಯ ತಂತ್ರಗಳನ್ನು ಅನುಸರಿಸುವ ಮೂಲಕ ಆಹಾರದ ಗುಣಮಟ್ಟ ಮತ್ತು ಆರೋಗ್ಯದ ಬಗ್ಗೆ ಪ್ರತೀ ಕಂಪೆನಿಯು ಜವಾಬ್ದಾರಿಯನ್ನು ತೋರಿಸಬೇಕಾಗಿದೆ.

ನಮಗೆಲ್ಲಾ ಆರೋಗ್ಯಕರ ಆಹಾರದ ಅಗತ್ಯವಿದೆ. ದೇಹದ ಬೆಳವಣಿಗೆಗೆ, ದುರಸ್ತಿಯಾದ ಅಂಗಾಂಶಗಳನ್ನು ಸರಿಪಡಿಸಲು ಮತ್ತು ದೈನಂದಿನ ಕೆಲಸಗಳನ್ನು ನಿರ್ವಹಿಸಲು ಆಹಾರದ ಅಗತ್ಯವಿದೆ. ಆಹಾರದಲ್ಲಿನ ಪೋಷಕಾಂಶಗಳು ದೇಹದ ವಿವಿಧ ಕಾರ್ಯಗಳಿಗೆ ಅಗತ್ಯವಾಗಿವೆ. ಆರೋಗ್ಯಕರ ಆಹಾರವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಅದು ದೇಹದ ತೂಕವನ್ನು ಕಾಪಾಡುತ್ತದೆ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಕಾಯಿಲೆ, ಪಾರ್ಶ್ವವಾಯು, ಬೊಜ್ಜು, ಟೈಪ್-2 ಮಧುಮೇಹ ಮತ್ತು ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಹಾರವೇ ವಿಷವಾಗುತ್ತಿರುವುದು ವಿಪರ್ಯಾಸ.

ನಿತ್ಯವೂ ನಾವು ಬಳಸುವ ಬಹುತೇಕ ಆಹಾರ ಪದಾರ್ಥಗಳು ಒಂದಲ್ಲ ಒಂದು ರೀತಿಯ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಕಾಯಿ ಹಣ್ಣಾಗಲು, ತರಕಾರಿ ತಾಜಾ ಆಗಿರಲು, ಸೊಪ್ಪು ಬಾಡದಂತಿರಲು, ಧಾನ್ಯಗಳು ಕೆಡದಂತಿರಲು ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೆಲ ವರ್ಷಗಳ ಹಿಂದೆ ಮಾಲ್ಗಳಲ್ಲಿ ದೊರೆಯುತ್ತಿದ್ದ ಪ್ಯಾಕೇಜಿಂಗ್ ಆಹಾರ ಪದಾರ್ಥಗಳು ಸುರಕ್ಷಿತ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಅದೆಲ್ಲವೂ ಸುಳ್ಳು ಎಂಬುದು ಸಾಬೀತಾಗಿದೆ. ಉತ್ತಮ ದರ್ಜೆಯ ಆಹಾರ ಕಂಪೆನಿ ಎಂದು ಹೆಸರು ಮಾಡಿದ್ದ ಬಹುತೇಕ ಕಂಪೆನಿಗಳ ಪ್ಯಾಕೇಜಿಂಗ್ ಕಳಪೆ ಮಟ್ಟದ್ದು ಎಂಬುದು ಕೆಲ ಸಂಶೋಧನೆಗಳಿಂದ ತಿಳಿದುಬಂದಿದೆ.

