Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಅಧಿಕಾರವನ್ನು ಹಂಚಿಕೊಳ್ಳುವ ಮನಸ್ಸು

ಅಧಿಕಾರವನ್ನು ಹಂಚಿಕೊಳ್ಳುವ ಮನಸ್ಸು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್11 Oct 2026 3:00 PM IST
share
ಅಧಿಕಾರವನ್ನು ಹಂಚಿಕೊಳ್ಳುವ ಮನಸ್ಸು

ಪ್ರಜಾಸತ್ತಾತ್ಮಕತೆ ಎಂಬುದು ಮನಸ್ಥಿತಿಯಾಗಿ ರೂಪುಗೊಳ್ಳಬೇಕು ಮತ್ತು ಧೋರಣೆಯಾಗಿ ರೂಢಿಯಾಗಬೇಕು. ಹೀಗೆ ರೂಪುಗೊಳ್ಳಲು ಮತ್ತು ರೂಢಿಯಾಗಲು ಮುಖ್ಯವಾಗಿ ಕಲಿಯಬೇಕಿರುವುದು ಪ್ರಜಾಪ್ರಭುತ್ವದ ಅಥವಾ ಪ್ರಜಾಸತ್ತಾತ್ಮಕತೆಯ ಕೌಶಲ್ಯ (Democratic Intelligence). ಪ್ರಜಾಕೇಂದ್ರಿತ ಮನೋವಿಜ್ಞಾನ ಎಂದರೆ ಕೇವಲ ಆಡಳಿತಕ್ಕೆ ಅನುಗುಣವಾಗಿರುವ ಆಡಳಿತಕ್ಕೆ ಮಾತ್ರ ಅನ್ವಯವಾಗುವುದಲ್ಲ, ಅದು ವ್ಯಕ್ತಿಗತವಾದ ಸಂಬಂಧಗಳಲ್ಲಿ ಮತ್ತು ಕುಟುಂಬಗಳಲ್ಲಿಯೂ ಕೂಡಾ ಪ್ರಸ್ತುತವಾಗುವಂತದ್ದು.

ಅಧಿಕಾರ ಎಂಬುದು ಜನರಿಗೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವ ಆರಂಭವಾಗುವುದಿಲ್ಲ; ಒಂದು ಮಾನವ ಮನಸ್ಸು ಮತ್ತೊಂದು ಮಾನವ ಮನಸ್ಸಿನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಕಲಿತಾಗ ಅದು ಆರಂಭವಾಗುವುದು. ಇದನ್ನು ನಾವು ಮರೆಯಬಾರದು. ಮೊದಲಿಗೆ ಎಲ್ಲವನ್ನೂ ತಾಂತ್ರಿಕವಾಗಿ ಮತ್ತು ರಾಜನೈತಿಕವಾಗಿ ನೋಡುವುದನ್ನು ನಿಲ್ಲಿಸಿ ತಾತ್ವಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಕೂಡಾ ನೋಡುವ ಮತ್ತು ನಡೆದುಕೊಳ್ಳುವ ಕೌಶಲ್ಯವನ್ನು ಕಲಿಯಬೇಕು. ಹೌದು, ಇದು ಗಮನವಿಟ್ಟು ಕಲಿಯುವ ವಿಷಯವೇ ಆಗಿದೆ.

ಪ್ರಜಾಪ್ರಭುತ್ವವನ್ನು ನಾವು ಸಾಮಾನ್ಯವಾಗಿ ರಾಜಕೀಯ ವ್ಯವಸ್ಥೆಯಾಗಿ ಅರ್ಥಮಾಡಿಕೊಂಡಿದ್ದೇವೆ. ರಾಜನ ಬದಲು ಜನಪ್ರತಿನಿಧಿ, ರಾಜಾಜ್ಞೆಯ ಬದಲು ಸಂವಿಧಾನ, ವಂಶಪಾರಂಪರ್ಯದ ಬದಲು ಚುನಾವಣೆ; ಇವೆಲ್ಲವೂ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಸಾಧನೆಗಳು. ಆದರೆ ರಾಜನನ್ನು ವ್ಯವಸ್ಥೆಯಿಂದ ತೆಗೆದುಹಾಕಿದ ಮಾತ್ರಕ್ಕೆ ಮನುಷ್ಯನ ಮನಸ್ಸಿನೊಳಗಿನ ರಾಜನೂ ಹೊರಟುಹೋಗುತ್ತಾನೆಯೇ? ಇದು ನಾವು ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ.