ನಾರ್ವೇಜಿಯನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಾರ್ಟಿನ್ ವ್ಯಾಗ್ನರ್ ಮತ್ತು ತಂಡವು ಒಂದೇ ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗ್ ಉತ್ಪನ್ನದಲ್ಲಿ 9,936 ವಿಭಿನ್ನ ರಾಸಾಯನಿಕಗಳನ್ನು ಗುರುತಿಸಿದ್ದಾರೆ. ಪ್ಲಾಸ್ಟಿಕ್ ಬಹಳ ಸಂಕೀರ್ಣವಾದ ವಸ್ತುವಾಗಿದ್ದು ಅದು ವಿವಿಧ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ ಕೆಲವು ರಾಸಾಯನಿಕಗಳು ಹಾನಿಕಾರಕವಾಗಿದೆ. ವ್ಯಾಗ್ನರ್ ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ರಾಸಾಯನಿಕಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಸಂಶೋಧಕರು ಆಹಾರವನ್ನು ಪ್ಯಾಕೇಜ್ ಮಾಡಲು ಬಳಸುವ 36 ವಿಭಿನ್ನ ಪ್ಲಾಸ್ಟಿಕ್ ಉತ್ಪನ್ನಗಳನ್ನು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಉತ್ಪನ್ನಗಳು ಅಮೆರಿಕ, ಬ್ರಿಟನ್, ದಕ್ಷಿಣ ಕೊರಿಯಾ, ಜರ್ಮನಿ ಮತ್ತು ನಾರ್ವೆಗಳಿಂದ ಬಂದವುಗಳಾಗಿವೆ. ಇವುಗಳಲ್ಲಿನ ಬಹುತೇಕ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಹಾರ್ಮೋನುಗಳ ಸ್ರವಿಸುವಿಕೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವ ರಾಸಾಯನಿಕಗಳಿವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಹಾರ್ಮೋನ್ಗಳು ದೇಹದ ಸಂದೇಶವಾಹಕಗಳಾಗಿವೆ. ಅವು ವಿವಿಧ ಗ್ರಂಥಿಗಳಿಂದ ಸ್ರವಿಸುತ್ತದೆ ಮತ್ತು ವಿವಿಧ ಅಂಗಗಳು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಚಯಾಪಚಯವು ವಿವಿಧ ಪ್ರಕ್ರಿಯೆಗಳ ಮೊತ್ತವಾಗಿದ್ದು, ದೇಹವು ಕಾರ್ಯನಿರ್ವಹಿಸಲು ಅಗತ್ಯವಿರುವ ಶಕ್ತಿ ಮತ್ತು ವಸ್ತುಗಳನ್ನು ಒದಗಿಸಲು ಪೋಷಕಾಂಶಗಳನ್ನು ಬಳಸಲು ದೇಹವನ್ನು ಸಕ್ರಿಯಗೊಳಿಸುತ್ತದೆ. ನಾವು ತಿನ್ನುವ ಆಹಾರವು ಹಾರ್ಮೋನ್ ಮತ್ತು ಚಯಾಪಚಯ ಕ್ರಿಯೆಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕೇ ಹೊರತು ಹಾಳುಮಾಡುವಂತಿದ್ದರೆ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ.

ಆಹಾರ ಪ್ಯಾಕೇಜಿಂಗ್, ಫ್ಯಾಕ್ಟರಿ ಉಪಕರಣಗಳು, ಆಹಾರ ಪಾತ್ರೆಗಳು ಹೀಗೆ ನಾವು ತಿನ್ನುವ ಬಹುತೇಕ ಎಲ್ಲವೂ ‘ಆಹಾರ ಸಂಪರ್ಕ ಸಾಮಗ್ರಿಗಳು’ ಎಂದು ಕರೆಯುತ್ತೇವೆ. ವಿವಿಧ ಕಾರಣಗಳಿಂದ ಆಹಾರ ಸಂಪರ್ಕ ಸಾಮಗ್ರಿಗಳಲ್ಲಿ ಪ್ಲಾಸ್ಟಿಕ್ ಅಂಶಗಳನ್ನು ಬಳಸಲಾಗುತ್ತದೆ. ಇವುಗಳ ಮೂಲಕ ನಾವು ಸೇವಿಸುವ ಆಹಾರವು ಪ್ಲಾಸ್ಟಿಕ್ನ ರಾಸಾಯನಿಕಗಳಿಂದ ಬಂಧಿತವಾಗುತ್ತಿದೆ. ಪರೋಕ್ಷವಾಗಿ ಈ ರಾಸಾಯನಿಕಗಳು ನಮ್ಮ ದೇಹ ಸೇರುತ್ತಿವೆ. ರಾಸಾಯನಿಕಗಳಲ್ಲಿ ಹಲವು ನಮ್ಮ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಜೊತೆಗೆ ಪರಿಸರವನ್ನು ಮಾಲಿನ್ಯಗೊಳಿಸುತ್ತವೆ.

ಬೇಕರಿ ಬ್ಯಾಗ್ಗಳು ಮತ್ತು ಕ್ಯಾರಿ ಬಾಕ್ಸ್ ಗಳಂತಹ ಆಹಾರ ಸಂಪರ್ಕ ಸಾಮಗ್ರಿಗಳು ವಾಟರ್ ಪ್ರೂಫ್ ಆಗಿರಲು ಅವುಗಳ ತಯಾರಿಕೆಯಲ್ಲಿ ಪಾಲಿ ಫ್ರೋರೋಅಲ್ಕೈಲ್, ಬಿಸ್ಫೆನಾಲ್ಗಳು ಮತ್ತು ಥಾಲೇಟ್ಗಳನ್ನು ಬಳಸಲಾಗುತ್ತದೆ. ಇವುಗಳು ಹೆಚ್ಚಿನ ಅಪಾಯಕಾರಿ ರಾಸಾಯನಿಕಗಳಾಗಿವೆ. ಪಾಲಿ ಫ್ಲ್ರೋರೋಅಲ್ಕೈಲ್ ಅಂತಃಸ್ರಾವಕಕ್ಕೆ ಅಡ್ಡಿಪಡಿಸುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ಕೆಲವು ಕ್ಯಾನ್ಸರ್ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ. ಬಿಸ್ಫೆನಾಲ್ಗಳು ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್ಗಳು ಮತ್ತು ರೆಸಿನ್ಗಳ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕಗಳ ಗುಂಪಾಗಿದ್ದು, ಆಹಾರದ ಕ್ಯಾನ್ಗಳು ಮತ್ತು ಪ್ಲಾಸ್ಟಿಕ್ ಕಂಟೈನರ್ಗಳಂತಹ ಆಹಾರ ಪ್ಯಾಕೇಜಿಂಗ್ಗಳಲ್ಲಿ ಸೇರಿವೆ. ಬಿಸ್ಫೆನಾಲ್ ಎಂಡೋಕ್ರೈನ್ ಅಡ್ಡಿಪಡಿಸುವ ಮತ್ತು ಸಂತಾನೋತ್ಪತ್ತಿಗೆ ವಿಷಕಾರಿ ರಾಸಾಯನಿಕ ಎಂದು ವರ್ಗೀಕರಿಸಲಾಗಿದೆ. ಥಾಲೇಟ್ಗಳು ಅವುಗಳ ನಮ್ಯತೆ ಮತ್ತು ಬಾಳಿಕೆ ಹೆಚ್ಚಿಸಲು ಪ್ಲಾಸ್ಟಿಕ್ ಪ್ಯಾಕೇಜಿಂಗ್ಗೆ ಹೆಚ್ಚಾಗಿ ಸೇರಿಸಲಾದ ರಾಸಾಯನಿಕಗಳ ಗುಂಪಾಗಿದ್ದು ಇವು ಸಂತಾನೋತ್ಪತ್ತಿಗೆ ವಿಷಕಾರಿಗಳಾಗಿವೆ.

ಆಹಾರವನ್ನು ಪ್ಯಾಕ್ ಮಾಡುವ ಪ್ರತಿಯೊಂದು ಕಂಪೆನಿಯೂ ಈ ರಾಸಾಯನಿಕಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಆಹಾರವನ್ನು ಪ್ಯಾಕ್ ಮಾಡುವ ಪ್ರತೀ ಕಂಪೆನಿಯ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯ ಕಣ್ಗಾವಲು ಅಗತ್ಯವಿದೆ. ಕಾಲಕಾಲಕ್ಕೆ ಸೂಕ್ತ ಮಾನದಂಡಗಳು, ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ರೂಪಿಸುವ ಹಾಗೂ ಕೆಲವು ನಿಯಮಗಳಿಂದ ಪ್ಯಾಕೇಜಿಂಗ್ ಕಂಪೆನಿಗಳನ್ನು ನಿಯಂತ್ರಿಸುವ ಕಾನೂನುಗಳನ್ನು ಜಾರಿಗೆ ತರುವ ಅಗತ್ಯವಿದೆ.