ನಾವು ನಮ್ಮನ್ನು, ಇತರರನ್ನು, ವ್ಯವಸ್ಥೆಯನ್ನು, ಸಂಸ್ಕೃತಿಯನ್ನು, ಧರ್ಮವನ್ನು, ಸಮಾಜವನ್ನು, ವ್ಯಕ್ತಿಗಳನ್ನು, ಸಿದ್ಧಾಂತಗಳನ್ನು; ಹೀಗೆ ಎಲ್ಲವನ್ನೂ ಪ್ರಶ್ನಿಸಲೇ ಬೇಕು. ಕೇಳುವಂತಹ ಪ್ರಶ್ನೆಗಳು ಸಂಕೀರ್ಣತೆಗಳನ್ನು ಬಿಡಿಸಲು ಸಹಕಾರಿಯಾಗುವ ಸಾಧನಗಳಾಗುತ್ತವೆ. ಮಸುಕು ಮಸುಕಾಗಿರುವುದು ಸ್ಪಷ್ಟವಾಗಲು ಸಹಾಯವಾಗುತ್ತದೆ. ಅಂತರಗಳು ಕಡಿಮೆಯಾಗಿ ಸಂಬಂಧಗಳು ಸರಳ ಕೊಂಡಿಗಳಾಗಲು ತೊಡಗುತ್ತವೆ. ತನ್ನಲ್ಲಿ ತಾನು, ಕುಟುಂಬದಲ್ಲಿ, ವ್ಯವಸ್ಥೆಯಲ್ಲಿ, ಸಮಾಜದಲ್ಲಿ ಪ್ರಶ್ನೆಗಳಿಲ್ಲದೆ ಬರಿದೇ ಒಪ್ಪಿಕೊಳ್ಳುವುದಾದರೆ ಅದು ಸಂಬಂಧಗಳನ್ನು ಬೆಸೆಯುವುದಿಲ್ಲ, ಬದಲಾಗಿ ಬಂಧನಗಳಾಗಿ ಮಾರ್ಪಡುತ್ತವೆ. ಈ ಎಚ್ಚರಿಕೆಯಿಂದಲೇ ಪ್ರಜಾಸತ್ತಾತ್ಮಕ ಕೌಶಲ್ಯವನ್ನು ಅಭ್ಯಾಸ ಮಾಡಲು ತೊಡಗಬೇಕು. ಇಲ್ಲಿಂದ Democratic Intelligence - DQಯ ಮನೋವಿಜ್ಞಾನ ಆರಂಭವಾಗುತ್ತದೆ.

ಮೊದಲಿಗೆ ಅಧಿಕಾರ ಎಂದರೇನು? ಅಧಿಕಾರ ಎಂಬುದು ಒಂದು ಮಾನಸಿಕ ಅನುಭವ. ಅಧಿಕಾರ (Power) ಎಂದರೆ ಕೇವಲ ಮುಖ್ಯಮಂತ್ರಿ, ಪ್ರಧಾನಿ, ಪೊಲೀಸ್ ಅಧಿಕಾರಿ ಅಥವಾ ಉದ್ಯಮಿಯ ಬಳಿ ಇರುವ ಸಂಗತಿಯಲ್ಲ. ತಂದೆಗೆ ಮಗುವಿನ ಮೇಲೆ ಅಧಿಕಾರ ಇದೆ, ಶಿಕ್ಷಕನಿಗೆ ವಿದ್ಯಾರ್ಥಿಯ ಮೇಲೆ, ಕೆಲಸ ಕೊಟ್ಟವರಿಗೆ ಕೆಲಸದಾಳಿನ ಮೇಲೆ, ಆರ್ಥಿಕವಾಗಿ ಅವಲಂಬಿತನಾದವನ ಮೇಲೆ ಹಣವಿರುವವನಿಗೆ; ತಿಳಿದೋ ತಿಳಿಯದೆಯೋ ಅಧಿಕಾರವನ್ನು ಹೊಂದಿರುತ್ತಾರೆ. ಒಬ್ಬರ ನಿರ್ಧಾರ ಮತ್ತೊಬ್ಬರ ಬದುಕಿನ ಸಾಧ್ಯತೆಗಳನ್ನು ಪ್ರಭಾವಿಸುವ ಎಲ್ಲೆಡೆಯೂ ಅಧಿಕಾರ ಸಂಬಂಧಗಳು (power relationship) ಇರುತ್ತವೆ. ಇದನ್ನು ಪ್ರಭಾ ಪ್ರಭುತ್ವ ಎನ್ನಲೂಬಹುದು. ಆದ್ದರಿಂದ ಪ್ರಜಾಪ್ರಭುತ್ವವನ್ನು ಬರೀ ವಿಧಾನಸಭೆ, ಶಾಸಕಾಂಗ ಸಭೆಗಳಲ್ಲಿ ಮಾತ್ರ ಹುಡುಕಿದರೆ ಅದರ ಬಹುಭಾಗ ನಮಗೆ ಕಾಣುವುದೇ ಇಲ್ಲ.