ನಿಯಮಗಳ ಅನುಸರಣೆಯು ಕಾನೂನು ಬಾಧ್ಯತೆ ಮಾತ್ರವಲ್ಲದೆ ಆಹಾರ ಸುರಕ್ಷತೆಗೆ ತಯಾರಕರ ಬದ್ಧತೆಯ ಪ್ರದರ್ಶನವಾಗಿದೆ. ಇದು ಗ್ರಾಹಕರು, ಮಧ್ಯಸ್ಥಗಾರರು ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ವಿಶ್ವಾಸವನ್ನು ನಿರ್ಮಿಸುತ್ತದೆ. ಕಂಪೆನಿಗೆ ಧನಾತ್ಮಕ ಬ್ರ್ಯಾಂಡ್ ಇಮೇಜ್ ಅನ್ನು ಬೆಳೆಸುತ್ತದೆ ಮತ್ತು ಮಾರುಕಟ್ಟೆಯ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ತಯಾರಕರು ಪೂರ್ವಭಾವಿ ಅನುಸರಣೆ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಮಾಣೀಕರಣಗಳನ್ನು ಪಡೆಯಬೇಕು ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತ ಲೆಕ್ಕಪರಿಶೋಧನೆಗಳನ್ನು ನಡೆಸಬೇಕು.

ಉತ್ಪನ್ನವನ್ನು ಮರುಪಡೆಯುವುದು, ಕಾನೂನಾತ್ಮಕ ದಂಡಗಳು ಮತ್ತು ಬ್ರ್ಯಾಂಡ್ ಖ್ಯಾತಿಗೆ ಹಾನಿ ಸೇರಿದಂತೆ ಅನುಸರಣೆಯ ಪರಿಣಾಮಗಳು ತೀವ್ರವಾಗಿರಬಹುದು. ತಯಾರಕರು ನಿಯಂತ್ರಕ ಅನುಸರಣೆಗೆ ಆದ್ಯತೆ ನೀಡಬೇಕು ಮತ್ತು ನಿಯಂತ್ರಕ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಂಪನ್ಮೂಲಗಳನ್ನು ನಿಯೋಜಿಸಬೇಕು. ಕಾಲಕಾಲಕ್ಕೆ ಸಿಬ್ಬಂದಿಗೆ ತರಬೇತಿ ನೀಡಬೇಕು ಮತ್ತು ಅನುಸರಣಾ ಅಭ್ಯಾಸಗಳನ್ನು ಜಾರಿಗೊಳಿಸಬೇಕು. ಅನುಸರಣೆ ಮತ್ತು ಪಾರದರ್ಶಕ ಸಂಸ್ಕೃತಿಯನ್ನು ಬೆಳೆಸುವ ಮೂಲಕ ತಯಾರಕರು ಕಾನೂನು ಅಪಾಯಗಳನ್ನು ತಗ್ಗಿಸಬಹುದು. ಸುರಕ್ಷತೆ ಮತ್ತು ಗುಣಮಟ್ಟಕ್ಕಾಗಿ ಅವರ ಖ್ಯಾತಿಯನ್ನು ಎತ್ತಿಹಿಡಿಯಬಹುದು.

ಪ್ಲಾಸ್ಟಿಕ್ ಪ್ಯಾಕೇಜಿಂಗ್ಗೆ ಬದಲಾಗಿ ಜೈವಿಕ ವಿಘಟೀಯ ವಸ್ತುಗಳಿಂದ ಕೂಡಿದ ಪಾಲಿಲ್ಯಾಕ್ಟಿಕ್ ಆಮ್ಲಗಳಂತಹ ವಸ್ತುಗಳನ್ನು ಬಳಸುವುದು ಸೂಕ್ತ. ಜೈವಿಕ ವಿಘಟನೀಯ ವಸ್ತುಗಳು ಆಹಾರ ಪ್ಯಾಕೇಜಿಂಗ್ನ ಪರಿಸರ ಪ್ರಭಾವವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಜೈವಿಕ ವಿಘಟನೀಯ ವಸ್ತುಗಳು ಭೂಕುಸಿತ ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತವೆ. ಇಂತಹ ಪರ್ಯಾಯ ತಂತ್ರಗಳನ್ನು ಅನುಸರಿಸುವ ಮೂಲಕ ಆಹಾರದ ಗುಣಮಟ್ಟ ಮತ್ತು ಆರೋಗ್ಯದ ಬಗ್ಗೆ ಪ್ರತೀ ಕಂಪೆನಿಯು ಜವಾಬ್ದಾರಿಯನ್ನು ತೋರಿಸಬೇಕಾಗಿದೆ. ಪ್ರತೀ ಜೀವಿಯೂ ಕಂಪೆನಿಯ ಜೀವಾಳ ಎಂಬುದನ್ನು ಕಂಪೆನಿಗಳು ಅರ್ಥ ಮಾಡಿಕೊಳ್ಳಬೇಕಿದೆ.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X