ಪ್ರಜಾಪ್ರಭುತ್ವ ಎಂಬುದು ಸಂಬಂಧಗಳ ಮಾನಸಿಕ ತತ್ವ. ಹಾಗೇ ಒಮ್ಮೆ ಆಲೋಚಿಸಿ, ಅಧಿಕಾರ ಸಿಕ್ಕಾಗ ಮನಸ್ಸಿಗೆ ಏನಾಗುತ್ತದೆ? ಅಧಿಕಾರ ಒಂದು ವಿಚಿತ್ರ ಮಾನಸಿಕ ಅನುಭವ. ನಾನು ಹೇಳಿದಾಗ ಇನ್ನೊಬ್ಬನು ಮಾಡುತ್ತಾನೆ. ನನ್ನ ಆಗಮನಕ್ಕಾಗಿ ಕಾಯುತ್ತಾರೆ. ನನ್ನ ಅನುಮತಿ ಬೇಕಾಗುತ್ತದೆ. ನನ್ನ ನಿರ್ಧಾರದಿಂದ ಮತ್ತೊಬ್ಬನ ಬದುಕಿನಲ್ಲಿ ಬದಲಾವಣೆಯಾಗುತ್ತದೆ. ಇವು ನಿರಂತರವಾಗಿ ನಡೆಯತೊಡಗಿದಾಗ, ಒಂದು ಸೂಕ್ಷ್ಮವಾದ ತಿಳಿಮಂದ (cognitive distortion) ಆಗಬಹುದು.

ನನಗೆ ಹೆಚ್ಚು ಅಧಿಕಾರವಿದೆ; ಆದ್ದರಿಂದ ನನಗೆ ಹೆಚ್ಚು ತಿಳಿದಿದೆ ಎಂಬ ಭ್ರಮೆ ಹುಟ್ಟಿ, ಅಲ್ಲಿಂದ ಮತ್ತೊಂದು, ನನಗೆ ಹೆಚ್ಚು ತಿಳಿದಿದೆ; ಆದ್ದರಿಂದ ನಾನು ನಿರ್ಧರಿಸುವುದೇ ಸರಿಯಾದದ್ದು, ಕೊನೆಗೆ, ನನ್ನನ್ನು ಪ್ರಶ್ನಿಸುವುದು ತಪ್ಪು ಎಂಬಲ್ಲಿಗೆ ಬಂದು ನಿಲ್ಲುತ್ತಾರೆ. ಇಲ್ಲಿಯೇ ಅಧಿಕಾರ (authority) ನಿಧಾನವಾಗಿ ನಿರಂಕುಶವಾದ (authoritarianism) ಆಗುವ ಸಾಧ್ಯತೆ ಆರಂಭವಾಗುತ್ತದೆ.

ಪ್ರಜಾಪ್ರಭುತ್ವದ ಕೇಂದ್ರ ಪ್ರಶ್ನೆ ಎಂದರೇನೇ ನಮ್ಮಲ್ಲಿ ಇನ್ನೊಬ್ಬರ ಮನಸ್ಸಿಗೆ ಜಾಗವಿದೆಯೇ?

ಒಂದು ಪ್ರಜಾಸತ್ತಾತ್ಮಕ ಮನಸ್ಸು ತನ್ನೊಳಗೆ ಒಂದು ಮೂಲಭೂತ ಸತ್ಯವನ್ನು ಒಪ್ಪಿಕೊಳ್ಳುತ್ತದೆ: ನನ್ನ ಎದುರಿರುವವನು ನನ್ನ ಕಥೆಯ ಬರಿಯ ಪೋಷಕ ಪಾತ್ರ ಅಥವಾ ಜೂನಿಯರ್ ಆರ್ಟಿಸ್ಟ್ ಅಲ್ಲ. ಅವನಿಗೂ ತನ್ನದೇ ಅನುಭವವಿದೆ. ತನ್ನದೇ ಇಚ್ಛೆ ಇದೆ. ತನ್ನದೇ ಭಯವಿದೆ. ತನ್ನದೇ ಘನತೆ ಮತ್ತು ಕಾರಣಗಳಿವೆ. ಅವನಿಗೆ ತನ್ನದೇ ಜೀವನದ ಮೇಲೆ ಕರ್ತೃತ್ವ ಇದೆ. ಇನ್ನೊಬ್ಬನನ್ನು ಸ್ವಾಯತ್ತ ಮನಸ್ಸು (autonomous mind) ಎಂದು ಗುರುತಿಸುವ ಈ ಸಾಮರ್ಥ್ಯವೇ ಪ್ರಜಾಸತ್ತಾತ್ಮಕ ಕೌಶಲ್ಯದ ಮಾನಸಿಕ ತಳಹದಿ (psychological foundation). ಹೀಗೆ ಪ್ರಜಾಪ್ರಭುತ್ವ ರಾಜಕೀಯದಿಂದ ಸಂಬಂಧಗಳ ಕಡೆಗೆ ಹೊರಳುತ್ತದೆ.

ಪ್ರತಿಯೊಬ್ಬರೂ ಅವರವರ ಬದುಕಿನ ನಾಯಕ ನಾಯಕಿಯರು. ನಾವು ಒಬ್ಬರನ್ನೊಬ್ಬರು ಭೇಟಿಯಾಗುವಾಗ ಒಬ್ಬ ಹೀರೋ ಮತ್ತೊಬ್ಬ ಹೀರೋವನ್ನು ಭೇಟಿಯಾಗುವಂತಹ ಧೋರಣೆಯಲ್ಲಿರುವಾಗ ಅಧಿಕಾರದ ಅಹಂಕಾರವು ಅಂತರಾಳದ ಅರಿವನ್ನು ಅಂಧವಾಗಿಸುವುದಿಲ್ಲ.

(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X